Facebook

Archive for the ‘ಅನಿ ಹನಿ’ Category

ಇಲ್ಲಗಳ ನಡುವೆ..: ಅನಿತಾ ನರೇಶ್ ಮಂಚಿ

ಎರಡೂ ಕೈಯಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನು ಹಿಡಿದು ಬ್ಯಾಲೆನ್ಸ್ ಮಾಡ್ತಾ ಕಾರು ಪಾರ್ಕ್ ಮಾಡಿದ ಜಾಗಕ್ಕೆ ನಡೆದುಕೊಂಡು ಬರ್ತಾ ಇದ್ದೆ. ಒಂದು ಕೈಯ ಅವಸ್ಥೆ ಹೇಳತೀರದಾಗಿತ್ತು.ಅದರ  ಎಲ್ಲಾ ಬೆರಳುಗಳೂ ಒಂದೊಂದು ಚೀಲವನ್ನು ಹಿಡಿದುಕೊಂಡಿತ್ತು. ಕಾರು ತಲುಪುವಷ್ಟರಲ್ಲಿ ಕೈ ಬೆರಳುಗಳು ಮುರಿದೇ ಹೋಗಬಹುದೇನೋ ಎನ್ನುವ ಹೆದರಿಕೆಯಲ್ಲಿ ಹೆಜ್ಜೆಗಳು ಓಡಿದಂತೆ ಸಾಗುತ್ತಿತ್ತು. ಇನ್ನೇನು ಕಾರು ತಲುಪಲು ಒಂದು ನೂರು ಹೆಜ್ಜೆಗಳು ಇದೆ ಎನ್ನುವಾಗ ಹಿಂದಿನಿಂದ ಪರಿಚಿತ ಸ್ವರವೊಂದು ನನ್ನನ್ನು ಹಿಡಿದು ನಿಲ್ಲಿಸಿತು. “ಹಬ್ಬದ ಶಾಪಿಂಗಾ?”  ಹೌದೆಂದು ತಲೆಯಾಡಿಸುತ್ತಾ ಅವರೊಡನೆಯೂ ಪ್ರಶ್ನೆ […]

ಹೀಗೊಂದು ವಾರ್ತಾಲಾಪ..: ಅನಿತಾ ನರೇಶ್ ಮಂಚಿ

ಕೊಕ್ಕೋ ಹಣ್ಣಿನ್ನು ಒಡೆದು ಬೀಜ ಬೇರ್ಪಡಿಸುವ ಕೆಲಸ ಶುರುವಾಗಿತ್ತು. ನಾನೂ ಹೋಗಿ ಸೇರಿಕೊಂಡೆ. ಇವರು ಹಣ್ಣುಗಳನ್ನು ಒಡೆದು ರಾಶಿ ಹಾಕಿದರೆ ನಾನು, ಮಾವ, ಮತ್ತು ನಮ್ಮ ತೋಟದ ಸಹಾಯಕರಾದ ವಿನ್ಸಿ, ಸುಬ್ಬಪ್ಪ, ಇಸುಬು ಎಲ್ಲರೂ ಸೇರಿ ಒಳಗಿನ ಬೀಜ ಬೇರ್ಪಡಿಸಿ ದೊಡ್ಡ ಕಟಾರ ( ಹಿಡಿ ಇರುವ ದೊಡ್ಡದಾದ ಪಾತ್ರೆ) ಕ್ಕೆ ತುಂಬುತ್ತಿದ್ದೆವು. ಸಮಯ ಬೇಡುವಂತಹ ಕೆಲಸ ಇದಾದ ಕಾರಣ ಹೊತ್ತು ಹೋಗಲು ಏನಾದರೊಂದು ಟಾಪಿಕ್ ಇದ್ದೇ ಇರುತ್ತಿತ್ತು.  ‘ ಮೊನ್ನೆ ಲಾರೆನ್ಸ್ ಬೈಕಿನಲ್ಲಿ ಹೋಗ್ತಾ ಇದ್ದ […]

ಹಳೇ ಬಟ್ಟೆ ಮತ್ತು ಹೊಸಾ ಪರ್ಸು: ಅನಿತಾ ನರೇಶ್ ಮಂಚಿ

ಮಳೆಗಾಲ ಬಂತೆಂದರೆ ಹಳ್ಳಿಯವರಾದ ನಮಗೆ ಸ್ವಲ್ಪ ಬಿಡುವು ಸಿಕ್ಕಿದ ಹಾಗೆ. ಬೇಸಿಗೆಯಿಡೀ ತೋಟಕ್ಕೆ ನೀರು ಹನಿಸುವ ಕೆಲಸ, ಆ ನೀರಿನ ಪೈಪುಗಳು ತುಂಡಾದರೆ ಜೋಡಿಸುವ ಕೆಲಸ, ಅದಕ್ಕೆ ಬೇಕಾದ ಸಲಕರಣೆಗಳು ಇಲ್ಲದಿದ್ದರೆ ಪೇಟೆಗೆ ಓಡುವ ಕೆಲಸ ಹೀಗೆ ಒಂದರ ಹಿಂದೊಂದು ಅಂತ ಪುರುಸೊತ್ತೇ ಇರೋಲ್ಲ, ಜಿಟಿ ಪಿಟಿ ಮಳೆ ಬೀಳಲು ಸುರುವಾಯ್ತೆಂದರೆ ಈ ಕೆಲಸಗಳಿಗೆಲ್ಲ ಮುಕ್ತಿ ಸಿಕ್ಕಿದಂತಾಗುತ್ತದೆ. ಮೊದಲಿಗೆ ಸುಮ್ಮನೇ ಕುಳಿತು ದಿನ ದೂಡುವುದರಲ್ಲೇ ಸುಖ ಅನುಭವಿಸಿದರೂ ಮತ್ತೆ ನಿಧಾನಕ್ಕೆ ಹೊತ್ತು ಕಳೆಯುವುದು ಹೇಗಪ್ಪಾ ಅನ್ನುವ ಚಿಂತೆ […]

ಇದು ಎಂತಾ ಲೋಕವಯ್ಯ: ಅನಿತಾ ನರೇಶ್ ಮಂಚಿ

ನಮ್ಮ ಮನೆಗೇ ಕಂಪ್ಯೂಟರ್ ಬರುವವರೆಗೆ ಕಂಪ್ಯೂಟರ್ ಎಂಬುದನ್ನು ಅತೀ ಸಮೀಪದಲ್ಲಿ ನೋಡಿಯೇ ಗೊತ್ತಿರಲಿಲ್ಲ.  ಮನೆಗೆ ಕಾಲಿಟ್ಟ ಹೊಸದರಲ್ಲಿ ಅದನ್ನು ಮುಟ್ಟಿದರೆ ಎಲ್ಲಿ ಹೊಗೆ ಏಳುವುದೋ, ಎಲ್ಲಿ ಬಾಂಬ್ ಬ್ಲಾಸ್ಟ್ ಆಗುವುದೋ ಎನ್ನುವಷ್ಟು ಭಯ. ಮಗ ಅದರ ಕೀ ಪ್ಯಾಡನ್ನು ಟಕ ಟಕನೆ ಒತ್ತಿದೊಡನೆ ‘ಕುಲ್ ಜಾ ಸಿಮ್ ಸಿಮ್’ ಎಂದು ಹೇಳಿದಂತಾಗಿ  ಹೊಸ ಲೋಕದ ಬಾಗಿಲು ತೆರೆದುಕೊಳ್ಳುವುದನ್ನು ಸುಮ್ಮನೆ ಕುಳಿತು ನೋಡುವುದೇ ಸಂಭ್ರಮ.  ಕೆಲವು ದಿನಗಳಲ್ಲಿ ಎದುರಿನ ಕುರ್ಚಿಯ ಮೇಲೆ ಕುಳಿತು ಮೆಲ್ಲನೆ ಅದರೊಂದಿಗೆ ಕುಶಲೋಪರಿ ನಡೆಸುವಷ್ಟು […]

ವಿಶ್ವ ಯೋಗ ದಿನ: ಅನಿತಾ ನರೇಶ್ ಮಂಚಿ.

ಅವರ ಹೆಸರು ಪಾರ್ವತೀಪತಿಯೆಂದು ಗೊತ್ತಿದ್ದದ್ದು ಪೋಸ್ಟ್ ಮ್ಯಾನ್ ಮತ್ತು ಅವರು ಕೆಲಸ ಮಾಡುತ್ತಿದ್ದ ಆಫೀಸಿನ ಬಾಸ್ ಇಬ್ಬರಿಗೇ..  ಇವರೂ ಕೂಡಾ ಆ ಹೆಸರನ್ನು ಕೊಂಚ ತಿರುಚಿ ಪರ್ವತ ಪತಿ ಎಂದು ನಗೆಯಾಡುತ್ತಿದ್ದುದು ಪಾರ್ವತೀಪತಿಯವರಿಗೆ ತಿಳಿಯದ ವಿಷಯವೇನೂ ಆಗಿರಲಿಲ್ಲ. ನಮಗಂತೂ ಅವರ ಹೆಸರು ನಾಮ್ ಕೇ ವಾಸ್ತೆ ಮಾತ್ರ ಬೇಕಾಗುವುದರಿಂದ  ನಾವು  ಆ ಹೆಸರನ್ನು ಬಬ್ಬಲ್ ಗಮ್ಮಿನಂತೆ ಅಷ್ಟುದ್ದ ಎಳೆಯದೇ ಪಿ ಪಿ ಎಂದು ಶಾರ್ಟ್ ಆಗಿ ಕರೆಯೋಣ.   ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಈಗ ಹಲವು ವಿಷಯಗಳಲ್ಲಿ […]

ಹಸಿವು ಮತ್ತು ಊಟ: ಅನಿತಾ ನರೇಶ್ ಮಂಚಿ.

             ‘ಒಂದು ಎರಡು  ಬಾಳೆಲೆ ಹರಡು      ಮೂರು ನಾಲ್ಕು  ಅನ್ನ ಹಾಕು  ಐದು ಆರು  ಬೇಳೆ ಸಾರು  ಏಳು ಎಂಟು  ಪಲ್ಯಕೆ ದಂಟು  ಒಂಬತ್ತು ಹತ್ತು  ಎಲೆ ಮುದುರೆತ್ತು ಒಂದರಿಂದ ಹತ್ತು ಹೀಗಿತ್ತು  ಊಟದ ಆಟವು ಮುಗಿದಿತ್ತು ..’ ಈ ಪದ್ಯವನ್ನು ಚಿಕ್ಕಂದಿನಲ್ಲಿ ನಾವೆಲ್ಲಾ ಕಂಠಪಾಠ ಮಾಡಿದವರೇ .. ಆಗೇನೋ ಇದು ಲೆಕ್ಕ ಕಲಿಸುವ ಹಾಡು ಅನ್ನಿಸುತ್ತಾ ಇದ್ದರೆ ಈಗ ಈ ಹಾಡಿಗೆ ಬೇರೆ0iÉುೀ ಅರ್ಥ ಕಟ್ಟುವ […]

ಕಾಮೂ..ಊ ..ಊ..: ಅನಿತಾ ನರೇಶ್ ಮಂಚಿ

ಕಾಮೂ..ಊ ..ಊ.. ನನ್ನನ್ಯಾರು ಈ ರೀತಿ ಹೆಸರು ಹಿಡಿದು ಕರೆಯುವವರು ಎಂದು ಸಿಟ್ಟಿನಲ್ಲೇ ಒಳಮನೆಯಿಂದ ಸೌಟುಧಾರಿಣಿಯಾಗಿಯೇ ಹೊರ ಬಂದಳು ಕಾಮಾಕ್ಷಮ್ಮ.. ಹೊರ ಬಾಗಿಲಲ್ಲಿ ವರದರಾಜ ರಾಯರು ದೊಡ್ಡ ಹೂವಿನ ಹಾರ ಹಾಕಿಸಿಕೊಂಡು ಒಂದು ಕೈಯಲ್ಲಿ  ಹೂವಿನ ಬುಕೆ,   ಹೆಗಲ ಮೇಲೆ ಶಾಲು, ಪ್ಲಾಸ್ಟಿಕ್ ಚೀಲದ ತುಂಬಾ ಹಣ್ಣುಗಳು ಮತ್ತು  ಬಣ್ಣದ ಕಾಗದದಿಂದ ಸುತ್ತಿದ್ದ ದೊಡ್ಡದೊಂದು ಡಬ್ಬ ಹಿಡಿದು ನಿಂತಿದ್ದರು. ಯಾಕ್ರೀ ಏನಾಯ್ತು? ಈ ಅವತಾರದಲ್ಯಾಕೆ ಈ ಹೊತ್ತಲ್ಲಿ ಮನೆಗೆ ಬಂದಿರಿ? ಇವತ್ತು ಆಫೀಸ್ ಇಲ್ವಾ ಎಂದು […]

ಹನಿ ಮಳೆಗೊಂದು ಬೆಚ್ಚನೆ ಪ್ರೇಮ ಕಥನ: ಅನಿತಾ ನರೇಶ್ ಮಂಚಿ

“ಆಗ್ಲಿಲ್ವಾ ತಾಯೀ ನಿನ್ನ ಅಲಂಕಾರ? ಅದೇನು ಕಾಲೇಜಿಗೆ ಹೋಗ್ತಿಯೋ ಇಲ್ಲಾ ಫ್ಯಾಷನ್ ಪೆರೇಡಿಗೋ.. ಯಾವ ಹುಡುಗನನ್ನು ಕೊಲ್ಲಲು ಇಷ್ಟೊಂದು ಭಿನ್ನಾಣ? ಇದೇ ಹೊತ್ತಲ್ಲಿ ಪುಸ್ತಕ ಬಿಡ್ಸಿದ್ರೆ ನೀನು  ರ್ಯಾಂಕ್ ಬರ್ತಿದ್ದೆ ಬಿಡು” ಎಂದ ಅತ್ರಿ. “ಹೋಗೋ..   ನೀನು ಮೇಕಪ್ಪು  ಮಾಡದವನು ಬಾರೀ ಓದಿ  ಕಡಿದು ಕಟ್ಟೆ ಹಾಕಿದ್ದೀಯಲ್ಲಾ.. ಸಾಕು..” ಎಂದು ಕಿಚಾಯಿಸಿದಳು ಗಾನ.  “ಯಾಕೇ? ನಂಗೇನಾಗಿದೆ ..? ಓದ್ಲಿಲ್ಲ ಅನ್ನೋದು ಬಿಟ್ರೆ ಏನು ಕಮ್ಮಿ ಇದೆ ಹೇಳು.. ಹೊಲದಲ್ಲಿ  ಚೆನ್ನಾಗಿ ದುಡೀತೀನಿ ..  ಚೆನ್ನಾಗಿ ತಿಂತೀನಿ.. […]

ನಾಯಿಮರಿಯ ಇಂಗ್ಲೀಷೂ.. ಕೇಶಣ್ಣನ ಹಲ್ಲು ಸೆಟ್ಟೂ..: ಅನಿತಾ ನರೇಶ್ ಮಂಚಿ

ಮಕ್ಕಳಿಗೆ ಯಾವಾಗಲೂ ಮನುಷ್ಯರಿಗಿಂತ ಪ್ರಾಣಿಗಳೇ ಇಷ್ಟವಾಗುವುದು. ಇನ್ನೂ ನಡೆಯಲು ಬಾರದ ಪುಟ್ಟು ಮಕ್ಕಳನ್ನು ಕೇಳಿ ನೋಡಿ. ’ಮನೆಯಲ್ಲಿ ಆಡಲಿಕ್ಕೆ ಆಟದ ಸಾಮಾನು ಕೊಡ್ತೀನಿ, ತಿನ್ನೋದಿಕ್ಕೆ ತಿಂಡಿ ಕೊಡ್ತೀನಿ’ ಎಂದೆಲ್ಲಾ ಗೋಗರೆದರೂ ಬಾರದಿರುವ ಮಕ್ಕಳು ’ಮನೆಯಲ್ಲಿ ನಾಯಿ ಮರಿ ಇದೆ, ಬೆಕ್ಕಿನ ಮರಿ ಇದೆ, ಪುಟಾಣಿ ಉಂಬೆ ಕರು ಇದೆ ಬರ್ತೀಯಾ’ ಅಂದ ಕೂಡಲೇ ಅಮ್ಮನ ತೆಕ್ಕೆ ಬಿಡಿಸಿಕೊಂಡು ಚಾಚಿರುವ ನಮ್ಮ ಕೈಗೆ ಹಾರುತ್ತವೆ. ಬೇರೆಯವರ ಮನೆಯಲ್ಲಿ ಸಾಕಿದ ಪ್ರಾಣಿಗಳನ್ನು ನೋಡಿ ಸಂತಸ ಪಡುವುದೇನೋ ಸರಿ. ಆದರೆ ನಮ್ಮಲ್ಲೂ […]

ಹನಿ ನೀರಿಗೆ ಸಮುದ್ರದಷ್ಟು ಪ್ರೀತಿ ..: ಅನಿತಾ ನರೇಶ್ ಮಂಚಿ

 ಇಡೀ ಮಳೆಗಾಲ  ಇವರು ಬಾರದೇ ಇದ್ದಾಗ ಸಿಟ್ಟು ಉಕ್ಕೇರುತ್ತಿತ್ತು. ಅಲ್ಲಾ.. ದೂರದಲ್ಲಿ ಕಂಡರೂ ಗುರುತಿಲ್ಲದವರಂತೆ ಕತ್ತು ಕೊಂಕಿಸಿ, ಮುಖ ಕುಣಿಸಿ ಮಾಯವಾಗುತ್ತಿದ್ದರಲ್ಲದೇ ಮನೆ ಕಡೆಗೆ ಸುಳಿಯುತ್ತಿರಲಿಲ್ಲ.. ಎಷ್ಟು ಸೊಕ್ಕು ಅಂದುಕೊಂಡರೂ ಹಾಗೇನಿರಲಾರದು ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತಲೂ ಇದ್ದೆ. ಅಯ್ಯೋ.. ನಿಮಗೆ ಇವರು ಯಾರು ಅಂತ ಮೊದಲು ಪರಿಚಯ ಮಾಡಿಕೊಡದೆ ನನ್ನ ಗೋಳು ತೋಡ್ಕೊಳ್ತಾ ಇದ್ದೀನಲ್ಲಾ.. ಇವರು ಅಂದರೆ ಹಕ್ಕಿಗಳು ಸ್ವಾಮೀ.. ಮಳೆಗಾಲದಲ್ಲಿ ಹೊರಗೆ ನೀರಿನ ಲಭ್ಯತೆ ಇರುವ ಕಾರಣ ಇವರ ಹಾರಾಟ ಕೂಗಾಟವೆಲ್ಲಾ ದೂರದಲ್ಲೇ […]