Facebook

Archive for the ‘ಲೇಖನ’ Category

ಬದುಕೇ ಶೂನ್ಯವೆಂಬ ನಿಜದನಿಯ ಎಲ್ಲರೆದೆಗೆ ಆವಾಹಿಸಿದ ‘ಕೊರೋನಾ’: ಸುಂದರಿ. ಡಿ.

ಕಾರ್ಮೋಡ ಆವರಿಸಿದ ಇಳಿಸಂಜೆಯ ಮಬ್ಬಾದ ವಾತಾವರಣ ಕುಳಿತು ನೋಡುತಿರಲು ಆ ವಾತಾವರಣವೇ ಇಡೀ ಜಗತ್ತಿಗೆ ಕವಿಯಿತೇ? ಎಂಬ ಪ್ರಶ್ನೆ ಆ ಸವಿಯಾದ ಇಳಿಸಂಜೆಯನ್ನು ಸವಿಗಾಣದಂತೆ ಮನದ ಮೂಲೆಯಲಿ ಮನೆಮಾಡಿದ ಆತಂಕದ ಪರಮಾವಧಿಯ ಸ್ಥಿತಿ ಅಂದಿನದು. ಆದರೂ ಒಮ್ಮೆ ದವಾಖಾನೆಯ ಕಿಟಕಿಯ ಸರಳುಗಳ ಭದ್ರ ಸೆರೆಯಿಂದ ಬಿಡಿಸಿಕೊಂಡು ಬಾಂದಳದ ಬಾನಾಡಿಯಂತೆ ವಿಹರಿಸುತ ಇಳಿಸಂಜೆಯ ಸವಿಯುವಾಸೆ. ಕಿಟಕಿಗಳಿಂದ ಹೊರ ನೋಟ ಮೇಲ್ನೋಟಕ್ಕೆ ಸಂತಸ ಕೊಟ್ಟರೂ, ಮನದ ಮೂಲೆಯಲಿ ಬಲು ಭಾರವ ಬಹಳ ಕಾಲ ಹೊತ್ತ ಅನುಭವ. ಕಳೆದ ರಾತ್ರಿಯ ಕಳೆಯುವುದೇ […]

ಆಚರಣೆಗೆ ಸಿಮೀತವಾಗದಿರಲಿ. . . . . : ಶಿವಲೀಲಾ ಹುಣಸಗಿ ಯಲ್ಲಾಪುರ

ಯಾರಿಗೆಲ್ಲ ಬೇಡ ಹೇಳಿ ಎರಡು ಹೊತ್ತಿನ ಊಟ, ಮೈ ಮುಚ್ಚಲು ಬಟ್ಟೆ, ನೆತ್ತಿಗೆ ಮಳೆ, ಗಾಳಿ, ಚಳಿಯಿಂದ ರಕ್ಷಣೆ, ಹರಿದ ಕಂಬಳಿ, ಕೌದಿ, ಚಾದರ, ಹರಕು ಚಾಪಿ, ಗೋಣಿಚೀಲ ಅಪರೂಪಕ್ಕೊಮ್ಮೆ ಮೈ ಸೋಪು, ತಲೆಗೆ ಎಣ್ಣೆ ಹಚ್ಚಿಕೊಂ ಡು ಬದುಕ ಕಳೆದ ಅದೆಷ್ಟೋ ಪ್ರತಿಮೆಗಳು ಕಣ್ಣಮುಂದೆ ಹಾದು ಹೋಗಿರುವುದನ್ನು ಅಥವಾ ಅನುಭವಿಸಿರುವುದ ನ್ನು ಎಂದಾದರೂ ಮರೆಯಲಾದಿತೇ?? ಅವನ್ನೆಲ್ಲ ಒದಗಿಸಲು ಕತ್ತಲೆಯಲಿ ಕರಗಿದವರಾರು?? ಕರಿಕಲ್ಲ ಪಾಠಿ ಬಳಪ ಬರೆದಿದ್ದಕ್ಕಿಂತ ತಿಂದಿದ್ದೆ ಜಾಸ್ತಿ. ಗಂಟಲಲ್ಲಿ ಸಿಕ್ಕ ಬಳಪದ ಚೂರ ಹೊರತೆಗೆದು […]

ಗುರುವೇ ಸರ್ವಸ್ವ: ಫರಜಾನಾ ಹಬುಗೋಳ

“ಶಿವಪಥವರಿವಡೆ ಗುರುಪಥ ಮೊದಲು” ಎಂದು ಶರಣರು ಹೇಳಿದ್ದಾರೆ. ಜೀವನದಲ್ಲಿ ಗುರಿ ಹಾಗೂ ಗುರು ಬಹುಮುಖ್ಯ. ಗುರುಗಳು ಬೀರಿದ ಪ್ರಭಾವದಿಂದ ಜೀವನದ. ದಿಕ್ಕನ್ನೇ ಬದಲಾಗಿ ಯಶಸ್ಸನ್ನು ಕಂಡು ಸಾಧನೆಯ ಹಾದಿ ತುಳಿದವರ ಸಂಖ್ಯೆ ಸಾಕಷ್ಟಿದೆ. ಗುರಿ ಮುಟ್ಟಲು ಸೋಪಾನ ಅಗತ್ಯ. ಗುರು ಸ್ಥಾನಕ್ಕೆ ತನ್ನದೇ ಆದ ಘನತೆ ಗೌರವಗಳೊಂದಿಗೆ ತನ್ನದೇ ಆದ ಔನ್ನತ್ಯವೂ ಇದೆ. ನಗುರೋರಧಿಕಂ ತತ್ವಂನ ಗುರೋರಧಿಕಂ ತಪಃ| ತತ್ವಜ್ಞಾನಾತ್ ಪರಂ ನಾಸ್ತಿ ತಸ್ಮೈಶ್ರೀ ಗುರುವೇ ನಮಃ°|| ಗುರುವಿಗಿಂತಲೂ ಅಧಿಕವಾದ ತತ್ವವಿಲ್ಲ; ಗುರುವಿಗಿಂತಲೂ ಅಧಿಕವಾದ ತಪಸ್ಸಿಲ್ಲ; ತತ್ವಜ್ಞಾನಕ್ಕಿಂತಲೂ […]

ರಾಧಾಕೃಷ್ಣ: ಆರಾ

“ನೀನೆ ನನ್ನಯ ಪ್ರಾಣ ನೀನೆ ತ್ರಾಣ. ನೀನೆ ಆಸರೆ ನೀನೇನೆ ನನ್ನ ಜೀವನ.. ಸನಿಹವೆ ನೀ ಇರದಿರಲು… ಹುಡುಕಿದೆ ನನ್ನ ಮನವನ್ನೆ!. ಕಣ್ಣೆದುರು ನೀನಿರದೆ, ಕಾಣದೆ ಹೋದೆ ನನ್ನೆ ನಾ ರಾಧೆ. ನಿನ್ನ ಬಿಟ್ಟು ಹೇಗೆ ಇರಲಿ ನಾನು ಒಬ್ಬಳೆ……” ಪ್ರಸ್ತುತ ಕೊರೋನಾ ಸಂಕಷ್ಟದಲ್ಲಿ ಹಿರಿಯ-ಕಿರಿಯ ಭೇದಭಾವವಿಲ್ಲದೆ ಎಲ್ಲರ ಮನಸೂರೆಗೊಂಡಿರುವ ಧಾರಾವಾಹಿ ರಾಧಾಕೃಷ್ಣ. ರಾಧಾಕೃಷ್ಣರ ಅಮರ ಪ್ರೇಮಕಥೆಯ ಸಾರಾಂಶವನ್ನೊಳಗೊಂಡಿದೆ. ಇದಾಗಲೇ ಹಿಂದಿಯಲ್ಲಿ 450 ಕ್ಕೂ ಅಧಿಕ ಎಪಿಸೋಡ್ ಗಳನ್ನು ದಾಟಿ ನೋಡುಗರ ಮನಗೆದ್ದಿದೆ. ಕನ್ನಡದಲ್ಲಿ 100ಕ್ಕೂ ಅಧಿಕ […]

ಹಬೆಯಾಡುವ ಇಡ್ಲಿ!: ದಿನೇಶ್‌ ಉಡಪಿ

ಎರಡು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಾ ಇತ್ತು. ಇಂದು ಸಂಜೆಯಂತೂ ಅದರ ಆರ್ಭಟ ಜೋರಾಗಿ ಸುಮಾರು ಹೊತ್ತು ಮಳೆ ಬಂದಿತ್ತು. ಕಾಲೇಜಿನಿಂದ ಬಂದವನು ಮನೆ ಸೇರುವಷ್ಟರಲ್ಲಿ ತೋಯ್ದು ತೊಪ್ಪೆಯಾಗಿದ್ದೆ. ಒಂದು ಬಿಸಿ ನೀರಿನ ಸ್ನಾನ ಮುಗಿಸಿ, ಬಟ್ಟೆ ಬದಲಿಸಿ, ಮಳೆಯ ಸೊಬಗನ್ನು ಸವಿಯುತ್ತಾ ಕಿಟಕಿಯ ಮುಂದೆ ಕೂತಿದ್ದೆ. ಸ್ವಲ್ಪ ಹೊತ್ತಿನಲ್ಲಿ ಬಿಸಿ ಚಹಾದ ಕಪ್‌ ಮತ್ತು ಪ್ಲೇಟಿನಲ್ಲಿ ಕಾಯಿ ಚಟ್ನಿಯೊಂದಿಗೆ ಹಬೆಯಾಡುವ ಇಡ್ಲಿ ಮುಂದೆ ಬಂದು ಕೂತಿತ್ತು!. ಇಳಿ ಸಂಜೆಯ ಮಬ್ಬು-ಮಳೆ,-ಚಳಿ, ಮತ್ತು ಹಬೆಯಾಡುವ ಇಡ್ಲಿ, […]

ಆನ್ಲೈನ್ ಶಿಕ್ಷಣದಿಂದ ಸರ್ಕಾರಿ ಶಾಲಾ ಶಿಕ್ಷಕರುಗಳಿಗೆ ಆಗುತ್ತಿರುವ ತೊಂದರೆಗಳು : ತೇಜಾವತಿ ಹುಳಿಯಾರ್

ದೇಶದೆಲ್ಲೆಡೆ ಜನಜೀವನದೊಂದಿಗೆ ಮಕ್ಕಳ ವಿದ್ಯಾಭ್ಯಾಸವನ್ನೂ ಅಸ್ತವ್ಯಸ್ತಗೊಳಿಸಿರುವ ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಶೈಕ್ಷಣಿಕ ವರ್ಷದ ಆರಂಭದಿಂದಲೂ ಮಕ್ಕಳ ವಿದ್ಯಾಭ್ಯಾಸ ಗೊಂದಲದ ಗೂಡೇ ಆಗಿದೆ. ಒಂದು ಕಡೆ ಇಷ್ಟೊಂದು ದೀರ್ಘ ಕಾಲದ ರಜೆಯಿಂದಾಗಿ ಮಕ್ಕಳು ತಾವು ಕಲಿತದ್ದೆಲ್ಲವನ್ನು ಮರೆತು ಕುಳಿತಿದ್ದಾರೆ. ಇನ್ನೊಂದೆಡೆ ಶಿಕ್ಷಕರು ಮಕ್ಕಳನ್ನು ಈ ಪರಿಸ್ಥಿತಿಯಲ್ಲಿ ಕಲಿಕೆಗೆ ಅಣಿಗೊಳಿಸಿಕೊಂಡು ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿದೆ. ಎಲ್ಲಾ ಮಕ್ಕಳಿಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಶಾಲೆಯ ಸಿದ್ದ ಭೌತಿಕ ಕಲಿಕಾ ಕೊಠಡಿಗಳಲ್ಲಿ ಬೋಧನೆ ಮಾಡಲು ಅವಕಾಶವಿಲ್ಲದ ಈ ಸಂದರ್ಭದಲ್ಲಿ ಮಕ್ಕಳ ಮೂಲ […]

ವರ್ಕ್ ಪ್ರಮ್ ಹೊಮ್ (WFH) ಆಗು -ಹೋಗುಗಳು: ಪ್ರವೀಣ್ ಶೆಟ್ಟಿ, ಕುಪ್ಕೊಡು

ಹಿಂದೆ ಒಂದು ಕಾಲ ಇತ್ತು, ತಿಂಗಳಿಗೆ ಒಂದು WFH ತಗೆದುಕೊಳ್ಳಲು ಮ್ಯಾನೇಜರ್ ಗಳ ಕೈಕಾಲು ಹಿಡಿಯಬೇಕಾಗುತಿತ್ತು. ಆದರೆ ಕೊರೊನಾ ಎಲ್ಲಾ ರೀತಿಯ ವರ್ಕ್ ಕಲ್ಚರ್ ಅನ್ನೇ ಬುಡಮೇಲು ಮಾಡಿಬಿಟ್ಟಿದೆ. ಸರಕಾರ ಲಾಕಡೌನ್ ಜೊತೆಗೆ ಐಟಿ ಕಂಪನಿ ನೌಕರರು ಮನೆಯಿಂದಲೇ ಕಾರ್ಯನಿರ್ವಹಿಸಿ ಎಂದು ಆದೇಶ ನೀಡಿದ ನಂತರ ಕಂಪನಿಗಳು ಮೊದ ಮೊದಲಿಗೆ ಹೆದರಿದರೂ, ಅತೀ ಶೀಘ್ರವಾಗಿ ಹೊಸ ರೀತಿಯ ಕೆಲಸದ ವಾತಾವರಣಕ್ಕೆ ಹೊಂದಿಕೊಂಡವು. ತಮ್ಮ ಉದ್ಯೋಗಿಗಳಿಗೆ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಗಳನ್ನು ಅವರವರ ಮನೆಗಳಿಗೆ ತಲುಪಿಸಲಾಯಿತು. ನೆಟ್ವರ್ಕ್ ಗಾಗಿ ಕಂಪನಿಯಿಂದ […]

ಪತ್ರಿಕೋದ್ಯಮಕ್ಕೆ ಕಾಲಿಡುತ್ತಿದೆ “ಡಬಲ್ ಸ್ಟಾಂಡರ್ಡ್” ಎಂಬ ಭೂತ!: ಚವೀಶ್‌ ಜೈನ್‌

ಆದ್ದರಿಂದ ಪತ್ರಿಕೋದ್ಯಮ ಎಂಬಂತಹ ಕ್ಷೇತ್ರದ ಮೇಲೆ ಎಲ್ಲರಿಗೂ ಬಹಳ ಆಸಕ್ತಿ. ಪತ್ರಕರ್ತನಾಗಿ ದೇಶಕ್ಕೆ ಸೇವೆ ಸಲ್ಲಿಸಬೇಕೆಂಬ ಮಹತ್ವಾಕಾಂಕ್ಷೆ ತುಂಬಾ ಜನರಲ್ಲಿ ಇರುತ್ತದೆ. ಅದರಲ್ಲೂ ಇವತ್ತಿನ ಯುವ ಪೀಳಿಗೆಯಲ್ಲಿ ಇನ್ನಷ್ಟು ಆಸಕ್ತಿ. ಪತ್ರಿಕೋದ್ಯಮ ನಾವು ಭಾವಿಸುವಷ್ಟು ಸುಲಭದ ವೃತ್ತಿಯಲ್ಲ. ಜೀವಕ್ಕೆ ಸಂಚಕಾರವನ್ನೊಡ್ಡುವ ಹಲವು ಸಂದರ್ಭಗಳು ಎದುರಾಗುತ್ತವೆ. ಆದರೆ ಆ ಸಂದರ್ಭದಲ್ಲಿ ದೃತಿಗೆಡಬಾರದು. ಎಂತಹ ಕಠಿಣ ಸಂದರ್ಭದಲ್ಲೂ ಸತ್ಯವನ್ನೇ ಉಸಿರಾಗಿಸಿಕೊಂಡಾಗ ಅಂತಿಮ ಗೆಲುವು ನಮ್ಮ ಹೋರಾಟಕ್ಕೆ ಸಿಕ್ಕೇ ಸಿಗುತ್ತದೆ. ಪತ್ರಿಕೋದ್ಯಮ ಅದೆಷ್ಟೋ ಬಾರಿ ಇದನ್ನು ಸಾಧಿಸಿ ತೋರಿಸಿದೆ. ಸಾಕಷ್ಟು ಭ್ರಷ್ಟ […]

ದೇವಮಾನವ: ಡಾ. ದೋ. ನಾ. ಲೋಕೇಶ್

ಮಾಸಿದ ಬಟ್ಟೆ, ತಲೆಗೆ ಸುತ್ತಿದ ಕೊಳಕು ಟವೆಲ್, ಎಣ್ಣೆ, ನೀರು ಕಾಣದೆ ಧೂಳು ತುಂಬಿದ, ಕನಿಷ್ಟ ದಿನಕೊಮ್ಮೆ ಬಾಚಣಿಗೆಯೂ ಕಾಣದೆ ಗುಂಗುರು ಗುಂಗುರಾದ ಕೇಶರಾಶಿಯನ್ನು ಹೊಂದಿದ್ದ, ತನ್ನ ಶಿಳ್ಳೆಯೊಂದರಿಂದಲೇ ಹಯವೇಗದಲ್ಲಿ ಓಡುತ್ತಿದ್ದ ಬಸ್ಸನ್ನು ನಿಲ್ಲಿಸುತ್ತಿದ್ದ, ಹಾಗೂ ನಿಂತಿದ್ದ ಬಸ್ಸನ್ನು ಅದೇ ಶಿಳ್ಳೆಯಿಂದ ಚಲಿಸುವಂತೆ ಮಾಡುತಿದ್ದ ಎಲ್ಲರ ನಡುವೆ ಇದ್ದೂ ಇಲ್ಲದಂತಿದ್ದ ಅವನೊಬ್ಬನಿದ್ದ. ಅವನ ಹೆಸರೇ ಕ್ಲೀನರ್. ಹಿಂದೆ ನಮ್ಮ ಬಾಲ್ಯದಲ್ಲಿ ಹಳ್ಳಿಗಾಡಿನ ಸಾರಿಗೆ ಸಂಪರ್ಕ ಸಾಧನಗಳೆಂದರೆ ಖಾಸಗಿ ಬಸ್ಸುಗಳೇ. ಈಗಿನಂತೆ ಸಾರಿಗೆ ಸಂಸ್ಥೆಯ ಬಸ್ಸುಗಳಾಗಲಿ, ಜನಗಳನ್ನು ಸರಕು […]

ಬ್ಯಾಚುಲರ್ ಬದುಕಿನ ಬಾನ್ಗಡಿಗಳು…: ವಿನಾಯಕ ಅರಳಸುರಳಿ

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕಳಿಕೆ ಶುರುವಾಗಿದೆ. “ನೋಡ್ತಿರು…ದೊಡ್ಡ ಸಾಧನೆ ಮಾಡಿ ನಾನೇನು ಅಂತ ತೋರಿಸ್ತೀನಿ ಅವಳಿಗೆ!” ಅರ್ಧ ಕೆಜಿ ಅಳು, ಎರೆಡು ಕ್ವಿಂಟಾಲ್ ಹತಾಶೆ, ಎರೆಡು ಡಜನ್ ರೊಚ್ಚು, ಐದೂವರೆ ಕ್ವಾಟರ್ ನಶೆ ಹಾಗೂ ಸಾವಿರಾರು ಗ್ಯಾಲನ್ ದುಃಖ… ಇವೆಲ್ಲ ಒಟ್ಟಾಗಿ ಬೆರೆತ ಧ್ವನಿಯೊಂದು ಹಾಗಂತ ಅಬ್ಬರಿಸುತ್ತದೆ. “ಹೂ ಮಚ್ಚೀ.. ನೀನೇನಾದ್ರೂ ಅಚೀವ್ಮೆಂಟ್ ಮಾಡ್ಲೇಬೇಕು. ನಿನ್ನ ಬಿಟ್ಟೋಗಿದ್ದು ಎಷ್ಟು ದೊಡ್ಡ […]