ಸಮಸ್ಯೆಗಳಿಗೆಲ್ಲಾ ಆತ್ಮಹತ್ಯೆಯೊಂದೇ ಪರಿಹಾರವೇ ?: ಕೆ ಟಿ ಸೋಮಶೇಖರ, ಹೊಳಲ್ಕೆರೆ.

       ಸಮಸ್ಯೆಗಳು ಇಲ್ಲದ ಮನೆ, ಕುಟುಂಬ, ಜೀವನ ಇರಲು ಸಾಧ್ಯವಿಲ್ಲ! ಇದನ್ನು ಅರಿಯದೆ ಸಮಸ್ಯೆಗಳಿಗೆಲ್ಲಾ ಆತ್ಮಹತ್ಯೆಯೇ ಪರಿಹಾರ ಎಂದು ಜಗತ್ತು ಭಾವಿಸಿದಂತಿದೆ. ಪ್ರಯುಕ್ತ ಆತ್ಮಹತ್ಯೆ ಮಾಡಿಕೊಳ್ಳಲು ಜಗತ್ತು ತುದಿಗಾಲಲಿ ನಿಂತಂತೆ ತೋರುತ್ತಿದೆ. ತಂದೆಯೋ ತಾಯಿಯೋ ಶಿಕ್ಷಕರೋ ಬುದ್ದಿ ಹೇಳಿದುದನ್ನು ಅವಮಾನವೆಂದು ಭಾವಿಸಿ, ಉತ್ತಮ ಅಂಕ ಗಳಿಸಲಿಲ್ಲವೆಂದು, ಬಯಸಿದ ವಸ್ತು ಕೊಡಿಸಲಿಲ್ಲವೆಂದು, ಇಷ್ಟವಾದವಳು ಪ್ರೀತಿಸಲಿಲ್ಲವೆಂದು  ಇನ್ನೂ ಅನೇಕ ಚಿಕ್ಕ ಚಿಕ್ಕ ಕಾರಣಗಳಿಂದ ಚಿಕ್ಕವರು, ಯುವಕರು ಅತ್ಯಮೂಲ್ಯ ಆತ್ಮವ ಹತ್ಯೆ ಮಾಡಿಕೊಂಡರೆ, ವ್ಯಪಾರಿಗಳು, ರೈತರು, ಅಧಿಕಾರಿವರ್ಗ, ಪೋಲಿಸರು, … Read more

 ಹಬ್ಬಗಳ ಆಚರಣೆ – ಆರೋಗ್ಯ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ನಮ್ಮ ಪೂರ್ವಜರು ಪುರಾತನ ಕಾಲದಿಂದಲೂ ಹಬ್ಬ ಹರಿದಿನಗಳ ಆಚರಣೆಗೆ ತಂದಿರುವುದು ಬಹಳ ಔಚಿತ್ಯಪೂರ್ಣವೂ, ಆರೋಗ್ಯಪೂರ್ಣವೂ ಆಗಿದೆ. ಜತೆಗೆ ಆಚರಣೆ ವಿಧಾನಗಳು, ರೀತಿ ನೀತಿಗಳು ಅಷ್ಟೇ ಮಹತ್ವ ಪಡೆದಿವೆ. ಈ ದೃಷ್ಟಿಯಿಂದ ನಮ್ಮ ಪೂರ್ವಜರ ಮೆಚ್ಚಬೇಕಾದದ್ದೇ! ಅವು ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಭಾಗವಾಗಿವೆ! ಹಬ್ಬಗಳ ನೆಪದಲ್ಲಿಯಾದರೂ ಆಗಾಗ ಮನೆ ಧೂಳು ತೆಗೆದು, ಸುಣ್ಣ, ಬಣ್ಣ ಬಳಿಸಿ ಶುಚಿಗೊಳಿಸುತ್ತೇವೆ. ಇದರಿಂದ ಕ್ರಿಮಿ, ಕೀಟಗಳು, ರೋಗಾಣುಗಳು ನಾಶವಾಗುತ್ತವೆ. ಇದರಿಂದ ರೋಗಗಳು ಹರಡದಂತೆ, ಅವು ಬರದನ್ನು ತಡೆಗಟ್ಟಿದಂತೆ ಆಗುತ್ತದೆ. ಮನೆ ಸ್ವಚ್ಛ … Read more

 ಆ ಒಂದು ಮಾತು !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಆ ಒಂದು ಮಾತು ಅವನ ಬದುಕಿನ ಗುರಿಯನ್ನು ನಿರ್ಧರಿಸಿತು. ಮಾರ್ಗವನ್ನು ಕಂಡುಕೊಳ್ಳುವ ಒತ್ತಾಯ ಮಾಡಿತು. ಕಂಡುಕೊಂಡು ಗುರಿ ತಲುಪುವಂತೆ ಮಾಡಿ, ಆಕಾಶದಲ್ಲಿ ನಕ್ಷತ್ರವಾಗಿ ಹೊಳೆಯುವಂತೆ ಮಾಡಿತು. "Where there is a will there is a way"  ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ. ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಲು ಸಮರ್ಥ ಇದ್ದಾನೆ. ಈ ಮಾತುಗಳು ಮತ್ತು ಯುವಕರೇ ," ಏಳಿ, ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ " ,  " ಯುವಶಕ್ತಿ ಹುಚ್ಚು … Read more

ಪ್ರೀತಿಯ ಮೇಲ್ಮೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ನಮ್ಮ ಭಾರತ ದೇಶದ ಪರಂಪರೆ, ಸಂಸ್ಕೃತಿ ಉದಾತ್ತವಾದುದು. ಸಂಬಂಧಗಳ ನಡುವಿನ ಅನ್ಯೋನ್ಯತೆ,  ಪ್ರೀತಿ, ತ್ಯಾಗ ಉನ್ನತವಾದುದು. ಅವು ಇತಿಹಾಸ, ಪುರಾಣ, ಕಾವ್ಯಗಳಲ್ಲಿ ಓತಪ್ರೋತವಾಗಿ ಹರಿದಿವೆ! ಪ್ರೀತಿ ಎಂಬುದು ಅನನ್ಯವಾದುದು! ಉದಾತ್ತವಾದುದು! ಸಂಬಂಧಗಳನ್ನು ಬೆಸೆಯುವಂಥದ್ದು! ಎಲ್ಲರನ್ನೂ ಒಂದುಗೂಡಿಸುವಂತಹದ್ದು. ಪ್ರೀತಿಯಿಂದ ಜಗತ್ತು ಸೃಷ್ಟಿಯಾಗಿದೆ. ಪ್ರೀತಿಯೇ ಜಗದ ತುಂಬ ತುಂಬಿದೆ. ಗಾಳಿ ಸುಳಿದಾಡುವುದು, ಆದಿತ್ಯ ಬೆಳಕು ಕೊಡುವುದು, ಮಳೆ ಇಳೆಗೆ ಇಳಿದು ಬರುವುದು, ಸಸ್ಯಗಳು ಹೂ ಹಣ್ಣು ಕೊಡುತ್ತಿರುವುದು, ನದಿಗಳು ಹರಿಯುತ್ತಿರುವುದು, ಹಗಲು – ರಾತ್ರಿಗಳಾಗುತ್ತಿರುವುದು ಬ್ರಹ್ಮಾಂಡ ಸೃಷ್ಟಿಯಾಗಿರುವುದು  … ಪ್ರೀತಿಯಿಂದ! … Read more

 ಕುರ್ಚಿಯ ಗೌರವ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಕೆಲವರಿಗೆ ಕುರ್ಚಿಯಿಂದ ಬೆಲೆ ಬರುತ್ತದೆ. ಅವರು ಕುರ್ಚಿಯಲ್ಲಿ ಇರುವತನಕ ಗೌರವಿಸಲ್ಪಡುತ್ತಾರೆ. ಕುರ್ಚಿಯಿಂದ ಕೆಳಗಿಳಿದ ತಕ್ಷಣ ಹತ್ತಿರ ಯಾರೂ ಸುಳಿಯದಾಗುತ್ತಾರೆ. ಮತ್ತೆ ಕೆಲವರು ಕುರ್ಚಿಯ ಬೆಲೆ ಹೆಚ್ಚಿಸುತ್ತಾರೆ. ಕುರ್ಚಿಯ ಬೆಲೆ ಹೆಚ್ಚಿಸುವವರು ಅಪರೂಪ, ಅವರಿಂದ ಅನನ್ಯವಾದ ಸಾಧನೆಯಾಗುತ್ತದೆ. ಅವರು ಕುರ್ಚಿ ತೊರೆದ ನಂತರವೂ ಮೊದಲಿಗಿಂತ ಹೆಚ್ಚು ಗೌರವಿಸಲ್ಪಡುತ್ತಾರೆ. ಇದು ಜನರು ಕೊಡುವ ಆತ್ಮಪೂರಕ ಗೌರವವಾಗಿರುತ್ತದೆ. ಇವರು ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. ಇನ್ನೂ  ಕೆಲವರು ಯಾವ ಅಧಿಕಾರ, ಅಂತಸ್ಥು ಇಲ್ಲದೆ ಅದ್ಭುತ ಸಾಧನೆ ಮಾಡಿ ಜನಮಾನಸದಲ್ಲಿ ಉಳಿದು ಅಮರರಾಗುತ್ತಾರೆ. ಕೆಲವರು … Read more

ಮೋದಿಯ ಹಾದಿ: ಕೆ ಟಿ ಸೋಮಶೇಖರ ಹೊಳಲ್ಕೆರೆ.

  ದೇಶವನ್ನು ಆಳುವವರ ಉದ್ದೇಶ ದೇಶದ ನೆಮ್ಮದಿ. ದೇಶವನ್ನು ಕಾಡುವ ಸಮಸ್ಯೆಗಳನ್ನು ಗುರುತಿಸಿ, ಹೋಗಲಾಡಿಸುವ ಮಾರ್ಗಗಳನ್ನು ತಿಳಿದು, ಅದಕ್ಕೆ  ಶಾಶ್ವತ ಯೋಜನೆಗಳನ್ನು ರೂಪಿಸಿ, ನಿಗಧಿತ ಸಮಯದೊಳಗೆ ಅವುಗಳನ್ನು ಪರಿಹರಿಸುವುದು ಉತ್ತಮ ಆಡಳಿತಗಳ ಲಕ್ಷಣ. ಆಗ ಸರ್ಕಾರಗಳ ಹೊರೆ  ಕಡಿಮೆಯಾಗಿ, ಹೆಸರು ಜಾಸ್ತಿಯಾಗಿ, ಜನಕ್ಕೆ ನೆಮ್ಮದಿ ಲಭಿಸೀತು. ಭಾರತ ವಿಜ್ಙಾನ, ತಂತ್ರಜ್ಙಾನ,  ಬಾಹ್ಯಾಕಾಶ … ಗಳಲ್ಲಿ ರಭಸವಾಗಿ ಮುನ್ನುಗ್ಗುತ್ತಿದೆ. ಸರ್ವತೋಮುಖ ಅಭಿವೃದ್ದಿಗೆ  ಅನೇಕ ಸಮಸ್ಯೆಗಳು ಅಡ್ಡಿಯಾಗಿವೆ. ಆ ಸಮಸ್ಯೆಗಳಲ್ಲಿ ಎರಡು ವಿಧ. ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳು.  ಬಡತನ, … Read more

ಸ್ವಾತಂತ್ರ್ಯ ಹೋರಾಟವು, ವ್ರತಗಳ ಬಂಧನವು: ಕೆ ಟಿ ಸೋಮಶೇಖರ ಹೊಳಲ್ಕೆರೆ,

    ಈ ಮನುಷ್ಯನಿಗೆ ತಲೆಬಾಗಿ ಹೃದಯಪೂರ್ವಕ ನಮಿಸಬೇಕೆನ್ನಿಸುವುದು ದೇಶದ ಸ್ವಾತಂತ್ರ್ಯ ಹೋರಾಟದ ಮುಂದಾಳು ಆಗಿದ್ದ ಎಂದು ಅಲ್ಲ. ಹೋರಾಡಲು ಆಯ್ದುಕೊಂಡ ಮಾರ್ಗ ಅತ್ಯುನ್ನತವಾದುದು ಆಗಿತ್ತೆಂದು. ಸ್ವಾತಂತ್ರ್ಯ ಎಂದರೆ ನಾವು ಬಯಸಿದಂತೆ ಬದುಕಲು ಸಾಧ್ಯವಾಗುವದು. ಬದುಕಿನ ಮೇಲೆ ಯಾರ, ಯಾವ ಒತ್ತಡವೂ ಇರದೆ ಬದುಕುವುದು. ಯಾರ ಕಟ್ಟುಪಾಡುಗಳಿಗೆ ದೌರ್ಜನ್ಯಕೂ ಒಳಗಾಗದೆ ಬದುಕುವುದು. ಕಟ್ಟುಪಾಡುಗಳೇನಾದರೂ ಹಾಕಿದರೆ, ಹಿಂಸೆ ಮಾಡಿದರೆ ಮಾನವನು ಬದುಕಲು ತೊಂದರೆಯಾಗುತ್ತದೆ.ಕಟ್ಟುಪಾಡುಗಳು, ಹಿಂಸೆ ಹೆಚ್ಚಿದಂತೆಲ್ಲ ಬದುಕಲು ತೊಂದರೆ ಹೆಚ್ಚಿ,ಉಸಿರುಗಟ್ಟಿದಂತಾಗುತ್ತದೆ. ವ್ಯಕ್ತಿ ಸ್ವಾತಂತ್ರ್ಯದ  ಹರಣವಾಗುತ್ತದೆ. ಇದೇ ವಾತಾವರಣ ಮುಂದುವರಿದರೆ, … Read more

ವಿವೇಕವಾಣಿ !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ತನಗೆ ನಲವತ್ತು ವರುಷ ತುಂಬುವ ಮುನ್ನ ಭಾರತವ ವಿಶ್ವಮಾನ್ಯವಾಗಿಸಿ, ಭಾರತದ ಧರ್ಮ, ಸಂಸ್ಕೃತಿಯ ಜಗಕೆ ಸಾರಿ, ಹಿಂದೂ ಧರ್ಮದ ಉದಾತ್ತತೆಯನ್ನು ಅರ್ಥೈಸಿ, ಭಾರತದ ಬಗೆಗೆ ಮಹಾನ್, ಉದಾತ್ತ ಭಾವನೆ, ಬರುವಂತೆ ಮಾಡಿ, ಅದ್ಬುತವ ಸಾಧಿಸಿ, ವಿಶ್ವಮಾನ್ಯನಾದ. ಆ ವೀರ ಸನ್ಯಾಸಿ  ತನ್ನ ಆಕರ್ಷಕ ನಿಲುವಿನಿಂದ, ಉದಾತ್ತ ಮಾತಿನಿಂದ, ಸಿರಿ ಕಂಠದಿಂದ ಜನರ ಮಂತ್ರಮುಗ್ದಗೊಳಿಸಿ ಜಗವ ಗೆದ್ದ ! ಭಾರತ ರೂಪುಗೊಳ್ಳದ ಮುನ್ನ ಭಾರತೀಯತೆಯ ಪರಿಚಯ ವಿಶ್ವಕ್ಕೆ ಅಷ್ಟಾಗಿ ಆಗಿರಲಿಲ್ಲ. ಆಗಲು ಸಾಧ್ಯವಿರಲಿಲ್ಲ. ಏಕೆಂದರೆ ೧೯೪೭ ಕ್ಕಿಂತ ಹಿಂದೆ … Read more

  ನಿಜದನಿ: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ನಾವು ಯಾವುದನ್ನೂ  ಬಲವಂತವಾಗಿ  ಉಳಿಸಲಾಗದು. ಹಾಗೆ ಉಳಿಸಿದರೂ ಬಹಳ ವರ್ಷ ಬದುಕದು. ಯಾವುದನ್ನು ಬಳಸುತ್ತೇವೋ ಅದು ಬಹಳ ವರ್ಷ ಉಳಿಯುತ್ತದೆ ಬೆಳೆಯುತ್ತದೆ. ಬರಿ ಬಾಯಿಯಿಂದ ಕನ್ನಡ ಉಳಿಸಿ ಬೆಳೆಸಿ ಎಂದು ಅಬ್ಬರಿಸಿದ ಮಾತ್ರಕ್ಕೆ ಕನ್ನಡ ಉಳಿಯದು. ಕನ್ನಡ ಬಳಸಿದರೆ ಉಳಿದೀತು, ಪ್ರೀತಿಸಿದರೆ ಬೆಳೆದೀತು. ಇದು ಯಾವುದೇ ಸಂಘ, ಸಂಸ್ಥೆ,  ಒಕ್ಕೂಟಗಳ ಜವಾಬ್ದಾರಿಯಾಗಿರದೆ ಪ್ರತಯೊಬ್ಬ ಕನ್ನಡಿಗನ ಕರ್ತವ್ಯವಾಗಿರುತ್ತದೆ ಕನ್ನಡ ಸುಂದರ ಲಿಪಿಯಿರುವ ಮಧುರ ಭಾಷೆ. ಕನ್ನಡಿಗರನ್ನು, ಕನ್ನಡ ಸಂಸ್ಕೃತಿಯನ್ನು ರೂಪಿಸಿ, ದಾನ, ತ್ಯಾಗ ಉದಾತ್ತ ಗುಣಗಳಿಗೆ ಹೆಸರಾದ ಭಾಷೆ. … Read more

ಆ ಒಂದು ಪ್ರಶ್ನೆ: ಕೆ ಟಿ ಸೋಮಶೇಖರ ಹೊಳಲ್ಕೆರೆ

ಎಲ್ಲಾ  ಸಮಾಜಗಳಿಗೂ ಆದರ್ಶ ಪುರಷನಾದ, ಪುರಷೋತ್ತಮನಾದ ರಾಮನ ಆದರ್ಶದ ಕಥೆ ಅನನ್ಯ. ಆ ಕಥೆ ಸೊಗಸಾಗಿ ರಚಿಸಿದ ವಾಲ್ಮೀಕಿ ಧನ್ಯ. ಅನುಸರಿಸಿ ಆದರ್ಶವಾದ ಭಾರತೀಯ ಸಮಾಜ ಪರಮಧನ್ಯ. ರಾಮಾಮಾಯಣ ವಿಶ್ವದ ಮಹಾಕಾವ್ಯಗಳಲ್ಲಿ  ಒಂದು. ರಾಮಾಯಣ ಎಂದರೆ ' ರಾಮನ ಚರಿತೆ ' ಎಂದು ಅರ್ಥ. ' ರಾಮ '  ಎಂದರೆ  ಮನೋಹರ, ಸುಂದರ, ರಂಜಿಸು ಎಂಬ ಅರ್ಥಗಳಿವೆ. ' ಆಯನ '  ಎಂದರೆ ಚರಿತೆ, ಗತಿ, ಸ್ಥಾನ ಎಂಬ ಅರ್ಥಗಳಿವೆ. ಅವೆರಡು ಪದಗಳು ಸಮಾಸವಾಗಿ ರಾಮಾಯಣ ಪದವಾಗಿದೆ. … Read more