Facebook

Archive for the ‘ಝೆನ್-ಸೂಫಿ ಕತೆಗಳು’ Category

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಂಗಗಳೂ ಟೊಪ್ಪಿಗಳೂ ಒಂದಾನೊಂದು ಕಾಲದಲ್ಲಿ ಜೀವನೋಪಾಯಕ್ಕಾಗಿ ಊರಿಂದೂರಿಗೆ ತಿರುಗುತ್ತಾ  ಟೊಪ್ಪಿಗಳನ್ನು ಮಾರುತ್ತಿದ್ದ ಔರಂಗಝೇಬ್‌ ಎಂಬ ಯುವಕನಿದ್ದ. ಬೇಸಿಗೆಯ ಒಂದು ಅಪರಾಹ್ನ ವಿಶಾಲವಾದ ಬಯಲಿನಲ್ಲಿ ಪಯಣಿಸಿ ಸುಸ್ತಾಗಿದ್ದ ಔರಂಗಝೇಬನು ಯಾವುದಾದರೂ ತಂಪಾದ ಸ್ಥಳದಲ್ಲಿ ವಿರಮಿಸಿ ಒಂದು ಕಿರುನಿದ್ದೆ ಮಾಡುವ ಆಲೋಚನೆ ಮಾಡಿದ. ಸಮೀಪದಲ್ಲಿಯೇ ಇದ್ದ ಮಾವಿನ ಮರವೊಂದರ ಬುಡದಲ್ಲಿ ತನ್ನ ಚೀಲವನ್ನಿಟ್ಟು ಮಲಗಿ ನಿದ್ದೆ ಮಾಡಿದ. ಕೆಲವೇ ಕ್ಷಣಗಳಲ್ಲಿ ಗಾಢ ನಿದ್ದೆಗೆ ಜಾರಿದ. ಸ್ವಲ್ಪ ಸಮಯದ ನಂತರ ಎಚ್ಚರಗೊಂಡು ನೋಡುವಾಗ ಚೀಲದಲ್ಲಿ ಇದ್ದ ಟೊಪ್ಪಿಗಳೆಲ್ಲವೂ ಮಾಯವಾಗಿದ್ದವು. “ಛೇ, […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ದತ್ತು ಹಕ್ಕಿಮರಿಯ ಕತೆ ಒಂದಾನೊಂದು ಕಾಲದಲ್ಲಿ ಹಾರಲಾರದ ಹೆಣ್ಣು ಪಕ್ಷಿಯೊಂದಿತ್ತು. ಕೋಳಿಯಂತೆ ನೆಲದ ಮೇಲೆ ನಡೆದಾಡುತ್ತಿದ್ದ ಅದಕ್ಕೆ ಕೆಲವು ಪಕ್ಷಿಗಳು ನಿಜವಾಗಿಯೂ ಹಾರುತ್ತಿದ್ದವು ಎಂಬುದು ತಿಳಿದಿತ್ತು. ಒಂದು ದಿನ ಅದು ಹಾರುವ ಪಕ್ಷಿಯ ಪರಿತ್ಯಕ್ತ ಮೊಟ್ಟೆಯೊಂದನ್ನು ನೋಡಿತು. ಮೊಟ್ಟೆಯೊಡೆದು ಮರಿ ಹೊರಬರುವ ವರೆಗೆ ಅದಕ್ಕೆ ಕಾವು ಕೊಡಲು ತೀರ್ಮಾನಿಸಿತು. ಯುಕ್ತ ಸಮಯಾನಂತರ ಮೊಟ್ಟೆಯನ್ನು ಒಡೆದುಕೊಂಡು ಮರಿ ಹೊರಬಂದಿತು. ಅದು ಹಾರುವ ಸಾಮರ್ಥ್ಯವಿದ್ದ ಪಕ್ಷಿಯ ಮೊಟ್ಟಯಿಂದ ಹೊರಬಂದ ಮರಿಯಾದ್ದರಿಂದ ಅದಕ್ಕೂ ಹಾರುವ ಸಾಮರ್ಥ್ಯ ಹುಟ್ಟುವಾಗಲೇ ಇತ್ತು. ತುಸು […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕಲಾವಿದರ ಕತೆ ಸುಲ್ತಾನ ಶೋಯೆಬ್‌ನ ಸಮ್ಮುಖದಲ್ಲಿ ಚೀನೀ ಕಲಾವಿದರ ಹಾಗೂ ಗ್ರೀಕ್‌ ಕಲಾವಿದರ ಪುಟ್ಟ ಗುಂಪುಗಳ ನಡುವೆ ಯಾರಲ್ಲಿ ಮೇಲ್ದರ್ಜೆಯ ಕಲಾ ಕುಶಲತೆ ಇದೆ ಎಂಬುದರ ಕುರಿತು ಜಗಳವಾಯಿತು. ಮಹಾನ್‌ ಕುಶಲತೆಗಳು ಅಧಿಕ ಸಂಖ್ಯೆಯಲ್ಲಿ ತಮ್ಮಲ್ಲಿ ಇವೆಯೆಂದು ಚೀನೀ ಕಲಾವಿದರು ಘೋಷಿಸಿದರು, ತಾವು ಕಲೆಯ ಮೇಲೆ ಪ್ರಭುತ್ವ ಸಾಧಿಸಿರುವುದಾಗಿ ಗ್ರೀಕ್‌ ಕಲಾವಿದರು ಘೋಷಿಸಿದರು. ಅವೆರಡೂ ಗುಂಪುಗಳ ನಡುವೆ ಸ್ಪರ್ಧೆಯೊಂದನ್ನು ಏರ್ಪಡಿಸುವುದರ ಮೂಲಕ ವಿವಾದವನ್ನು ಪರಿಹರಿಸಲು ಸುಲ್ತಾನ ನಿರ್ಧರಿಸಿದ. ಅರಮನೆಯ ಸಮೀಪದಲ್ಲಿ ಇದ್ದ ಬೆಟ್ಟದ ತುದಿಯಲ್ಲಿ ಎರಡು […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಬೋಹ್‌ಲುಲ್‌ ಮತ್ತು ಸೇತುವೆ ನದಿ ನೀರಿನ ಹರಿಯುವಿಕೆಯನ್ನು ನೋಡುತ್ತಾ ಒಂದು ಸೇತುವೆಯ ಮೇಲೆ ಕುಳಿತಿದ್ದ ಬೋಹ್‌ಲುಲ್‌. ರಾಜ ಅವನನ್ನು ನೋಡಿದ, ತಕ್ಷಣ ದಸ್ತಗಿರಿ ಮಾಡಿಸಿದ. ರಾಜ ಹೇಳಿದ, “ಸೇತುವೆ ಇರುವುದು ನದಿಯನ್ನು ದಾಟಲೋಸುಗ, ಅಲ್ಲಿಯೇ ಉಳಿದುಕೊಳ್ಳಲು ಅಲ್ಲ.” ಬೋಹ್‌ಲುಲ್ ಉತ್ತರಿಸಿದ, “ನೀವೊಮ್ಮೆ ನಿಮ್ಮನ್ನೇ ನೋಡಿಕೊಳ್ಳುವುದು ಒಳ್ಳೆಯದು. ಈ ಜೀವನಕ್ಕೆ ಹೇಗೆ ಅಂಟಿಕೊಂಡಿದ್ದೀರಿ ಎಂಬುದನ್ನೊಮ್ಮೆ ಗಮನಿಸುವುದು ಒಳ್ಳೆಯದು.” ***** ೨. ಬಾಸ್ರಾದ ಹಸನ್‌ನಿಗೆ ರಬಿ’ಆ ಳ ಉಡುಗೊರೆಗಳು ರಬಿ’ಆ ಅಲ್‌-ಅದವಿಯ್ಯಾ ಬಾಸ್ರಾದ ಹಸನ್‌ನಿಗೆ ಮೂರು ವಸ್ತುಗಳನ್ನು ಕಳುಹಿಸಿದಳು […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮೊಳೆ ಒಂದು ಮೊಳೆ ಮತ್ತು ಒಬ್ಬ ಮನುಷ್ಯನ ನಡುವೆ ನಡೆದ ಸಂಭಾಷಣೆ ಇಂತಿದೆ: ಮೊಳೆ: “ಅನೇಕ ವರ್ಷಗಳಿಂದ ಈ ಫಲಕಕ್ಕೆ ಅಂಟಿಕೊಂಡಿರುವ ನಾನು ಭವಿಷ್ಯದಲ್ಲಿ ನನಗೆ ಏನಾಗಬಹುದೆಂಬುದರ ಕುರಿತು ಅನೇಕ ಸಲ ಕುತೂಹಲದಿಂದ ಆಲೋಚಿಸಿದ್ದೇನೆ.” ಮನುಷ್ಯ: “ನೀನು ಈಗ ಇರುವ ಸನ್ನಿವೇಶದಲ್ಲಿ ಅನೇಕ ಸಾಧ್ಯತೆಗಳು ಹುದುಗಿವೆ. ಯಾರಾದರು ಚಿಮುಟದಿಂದ ನಿನ್ನನ್ನು ಎಳೆದು ಹಾಕಬಹುದು, ನೀನಿರುವ ಫಲಕ ಸುಟ್ಟು ಹೋಗಬಹುದು, ನೀನಿರುವ ಫಲಕವನ್ನು ಹುಳು ತಿನ್ನಬಹುದು – ಹೀಗೆ ಅನೇಕ ಸಾಧ್ಯತೆಗಳಿವೆ. ಮೊಳೆ: “ಇಂಥ ಮೂರ್ಖ ಪ್ರಶ್ನೆಗಳನ್ನು […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕಪ್ಪೆಗಳು ಕಪ್ಪೆಗಳ ಗುಂಪೊಂದು ಕಾಡಿನ ಮೂಲಕ ಎಲ್ಲಿಗೋ ಪಯಣಿಸುತ್ತಿದ್ದಾಗ ಅವುಗಳ ಪೈಕಿ ಎರಡು ಕಪ್ಪೆಗಳು ಒಂದು ಆಳವಾದ ಗುಂಡಿಯೊಳಕ್ಕೆ ಬಿದ್ದವು. ಉಳಿದ ಕಪ್ಪೆಗಳು ಗುಂಡಿಯ ಮೇಲೆ ಸುತ್ತಲೂ ನಿಂತು ಗುಂಡಿ ಎಷ್ಟು ಆಳವಿದೆ ಎಂಬುದನ್ನು ಅಂದಾಜಿಸಿದವು. ತದನಂತರ ಗುಂಡಿಯೊಳಕ್ಕೆ ಬಿದ್ದ ದುರದೃಷ್ಟವಂತ ಕಪ್ಪೆಗಳಿಗೆ ಅವು ಎಂದೆಂದಿಗೂ ಹೊರಬರಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಹೇಳಿದವು. ಆ ಎರಡು ಕಪ್ಪೆಗಳು ಈ ಹೇಳಿಕೆಯನ್ನು ನಿರ್ಲಕ್ಷಿಸಿ ಗುಂಡಿಯಿಂದ ಹೊರಕ್ಕೆ ಹಾರಲು ಪ್ರಯತ್ನಿಸತೊಡಗಿದವು.   ಆ ಗುಂಡಿಯೊಳಗೇ ಸಾಯುವುದು ಖಚಿತವಾದ್ದರಿಂದ ವೃಥಾ ಶ್ರಮ […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಸತ್ತ ಹಿರಿಯರಿಗೆ ಗೌರವ ಸೂಚಿಸುವುದು ಚೀನೀ ಮಹಾಶಯನೊಬ್ಬ ತನ್ನ ಹಿರಿಯರ ಸಮಾಧಿಗಳ ಫಲಕಗಳ ಎದುರು ಹಣದ ನೋಟ್‌ಗಳನ್ನು ಸುಡುತ್ತಿರುವುದನ್ನು ಪಾಶ್ಚಾತ್ಯನೊಬ್ಬ ನೋಡಿ ಕೇಳಿದ, “ಕಾಗದದ ಹಣದ ಹೊಗೆಯಿಂದ ನಿಮ್ಮ ಹಿರಿಯರು ಹೇಗೆ ಲಾಭ ಪಡೆಯಲು ಸಾಧ್ಯ?” ಚೀನೀಯನು ಉತ್ತರಿಸಿದ, “ನೀವು ಸಮಾಧಿಯ ಮೇಲೆ ಹೂವುಗಳನ್ನು ಇಟ್ಟಾಗ ಮರಣಿಸಿದ ನಿಮ್ಮ ಹಿರಿಯರು ಹೇಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೋ ಅದೇ ರೀತಿ.” ***** ೨. ದಾವಾ ಹಾಕು, ಹಸಿವಿನಿಂದ ಸಾಯಿಸಬೇಡ ರಾಜನೀತಿಜ್ಞ ಡೇನಿಯಲ್‌ ವೆಬ್‌ಸ್ಟರ್‌ ಕುರಿತಾದ ದಂತಕತೆ ಇದು. […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜಿಪುಣಾಗ್ರೇಸರ ಅಬರ್‌ಡೀನ್‌ವಾಸೀ ಜಿಪುಣನೊಬ್ಬ ಗಾಲ್ಫ್‌ ಕಲಿಯಲೋಸುಗ ಗಾಲ್ಫ್‌ಕ್ಲಬ್‌ನ ಸದಸ್ಯನಾದ. ಅವನು ಆಟವಾಡಲು ಉಪಯೋಗಿಸುವ ಚೆಂಡು ಬೇರೆ ಯಾರಿಗಾದರೂ ಸಿಕ್ಕಿದರೆ ಅವರು ಅದನ್ನು ಕ್ಲಬ್‌ನ ಕಛೇರಿಗೆ ತಲುಪಿಸಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಅದರ ಮೇಲೆ ಅವನ ಹೆಸರಿನ ಆದ್ಯಕ್ಷರಗಳನ್ನು.ಬರೆಯುವಂತೆ ತರಬೇತುದಾರ ಸೂಚಿಸಿದ. ಚೆಂಡು ಕಛೇರಿಗೆ ತಲುಪಿದರೆ ಅದನ್ನು ಕಛೇರಿಯ ಸಿಬ್ಬಂದಿಯಿಂದ ಆತ ಮರಳಿ ಪಡೆಯಬಹುದಾಗಿತ್ತು. ಈ ಸಲಹೆಯಲ್ಲಿ ಆಟ ಕಲಿಯಬಂದವನಿಗೆ ವಿಶೇಷ ಆಸಕ್ತಿ ಮೂಡಿತು. ಅವನು ತರಬೇತುದಾರನಿಗೆ ಹೇಳಿದ, “ಒಳ್ಳೆಯ ಸಲಹೆ. ನೀವೇ ಅದರ ಮೇಲೆ ನನ್ನ […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಾಯಿಗೆ ತಿಳಿದಿದೆಯೇ?  ನನ್ನ ಮಿತ್ರನೊಬ್ಬ ಒಂದು ದೇಶದ ಅಧ್ಯಕ್ಷರನ್ನು ಬೇಟಿ ಮಾಡಲು ಹೋಗಿದ್ದ.  ಆದ್ಯಕ್ಷರ ನಿವಾಸದ ಆವರಣದಲ್ಲಿ ಅವರು ಮಾತನಾಡುತ್ತಾ ಸುತ್ತಾಡುತ್ತಿದ್ದಾಗ ನೋಡಲು ಭಯಂಕರವಾಗಿದ್ದ ದೊಡ್ಡ ನಾಯಿಯೊಂದು ಅಲ್ಲಿಯೇ ಇದ್ದ ಒಬ್ಬ ಹಿಂದೂ ಗುರುವಿನ ಕೌಪೀನವನ್ನು ಕಚ್ಚಿ ಹರಿದದ್ದಲ್ಲದೆ ಜೋರಾಗಿ ಬೊಗಳುತ್ತಾ ಅವನನ್ನು ಒಂದು ಗೋಡೆಯ ಸಮೀಪಕ್ಕೆ ಅಟ್ಟಿಕೊಂಡು ಹೋಯಿತು. ಹುಲಿಗಳನ್ನು ತನ್ನ ನೋಟದಿಂದಲೇ ಪಳಗಿಸುವ ಸಾಮರ್ಥ್ಯ ಉಳ್ಳವನು ಎಂಬುದಾಗಿ ಖ್ಯಾತನಾಗಿದ್ದ ಆ ಗುರುವಿಗೆ ನಾಯಿಗಳನ್ನು ಆ ರೀತಿ ಪಳಗಿಸುವ ಸಾಮರ್ಥ್ಯವಿರಲಿಲ್ಲವಾದ್ದರಿಂದ ಏನಾದರೂ ಮಾಡುವಂತೆ ನನ್ನ […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಗುರಿಯೇ ಇಲ್ಲ ಫಕೀರರ ಗುಂಪೊಂದು ತಮ್ಮ ಗುರುಗಳ ಆಜ್ಞಾನುಸಾರ ಮಾಂಸ ತಿನ್ನುತ್ತಿರಲಿಲ್ಲ, ಧೂಮಪಾನ ಮಾಡುತ್ತಿರಲಿಲ್ಲ. ಇದನ್ನು ತಿಳಿದ ವ್ಯಕ್ತಿಯೊಬ್ಬ ಆ ಜ್ಞಾನಿಗಳ ಪಾದಗಳ ಬಳಿ ಕುಳಿತುಕೊಳ್ಳಲೋಸುಗ ಆ ಜ್ಞಾನಿಗಳು ಅವರು ಒಟ್ಟಾಗಿ ಸೇರುವ ತಾಣಕ್ಕೆ ಹೋದ. ಅಲ್ಲಿದ್ದವರೆಲ್ಲರೂ ೯೦ ವರ್ಷಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದರು. ಅಲ್ಲಿ ತಂಬಾಕಿನ ಸುಳಿವೂ ಇರಲಿಲ್ಲ, ಮಾಂಸದ ಸುಳಿವೂ ಇರಲಿಲ್ಲ. ಹೋದಾತನಿಗೆ ಬಲು ಆನಂದವಾಯಿತು. ಅವರು ನೀಡಿದ ಹುರುಳಿ-ಮೊಸರಿನ ಸೂಪ್‌ನ ರುಚಿ ಆಸ್ವಾದಿಸುತ್ತಾ ಮಾಲಿನ್ಯರಹಿತ ವಾಯು ಸೇವನೆ ಮಾಡುತ್ತಾ ಅಲ್ಲಿ ಕುಳಿತ. ಕನಿಷ್ಠಪಕ್ಷ […]