Facebook

Archive for the ‘ಚುಟುಕ’ Category

ವಿಜಯ್ ಹೆರಗು ಅವರ ಚುಟುಕಗಳು

ಕಲೆಗಾರ ಬದುಕುವುದೇ ಒಂದು ಕಲೆ- ನೀನೇ ಕಲೆಗಾರ ಭಾವನೆಗಳು ಹೊರಹೊಮ್ಮಿದರೆ ನೀನೇ ಕವಿ ಸ್ನೇಹ,ಪ್ರೀತಿ ಗಳಿಸಿದರೆ ನೀನೇ ಸಾಹುಕಾರ ಆಸೆ ಇದ್ದರೇ ಬದುಕು ಸಹಜ-ಸುಂದರ ಕಿವುಡು  ನನ್ನೆದೆಯ ಬೇಗುದಿಯ ಹೇಳಿಕೊಳ್ಳಲಿ ಹೇಗೆ? ದೇವರೂ ಕುಳಿತಿಹನು  ಜಾಣ ಕಿವುಡನ ಹಾಗೆ ಕತ್ತಲ ಜಗತ್ತು  ನಮ್ಮನಾಳುವ ನಾಯಕರೇ ಎಲ್ಲಿಹುದು ನಿಮ್ಮ ಚಿತ್ತ  ಸ್ವಲ್ಪ ಗಮನಹರಿಸಿ ನೀವಿತ್ತ  ದುಡ್ಡು ಮಾಡಿದ್ದು,ಸುಳ್ಳು ಹೇಳಿದ್ದು ಸಾಕುಮಾಡಿ ಬಡಜನರ ಬದುಕಿಗೆ ಬುಡ್ಡಿ ದೀಪದಷ್ಟಾದರೂ ಬೆಳಕು ನೀಡಿ ದಂ"ಪತಿ" ಮನೆಗೆ ಲೇಟಾಗಿ ಬಂದಾಗ ಹೆಂಡತಿ ಹಾಕುವಳು ಛೀಮಾರಿ […]

ಪಂಜು ಚುಟುಕ ಸ್ಪರ್ಧೆ: ಸ್ಫೂರ್ತಿ ಗೌಡ ಅವರ ಚುಟುಕಗಳು

1.ನಿರ್ಲಿಪ್ತತೆ ನಿನ್ನ ನೆನಪಿಲ್ಲ ಗಾಳಿ ಗಂಧವಿಲ್ಲ ನಿದ್ದೆಯಲಿ ಕರಗಿಸುವ ಮೋಹವಿಲ್ಲ ನಿರ್ಲಿಪ್ತತೆ!! ಯಾರೋ ಕೂಗಿದರು ಕಲ್ಲು ಹೃದಯ =========================== 2. ವ್ರತ ಗೆದ್ದ ಸ್ವಯಂವರದಲ್ಲಿ ಹಂಚಿದ ಅಣ್ಣತಮ್ಮಂಗೆ ಸಮಕಾಣವ್ವ ಐದು ಬೆರಳು ನಿನ್ನವೇ ಕುಂತಿಯ ಉಸಿರು ಇದೇ ಗರತಿಯ ವ್ರತವೇ? =========================== 3. ಉಪವಾಸ ಏಕಾದಶಿ ಉಪವಾಸ ದ್ವಾದಶಿ ಉಪವಾಸ ಸಿಕ್ಕಿತೋ ಪುಣ್ಯಫಲ? ಹರಕು ಬಟ್ಟೆ ಮುರುಕು ತಟ್ಟೆ ಪ್ರತ್ಯಹಂ ಉಪವಾಸ ಯಾರಾದರು ಇವನಿಗೆ ಕೊಡಿಸಿ ಆ ನಿಮ್ಮ ಪುಣ್ಯ ಫಲ! =========================== 4. ಉಳುಮೆಯಿಲ್ಲ ಒಲವಿನ […]

ಪಂಜು ಚುಟುಕ ಸ್ಪರ್ಧೆ: ರಘು ನಿಡುವಳ್ಳಿ ಅವರ ಚುಟುಕಗಳು

1 ಸಮಾನತೆ ಭೋರ್ಗರೆವ ಶರಧಿ ಅದರ ಸೆರಗಲ್ಲೆ  ಮಹಾಮೌನಿ 'ಹಿನ್ನೀರು' ದಿಗ್ಗನೆ ಬೆಳಗುವ ದೀಪ  ಅದರ ಬದಿಯಲ್ಲೆ ದಿವ್ಯಧ್ಯಾನಿ 'ಕತ್ತಲು ಸೃಷ್ಟಿಗಿಲ್ಲ  ಅದರ ದೃಷ್ಟಿಗಿಲ್ಲ  ಭೇಧ ಬಿನ್ನ ಪಕ್ಷಪಾತ ಹುಟ್ಟು ಸಾವು ನೋವು ನಲಿವು ಎಲ್ಲ ನಮ್ಮ ನಿಮ್ಮ ವರಾತ!   2  ಚೋದ್ಯ ಕತ್ತಲೆಗೆ ಗೊತ್ತಿರುವ.. ಗುಟ್ಟು.. ಬೆಳಕಿನ ಪಾಲಿಗೆ ಅಪರಿಚಿತ  ಹಣತೆ ಕಂಡಿರೋ ಸತ್ಯ.. ಕತ್ತಲಪಾಲಿಗೆ ಅದೃಶ್ಯ .. ಇದು ಸೃಷ್ಟಿಯ..ಚೋದ್ಯ   3 ಅಪೂರ್ಣ ಒರಟು ವಜ್ರಕ್ಕೆ..ಹೊಳಪು ಕೊಟ್ಟ.. ಸುವಾಸನೆ ಕೊಡಲಿಲ್ಲ.. ಮೃದುಲ..ಮಲ್ಲಿಗೆಯಲಿ.. […]

ತೊಟ್ಟಿಕ್ಕೋ ಕಾವ್ಯದ ಹನಿಗಳು!: ಸಂತೆಬೆನ್ನೂರು ಫೈಜ್ನಟ್ರಾಜ್

1.ವೈಶಾಲ್ಯ ಮನೆ ಸುತ್ತಾ ಕಾಂಪೌಂಡ್ ಹಾಕಿಕೊಳ್ಳುವ ನಾವು ಮನದ ಅದಮ್ಯ ಬಯಕೆಗಳಿಗೆ ಯಾವ ಬೇಲಿಯೂ ಹಾಕದ ವಿಶಾಲಿಗಳು !   2.ಸಡಗರ ಬೀಳೋ ಮಳೆಗೆ ಭೂಮಿ ಸೇರೋ ತವಕ ಭೂಮಿಗೋ ಒಡಲ ತುಂಬಿಕೊಳ್ವ ತವಕ !   3.ಒಲವೇ ನಿನ್ನೊಲವೇ ನನ್ನ ಕಾಯುವುದು ಕಣ್ಮುಚ್ಚಿ ತೆರೆದರೆ ಬರಿ ನಿನ್ನ ನೆನಪೇ ಕಾಡುವುದು !   4.ವಿಪರ್ಯಾಸ ಕತ್ತಲ ವಾಸಕ್ಕಂಜಿ ಬೆಳಕ ಹಂಚುತ್ತಾ ಹೊರಟ ಹಣತೆ ಕೊನೆಗೆ ಅದೇ ಕತ್ತಲಲ್ಲಿ ಕಣ್ಮುಚ್ಚಿತು!   5.ಹೂ-ಚುಕ್ಕಿ ನಕ್ಕ ಹೂ ನೋಡಿ […]

ಪಂಜು ಚುಟುಕ ಸ್ಪರ್ಧೆ: ಅನುಪಮಾ ಎಸ್. ಗೌಡ ಅವರ ಚುಟುಕಗಳು

1) ರಾಮ-ಶಾಮ ಕೃಷ್ಣನನ್ನೇ ಪೂಜಿಸೋ  ಎನ್ನ ಮಡದಿಗೆ  ನಾನೆಂದೂ "ರಾಮ" ಕೈತಪ್ಪಿ ಹೋದ  ನನ್ನ ನನ್ನೊಲವ ರಾಧೆ  ಹೇಳುತಿದ್ದಳು  ನಿನ್ನೊಳಗಿಹನೊಬ್ಬ  "ತುಂಟ ಶಾಮ" …………………… 2) ಹಾಫ್ ಶರ್ಟ್   ಹಾಫ್ ಶರ್ಟ್ ಮೇಲೆ ರಾರಜಿಸುತಿದ್ದ ಹಾರ್ಟ್ ಕಂಡು ಮೌನವಾಗಿ ಕೇಳಿದಳು  ಅರ್ಧಾಂಗಿ  ಯಾರು ಕೊಟ್ಟ  ಗಿಪ್ಟು ಈ ಅಂಗಿ? ………………… 3) ಬಯಕೆ   ಸಿಕ್ಕರೆ ರಾಮನಂಥ ಗಂಡ ಸಿಗಬೇಕೆಂದು ದೇವರಲ್ಲಿ  ಕೋರುವ ಬಯಕೆ..!   ಮೆಲ್ಲೆಗೆ  ಪಿಸುಗುಟ್ಟಿತು ಮನ ಮಾಡ್ಯನು ಶಂಕೆ ಕಾಡಿಗೆ ಅಟ್ಯಾನು  […]

ಪಂಜು ಚುಟುಕ ಸ್ಪರ್ಧೆ: ಹುಸೇನ್ ಎನ್. ಅವರ ಚುಟುಕಗಳು

೧.ಒಳಗೊಳಗೇ ಅತ್ತು ಸತ್ತು ಹೋದ ನನ್ನ ಕನಸುಗಳ ಗೋರಿಗೆ ನಿನ್ನ ಹೆಸರಿಟ್ಟಿದ್ದೇನೆ..! —- ೨.ನಿನ್ನೆದುರು ದನಿಯಾಗಲು ಸೋತ ಮಾತುಗಳು ಕಮ್ಮನೆ ಕುಳಿತಿವೆ.. ಮಡುಗಟ್ಟಿದ ಕಣ್ಣೀರಿಗೆ ಜೊತೆಯಾಗಿ..! —- ೩.ನನಗಸೂಯೆ..! ಅವಳನ್ನು ಸೋಕಿ ಹೋಗುವ ತಂಗಾಳಿ ಮೇಲೆ ಅವಳ ಮೈ ಮೇಲೆರಗುವ ಬಿಸಿಲ ಮೇಲೆ ನನಗೊಂದಿಷ್ಟು ಜಾಗ ನೀಡದ ಅವಳ ಮನಸಿನ ಮೇಲೆ ..!   —- ೪. ನಿನ್ನ ಮಾತಿಗಿಂತ ಮೌನವೇ ಎನಗಿಷ್ಟ.. ಮೌನದೊಳು ನೀನಾಡದ ಅದೆಷ್ಟು ಮಾತುಗಳು…!!   —– ೫. ಶಶಿಯಾಗಮನದಿ ಜಿಲ್ಲೆಂದು ಪುಳಕಗೊಂಡಿದೆ […]

ಪಂಜು ಚುಟುಕ ಸ್ಪರ್ಧೆ: ಡಾ. ಆಜಾದ್ ಐ ಎಸ್ ಅವರ ಚುಟುಕಗಳು

1.    ನಿನ್ನೆ ಮಳೆ ಹನಿ ಅಂಗೈಲಿದೆ ಇನ್ನೂ ನಿನ್ನೇ ನೆನೆದು ಕುಳಿತಿರುವೆ ಇನ್ನೂ ನಿನ್ನೀ ತಪನದ ಬೇಗೆಯಲಿ ಬರಿದೇ ನನ್ನೇ ಮರೆತಿರುವೆ ವರ್ಷಾ ನೀ ಮತ್ತೆ ……………..ಬರದೇ……………..   2.    ಮಿಂಚು-ಹೊಳಪು ಹುಟ್ಟಿದಾಗ ಮಗ ಮಮತೆ ಮಡಿಲಲಿ ಆಡುತಿರುವಾಗ ತುಂಬಿ ಆತಂಕ-ಕಂಬನಿ ಗೆಲುವಿಲ್ಲದಾಗ  ಬೆಳೆದು ಹೆಮ್ಮರ ನಾನು, ಏನೆನ್ನಲಿ ? ಆ ಮಮತಾ ಮಯಿಯ ಕಣ್ಣ ಕನ್ನಡಿ ಬರೆದಂತೆ ಕಂಡಿಲ್ಲ ನನ್ನ ವಯಸಿಗೂ  ……………ಮುನ್ನುಡಿ ……………   3.    ನೀ ನನ್ನ ಮನದನ್ನೆ […]

ಪಂಜು ಚುಟುಕ ಸ್ಪರ್ಧೆ:ಶಿವು.ಕೆ ಅವರ ಚುಟುಕಗಳು

೧. ಜೀನ್ ಜಿನುಗದೆ ಕವಿ ಹೃದಯದ ಜೀನ್ ಜಿನುಗದೆ ದಿನವೂ ತೊಳಲಾಡುತ್ತಿದ್ದೇನೆ ನಾ ಕವನ ಬರೆಯಲಾಗದೆ ಕಣ್ಣ ಕದ ತೆರೆದು ಓದುತ್ತೀಯಾ ನನ್ನೊಳಗಿನ ಕವಿತೆಗಳನ್ನು ೨. ಬೇರಿನೊಳಗೆ ಅಡಗಿ ಕುಳಿತ ಆಕಾಶದಗಲದ ದೊಡ್ಡಮರದಂತೆ ನನ್ನ ಪುಟ್ಟ ಹೃದಯದೊಳಗೆ ಬಚ್ಚಿಟ್ಟಿರುವ ಸಾಗರದಗಲದ ಒಲವು ನಿನಗೆ ಗೊತ್ತಾ? ೩. ಹಸಿರು-ಉಸಿರು ಆವಿಯಾದ ಸಾಗರದನಿಗಳು ಆಕಾಶಕ್ಕೇರಿ ಪರಸ್ಪರ ಡಿಕ್ಕಿಸಿದಾಗ ಮಳೆಸುರಿದು ನೆಲವೆಲ್ಲಾ ಹಸಿರು ದೈನಂದಿನ ಚಿತ್ರಗಳು ನನ್ನೆದೆಯಲ್ಲಿ ಭಾವಗಳಾಗ ಪರಸ್ಪರ ಡಿಕ್ಕಿಸಿದಾಗ ಪದ ಸುರಿದು ಕಾಗದದಲ್ಲಿ ಕವನದ ಉಸಿರು. ೪.  ಬದುಕು […]

ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಈಶ್ವರ ಭಟ್ ಅವರ ಚುಟುಕಗಳು

ಬರಹ "ಸೋತು ಬರೆಯುವ ಚಟ ನಿನಗೆ ಎಂದು ಜರೆಯದಿರು; ಗೆದ್ದಾಗ ಸಂಭ್ರಮಿಸುತ್ತೇನೆ ಬರೆಯಲಾಗುವುದಿಲ್ಲ."   ಒಳಗಿಳಿಯುವುದು "ಕೆಲವು ಬಣ್ಣಗಳು ಹೀಗೇ ಗಾಢವಾಗುತ್ತಾ ಕಾಡುತ್ತವೆ. ಕೊನೆಗೆ ಕಪ್ಪು ಎಂದೇ ಅನಿಸುತ್ತದೆ."   ಕೃಷ್ಣ "ಕಪ್ಪು?.. ನೀಲ ಮುರಳೀಲೋಲ ಹಗಲು ಗೊಲ್ಲ ರಾತ್ರಿ ನಲ್ಲ!"   ಸು-ಭಾಷಿತ "ಓ ಹುಡುಗಿ ದಾರಿಯಲಿ ನೆನೆನೆನೆದು ಕೃಷ್ಣನನು ಪಡೆಯದಿರು ಸೀರೆಯನು ಉಳಿಸೆ ಮಾನ! ಈ ಬಾರಿ ಕತ್ತಿಯನು ಬೇಡಿಕೋ ಓ ಹುಡುಗಿ ಉಳಿಸಲಾರರು ಯಾರೂ ನಿನ್ನ ಪ್ರಾಣ!"   ನಾನಾಗುವುದು "ನಾನು ಕಡಲೆಂದುಕೊಂಡಿದ್ದೇನೆ! […]

ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಡಂಕಿನ್ ಝಳಕಿ ರವರ ಚುಟುಕಗಳು

ರೋಷ   ಗಾಂಧಿಯಬುರುಡೆಯ ಮೇಲೆ   ಕೂತು ಕಾಗೆಯೊಂದು   ಕುಕ್ಕುತ್ತಿತ್ತು ರೋಷದಲಿ   ಬಳಿಸಾರಿ ಕೇಳಿದೆ ಏತಕ್ಕೆಂದು.   “ಮೂರ್ಖನಿವನು, ಗುಡಿಸಿಬಿಟ್ಟ   ಕೊಳಚೆ ಪ್ರದೇಶವನು   ಸಾಯಬೇಕಾಗಿದೆ ಹಸಿವಿನಿಂದ ನಾವಿನ್ನು”,   ಎಂದಿತು ನೊಂದು.   ಯಾರಿಗೆ?   ದುಂಬಿಗಳೆಲ್ಲಾ   ಮಲಗಿದ ಮೇಲೆ   ರಾತ್ರಿರಾಣಿ ಮೆಲ್ಲಗೆ   ವದ್ದೆ ಕನಸುಗಳ   ಕಂಪ ಚೆಲ್ಲಿ   ಕರೆವುದಾದರೂ   ಯಾರಿಗೆ? ದೃಷ್ಟಿ   ಬೈಬಲ್ ಪ್ರಾರ್ಥನೆ ನಡೆಯುತ್ತಿತ್ತು…   “ಒಂದು ಹಣ್ಣಿಗಾಗಿ […]