Facebook

Archive for the ‘ಪ್ರೀತಿ ಪ್ರೇಮ’ Category

ಇದೇ ‘ರಮ್ಯ’ ಚೈತ್ರ ಕಾಲ: ಬೀರೇಶ್ ಎನ್. ಗುಂಡೂರ್

ಇಲ್ಲಿ ಎಲ್ಲದಕ್ಕೂ ಉತ್ತರವಿಲ್ಲ. ಪ್ರಶ್ನೆಗಳೇ ಎಲ್ಲ. ನಿನ್ನ ಒಪ್ಪಿಸುವ ಭರದಲ್ಲಿ ನಾನೆಲ್ಲೋ ಸೋತು ನಿಸ್ಸಾಯಕನಾಗಿ ನಿಂತುಬಿಟ್ಟೆ ಅನಿಸುತ್ತದೆ. ಅದೇನೋ, ಬೇರೆಯವರಲ್ಲಿ ನಿನ್ನನ್ನು ಹುಡುಕಿಕೊಳ್ಳುವುದು..ನೀರಿಲ್ಲದೆ ಮೀನು ತನ್ನ ಅಸ್ತಿತ್ವ ಹುಡುಕಿಕೊಂಡಂತೆ ಅನಿಸುತ್ತದೆ. ಈ ಜಗತ್ತಿನ ಸೊಬಗಿಗೆ, ನಾಳೆಗಳ ಆಕಾಂಕ್ಷೆಗಳಿಗೆ, ಎಲ್ಲವನ್ನು ಮೀರಿ ಬದುಕಿಬಿಡುತ್ತೇನೆ, ಗೆದ್ದುಬಿಡುತ್ತೇನೆ ಎನ್ನುವ ಈ ಮಂದಿಯ ಅದಮ್ಯ ಚೇತನಕ್ಕೆ ಅದೊಂದೇ, ‘ಪ್ರೀತಿ’ಯೇ ಕಾರಣ ಅಂತ ಅಷ್ಟು ಬಾರಿ ಓದಿಕೊಂಡಿದ್ದೇನೆ. ಅದೊಂದು ತಪಸ್ಸು. ಆರಾಧನೆ. ಎಲ್ಲವನ್ನೂ ಸಾದ್ಯವಾಗಿಸುವ, ಎಲ್ಲವನ್ನೂ ಮರೆಸುವ, ಮೆರೆಸುವ, ಇನ್ನೆಲ್ಲವನ್ನೂ ತೆಕ್ಕೆಗೆ ಬಾಚಿಕೊಳ್ಳುವ, ಎಲ್ಲವನ್ನೂ […]

ಒಂದು ಆತ್ಮೀಯ ಆರೈಕೆ ಮರೆಯಾದಾಗ..: ವೃಶ್ಚಿಕ ಮುನಿ

ನೀನು ಮರೆಯಾದ ಹಾದಿಗುಂಟ.. ಸಾಲು ಮರದ ಹಾದಿಗುಂಟ ಮಳೆ ಬಿದ್ದ ನೆಲ, ಗಾಳಿಗೆ ಉದುರಿ ಬಿದ್ದ ಹಳದಿ ಹೂ, ಎಲೆ ಬಳುಕುಸುತ್ತಾ ಬಿಸುವ ತಂಪು ತಂಗಾಳಿ ಮೇಲೆ ಕವಿದ ಮೋಡ, ತೋಯ್ದ ಟಾರು ರಸ್ತೆಯ ಮೇಲೆ ಚೆಲ್ಲಿದ ಹಣ್ಣಲೆ ತೊಟ್ಟಿಕ್ಕುವ ಸಣ್ಣ ಹನಿಯ ಸಿಂಚನ. ದೂರದಲಿ ರವಿಯ ಹಳದಿ ಕಿರಣ, ಆ ಸಮಯಕ್ಕೆ ಒಂದು ರಮ್ಯತೆ ಇರಲು ಆತ್ಮೀಯ ಜೀವ ಜೊತೆಯಿರಲು ನಡಿಗೆ ದೀರ್ಘವಾಗಿರಲು ಇಟ್ಟ ಅಡಿಯ ಲೆಕ್ಕವಿಲ್ಲ ಒಂದು.. ಎರಡು.. ಮೂರು.. ಹೀಗೆ ಉಸಿರಿರೋವರೆಗೂ, ಸವಿದಷ್ಟು […]

ಪ್ರೀತಿಯು ಪ್ರೀತಿಯಾಗಬೇಕೇ ವಿನಃ ಹಿಂಸೆಯಾಗಬಾರದು: ನಾಗೇಶ್ ಪ್ರಸನ್ನ.ಎಸ್.

ಬಯಸಿದ್ದೆಲ್ಲಾ ಸಿಕ್ಕಿಬಿಡಬೇಕು – ಹುಟ್ಟಿದ ದಿವಸದಿಂದಲೂ ಇದು ಮನುಷ್ಯನಿಗೆ ಅಂಟಿಕೊಂಡಿರುವ ಒಂದು ತೆರನಾದ ವಿಚಿತ್ರ ಖಾಯಿಲೆ. ಈ ಖಾಯಿಲೆಯಿಂದ ಯಾರು ಹೊರಬರುತ್ತಾರೋ ಅವರೇ ಸುಖಜೀವಿಗಳು. ಇಲ್ಲದಿದ್ದರೆ, ಅವರಷ್ಟು ವಿಚಿತ್ರವಾಗಿ ನಡೆದುಕೊಳ್ಳುವವರೇ ಸಿಗುವುದಿಲ್ಲ. ಇದಕ್ಕೆ ಬುದ್ಧ ಹೇಳಿದ “ಆಸೆಯೇ ದುಃಖಕ್ಕೆ ಮೂಲ” ಎಂಬ ಮಾತು ಒಂದು ಉದಾಹರಣೆ. ಬದುಕಿನಲ್ಲಿ ಆಸೆಯನ್ನು ತ್ಯಜಿಸಿದವರು ಬಹಳಷ್ಟು ಮಂದಿ ಸಿಗುತ್ತಾರೆ. ಆದರೆ, ಪ್ರೀತಿಯಲ್ಲಿ ಆಸೆ ತ್ಯಜಿಸುವವರು ಅಥವಾ ಪ್ರೀತಿಯೆಂಬ ಆಸೆಯನ್ನೇ ತ್ಯಜಿಸುವವರು ಕೇವಲ ಬೆರಳೆಣಿಕೆಯ ಹೃದಯಗಳಷ್ಟೇ. ಈಗ ನಾನು ಆ ದಾರಿಯಲ್ಲಿ ಹೆಜ್ಜೆ […]

ಕದಡುವ ನೆನಪುಗಳ ನಡುವೆಯೂ ಕಾಡುವ ಖಾಲಿತನ: ನಂದಾದೀಪ, ಮಂಡ್ಯ

ಕಿಟಕಯಿಂದಾಚೆ ಹೆಪ್ಪುಗಟ್ಟಿದ ಭಾನು, ಗೂಡು ಸೇರಿದ ಹಕ್ಕಿ, ಅಲ್ಲೊಂದು ಇಲ್ಲೊಂದು ಬೀಳುವ ಹನಿಗಳ ಕಂಡು ಖಾಲಿಯಾದ ಸಂತೆ, ನೀರವ ರಸ್ತೆ, ಇದೆಲ್ಲದರ ಜೊತೆಗೆ ಸಾವಿರ ನೆನಪುಗಳ ರಾಶಿ ಹಾಕಿಕೊಂಡು ಕೂತಿದ್ದರೂ ಮನದೊಳಗೆ ಆವರಿಸಿದ ಮೌನ, ಸಾವಿರ ಮಾತಿದ್ದರೂ ಮೌನದೊಂದಿಗೆ ಹೊಂದಿಕೊಂಡ ಖಾಲಿತನದ ಬದುಕು.. ಬದುಕು ಖಾಲಿತನ ಎನಿಸುವುದು ಒಂದು ಇಷ್ಟವಾದ ಬಾಂಧವ್ಯವೊಂದು ನಿರಾಶೆ ಮಾಡಿದಾಗ, ರಪರಪನೆ ಬಿದ್ದ ಮಳೆಗೆ ಎಲೆಗಳು ಉದುರಿದಂತೆ ಕನಸುಗಳು ಕಂಬನಿಯಲ್ಲಿ ಜಾರಿಹೋದಾಗ, ಆದರೆ ಹೇಳಿಕೊಳ್ಳಲು ಪದಗಳು ಇರುವುದಿಲ್ಲ.. ಅನುಭವಿಸಲು ಅಸಾಧ್ಯವೆನ್ನುವ ನೋವೊಂದು ಕಾಡುವಾಗ, […]

ಪ್ರೀತಿಯೆ ದೇವರು: ನಂದಾದೀಪ

ಗೆಳೆಯಾ.. ಭೂಮಿಯಲ್ಲಿ ದೇವರು ಎಲ್ಲಾ ಕಡೆ ಇರೋಕಾಗಲ್ಲಾ ಅಂತ ಪ್ರೀತಿನ ಸೃಷ್ಠಿ ಮಾಡಿದನಂತೆ.. ಯಾಕೆಂದರೆ ನಿಜವಾದ ದೇವರು ನಮ್ಮ ಮುಂದೆ ಪ್ಯತ್ಯಕ್ಷ ಆದ್ರೆ ಅದನ್ನ ತಡೆದುಕೊಳ್ಳೋ ಶಕ್ತಿ ನಮಗಿರೋದಿಲ್ಲ ಅಂತ.. ಈ ಪ್ರೀತಿನ ದೇವರಿಗೆ ಯಾಕೆ ಹೋಲಿಸ್ತಾ ಇದೀನಿ ಅಂದ್ರೆ ನಿಜವಾದ ಪ್ರೀತಿನ ಪಡೆದುಕೊಳ್ಳೋಕು, ಅದರ ತೀವ್ರತೆಯನ್ನು ತಡೆದುಕೊಳ್ಳೋಕು, ಅದನ್ನ ಮತ್ತೆ ಮರಳಿ ನಿಡೋದಕ್ಕೂಅಂತಹದ್ದೊಂದು ಗಟ್ಠಿಯಾದ ಮನಸು ಇರಬೇಕಂತೆ..! ಇಲ್ಲವಾದಲ್ಲಿ ಆ ಪ್ರೀತಿಯೆಂಬ ದೇವರನ್ನ ಉಳಿಸಿಕೊಳ್ಳೋಕ್ಕೆ ಆಗೋದಿಲ್ಲ ನೋಡು..! ಅಂಹದೊಂದು ಮನ ನಿನ್ನಲ್ಲಿ ನಾ ಕಾಣಲೂ ಇಲ್ಲ..! […]

ಪ್ರೀತಿಯಲ್ಲಿ ನಾ ಎಡವಿದೆ ಆದರೇ….. ನೀ…!: ಪಿ ಎಸ್ ಜೀವನ್ ಕುಮಾರ್ ಕಲ್ಲೇಗ

ಪ್ರೀತಿ ಎಂಬುವುದು ಯಾರ ಅನುಮತಿ ಕೇಳಿ ಹುಟ್ಟುವುದಿಲ್ಲ. ಪ್ರೇಮದ ಬಲೆಯಲ್ಲಿ ಸಿಲುಕಿ ಅದರಿಂದ ಹೊರಬರುವ ತಾಳ್ಮೆ ಒಂದಿದ್ದರೆ ಜೀವನದಲ್ಲಿ ಯಾವುದೇ ಕಷ್ಟಗಳು ಎದುರಾದರೆ ಅದು ಕಷ್ಟ ಎಂದು ಅನಿಸುವುದಿಲ್ಲ. ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವಳು ನನ್ನ ಹತ್ತಿರ ಬಂದು ಬ್ರೇಕ್ ಅಪ್ ಎಂದು ಹೇಳಿದಾಗ ಏನೂ ಅರ್ಥವಾಗುವುದಿಲ್ಲ. ಬದಲಿಗೆ ವಿಪರೀತವಾದ ಕೋಪ, ತಡೆಯಲಾರದಷ್ಟು ದುಃಖ, ಸಹಿಸಲಾರದಷ್ಟು ನೋವು ಶುರುವಾಗುತ್ತದೆ. ಆ ಕ್ಷಣ ಎಲ್ಲಿಗೆ ಹೋಗಬೇಕು, ಏನು ಮಾಡಬೇಕೆಂದು ಅರ್ಥವಾಗುವುದಿಲ್ಲ. ಆ ಕ್ಷಣ ಪ್ರಪಂಚದಲ್ಲಿ ಎಷ್ಟೋಜನ ಇದ್ದರೂ ಯಾರು […]

ನೀನಿಲ್ಲದೆ…..!!: ವೆಂಕಟೇಶ ಚಾಗಿ

ಅಂತೂ ಈ ವರ್ಷದ ಫೆಬ್ರುವರಿ ೧೪ ಮರೆಯಾಯ್ತು. ಪ್ರತಿ ವರ್ಷದ ಹಾಗೆ ನನ್ನ ನಿರೀಕ್ಷೆ ಹುಸಿಯಾಯ್ತು. ಅದೆಷ್ಟೋ ದಿನಗಳಾದವು ನಿನ್ನ ದ್ವನಿ ಕೇಳಿ. ಈ ದಿನ ಬಂದಿತೆಂದರೆ ಸಾಕು ಅದೆಷ್ಟು ಸಂತಸ ನಿನಗೆ. ಆ ಮಾತುಗಳನ್ನು ನುಡಿಯದಿದ್ದರೆ ನಿನಗೆ ಸಮಾಧಾನವಾಗುತ್ತಿರಲಿಲ್ಲ. ಮತ್ತೆ ಮತ್ತೆ ಆ ನಿನ್ನ ಮಾತುಗಳು ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ. ನಾನೋ ಹುಡುಗಿಯರೆಂದರೆ ಮಾರುದ್ದ ದೂರ ಸರಿಯುವ ಆಸಾಮಿ. ಅದೇಗೋ ನನ್ನ ನಿನ್ನ ನಡುವೆ ಸ್ನೇಹ ಬೆಳೆಯಿತು. ಸ್ನೇಹ ವೆಂದೂ ಪ್ರೇಮಕ್ಕೆ ತಿರುಗಬಾರದೆಂದು ಲಕ್ಷ್ಮಣ […]

ದೇವರೆ ಇಲ್ಲ ಎಂದವನ ಬದುಕಿನಲ್ಲಿ ದೇವತೆಯಾಗಿ ಬಂದೆ ನೀ…!: ಸಿದ್ದುಯಾದವ್ ಚಿರಿಬಿ…,

ಪ್ರೀತಿಯ ಪ್ರಿಯಲತೆಯೇ ಯಾಕೋ ಏನೂ ಬರೆಯಲಾಗಿರಲಿಲ್ಲ ತುಂಬಾ ದಿನ. ಇವತ್ತು ಮನಸ್ಸು ಯಾಕೋ ತಂತಾನೆ ಪ್ರಪುಲ್ಲ. ಮಂಜು ಬಿದ್ದ ಗೂಡಿನಲ್ಲಿ ಮುದುರಿ ಮಲಗಿದ ಗುಬ್ಬಿ ಮರಿಯನ್ನು ಸೂರ್ಯ ತಾಕಿ ಎಚ್ಚರಿಸಿದಂತೆ ನನ್ನ ಮುಂಗೈ ಮೇಲೆ ನಿನ್ನ ಬಿಸಿಯುಸಿರು. ನಿನ್ನ ನೆನಪುಗಳನ್ನು ಎದೆಯಂತರಾಳದಿಂದ ಎಕ್ಕಿ ಮನದ ಪುಟದ ಮೇಲೆ ತಂದು ತೋರಿಸುತ್ತಲೆ ಇತ್ತು. ಎರಡು ವಿರಹದ ಕವಿತೆಗಳನ್ನು ಬರೆದರು ಸಮಧಾನವೆನ್ನಿಸಲಿಲ್ಲ. ಈ ಸಂಜೆಯ ಶ್ರಾವಣದ ಝಡಿ ಮಳೆಯು ನಿನ್ನ ನೆನಪುಗಳ ತಂದು ಮನೆಯಂಗಳದಲ್ಲಿ ಎಡೆಬಿಡದೆ ಸುರಿಯುತ್ತಿದೆ. ಯಾಕೊ ಬೇಸರ […]

ಬುಟ್ಟಿಗೊಂದು ಬುತ್ತಿ ಬಿದ್ದಾಗ…: ಮಂಗಳ ರವಿಕುಮಾರ್

ಬೆಂಗಳೂರಿನಲ್ಲಿ ಬದುಕುವುದು ಕಲಿತು ನಾಲ್ಕೈದು ವರ್ಷ ಆಗಿರಬಹುದು. ಆದರೆ ನನ್ನನ್ನು ನಾನು ಇಷ್ಟೊಂದು ಕಳೆದುಕೊಂಡಿದ್ದು ಇದೇ ಮೊದಲು. ಹಾಡು, ಕುಣಿತ, ಎಲ್ಲರನ್ನೂ ಆಕರ್ಷಿಸುತ್ತಿದ್ದ ನನ್ನ ತಮಟೆ ಸದ್ದು.. ಅವ್ಯಾವೂ ಈಗಿಲ್ಲ. ನಾನು, ನನ್ನ ಅಸ್ಮಿತೆ ಬೇರೆಬೇರೆಯಂತೆ ಅನಿಸುತ್ತಿದೆ. ನೋಡಿ, ಆಗ ಜೊತೆಗಿದ್ದ ಗೆಳೆಯ-ಗೆಳತಿಯರು ಈಗ ದೊಡ್ಡ ಸಾಧಕರಂತೆ, ಪತ್ರಕರ್ತರಂತೆ, ಅಥವಾ ತುಂಬಾ ಸುಖೀ ಜೀವಿಗಳಂತೆ ಕಾಣುತ್ತಾರೆ. ನಾನೂ ಅವರನ್ನೆಲ್ಲಾ ಸಂಪರ್ಕಿಸುವುದೇ ಕಡಿಮೆ. ಬಹುಶಃ ನಾನೀನ ಅವರಿಗೆ ತುಂಬಾ ದೂರದ ಗೆಳತಿಯಾಗಿದ್ದಿರಬಹುದು. ಅಥವಾ ನನಗೇ ನಾನೇ ಹಾಗಂದುಕೊಂಡಿರಬಹುದು! ಒಂದಿಷ್ಟು […]

ಕನಸಿನಲ್ಲು ಕನವರಿಸುವಂತ ಪ್ರೀತಿ ಕೊಟ್ಟವಳೇ..: ಸಿದ್ದುಯಾದವ್ ಚಿರಿಬಿ.

ನೆಲದ ಮಣ್ಣು ಒಲುಮೆ ಕಣ್ಣು ತೆರಯಬಹುದು ಪ್ರೇಮದ ಹೆಣ್ಣು ಕನಸು ಮನಸುಗಳ ಬೆಸಗೆಯಲ್ಲಿ ನಮ್ಮಿಬ್ಬರ ಹೃದಯ ಮಿಲನದ ನವಿಲ ನರ್ತನವು ಪ್ರೇಮ ಕಾಶಿಯಲಿ…., ಜಗತ್ತಿನಲ್ಲಿ ಪ್ರೇಮವೇ ಧರ್ಮವೆಂದು ನಂಬಿಕೊಂಡು ಬಂದವರಲ್ಲಿ ಪ್ರೀತಿಯ ಜಲಪಾತ ಹೃದಯಂತರಾಳದಲ್ಲಿ ಧುಮ್ಮಿಕ್ಕುತ್ತದೆ. ನಿನ್ನೊಲವಿನ ಅಮಲಿನಲ್ಲೂ ಪ್ರೇಮ ನಳನಳಿಸುತ್ತದೆ ಸ್ವೀಟಿ. ಬಿರು ಬೇಸಿಗೆಯಲ್ಲೂ ಮುಂಗಾರಿನ ಅಭಿಷೇಕವಾಗುವಂತೆ ನಿನ್ನ ಒಲವಿನ ಮುಂಗಾರಿನ ಮಳೆ ನನ್ನೆದೆಯ ನೆಲದ ಮೇಲೆ ಸುರಿಯುತ್ತಿದೆ ಸಖಿ. ಕಾಡುವ ಕನಸಾಗಿ, ಪ್ರೀತಿಗೆ ಒಲವಾಗಿ, ಬದುಕಿಗೆ ಛಲವಾಗಿ ನನ್ನ ಜೀವನದ ಜ್ಯೋತಿ ನೀನಾಗಿ, ನನ್ನೊಂದಿಗೆ […]