Facebook

Archive for the ‘ಕಥಾಲೋಕ’ Category

ಒಂದು ನಾಯಿಮರಿಗಾಗಿ….: ಜೆ.ವಿ.ಕಾರ್ಲೊ

ಅಂದು ಸಂಜೆ ಲಂಡನಿನಲ್ಲಿ ಮೈ ಕೊರೆಯುವಂತ ಚಳಿ. ಬಸ್ಸಿನೊಳಗೆ ಹಲ್ಲು ಕಚ್ಚಿಕೊಂಡು ಮುದುಡಿ ಕುಳಿತಿದ್ದ ಪ್ರಯಾಣಿಕರಿಗೆ ಯಾರೋ ಎಡೆಬಿಡದೆ ಚೂರಿಯಿಂದ ಕೊಚ್ಚುತ್ತಿರುವಂತ ಅನುಭವವಾಗುತ್ತಿತ್ತು. ಸದ್ದು ಮಾಡುತ್ತಾ ರೊಂಯ್ಯನೆ ಬಸ್ಸಿನೊಳಗೆ ನುಗ್ಗುತ್ತಿದ್ದ ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಜನ ಹರಸಾಹಸ ಪಡುತ್ತಿದ್ದರು. ಬಸ್ಸು ಮುಂದಿನ ಸ್ಟಾಪಿನಲ್ಲಿ ನಿಂತಾಗ ಇಬ್ಬರು ಮಹಿಳೆಯರು, ಮತ್ತೊಬ್ಬ ಪುರುಷ ಬಸ್ಸು ಹತ್ತಿ ಖಾಲಿ ಇದ್ದ ಸೀಟುಗಳಲ್ಲಿ ಆಸೀನರಾದರು, ಮಹಿಳೆಯರಲ್ಲಿ ಒಬ್ಬಾಕೆಗೆ ಅಷ್ಟೇನೂ ವಯಸ್ಸಾಗಿರಲಿಲ್ಲ. ಆಕೆ ಸೀಲ್ ಚರ್ಮದ ಕೋಟು ಧರಿಸಿದ್ದಳು. ಅಂದಿನ ಮೇಲ್ಮಧ್ಯಮ ವರ್ಗದ ಸ್ತ್ರೀಯರ […]

ಕತ್ತಲ ಗುಮ್ಮ: ಶೀಲಾ ಗೌಡ

ಕಾಲೇಜ್, ಟುಟೋರಿಯಲ್ಸ್, ಟೆಸ್ಟ್, ಪರೀಕ್ಷೆ ಬರೀ ಇದೇ ಆಗಿದೆ ನಮ್ಮ ದೈನಂದಿನ ಕೆಲಸ. ಬೇಜಾರು ಮಾಡಿಕೊಳ್ಳೋ ಹಾಗಿಲ್ಲ, ಅಕಾಸ್ಮಾತ್ತಾದರೂ ಹೇಳುವ ಹಾಗಿಲ್ಲ. ಅಪ್ಪಿ ತಪ್ಪಿ ಹೇಳಿದರೆ ಕೇಳಿದವರ ಪುಕಸಟ್ಟೆ ಭೋದನೆ ಜೊತೆಗೆ ನಗು ಮೊಗದಿಂದ ಆಲಿಸುವ ಶಿಕ್ಷೆ. ಒಟ್ಟಿನಲ್ಲಿ ಓದೋ, ಮಾರ್ಕ್ಸ್ ತೆಗೆಯೋ ರೇಸಿನಲ್ಲಿ ಓಡ್ತಿದಿವಿ. ಹೀಗೆ ತಮ್ಮ ಬೇಸರವನ್ನು ಹಂಚಿಕೊಳ್ಳುತ್ತ ಟುಟೋರಿಯಲ್ಸ ಕಡೆ ಹೆಜ್ಜೆ ಹಾಕುತಿದ್ದರು ಐವರು ಗೆಳೆಯರು. ಅರವಿಂದನ ಹಾಗೆ ನಾವೆಲ್ಲ ಡಿಪ್ಲೋಮ ಮಾಡಬೇಕಿತ್ತು ಹೀಗೆ ಒಂದೆ ಸರಿ ಟೆನ್ನಷನ್ ಇರ್ತಿರ್ಲಿಲ್ಲ ಎಂದ ಸುನಿಲನ […]

ಸಾಲ: ಅನಂತ ರಮೇಶ್

1 ಹದಿನೈದು ವರ್ಷಗಳಿಂದ ಅಭ್ಯಾಸವಾಗಿ ಹೋಗಿದೆ. ಲತಾಳ ಅದೇ ವ್ಯಂಗ್ಯದ ಮಾತು. “ಸಾಹೇಬರ ಸವಾರಿ ಈವತ್ತು ಯಾವ ಕಡೆಗೆ?”. ನಾನು ಉತ್ತರಿಸುವ ಗೊಡವೆಗೆ ಹೋಗುವುದಿಲ್ಲ. ತಿಂಡಿಯೊಟ್ಟಿಗೆ ಕಾಫಿ ಲೋಟ ಟೇಬಲ್‌ಮೇಲೆ ಬಡಿಯುತ್ತಾಳೆ. ಸಾವಕಾಶ ತಿಂದು ಹೊರಡುತ್ತೇನೆ. ಆ ಸಮಯ ಮೀರುವುದಿಲ್ಲ. ಈಗ ಬೆಳಗಿನ 9:30. ಸಾಮಾನ್ಯವಾಗಿ ಎಲ್ಲರೂ ಆಫೀಸಿಗೆ ಹೊರಡುವ ಸಮಯ! ಹೊರಗೆ ರಸ್ತೆಯಲ್ಲಿ ನಡೆಯುವಾಗ, ಲತಾಳ ಬಗೆಗೆ ಕನಿಕರ ಅನ್ನಿಸುತ್ತೆ. ಅವಳಾದರೂ ಏನು ಮಾಡಿಯಾಳು? ನನಗಂತೂ ತಿಂಗಳಿಗೊಮ್ಮೆ ಸಂಬಳ ತರುವ ಕೆಲಸವಿಲ್ಲ. ಯಾವುದಾದರೂ ಮನೆ ಬಾಡಿಗೆ, […]

ಇಳಾ: ಗಿರಿಜಾ ಜ್ಞಾನಸುಂದರ್‌

“ಪಿಂಕಿ, ಬಬ್ಲೂ ಬನ್ನಿ ಮನೆಗೆ… ತುಂಬ ಹೊತ್ತಾಗಿದೆ.. ಆಶಾ ಆಂಟಿ ಮನೆಗೆ ಬಂದ್ರೆ ನಿಮಗೆ ಏನು ಬೇಡ” ಅಂತ ತಮ್ಮ ಮಕ್ಕಳನ್ನು ಕರೆದುಕೊಂಡು ಹೋದಳು ಪಿಂಕು ಬಬ್ಲೂ ಅಮ್ಮ. ಆಗಲೇ ರಾತ್ರಿ ಎಂಟು ಗಂಟೆ ಆಗಿದೆ… ಇನ್ನೊಂದು ಹತ್ತು ನಿಮಿಷಕ್ಕೆ ಇನ್ನು ಆಶಾ ಆಂಟಿ ಮನೆಯಲ್ಲಿ ಉಳಿದುಕೊಂಡಿದ್ದ ೫- ೬ ಮಕ್ಕಳನ್ನೆಲ್ಲ ಅವರವರ ಮನೆಯವರು ಕರೆದುಕೊಂಡು ಹೋದರು. ಆಶಾ ಎಲ್ಲ ಮಕ್ಕಳು ಹೋದಮೇಲೆ ಸಪ್ಪೆ ಮುಖ ಹಾಕಿಕೊಂಡು ಕುಳಿತಿದ್ದಳು. ಮನೆಯೆಲ್ಲ ಚಾಕಲೇಟ್ ಪೇಪರ್ಸ್, ತಿಂಡಿ ತಿನಿಸುಗಳನ್ನು ಚೆಲ್ಲಿ […]

ಸೇತುವೆ….: ಸತೀಶ್ ಶೆಟ್ಟಿ ವಕ್ವಾಡಿ.

ಅದು ಶರದೃತುವಿನ ಬೆಳಗಿನ ಜಾವ. ಮುಂಗಾರಿನ ಮೋಡಗಳು ತೆರೆಮರೆಗೆ ಸರಿದು ಆಕಾಶ ಶುಭ್ರವಾಗಿತ್ತು. ಹುಣ್ಣಿಮೆಯ ದಿನವಾಗಿದ್ದರಿಂದ ಚಂದಿರ ಬೆಳ್ಳಿಯ ಬಟ್ಟಲಂತೆ ಸುಂದರವಾಗಿ ಕಾಣಿಸುತ್ತಿದ್ದ. ಮೋಡಗಳ ಸವಾಲುಗಳಿಲ್ಲದ ಕಾರಣ ತಾರೆಗಳು ಇಡೀ ಆಗಸವನ್ನು ಆಕ್ರಮಿಸಿ ತಮ್ಮ ಆಧಿಪತ್ಯ ಸ್ಥಾಪಿಸಿ, ಭಾನ ತುಂಬೆಲ್ಲಾ ಬೆಳಕಿನ ಸರಪಳಿ ನಿರ್ಮಿಸಿದ್ದವು. ಹುಣ್ಣಿಮೆಯ ಚಂದಿರ, ರಾತ್ರಿಯ ಕತ್ತಲೆಯನ್ನೆಲ್ಲ ತನ್ನ ಒಡಲೊಳಗೆ ತುಂಬಿಕೊಂಡು ಬೆಳದಿಂಗಳ ಮಳೆಯನ್ನೇ ಸುರಿಸುತ್ತಿದ್ದ. ಪಶ್ಚಿಮದಿಂದ ಬೀಸುತ್ತಿದ್ದ ತಂಗಾಳಿ, ನುಸುಕಿನ ಮಂಜಿನ ಹನಿಗಳ ಸಾಂಗತ್ಯದಿಂದ ಚಳಿಯು ಅನ್ನಿಸಿದ ತಣ್ಣನೆಯ ವಾತಾವರಣ ಸೃಷ್ಟಿಸಿತ್ತು. ಮರಗಿಡಗಳ […]

ಪ್ರೇಮನಾದ: ಸುಮ ಉಮೇಶ್

ರಾಧಮ್ಮನವರ ನಂತರ ಬಹಳ ವರ್ಷಗಳ ಮೇಲೆ ಹುಟ್ಟಿದವನೇ ಅವರ ತಮ್ಮ ಸುಧಾಕರ್. ರಾಧಮ್ಮನಿಗೂ ಸುಧಾಕರ್ ಗೂ ಅಂತರ ಹೆಚ್ಚಾಗಿದ್ದರಿಂದ ಅವನನ್ನು ಕಂಡರೆ ಎಲ್ಲರಿಗೂ ಅತೀವ ಪ್ರೀತಿ. ಅಕ್ಕನ ಮುದ್ದಿನ ತಮ್ಮ ಅವನು. ರಾಧಮ್ಮನವರ ಮದುವೆ ಆದಾಗ ಸುಧಾಕರ್ಗೆ ಕೇವಲ ಎಂಟು ವರ್ಷ. ಮದುವೆ ಆದ ವರ್ಷದೊಳಗೆ ರಾಧಮ್ಮ ಹೆಣ್ಣು ಮಗುವಿನ ತಾಯಿ ಆದಾಗ ಎಲ್ಲರಿಗೂ ಸಂತಸ. ರಾಧಳ ತಂದೆ ತಾಯಿಗೆ ದೂರದ ಒಂದು ಆಸೆ ಮೊಳೆಯಲಾರಂಭಿಸುತ್ತದೆ. ಪುಟ್ಟ ಸುರಭಿಯೇ ಮುಂದೆ ಸುಧಾಕರ್ನ ಕೈ ಹಿಡಿದು ಮೊಮ್ಮಗಳು ಮನೆ […]

ಸಾರ್ಥಕ್ಯ: ಡಾ. ಅಜಿತ್ ಹರೀಶಿ

ಎಂದಿನಂತೆ ಊರ ಈಶ್ವರ ದೇವರ ಪೂಜೆ ಮುಗಿಸಿ ಜನಾರ್ದನ ಭಟ್ಟರು ದೇವಸ್ಥಾನದ ಮೆಟ್ಟಿಲಿಳಿಯುತ್ತಿದ್ದರು. ಅಲ್ಲಿಂದ ಕೂಗಳತೆಯ ದೂರದಲ್ಲೇ ಅವರ ಮನೆ. ಪೂಜೆ ಮುಗಿಸಿ ಏಳುವಾಗಲೇ ತಲೆಯಲ್ಲಿ ಏನೋ ಒಂಥರಾ ಭಾರವಾದ ಹಾಗೆ ಅವರಿಗೆ ಅನ್ನಿಸಿತ್ತು. ನಾಲ್ಕು ಹೆಜ್ಜೆ ಹಾಕಿದಾಗ ದೇಹ ತೂಗಿದಂತೆ ಭಾಸವಾಗಿತ್ತು. ಆದರೂ ಅಲ್ಲಿ ಕುಳಿತುಕೊಳ್ಳದೇ ಬೇಗ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಂಡರಾಯಿತು ಎಂದುಕೊಂಡು ಕೊನೆಯ ಮೆಟ್ಟಿಲು ಇಳಿಯುತ್ತಿದ್ದರು. ಇಡೀ ದೇಹವು ಬಾಳೆದಿಂಡನ್ನು ಕತ್ತಿಯಿಂದ ಕಡಿದಾಗ ಬೀಳುವಂತೆ ಕುಸಿದು ಬಿತ್ತು. ಕೆಲ ಕ್ಷಣಗಳ ಮಟ್ಟಿಗೆ ಅವರಿಗೆ […]

ಹಣ್ಣೆಲೆಯ ಹಾಡು: ಗಿರಿಜಾ ಜ್ಞಾನಸುಂದರ್

ಎಳೆ ಬಿಸಿಲು ಅಂದವಾದ ಬೆಳಕು ಬೀರುತ್ತಾ ಎಲ್ಲೆಡೆ ಹರಡುತ್ತಿದೆ. ಅಂಗಳದಲ್ಲಿ ಆರಾಮ ಖುರ್ಚಿಯಲ್ಲಿ ಬಿಸಿಲು ಕಾಯುತ್ತ ಮೈಯೊಡ್ಡಿರುವ ಕೃಷ ದೇಹದ ವೃದ್ಧ ಶ್ರೀನಿವಾಸ. ವಯಸ್ಸು ಸುಮಾರು ೮೯- ೯೦ ಆಗಿರಬಹುದು. ಸುಕ್ಕುಗಟ್ಟಿದ ಮುಖ, ಪೂರ್ತಿ ನರೆತ ಕೂದಲು. ಹಣೆಯಮೇಲೆ ಎದ್ದು ಕಾಣುವ ಗೆರೆಗಳು, ಬೊಚ್ಚು ಬಾಯಿ. ಇಷ್ಟೆಲ್ಲದರ ಮಧ್ಯೆ ಏನನ್ನೋ ಕಳೆದುಕೊಂಡು ಹುಡುಕುತ್ತಿರುವಂಥ ಕಣ್ಣುಗಳು. ತನ್ನ ಮಕ್ಕಳು ಮೊಮ್ಮಕ್ಕಳೊಂದಿಗೆ ಸುಖವಾದ ಜೀವನ ಕಾಣುತ್ತಿರುವ ಹಿರಿಯ ಜೀವ. ದಿನವೂ ವಿಶ್ರಮಿಸುತ್ತ, ತನ್ನ ಹಿಂದಿನ ದಿನಗಳನ್ನು ನೆನೆಯುತ್ತ ಮೆಲುಕು ಹಾಕುವ […]

ಕಣ್ಣಾ ಮುಚ್ಚಾಲೆ..: ಜೆ.ವಿ.ಕಾರ್ಲೊ

ಇಂಗ್ಲಿಶ್ ಮೂಲ: ಗ್ರಹಾಂ ಗ್ರೀನ್ಅನುವಾದ: ಜೆ.ವಿ.ಕಾರ್ಲೊ ಬೆಳಕು ಮೂಡುತ್ತಿದ್ದಂತೆ ಪೀಟರನಿಗೆ ತಕ್ಷಣ ಎಚ್ಚರವಾಯಿತು. ಕಿಟಕಿಯ ಗಾಜಿನ ಮೇಲೆ ಮಳೆ ರಪರಪನೆ ಬಡಿಯುತ್ತಿತ್ತು. ಅಂದು ಜನವರಿ ಐದುಅವನ ಕಣ್ಣುಗಳು ಪಕ್ಕದ ಮಂಚದ ಮೇಲೆ ಮುಸುಕು ಎಳೆದುಕೊಂಡು ಇನ್ನೂ ಮಲಗಿದ್ದ ಅವನ ತಮ್ಮ ಫ್ರಾನ್ಸಿಸನ ಮೇಲೆ ನೆಲೆಗೊಂಡವು. ಅವನಿಗೆ ತನ್ನ ಪ್ರತಿರೂಪವನ್ನೇ ನೋಡಿದಂತಾಯಿತು! ಅದೇ ಕೂದಲು, ಕಣ್ಣುಗಳು, ತುಟಿಗಳು, ಕೆನ್ನೆ.. ಅವನ ತುಟಿಗಳ ಮೇಲೆ ಮಂದಹಾಸ ಮೂಡಿತು.ಜನವರಿ ಐದು. ಮಿಸೆಸ್ ಫಾಲ್ಕನಳ ಮಕ್ಕಳ ಪಾರ್ಟಿ ನಡೆದು ಆಗಾಗಲೇ ಒಂದು ವರ್ಷವಾಯಿತೆಂದು […]

ಮೂಡಿದ ಬೆಳಕು…: ಭಾರ್ಗವಿ ಜೋಶಿ

ಎಲ್ಲ ಕಡೆ ಝಗಮಗಿಸುತ್ತಿದ್ದ ದೀಪಗಳ ಸಂಭ್ರಮ. ಸಾಲು ಸಾಲು ದೀಪಗಳು ಇಡೀ ಬೀದಿಯ ಸಂಭ್ರಮ ಸೂಚಿಸುತ್ತಿತ್ತು.. ಆ ಬೀದಿಯ ಕೊನೆಯ ಮನೆಯಲ್ಲಿ ಮಾತ್ರ ಮೌನ. ಬೆಳಕು ತುಸು ಕೊಂಚ ಕಡಿಮೆಯೇ ಇತ್ತು. ಬಡವ -ಬಲ್ಲಿದ ಯಾರಾದರೇನು ಜ್ಯೋತಿ ತಾನು ಬೆಳಗಲು ಬೇಧ ಮಾಡುವುದಿಲ್ಲ ಅನ್ನೋ ಮಾತು ನಿಜವೇ? ಎಣ್ಣೆಗೆ ಕಾಸು ಇಲ್ಲದ ಬಡವರ ಮನೆಯಲ್ಲಿ ಜ್ಯೋತಿ ಉರಿದಿತೇ? ಬೆಳಕು ಚಲ್ಲಿತೇ? ಹೀಗೆ ಕತ್ತಲು ಆವರಿಸಿದ ಆ ಮನೆ, ಮನೆಯೊಡತಿ ಜಾನಕಮ್ಮ, ಪತಿ ರಾಮಣ್ಣ ಅವರ ಒಬ್ಬನೇ ಮಗ […]