ಅದೃಷ್ಟದ ಪಾರಿವಾಳ ಮಹದೇವಪುರ ಎಂಬ ಒಂದು ಸುಂದರವಾದ ಹಳ್ಳಿ. ದಟ್ಟ ಅರಣ್ಯದಿಂದ ಕೂಡಿದ ಹಳ್ಳಿಯದು. ಎಲ್ಲರೂ ಕೃಷಿಕರು, ರೈತರಾಗಿದ್ದರು. ಸುಂದರ ಮತ್ತು ರಮೇಶ ಇಬ್ಬರು ಅಣ್ಣತಮ್ಮಂದಿರು. ಅಣ್ಣ ಶ್ರಮಜೀವಿ. ಹೊಲದಲ್ಲಿ ಪ್ರತಿದಿನ ಕೆಲಸ ಮಾಡುತ್ತಿದ್ದನು. ಅವನಿಗೆ ಹೆಂಡತಿ ಮಾಲಾ ಕೂಡ ಸಹಾಯ ಮಾಡುತ್ತಿದ್ದಳು. ದವಸಧಾನ್ಯಗಳನ್ನು ಮಾರಿ ಬಂದ ಹಣದಿಂದ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ಅವನಿಗೆ ಹಣಕಾಸಿಗೆ ಏನೂ ಸಮಸ್ಯೆ ಇರಲಿಲ್ಲ. ಊರಿಗೆ ಶ್ರೀಮಂತ ರೈತನಾಗಿದ್ದ. ಆದರೆ ತಮ್ಮ ರಮೇಶ ಆಲಸ್ಯದ ಮನುಷ್ಯ . ಅಣ್ಣನ ದುಡಿಮೆಯಲ್ಲಿಯೇ ಬದುಕುತ್ತಿದ್ದ. […]
Archive for the ‘ಮಕ್ಕಳ ಲೋಕ’ Category
ಮಕ್ಕಳ ಕವಿತೆ






















ಅಲ್ಲಿದ್ದವರೆಲ್ಲರೂ ರೈಲಿಗಾಗಿ ಕಾಯುತ್ತಿದ್ದವರೇ, ಆದರೆ ಅವರಲ್ಲಿ ಯಾರಿಗೂ ಕಛೇರಿಗೆ ತಡವಾಗುತ್ತೆ ಅನ್ನುವವರಿರಲಿಲ್ಲ, ಊರಿಗೆ ಹೋಗಲು ಸಮಯವಾಗುತ್ತೆ ಅನ್ನುವ ಛಾಯೆಯೂ ಅವರ ಮುಖದಮೇಲೆ ಕಾಣಲಿಲ್ಲ, ಆದರೂ ಅದು ರೈಲ್ವೆ ನಿಲ್ದಾಣ, ಅಲ್ಲಿದ್ದ ಪ್ರಯಾಣಿಕರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. ಚುಕು ಬುಕು ಚುಕು ಬುಕು ಅಂತ ಕೂಗುತ್ತಾ ಬಂದಿದ್ದು ಮಕ್ಕಳ ನೆಚ್ಚಿನ ಪುಟಾಣಿ ಎಕ್ಸಪ್ರೆಸ್ ಇದೆಲ್ಲಾ ಕಂಡು ಬಂದದ್ದು ಬೆಂಗಳೂರಿ ಕಬ್ಬನ್ ಪಾರ್ಕ ನಲ್ಲಿರುವ ಬಾಲಭವನದಲ್ಲಿ. ಇದು ಕೊರೊನಾಗಿಂತ ಮುಂಚೆ ಇದೀಗ ಬಾಲಭವನದಲ್ಲಿನ ಪುಟಾಣಿ ಎಕ್ಸಪ್ರೆಸ್ ಮಕ್ಕಳನ್ನು ಹೊತ್ತು ತಿರುಗಲು […]
ಮಕ್ಕಳ ಕಥೆ: ಸುಳ್ಳು ಕಹಿಯಾಗಿರುವುದು: ಸಿಂಧು ಭಾರ್ಗವ್






















ಜೀವಂತ್ ಅಪ್ಪ ಅಮ್ಮನ ಮುದ್ದಿನ ಮಗ. ಆದರೂ ಅವನಿಗೆ ಬೇಕು ಬೇಕಾದ್ದನೆಲ್ಲ ಕೊಡಿಸುತ್ತ ಇರಲಿಲ್ಲ. ಹಣದ ಬೆಲೆ ತಿಳಿಯಲೆಂದು ಹಾಗೆ ಮಾಡುತ್ತಿದ್ದರು. ಆದರೆ ಅಪ್ಪ ಅಮ್ಮ ಇಬ್ಬರೂ ಉದ್ಯೋಗಕ್ಕೆ ಹೋಗುತ್ತಿದ್ದರು. ಆದ ಕಾರಣ ಮನೆಗೆ ಬರುವಾಗ ರಾತ್ರಿ ಎಂಟು ಘಂಟೆಯಾಗುತ್ತಿತ್ತು. ಶಾಲೆಗೆ ಹೋಗುವ ಪುಟ್ಟ ಜೀವಂತ್, ಮನೆಗೆ ಬಂದರೆ ಯಾರೂ ಇರುತ್ತಿರಲಿಲ್ಲ. ಹತ್ತು ವರುಷದ ಹುಡುಗನಾದ್ದರಿಂದ ಹೆತ್ತವರಿಗೂ ಏನೂ ಭಯವಿರಲಿಲ್ಲ ಅವನಾಗೇ ಮನೆಗೆ ಬಂದು ಬಾಗಿಲು ತೆರೆದು ಊಟ ಮಾಡಿ, ಹಾಲು ಕುಡಿದು ಟಿ.ವಿ.ನೋಡುತ್ತ ಕುಳಿತು ಕೊಳ್ಳುತ್ತಿದ್ದ. […]
ಇಬ್ಬರು ಗೆಳೆಯರು: ಆಶಾರಾಣಿ






















ಮನೆಯ ಹೊರಗಿನ ಹೂದೋಟದಲ್ಲಿ ಒಂದು ಹೆಗ್ಗಣ ಮತ್ತು ಇಲಿ ವಾಸವಾಗಿದ್ದವು. ದಿನವೂ ಮನೆಯ ಯಜಮಾನಿ ಹೊರಗೆ ಚೆಲ್ಲುವ ಮುಸುರೆಯಲ್ಲಡಗಿರುವ ಅನ್ನ, ಕಾಳು, ತರಕಾರಿಗಳನ್ನು ಆಯ್ದಾಯ್ದು ತಿಂದುಂಡು ಸಂತೋಷದಿಂದ ದಿನಗಳನ್ನು ದೂಡುತ್ತಿದ್ದವು. ಹೀಗಿರಬೇಕಾದರೆ ಒಂದು ದಿನ ಹೆಗ್ಗಣಕ್ಕೊಂದು ಕೆಟ್ಟ ಆಲೋಚನೆ ಹೊಳೆಯಿತು. ಅದು ತನ್ನ ಗೆಳೆಯನಿಗೆ, “ಏಯ್, ಗೆಳೆಯಾ. . ಎಷ್ಟು ದಿನವೆಂದು ಈ ಮುಸುರೆಯನ್ನವನ್ನು ತಿಂದುಂಡು ಜೀವಿಸುವುದು!?ಹೊಟ್ಟೆಬಿರಿಯುವ ಹಾಗೆ ತಿನ್ನಲು ಏನಾದರೂ ಹೊಸ ಉಪಾಯ ಹುಡುಕೋಣ” ಎಂದಿತು. ಇಲಿಗೆ ಆಶ್ಚರ್ಯದೊಂದಿಗೆ ಸಂದೇಹವುಂಟಾಯಿತು “ಅಲ್ಲಾ ಗೆಳೆಯ, ಹೇಗೊ ಸಿಕ್ಕಿದ್ದನ್ನು […]
ಕಾಗೆಯ ಕೊಳಲು: ರೇಣುಕಾ ಕೋಡಗುಂಟಿ






















ಅದೊಂದು ದಟ್ಟ ಅರಣ್ಯ. ಆ ಅರಣ್ಯದ ಒಂದು ಭಾಗವು ಗುಂಪು ಗುಂಪಾದ ಹಚ್ಚ ಹಸಿರಿನಿಂದ ಕೂಡಿತ್ತು. ಅಲ್ಲಿ ಎಲ್ಲಾ ಬಗೆಯ ಮರಗಳು ಬೆಳೆದು ನಿಂತು ತಂಪು ಸೂಸುತ್ತಾ, ಹೂವುಗಳ ಪರಿಮಳ ಬೀರುತ್ತಾ ಕಣ್ಣಿಗೆ ಮುದ ನೀಡುವಂತಿದ್ದವು. ಆ ಗಿಡಗಳ ಕಾಲ ಅಡಿಯಲ್ಲಿ ನೀರಿನ ಸಣ್ಣ ಹಳ್ಳ ಜುಳು ಜುಳು ಸದ್ದು ಮಾಡುತ್ತಾ ಹರಿಯುತ್ತಿತ್ತು. ಇದರೊಂದಿಗೆ ಹಕ್ಕಿಗಳ ಕಲರವವೂ ಜೊತೆಗೂಡಿ ಸಂಗೀತ ಹೊಮ್ಮಿದಂತಿತ್ತು. ಅರಣ್ಯದ ಈ ಒಂದು ಭಾಗವು ಹಕ್ಕಿಗಳಿಗೆ ಮೀಸಲಾಗಿತ್ತು. ಎಲ್ಲಾ ಬಗೆಯ ಹಕ್ಕಿಗಳು ಅಲ್ಲಿ ನೆಲೆಸಿದ್ದವು. […]
ನಮ್ಮ ಪುಟ್ಟಿ: ವೆಂಕಟೇಶ ಚಾಗಿ






















ನಮ್ಮ ಪುಟ್ಟಿ (ಮಕ್ಕಳ ಕವನ) ನಮ್ಮ ಪುಟ್ಟಿಯ ಚಂದದ ಆಟ ನೋಡಲು ಎಷ್ಟು ಸುಂದರ ಪುಟ್ಟಿ ಜೊತೆಗೆ ಆಟವನಾಡಲು ಬರುವನು ಬಾನಿಗೆ ಚಂದಿರ..!! ಪುಟ್ಟಿಯ ಕೈಯಲಿ ಗೊಂಬೆ ಇದ್ದರೆ ಆಡಿಸಿ ನಗುತ ನಲಿಯುವಳು ಗೊಂಬೆಗೆ ಬಣ್ಣದ ಅಂಗಿಯ ಹಾಕಿ ಲಾಲಿಸಿ ಅಳುವ ಮರೆಯುವಳು !! ಪುಟ್ಟ ಪುಟ್ಟ ಹೆಜ್ಜೆಗಳಿಡುತ ಓಟದ ಆಟವ ಆಡುವಳು ಓಡುವ ಅವಳ ಹಿಡಿದು ಬಿಟ್ಟರೆ ಖುಷಿಯಲಿ ಕೇಕೆ ಹಾಕುವಳು || ಪಾಠ ಓದಲು ಕುಳಿತರೆ ನಾನು ತನಗೂ ಪುಸ್ತಕ ಕೇಳುವಳು ಚಿತ್ರವ ನೋಡಿ […]
ರಾಯರ ಕುದುರೆ ಕತ್ತೆ ಆಯ್ತು..!!?: ವೆಂಕಟೇಶ ಚಾಗಿ






















ಅನಂತಪುರ ಎಂಬ ಊರಿನಲ್ಲಿ ಹಬ್ಬಿದ ನಾಥ ಎಂಬ ಶ್ರೀಮಂತ ವ್ಯಕ್ತಿ ವಾಸವಾಗಿದ್ದನು ಅವನು ತನ್ನ ಸುಂದರವಾದ ಸಂಸಾರದೊಂದಿಗೆ ಉತ್ತಮ ಜೀವನ ನಡೆಸುತ್ತಾ ಸಂತೋಷದಿಂದ ಬದುಕುತ್ತಿದ್ದರೂ ತನ್ನ ಸ್ನೇಹಿತರಿಗೆ ಹಾಗೂ ನಂಬಿಕಸ್ಥ ರಿಗೆ ಕಾಳು-ಕಡಿ ಅಥವಾ ಹಣವನ್ನು ನೀಡಿ ಅವರ ದುಡಿಮೆಗೆ ನೆರವಾಗುತ್ತಿದ್ದರು ಸಾಲ ಪಡೆದವರು ಕಾಲಕ್ಕೆ ಸರಿಯಾಗಿ ತಾವು ಪಡೆದ ವಸ್ತುಗಳನ್ನು ಅಥವಾ ಹಣವನ್ನು ತಿರುಗಿಸುತ್ತಿದ್ದರು . ಅಲ್ಪ ಪ್ರಮಾಣದ ಬಡ್ಡಿಯನ್ನು ಪಡೆಯುತ್ತಿದ್ದಾನೆ ಯಾರಿಗೂ ನೋಯಿಸದೆ ವ್ಯವಹಾರವನ್ನು ನಡೆಸುತ್ತಿದ್ದನು. ಅದ್ಭುತ ನಾಥನಿಗೆ ಸಾಲವನ್ನು ಮರಳಿ ಕೇಳಲು ಊರಿಂದ […]
ಸಾಧನೆಯ ಹಾದಿ: ವೆಂಕಟೇಶ್ ಚಾಗಿ






















ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದನು. ರಾಮಯ್ಯ ತನಗೆ ತನ್ನ ಪೂರ್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಖವಾಗಿ ಜೀವನ ಸಾಗಿಸುತ್ತಿದ್ದನು. ಯಾವುದೇ ಆಮೀಷಕ್ಕೆ ಅತೀ ಆಶೆಗೆ ಒಳಗಾಗದೇ ಕಷ್ಟ ಪಟ್ಟು ದುಡಿಯುವುದೇ ಅವನ ನಿತ್ಯ ಕಾಯಕವಾಗಿತ್ತು. ತನ್ನ ದಿನದ ಬಹುತೇಕ ಭಾಗವನ್ನು ಹೊಲ ಗದ್ದೆಗಳಲ್ಲಿ ಕಳೆಯುತ್ತಿದ್ದನು. ಕೆಲವು ಜನರು ಅವನನ್ನು ಆಸೆಬುರುಕ ಎಂತಲೂ ಲೋಭಿ ಎಂತಲೂ ಮತಿ ಹೀನ ಎಂತಲೂ ಕರೆಯುತ್ತಿದ್ದರು. ಆದರೂ ಯಾರ ಮಾತಿಗು ಗಮನ ಕೊಡದೆ ತನ್ನ ಕಾಯಕವನ್ನು […]
ಗಿಳಿ ಕಲಿಸಿದ ಪಾಠ: ವರದೇಂದ್ರ ಕೆ.






















ಒಂದು ಕಾಡು ಇತ್ತು. ಆ ಕಾಡಿಗೆ ಬೆಂಕಿ ಬಿದ್ದು ಎಲ್ಲ ಗಿಡ ಮರಗಳೂ ಸುಟ್ಟು ಕರಕಲಾಗಿದ್ದವು. ಹೇಗೋ ತಪ್ಪಿಸಿಕೊಂಡ ಪ್ರಾಣಿ ಪಕ್ಷಿಗಳು ದಿಕ್ಕಾಪಾಲಾಗಿ ಹೋದವು. ಅದರಲ್ಲಿ ಒಂದು ಮರಿ ಗಿಳಿ ತಾಯಿ, ತಂದೆಯಿಂದ ಬೇರ್ಪಟ್ಟು ದೂರವಾಯಿತು. ಎಲ್ಲ ಕಡೆ ಸುತ್ತಿ ಸುತ್ತಿ ದಣಿವಾಯಿತು. ಹೊಟ್ಟೆ ಹಸಿದರೂ ತಿನ್ನಲು ಯಾವ ಹಣ್ಣು ಸಿಗದೆ ಬಳಲಿತು. ಆಹಾರ ಮತ್ತು ವಾಸಕ್ಕಾಗಿ ಅಲೆಯತೊಡಗಿತು. ಎಷ್ಟು ದೂರ ಸಾಗಿದರೂ ಏನು ಸಿಗದೆ ಸತ್ತೇ ಹೋಗುತ್ತೇನೋ ಎನ್ನುವಷ್ಟು ನಿರಾಸೆಯಿಂದ ಚಿಂತಿಸತೊಡಗಿತು. ಅಷ್ಟರಲ್ಲಿ ದೂರದಲ್ಲಿ ಒಂದು […]
ಮಕ್ಕಳ ಕವನ: ವರದೇಂದ್ರ ಕೆ






















ಪ್ರಾರ್ಥನೆ ನಾವೆಲ್ಲ ಮಕ್ಕಳು ನಿನ್ನ ಚರಣ ಪುಷ್ಪಗಳು| ಜ್ಞಾನ ಅರಸಿ ಬಂದಿಹೆವು ವಿದ್ಯೆ ಬುದ್ಧಿ ನೀಡಮ್ಮ, ಹೇ ಮಾತೆ ಶಾರದಾಂಬೆ|| ನಾವೆಲ್ಲ ಮಕ್ಕಳೂ…. ವಿದ್ಯಾದಾಯಿನಿ ವೀಣಾಪಾಣಿ| ರಾಗ ತಾಳ ಎಲ್ಲ ನಾವೆ ಜ್ಞಾನ ವೀಣೆ ನುಡಿಸು ತಾಯೆ|೧| ನಾವೆಲ್ಲ ಮಕ್ಕಳೂ… ನಿತ್ಯವೂ ನಿನ್ನ ಸ್ಮರಣೆ ಮಾಡುವೆವು ಭಕ್ತಿಯಿಂದ| ಕರುಣೆ ತೋರಿ ಒಲಿಯಮ್ಮ ಸತ್ಯವನ್ನೆ ನುಡಿಸು ತಾಯೆ|೨| ನಾವೆಲ್ಲ ಮಕ್ಕಳೂ…. ಜ್ಞಾನ ದೀಪ ಹಚ್ಚುವೆವು ನಿನ್ನ ಚರಣ ಕಮಲಕ್ಕೆ| ಜ್ಯೋತಿ ಆಗಿ ಬಾರಮ್ಮ ನಮ್ಮ ಬಾಳ ಬೆಳಗು ತಾಯೆ|೩| […]