Facebook

Archive for the ‘ಸಮಾನತೆಯ ಸಂಧಿಕಾಲದಲ್ಲಿ’ Category

ನಂಬಿಕೆ ದ್ರೋಹ ಮತ್ತು ದ್ವೇಷದ ಕಥಾನಕ- ಹ್ಯಾಮ್ಲೆಟ್: ನಾಗರೇಖ ಗಾಂವಕರ

ಆತ ಪ್ರಿನ್ಸ್ ಹ್ಯಾಮ್ಲೆಟ್ ಕಪ್ಪು ಬಟ್ಟೆ ಧರಿಸಿದ ಆತ ಮಾನಸಿಕವಾಗಿ ದ್ವಂದ್ವ ಸ್ಥಿತಿಯಲ್ಲಿದ್ದಾನೆ. ಅಷ್ಟೇ ಅಲ್ಲ ರೊಚ್ಚಿಗೆದ್ದಿದ್ದಾನೆ. ಕಾರಣ ತಂದೆ ಡೆನ್ಮಾರ್ಕನ ರಾಜ ಹ್ಯಾಮ್ಲೆಟ್ ಸಾವನ್ನಪ್ಪಿದ್ದಾರೆ. ತಾಯಿ ರಾಣಿ ನಾಚಿಕೆಯಿಲ್ಲದೇ ನಿಷ್ಠೆ ಇಲ್ಲದೇ ಮರುವಿವಾಹವಾಗಿದ್ದಾಳೆ. ಅದು ರಾಜಕುಮಾರನಿಗೆ ಇಷ್ಟವಿಲ್ಲ. ಆಕೆ ಹಾಗೆ ಮಾಡಿದ್ದು ತನ್ನ ತಂದೆಗೆ ಮಾಡಿದ ದ್ರೋಹವೆಂದೆನ್ನಿತ್ತದೆ.ಹಾಗಾಗಿ ಆತನ ಒಳಗುದಿ ಕುದಿಯುತ್ತಿರುವುದು ಬರಿಯ ತಂದೆಯ ಸಾವಿನಿಂದಲ್ಲ. ಬದಲಿಗೆ ತಾಯಿಯ ಮರುವಿವಾಹ ಅದೂ ತನ್ನ ಚಿಕ್ಕಪ್ಪ ಕ್ಲಾಡಿಯಸ್ ನೊಂದಿಗೆ ಹಾಗೂ ಆತ ರಾಣಿ ಗೆರ್ಟ್ರೂಡ್ ಳನ್ನು ಮದುವೆಯಾಗಿ […]

ಕೀರ್ತನ ಸಾಹಿತ್ಯದಲ್ಲಿ ಸಾಮಾಜಿಕ ವಿಡಂಬನೆ: ನಾಗರೇಖಾ ಗಾಂವಕರ

ಸಾಹಿತ್ಯ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಕನಸು ಮೂಡಿಸುವ ಶಕ್ತತೆಯುಳ್ಳದ್ದು, ಹಾಗೇ ಅಪ್ರಜ್ಞಾಪೂರ್ವಕ ನೆಲೆಯಲ್ಲೂ ಮೂಡಿ ಬೆರಗು ಹುಟ್ಟಿಸುವಂತಹುದು. ಕಾವ್ಯ ಹುಟ್ಟುವ ಇಲ್ಲ ಕಟ್ಟುವ ಸಮಯದಲ್ಲಿ ಅದು ಒಳ್ಳಗೊಳ್ಳಬೇಕಾದ ಸಂಗತಿಗಳನ್ನು ಪರಿಕರಗಳನ್ನು ಕುರಿತು ವಿಶ್ಲೇಷಿಸಿದರೆ ಅದು ಕಾವ್ಯ ಮೀಮಾಂಸೆ, ಹಾಗೇ ಪ್ರಾಚೀನ ಕಾಲದ ಸಾಹಿತ್ಯದ ರೂಪುರೇಷೆಗಳ ಕುರಿತು ಇಲ್ಲ ಆ ಕಾಲದ ಕಾವ್ಯದ ಮುಖೇನ ಆ ಯುಗದ ಸಾಮಾಜಿಕ , ರಾಜಕೀಯ ಧಾರ್ಮಿಕ ಸಂಗತಿಗಳನ್ನು ಜೀವನ ರೀತಿನೀತಿಗಳನ್ನು ಮೌಲ್ಯಗಳನ್ನು ಕುರಿತು ವಿಶ್ಲೇಷಿಸುವುದು ಸಂಶೋಧನೆ. ದಾಸ ಪರಂಪರೆಯಲ್ಲಿ ಕೀರ್ತನೆಗಳ ಮುಖೇನ ವಿಡಂಬನಾತ್ಮಕ […]

“ಮುದವಲ್ಲವೇ ಮೌನದಾಲಿಂಗನ”: ನಾಗರೇಖಾ ಗಾಂವಕರ, ದಾಂಡೇಲಿ

“ಸಾಯ್‍ಲೆನ್ಸ  ಇಜ್ ದ್ ಬೆಷ್ಟ್ ಆನ್ಸರ್ ಫಾರ್ ಆಲ್ ಸ್ಟುಪಿಡ್ ಕ್ವೆಶ್ಚನ್ಸ್, ಸ್ಮಾಯ್ಲಿಂಗ ಇಜ್ ದ್ ಬೆಷ್ಟ್ ರಿಯಾಕ್ಷನ್ ಇನ್ ಅಲ್ ಕ್ರಿಟಿಕಲ್ ಸಿಚ್ಯುಯೇಶನ್”. ಎಷ್ಟು ಸುಂದರವಾಗಿ ಹೇಳಿದ್ದಾರೆ ಅಲ್ವೆ? ಮೌನ ಮತ್ತು ಮುಗುಳು ನಗೆಯ ಪರಿಪೂರ್ಣ ಮಹತ್ವವನ್ನು ಬಿಂಬಿಸುವ ಈ ವ್ಯಾಖ್ಯಾನ ಮಾರ್ಮಿಕವೆನಿಸುತ್ತದೆ ಮುಗುಳುನಗೆಯ ಮುಖಾರವಿಂದದಲಿ ಮೌನದ ರಿಂಗಣ ಮನಮೋಹಕ. ಬಹಳ ಸಂದರ್ಭಗಳಲ್ಲಿ ಕೆಲವು ಮೂರ್ಖ ಪ್ರಶ್ನೆಗಳಿಗೆ ಮೌನವೇ ಸರಿಯಾದ ಉತ್ತರ. ಹಾಗೆ ಮುಗುಳುನಗೆ ಒಂದು ಉದ್ದಿಪನ ಮಾತ್ರೆಯಂತೆ. ಅತಿ ಗಂಭೀರ ಹಾಗೂ ಕ್ಲಿಷ್ಟಕರ ಸನ್ನಿವೇಷಗಳಲ್ಲಿ […]

ಪ್ರಬುದ್ಧ ಸಾಹಿತಿ –ಡಾ.ಸರಜೂ ಕಾಟ್ಕರ್: ನಾಗರೇಖಾ ಗಾಂವಕರ

ಪತ್ರಕರ್ತನೊಬ್ಬನ ವೃತ್ತಿ ಬದುಕಿನ ಹಾದಿ ಸಂಘರ್ಷಗಳ ಕಲ್ಲುಚಪ್ಪಡಿ ಎಂಬುದನ್ನು ಯಾರೂ ಅಲ್ಲಗಳಿಯುವಂತಿಲ್ಲ. ಎಡತಾಕುವ ವಿಘ್ನಗಳು ಹತ್ತು ಹಲವು. ಬೆದರಿಕೆಗಳ ಹೊದಿಕೆಯೊಳಗೆ ಜೀವವನ್ನು ಕೈಲಿಟ್ಟುಕೊಂಡೇ ಲೋಕದ ಡೊಂಕನ್ನು ಜಗತ್ತಿನ ಕಣ್ಣುಗಳಿಗೆ ರವಾನಿಸಬೇಕಾದ ಅದರಲ್ಲೂ ಸತ್ಯದ ಸೂಡಿ ಹಿಡಿದೇ ನಡೆಯಬೇಕಾದ ಅನಿವಾರ್ಯತೆ ಆತನದು. ಆತನ ವೃತ್ತಿಕ್ಷಮತೆ ಪ್ರಾಮಾಣಿಕವಾಗಿದ್ದಷ್ಟೂ ಆತನ ವೃತ್ತಿ ಶತ್ರುಗಳು, ಹಿತ ಶತ್ರುಗಳು ಹುಟ್ಟಿಕೊಳ್ಳುತ್ತಲೇ ಇರುವರು. ಅಂತಹ ಸಂದಿಗ್ಧ ಜಗತ್ತಿನಲ್ಲಿ ದಿಟ್ಟತನಕ್ಕೆ ಹೆಸರಾದ, ಆಮಿಷಗಳಿಗೆ ಬಲಿಯಾಗದೇ, ಬೆದರಿಕೆಗಳಿಗೆ ಅಂಜದೇ ಕಾರ್ಯನಿರ್ವಹಿಸಿದ ಪತ್ರಕರ್ತ ಡಾ. ಸರಜೂ ಕಾಟ್ಕರ್. ಒಬ್ಬ ಪತ್ರಕರ್ತನಲ್ಲಿ […]

ಅಧೀನ ನೆಲೆಯಲ್ಲಿ ಹೆಣ್ತನ: ನಾಗರೇಖಾ ಗಾಂವಕರ

ಆಕೆ ಫಣಿಯಮ್ಮ. ಮನೆಗೆಲಸ ಮಾಡಿ ಬದುಕ ನಡೆಸುತ್ತ ಏಗುತ್ತಿರುವ ಮಧ್ಯವಯಸ್ಸಿನ ಹೆಂಗಸು. ನಾಲ್ಕು ಮಕ್ಕಳ ತಾಯಿ. ಮಕ್ಕಳೆಲ್ಲಾ ಶಾಲೆ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಗಂಡ ಕೂಡಾ ಒಬ್ಬ ಕೂಲಿ. ಆದರೆ ವಿಪರೀತ ಕುಡುಕ. ದುಡಿದ ಹಣದಲ್ಲಿ ಬಹಳ ಸಲ ಬಿಡಿಗಾಸನ್ನು ಮನೆಗೆ ಕೊಡದೆ ಮನೆಯಲ್ಲಿ ಉಂಡು ಮಲಗುವ ದಂಡಪಿಂಡ. ಆಕೆ ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿದ್ದಾಳೆ. ದಿನವೂ ಐದಾರು ಮನೆಗಳ ಕಸ ಮುಸುರೆ ತಿಕ್ಕಿ ತಿಂಗಳೊಂದಕ್ಕೆ ಐದಾರು ಸಾವಿರ ಗಳಿಸುವ ಆಕೆಯ ಕುಟುಂಬಕ್ಕೆ ಸಿಗುವ ಪಡಿತರ ಅಕ್ಕಿ ಕಾಳುಗಳು ಹೇಗೋ ಜೀವನ […]

ಸ್ತ್ರೀಯರ -ಸಿದ್ಧ ಮಾದರಿಯ ಸಂವೇದನೆಗಳು: ನಾಗರೇಖಾ ಗಾಂವಕರ

“ನಾನೇ ಮಾಡ್ತೀನಿ, ನೀ ಮಾಡೋದೇನೂ ಬೇಡ,ಎಂದು ಎಷ್ಟು ಹೇಳಿದರೂ ಕೇಳದೇ ದಿನಕ್ಕಾಗುವಷ್ಟು ಅಡುಗೆ ಮಾಡಿಟ್ಟೇ ಹೋಗಿದ್ದಾಳೆ, ಪಾಪ.ಕೆಲವು ವಿಷಯಗಳಲ್ಲಿ ಹೆಣ್ಮಕ್ಕಳು ತೀರಾ ಪೋಸೆಸಿವ್ ಅಲ್ವಾ?”ಎರಡು ದಿನಗಳ ಮಟ್ಟಿಗೆ ತೌರಿಗೆ ಹೊರಟ ಹೆಂಡತಿ ಪತಿಗಾಗಿ ಮುತುವರ್ಜಿಯಿಂದ ಅಲ್ಲಿ ಇಲ್ಲಿ ತಿಂದು ಹೊಟ್ಟೆ ಕೆಡಿಸಿಕೊಳ್ಳಬಾರದೆಂಬ ಕಾರಣದಿಂದ ತೌರಿಗೆ ಹೋಗುವಾಗಲೂ ಒಂದಿಟ್ಟು ಬೇಯಿಸಿಟ್ಟು ಹೋದ ಬಗ್ಗೆ ಪತಿ ಮಹಾಶಯನೊಬ್ಬನ ಅಂಬೋಣ ಇದು. ನನಗಾಶ್ಚರ್ಯ. ತನಗಾಗಿ ಕಾಳಜಿಯಿಂದ ಅಡುಗೆ ಮಾಡಿಟ್ಟು ಹೋದ ಹೆಂಡತಿಗೆ ಪೊಸೆಸಿವ್ ಎಂಬ ಬಿರುದುಕೊಟ್ಟ ಗಂಡಿನ ಬಗ್ಗೆ.ಇದಕ್ಕೆ ಕಾರಣ ಆತನಲ್ಲ. […]

ಸ್ತ್ರೀ ದೇಹ –ಅದರ ಅಧಿಪತ್ಯ: ನಾಗರೇಖಾ ಗಾಂವಕರ

ಕೆಲವು ತಿಂಗಳುಗಳ ಹಿಂದೆ ಲಾಹೋರಿನ 16 ವರ್ಷದ ಬಾಲಕಿಯ ಮೇಲೆ ಆಕೆಯ ಕುಟುಂಬಸ್ಥರ ಎದುರೇ ಅತ್ಯಾಚಾರ ನಡೆಸಲಾಯಿತು. ಇದಕ್ಕೆ ಮುಖ್ಯ ಕಾರಣವೆಂದರೆ ಆ ಬಾಲಕಿಯ ಅಣ್ಣ ಉಮರ್ ವಡ್ಡಾ ಎಂಬಾತ ಅಶ್ಪಾಕ್ ಎಂಬ ಯುವಕನ ತಂಗಿಯ ಮೇಲೆ ಅತ್ಯಚಾರ ಎಸಗಿದ. ಇದನ್ನು ಸೇಡಿಗೆ ತೆಗೆದುಕೊಂಡ ಆ ಯುವಕ ಆತನ ತಂಗಿಯನ್ನು ಆಕೆಯ ಕುಟುಂಬ ಎಲ್ಲರೆದುರೇ ಅತ್ಯಾಚಾರ ಮಾಡಿದ್ದ. ಹೀಗೆ ಮಾಡುವಂತೆ ಅಲ್ಲಿಯ ಗ್ರಾಮ ಮಂಡಳಿಯೇ ತೀರ್ಮಾನ ತೆಗೆದುಕೊಂಡು ಆತನಿಗೆ ಆದೇಶಿಸಿತ್ತು. ಹಾಗೆ ಮಾಡಿದಾಗ ಮಾತ್ರ ಆ ಮತ್ತೊಬ್ಬ […]

ಸಮಾನತೆ ಮತ್ತು ಕೌಟಂಬಿಕ ಸಾಮರಸ್ಯ: ನಾಗರೇಖಾ ಗಾಂವಕರ

ಆಕೆಯೊಬ್ಬ ವಿದ್ಯಾವಂತೆ. ಬುದ್ದಿವಂತೆ. ಆದರೀಗ ಗೃಹಿಣಿ.. ವಿವಾಹವಾಗಿ ನಾಲ್ಕೈದು ತಿಂಗಳುಗಳಷ್ಟೇ ಕಳೆದಿವೆ. ಆಕೆಯ ಆ ವಯಸ್ಸು ಸೊಗಸಾದ ಪ್ರೇಮದ ಬಯಕೆಯನ್ನು ವ್ಯಕ್ತಪಡಿಸುವ, ಪತಿಯ ಜೊತೆಜೊತೆಯಲ್ಲಿ ಬಹುಹೊತ್ತು ಇರಬೇಕೆನ್ನಿಸುವ, ರಸಮಯ ಜೀವನದ ಆಕಾಂಕ್ಷೆಯನ್ನು ಹೊತ್ತ ಕಾಲ. ಅದು ಹೆಣ್ಣಿನ ಸಹಜ ಬಯಕೆ. ಅದರಂತೆ ಮನೆವಾಳ್ತೆ ಮುಗಿಸಿ ಆಕೆ ದಿನವೂ ಹೊರದುಡಿಮೆಯಲ್ಲಿ ಬಸವಳಿದು ಬರುವ ಗಂಡನಿಗಾಗಿ ರುಚಿಯಾದ ಅಡುಗೆ ತಿಂಡಿ ಮಾಡಿ ಕಾಯುತ್ತಾಳೆ. ಆತ ಬರುವ ಮುನ್ನ ಪತಿಯ ಆಗಮನ ಇಂದಿಗೆ ತನ್ನ ದಿನವನ್ನು ಹೇಗೆಲ್ಲಾ ಬದಲಾಯಿಸಬಹುದೆಂದು ಕನಸುತ್ತಾಳೆ. ಆ […]

ಸ್ತ್ರೀ ಸ್ವತಂತ್ರ ಅಸ್ಥಿತ್ವದ ಅಗತ್ಯತೆ: ನಾಗರೇಖಾ ಗಾಂವಕರ

ಆಧುನಿಕ ಮಹಿಳಾ ಜಗತ್ತು ತನ್ನದೇ ಸ್ವಯಂಕೃತ ಸಾಧನೆಯ ಸರಣಿಯಲ್ಲಿ ಸಾಗಲು ಅತೀ ಜರೂರತ್ತು ಇರುವುದು ಆಕೆಗೆ ಶಿಕ್ಷಣದ ಅಗತ್ಯತೆ. ಶೈಕ್ಷಣಿಕ ಕ್ಷಮತೆಯಲ್ಲಿ ಆಕೆಯ ಹೆಜ್ಜೆಗಳು ದಿಟ್ಟ ದಾಪುಗಾಲು ಹಾಕಬೇಕಿದೆ. ಶೈಕ್ಷಣಿಕ ಅಗತ್ಯತೆತೆ ಅರಿವು ಇನ್ನೂ ಹಲವು ಹಳ್ಳಿಗಳಲ್ಲಿ ಮೂಡಿಲ್ಲ. ಅರ್ಧಕ್ಕೆ ಶಿಕ್ಷಣದಿಂದ ವಂಚಿತರಾಗುವ ಅದೆಷ್ಟೋ ಹುಡುಗಿಯರಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳನ್ನು ಅತಿ ಚಿಕ್ಕ ವಯಸ್ಸಿನಲ್ಲಿ ವಿವಾಹಮಾಡಿಕೊಡುವ ಸಂಪ್ರದಾಯಗಳು ನಿಂತಿಲ್ಲ. ಹೆಣ್ಣು ಕಲಿತು ಉದ್ಧಾರ ಮಾಡುವುದು ಅಷ್ಟೇ ಇದೆ. ಮುಸರೆ ತೊಳೆಯುವುದೇನೂ ತಪ್ಪೋಲ್ಲ ಅನ್ನೋ ಮನಸ್ಥಿತಿ ಇಂದಿಗೂ ಜೀವಂತ. ಹಿಂದೆಲ್ಲಾ […]

ಸ್ತ್ರೀ ವ್ಯಕ್ತಿತ್ವ ವಿಕಸನದ ಅಡೆತಡೆಗಳು ವಸ್ತ್ರ ಸಂಹಿತೆ- ಗೋಷಾ ಪದ್ಧತಿ: ನಾಗರೇಖಾ ಗಾಂವಕರ

ಬದಲಾವಣೆಯ ಕಾಲಘಟ್ಟದಲ್ಲಿ ಹೆಣ್ಣು ಮತ್ತಾಕೆಯ ಸ್ಥಿತಿಗತಿಗಳ ಬಗ್ಗೆ ಸಮಾನತೆಯ ಬಗ್ಗೆ ಚರ್ಚಿಸುವ ಅದಕ್ಕಾಗಿ ಹೋರಾಟ ನಡೆಸುತ್ತಿರುವ ಉಚ್ಚ್ರಾಯ ಕಾಲವಿದು. ಆದರೆ ಅದರೊಂದಿಗೆ ಆಕೆಯ ಮೇಲಾಗುತ್ತಿರುವ ದೌರ್ಜನ್ಯಗಳ ಪ್ರಮಾಣಗಳೂ ಅಧಿಕವಾಗುತ್ತಿರುವ ಸಂದರ್ಭದಲ್ಲಿ ಧರ್ಮ ಕಾಲ ದೇಶಗಳ ವೈತ್ಯಾಸವಿರದೇ ಇಡೀ ಜಗತ್ತಿನಾದ್ಯಂತ ಈ ಶೋಷಣೆಗಳು ನಡೆಯುತ್ತಲೇ ಇರುವುದು ಕೂಡಾ ದಿನನಿತ್ಯದ ಸಂಗತಿ. ಸ್ತ್ರೀ ಶೋಷಣೆ ಎಂಬ ವಿಚಾರ ಬರಿಯ ಭಾರತದ ಮತ್ತು ಕೇವಲ ಹಿಂದೂ ಧರ್ಮದ ಆಚರಣೆಗಳಲ್ಲಿ ಮಾತ್ರ ಸೀಮಿತವಾಗಿರದೇ ಅದು ವಿಶ್ವವ್ಯಾಪಿಯಾದ ವಿಚಾರ. ಮಹಿಳಾ ಸ್ವಾತಂತ್ರ್ಯಕ್ಕೆ ಆಕೆಯ ಸರ್ವತೋಮುಖ […]