೧. ನವ ಪ್ರೇಮಿಗಳ ಪಜೀತಿ ಪ್ರಶ್ನೆ: ಉತ್ತರ ಗೊತ್ತಿದ್ದರು ಇಬ್ಬರೂ ಹೇಳ್ಲಿಲ್ಲಉತ್ತರ: ಪ್ರಶ್ನೆಯನ್ನು ಒಬ್ಬರಿಗೊಬ್ಬರು ಕೇಳಿ ಕೊಳ್ಳಲೆ ಇಲ್ಲಾ .. ೨. ಬದುಕಿನ ಹಾದಿ ಯೌವನದ ಹಾದಿ ಒಂದು ಪಾಚಿ ರಸ್ತೆಹಿಡಿತ ತಪ್ಪಿ ಜಾರಿ ಬಿದ್ದ ಜೋಡಿಗಳೆಷ್ಟೋಗೃಹಸ್ಥನ ಹಾದಿ ಒಂದು ಸುವ್ಯವಸ್ಥೆಹಿಡಿದ ಕೈ ತಪ್ಪದ ಹಾಗೆ ನೋಡಿಕೊಳ್ಳಬೇಕು ಆದಷ್ಟು… ೩. ಲೇಬಲಿಂಗ್ (ಹಣೆಬರಹಕ್ಕೆ ಹೊಣೆ ಯಾರು) ಲೈಫ ಬಾಯ್, ಬರಿ ಕೈ ತೊಳೆದರೆಲಕ್ಸ್ , ಕತ್ರಿನಾಳಿಗೆ ಸ್ಟಾರ್ ಪಟ್ಟ ತಂದು ಕೊಟ್ಟಿತುಕರ್ಮ ಚರ್ಮ ಬೇರೆ ಬೇರೆ ಯಾದರೂಅವೆರಡು […]
Archive for the ‘ಚುಟುಕ’ Category
ಚುಟುಕಗಳು: ಮಂಜು ಎಂ. ದೊಡ್ಡಮನಿ






















1 ಒಲವಿನ ನೋಟಿಗೆ ಕನಸುಗಳ ಚಿಲ್ಲರೆ ಕೊಟ್ಟ ಹುಡುಗಿ.. ನನ್ನ ಹೃದಯವನೆಂದು ಕ್ರಯಕ್ಕೆ ಪಡೆಯುತ್ತಿಯ..? 2 ನಿನ್ನೆದುರು ನಾ ಹಾಕುವ ಕಣ್ಣಿರಿಗೆ ಬೆಲೆ ಸಿಗದಿದ್ದರೂ ಚಿಂತೆಯಿಲ್ಲ ಆ ಕಣ್ಣುಗಳ ಕಣ್ಣಿರಿಗೆ ನೀನೆಂದು ಕಾರಣಳಾಗಬೇಡ..! 3 ನನ್ನೆದೆಗೆ ಗುಂಡಿಡುವ ಮೊದಲು ಗುರಿಯನ್ನೊಮ್ಮೆ ಸರಿಯಾಗಿ ನೋಡು ಗುಂಡುಗಳು ನಿನ್ನೆದೆಯ ಹೊಕ್ಕಾವು..! 4 ಸಾಧನೆಗಳ ಸಾಧಕರ ಜೀವನವ ಓದುವಾಗ ಬೆನ್ನುಡಿಯಲ್ಲಿ ಸಿಕ್ಕಿದ್ದು ; ಬರೀ ನೋವು ಸಂಕಟ ಬಡತನ ಮತ್ತು ಅವಮಾನಗಳ ಬೃಹತ್ ಗಂಟು..! 5 ನನ್ನ ಹೃದಯದ ಗೋಡೆಗಳಿಗೆ ನೀನೆ […]
ಚುಟುಕಗಳು: ವಾಸುಕಿ ರಾಘವನ್






















1 ರಾಯಲ್ ಫ್ಯಾಮಿಲಿಯಲ್ಲಿ ಹುಟ್ಟಿತು ಕಂದಮ್ಮ ಇಟ್ಟರು ಮುದ್ದಾದ ಹೆಸರು ಸೀಮಾ ಅಂತ ನೆಲೆಸಿದ್ದರೇನಂತೆ ತೆಲಂಗಾಣದಲ್ಲಿ ಪ್ರಸಿದ್ಧಿಯಾಗಿದ್ದಾಳೆ ಇಂದು ರಾಯಲ್-ಸೀಮಾ ಅಂತ! 2 ಗಂಡ ಹೆಂಡತಿ ಇಬ್ಬರೇ ಖುಷಿಯಾಗಿದ್ರೆ ನಮ್ಮ ಸಮಾಜಕ್ಕೇನು ಯೂಸು? ಅದಿಕ್ಕೆ ಮೂಗು ತೂರಿಸ್ಕೊಂಡ್ ಬರ್ತಾರೆ ಯಾವಾಗ ಹ್ಯಾಪಿ ನ್ಯೂಸು? 3 ಅದೆಷ್ಟು ತಾರತಮ್ಯ ಹೆಂಗಸರೆಡೆಗೆ ನಮ್ಮ ಈ ಸಮಾಜದಲ್ಲಿ ಅಡುಗೆಯವರೆಲ್ಲ ಕೂಗುತ್ತಿದ್ದರು "ಸಾರ್ ಗೆ ಅನ್ನ? ಸಾರ್ ಗೆ ಅನ್ನ?" ಕೇಳುವುದಕೆ ಒಬ್ಬನೂ ಇರಲಿಲ್ಲ ನಿಮಗೇನು ಬಡಿಸಲಿ ಮೇಡಮ್ ಅಂತ! 4 ನಾನು […]
ಚುಟುಕಗಳು: ಹರ್ಷವರ್ಧನ್






















೧. ವಿಪರ್ಯಾಸ ಕೋಟಿ ಕೋಟಿ ಕೊಂಡೊಯ್ಯುವರು ಹುಂಡೀಲಿ ಕಟ್ಟಲು.. ಕಾಣದೇ ಇವರಿಗೆ ಹಸಿದ ಜನರ ಖಾಲಿ ಬಟ್ಟಲು! *** ೨. ಕಿಚ್ಚು ಒಂದೊಂದು ಬಲ್ಬುಗಳ ಉರಿಸಲು ಬೇಕು ಒಂದೊಂದು ಸ್ವಿಚ್ಚು, ಆದರೆ ನೂರಾರು ಹಣತೆಗಳ ಉರಿಸಲು ಸಾಕು ಒಂದೇ ಕಿಚ್ಚು! *** ೩. ಮನೆ ಎನ್ನೆದೆ, ಶಿಥಿಲಗೊಂಡಿಹ ಗೂಡು ಎಂದೋ ಹಾರಿದ ಹಕ್ಕಿಯದು.. ಈಗ ನನ್ನ ಮನೆ!! *** ೪. ಬಡವ ನಾನು ಬಡವ, ಪ್ರೀತಿಸುವ ಜೀವ ಸಿಗದ ಹೊರತು ಯಾರೂ ಶ್ರೀಮಂತರಲ್ಲ.. ಎಲ್ಲ ಬಡವರೇ!! […]
ಚುಟುಕಗಳು: ಹರ್ಷ ಮೂರ್ತಿ






















೧. ವಿರಹ ನೋಡಲು ನಿನ್ನನೆ ಪುನಃ ಕಾಡಿದೆ ಮನಸು ವಿನಃ ಬರಲು ನಾ ನಿನ್ನ ಸನಿಹ ತಡೆದಿದೆ ಈ ವಿರಹ ೨. ಬೇಸ್ತು ಅದು ಕೂಡ blade ಕಂಪನಿ ಎಂದು ತಿಳಿದು ಬಂದಾಗ ಹಣ ಕಳೆದುಕೊಂಡ ಸ್ನೇಹಿತರ ಕಂಡು ಬಿದ್ದು ಬಿದ್ದು ನಕ್ಕಿದ್ದ ಗುಂಡ ದೊಡ್ಡದಾಗಿ.. ನಂತರ ಬಾಯಿ ಬಡಿದುಕೊಳ್ಳತೊಡಗಿದನು ತಾನೂ ಅಲ್ಲೇ ಹಣ ಇಟ್ಟಿದ್ದು ನೆನಪಾಗಿ! ೩. ಶುದ್ಧ-ಅಶುದ್ಧ ಶುದ್ಧವಾಗಿದ್ದರೆ holy.. ಕೆಟ್ಟು ಹೋಗಿದ್ದರೆ ಪೋಲಿ! ೪. ತರಲೆ ಪಕ್ಕದ್ಮನೆ ಹುಡುಗಿ […]
ಚುಟುಕಗಳು: ಗುರುಪ್ರಸಾದ ಹೆಗಡೆ






















೧) ಪಾರು ಕೈ- ಕೊಟ್ಟಳು ಹುಡುಗಿ ಕಂಗೆಟ್ಟ ಹುಡುಗ, ಅಯ್ಯೋ ಎಲ್ಲ ಮುಗಿದೇ ಹೋಯಿತೆಂದರು ಜನ. – ಹುಡುಗ ಬಚಾವಾಗಿದ್ದ! ೨) ಜೀವ ಅಕ್ವೆರಿಯಮ್ಮಿನಿಂದ ಚಿಮ್ಮಿದ ಮೀನು – ಹೊರಗೆ ಏನು ಇಲ್ಲವೆಂಬ ಸತ್ಯವ ಅರಿತು ಮತ್ತೆ ನೀರಿಗೆ ಹಾರಿತು. ೩) ಸೌಂದರ್ಯ ಪ್ರಜ್ಞೆ ಬ್ಯೂಟಿ – ಪಾರ್ಲರಿನಿಂದ ಬಂದ ಬೆಡಗಿಯ ಕೈಯ ಹಿಡಿದು ಮೊಮ್ಮಗ ಮನೆಗೆ ಕರೆದೊಯ್ದ. ೪) ಗಡಿಯಾರ ವರ್ಷಗಟ್ಟಲೆ ತಿರುಗಿತು ಗಡಿಯಾರದ ಮುಳ್ಳು, ಎಷ್ಟು ಸುತ್ತಿದರೂ ತಲುಪಿದ್ದು […]
ಕೆಲವು ಚಿಕ್ಕ ಪದ್ಯಗಳು: ಉರ್ಬಾನ್ ಡಿ’ಸೋಜ, ಮೇಗರವಳ್ಳಿ ರಮೇಶ್






















ಚುಟುಕ -೧ ಪ್ರೇಮಿಕಾ ನಿನ್ನೆಯವರೆಗೆ ಸಿಹಿ ಮಾತುಗಳನ್ನಾಡದ ನನ್ನ ನಲ್ಲೆ ಇ೦ದಿನಿ೦ದ ಅದನ್ನೇ ಮಾತಾನಾಡುತ್ತಿದ್ದಾಳೆ… ನಿನ್ನೆ ನಮ್ಮ ಮೊದಲ ರಾತ್ರಿ ಅವಳು ಜೇನು ಕುಡಿದಿದ್ದಾಳೆ. ಚುಟುಕ:೨ – ಬುದ್ದಿ ಅವರು ಇವರು ಜಾರಿ ಬಿದ್ದಾಗ ನಕ್ಕವಳು ತಾನು ಬಿದ್ದಾಗ ಅವರು ಇವರು ನಕ್ಕಾಗ ಸಿಡಿಮಿಡಿಗೊ೦ಡಳು. ಚುಟುಕ:೩ – ನಗು ಮಗಳು ನಕ್ಕಾಗ […]
ಚುಟುಕಗಳು: ಗುರುನಾಥ್ ಬೋರಗಿ






















೧ ನಾನು ನಿನಗೆ ಪ್ರೀತಿಸುವುದು ಹೇಗೆಂದು ಹೇಳಿ ಕೊಟ್ಟೆ. ನೀನದನು ಇನ್ನೊಬ್ಬನಲಿ ಪ್ರಯೋಗಿಸಿ ಬಿಟ್ಟೆ ೨ ಚುಚ್ಚಿ ಗಾಯಗೊಳಿಸುವ ದರ್ಜಿಯ ಸೂಜಿಗೆ, ಎರಡನೊಂದಾಗಿಸುವ ಹಿರಿಗುಣವೂ ಇದೆ. ೩ ಬಿಳಿ ಕಾಗದ ಮೇಲೆ ದುಂಡಾಗದೆಯೇ ಸತಾಯಿಸಿದ ನನ್ನ ಅಕ್ಷರಗಳು, ನಿನ್ನ ಕೆನ್ನೆ, ತುಟಿ ಮೇಲೆ ಬರೆದಾಕ್ಷಣವೇ ಸಾಲು ಮುತ್ತಾದವು ೪ ಹರಯದ ಅವಸರಕ್ಕೆ ಮೊಳೆತ ಭ್ರೂಣಕೆ, ದವಾಖಾನೆ ದಾದಿಯರ ಕೈಗವುಸುಗಳದ್ದೇ ಭಯ ೫ ಗೆಳತೀ.. ನನ್ನ ಪಾಲಿಗೆ ; ನಿನ್ನ ನೆನಪುಗಳೇ […]
ಪ್ರೀತೀಶನ ಚುಟುಕಗಳು






















೧. ಸಾಧ್ಯ ಮರಳುಗಾಡಿನಲೂ ಹೂದೋಟ ಬೆಳೆಯಬಲ್ಲೆ ನಾನು, ಭಾವಗಳು ಹುಟ್ಟಬೇಕಷ್ಟೇ. ೨. ಪರಿಹಾರ ಹೃದಯಕೊಂದು ಒಡೆದ ಗಾಜು ನೆಟ್ಟಿದೆ, ಕಿತ್ತೊಗೆಯಲೊಂದು ಹೂವು ಬೇಕಿದೆ. ೩. ಅರಿವು ಕೊಳಕು ಮೆತ್ತಿದ್ದು ಬಟ್ಟೆಗೆ ತಿಳಿಯಬೇಕಿಲ್ಲ ಕೊಳೆಗೆ ಗೊತ್ತಾಗಬೇಕು ಇಲ್ಲ ಸಾಬೂನು ಅರಿಯಬೇಕು. ೪. ತಪ್ಪು ಮಡದಿ ಸಿಟ್ಟಾದರೆ ತಪ್ಪು ಯಾರದ್ದೇ ಆಗಿರಬಹುದು ಮಗ ಕೋಪಿಸಿಕೊಂಡರೆ ಮಾತ್ರ ತಪ್ಪು ನನ್ನದೇ. ೫. ಗುರಿ ನದಿ ಹುಟ್ಟಿದಾರಭ್ಯ ಸಮುದ್ರ ಹುಡುಕಿ ಹೊರಡುವುದಿಲ್ಲ; ಹರಿಯುತ್ತ ಹೋಗುವುದು ಅನಿವಾರ್ಯ ಕರ್ಮವದಕೆ. […]
ಚಿಕ್ಕ ಪುಟ್ಟ ಪದ್ಯಗಳು: ಅಶೋಕ ಶೆಟ್ಟರ್






















೧. ಚರಿತ್ರೆಯ ತತ್ವವ ತಿಳಿಯ ಹೊರಟು ಜಗದ ಜಟಿಲ ದ್ವಂದ್ವಗಳ ಗೋಜಲಿನಲ್ಲಿ ಸಿಗೆಬಿದ್ದ ತತ್ವಜ್ಞಾನಿ ಹಾಲುಗಲ್ಲದ ಮೊಮ್ಮಗಳ ನಗೆಯ ಮಡುವಿನಲ್ಲಿ ಸುಳಿತಿರುಗಿ ಮುಗುಳ್ನಕ್ಕ ೨. ಇಂದಿನ ನಡುಹಗಲ ಕಾಡಿನ ಮೌನ ಮನುಕುಲದ ಶೈಶವದ ಸಕಲ ತೊಳಲಾಟ ಕಳವಳ ದಿಗ್ಭ್ರಮೆ ನಲಿವು ಹಸಿ ಹಸಿ ಕಾಮ ಎಲ್ಲ ಮೇಳೈಸಿದ ಆದಿಮ ಸಂಗೀತ ೩. ಶಬ್ದಗಳ ಭಾಷೆ, ಹೆಜ್ಜೆ – ಗೆಜ್ಜೆಗಳ ಭಾಷೆ ಲಯಗಳ, ರೇಖೆ ಬಣ್ಣಗಳ ಭಾಷೆ ಎಲ್ಲದರ ಹಂಗ ಹರಕೊಂಡು ಎರಡು ಜೋಡಿ […]