Facebook

Archive for the ‘ಸರಣಿ ಬರಹ’ Category

ಚಿಮಮಾಂದ ಅಧಿಚೀಯ Americanah: ನಾಗರೇಖಾ ಗಾಂವಕರ

“A white boy and a black girl who grow up in the same working class town in England can get together and race is secondary, but in America even if the white boy and black girl grow up in the same neighbourhood , race would be primary” ಇದು ಆಫ್ರಿಕಾದ ಸಮಕಾಲೀನ ಸಾಹಿತ್ಯ ಲೋಕದ ಶ್ರೇಷ್ಠ ಪ್ರತಿಭೆ ಚಿಮಮಾಂದ […]

ಡಿಸೆಂಬರ್ ಎಂದರೆ ಪ್ರವಾಸಗಳ ನೆನಪು..: ವಿನಾಯಕ ಅರಳಸುರಳಿ

ಶಾಲಾ ಪ್ರವಾಸವೆನ್ನುವುದು ಬದುಕಿನ ಮತ್ತೆಲ್ಲ ಪ್ರವಾಸಗಳನ್ನೂ ಮೀರಿಸುವಂಥಹಾ ಸವಿನೆನಪು. ಅರ್ಧವಾರ್ಷಿಕ ಪರೀಕ್ಷೆಗಳೆಲ್ಲಾ ಮುಗಿದು ಛಳಿಗಾಲದ ಪ್ರವೇಶವಾಗುವ ಹೊತ್ತಿಗೆ ಶೈಕ್ಷಣಿಕ ಪ್ರವಾಸದ ಘೋಷಣೆಯನ್ನು ಸ್ವತಃ ಹೆಡ್ ಮಾಷ್ಟರೇ ಮಾಡುತ್ತಿದ್ದರು. ಬರುವ ಆಸೆ ಎಲ್ಲರಲ್ಲೂ ಇರುತ್ತಿತ್ತಾದರೂ ನೂರಿನ್ನೂರು ರೂಪಾಯಿಗಳ ಪ್ರವಾಸ ಶುಲ್ಕವನ್ನು ಹೊಂದಿಸುವುದು ಎಲ್ಲರಿಗೂ ಸಾಧ್ಯವಿರುವ ವಿಷಯವಾಗಿರಲಿಲ್ಲ. ಕೆಲವರಿಗೆ ಸುಲಭವಾಗಿ ಸಿಗುತ್ತಿದ್ದ ಈ ಹಣ ಇನ್ನು ಕೆಲವರಿಗೆ ಅಪ್ಪ-ಅಮ್ಮನಿಂದ ಬೆನ್ನಿನ ಮೇಲೆ ನಾಲ್ಕು ಗುದ್ದಿಸಿಕೊಂಡ ಬಳಿಕವೇ ಸಿಗುತ್ತಿತ್ತು. ಇನ್ನೂ ಕೆಲವರು ತಾವು ಅಲ್ಲಿಲ್ಲಿ ಅಡಿಕೆ ಸುಲಿದು, ಗೇರುಬೀಜ ಹೆಕ್ಕಿ ಸಂಪಾದಿಸಿದ್ದ […]

Sean O’ Casey ನ “Juno and Paycock”-ಯುದ್ಧ ಜಗತ್ತಿನಲ್ಲಿ ಸಾಮಾಜಿಕ ಏರಿಳಿತ: ನಾಗರೇಖಾ ಗಾಂವಕರ

ಅದು Dublinನ ಎರಡು ಕೋಣೆಗಳ ಬಾಡಿಗೆ ಮನೆ. ಜೂನೋ ಆ ಮನೆಯ ಒಡತಿ. ಮಕ್ಕಳಾದ Jonny Boyle ಮತ್ತು Mary Boyle ಅಲ್ಲಿದ್ದಾರೆ. Jonny ಬೆಂಕಿ ಕಾಯಿಸಿಕೊಳ್ಳುತ್ತಿದ್ಧಾನೆ. ಮೇರಿ ದಿನಪತ್ರಿಕೆಯಲ್ಲಿಯ ಆ ದಿನ ವಿಶೇಷ ಸುದ್ದಿ ಓದುತ್ತಿದ್ದಾಳೆ. ಅವರ ನೆರೆಮನೆಯ ಹುಡುಗನೊಬ್ಬ ದುರಂತವಾಗಿ ಹತ್ಯೆಗೀಡಾಗಿದ್ದಾನೆ. ಅದೂ ಐರಿಶ್ ಸೈನಿಕರ ಕೈಯಲ್ಲಿ. ಈ ವಿಚಾರ ತಿಳಿಯುತ್ತಲೇ ಜಾನಿ ಬೆವರಿ ಹೋಗುತ್ತಾನೆ ಅಷ್ಟೊತ್ತಿಗೆ ಅಲ್ಲಿಗೆ ಬರುವ ತಾಯಿ ಜುನೋ ತಂದೆ Jonny Boyle ಕುರಿತು ವಿಚಾರಿಸುತ್ತಾಳೆ. Jonny ತಂದೆಯ ವರ್ತನೆಯ […]

ಕಳೆದು ಹೋಗುವ ಸುಖ (ಕೊನೆಯ ಭಾಗ): ಡಾ. ಹೆಚ್ಚೆನ್ ಮಂಜುರಾಜ್

ಇಲ್ಲಿಯವರೆಗೆ ಭಯವೇ ಭಕ್ತಿಯ ಮೂಲ; ಆದರೆ ಅದು ವ್ಯಕ್ತಿಯನ್ನು ಸಂಸ್ಕರಿಸಿ, ತನ್ನ ಜೀವಿತವನ್ನು ಸಾರ್ಥಕವಾಗಿಸಿಕೊಳ್ಳಲು ಪ್ರೇರಿಸಬೇಕು. ಪರಮಾತ್ಮನನ್ನು ಯಾವಾಗಲೂ ಶಿಕ್ಷಿಸುವ ದಂಡಾಧಿಕಾರಿಯೆಂದೇ ನೋಡಬಾರದು; ತನ್ನನ್ನು ಹೆತ್ತು, ಸಾಕಿದ ಪ್ರೇಮಮಯೀ ತಾಯಿಯಂತೆ, ಆತ್ಮೀಯವಾಗಿ ಕಂಡು, ತಪ್ಪುಗಳನ್ನು ತಿದ್ದುವ ಸ್ನೇಹಿತನಂತೆ ಕಾಣಬೇಕು. ಇವೆಲ್ಲವನ್ನೂ ಮಹಾಭಾರತದಲ್ಲಿ ಸರಳವಾಗಿ, ‘ಪರೋಪಕಾರಃ ಪುಣ್ಯಾಯ; ಪಾಪಾಯ ಪರಪೀಡನಂ’ ಎಂದು ತಿಳಿಸಲಾಗಿದೆ. ಜನಸೇವೆಯೇ ಜನಾರ್ಧನ ಸೇವೆ ಎಂಬ ಮಾತೂ ಇದೆ. ದೀನದುರ್ಬಲರ ಮತ್ತು ದರಿದ್ರರ ಸೇವೆಯಲ್ಲಿ ಪರಮಾತ್ಮನನ್ನು ಕಾಣು ಎಂದ ಸ್ವಾಮಿ ವಿವೇಕಾನಂದರ ಈ ಎಲ್ಲ ಮಾತುಗಳ […]

ಟೆನಿಸನ್‍ನ ಎರಡು ಕವಿತೆಗಳು: ನಾಗರೇಖಾ ಗಾಂವಕರ

ಗ್ರೀಕ ಮಹಾಕವಿ ಹೋಮರನ ಒಡೆಸ್ಸಿಯಲ್ಲಿ ಬರುವ ದಿ ಗ್ರೇಟ್ ಗ್ರೀಕ್ ಹೀರೋ Ithacaದ ರಾಜ ಒಡಿಸೆಸ್ ಅಥವಾ ಯೂಲಿಸಿಸ್‍ನ ಸಮುದ್ರಯಾನದ ರೋಚಕ ಅನುಭವದ ಕಥೆಯನ್ನೆ ಹಾಡುವ ಟೆನಿಸನ್‍ನ “ದಿ ಲೋಟಸ್ ಇಟರ್” ಕವಿತೆ ಮೊದಲು ಪ್ರಕಟವಾದದ್ದು 1832ರಲ್ಲಿ. ಟ್ರೋಜನ್ ಯುದ್ಧದ ನಂತರ ಯೂಲಿಸಿಸ್ ತನ್ನ ಗ್ರೀಕ್ ಸೈನಿಕರೊಂದಿಗೆ ಮರಳಿ ನಾಡಿಗೆ ವಾಪಸಾಗುತ್ತಿದ್ದ ದಾರಿಯಲ್ಲಿ ಮಾರ್ಗಮಧ್ಯೆ ಭೀಕರ ಬಿರುಗಾಳಿಗೆ ಸಿಕ್ಕು ತತ್ತರಿಸತೊಡಗಿದರು. ಜಲಮಾರ್ಗದ ಉದ್ದಗಲಕ್ಕೂ ಅಲೆದಾಡಿದರು. ಒಂಬತ್ತು ದಿನಗಳು ಹಾಗೂ ಹೀಗೂ ಸುತ್ತಿ ಸುಳಿದು ಹತ್ತನೇಯ ದಿನ ನಡುಗಡ್ಡೆಯೊಂದು […]

ಸಮರ್ಥ ಜೀವನ ನಿರ್ವಹಣೆಗೆ ಬೇಕು ಜೀವನ ಕೌಶಲ್ಯಗಳು: ತೇಜಾವತಿ ಹುಳಿಯಾರ್

ಜೀವನವೆನ್ನುವುದು ಮನುಷ್ಯನ ಜನನದಿಂದ ಮರಣದವರೆಗಿನ ನಿರಂತರ ಪಯಣ. ನಮ್ಮ ಜೀವನವನ್ನು ನಾವೇ ಸುಂದರಗೊಳಿಸಿಕೊಳ್ಳದ ಹೊರತು ಮತ್ಯಾರೂ ಸುಂದರಗೊಳಿಸಲು ಸಾಧ್ಯವಿಲ್ಲ. ಸಾಗುವ ಮಾರ್ಗದಲ್ಲಿ ಹಲವು ಏರು -ತಗ್ಗುಗಳನ್ನು, ತಿರುವುಗಳನ್ನು ಕಾಣುತ್ತೇವೆ. ಇಂದಿನ ಯಾಂತ್ರಿಕ ಯುಗದಲ್ಲಿ ಜೀವನ ನಿರ್ವಹಣೆಯು ಕೂಡ ಒಂದು ಕಲೆಯೇ ಹೌದು. ಬರುಬರುತ್ತಾ ಮಾನವರ ಭಾವನೆಗಳು ಕೂಡ ಸನ್ನಿವೇಶಕ್ಕೆ ತಕ್ಕಂತೆ ಕೃತಕವಾಗಿ ಜನ್ಮ ತಳೆಯುತ್ತಿರುವ ಈ ಸಂದರ್ಭದಲ್ಲಿ ಅವುಗಳ ತೀವ್ರತೆಯೂ ಕಡಿಮೆಯೇ. ಹಿಂದಿನಂತೆ ಗಟ್ಟಿ ಬೇರುಗಳು ಪಳಗುವ ಕೈಗಳು ತೀರಾ ವಿರಳ. ಜನರು ಕ್ಷಣಿಕ ಲಾಲಸೆಗಳಿಗೆ ಒಳಗಾಗಿ […]

ಜಾನ್ ಕೀಟ್ಸ್- ಪ್ರೇಮ ಮತ್ತು ಸಾವು: ನಾಗರೇಖಾ ಗಾಂವಕರ

“If I die, said I to myself, I have left no immortal work behind me, nothing to make my friends proud of my memory- but I have loved the principles of beauty in all things, and if I had time I would have made myself remembered” ಇದು ಕೀಟ್ಸ್ ಫ್ಯಾನಿಗೆ ಬರೆದ ಪತ್ರದ ಸಾಲುಗಳು. ಮನುಷ್ಯನ ಬದುಕು ಕ್ಷಣಿಕ. […]

ಕಲ್ಲರಳಿ… ಹೂವಾಗಿ…: ಪ್ರಸನ್ನ ಆಡುವಳ್ಳಿ

“ಕಲ್ಲರಳಿ ಹೂವಾಗಿ, ಎಲ್ಲರಿ ಗೂ ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ” ಸರ್ವಜ್ಞನಿಂದ ಹಂಸಲೇಖಾವರೆಗೂ ಕಲ್ಲರಳಿ ಹೂವಾಗುವ ರೂಪಕ ಕನ್ನಡದ ಕವಿಗಳನ್ನು ಸದಾ ಕಾಡಿದಂತಿದೆ. ಸುಣ್ಣದ ಕಲ್ಲುಗಳು ನೀರಿನೊಂದಿಗೆ ಬೆರೆತು ಅರಳುವುದು ಸರ್ವಜ್ಞನಿಗೆ ಕಲ್ಲರಳಿ ಹೂವಾಗುವ ಹಾಗೆ ಕಂಡಿತು. ಕಾಡಿನ ಬಂಡೆಗಳ ಮೇಲೆ ಬೆಳೆಯುವ ಈ ಚಿತ್ರದಲ್ಲಿರುವ ಕಲ್ಲು ಹೂವಿನ ಗಿಡಗಳು ಸರ್ವಜ್ಞನ ಸಾಲುಗಳಿಗೆ ಸರಿಹೊಂದುವಂತಿವೆ. ಹಿಮಾಲಯದ ತಪ್ಪಲಿನಲ್ಲಿ, ಪೂರ್ವಾಂಚಲದ ಕಾಡುಗಳಲ್ಲಿ ಬೆಳೆಯುವ ಈ ಬಗೆಯ ಸಸ್ಯಗಳಿಗೆ ಕೆಲವೆಡೆ “ಪಥ್ಥರ್ ಪೋಡಿ” ಎನ್ನುತ್ತಾರೆ. ಸಂಸ್ಕೃತದಲ್ಲಿ […]

ಬೇಯದಿರು ಬೆಂಗಳೂರೇ..: ವಿನಾಯಕ ಅರಳಸುರಳಿ,

ಇದೆಂಥಹಾ ದಿನಗಳು ಬಂದುಬಿಟ್ಟವು? ಎಲ್ಲವೂ ಸರಿಯಾಗಿದ್ದರೆ ಅದೆಷ್ಟೋ ಲಕ್ಷ ಜನರೀಗ ಬೆಂಗಳೂರಿನಲ್ಲಿರುತ್ತಿದ್ದರು. ಬೀದಿ ಬದಿಯ ತಳ್ಳುಗಾಡಿಯಿಂದ ಹಿಡಿದು ಬಹುರಾಷ್ಟ್ರೀಯ ಕಂಪನಿಯ ತನಕ ನೂರಾರು ವಿಧದಲ್ಲಿ ಅಲ್ಲಿ ಜೀವನೋಪಾಯ ಸಾಗುತ್ತಿತ್ತು. ಅಲ್ಲಿ ಗಳಿಸಿದ ಸಂಬಳ ಕೇರಳದ ಆಳದಿಂದ ಹಿಡಿದು ಬಿಹಾರದ ತುದಿಯವರೆಗಿನ ಅದೆಷ್ಟೋ ಜನರ ಬದುಕ ಸಲಹುತ್ತಿತ್ತು. ಚಲನೆಯೇ ಬದುಕೆಂಬ ಮೂಲ ಮಂತ್ರವ ಜಪಿಸುತ್ತಾ ಕೋಟಿ ಜನಸಂಖ್ಯೆಯ ಆ ಪಟ್ಟಣ ಜಗತ್ತಿನ ಖ್ಯಾತ ನಗರಿಗಳ ಪಟ್ಟಿಯಲ್ಲಿ ತಾನೂ ಒಂದಾಗಿ ಮುನ್ನಡೆಯುತ್ತಿತ್ತು. ಬೆಂಗಳೂರೆಂದರೆ ಬರೀ ಕಾಯಕದ ಪಟ್ಟಣವೊಂದೇ ಆಗಿರಲಿಲ್ಲ. ಯಾಂತ್ರಿಕತೆಯ […]

ಧನದಾಹಕ್ಕೆ ದಿಕ್ಕೆಟ್ಟ ಬದುಕು ಆರ್ ಕೆ. ನಾರಾಯಣ್ ರ – The Financial Expert ನ ಮಾರ್ಗಯ್ಯ: ನಾಗರೇಖಾ ಗಾಂವಕರ

ಅದೊಂದು ಮುಂಜಾನೆ ಮಾರ್ಗಯ್ಯ ತನ್ನ ಕೆಂಪು ಬಣ್ಣದ ಅಕೌಂಟ್ ಪುಸ್ತಕದಲ್ಲಿ ಪೂರ್ಣ ತಲ್ಲೀನ. ತಂದೆ ತಾನು ಕೇಳಿದ ಆನೆ ಆಟಿಕೆ ಕೊಡಿಸಲಿಲ್ಲವೆಂದು ಕೋಪಗೊಂಡ ಬಾಲು ಕಾಲಿಂದ ಶಾಯಿ ಬಾಟಲಿಯ ಜೋರಾಗಿ ತೂರಿದ ರಭಸಕ್ಕೆ ಪುಸ್ತಕ ಬಣ್ಣಮಯವಾಗುತ್ತದೆ. ಸಿಟ್ಟಿಗೆದ್ದ ಮಾರ್ಗಯ್ಯ ಮಗನನ್ನು ದರದರ ಎಳೆದು ಕೋಣೆಯೊಳಗೆ ಕೂಡಿಹಾಕಲು ಯತ್ನಿಸುತ್ತಲೇ ತಪ್ಪಿಸಿಕೊಂಡ ಬಾಲು ಬಣ್ಣಮೆತ್ತಿದ ಪುಸ್ತಕ ಎತ್ತಿಕೊಂಡು ಹೊರಗೋಡಿ ತಟ್ಟನೆ ಗಟಾರಕ್ಕೆ ಚೆಲ್ಲಿ ಬಿಡುತ್ತಾನೆ. ಮಾರ್ಗಯ್ಯ ಹಣಕಾಸಿನ ಭಂಡಾರವೇ ಕೈತಪ್ಪಿದಂತೆ ಕಂಗಾಲಾಗುತ್ತಾನೆ. ಅದೇ ಬಾಲು ಪ್ರಾಯಕ್ಕೆ ಬರುತ್ತಲೂ ಇನ್ನಷ್ಟು ಅವಿವೇಕಿ […]