Facebook

Archive for the ‘ಲೇಖನ’ Category

ಒತ್ತಡಮುಕ್ತ ಜೀವನ ಸಾಧ್ಯವೇ ?: ಗಾಯತ್ರಿ ನಾರಾಯಣ ಅಡಿಗ

ಇಂದಿನ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಒತ್ತಡಯುಕ್ತ ಜೀವನವನ್ನು ನಾವು ನಮಗೆ ಅರಿವಿಗೆ ಬಂದೋ ಬಾರದೆಯೋ ಅದನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೇವೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದೇವೆ. ಸ್ವಲ್ಪ ಹೊತ್ತು ಕುಳಿತು ಕಾಫಿ ಹೀರಲು ನಮ್ಮಲ್ಲಿ ಸಮಯವಿಲ್ಲ. ತಂದೆ – ತಾಯಿ, ಬಂಧು – ಬಳಗವನ್ನು ಹತ್ತಿರದಿಂದ ಮಾತನಾಡಲು ನಮ್ಮ ಉದ್ಯೋಗ ಬಿಡುತ್ತಿಲ್ಲ. ಮೊಬೈಲ್ ನಲ್ಲಿ ನಾವು ಗಂಟೆಗಟ್ಟಲೆ ವ್ಯವಹರಿಸುತ್ತೇವೆ. ಆದರೆ ನಮ್ಮ ಮಕ್ಕಳ ಜೊತೆ, ಅವರ ಆಸಕ್ತಿ – ಅಭಿರುಚಿಗಳೊಂದಿಗೆ ಬೆರೆಯುವ ಆಸ್ಥೆ ನಮಗಿಲ್ಲ. ಅವರ ಅನುಭವಗಳನ್ನು ನಮ್ಮೊಡನೆ […]

ಕಳೆದು ಹೋಗುವ ಸುಖ (ಭಾಗ 1): ಡಾ. ಹೆಚ್ಚೆನ್ ಮಂಜುರಾಜ್

ಗುರುತಿಸಿಕೊಳ್ಳುವುದಕಿಂತ ಕಳೆದು ಹೋಗುವುದೇ ಈ ಅಖಂಡ ವಿಶ್ವದ ಮೂಲತತ್ತ್ವವಾಗಿದೆ ಅಥವಾ ಗುರುತಿಸಿಕೊಂಡ ಮೇಲೆ ಕಳೆದು ಹೋಗುವುದೇ ಸೃಷ್ಟಿಯ ನಿಯಮವಾಗಿದೆ. ಅದು ಆಕಾಶಕಾಯವೇ ಇರಲಿ, ಜೀವಸೃಷ್ಟಿಯೇ ಇರಲಿ, ಮಾನವ ನಿರ್ಮಿತ ತತ್ತ್ವಸಿದ್ಧಾಂತಗಳೇ ಇರಲಿ, ಪದವಿ-ಪ್ರತಿಷ್ಠೆ-ಹುದ್ದೆ-ಅಧಿಕಾರ-ಅಂತಸ್ತು-ಸಾಧನೆಗಳೇ ಇರಲಿ ಎಲ್ಲವೂ ಕಾಲ ಕ್ರಮೇಣ ಕಳೆದು ಹೋಗುತ್ತವೆ ಮತ್ತು ಹಾಗೆ ಕಳೆದು ಹೋಗಬೇಕು. ಹಳತು ನಶಿಸುತಾ, ಹೊಸತು ಹುಟ್ಟುತಿರಬೇಕು. ‘ನಿದ್ದೆಗೊಮ್ಮೆ ನಿತ್ಯ ಮರಣ; ಎದ್ದ ಸಲ ನವೀನ ಜನನ’ ಎಂದಿಲ್ಲವೇ ಕವಿನುಡಿ. ಅಂದರೆ ಅಸ್ತಿತ್ವವು ವ್ಯಕ್ತಿತ್ವವನ್ನು ಹೊಂದಿದ ಮೇಲೆ ಸಾವು ಶತಸಿದ್ಧ ; […]

ಬರಹ – ನೂರು ನೂರು ತರಹ: ಡಾ. ಹೆಚ್ಚೆನ್ ಮಂಜುರಾಜ್

ಇತ್ತೀಚೆಗೆ ನನ್ನ ಪರಿಚಿತರೊಬ್ಬರು ‘ಬರೆಯುವುದು ಹೇಗೆ?’ ಎಂದು ಕೇಳಿಬಿಟ್ಟರು. ಇದುವರೆಗೂ ಇಂಥ ಪ್ರಶ್ನೆಯೊಂದನು ನಾನು ಕೇಳಿರಲೂ ಇಲ್ಲ; ಕೇಳಿಕೊಂಡಿರಲೂ ಇಲ್ಲ. ಅಚ್ಚರಿಯೆಂದರೆ ಏನೂ ಮಾತಾಡದೆ ಸುಮ್ಮನೆ ನಕ್ಕುಬಿಟ್ಟೆ. ಆಮೇಲನಿಸಿತು, ಗಂಭೀರನಾದೆ. ಇದು ಬರೆಹವೊಂದು ಉದಿಸುವ ಮುಹೂರ್ತ. ಅದನೇ ಬರೆದು ಬಿಡೋಣ ಎಂದು ಕುಳಿತು ಬರೆಯುತ್ತ ಹೋದೆ. ಈ ಬರೆಹ ಜನಿಸಿತು. ಅಂದರೆ ಬರೆಹದ ಪ್ರಾಥಮಿಕ ಲಕ್ಷಣವೇ ಕುಳಿತು ಬರೆಯುತ ಹೋಗುವುದು ಅಷ್ಟೇ. ಪರೀಕ್ಷೆಯಲ್ಲಿ ಮೂರು ಗಂಟೆಗಳ ಕಾಲ ಬರೆಯುತ್ತೇವೆ. ಹೇಗದು ಸಾಧ್ಯವಾಯಿತು? ಏಕಾಗ್ರತೆ, ಉದ್ದೇಶ, ಮನೋಭಾವ ಮತ್ತು […]

ದಯೆಯ ಯಾದೃಚ್ಛ ಕ್ರಿಯೆ (Random act of kindness): ದಿನೇಶ್ ಉಡಪಿ

ಶುಕ್ರವಾರ ಕಾಲೇಜಿನ ಕೆಲಸಕ್ಕೆ ರಜೆ ಹಾಕಿಕೊಂಡು, ಕೆಲವು ಅಗತ್ಯ ಕೆಲಸಕ್ಕಾಗಿ ಕೆ.ಆರ್.ನಗರಕ್ಕೆ ಹೋಗಬೇಕಿತ್ತು. ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿತ್ತು, ಅತಿಯಾದ ತೇವಾಂಶದ ಕಾರಣ ವಿಪರೀತ ಶೆಕೆಯೂ ಇತ್ತು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಕೆಲಸ ಮುಗಿಸಿಕೊಂಡು ಮೈಸೂರಿನತ್ತ ಹೊರಟೆ. ಬಿಳಿಕೆರೆ ಹತ್ತಿರ ಬರುವಷ್ಟರಲ್ಲಿ ಮಳೆ ಸುರಿಯತೊಡಗಿತು, ಕುಂಭದ್ರೋಣ ಮಳೆ ಅಂತಾರಲ್ಲ ಹಾಗೆ. ಕಾರಿನ ವೈಪರ್ ಪೂರ್ತಿ ವೇಗದಲ್ಲಿ ನೀರನ್ನು ತಳ್ಳುತ್ತಿದ್ದರೂ ರಸ್ತೆ ಕಾಣದಷ್ಟು ಮಳೆ. ಬಹುತೇಕ ಎಲ್ಲ ವಾಹನಗಳೂ ರಸ್ತೆ ಪಕ್ಕ ಹಾಕಿಕೊಂಡು ನಿಂತಿದ್ದರು. ನನ್ನ ಚಿರಪರಿಚಿತ ರಸ್ತೆ […]

ಕೋವಿಡ್ ಕಲಿಸಿದ ಪಾಠ: ಗೀತಾ ಜಿ ಹೆಗಡೆ ಕಲ್ಮನೆ.

ಮೊನ್ನೆ ಒಂದಿನ ಸಾಯಂಕಾಲ ಆಗುತ್ತಿದ್ದಂತೆ ಗಂಟಲು ಸ್ವಲ್ಪ ಉರಿ, ನೆಗಡಿಯಾಗುವಾಗ ಆಗುತ್ತಲ್ಲಾ ಹಾಗೆ ಒಂದು ರೀತಿಯ ಇರಿಟೇಷನ್. ಉಸಿರಾಟದಲ್ಲಿ ಸ್ವಲ್ಪ ಕಷ್ಟ ಅಂದರೆ ಬಾಯಿ ತೆರೆದು ಉಸಿರಾಡಬೇಕು ಅನಿಸುವಷ್ಟು. ಸಂಜೆ ದೀಪ ಹಚ್ಚಿ ಸ್ವಲ್ಪ ಭಗವತ್ಗೀತೆ ಪಾರಾಯಣ ಮಾಡುವ ರೂಢಿ. ಎಂದಿನಂತೆ ಸರಾಗವಾಗಿ ಓದಲು ಆಗುತ್ತಿಲ್ಲ. ಸ್ವರವೇ ಹೊರಗೆ ಬರ್ತಿಲ್ಲ. ಅಯ್ಯೋ ಶಿವನೇ….ಇದೆನಾಯಿತು ನನಗೆ? ಪಕ್ಕನೆ ಕೊರೋನಾ ಸಿಂಟೆಮ್ಸ ಹೀಗೀಗೆ ಇರುತ್ತದೆ ಎಂದು ಟೀವಿಯಲ್ಲಿ ಪೇಪರಲ್ಲಿ ವಾಲಗ ಊದುತ್ತಿದ್ದದ್ದು ಜ್ಞಾಪಕ ಬಂತು ನೋಡಿ…. ಸೋಫಾದಲ್ಲಿ ಕೂತವಳು ಸಣ್ಣಗೆ […]

ಸೂಲಂಗಿಯ ಕತೆ-ವ್ಯಥೆ: ಸುಂದರಿ. ಡಿ

ಅದೊಂದು ದಿನ ಜಮೀನಿನಲ್ಲಿ ಕಬ್ಬು ಕಟಾವು ಕೆಲಸ ನಡೆಯುತ್ತಿತ್ತು, ಹೋಗಿ ನೋಡುವಾಸೆ! ಏಕೆಂದರೆ ಕಬ್ಬು ಬಿತ್ತನೆಯ ಸಮಯದಲಿ ಖುಷಿಯಿಂದಲೇ ನಾನೊಂದಷ್ಟು ನಾಟಿ ಮಾಡಿದ್ದೆ. ಅದೇ ಪ್ರತಿ ದಿನದ ಕಾಯಕವಾದರೆ ಅದು ಈ ಮಟ್ಟದ ಖುಷಿ ಕೊಡಲಾರದು. ಆಗೊಮ್ಮೆ – ಈಗೊಮ್ಮೆ ಜಮೀನಿನ ಮುಖ ನೋಡಿ ಬರುವ ನಮ್ಮನ್ನು ಮರೆತು, ಉಳುವವರೇ ವಾರಸುದಾರರೆಂದು ಜಮೀನು ಎಲ್ಲಿ ತಪ್ಪು ತಿಳಿದೀತೆಂದು ಭಾವಿಸಿ ಅದರ ನಿಜವಾದ ವಾರಸುದಾರರು ನಾವೆಂದು ನೆನಪು ಮಾಡುವ ಸಲುವಾಗಿ ಹೋಗುವ ನಮ್ಮಂಥ ಮಧ್ಯಮವರ್ಗದ ಜನಗಳಿಗೆ ನಿತ್ಯದ ಕಾಯಕವಾಗಿ […]

‘ಪಾಠವೂ ಮುಖ್ಯ, ಪ್ರಾಣವೂ ಮುಖ್ಯ’: ಬೀರೇಶ್ ಎನ್ ಗುಂಡೂರ್

ಈ ವಯಸ್ಸಿಗೆನೇ ಮೊಬೈಲ್ ಅಬ್ಯಾಸ ಇರಲೇಬಾರದು. ಮಕ್ಳು ಕೆಟ್ಟೋಗ್ತವೆ. ಕಣ್ಣು ಹಾಳಾಗ್ತವೆ. ಅಂತಿದ್ದ ಪಾಲಕರೆಲ್ಲಾ ಈಗ ಅದೇ ಮಕ್ಕಳನ್ನು ಹಿಡಿದು ಮೊಬೈಲ್ ಕೊಟ್ಟು ಹೊಡ್ಡು ಬಡ್ಡು ಕೂರಿಸುತಿದ್ದಾರೆ. ಪರದೆಯ ಮೇಲೆ ಇಟ್ಟ ದೃಷ್ಟಿ ಸ್ವಲ್ಪ ಕದಲಿದರೆ ಸಾಕು, ನೀನು ಸರಿಯಾಗಿ ಕಲಿಯುತ್ತಿಲ್ಲ. ಫೀಸ್ ಕಟ್ಟಿದಿವಿ. ಕಲಿಲಿಲ್ಲ ಅಂದ್ರೆ ಅಷ್ಟೇ ಈ ವರ್ಷ, ಅಂತ ರಾಗ ಹಾಡುತಿದ್ದಾರೆ. ಮಕ್ಕಳಿಗೆ ಇದೊಂತರ ವಿಚಿತ್ರ ಅನಿಸುತಿದ್ದೆ. ಇಷ್ಟು ದಿವಸ ಮೊಬೈಲ್ ಕೇಳಿದರೆ ಕಣ್ಣು ಬಿಡುತಿದ್ದವರು…ಈಗ ಅದೇ ಮೊಬೈಲ್ ಕೊಟ್ಟು ದಿಟವಾಗಿ ನೋಡು, […]

ಗಿರಿಕನ್ಯೆಯ ಗುನುಗು: ಗೀತಾ ಪ್ರಸನ್ನ

ಅಣ್ಣಾವ್ರ ಗಿರಿಕನ್ಯೆ ಬರ್ತಿತ್ತು ಇವತ್ತು. ಎಷ್ಟ್ ಚೆಂದದ ಜೋಡಿ.. ಚೆನ್ನ ಚೆಲುವೆ. ಜಯಮಾಲಾ ಎಳೇ ಬಳ್ಳಿ, ಅಣ್ಣಾವ್ರ ಕರಿಷ್ಮಾ – ಇಬ್ಬರ ಜೋಡಿ ಆಹಾ.. ಆ ಎವರ್ ಗ್ರೀನ್ ಹಾಡುಗಳು. “ನಗು ನಗುತಾ ನೀ ಬರುವೆ.. ನಗುವಿನಲೆ ಮನ ಸೆಳೆವೆ.. “ ಆಹಾ ಎಂಥಾ ಮುದ. ದೋಣಿಯಲ್ಲಿ ಇಬ್ಬರ ರೋಮ್ಯಾನ್ಸ್!! ಈ ದೋಣಿ ಸೀನ್ ನೋಡಿ ಸೀದಾ ಕಾಲೇಜು ದಿನಕ್ಕೆ ಹೋಯ್ತು ನೆನಪು. ಅಣ್ಣಾವ್ರು ಹುಟ್ಟು ಹಾಕ್ತಾ ಇದ್ರೆ, ಚೆಲುವೆ ಎಳೇ ಬಳ್ಳಿ ಹಾಗೆ ಮರಕ್ಕೆ ಹಬ್ಬಿಕೊಳ್ಳೋ […]

ಕಾಂತಾಸಮ್ಮಿತ: ಸುಂದರಿ ಡಿ

ಅದೊಂದು ಸಂಜೆ ಸ್ನೇಹಿತೆಯ ಮನೆಗೆ ಹೋಗಲೇಬೇಕಾಯಿತು, ಕಾರಣ ಬಹಳ ಕಾಲ ಸಬೂಬು ಹೇಳಿ ಸಾಕಾಗಿ ಆ ದಿನ ಅವಳ ಮನೆಯ ಬಳಿಯೇ ಹೋಗುವಾಗ ಅವಳ ಕಣ್ಣಲ್ಲಿ ಬಂಧಿಯಾದ ಮೇಲೆ ತಪ್ಪಿಸಿಕೊಳ್ಳುವುದಾದರೂ ಹೇಗೆ? ಕುಳಿತು ಆತಿಥ್ಯ ಸ್ವೀಕರಿಸಿಯೂ ಆಯಿತು. ಯಾರದೋ ಮನೆಗೆ ಹೋಗೋಣವೆಂದು ಕರೆದಳು. ಹೋಗಲು ಮನಸಿಲ್ಲ, ಕಾರಣ ಆಗಲೇ ಸಂಜೆಯಾಗಿತ್ತು, ಜೊತೆಗೆ ಯಾರದೋ ಮನೆಗೆ ನಾನೇಕೆ ಹೋಗುವುದು? ಹಾಗಾಗಿ ಬೇಡವೆಂದು ನಿರಾಕರಿಸಿದೆ. ಆದರೆ ಆಕೆ ಟಪ್ಪರ್‍ವೇರ್ ಡಬ್ಬಿ ಖರೀದಿಸುತ್ತಿದ್ದಳು ಅದನ್ನು ನೋಡಿ ನಾನು ಅಸ್ತು ಎನ್ನಬೇಕಿತ್ತು, ಕಾರಣ […]

‘ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ …: ಡಾ. ಹೆಚ್ಚೆನ್ ಮಂಜುರಾಜ್

ಮೋಸ ವಂಚನೆಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ನನ್ನನ್ನು ತುಂಬ ಕಾಡುವುದು ಆತ್ಮವಂಚನೆ ಎಂಬುದು. ಅಂದರೆ ನಮ್ಮನ್ನು ನಾವೇ ವಂಚಿಸಿಕೊಳ್ಳುವ ವೈಖರಿಯೇ ಕಂಗೆಡಿಸುವ ವಿಚಾರ. ಆತ್ಮವಂಚನೆಯನ್ನೇ ರೂಢಿಸಿಕೊಂಡವರು ಕ್ರಮೇಣ ಬಂಡತನವನ್ನು ಬೆಳೆಸಿಕೊಂಡು ಸಂವೇದನಾಶೂನ್ಯರಾಗುವರೋ? ಅಥವಾ ಸಂವೇದನಾಶೀಲತೆ ಕಡಮೆಯಾದ ಮೇಲೆ ಆತ್ಮವಂಚನೆಗೆ ಇಳಿಯುತ್ತಾರೋ? ಸದಾ ಗೊಂದಲ ನನಗೆ. ನಾವೆಲ್ಲ ಒಂದಲ್ಲ ಒಂದು ಸಲ, ಒಂದಲ್ಲ ಒಂದು ದಿನ ಇಂಥ ಆತ್ಮವಂಚನೆಗೈದವರೇ! ಮನುಷ್ಯರಾದ ಮೇಲೆ ಇದೆಲ್ಲ ಮಾಮೂಲು ಎಂದು ಕೈ ತೊಳೆದುಕೊಂಡು ಬಿಡದೇ ಸೀರಿಯಸ್ಸಾಗಿ ಯೋಚಿಸಿದಾಗ ನನಗೆ ಹೊಳೆದದ್ದು: ಇದೊಂದು ಮನೋಬೇನೆ […]