Facebook

Archive for the ‘ಕಾವ್ಯಧಾರೆ’ Category

ಪಂಜು ಕಾವ್ಯಧಾರೆ

ಮಳೆ – ಇಳೆ ಮಳೆಯ ಹನಿಗೆ ಇಳೆಯು ನಡುಗಿದೆಎದೆಯ ಗೂಡಿಗೆ ಮನವು ಮಿಡಿದಿದೆಹಸಿರು ತೋರಣವ ತೊಳೆದು ಬೆಳಗಿದೆಮನಕೆ ಮುದವ ತಂದು ಹಿತವಾಗಿದೆ ಬೀಸುವ ತಂಗಾಳಿ ನಿನ್ನ ನೆನಪಿಸಿದೆತೋಳು ಬಯಸಿ ಕೈಬೀಸಿ ಕರೆದಿದೆಬಂದು ಸೇರುವ ಬಯಕೆ ಮನದಲಿ ನೆಟ್ಟಿದೆಪಿಳಿಪಿಳಿಸುತ ಕಣ್ಣದೃಷ್ಟಿ ನಿನ್ನತ್ತಲೇ ನಾಟಿದೆ. ನೆನಪು ಬರಿಸುತ ತಿಳಿಗಾಳಿ ಚೇಡಿಸುತಿದೆಮಳೆಯ ಹನಿಯೂ ಸಾತ್ ನೀಡುತಿದೆಬಾ ಎನ್ನ ಬಳಿಗೆ ಹೇ… ಜೀವ ಒಲವೆಮೋಡ ಸರಿದು ಬಾನು ಭೂಮಿ ಒಂದಾಗಿವೆ. ನಿನ್ನಿಧ್ವನಿ ಕೇಳದೆ ಕರ್ಣಪಟಲವೇ ಮಂಕಾಗಿದೆನಿನ್ನಿನಿಯನ ಮನವು ಕಾದು ಕಾದು ಸೋತಿದೆಕಣ್ಣ ಕಾಂತಿಯಲೇ […]

ಪಂಜು ಕಾವ್ಯಧಾರೆ

ಮಣ್ಣಿನ ಮಮತೆ ಹೆತ್ತತಾಯಿ ಉದರದಲ್ಲಿಜನಿಸಿದ ನಾವೇ ಭಾಗ್ಯವಂತರುಈ ಪುಣ್ಯಭೂಮಿಯಲ್ಲಿಬೆಳೆದ ನಾವೇ ಪುಣ್ಯವಂತರು ಹಚ್ಚ ಹಸಿರು, ಚಿನ್ನದಂತಹ ಪೈರುತೊನೆದಾಡುವುದ ನೋಡಿರಿಬಣ್ಣಬಣ್ಣದ ಸುಮಗಳಿಂದಅರಳಿದ ಲತೆಯ ಕಾಣಿರಿ ಖಗ ಮಿಗಗಳು‌ ನೇಹದಿಂದಕಾಡಿನಲಿ ಬಾಳುತಿವೆಹಕ್ಕಿಗಳ ಕಲವರಕೆಎನ್ನೀ ಮನ ಸೋಲುತಿದೆ ಜನನ ಇಲ್ಲೇ ಮರಣ ಇಲ್ಲೇಅಪ್ಪಿಕೊಳ್ವುದು ಭೂಮಿಯುಆಡಿ ಕುಣಿದು ಬೆಳೆದ ಎಮ್ಮಕೈಬಿಡಳು ಭೂಮಿ ತಾಯಿಯು ಬೆಳೆಬೆಳೆವ ರೈತರುಭೂತಾಯಿಗೆ ನಮಿಸುವರುಕಷ್ಟ ನಷ್ಟವ ಎಲ್ಲವನುಸಮನಾಗಿ ಕಾಣ್ವರು ಮಣ್ಣಿನ ಮಮತೆಯ ಎಂದಿಗೂಮರೆಯಲಾಗದು ಗೆಳೆಯಾಈ ಮಣ್ಣಿನ ಋಣವ ಎಂದಿಗೂತೀರಿಸಲಾಗದು ಗೆಳೆಯಾ –ಸಿಂಧು ಭಾರ್ಗವ್ ಜೀವನ ಚಕ್ರ…..! ಕದಿಯಲು ಬಂದ ಕಳ್ಳನಿಗೆಶ್ರೀಮಂತನಾಗುವ […]

ಪಂಜು ಕಾವ್ಯಧಾರೆ

ಬೆನ್ನುಬಿದ್ದ ಕರಾಳರಾತ್ರಿಯ ದಿನಚರಿ ಅಂದು ಮಧ್ಯಾಹ್ನದ ಕಡು ಬಿಸಿಲಿನಲ್ಲಿ ಹಜ್ಜೆಗಳ ಪಕ್ಕ ಹೆಜ್ಜೆಗಳನ್ನು ಇರಿಸಿ ಎಲ್ಲ ಪ್ರೇಮಿಗಳ ಉದಾಹರಣೆಯೊಂದಿಗೆ ಊರ ಮಧ್ಯ ಹೋಗುತ್ತಿದ್ದರೆ; ಯಾರೋ ಬೊಗಳಿದಂತೆ ಅಂಜುವ ಮಾತಿಲ್ಲ, ಆದರೆ ಸ್ವಲ್ಪ ಕಸಿವಿಸಿ ಲೋಕದಲ್ಲಿ ನಾಯಿಗಳು ಬೊಗಳುವದು ಸಹಜ ಅಂಜುವದೇಕೆ…? ಮುಂದೆ ಮುಂದೆ ಹೆಜ್ಜೆ ಹಾಕಿ, ಹಿಂದೆ ಹಿಂದೆ ನೋಡಿದಷ್ಟು ಗಾಢವಾದ ಭಯವು ಬೆನ್ನು ಏರಿ ಕುಳಿತಿದೆ ಪಕ್ಕದಲ್ಲಿ ಪ್ರೇಮಜ್ವಾಲೆ ಉರಿಯುವಾಗ ಯಾವ ಭಯವು ಎಷ್ಟು ಗಟ್ಟಿಗೊಳ್ಳುವದು ಕಗ್ಗತ್ತಲು ಆವರಿಸಿದ ಈ ವರ್ತುಲದಲ್ಲಿ ಎಲ್ಲವೂ ಅಡಕವಾಗಿವೆ ಸಾಕ್ಷೀಕರಿಸಲು […]

ಪಂಜು ಕಾವ್ಯಧಾರೆ

ಹಸಿರುಬನದ ಹಬ್ಬ ಧರೆಯ ದಣಿವಿಗೆ ಮಳೆಯ ಹನಿಯ ಸಾಂತ್ವನ ಹಕ್ಕಿಗಳ ಕೊಳಲಧ್ವನಿಗೆ ಧರೆಯ ನರ್ತನ .. ಅರಳಿತೊ ಮೋಡಗಳ ಒಲವ ಸುರಿಯುವ ಮೈಮನ.. ವರ್ಷಧಾರೆಗೆ ಚಿಗುರಿನ ಕಂಪನ..! ಮಣ್ಣ ಆಳದಿ ಬೆಚ್ಚಗೆ ಮಲಗಿದ ಬೀಜಕೆ ಎಚ್ಚರವೀಗ ಕಣಕಣ ಮಣ್ಣ ಸರಿಸಿ ಚಿಗುರಿತು ನೋಡು ಅದೆಷ್ಟು ಚೆನ್ನ ಮುತ್ತಿಕ್ಕಿತು ಮಳೆಹನಿಯೊಂದು ಬೀಜದ ಗರ್ಭದಿಂದ ಚಿಗುರೆಲೆಯ ಆಗಮನ..! ಜಲಲ ಜಲಧಾರೆಗಳ ಕಾಲ್ಗೆಜ್ಜೆಗಳ ನಾದ ಜುಳು ಜುಳು ಹರಿಯುವ ನದಿ ಅಲೆಗಳ ಧ್ವನಿಯೆ ವೇದ.. ಧುಮ್ಮಿಕ್ಕುವ ಮಳೆಯಲಿ ಸಾಗರದೊಡಲಿಗೆ ನವವಧುವಿನಂತೆ ನದಿಗಳ […]

ಪಂಜು ಕಾವ್ಯಧಾರೆ

ಅಂತ್ಯವೆಲ್ಲಿ? ತೋಳ ತೆಕ್ಕೆಯಲಿಲ್ಲದ ಕಾಣದ ನೋಟ ಆದರೂ ಹಠ ಬಿಡದ ಭಯಂಕರ ಸಾವು-ನೋವು ಮಂದಗತಿಯಲಿ ಹೊಗೆ ಉರಿಯುತ್ತಿದೆ ಬೆಂಕಿ ಅಡಗಿದೆ ಗಾಳಿ ಸೋಕಿ ಸೋಂಕು ಎನಿಸಿಕೊಂಡಿದೆ ಮನೆಯಲ್ಲಿ ಬೀಗ ಜಡಿದಿದ್ದಾರೆ ನೆರೆಯವರು ಗುಸುಗುಸು ಸನಿಹವಂತೂ ಸುಳಿಯೋದೆ ಇಲ್ಲ ಯಾರೂ …ಬೆಳಕು, ಗಾಳಿ, ಕತ್ತಲು ಬಂಧುಗಳಿಲ್ಲ, ಹೆಂಗಳೆಯರು ಎಲ್ಲೋ ತಾಯ್ಮನೆ ನೆನೆಸುತ್ತಿದ್ದಾರೆ ಆದರೆ ಬರಲೊಲ್ಲದ ಸಮಯ ಬೇಲಿ ಹಾಕಿದ್ದಾರೆ ಸರ್ಕಾರದವರು ನಮ್ಮ ಒಳಿತಿಗೆ ಅಲ್ಲವೇ? ಮನೆಯ ಬಾಗಿಲ ದಾರಂದರ ಪಟ್ಟಿಯೊಳಗೆ ಹಸಿ ಬಟ್ಟೆಯ ಸುಳಿವಿಲ್ಲ ರಂಗೋಲಿ, ಒಲೆಗೆ ಬೆಂಕಿ […]

ಪಂಜು ಕಾವ್ಯಧಾರೆ

ಬೆಳಕಾದವರಿಗೆ ನಮಸ್ಕಾರ… ಮೊದಲು ತಾಯಿಗೆ ಜನ್ಮ ಕೊಟ್ಟ ತಂದೆಗೆ ಎರಡೂ ಕಣ್ಣು ಕೊಟ್ಟ ದೇವರಿಗೆ ಭೂಮಿಯಿಂದ ಜನಿಸಿದಾಗ ಸುತ್ತಾ ಮುತ್ತಾ ಪಸರಿಸಿತ್ತು ಪ್ರೀತಿ ಪ್ರೇಮದ ಗಂಧ ಪ್ರೀರಿಗೊಂದು‌ ಅರ್ಥ ಕೊಟ್ಟು ರೂಪ ಕೊಟ್ಟ ತಾಯಿಗೆ ಸಹನೆಯೆಂಬ ಜೇನು ಸುರಿದು ಬರಗಾಲ-ಉಳಿಗಾಲ-ಅಳಿಗಾಲದಲ್ಲೂ ಗರಿಕೆಯ ರಸಕುಡಿಸಿ ಭರವಸೆಯ ಬೆಳಕಾದ ತಾಯಿಗೆ ಗರಿಕೆಯೊಳಗೆ ಜೀವವಾಗಿ ಉಸುರು ತುಂಬಿ ತಾಯಿ ಮಗುವ ತಬ್ಬಿದ ತಂದೆಗೆ ಯಾವ ಭೂಮಿ ಎಲ್ಲಿಯ ಜಲ ಆಕಾಶವೆಂಬುವುದು ನಿತ್ಯಜನ್ಯಲೋಕ ಅರಿವಿನ ಕಿರಣ ಕೊಟ್ಟ ಗುರುವಿಗೆ ಬೆಳಕಾದ ಮನದಿಂದ ನಮಸ್ಕಾರ […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 35 & 36): ಎಂ. ಜವರಾಜ್

-೩೫- ‘ದೊಡ್ಡವ್ವವ್..’ ಎದುರು ಮನ ಪಡ್ಸಾಲ್ಲಿ ಕುಂತು ಎಲ ಅಡ್ಕ ಹಾಕತ ಅಯ್ನೋರ್ ದನಿ. ಆ ದನಿಗ, ‘ಕುಸೈ ಒಳ್ಳಿ ಕೆಲ್ಸ ಮಾಡ್ದ ಬುಡು ಊರು ಸುಮ್ನಿದ್ದಾ.. ಈ ವಯ್ಸಲಿ ಇದ್ಯಾನ ಹಿಂಗಾ.. ನೀಲ ಒಳ್ಳೋಳೆ ಆದ್ರ ಹಣಬರ ಇರ್ಬೇಕಲ್ಲ ಬುಡು ಈಗೇನ ಶಂಕ್ರಿಲ್ವ.. ಸಾಕು ಬುಡು ಹೆಂಗು ಅವ್ನುಗು ಗಂಡಾಗದ ವಂಶ ಹೆಸರೇಳಕಾದ್ರು ಆಯ್ತಲ್ಲ ಬುಡು’ ‘ದೊಡ್ಡವ್ವವ್ ಸುಮ್ನಿದ್ದಯ.. ಕುಲ್ಗೆಟ್ಟವೆಲ್ಲ ನನ್ ವಂಶನಾ..’ ‘ಮೊಗ ಅವ ಕುಲ್ಗೆಟ್ಟ ಹೆಣ್ಣೇ ಇರಬೋದು ನಿನ್ ರಕ್ತ ಕುಲ್ಗೆಟ್ಟೊಗಿದ್ದಾ.. ಶಂಕ್ರನ್ […]

ಪಂಜು ಕಾವ್ಯಧಾರೆ

ಖಾಲಿಯಿದೆ… ಈಗಲೂ ನನ್ನೀ ಹೃದಯ ನೆತ್ತರು ಚಿಮ್ಮುತಿದೆ ನಿತ್ಯವೂ ಮಿಡಿಯುತಿದೆ ಬದುಕಿಗಾಗಿ ತುಡಿಯುತಿದೆ ಹೃದಯವಿನ್ನೂ ಖಾಲಿಯಿದೆ ದಣಿವಿಲ್ಲ ಗುರಿಯಿಲ್ಲ ಕನಸೇಕೋ ಕಾಡುತಿಲ್ಲ ಯಾವುದೋ ನೋವಿನಲ್ಲಿ ಹೇಳಲಾರೆ ದನಿಯಿಲ್ಲ ಯಾತರದ್ದೋ ಗೊಣಗಾಟ ಯಾತಕ್ಕಾಗಿಯೋ ಹೆಣಗಾಟ ಹಾರಿ ಹೋಗದು ಜೀವ ತೂರಾಡುತಿಹುದು ಭಾವ ಬೀಸುತಿದೆ ಬಿರುಗಾಳಿ ಹೃದಯವಂತೂ ಖಾಲಿಯಿದೆ ಏನ ಬಯಸಿ ಸೋಸುತಿಹುದು ಜೀವ ಹಿಡಿಯಲಾಗದೇನೋ ಮನದ ನೋವಾ ದಕ್ಕುವುದೇ ಎಂದಿಗಾದರೂ ಪ್ರೇಮಾಮೃತಪಾನ ಹೃದಯವು ಸದಾ ಖಾಲಿಯೇ ಖಾಲಿ ಕಾವಲಿಯ ಕಾವಲಿಗೆ ನಿಂತು ಮಾಡುವುದೇನು ಹೃದಯವೀಗಲೂ ಖಾಲಿ ಖಾಲಿ –ಚಿನ್ನು […]

ಪಂಜು ಕಾವ್ಯಧಾರೆ

ಮೌನದ ಮನ ಮೌನವಾಗದಿರು ಮನವೇ ಮೊದಲಿಸುವ ಮುಖಗಳ ಕಂಡು ಇದು ನಿನ್ನ ಜೀವನವೇ.. ಕಾಯಕದಲಿ ಹಗಲಿರುಳು ಶ್ರಮಿಸು ಕಿವಿಗೊಡದಿರು ಎಡರು ತೊಡರಿಗೆ ನಿನ್ನೊಳಗಿನ ಮುಕ್ತಿ ಪ್ರಹರಿಸು ಸೋತನೆಂದು ಅಳದಿರು ಗೆದ್ದನೆಂದು ಬೀಗದಿರು ಸಾಧನೆಗೆ ದಾರಿಗಳು ನೂರಾರು ನಡೆವ ದಾರಿಲಿ ಕಲ್ಲು ಮುಳ್ಳುಗಳು ಬರಿ ನೋವ ಅಣಕು ತುಣುಕುಗಳು ಚಿಮ್ಮುತ ಬರಲಿ ನಿನ್ನೊಳಗಿನ ಆವಿಷ್ಕಾರಗಳು –ಹರಾಸು ಮನುಷ್ಯರಿಲ್ಲದ ಬೀದಿಯಲ್ಲಿ… ಮನುಷ್ಯರಿಲ್ಲದ ಬೀದಿಯಲ್ಲಿ ಮನಸು ಅಲೆಯುತ್ತಿತ್ತು ಮನುಷ್ಯನ ಕುಕೃತ್ಯ ಅಲ್ಲಿಲ್ಲಿ ಅವುಗಳ ಕಲೆ ಎಷ್ಟು ಮಳೆ ಸುರಿದರೂ,ಗಂಧ ಲೇಪಿಸಿದರೂ ಶತಮಾನ […]

ಪಂಜು ಕಾವ್ಯಧಾರೆ

ಹರಿದ್ರ ಕುಂಕುಮ ಶೋಭಿತಳಾದವಳಿಗೆ ಅದಕ್ಕಿಂತ ಬೇರೆ ಐಶ್ವರ್ಯ ಇಲ್ಲ ಅವನು ಹಾಕುವ ಮೂರುಗಂಟಿಗೆ ತಾನು ಬೆಳದ ಪರಿಸರ ತೊರೆಯುವಳಲ್ಲ ತಾಂಬೂಲದ ಮೇಲೆ ಕಾಸಿಟ್ಟು ಧಾರೆಯೆರೆಯುವರಲ್ಲ ತಂದೆಯ ಪ್ರೀತಿ ತಾಯಿಯ ವಾತ್ಸಲ್ಯ, ಒಡಹುಟ್ಟಿದವರ ಮಮತೆಯ ಕುಡಿಯನ್ನು ಇನ್ನೂ ನಿನಗೆ ಸ್ವಂತವೆಂದು ದೈವಸಾಕ್ಷಿಯಾಗಿ ಒಪ್ಪಿಸಿದರಲ್ಲ…. ಸಪ್ತಪದಿಯ ತುಳಿದು ತವರು ಮನೆಯ ನೆನಪಿನೊಂದಿಗೆ ತನ್ನ ಮನೆ ಸೇರುವಳಲ್ಲ ಗಂಡನ ಮನೆಯ ಸುಖ ಶಾಂತಿ ನೆಮ್ಮದಿ ಬಯಸಿ ತನ್ನ ತನವನ್ನು ಬದಿಗಿರಿಸಿ ಮನೆಗಾಗಿ ದುಡಿಯುವಳಲ್ಲ ಅತ್ತೆ ಮಾವನಿಗೆ ಮಗಳಂತೆ ಸೇವೆಮಾಡಿ ಗಂಡ ಮಕ್ಕಳ […]