Facebook

Archive for the ‘ಕಾವ್ಯಧಾರೆ’ Category

ಪಂಜು ಕಾವ್ಯಧಾರೆ

ನಂಕ್ಯಾಕೋ…. ಬೆತ್ತಿಂಗ್ಳುನ ಕಂಡ್ರೇ ಭಯಾ ಆತೈತೆ ಬಾಗ್ಲಾಕ್ಕಂಡು ಬುಡ್ಡೀದೀಪಾನ ಆರಿಸಿ ಸುಮ್ಜೆ ಕೂಕಂತೀನಿ ಗವ್ವನ್ನೋ ಕತ್ಲು ಮೈಮ್ಯಾಗೇ ನಿಧಾನುಕ್ಕೆ ರೇಷ್ಮೇ ಹುಳ ತಲೆಯಾಡ್ಸಂಗೆ ನಿನ್ನ ಗ್ಯಾಪ್ನದ ನೆನಪುಗಳು ಎದ್ದು ನಿಂತ್ಕಂತವೆ ಗ್ವಾಡೇ ಮ್ಯಾಗೆ ನೀನೇ ಬಂದಂಗಾತು ದಾಳಿಂಬೆ ಬೀಜದ ಸಾಲಿಟ್ಟಂಗೆ ನಗ್ತಿದ್ದೆ ನನ್ನ ಮನುಸ್ನಾಗೆ ಒಲವಿನ ದೀಪ ಬೆಳುಗ್ತು ನಂಕಾಗ ಗೊತ್ತಾತು ನಾನೂನು ಒಬ್ಮನ್ಸಾ ಅಂತಾ ಗ್ವಾಡೇ ಮ್ಯಾಗೇ ಕೂಕಂಡು ನಗ್ತಾ ಇರೋಳ್ಗೇ ನಡುಮನೆತಾಕ ಬಂದು ಆಸರಿಕೆ- ಬ್ಯಾಸರಿಕೆ ಕಳಿಯಾಕೆ ಮನುಸಾಗ್ತಿಲ್ವಾ… ನಂಕ್ಯಾಕೋ ಬೆಳಕೇ ಬ್ಯಾಡಾ ಅನ್ನುಸ್ಬುಟೈತೆ […]

ಪಂಜು ಕಾವ್ಯಧಾರೆ

ಅಪ್ಪನು ಯಾಕೋ ಹಿಂದಿದ್ದಾರೆ! ಅಮ್ಮ ಒಂಬತ್ತು ತಿಂಗಳು ಹೊತ್ತರೆ, ಅಪ್ಪ ಇಪ್ಪತ್ತೈದು ವರ್ಷ ಹೊತ್ತರೂ, ಯಾಕೋ ಅಪ್ಪ ಅಮ್ಮನಿಗಿಂತ ಹಿಂದಿದ್ದಾರೆ. ಮನೆಯಲ್ಲಿ ವೇತನ ಪಡೆಯದೆ ಅಮ್ಮ, ತನ್ನ ಸಂಪಾದನೆಯೆಲ್ಲ ಮನೆಗೆ ಖರ್ಚು ಮಾಡುವ ಅಪ್ಪ. ಇಬ್ಬರ ಶ್ರಮವೂ ಸಮಾನವಾದರು ಅಪ್ಪ ಯಾಕೋ ಹಿಂದಿದ್ದಾರೆ. ಏನು ಬೇಕೋ ಅದು ಪಾಕ ಮಾಡುವ ಅಮ್ಮ , ಏನು ಬೇಕೋ ಅದು ಕೊಡಿಸುವ ಅಪ್ಪ, ಇಬ್ಬರ ಪ್ರೀತಿಯೂ ಸಮಾನವೆಯಾದರೂ ಅಮ್ಮನಿಗೆ ಬಂದ ಹೆಸರಿಗಿಂತ ಅಪ್ಪ ಯಾಕೋ ಹಿಂದಿದ್ದಾರೆ. ಎದೆ ಮೇಲಿನ ಅಚ್ಚೆಯಲ್ಲಿ […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 17 & 18): ಎಂ. ಜವರಾಜ್

-೧೭- ಬಾಗಿಲು ಕಿರುಗುಟ್ಟಿತು ನನ್ನ ದಿಗಿಲು ಕಿರುಗುಟ್ಟಿದ‌ ಬಾಗಿಲ ಕಡೆಗೋಯ್ತು. ಅಯ್ನೋರು ಬಗ್ಗಿ ಹೊಸಿಲ ಮೇಲೆ ಕಾಲಿಟ್ಟು ಆಚೀಚೆ ನೋಡ್ತ ಬೀಡಿ ತಗ್ದು ತುಟಿಗಿಟ್ಟು ಕಡ್ಡಿ ಗೀರಿ ಬೀಡಿ ಮೊನೆಗೆ ಹಚ್ಚಿ ಅದೇ ಕಡ್ಡಿ ಬೆಳಕಲ್ಲಿ ನನ್ ಕಡೆ ತಿರುಗಿ ಆ ಬೆಳಕು ನನ್ ಮೇಲೂ ಬಿದ್ದು ಅಯ್ನೋರು ಹೊಸಿಲು ದಾಟಿ ನನ್ನ ಮೆಟ್ಟಿ ಬಲಗೈಲಿ ಸೂರು ಹಿಡಿದು ಎಡಗೈಲಿ ಬೀಡಿ ಹಿಡಿದು ಸೇದ್ತಾ ಹೊಗೆ ಬಿಡ್ತಾ ಇರೋವತ್ಲಿ ಒಳಗೆ ಸವ್ವಿ ಗುಕ್ಕಗುಕ್ಕನೆ ದುಮುಗುಡುತ ಅಳ್ತಾ ಇರೋದು […]

ಪಂಜು ಕಾವ್ಯಧಾರೆ

ಹೆದ್ದಾರಿ ಹೊದ್ದು ಮಲಗಿದವರು. ಬೆವತ ಚಂದಮಾಮನಂತ ಮೊಗದಿಂದ ಕಮಲೆಲೆಯಿಂದ ಜಾರುವ ಹನಿಯಂತೆ ಬೆವರಹನಿಗಳು ಸಾಲುಗಟ್ಟಿವೆ.! ಸಮನಾಂತರವಾಗಿ ಜೊಲ್ಲುರಸವೂ ತುಟಿಯಂಚಿಂದ ಜೋಗದಂತೆ ಸುರಿದು ತಲೆದಿಂಬಾಗಿ ಮಡಿಚಿಟ್ಟ ಮೆತ್ತನೆಯ ಅಮ್ಮನ ಸೀರೆ ಒದ್ದೆಯಾಗಿದೆ.!! ಗುಡಾರವು ನಾಲ್ದೆಸೆಯ ಗೂಟಗಳಿಗೆ ಬಿಗಿದಪ್ಪಿಕೊಂಡಿದೆ. ಬೀಸುವ ಗಾಳಿಯನ್ನು ನಿರ್ಭಂದಿಸಿ ಬೆರಗು ಮೂಡಿಸಿದೆ.! ಅಮ್ಮ ಕಣ್ಣುಬ್ಬುಗಳಿಗೆ ಕೈಯಡ್ಡಿ ಗುಡಾರದ ದ್ವಾರದಲ್ಲಿ ಸಿರಿವಂತರ ಸಿಂಗರಿಸಿ ಕಪಾಟಿನಲ್ಲಿಡುವ ಅಲಂಕಾರದ ವಸ್ತುಗಳ ಮಾರಾಟ ಮಾಡುತ್ತಿದ್ದಾಳೆ.!! ಅದು ರಾಜಪಥ ಇಬ್ಬದಿಯುದ್ದಕ್ಕೂ ಸುಂದರ ಮರಗಳ ಸಾಲು, ಪ್ರತಿ ಕ್ಷಣವೂ ರಾಜಾರಥಗಳ ಪಯಣ ನೋಡಲು ಇಕ್ಕಣ್ಣುಗಳು […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 15 & 16): ಎಂ. ಜವರಾಜ್

– ೧೫- ಇಲ್ಲಿ ಕತ್ಲು ಅಂದ್ರ ಕತ್ಲು ಅಲ್ಲಿ ಕಾಣ್ತ ಮಾರ್ದೂದಲ್ಲಿರ ಹೆಂಡದಂಗಡಿಲಿ ಲಾಟೀನ್ ಬೆಳಕು ಇಲ್ಲಿ, ಯಾರು ಹೋದ್ರು ಯಾರ್ ಬಂದ್ರು ಗೊತ್ತಾಗದ ಹೊತ್ತು ಈ ಅಯ್ನೋರು ಅತ್ತಿಂದಿತ್ತ ಇತ್ತಿಂದತ್ತ ತಿರುಗಾಡ್ತ ಬೀಡಿ ಸೇದ್ತ ಎಳೆಯೋ ದಮ್ಮು ದಮ್ಮಿಗೂ ಬೀಡಿ ಮೊನೆಲಿ ಬೆಂಕಿನುಂಡೆ ಕಾಣ್ತಿತ್ತು ಅರೆ ಹೆಂಡದಂಗಡಿಲಿ ಜಗಳ ಅಯ್ನೋರು ದಿಟ್ಟಿಸಿ ನೋಡ್ದಾಗಾಯ್ತು ನಂಗು ದಿಗಿಲು ಯಾರ ಈ ಜಗಳ ಮಾಡ್ತ ಇರದು? ಆ ದನಿಯ ಎಲ್ಲೊ ಕೇಳಿರ ನೆಪ್ಪು ಆ ದನಿ ಜೋರಾಯ್ತು ಅರೆ […]

ಪಂಜು ಕಾವ್ಯಧಾರೆ

ಗಜಲ್ ಕಣ್ಣು ಬೇರಸಿ ಬಿಡು ಏಕಾಂತದ ಸುಖ ಸಿಗಲಿ ಸಖ ಮನಸಿನ ಸಂಭ್ರಮಕೆ ಸುಖ ತುಂಬಿ ಬರಲಿ ಸಖ ಯಾರ ಸಲುವಾಗಿ ಬದುಕು ನೊಂದಿತ್ತು ಅವರೆ ಆನಂದಿಸಲಿ ಇಬ್ಬರು ಕಳೆದ ಕತ್ತಲೆಗೆ ನೆನಪುಗಳ ಬೆಳಕು ಬರಲಿ ಸಖ ಗಿಡ ಮರ ಬಳ್ಳಿಗಳು ಹೂವ ಚೆಲ್ಲಿ ನಿಂತಿವೆ ನಮ್ಮೊಲವಿನ ಮಾತು ಸವಿಯಲು ಮೌನ ಮುರಿದು ಹೂವಿನ ಹಾಸಿಗೆ ಮೇಲೆ ನಡೆದು ಹೋಗಲಿ ಸಖ ಕಾಡಿ ಜೀವ ಹಿಂಡಿ ಜಾತಿಯ ಕೆಂಬಣ್ಣ ಹಚ್ಚಿ ಅಡ್ಡಗೋಡೆ ಕಟ್ಟಿದರು ವೈಭವದ ಮೆರವಣಿಗೆಯಲಿ ಬಂದು […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 13 & 14): ಎಂ. ಜವರಾಜ್

೧೩- ಬಿಸ್ಲು ಬಿಸ್ಲು ಏನಪ್ಪಾ ಬಿಸ್ಲು ಉಸ್ಸ್… ಅಲಲಲಾ ಏಯ್,  ಮಲ್ಗಿ ನಿದ್ರಾ ಮಾಡ್ತ ಇದ್ದಯ ಎದ್ರು ಮ್ಯಾಕ್ಕೆ.. ಬೆಚ್ಚಿ ಬೆರಗಾಗಿ ಒರಗಿದ ಕಂಬದಿಂದ ತಲೆ ಎತ್ತಿದೆ ಮಂಪರಿಡಿದ ಕಣ್ಣು ತೆರೆಯುತ್ತ ಎದುರು ದಿಟ್ಟಿಸಿದೆ ಫಳಾರ್ ಮಿಂಚಾಯ್ತಲ್ಲಾ.. ಅಯ್ನೋರ್ ಮಲ್ಗಿ ನಿದ್ರ ಮಾಡ್ತ ಒದ್ದಾಡ್ತ ನಾ ಬೆಂಕಿ ಬಿಸುಲ್ಲಿ ನರಳಾಡ್ತ ಇದ್ರ ನೀ ಸುಖವಾಗಿ ನಿದ್ರ ಮಾಡ್ತ ಇದ್ದಯ ನಾನೇನು ದೆವ್ವುಕ್ಕು ಭೂತುಕ್ಕು  ಹೇಳವ್ನು ಅನ್ಕಂಡಿದ್ದಯ.. ಇಲ್ಲ ಹೇಳು ಚೂರು ಮಂಪ್ರಾಯ್ತು.. ಅದೆ ಅಯ್ನೋರು ಮರದ ಕೆಳಗೆ […]

ಪಂಜು ಕಾವ್ಯಧಾರೆ

ಪ್ರಶ್ನೆ ನಾನು ಸತ್ತಿರುವೆನೆಂದು ಏಕೆ ಅಳುತ್ತಿರುವಿರಿ..? ನಿಮ್ಮ ರೋಧನ ನನಗೆ ಕೇಳುತ್ತಿದೆ ನಿಮ್ಮ ಮನದ ನೋವು ನನಗೆ ಅರ್ಥವಾಗುತ್ತಿದೆ ನಿಮ್ಮ ಕಣ್ಣೀರ ಹನಿಗಳನ್ನು ನಾನು ಬಾಚಿ ತಬ್ಬಿಕೊಳ್ಳುತ್ತಿರುವೆ ನಾನು ಸತ್ತಿರುವೆನೆಂದು ಏಕೆ ಅಳುತ್ತಿರುವಿರಿ..? ಗೋಡೆಗೆ ಭಾರವಾಗಿರುವ ಭಾವಚಿತ್ರದಲ್ಲಿ ನಾನಿರುವೆನೇನು? ಅಥವಾ ಆಗಸದೆತ್ತರದ ಕಲ್ಲು ಮನುಷ್ಯನೊಳಗೆ ಅಡಗಿ ಕುಳಿತಿರುವೆನೇನು ನಾನು..? ಅಥವಾ ನೀವೆ ಕಟ್ಟಿದ ಭಾರವಾದ ಸಮಾಧಿಯೊಳಗೆ ಕಣ್ಮುಚ್ಚಿ ಮಲಗಿರುವೆನೇನು ನಾನು..? ನಾನು ಸತ್ತಿರುವೆನೆಂದು ಏಕೆ ಅಳುತ್ತಿರುವಿರಿ..? ನನ್ನ ದೇಹದ ಕಣ ಕಣದ ಉಸಿರು ನಿರ್ಮಲ ವಾತಾವರಣ ಸೇರಿದೆ […]

ಕೊರೋನ ಕವಿತೆಗಳು

ಮನೆಯಲ್ಲೇ ಇರಿ ಬಂಧಿಯಾಗಿಬಿಡಿ.. ಚಂದದಿ, ಇಪ್ಪತ್ತೊಂದು ದಿನ ವ್ರತದಂದದಿ.. ಮನೆಯೊಳಗೆ ಮನಸೊಳಗೆ…. ನಿಮಗಾಗಿ, ನಮಗಾಗಿ, ಭಾರತಕ್ಕಾಗಿ ಮನೆಯಲ್ಲೇ ಇರಿ, ಮುದದಿ… ಇದ್ದು ಮಹಾನ್ ಆಗಿರಿ.. ಭಾರತೀಯರೇ ಅಂದು ಗಾಂಧಿ ಕರೆಗೆ ಬ್ರಿಟಿಷರ ಅಟ್ಟಲು ಮನೆ ಬಿಟ್ಟಿರಿ… ಇಂದು ಮಾರಿ ಕರೊನಾ ಅಟ್ಟಲು ದಯಮಾಡಿ ಮನೆಯಲ್ಲೇ ಇರಿ… ಇದ್ದು ಬಿಡಿ ಮನೆಯಲ್ಲೇ ವಿನಂತಿಸುವೆ… ವಿಷಕ್ರಿಮಿಯ ಮೆಟ್ಟಲು. ತುಸುದಿನ ನಿಮ್ಮ ಮನೆಗಳಲ್ಲಿ ನೀವೇ ರಾಜರಾಗಿರಿ, ಆಳಿರಿ, ಆಡಿರಿ, ಓದಿರಿ‌.. ತೊಳೆಯಿರಿ, ತೆರೆಯಿರಿ ಮನವ ಹೊಸ ಆಲೋಚನೆಗೆ…. ಆವಿಷ್ಕಾರಕೆ, ಸಾತ್ವಿಕ ಸಂಯಮಕೆ… […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 11 & 12): ಎಂ. ಜವರಾಜ್

೧೧- ಅಲಲಲಲೇ ಇದೇನ ಇದು ಗರಿಗರಿ ಪಿಲ್ಲ ಪಂಚ ಜಾರ್ತ ನನ್ನ ಮೈನ ಸೋಕ್ತ ಮಣಮಣನೆ ಮಾತಾಡ್ತ ಬೀದಿ ಧೂಳ ತಾರುಸ್ತ ಏಳುಸ್ತಲ್ಲೊ.. ‘ನೀ ಯಾವೂರ್ ಸೀಮೆನಪ್ಪ ನೀ ಯಾಕ ಈ ಅಯ್ನೋರ್ ಕಾಲ್ಗಾದೆ ನಾ ಈ ಅಯ್ನೋರ ಸೊಂಟ ಸೇರಿ ನೋಡಬಾರದ ನೋಡ್ದಿ ಕೇಳಬಾರದ ಕೇಳ್ದಿ ಶಿವಶಿವ ಆ ನೀಲವ್ವೋರ ನೋಡ್ದೆಯಲ್ಲೊ ನಾ ನೋಡ್ದೆ ಇರ ಜಿನ್ವೆ ಇಲ್ಲ ನಾ ಕೇಳ್ದೆ ಇರ ಜಿನ್ವೆ ಇಲ್ಲ’ ಅಂತಂತ ಮಾತಾಡ್ತಲ್ಲೊ… ನಾ ಕೇಳ್ತ ನೀಲವ್ವೋರು ಕಣ್ಮುಂದ ಬರ್ತಾ […]