Facebook

Archive for the ‘ಪಂಜು-ವಿಶೇಷ’ Category

ಪ್ರಾಣಿ ಪಕ್ಷಿಗಳಲ್ಲಿ ಸಂವಹನ: ಡಾ. ಯುವರಾಜ ಹೆಗಡೆ

ಆಧುನೀಕರಣದ ಕಪಿಮುಷ್ಠಿಗೆ ಸಿಕ್ಕು ನಲುಗಿದ ಪಶ್ಚಿಮ ಘಟ್ಟದ ಹೆಬ್ಬಾಗಿಲಿಗೆ ರಸ್ತೆ ಅಗಲೀಕರಣವೆಂಬ ನೆಪವೊಡ್ಡಿ ಟಿಂಬರ್ ಲಾಬಿಯವರು ಲಗ್ಗೆ ಇಟ್ಟಿದ್ದರು. ರಸ್ತೆಯ ಇಕ್ಕೆಲಗಳಲ್ಲಿಯ ಬೃಹದಾಕಾರದ ಮರಗಳು ನೆಲಕ್ಕುರುಳುತ್ತಾ ಇರುವಾಗ ಒಂದೂವರೆ ಶತಮಾನದಷ್ಟು ಹಳೆಯ ಮಾಮರದ ಸರದಿ ಬಂದೇ ಬಿಟ್ಟಿತು. ಮರದ ಬುಡಕ್ಕೆ ಮರ ಕಡಿಯುವ ಯಂತ್ರವನನ್ನಿಟ್ಟು ಗಿರ ಗಿರನೆ ಶಬ್ಧ ಮಾಡುತ್ತಿದ್ದಂತೆ ಮರದ ಪೊಟರೆಯಿಂದ ಹೊರಬಂದು ಗಿಳಿಗಳೆರಡು ಕಿಟಾರನೆ ಕೂಗುತ್ತಾ ಸಂಕಟಪಡುತ್ತಿದ್ದವು. ಕೆಲವೇ ನಿಮಿಷದಲ್ಲಿ ಮಾವಿನ ಮರ ದರೆಗುರುಳುತ್ತಿದ್ದಂತೆ ಪೊಟರೆಯಲ್ಲಿದ್ದ ಇನ್ನು ಪುಕ್ಕವೂ ಹುಟ್ಟದ 3 ಗಿಣಿ ಮರಿಗಳು […]

ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಜನ್ಮದಿನ: ಡಾ. ಅವರೆಕಾಡು ವಿಜಯ ಕುಮಾರ್

ಸ್ವಾಮಿ ವಿವೇಕಾನಂದರು 1863 ಜನವರಿ 12 ರಂದು ಕಲ್ಕತ್ತಾ ನಗರದಲ್ಲಿ ಜನಿಸಿದರು. ನರೇಂದ್ರನಾಥ ದತ್ತ ಎಂಬುದು ಇವರ ಹುಟ್ಟಿದ ಹೆಸರು. ಕಾಲಕ್ರಮೇಣ ಅದು ಬದಲಾಗಿ ವಿವೇಕನಂದವಾಯಿತು. ತಂದೆ ವಿಶ್ವನಾಥ ದತ್ತ ಇವರು ಕಲ್ಕತ್ತದ ಉಚ್ಚನ್ಯಾಯಾಲಯದಲ್ಲಿ ಅಟಾರ್ನಿಯಾಗಿ ಸೇವೆಸಲ್ಲಿಸುತ್ತಿದ್ದರು. ತಾಯಿ ಭುವನೇಶ್ವರಿ ದೇವಿ. ಅಜ್ಜ ದುರ್ಗಾ ಚರಣ್ ದತ್ತ, ಇವರು ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಯ ಸಾಹಿತಿಯಾಗಿದ್ದರು. ತನ್ನ 25ನೇ ವಯಸ್ಸಿನಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದರು. ಕೊಲ್ಕತ್ತ ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಶಿಕ್ಷಣವನ್ನು ಪಡೆದರು. 1884 […]

“ಸಮಾನತೆಯ ಹರಿಕಾರ” ಕುವೆಂಪು: ಡಾ. ಅವರೆಕಾಡು ವಿಜಯ ಕುಮಾರ್

ಪ್ರತಿಯೊಂದು ಮಗುವೂ ಹುಟ್ಟುತ್ತಲೇವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವ’ನನ್ನಾಗಿ ಮಾಡುತ್ತೇವೆ.ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ಶಿಕ್ಷಣದ ಕರ್ತವ್ಯವಾಗಬೇಕು. -ಕುವೆಂಪು ಪ್ರಕೃತಿಯ ತಾಣವಾದ ಮಲೆನಾಡಿನ ಅಪ್ರತಿಷ್ಠಿತ ಮನೆತನ ಒಂದರಲ್ಲಿ 1904, ಡಿಸೆಂಬರ್ 29ರಂದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆ ಗ್ರಾಮದಲ್ಲಿ ಶ್ರೀ ವೆಂಕಟಪ್ಪ ಮತ್ತು ಶ್ರೀಮತಿ ಸೀತಮ್ಮ ಅವರ ಬಾಳಿನ ಬೆಳಕಾಗಿ ಪುಟ್ಟಪ್ಪನವರು ಜನಿಸಿದರು. ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ ಗ್ರಾಮದಲ್ಲಿ ಬೆಳೆದವರು ವಿಶ್ವಮಾನವರಾಗಿ ವಿಜೃಂಭಿಸಿ ಇತಿಹಾಸ ಪುಟದ ಸ್ವರ್ಣ ಅಕ್ಷರಗಳಲ್ಲಿ ಸೇರ್ಪಡೆಯಾದರು. ಆಗಿನ ಕಾಲದ ಬಡತನ, ದಾರಿದ್ರ್ಯ, ಅಸಾಯಕತೆ ಇವುಗಳನ್ನು […]

ಕಿರುಗತೆಗಳು: ಜಯಂತ್ ದೇಸಾಯಿ

ಬಣ್ಣದ ಬಾರಿಗೆ( ಬಣ್ಣದ ಪೊರಕೆ) ಬಾರಿಗೆಮ್ಮೋ ಬಾರಿಗೆ 30 ರೂಪಾಯಿಗೆ ಜೊತಿ ಬಾರಿಗೆ ಸ್ವಲ್ಪವೇ ಅವ ನೋಡ್ರೆಮ್ಮೋ ಅಂತ ಕೂಗುತ್ತಾ ಹಳ್ಳಿಯ ಸಂದಿಸಂದಿಯ ಒಳಗೆ ನುಗ್ಗಿ ಹೋಗುತ್ತಿದ್ದ ಶರಣಪ್ಪ ನ ದ್ವನಿ ಕೇಳಿ ನಿರ್ಮಲ ನುಡಿದಳು ಹೇ ನಿಂದ್ರಪ್ಪ ನಿಂದ್ರು ಹೆಂಗ್ ಕೊಟ್ಟಿ ಅಂದಿ, 30 ರೂಪಾಯಿಗೆ ಅಂದ್ರ ಭಾಳಾ ಫೀರೆ ಆತು ಕಡಿಮೆ ಮಾಡು, ನೋಡಿದ್ರ ನಾಕು ಕಡ್ಡಿ ಇಲ್ಲ ಇದ್ರಾಗ, ಅವ್ವ ಹಂಗನ್ನ ಬ್ಯಾಡ ಗಿರಿ ಗಿರಿ ಹಾಕಿ ಎಳೆದು ಎಳೆದು ತೀಡಿ ನೆಲಕ್ಕೆ […]

ಇಹಕ್ಕೂ ಮನಕ್ಕೂ ಬೆಳಕ ಸುರಿವ ದೀಪಾವಳಿ: ಗೌರಿ.ಚಂದ್ರಕೇಸರಿ, ಶಿವಮೊಗ್ಗ

ಜಗದ ಕತ್ತಲೆಯನ್ನೆಲ್ಲ ಹೊಡೆದೋಡಿಸುವ ಬೆಳಕು ಯಾರಿಗೆ ತಾನೆ ಇಷ್ಟವಿಲ್ಲ? ಝಗಮಗಿಸುವ ದೀಪಗಳ ಹಬ್ಬವಾದ ದೀಪಾವಳಿ ಎಂದರೆ ಬಾಲ್ಯದಿಂದಲೂ ಏನೋ ಒಂದು ಆಕರ್ಷಣೆ. ಕಳೆದು ಹೋದ ಅದೆಷ್ಟೋ ದೀಪಾವಳಿಗಳು ಮತ್ತೆ ಮತ್ತೆ ನೆನಪಿಗೆ ಬರುತ್ತವೆ. ಈಗಿನ ತರಾವರಿ ಬಣ್ಣದ ಬಲ್ಬುಗಳ ದೀಪಗಳು ಹಿಂದಿನ ಮಣ್ಣಿನ ಹಣತೆಗಳ ಮುಂದೆ ಮಸುಕಾಗಿ ಬಿಡುತ್ತವೆ. ದೀಪಾವಳಿ ಇನ್ನೂ ತಿಂಗಳಿರುವಾಗಲೇ ಮನೆಯಲ್ಲಿ ಸಡಗರ ಪ್ರಾರಂಭವಾಗುತ್ತಿತ್ತು. ಸೊಂಟಕ್ಕೆ ಸೆರಗನ್ನು ಸಿಕ್ಕಿಸಿ ಉದ್ದವಾದ ಕೋಲೊಂದಕ್ಕೆ ಹಳೆಯ ಬಟ್ಟೆಯನ್ನು ಕಟ್ಟಿ ಜೇಡರ ಬಲೆಗಳನ್ನೆಲ್ಲ ಅವ್ವ ತೆಗೆಯುತ್ತಿದ್ದಳು. ನಂತರ ಅದೇ […]

ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ..: ವಿನಾಯಕ ಅರಳಸುರಳಿ

ದೀಪಾವಳಿ ಮರಳಿ ಬಂದಿದೆ. ಆಫೀಸಿನ ಬಾಸಿನ ಟೇಬಲ್ ಮೇಲೀಗ ರಜೆಯ ಅರ್ಜಿಗಳೆಲ್ಲ ನಾ ಮೊದಲು, ತಾ ಮೊದಲು ಎಂದು ತಳ್ಳಾಡುತ್ತಾ ಸಾಲಾಗಿ ನಿಂತಿವೆ. ಯಾರಿಗೆ ಕೊಡುವುದು, ಯಾರಿಗೆ ಬಿಡುವುದು ಎಂದು ಯೋಚಿಸುತ್ತಿರುವಾಗಲೇ ಅವರ ಹೆಂಡತಿ ಕಾಲ್ ಮಾಡಿದ್ದಾರೆ. ‘ಹಬ್ಬಕ್ಕೆ ಊರಿಗೆ ಹೋಗಲಿಕ್ಕಿದೆ. ಟಿಕೇಟು ಬುಕ್ ಮಾಡೋದು ಮರೀಬೇಡಿ!” ಎಂದು ನೆನಪಿಸಿದ್ದಾಳೆ. ಹೀಗೆ ಬಾಸೆಂಬ ಬಾಸೇ ರಜೆ ಹಾಕಿ ಹೋದ ಆಫೀಸಿನಲ್ಲಿ ಕೆಲವರಿಗಷ್ಟೇ ರಜೆ ಮಂಜೂರಾಗಿದೆ. ಅವರೆಲ್ಲ ಸಂಭ್ರಮದಲ್ಲಿ ಊರಿನ ಬಸ್ಸು ಹತ್ತುತ್ತಿದ್ದರೆ ರಜೆ ಸಿಗದ ಹತಾಷರು ಹೊರಟವರಿಗೆ […]

ದೀಪಾವಳಿ ವಿಶೇಷಾಂಕಕ್ಕೆ ಲೇಖನ ಆಹ್ವಾನ

ಸಹೃದಯಿಗಳೇ, ಈ ವರ್ಷದ ದೀಪಾವಳಿ ವಿಶೇಷಾಂಕಕ್ಕಾಗಿ ನಿಮ್ಮ ಲೇಖನ, ಪ್ರಬಂಧ, ಕವಿತೆ, ಕತೆ ಇತ್ಯಾದಿ ಸಾಹಿತ್ಯದ ಬರಹಗಳನ್ನು ಪಂಜುವಿಗಾಗಿ ಕಳಿಸಿಕೊಡಿ. ನಿಮ್ಮ ಲೇಖನಗಳು ನವೆಂಬರ್ 13 ರ ಸಂಜೆಯೊಳಗೆ ತಲುಪಲಿ… ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ… ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿಪಂಜು ಬಳಗhttps://panjumagazine.com/ ನಮ್ಮ ಇ ಮೇಲ್‌ ವಿಳಾಸ: editor.panju@gmail.com, smnattu@gmail.com ವಿ.ಸೂ.: ಪಂಜು ಅಪ್ರಕಟಿತ ಬರಹಗಳನ್ನಷ್ಟೇ ಸ್ವೀಕರಿಸುತ್ತದೆ. ಲೇಖಕರು ಕಳುಹಿಸುವ ಲೇಖನವು ಬ್ಲಾಗ್, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಬರಹವನ್ನು ಸ್ವೀಕರಿಸುವುದಿಲ್ಲ.

ಡಾರ್ಕ್‍ವೆಬ್: ಸಾಮಾನ್ಯರಿಗೆ ನಿಲುಕದ ನಕ್ಷತ್ರ: ಚಾರು ಮಂಜುರಾಜ್

ನಮಗಿಷ್ಟವಾದುದನ್ನು ಆನ್‍ಲೈನ್‍ನಲ್ಲಿ ತರಿಸಿಕೊಳ್ಳುವಾಗಲೋ ಸ್ನೇಹಿತರಿಗಾಗಿ ಉಡುಗೊರೆಗಳನ್ನು ಕೊಳ್ಳುವಾಗಲೋ ಗೂಗಲ್‍ನಲ್ಲಿ ಕಾಣುವ ಪುಟಗಳು ಸರ್‍ಫೇಸ್ ವೆಬ್. ಅಂದರೆ ನಾವು ಗೂಗಲ್‍ನಲ್ಲಿ ಜಾಲಾಡುವಾಗ ಅದರಲ್ಲಿ ತೆರೆದುಕೊಳ್ಳುವ ಪ್ರತಿಯೊಂದು ಪುಟವೂ ಇಂಥ ಸರ್‍ಫೇಸ್ ವೆಬ್ಬೇ! ದಿನನಿತ್ಯ ನಾವು ಅಂತರ್ಜಾಲದೊಂದಿಗೆ ವ್ಯವಹರಿಸುವಾಗ ಕೇವಲ ಶೇಕಡ ಒಂದರಷ್ಟು ಮಾತ್ರ ಮಾಹಿತಿಯನ್ನು ಎಕ್ಸ್‍ಪ್ಲೋರ್ ಮಾಡುತ್ತಿರುತ್ತೇವೆ. ಉಳಿದ ಶೇಕಡ 96 ರಿಂದ 99 ರಷ್ಟು ಮಾಹಿತಿಗಳು ಡೀಪ್‍ವೆಬ್ ಮತ್ತು ಡಾರ್ಕ್‍ವೆಬ್‍ಗಳಲ್ಲಿ ಅಡಗಿರುತ್ತವೆ. ಎರಡಂತಸ್ತಿನ ಕಟ್ಟಡವೊಂದರಲ್ಲಿ ಮೇಲೆ ಕಾಣುವುದೇ ನಾವು ಜಾಲಾಡುವ ತಾಣಗಳು, ಆನಂತರದ್ದು ಡೀಪ್‍ವೆಬ್. ಅದರ ಕೆಳಗಿರುವುದೇ […]

ಹೆಬ್ಬಲಸು : ಅಪರೂಪದ ಕಾಡುಹಣ್ಣು: ಚರಣಕುಮಾರ್ ಮತ್ತು ಡಾ. ಶ್ರೀಕಾಂತ್ ಗುಣಗಾ

ಹೆಬ್ಬಲಸು : ಅಪರೂಪದ ಕಾಡುಹಣ್ಣುArtocarpus hirsutus Lam.ಕುಟುಂಬ: ಮೊರೇಸಿ ವಿತರಣೆ: ಭಾರತೀಯ ಮೂಲದ ಬೃಹದ್ಧಾಕಾರದ ವೃಕ್ಷ ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣ ಮತ್ತು ಅರೆ-ನಿತ್ಯಹರಿಧ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಪರಿಚಯ: ನೇರವಾಗಿ ಬೆಳೆಯುವ ಎತ್ತರದ ಮರ. ಕಂದು ಬಣ್ಣದ ತೊಗಟೆ. ತೊಗಟೆಯ ಮೇಲೆ ಸಣ್ಣ ವಾತರಂದ್ರಗಳು. ಗಾಯವಾದ ತೊಗಟೆಯಿಂದ ಹೊರಸೂಸುವ ಹಾಲಿನಂತ ಅಂಟು ಸೊನೆ. ಅಗಲವಾದ ಹುರುಬುರುಕಿನ ಎಲೆಗಳು ಕಡು ಹಸಿರಿನಿಂದ ಕೂಡಿವೆ. ಎಲೆಗಳ ಮೇಲೆ ಅಚ್ಚಾಗಿ ಮೂಡಿರುವ ನರಗಳಿವೆ. ಗಂಡು ಮತ್ತು ಹೆಣ್ಣು ಹೂವುಗಳು ಬೇರೆ ಬೇರೆಯಾಗಿರುತ್ತವೆ. […]

ಸಂಗೀತ ಲೋಕದ ಬೆರಗು ಎಸ್‍ಪಿಬಿ: ಡಾ. ಹೆಚ್ ಎನ್ ಮಂಜುರಾಜ್

‘ಮಲೆಗಳಲುಲಿಯುವ ಓ ಕೋಗಿಲೆಯೇಬಲು ಚೆಲ್ವಿದೆ ನಿನ್ನೀ ಗಾನಇಂಗ್ಲಿಷಿಗೆ ತರ್ಜುಮೆ ಮಾಡಿದರೆದೊರೆವುದು ನೊಬೆಲ್ ಬಹುಮಾನ’ ಕುವೆಂಪು ಅವರ ಕವಿತೆಯೊಂದರ ಸಾಲುಗಳಿವು. ಇದನ್ನು ಪ್ರಸ್ತಾಪಿಸುತ್ತಾ ಡಾ. ಹಾ ಮಾ ನಾಯಕರು, ‘ಕೋಗಿಲೆಯ ಹಾಡನ್ನು ಇಂಗ್ಲಿಷಿಗೆ ತರ್ಜುಮೆ ಮಾಡುವವರು ಯಾರು?’ ಎಂದು ಕೇಳುತ್ತಾ, ಪರೋಕ್ಷವಾಗಿ ಕುವೆಂಪು ಅವರ ಪ್ರತಿಭೆಗೆ ನೊಬೆಲ್ ಬಹುಮಾನ ಲಭಿಸುವುದು ಯಾವಾಗ? ಎಂಬ ದನಿಯಲ್ಲಿ ಬರೆದಿದ್ದರು. ಏಕೆ ಈಗ ಈ ಮಾತು ನೆನಪಾಯಿತೆಂದರೆ, ಇಂಥ ಸವಾಲನ್ನೂ ಸಾಹಸವನ್ನೂ ಅಪೂರ್ವ ರೀತಿಯಲ್ಲಿ ತಮ್ಮ ಬದುಕಿನುದ್ದಕ್ಕೂ ಕೈಗೊಂಡು ಗಾಯನ ರಸಯಾತ್ರೆಯಲ್ಲಿ ಸಹೃದಯರನ್ನು […]