Facebook

Archive for the ‘ಪ್ರಶಸ್ತಿ ಅಂಕಣ’ Category

ಬಂದ್: ಪ್ರಶಸ್ತಿ ಪಿ.

ನಾ ಸಣ್ಣಕ್ಕಿದ್ದಾಗ ಕೇಳಿದೊಂದು ಹಾಡು ನೆನಪಾಗುತ್ತಿದೆ ಯಾಕೋ. ಗಾಂಧಿ ಹೇಳಿಕೊಟ್ಟ ಪಾಠ,ಗುರುವಿಗೆ ತಿರುಮಂತ್ರ ಮಾಟ.ಸತ್ಯಾಗ್ರಹ,ಸ್ಟ್ರೈಕ್, ಸ್ಟ್ರೈಕ್, ಸ್ಟ್ರೈಕ್. ಪೆಟ್ರೋಲ್ ದರ ಹೆಚ್ಚಳವನ್ನು ವಿರೋಧಿಸಿ ಬಂಧ್, ರಸ್ತೆ ಸುರಕ್ಷಾ ಮಸೂಧೆಯನ್ನು ವಿರೋಧಿಸಿ ಬಂದ್. ಕಾವೇರಿ ನೀರು ಬಿಟ್ಟರೆಂದು ಬಂದ್, ಮಹದಾಯಿಗಾಗಿ ಬಂದ್.. ಉಫ್ ! ಹೀಗೆ ತಿಂಗಳಿಗೆರೆಡು ದಿನ ಬಂದ್ ಆಚರಿಸುತ್ತಿರೋದನ್ನ ನೋಡಿ ಕರ್ನಾಟಕವೂ ಕಮ್ಯುನಿಸ್ಟರ ನಾಡಾದ ಕೇರಳದ ಹಾದಿ ಹಿಡಿತಾ ಇದಿಯಾ ಅಂತ ಒಮ್ಮೆಮ್ಮೆ  ದಿಗಿಲಾಗುತ್ತೆ. ದಿನವೊಂದರ ಬಂದಿನಿಂದ ಕೋಟ್ಯಾಂತರ ರೂ ನಷ್ಟವಾಗುತ್ತೆ. ಬಂದ್ಗಳು ಅಸಾಂವಿಧಾನಿಕ, ಬಂದ್ಗಳ […]

ಕುಕ್ಕೆಯಲ್ಲೊಂದು ಪಂಕ್ಚರ್ ಕತೆ: ಪ್ರಶಸ್ತಿ

ಹಿಂದಿನ ಭಾಗದಲ್ಲಿ ಓದಿದಂತೆ ಟ್ರಿಪ್ಪಿನುದ್ದಕ್ಕೂ ಯೋಗಾಯೋಗಗಳೆಂಬ ನಾಣ್ಯದ ಮುಖಗಳು ಕ್ಷಣಕ್ಷಣಕ್ಕೂ ನಮಗೆ ಮುಖಾಮುಖಿಯಾಗುತ್ತಲೇ ಇದ್ದವು. ಬಿಸಿಲೆಯಲ್ಲಿ ಹಾಸನ ಸಂರಕ್ಷಿತ ಅರಣ್ಯ ಪ್ರದೇಶ ಅನ್ನೋ ಬೋರ್ಡು ಕಂಡಿದ್ದರೂ ಅದರ ಕೆಳಗೆ ಸಣ್ಣಕ್ಕಿದ್ದ ಬಿಸಿಲೆ ವೀವ್ ಪಾಯಿಂಟಿಗೆ ದಾರಿಯೆಂಬ ಬೋರ್ಡು ಕಾಣದೇ ಬಿಸಿಲೆಯ ಮೊದಲ ವೀವ್ ಪಾಯಿಂಟ್ ಮಿಸ್ಸಾಗಿತ್ತು. ಕುಕ್ಕೆಗೆ ಬಂದ ಬಹುತೇಕ ಮಂದಿ ಬಂದೇ ಹೋಗುವ ಗಡಿಮಾರಮ್ಮನ ದೇವಸ್ಥಾನ ಮಿಸ್ಸಾಗೇ ಹೋಗ್ತಿತ್ತೇನೋ ಅಲ್ಲಿನ ಗೇಟು ಹಾಕಿ, ಅದನ್ನ ತೆಗಿಯೋಕೆ ಅಂತ ನಾನು ಕೆಳಗಿಳಿಯದೇ ಹೋಗಿದ್ದರೆ. ಮೊದಲೆರಡು ಪಂಕ್ಚರ್ರುಗಳಾಗದೇ ಹೋಗಿದ್ದರೆ […]

ಬ್ಯಾಕರವಳ್ಳಿ ಬಸವೇಶ್ವರ ಹೋಟೆಲ್ಲೂ ಮತ್ತು ಮೂರು ಪಂಕ್ಚರ್ರುಗಳ ಕತೆ: ಪ್ರಶಸ್ತಿ

ಹಾಸನಕ್ಕಿಂತ ೪ ಕಿ.ಮೀ ಮೊದಲು ಎಡಕ್ಕೆ ತಿರುಗಿ, ೧೪ ಕಿ.ಮೀ ಸಾಗಿ ನಂತರ ಬಲಕ್ಕೆ ಸಾಗಿ ಹಾಸನ ಗೊರೂರು/ಹಾಸನ ಪೆರಿಯಾಪಟ್ಟಣ ರಸ್ತೆಯಲ್ಲಿ ಸಾಗಿದ್ರೆ ಕೊಟ್ಟಾಯಕ್ಕಿಂತ ಮುಂದೆ ಸಾಗುವಾಗ ಶೆಟ್ಟಿಹಳ್ಳಿ ಸಿಗುತ್ತೆ. ಶೆಟ್ಟಿಹಳ್ಳಿಯ ಚರ್ಚಲ್ಲೊಂದು ಫೋಟೋ ಸೆಷನ್ನು ,ಬೆಳಬೆಳಗ್ಗೆಯೇ ಹೊಳೆದ ಒಂದಿಷ್ಟು ಯೋಗಾಸನಗಳ, ಜಂಪಿಂಗು, ಕ್ಲೈಂಬಿಂಗುಗಳ ಪೂರೈಸುವಾಗ ಹೊಟ್ಟೆ ಚುರುಗೊಟ್ಟಿದ, ಪ್ರಕೃತಿಯು ಕರೆದ ಅನುಭವ. ಬೇಗ ಹಾಸನಕ್ಕೆ ಹೋಗೋಣವೆಂದ್ರೆ ಹೊರಟ ಟಿ.ಟಿ ಎರಡನೇ ಬಾರಿ ಪಂಚರ್ರಾಗಿತ್ತು. ರಾತ್ರಿ ಟೋಲ್ ಗೇಟ್ ಬಳಿಯೇ ಪಂಚರ್ರಾದ ಹಿಂದಿನಿಂದ ಎಡಗಡೆಯ ಟೈರೇ ಈಗ […]

ಬೆಂದಕಾಳೂರ ಟ್ರಾಫಿಕ್ಕೂ, ಗುಂಡಣ್ಣನ ಲಾಜಿಕ್ಕು: ಪ್ರಶಸ್ತಿ

ನಮ್ಮ ಗುಂಡಣ್ಣಂಗೆ ಬಗೆಹರಿಯದ ಸಮಸ್ಯೆಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ.  ನಾಲ್ಕು ಜನ ಯಾವುದಾದ್ರೂ ವಿಷಯದ ಬಗ್ಗೆ ಚರ್ಚಿಸ್ತಾ ಇದ್ದಾರೆ ಅಂದ್ರೆ ಇವರನ್ನ ಕರೆಯದೇ ಹೋದ್ರೂ ಅಲ್ಲಿಗೊಂದು ಎಂಟ್ರಿ ಕೊಟ್ಟು ಅವ್ರು ಯಾವ ಗಹನವಾದ ವಿಷಯದ ಬಗ್ಗೆ ಚರ್ಚಿಸ್ತಾ ಇದ್ದಾರೆ ಅಂತ ತಿಳಿದುಕೊಂಡು ಅದಕ್ಕೊಂದು ಪರಿಹಾರ ಸೂಚಿಸ್ಲಿಲ್ಲ ಅಂದ್ರೆ ಗುಂಡಣ್ಣಂಗೆ ಅವತ್ತು ತಿಂದ ಅನ್ನ ಜೀರ್ಣವಾಗೋಲ್ಲ. ಹೀಗೇ ಎಲ್ಲರೂ ಗುಂಡಣ್ಣನ ಬಗ್ಗೆ ಹೇಳೋದನ್ನ ಕೇಳಿ ಕೇಳೀ, ಸಂಜೆಯವರೆಗೂ ಯಾವ ಸಮಸ್ಯೆಗೂ ಪರಿಹಾರ ಸೂಚಿಸದ ದಿನ ತನಗೇನಾದ್ರೂ ಅಜೀರ್ಣವಾಗಿಬಿಡುತ್ತಾ ಎಂಬ […]

ಹಬ್ಬವೆಲ್ಲಿದೆ?: ಪ್ರಶಸ್ತಿ

ಮೊನ್ನೆ ವಾಟ್ಸಾಪು, ಫೇಸ್ಬುಕ್ಕುಗಳಲ್ಲಿ ನಾಗರಪಂಚಮಿ ಶುಭಾಶಯಗಳು ಅಂತ ನೋಡಿದ್ಮೇಲೇ ಇವತ್ತು ನಾಗರಪಂಚಮಿ ಅಂತ ನೆನಪಾಗಿದ್ದು. ಊರಲ್ಲಿದ್ದಾಗ ನಾಗರಪಂಚಮಿಯೆಂದ್ರೆ ಅದೆಷ್ಟು ಖುಷಿ. ಅಮ್ಮ ಮಾಡೋ ಮಂಡಕ್ಕಿ ಉಂಡೆಯ ರುಚಿಗಾಗಿ ಕಾಯೋದೇನು, ಪೂಜೆಗಾಗಿ ಹಿಂದಿನ ದಿನವೇ ನಾಗರಬನವನ್ನೆಲ್ಲಾ ಚೊಕ್ಕ ಮಾಡಿ, ಅದಕ್ಕೆ ಹೋಗೋ ದಾರಿಯಲ್ಲಿದ್ದ ಹುಲ್ಲನ್ನೆಲ್ಲಾ ಒಂದಿಷ್ಟು ಸವರಿ ಇಡೋ ಉಮೇದೇನು, ಶಾಲೆಗೊಂದಿನ ರಜೆಯೆಂಬ ಖುಷಿಯೇನು. ಇದರೊಂದಿಗೇ ಹಬ್ಬಗಳ ಸಾಲು ಶುರುವಾಗುತ್ತೆಂಬ ನಿರೀಕ್ಷೆಯೇನು. ಆಹಾ. ಒಂದು ಕಿರುಬೆರಳ ಉಗುರಿಗಾದ್ರೂ ಮದರಂಗಿ ಹಚ್ಚಿಕೊಳ್ಳಬೇಕೆಂಬ ಅಲಿಖಿತ ನಿಯಮದಿಂದಾಗಿ ಹುಡುಗರಾದ ನಮ್ಮ ಬೆರಳುಗಳೂ ಮದರಂಗಿಯ […]

ಕೆಂಪುಕೋಟೆಯ ಮೇಲಿಂದ ತಿರಂಗದ ಕೆಳಗಿಂದ ಕಂಡ ಕನಸಗಳ ಕುರಿತು: ಪ್ರಶಸ್ತಿ

ಇಂದು ಆಗಸ್ಟ್ ಹದಿನೈದು. ಭಾರತಕ್ಕೆ ಸ್ವಾತಂತ್ರ್ಯ ಬಂದು ೬೮ ವರ್ಷ ತುಂಬಿದ ಅಥವಾ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ೬೯ ನೇ ದಿನ. ರಜೆಯೆಂದು ಹೊದ್ದು ಮಲಗೋ ಬದಲು ಬೆಳಗಾಗೆದ್ದು ಟಿ.ವಿಯ ಮುಂದೆ ಪ್ರತ್ಯಕ್ಷನಾಗಿ ಕೆಂಪುಕೋಟೆಯ ಮೇಲೆ ನಮ್ಮ ಹೆಮ್ಮೆಯ  ತ್ರಿವರ್ಣ ಧ್ವಜ ರಾರಾಜಿಸುವ ಗಳಿಗೆಗಾಗಿ ಕಾಯೋದು ಈ ದೇಶದ ಅದೆಷ್ಟೋ ಕೋಟಿ ಜನರಲ್ಲೊಬ್ಬ ನಾನು. ಬಿಳಿಬಿಳಿಯ ಸಮವಸ್ತ್ರ ತೊಟ್ಟು ಕೈಗೊಂದು ತ್ರಿವರ್ಣದ ಬ್ಯಾಂಡೋ ಜೇಬಿಗೊಂದು ತ್ರಿವರ್ಣದ ಪಿನ್ನೋ ಚುಚ್ಚಿಕೊಂಡು ಬೋಲೋ ಭಾರತ್ ಮಾತಾ ಕೀ ಜೈ ಎನ್ನುತ್ತಾ ಶಾಲಾ […]

ಸ್ವಂತೀ(selpfie): ಪ್ರಶಸ್ತಿ

ಈ ಸ್ವಂತೀ ಅಥವಾ ಸೆಲ್ಪೀ ಅನ್ನೋ ಪದದ ಬಗ್ಗೆ ಕೇಳದ ಸಾಮಾಜಿಕ ತಾಣಗಳ ಬಳಕೆದಾರರು ಇಲ್ಲವೇ ಇಲ್ಲ ಅಂದರೆ ತಪ್ಪಾಗಲಾರದೇನೋ . ಗೆಳೆಯನೊಬ್ಬ ಅಥವಾ ಗೆಳತಿಯೊಬ್ಬಳು ನಮ್ಮ ಪಟ ತೆಗೆಯೋದಕ್ಕೆ ಕಾಯೋ ಬದಲು ನಮ್ಮ ಚಿತ್ರ ನಾವೇ ತೆಗೆದುಕೊಳ್ಳೋದಕ್ಕೆ  ಸೆಲ್ಫೀ ಅಥವಾ ಸ್ವಂತೀ(ಕೃಪೆ: ಮುಖಹೊತ್ತುಗೆಯ "ಪದಾರ್ಥ ಚಿಂತಾಮಣಿ" ಗುಂಪು)ಅಂತ ಕರೆಯುತ್ತಾರೆ ಎಂಬುದು ನಿಮಗೆಲ್ಲಾ ಗೊತ್ತಿರುವಂತದ್ದೇ ಆದರೂ ಆ ಪದವನ್ನು ಮೊದಲು ಹುಟ್ಟುಹಾಕಿದ್ದು ಯಾರಂತ ಗೊತ್ತೇ ? ಆಕ್ಸವರ್ಡ ಪದಕೋಶದಿಂದ ೨೦೧೩ರ "ವರ್ಷದ ಪದ" ಎಂಬ ಬಿರುದು ಪಡೆದ […]

ಬರಹಗಾರರ ಭಾವವೂ, ಭಾಷೆಯ ನೋವೂ: ಪ್ರಶಸ್ತಿ

ಪೇಪರ್ರಲ್ಲಿ, ಇಂಟರ್ನೆಟ್ಟಲ್ಲಿ, ಮೊಬೈಲಲ್ಲಿ ಏನೋ ಓದುತ್ತೇವೆ, ಇನ್ನೇನೋ ನೋಡುತ್ತೇವೆ, ಮತ್ತಿನ್ನೇನೋ ಕೇಳುತ್ತೇವೆ, ಸಮಾಜದಲ್ಲಿನ ಆಗುಹೋಗುಗಳಲ್ಲಿ ಒಂದಾಗಿ ಏನೇನೋ ಅನುಭವಿಸುತ್ತಿರುತ್ತೇವೆ. ಈ ಘಟನೆಗಳಗಳಲ್ಲಿ ಯಾವುದೋ ಒಂದು ಇನ್ಯಾವುದೋ ಭಾವವನ್ನು ಸ್ಪುರಿಸಿರುತ್ತದೆ. ಹಿಂದಿನ ಓದಿನಿಂದ ಪ್ರಭಾವಿತರಾಗಿರುವಂತೆಯೇ ಆ ಕ್ಷಣಕ್ಕೆ ಹುಟ್ಟಿದ ಸ್ವಂತದ ಭಾವಕ್ಕೊಂದು ಅಕ್ಷರರೂಪ ಕೊಡಬೇಕೆಂಬ ಹಂಬಲವೂ ಹುಟ್ಟಬಹುದು. ಸರಿ, ಬರೆಯುತ್ತೇನೆ. ಆದರೆ ಬರೆಯುವುದು ಎಲ್ಲಿ ಎಂಬುದು ಆಗ ಮೂಡೋ ಮೊದಲ ಪ್ರಶ್ನೆ. ಶಾಲಾ ಕಾಲೇಜು ದಿನಗಳಲ್ಲಾದರೆ ಪುಸ್ತಕದ ಕೊನೆಯ ಪೇಜಿನಲ್ಲೋ, ಸಿಕ್ಕ ಖಾಲಿ ಹಾಳೆಯಲ್ಲೋ ಬರೆದು ಗೆಳೆಯರಿಗೆ ತೋರಿಸಿ […]

ಸಾವು: ಪ್ರಶಸ್ತಿ

ಸಾವೆಂಬುದು ಬೆನ್ನ ಹತ್ತಿ ಬರುತ್ತಿದೆಯಾ ಎಂಬ ಭಾವ ಪದೇ ಪದೇ ಕಾಡತೊಡಗಿತ್ತವನಿಗೆ. ಯದ್ವಾತದ್ವಾ ಟ್ರಾಫಿಕ್ ಜ್ಯಾಂನಿಂದ ರೈಲು ತಪ್ಪಿಸಿಕೊಂಡ ಬೇಜಾರಲ್ಲಿ ಬಸ್ಸಿಗೆ ಹೋದ ದಿನವೇ ರೈಲಿನ ಅಪಘಾತವಾಗಿ ಅದೆಷ್ಟೋ ಜನ ಅಸುನೀಗಿದ್ದರು. ಆ  ಆಘಾತ ಮನಸ್ಸಿನಿಂದ ಅಳಿಸೋ ಮುನ್ನವೇ ಇವ ರಿಸರ್ವ ಮಾಡಿಸಿದ್ದ ಬಸ್ಸು ಆಯತಪ್ಪಿ ಕೊರಕಲಿಗೆ ಜಾರಿದ ಸುದ್ದಿ ಕೇಳಿಬಂದಿತ್ತು. ಬೇಗ ಹೋಗಬೇಕಂದುಕೊಂಡ್ರೂ ಆ ಶುಕ್ರವಾರವೇ ವಿಪರೀತ ಲೇಟಾಗಿ ರಿಸರ್ವ್ ಮಾಡಿಸಿದ ಬಸ್ಸಿಗೆ ಹೋಗಲಾಗದ್ದಕ್ಕೆ ಅದೆಷ್ಟೋ ಶಾಪ ಹಾಕಿದ್ದವನಿಗೆ ಮಾರನೇ ದಿನದ ಪೇಪರ್ ನೋಡಿದಾಗ ಮತ್ತೊಮ್ಮೆ […]

ಕುಂದ್ಲಳ್ಳಿ ಕೆರೆ: ಪ್ರಶಸ್ತಿ

ಒಂದಾನೊಂದು ಕಾಲದಲ್ಲಿ ಬೆಂಗಳೂರನ್ನೋದು ಉದ್ಯಾನನಗರಿ ಅನ್ನುವಂತೆಯೇ ಕೆರೆಗಳ ನಗರವೂ ಆಗಿತ್ತಂತೆ. ಈಗ ಕೆರೆಯಿದ್ದೆಡೆಯೆಲ್ಲಾ ಅಪಾರ್ಟುಮೆಂಟುಗಳೋ, ಸ್ಟೇಡಿಯಮ್ಮುಗಳೋ ತಲೆಯೆತ್ತಿ ಬೇಸಿಗೆ ಬರೋದ್ರೊಳಗೇ ನೀರಿಗೆ ಹಾಹಾಕಾರ. ಸಾವಿರ ಅಡಿ ಕೊರೆದ್ರೂ ಬೋರಲ್ಲಿ ನೀರಿಲ್ಲ ಅನ್ನೋ ಸಮಸ್ಯೆ ಒಂದೆಡೆಯಾದ್ರೆ ಇರೋ ಕೆರೆಗಳ ನೀರಿಗೂ ವಿಪರೀತ ಪ್ರಮಾಣದ ರಾಸಾಯನಿಕಗಳ ಸುರುವಿ ಅದನ್ನೂ ಹಾಲಾಹಲವಾಗಿಸುತ್ತಿರುವ ಸಮಸ್ಯೆ ಇನ್ನೊಂದೆಡೆ. ವೈಟ್ ಫೀಲ್ಡೆಂಬ ಏರಿಯಾವನ್ನೇ ತಗೊಂಡ್ರೆ ಸುತ್ತಲ ಏಳೆಂಟು ಕೆರೆಗಳಿದ್ದಿದ್ದನ್ನ ಕಾಣಬಹುದು(ಚಿತ್ರ:lakes around whitefield).ಇದ್ದಿದ್ದು ಅಂತ್ಯಾಕೇ ಹೇಳ್ತಿದೀನಾ ? ಇನ್ನೂ ಇಲ್ವಾ ಆ ಕೆರೆಗಳು ಅಂತ ಅಂದ್ರಾ […]