ಪೇಟೆಯಲ್ಲಿನ ಸಾಫ್ಟವೇರ್ ಕಂಪೆನಿಗಳಲ್ಲಿ ಕೆಲಸ ಮಾಡ್ತಿದ್ದ ಹುಡುಗರೆಲ್ಲಾ ಈಗ ಹಳ್ಳಿ ಸೇರಿದ್ದಾರೆ. ಮನೇಲೇ ಕೂತ್ಕೊಂಡು ಅದೇನೋ ವರ್ಕ್ ಫ್ರಂ ಹೋಂ ಮಾಡ್ತಿದ್ದಾರೆ ಅನ್ನೋ ಮಾತನ್ನ ಸುಮಾರು ಕಡೆ ಕೇಳಿರ್ತೀರ . ಮುಂಚೆಯೆಲ್ಲಾ ಆಫೀಸಿಗೆ ಅಂತ ಬೆಂಗಳೂರಿಗೆ ಹೋಗ್ತಿದ್ದೆ. ಈಗ ಇಲ್ಲೇ ಇದ್ದೀಯಲ್ಲ. ರಜೆಯೇನಪ್ಪ ನಿಂಗೆ ಅಂತಾರೆ ನಮ್ಮಜ್ಜಿ. ಇಲ್ಲಜ್ಜಿ ಮನೆಯಿಂದ್ಲೇ ಕೆಲಸ ಮಾಡ್ಬೋದು ಲ್ಯಾಪ್ಟಾಪಲ್ಲಿ, ಕಂಪ್ಯೂಟರಲ್ಲಿ ಅಂದ್ರೆ ಏನ್ಮಾಡ್ತೀಯ ಅದ್ರಲ್ಲಿ ? ಲೆಕ್ಕ ಮಾಡೋದಿರುತ್ತಾ ಅಂತಾರೆ. ನಾವು ಏನ್ಮಾಡ್ತೀವಿ ಅಂತ ಹೊರಗೆ ಹೇಳದ ಹಾಗೆ ನಮ್ಮ ಅನ್ನದಾತರಾದ […]
Archive for the ‘ಪ್ರಶಸ್ತಿ ಅಂಕಣ’ Category
ಮೆಕ್ಸಿಕೋ ಮೈತ್ರಿ: ಪ್ರಶಸ್ತಿ ಪಿ.






















ಕೆಲಸದ ನಿಮಿತ್ತ ಮೆಕ್ಸಿಕೋಗೆ ಬಂದ ಮೊದಲ ದಿನಗಳಲ್ಲಿ ಕಾಡಿದ ದಿಗಿಲುಗಳು ಅಷ್ಟಿಷ್ಟಲ್ಲ. ಭಾರತದ ಮಾಧ್ಯಮಗಳಲ್ಲಿ ಕಂಡ ಹಾದಿಬೀದಿಯಲ್ಲೆಲ್ಲಾ ಡ್ರಗ್ಸ್ ಮಾಡೋ ನಾಡೆಂಬ ಸುದ್ದಿಗಳಾಗಿರಬಹುದು, ರಾತ್ರಿ ಏಳರ ಮೇಲೆ ಹೊರಗೆ ಕಾಲಿಡಬೇಡವೆಂದು ಎಚ್ಚರಿಸುತ್ತಿದ್ದ ಹೋಟೇಲು ರೂಂಮೇಟಾಗಿರಬಹುದು, ಗೊತ್ತಿಲ್ಲದ ಸ್ಪಾನಿಷ್ ಭಾಷೆಯಾಗಿರಬಹುದು, ಇಂಟರ್ ನ್ಯಾಷನಲ್ ರೋಮಿಂಗ್ ಇದ್ದರೂ ಸಿಗ್ನಲ್ ಸಿಗದ ಸಿಮ್ಮಾಗಿರಬಹುದು, ಎಲ್ಲೆಡೆಯೂ ಮಾಂಸದ ಸಾಮ್ರಾಜ್ಯವಾಗಿ ವೆಜ್ಜಿಗಳಿಗೆ ಸಿಗದ ಊಟವಾಗಿರಬಹುದು, ತಮ್ಮ ಕೆಲಸವನ್ನೇ ನೋಡಿಕೊಳ್ಳುತ್ತಾ ಹೆಚ್ಚೇನೂ ನೆರವಾಗದ ಈಗಾಗಲೇ ಅಲ್ಲಿಗೆ ಹೋಗಿದ್ದ ಸಹೋದ್ಯೋಗಿಗಳಾಗಿರಬಹುದು. ಸಿಮ್ಮು ತಗೊಳ್ಳೋಕೆ ನಾಲ್ಕು ದಿನ, ಬ್ಯಾಂಕ್ […]
ಸುಂದರ ಸಿಯಾಟೆಲ್: ಪ್ರಶಸ್ತಿ






















ನಮಗೆ ಅದೇ ಹೆಸರೇಕೆ ಇಟ್ಟರು ಅನ್ನೋದರ ಹಿಂದೆ ನಮ್ಮಪ್ಪ ಹೇಳೋ ತರ ಪ್ರಸಿದ್ಧ ನಗರಗಳಿಗೂ ಆ ಹೆಸರುಗಳೇ ಯಾಕೆ ಬಂದವು ಅಂತ ಎಷ್ಟು ಸಲ ಯೋಚನೆ ಮಾಡಿರೋಲ್ಲ ನಾವು ? ಹೆಸರಲ್ಲೇನಿದೆ ಅಂದ್ರಾ ? ಪ್ರತೀ ನಗರಕ್ಕೂ ತನ್ನದೇ ಆದೊಂದು ಹೆಸರಿರುತ್ತೆ. ಆ ಹೆಸರೇಕೆ ಬಂತು ಅನ್ನೋದರ ಹಿಂದೊಂದು ಸುಂದರ ಕಥೆಯಿರುತ್ತೆ. ಹೆಸರ ಇತಿಹಾಸ ಥಟ್ಟನೆ ಗೋಚರಿಸದಿದ್ದರೂ ಕಾಲಗರ್ಭದಲ್ಲೆಲ್ಲೋ ಮರೆಯಾಗಿ ಕೆದಕುವವರಿಗಾಗಿ ಕಾದು ಕೂತಿರುತ್ತೆ. ದೇಶ ಸುತ್ತೋ ಜೋಶಿನಲ್ಲಿ ಸಿಕ್ಕಿದ್ದ ಸಿಯಾಟೆಲ್ಲಿಗೆ ಆ ಹೆಸರೇಕೆ ಬಂತೆನ್ನೋ ಪ್ರಶ್ನೆಯ […]
ಸಂತಾ ರನ್: ಪ್ರಶಸ್ತಿ






















ವಾರಕ್ಕೊಮ್ಮೆ ಆಗೋ ಸಂತೆ ಗೊತ್ತು. ,ಸಂತಾ-ಬಂತಾ ಜೋಕುಗಳಲ್ಲಿಯ ಸಂತಾ ಗೊತ್ತು. ಕ್ರಿಸ್ಮಸ್ಸಿನಲ್ಲಿ ಗಿಫ್ಟ್ ಕೊಡ್ತಾನೆ ಅಂತ ಮಕ್ಕಳು ಕಾಯೋ ಸಂತಾ ಕ್ಲಾಸೂ ಗೊತ್ತು. ಇದೇನಿದು ಸಂತಾ ರನ್ ಅಂದ್ರಾ ? ಮೆಕ್ಸಿಕೋದಲ್ಲಿ ವರ್ಷಕ್ಕೊಮ್ಮೆ ಕ್ರಿಸ್ಮಸ್ ಸಮಯದಲ್ಲಿ ಆಗೋ ಓಟದ ಸ್ಪರ್ಧೆಯೇ "ಸಂತಾ ರನ್". ನಮ್ಮ ಬೆಂಗಳೂರಲ್ಲೂ ತಿಂಗಳಿಗೊಂದರಂತೆ ಓಟಗಳು ನಡೀತಿರತ್ತೆ. ನೈಸ್ ರೋಡ್ ಮ್ಯಾರಥಾನ್, ಟಿಸಿಎಸ್ ೧೦ಕೆ ಓಟಕ್ಕೆ ವಿದೇಶೀ ಅಥ್ಲೀಟುಗಳೂ ಬರುತ್ತಾರೆ ಇದ್ರಲ್ಲೇನು ವಿಶೇಷ ಅಂದ್ರಾ ? ಹೆಸರೇ ಹೇಳುವಂತೆ ಓಟಕ್ಕೆ ಬರೋ ಎಲ್ಲಾ ಸ್ಪರ್ಧಿಗಳೂ […]
ಮತ್ತೆ ಮಳೆಯಾಗಿದೆ: ಪ್ರಶಸ್ತಿ






















ಮಳೆಗಾಲ ಮುಗೀತು. ಇನ್ನೇನು ಚಳಿಗಾಲ ಬರ್ಬೇಕಿತ್ತಲ್ಲ ಅಂತ ಕಾಯ್ತಾ ಇದ್ದವರಿಗೆ ಡಿಸೆಂಬರ್ ಐದಾದರೂ ಚಳಿಯ ದರ್ಶನವಾಗಿರಲಿಲ್ಲ. ಕಡಿಮೆಯೆಂದರೆ ಹದಿನೈದು , ಹೆಚ್ಚೆಂದರೆ ಇಪ್ಪತ್ತೈದು ಡಿಗ್ರಿಯಿರುತ್ತಿದ್ದ ದಿನಗಳಲ್ಲಿ ಗ್ಲಾಸ ಕಿಟಕಿಯ ಪಕ್ಕದಲ್ಲಿ ಕುಳಿತು ಕೆಲಸ ಮಾಡೋದೊಂತರ ಖುಷಿ. ಎದುರಿಗಿರೋ ಬೆಟ್ಟಗಳ ಮೇಲೆ ಕವಿಯುತ್ತಿದ್ದ ಮೋಡಗಳು, ಪಕ್ಕದ ಗಗನಚುಂಬಿಗಳ ನಡುವೆ ಕೂಕೆನ್ನುತ್ತಾ ಸಂಜೆ ಕಳೆಯೋ ಮುಳುಗುರವಿ, ಡಿಸೆಂಬರ್ ಬಂತೆಂದು ನೆನಪಿಸುತ್ತಾ ರಸ್ತೆಯಲ್ಲಿ ಆಗಾಗ ಕಾಣುವ ಮೆರವಣಿಗೆಗಳು ಕ್ರಿಸ್ ಮಸ್ ರಜೆ ಬರುತ್ತಿರೋ ಸೂಚನೆ ಕೊಡುತ್ತಿದ್ದವು. ಆಗಾಗ ಎದುರಿಗಿರೋ ಪರ್ವತಗಳನ್ನೇ ಮುಚ್ಚುವಂತಹ […]
ಮಹಾವಲಸೆ: ಪ್ರಶಸ್ತಿ






















ಚಳಿಗಾಲ ಬಂತಂದ್ರೆ ಮನೆಯಿಂದ ಹೊರಗೆ ಹೊರಡೋಕೆ ಮನಸ್ಸಾಗಲ್ಲ. ಹೊರಗಡೆ ಚುಮುಚುಮು ಚಳಿ ಕೊರಿತಾ ಇರುವಾಗ ಮನೆಯೊಳಗೆ ಬೆಚ್ಚಗೆ ಹೊದ್ದು ಕೂತು ಬಿಸಿ ಬಿಸಿ ಬಜ್ಜಿಯೋ, ಬೋಂಡಾವೋ ತಿನ್ನುತ್ತಾ ಚಹಾ ಹೀರೋ ಸವಿಯಿದ್ಯಲ್ಲಾ ? ಆಹಾ. ಬಾಳೇಕಾಯಿ ಚಿಪ್ಸೋ, ಹಲಸಿನ ಕಾಯಿ ಚಿಪ್ಸೋ ಸಿಕ್ಕಿಬಿಟ್ಟರೆ ಅದೇ ಸ್ವರ್ಗ. ನಮ್ಮಲ್ಲಿನ ಚಳಿಯೆಂದರೆ ಎಷ್ಟಿದ್ದೀತು ? ಅಬ್ಬಬ್ಬಾ ಅಂದರೆ ಹದಿನೈದು ಡಿಗ್ರಿಯವರೆಗೆ ಇಳಿಯಬಹುದೇನೋ ? ಆದರೆ ಆ ಚಳಿ ಹಾಗೇ ಹತ್ತಕ್ಕಿಂತಲೂ ಕಡಿಮೆಯಾಗುತ್ತಾ ಹೋದರೆ ? ರಾತ್ರಿ ಹೋಗಲಿ, ಹಗಲಲ್ಲೂ […]
ಅನ್ನದಾತ ಕ್ಯಾಂಟೀನ್: ಪ್ರಶಸ್ತಿ






















ಬೆಂಗಳೂರಿಗೆ ಕಾಲಿಟ್ಟ ಮೊದಲ ದಿನಗಳವು. ಎರಡು ದಿನ ನೆಂಟರ ಮನೆಯಲ್ಲಿದ್ದರೂ ಮೂರನೇ ದಿನದೊತ್ತಿಗೆ ಪೀಜಿಯೋ ರೂಮೋ ಹುಡುಕಲೇ ಬೇಕೆನ್ನೋ ಹಠ. ಹಠವೆನ್ನಬೇಕೋ, ಸ್ವಾಭಿಮಾನವೆನ್ನಬೇಕೋ ಗೊತ್ತಿಲ್ಲ. ಹಿಂದೊಮ್ಮೆ ಬಂದಾಗಿನ ಊಟವಿಲ್ಲದ ಉರಿಬಿಸಿಲ ದಿನಗಳಿಲ್ಲದಿದ್ದರೂ ಆದಷ್ಟು ಬೇಗ ಸ್ವಂತದ್ದೊಂದು ನೆಲ ಹುಡುಕೋ ಹವಣಿಕೆ. ಸಂಬಳ ಕೊಡೋ ಕಂಪೆನಿ ಕೆಲಸ ಕೊಡಲು ಶುರುಮಾಡದಿದ್ದರೂ ಗೊತ್ತಿಲ್ಲದ ಊರಲ್ಲಿ ಪರಕೀಯನಾಗದಿರಲು ಒದ್ದಾಟ. ನೆಂಟರ ಮನೆಯಲ್ಲಿದ್ದಷ್ಟು ದಿನವೂ ತಾನು ಈ ಊರಿಗೆ ನೆಂಟನೇ ತಾನೇ ? ಈ ಊರಲ್ಲೊಬ್ಬನಾಗಬೇಕೆಂದರೆ ಇಲ್ಲಿಯ ಸಾಮಾನ್ಯರಲ್ಲೊಬ್ಬನಾಗಬೇಕೆಂಬ ಕನವರಿಕೆ. ಅಂತದ್ದೇ ಕನಸಿನ […]
ಅಗೋಚರ: ಪ್ರಶಸ್ತಿ






















ಏಳ್ಬೇಕು ಅಂತಷ್ಟೊತ್ತಿಗೆ ಏಳ್ಬೇಕು, ಮಲಗ್ಬೇಕು ಅಂದಷ್ಟೊತ್ತಿಗೆ ಮಲಗಿ ಬಿಡ್ಬೇಕು. ಈ ಫೇಸ್ಬುಕ್ಕು,ವಾಟ್ಸಾಪು, ಜೀಮೆಲುಗಳನ್ನೆಲ್ಲ ಡಿಲಿಟ್ ಮಾಡಿ ಎಲ್ಲಾದ್ರೂ ದೂರ ಹೋಗಿ ಬಿಡಬೇಕು ಗುರೂ ಅಂತಿದ್ದವ ಅದರಲ್ಲೇ ಮೂರೊತ್ತೂ ಮುಳುಗಿರುತ್ತಿದ್ದ. ರಾಶಿ ರಾಶಿ ಪುಸ್ತಕಗಳ ಗುಡ್ಡೆ ಹಾಕಿಕೊಂಡವ ಕ್ಲಾಶ್ ಆಫ್ ಕ್ಲಾನ್ಸು, ಫ್ಯೂಚರ್ ಫೈಟಗಳಲ್ಲಿ ಕಳೆದುಹೋಗಿರುತ್ತಿದ್ದ. ಆಟಗಳಲ್ಲಿ ಸಿಗುವ ಕಾಲ್ಪನಿಕ ಕಾಸ ಹಿಂದೆ ಆತನ ಇಂದು ಕಾಣದಷ್ಟು ಕುರುಡನಾಗಿದ್ದವ ಒಮ್ಮೆ ಇದನ್ನೆಲ್ಲಾ ಪಟ್ಟನೆ ಬಿಟ್ಟು ಎಲ್ಲೋ ಮರೆಯಾಗಿಬಿಡುವನೆಂದು ಯಾರೂ ಎಣಿಸಿರಲಿಲ್ಲ. ಬೆಳಗಿಂದ ರಾತ್ರೆಯವರೆಗೂ ಆಫೀಸಲ್ಲೇ ಕೊಳೆಯುತ್ತಾನೆ ಎಂದು ಹೀಗಳೆಯೋ […]
ಐದ್ಸಾವರ ಫ್ರೆಂಡ್ಸು ಮತ್ತು ನಾವು: ಪ್ರಶಸ್ತಿ






















ಈ ಫೇಸ್ಬುಕ್ಕಿನ ಸಾಹಿತಿಗಳೆಲ್ಲಾ, ಅಥವಾ ಬೇರೆಡೆ ಸಾಹಿತ್ಯ ಬರೆಯುತ್ತಿದ್ದು ಸದ್ಯ ಫೇಸ್ಬುಕ್ಕಿನಲ್ಲಿ ಸಕ್ರಿಯರಾಗಿರೋ ಸ್ನೇಹಿತರೆಲ್ಲಾ ಯಾವುದೋ ಪಕ್ಷದ ವಕ್ತಾರರಂತೆ, ಮತ್ಯಾವುದೋ ಕೋಮಿನ ಹರಿಕಾರರಂತೆ ಯದ್ವಾ ತದ್ವಾ ಪೋಸ್ಟುಗಳನ್ನ ಹರಿಬಿಡೋದನ್ನು ನೋಡಿದಾಗ ಖೇದವಾಗುತ್ತೆ. ಮೋದಿಯೊಬ್ಬ ಸರ್ವಾಧಿಕಾರಿಯೆಂದಾಗ್ಲೋ, ಟಿಪ್ಪು ಜಯಂತಿ ಬೇಡವೆನ್ನುವವರಿಗೆ ಬುದ್ಧಿಯಿಲ್ಲವೆಂದಾಗ್ಲೋ , ಉರುಳು ಸೇವೆಗೋ, ಉಡುಪಿ ಚಲೋಗೋ ಪ್ರಶಂಸೆ, ಧಿಕ್ಕಾರಗಳನ್ನ ಬರೆದಾಗಾದ ಬೇಸರವಲ್ಲವದು. ಆದರೆ ಎಡವೇ ಸರಿಯೆಂದೋ, ಬಲವೇ ಸರ್ವೋತ್ತಮವೆಂದೋ ದಿನಂಪ್ರತಿ ಜಗಳ ಕಾಯೋ ಪರಿಗೆ ಕಸಿವಿಸಿಯಾಗುತ್ತೆ. ವೈಯುಕ್ತಿಕವಾಗಿ ಇಷ್ಟವಾಗೋ ಅವರು ಫೇಸ್ಬುಕ್ಕಿಗೆ ಬಂದಾಗ ಹಿಂಗ್ಯಾಕೆ ಅನ್ನೋದು […]
ಸುಬ್ರಹ್ಮಣ್ಯ ಸುತ್ತಮುತ್ತ: ಪ್ರಶಸ್ತಿ






















ಸುಮಾರಷ್ಟು ಜನರಿಗೆ ಸುಬ್ರಹ್ಮಣ್ಯ ಅಂದ್ರೆ ಅಲ್ಲಿ ನಡೆಯೋ ನಾಗಪ್ರತಿಷ್ಟೆ, ಆಶ್ಲೇಷ ಬಲಿಗಳು ನೆನಪಾಗುತ್ತೆ. ಟ್ರೆಕ್ಕಿಂಗು ಅಂತ ಹೋಗೋರಿಗೆ ಅದಕ್ಕೆ ಸಮೀಪದಲ್ಲಿರೋ ಕುಮಾರ ಪರ್ವತ ನೆನಪಾಗಬಹುದು. ಆದರೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂದಿರುವ ಮರಕತ ಪರ್ವತ ಗೊತ್ತಾ ಎಂದರೆ, ಆದಿ ಸುಬ್ರಹ್ಮಣ್ಯ, ಕಾಶಿ ಕಟ್ಟೆ ಗಣಪತಿ, ಅಭಯ ಗಣಪತಿ, ವನದುರ್ಗಾ ದೇವಿ ನೋಡಿದ್ದೀರಾ ಎಂದರೆ ಎಲ್ಲಿದೆಯಪ್ಪಾ ಇವು ಎನ್ನಬಹುದು. ಸುಬ್ರಹ್ಮಣ್ಯದಿಂದ ೨೦ ಕಿಮೀ ದೂರದ ಒಳಗಿರುವ ಪಂಜ ಪಂಚಲಿಂಗೇಶ್ವರ ದೇವಸ್ಥಾನ, ಬಿಳಿನೆಲೆ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ, ಬನವನ ಮೂಲೆ ಈಶ್ವರ […]