ಸ್ನೇಹದ ದಾಕ್ಷಿಣ್ಯಕ್ಕೆ ಸಿಕ್ಕಿಬಿದ್ದು ಆಗಾಗ್ಗೆ(ವರ್ಷಕ್ಕೊಮ್ಮೆ ಅನ್ನಿ. ಮೈಸೂರಿನಲ್ಲಿ ದಿನಪೂರ್ತಿ ನಡೆಯುವ ಕಾರ್ಯಕ್ರಮವೊಂದಕ್ಕೆ ಬಹುತೇಕ ವೇದಿಕೆಯಲ್ಲಿ ಕುಳಿತ (ಮೂಕ)ಪ್ರೇಕ್ಷಕನಾಗಿ ಭಾಗವಹಿಸುವ ದೌರ್ಭಾಗ್ಯ ನನ್ನ ಪಾಲಿಗೆ ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವಂತೆ ಮೆಟ್ಟಿಕೊಂಡು ಬಂದಿದೆ. ಹತ್ತು ಗಂಟೆಗೆ ಆರಂಭವಾಗಿ ಒಮ್ಮೊಮ್ಮೆ ಸಾಯಂಕಾಲ ಏಳರವರೆಗೆ ನಡೆಯುವ ಸಾಹಿತ್ಯಕ, ಸಾಮಾಜಿಕ, ಸಾಸ್ಕೃತಿಕ ಮತ್ತು ವೈದ್ಯಕೀಯ(ಏಕೆಂದರೆ ನೇತ್ರ ವಾಗ್ದಾನ ಕಾರ್ಯಕ್ರಮವನ್ನೂ ಹಮ್ಮಿಕೊಂಡಿರುತ್ತಾರೆ) ಕಲಾಪ ಹೊಂದಿರುವ ವ್ಯಾಪಕ ಯೋಜನೆಯ ಕಾರ್ಯಕ್ರಮವಿದು. ಬೆಳಿಗ್ಗೆ ಸಭಾಕಲಾಪ ಉದ್ಘಾಟನೆ. ದೀಪ ಹಚ್ಚುವ ಕಾರ್ಯಕ್ರಮದಲ್ಲಿ ಗಣ್ಯರ ಕೈಯಿಂದ ಕೈಗೆ ರಿಲೇ ರೇಸಿನ […]
Archive for the ‘ಹಾಸ್ಯ’ Category
ಚಿಂಗ್-ಚಾಂಗ್-ಚೂ: ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ






















ಮನುಷ್ಯ ಹುಟ್ಟಿನಿಂದಲೇ ಹಲವಾರು ನಾಮಧೇಯಗಳಿಂದ ಕರೆಯಲ್ಪಡುತ್ತಾನೆ, ಮಗುವಾಗಿದ್ದಾಗ ಒಂದು ತರಹದ ಪ್ರೀತಿಯ ಹೆಸರುಗಳು ಮುಗ್ಧ ನಗುವಿಗೆ ಅಲಂಕಾರದಂತೆ ಕಂಡರೂ ಕೆಲವು ಸಲ ಅದೇ ಹೆಸರುಗಳು ಬೆಳೆದು ದೊಡ್ಡವರಾಗಿ ಮುದುಕರಾಗುವವರೆಗೂ ಅವರ ಬೆನ್ನಿಗೆ ಹಾಗೇ ಅಂಟಿಕೊಂಡೇ ಇರುತ್ತವೆ, ಕೆಲವು ಸಲ ಸತ್ತ ನಂತರವೂ ಆತನ,/ಆಕೆಯ ಮನೆಯವರನ್ನು ಗುರುತಿಸುವುದೂ ಸಹ ಅದೇ ಅಡ್ಡಹೆಸರಿನಿಂದಲೇ, ಈ ಅಡ್ಡ ಹೆಸರಿನ ಪರಿಣಾಮ ಎಷ್ಡು ಪ್ರಭಾವಯುತವಾಗಿರುತ್ತದೆಂದರೆ ಅವರ ಅಸಲಿ ಹೆಸರೇ ಮರೆತು ಹೋಗುವಷ್ಟು, ನಮ್ಮ ಸಂಬಂದಿಕರಲ್ಲೇ ಒಬ್ಬರಿದ್ದರು ಅವರು ಸದಾ ಎಲೆ ಅಡಕೆ ಜಗಿಯುತ್ತಾ […]
ರೈತ ಫಾರ್ ಸರಕಾರ: ಸೂರಿ ಹಾರ್ದಳ್ಳಿ






















ಒಂದು ಅಶುಭ ದಿನದಂದು, ಕಾಶೀಪತಿ ಕೊರೆಯಲು ಶುರುಮಾಡಿದನು. ‘ನಮ್ಮದು ರೈತರ ಫಾರ್ ಸರಕಾರ,’ ರಾಜಕಾರಣಿಗಳಿಗೆ ಮತ್ತು ಕವಿಗಳಿಗೆ ಇಹಲೋಕದಲ್ಲಿ ಬೇಕಿರುವುದು ‘ಕೇಳುವ ಕಿವಿಗಳು’ ಮತ್ತು ಆಡಿಸಲು ಒಳಗೆ ಟೊಳ್ಳಿರುವ ತಲೆಗಳು. ನಡುನಡುವೆ ಚಪ್ಪಾಳೆಯ ದನಿಗಳು. ಇವು ಮೂರಿರದ್ದರೆ, ದೇವರ ದಯೆ, ಒಡೆಯದ, ಮುರಿಯದ, ಚರ್ಮದ ಬಾಯಿ ದಣಿಯುವುದಿಲ್ಲ. ಕಾಶೀಪತಿ ಹೇಳಿದ್ದನ್ನು ನಾನು ತಿದ್ದಿದೆ, ‘ಅದರು ಫಾರ್ ಅಲ್ಲ, ಪರ.’ ‘ಇಂಗ್ಲಿಷಿನವರಿಗೂ ತಿಳಿಯಲಿ ಎಂದು ಹಾಗೆಂದೆ. ಆ್ಯಂಡು, ನಾನು ಹಳ್ಳಿಯವರ ಮಕ್ಕಳೂ ಗರ್ಭದಲ್ಲಿರುವಾಗಲೇ ಇಂಗ್ಲಿಷ್ ಕಲಿಯಬೇಕು ಎಂದು ವಾದಿಸುವವನು. […]
ಮನೆ ಬಾಡಿಗೆಗಿದೆ!: ಎಸ್.ಜಿ.ಶಿವಶಂಕರ್






















ಹೌದು, ನನ್ನ ಮನೆಯ ಮೊದಲ ಮಹಡಿ ಮನೆ ಬಾಡಿಗೆಗಿದೆ! ಫ್ಯಾಕ್ಟ್ರಿ ಕೆಲಸ ಮಾಡಿದವರಿಗೆ ನನ್ನ ಕಾಲದಲ್ಲಿ ಪೆನ್ಷನ್ ಇರಲಿಲ್ಲ. ಅದಕ್ಕೇ ಪಿಎಫ್ ಸಾಲ ತೆಗೆದು ಬಾಡಿಗೇಗೇಂತ ಇಪ್ಪತ್ತು ವರ್ಷದ ಹಿಂದೆ ಮಹಡಿ ಮೇಲೊಂದು ಮನೆ ಕಟ್ಟಿಸಿದ್ದೆ. ಕೆಳಗೆ ನಾನು ವಾಸ, ಮೇಲಿನದು ಬಾಡಿಗೆಗೇಂತ ಯೋಜನೆ ಮಾಡಿ ಕಾರ್ಯ ಅರೂಪಕ್ಕಿಳಿಸಿದ್ದೆ. ಕಳೆದ ಇಪ್ಪತ್ತು ವರ್ಷದಲ್ಲಿ ಐದಾರು ಜನ ಬಾಡಿಗೆದಾರರು ನೆಮ್ಮದಿಯಿಂದ ಇದ್ದು ಹೋದರು. ಆದರೆ ಈಗ ಮಾತ್ರ ವಿಚಿತ್ರ ಪರಿಸ್ಥಿತಿ ಎದುರಾಗಿತ್ತು. ಪ್ರತೀ ರೂಮಿಗೂ ಅಟ್ಯಾಚ್ಡ್ ಬಾತ್ರೂಮು ಕೇಳುತ್ತಿದ್ದರು! […]
ಕನ್ನಡ v/s ಇಂಗ್ಲಿಷ್ : ಸೂರಿ ಹಾರ್ದಳ್ಳಿ






















ನಮ್ಮ ಕಂಪನಿಯಲ್ಲಿ ಕನ್ನಡೇತರರಿಗೆ ಕನ್ನಡ ಪಾಠ ಮಾಡುತ್ತಿದ್ದೆ. ಅಕ್ಷರಗಳ ಮಾಲೆ ಕೊಟ್ಟಾಗ ‘ಓಹ್ ಮೈ ಗಾಡ್,’ ಎಂಬೊಂದು ಉದ್ಗಾರ ಹಿಂದಿನಿಂದ ಬಂತು. ಇಂಗ್ಲಿಷಿನ ಇಪ್ಪತ್ತಾರು ಅಕ್ಷರಗಳು ಸರಿಯೆಂದ ನಮ್ಮವರು ಕನ್ನಡದಲ್ಲಿ ಇಷ್ಟೊಂದು ಅಕ್ಷರಗಳೇ, ಕಲಿಯಲು ಕಷ್ಟ ಎಂದು ಮೂಗು ಮುರಿಯುತ್ತಾರೆ. ಆದರೆ ಚೀನೀ ಭಾಷೆಯಲ್ಲಿ ಸುಮಾರು 43 ಸಾವಿರ ಅಕ್ಷರಗಳಿವೆ ಎಂದರೆ ನಂಬುವಿರಾ? ನಂಬಲೇಬೇಕು. ಆದರೆ ಒಬ್ಬ ವ್ಯಕ್ತಿಯು ಮಾತನಾಡಲು ಮೂರನೆಯ ಒಂದು ಭಾಗ ಮಾತ್ರ ಕಲಿತರೆ ಸಾಕಂತೆ. ಆದರ ಇನ್ನೊಂದು ದುರಂತ ಎಂದರೆ ಅದು ಧ್ವನಿ […]
ಯಮಲೋಕ ಭ್ರಷ್ಟಾಚಾರ ಮುಕ್ತವಾಗಲಿ: ಪಿ.ಕೆ. ಜೈನ್ ಚಪ್ಪರಿಕೆ






















ಮರುಜನ್ಮದಲ್ಲಿ ನಾವೇನಾಗ್ತಿವಿ ಅನ್ನೋದು ನಾವು ಮಾಡಿದ ಪಾಪ ಪುಣ್ಯದ ಫಲಕ್ಕೆ ನೇರ ಸಂಬಂಧವಿದೆ ಅಂತಾ ಹೇಳ್ತೀವಿ. ಅದನ್ನೇ ಕರ್ಮಸಿದ್ಧಾಂತ ಅಂತಲೂ ಕರೀತಾರೆ. ಮುಂದಿನ ಜನ್ಮ ಮನುಷ್ಯ ಜನ್ಮವೇ ಆಗಬೇಕು ಅಂತಾದರೆ ಸಿಕ್ಕಾಪಟ್ಟೆ ಪುಣ್ಯ ಸಂಪಾದಿಸಬೇಕು ಅಂತಾ ಹೇಳ್ತಾ ಇರೋದನ್ನು ಕೇಳಿದ್ದೀವಿ. ಹಾಗೆಯೇ ಮುಂದಿನ ಏಳು ಜನ್ಮಗಳು ಮನುಷ್ಯನಲ್ಲದ ಜನ್ಮಗಳಾಗಿರ್ತಾವೆ ಅಂತಾನೂ ಕೇಳಿದ್ದೀವಿ. ಆದ್ರೆ ಇವೆಲ್ಲದರ ನಡುವೆ ಒಂದು ಕನ್ಫ್ಯೂಸನ್ ಮತ್ತು ಉತ್ತರ ಸಿಗದ ಪ್ರಶ್ನೆ ಈ ಕರೊನಾ ವೈರಸ್ ಬಂದಾಗ ಶುರು ಆಯ್ತು…ಎನ್ ಗೊತ್ತಾ…!??? ಪ್ರಸ್ತುತ ಪ್ರಪಂಚದಲ್ಲಿ […]
ಮಳೆಗಾಲ ನಮ್ಮದೂ ಒಂದು ಕತೆ: ಭಾರ್ಗವಿ ಜೋಶಿ






















ಅಂದೊಂದು ಸುಂದರ ಸಂಜೆ.. ಸೂರ್ಯನು ಭಾರತದ ಸೌಂದರ್ಯವನ್ನು ಮಿಂಚಿಸಿ ಈಗ ಬೇರೆ ದೇಶಗಳಲ್ಲಿ ಕಣ್ಣುತೆರೆಸುವ ಸರದಿ.. ಸೂರ್ಯ ನಿಧಾನವಾಗಿ ಹೆಜ್ಜೆಯಿಟ್ಟು ದಾಟುತ್ತಿದ್ದ.. ಚಂದ್ರನು ನಾನಿಲ್ಲೇ ಇದ್ದೀನಿ ಅಂತಾ ಮೋಡದ ಮರೆಯಿಂದ ಇಣುಕಿ ಇಣುಕಿ ನೋಡುತ್ತಿದ್ದ. ಅವನ ಬರುವಿಕೆಯನ್ನು ತಡೆಯಲು ಸಫಲವಾದ ಮೋಡಗಳು ಈಗ ನಮ್ಮ ಸಮಯ ಎಂದು ಮಳೆಸುರಿಸಲು ಸಿದ್ಧವಾಗಿದ್ದವು.. ಸಂಧ್ಯಾಕಾಲ, ತಂಪಾದಗಾಳಿ, ಮಸಕು ಬೆಳಕು, ತುಂತುರು ಮಳೆ… ಮನೆಯ ಅಟ್ಟದಮೇಲೆ ಈ ಅಂದವನ್ನು ಅನುಭವಿಸುತ್ತ ನಿಂತಿದ್ದಳು ನಮ್ಮ ಅರುಂದತಿ… (ಭಾಳ್ ದಿವಸದ ಮೇಲೆ ಕರ್ಕೊಂಡು ಬಂದೆ […]
ಜಸ್ಟ್ ಮಿಸ್ಸೋ…………: ಗುಂಡುರಾವ್ ದೇಸಾಯಿ






















ಇಡೀ ಭೂಮಂಡಲದಲ್ಲಿ ಅತಿ ಪ್ರಾಮಾಣಿಕನಾಗಿ, ಅನ್ಯಾಯ, ಹಿಂಸೆ, ಅಸೂಯೆ, ದ್ವೇಷ, ಮುನಿಸು, ಹೊಗಳಿಕೆ, ತೆಗಳಿಕೆ ಮೊದಲಾದ ರಾಗಗಳತ್ತ ಮುಖವೂ ಮಾಡದೆ ಮರಣವನ್ನಪ್ಪಿದ ಪದ್ದು ಯಮನ ಆಸ್ಥಾನಕ್ಕೆ ಬಂದ. ನಕ್ಕೋತ ಹರಿ ಧ್ಯಾನ ಮಾಡುತ್ತ ಬಂದದ್ದನ್ನು ನೋಡಿ ಯಮನಿಗೆ ಗಾಭರಿ ಮತ್ತು ಆಶ್ಚರ್ಯ ಎರಡು ಆತು. ನನ್ನತ್ರ ಬರೊಷ್ಟಿಗೆ ಕಾಲಿಗೆ ಬಿದ್ದು ‘ನನ್ನನ್ನ ದಯವಿಟ್ಟು ಸ್ವರ್ಗ ಕಳಿಸು ಹಾಂಗೆ ಹಿಂಗೆ ನಿನಗ ಅದೂ ಕೊಡುತಿ ಇದು ಕೊಡಸ್ತಿನಿ, ಭೂಲೋಕಕ್ಕೆ ಹೋದ್ರೆ ನನ್ನ ಬಂಗ್ಲೇಲಿ ಇಳಿಯೊಕೆ ವ್ಯವಸ್ಥ ಮಾಡಸ್ತಿನಿ’ ಅನ್ನೊರೆ […]
ಅಮಾಯಕನೊಬ್ಬನ ಕತೆ: ಸೂರಿ ಹಾರ್ದಳ್ಳಿ






















ನಮ್ಮ ಗುಂಡ ಬರೀ ಅಮಾಯಕನಲ್ಲ, ಅಮಾಯಕರಲ್ಲಿ ಅಮಾಯಕ ಎಂಬುದರಲ್ಲಿ ಖಡಾಖಂಡಿತ ನಂಬಿಕೆಯುಳ್ಳವನು ನಾನು. ಇದಕ್ಕೆ ಕಾರಣಗಳಿಲ್ಲದಿಲ್ಲ. ಭಾರತದ ಹವಾಮಾನ ಇಲಾಖೆಯವರು ‘ಇನ್ನು ಮೂರು ದಿನ ಮಳೆ ಬರುತ್ತದೆ’ ಎಂದು ಹೇಳಿದರೆ ಮೂರೂ ದಿವಸ ತನ್ನ ಜೊತೆಯಲ್ಲಿ ತನ್ನ ಕೊಡೆಯನ್ನು ಹೊತ್ತೊಯ್ಯುವವನೇ ಅವನು. ‘ಇಲ್ಲವೋ ಮಂಕು ಮುಂಡೇದೇ, ನಿನಗೆಲ್ಲೋ ಭ್ರಮೆ. ಬರುತ್ತದೆ ಎಂದರೆ ಬರೋಲ್ಲ. ಮಳೆ ದೇವರಾದ ವರುಣನಿಗೆ ಈ ಇಲಾಖೆಯವರನ್ನು ಕಂಡರೆ ಕೋಪ. ಹಾಗಾಗಿ ಸದಾ ತದ್ವಿರುದ್ಧವಾಗಿರುತ್ತದೆ, ಇದು ಸತ್ಯಸ್ಯ ಸತ್ಯ,’ ಎಂದು ಬಿಡಿಸಿ ಬಿಡಿಸಿ ಹೇಳಿದರೂ […]
ಕನ್ನಡದ ಗಗನಸಖಿ: ಸೂರಿ ಹಾರ್ದಳ್ಳಿ






















ಸಂದರ್ಶಕರು ಮಾದೇವಿಯನ್ನು ಕೇಳಿದರು: ‘ನೀವು ಎಂದಿಗಾದರೂ ವಿಮಾನದಲ್ಲಿ ಪ್ರಯಾಣಿಸಿದ್ದೀರಾ?’ ‘ಕ್ವಚಿತ್ತಾಗಿ.’ ‘ವಿಮಾನಗಳಲ್ಲಿ ಏರ್ ಹೋಸ್ಟೆಸ್‍ಗಳು ಪ್ರಯಾಣಿಕರಿಗೆ ಕೆಲವು ಸಲಹೆಗಳನ್ನು ಕೊಡುವುದನ್ನು ನೀವು ಕೇಳಿದ್ದೀರಿ. ಅದನ್ನು ಹೇಳಿ.’ ‘ಗೋ ಔಟ್ ವಿಮಾನದಲ್ಲಿ ಪ್ರಯಾಣಿಸುತ್ತಿರುವ ನಿಮಗೆಲ್ಲಾ ಆದರದ ಸ್ವಾಗತ. ಸ್ವಾಗತ ಎಂದರೆಷ್ಟು ಬಿಟ್ಟರೆಷ್ಟು, ಬಂದು ಅಂಡೂರಿ ಕುಳಿತುಬಿಟ್ಟಿದ್ದಿರಲ್ಲ, ಬೇರೇನೂ ಕ್ಯಾಮೆ ಇರದವರ ಹಾಗೆ.’ ‘ಏನೆಂದಿರಿ?’ ‘ಏನೂ ಇಲ್ಲ. ನಮ್ಮ ವಿಮಾನದಲ್ಲಿ ಮುಂದೆ ಎರಡು ಬಾಗಿಲುಗಳಿವೆ, ಹಿಂದೆ, ತಿರುಗಿಯೇನೂ ನೋಡಬೇಕಾಗಿಲ್ಲ. ಅಲ್ಲೇನೂ ಕರಡಿ ಕುಣಿಯುತ್ತಿಲ್ಲ, ಅಲ್ಲಿ ಎರಡು ನಿರ್ಗಮನ ದ್ವಾರಗಳಿವೆ. ನಡುವೆ […]