ಕಾವ್ಯಧಾರೆ

ಪಂಜು ಕಾವ್ಯಧಾರೆ

ಇನ್ನಾದರೂ ತುಸು ಹೊತ್ತು ಖುಷಿಯಿಂದ ಉಳಿದುಬಿಡುತ್ತೇನೆ ಬದುಕಿಗೆ ಬೇಸರ ಬರುವಷ್ಟು .. ಈ ಬದುಕು ಸುರುವಿದ ಅಸಂಖ್ಯ ಅವಕಾಶಗಳ ಎಣಿಸುತ್ತಾ ಕೂತು ಕಳೆದಿದ್ದೇನೆ ಹೀಗೆ ಬಳಸಿಕೊಳ್ಳೋದ ಮರೆತು ಪ್ರತಿ ಖುಷಿಯ ಹಿಂದೊಂದು ಮುಗಿಯದ ಖಾಲಿತನವನ್ನು ಸುಮ್ಮನೇ ಉಳಿಸಿಕೊಂಡಿದ್ದೇನೆ ನನ್ನಂಥ ಕಡುಮೌನಿಯೂ ನಿನ್ನ ಮಾತಿಗೆ ಹಪಹಪಿಸಲು ಶುರುವಿಡುವ ಈ ಹೊತ್ತು ಇಲ್ಲೇ ಸ್ತಬ್ಧವಾಗಲಿ ಬಿಡು ಮಾತು ಮೀರಿದ ಘಳಿಗೆ ಎದುರಿಗಿದ್ದಾಗ … ಬೆರಳ್ಹಿಡಿದು ನಡೆಸಿದ ಕಾಲುಹಾದಿಯ ಬದುಕು ಜಾರಿಸಲು ಶುರುವಿಟ್ಟು ನಗುತಾ ನಿಂತ ಸಮಯ ಬೇಕೆನಿಸಿದೆ ನಿನ್ನ ಸಾಂಗತ್ಯ […]

ಸಮಾನತೆಯ ಸಂಧಿಕಾಲದಲ್ಲಿ

ಪ್ರಬುದ್ಧ ಸಾಹಿತಿ –ಡಾ.ಸರಜೂ ಕಾಟ್ಕರ್: ನಾಗರೇಖಾ ಗಾಂವಕರ

ಪತ್ರಕರ್ತನೊಬ್ಬನ ವೃತ್ತಿ ಬದುಕಿನ ಹಾದಿ ಸಂಘರ್ಷಗಳ ಕಲ್ಲುಚಪ್ಪಡಿ ಎಂಬುದನ್ನು ಯಾರೂ ಅಲ್ಲಗಳಿಯುವಂತಿಲ್ಲ. ಎಡತಾಕುವ ವಿಘ್ನಗಳು ಹತ್ತು ಹಲವು. ಬೆದರಿಕೆಗಳ ಹೊದಿಕೆಯೊಳಗೆ ಜೀವವನ್ನು ಕೈಲಿಟ್ಟುಕೊಂಡೇ ಲೋಕದ ಡೊಂಕನ್ನು ಜಗತ್ತಿನ ಕಣ್ಣುಗಳಿಗೆ ರವಾನಿಸಬೇಕಾದ ಅದರಲ್ಲೂ ಸತ್ಯದ ಸೂಡಿ ಹಿಡಿದೇ ನಡೆಯಬೇಕಾದ ಅನಿವಾರ್ಯತೆ ಆತನದು. ಆತನ ವೃತ್ತಿಕ್ಷಮತೆ ಪ್ರಾಮಾಣಿಕವಾಗಿದ್ದಷ್ಟೂ ಆತನ ವೃತ್ತಿ ಶತ್ರುಗಳು, ಹಿತ ಶತ್ರುಗಳು ಹುಟ್ಟಿಕೊಳ್ಳುತ್ತಲೇ ಇರುವರು. ಅಂತಹ ಸಂದಿಗ್ಧ ಜಗತ್ತಿನಲ್ಲಿ ದಿಟ್ಟತನಕ್ಕೆ ಹೆಸರಾದ, ಆಮಿಷಗಳಿಗೆ ಬಲಿಯಾಗದೇ, ಬೆದರಿಕೆಗಳಿಗೆ ಅಂಜದೇ ಕಾರ್ಯನಿರ್ವಹಿಸಿದ ಪತ್ರಕರ್ತ ಡಾ. ಸರಜೂ ಕಾಟ್ಕರ್. ಒಬ್ಬ ಪತ್ರಕರ್ತನಲ್ಲಿ […]

ಕಥಾಲೋಕ

ಜೈನಾಬಿ, ರೋಸ್ ಮೇರಿ, ಮತ್ತು ಮಾಯಾ ಬಾರ್:  ವಸುಧಾ ಪ್ರಭು

ಟಕ್-ಟಕ್-ಟಕ್ ಮಾಯಾ ಬಾರಿನ ಮೇಲೆ ನಿನ್ನೆ ಮುನ್ಸಿಪಾಲಿಟಿಯವರು ಮಾಡಿದ ದಾಳಿಯಿಂದಾಗಿ ಎಂದಿಗಿಂತ ಒಂದೂವರೆ ಗಂಟೆಯ ಮೊದಲೇ ಫ್ಲ್ಯಾಟಿಗೆ ಬಂದರೆ, ನೆರೆಯ ಫ್ಲ್ಯಾಟ್ ನಲ್ಲಿರುವ ಅಮ್ಮಿ ಬಾಗಿಲು ಬಡಿದಾಗಲೇ ಜೈನಾಬಿಗೆ ಎಚ್ಚರವಾಯಿತು. ಕಣ್ಣು ಸರಿಯಾಗಿ ಬಿಡುತಿದ್ದಂತೆಯೇ ಎದ್ದು ಮೊದಲು ಬಚ್ಚಲಿಗೆ ಧಾವಿಸಿದಳು. ಒಂದರ ಮೇಲೊಂದು ಬಾಲ್ದಿ ಇಟ್ಟಂತೆ ಬಾಲ್ದಿಯನ್ನು ನಲ್ಲಿ ಕೆಳಗೆ ನೀರು ತುಂಬಲು ಇಟ್ಟು ಟೂತ್ ಪೇಸ್ಟ್ ಬ್ರಶ್ ಹಿಡಿದು ಹಲ್ಲುಜ್ಜತೊಡಗಿದಳು. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನಾಲ್ಕನೇ ಅಂತಸ್ತಿನಲ್ಲಿರುವ ಇರುವ ಇವಳ  ಮನೆಯ ನಲ್ಲಿಯಲ್ಲಿ ಸಪೂರವಾಗಿ ಕೇವಲ […]

ಕಥಾಲೋಕ

ಬದಲಾಗುವ ಬಣ್ಣಗಳು (ಭಾಗ 1): ಅಶ್ಫಾಕ್ ಪೀರಜಾದೆ

– 1 – ಡಿಶಂಬರ್ – 25, ಕ್ರಿಸಮಸ್ ಹಬ್ಬ. ಯೇಸು ಈಗಲೂ ಆ ಗೋಡೆಯ ಮೇಲೆ ನೇತಾಡುತ್ತಿದ್ದ. ಪ್ರತಿ ಹೊಸ ವರ್ಷದಂದು ಯೇಸು ಚಿತ್ರವಿರುವ ದಿನದರ್ಶಿಕೆ ತಂದು ಪವಿತ್ರ ತನ್ನ ಮನೆಯಲ್ಲಿ ನಿತ್ಯ ಆರಾಧನೆ ಸಲ್ಲಿಸುವದನ್ನು ರೂಡಿಸಿಕೊಂಡಿದ್ದಳು. ಮನುಕುಲವನ್ನೇ ಉದ್ಧರಿಸಿದ ಯೇಸುತನ್ನನ್ನು ಕೂಡ ಒಂದಿಲ್ಲ ಒಂದು ದಿನ ಉದ್ಧರಿಸುತ್ತಾನೆ ಎನ್ನುವ ಬಲವಾದ ನಂಬಿಕೆ ಅವಳದು. ಆ ಕ್ಯಾಲೆಂಡರದಲ್ಲಿ ಡಿಶೆಂಬರ 1980 ಎಂದು ಅಚ್ಚಾದ ಕೊನೆ ತಿಂಗಳ ಪುಟದ ಬಣ್ಣವೆಲ್ಲ ಮಾಸಹೋಗಿ ಹೊಗೆ ಹಿಡದವರಂತೆ ಬಣ್ಣ ಬದಲಾಗಿ ಸ್ಪಷ್ಟವಾಗಿ ಕಾಣದ ದಿನಾಂಕಗಳ […]

ಲೇಖನ

ಟ್ರೇನ್ ಪ್ರಯಾಣ: ಆಶಾಜಗದೀಶ್

ನನಗೆ ಪ್ರಯಾಣವೆಂದರೆ ಬಹಳ ಇಷ್ಟ. ಬಸ್ ಟ್ರೇನ್ ಕಾರ್ ಬೈಕ್… ಯಾವ್ದಾದ್ರೂ ಸರಿ ಹತ್ತಿ ಹೊರಟುಬಿಟ್ಟರೆ ಮುಗೀತು. ಯಾಕೆ ಅಂತ ಗೊತ್ತಿಲ್ಲ. ಅದರೆ ನನಗೆ ಬೀಸುವ ಗಾಳಿ ಅಂದ್ರೆ ಇಷ್ಟ, ತೊಟ್ಟಿಲ ಹಾಗೆ ತೂಗುವ ವಾಹನ ಇಷ್ಟ, ಪ್ರಯಾಣದ ನಿದ್ದೆ ಇಷ್ಟ, ನಾನಾ ಥರದ ಜನಗಳನ್ನು ನೋಡುವುದು ಇಷ್ಟ, ಹಿಂದಕ್ಕೆ ಜೋರಾಗಿ ಓಡುವ ಮರಗಳು ಇಷ್ಟ, ನಾನಾ ಥರದ ಪರಿಸರದ ಚಿತ್ರಣವನ್ನು ಕಣ್ತುಂಬಿಕೊಳ್ಳುವುದು ಇಷ್ಟ….. ಹೀಗೆ ಇಷ್ಟಗಳ ಸಾಲೇ ಇದೆ. ಅದರೊಂದಿಗೆ ಅಪರೂಪದ ಅನುಭವಗಳೂ ಸಿಗುತ್ತವೆ. ಇಂತಹ […]

ಕೆ ಟಿ ಸೋಮಶೇಖರ್ ಅಂಕಣ

ಶಿಶಿರನ ಅಂತ್ಯ ವಸಂತನ ಆದಿಯೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ

ಒಂದರ ಅಂತ್ಯ ಇನ್ನೊಂದರ ಆರಂಭ! ಹಗಲಿನ ಅಂತ್ಯ ರಾತ್ರಿಯ ಆರಂಭ! ರಾತ್ರಿಯ ಅಂತ್ಯ ಹಗಲಿನ ಆರಂಭ! ಕಷ್ಟಗಳ ಅಂತ್ಯ ಸುಖದ ಆರಂಭ! ಸುಖದ ಅಂತ್ಯ ಕಷ್ಟದ ಆರಂಭ! ಜೀವನ ಸುಖದ ಸುಪ್ಪತ್ತಿಗೆಯಲ್ಲ, ಕಷ್ಟ ಸುಖಗಳ ಹಾಸು! ಪುರಾಣಗಳು ಘನಘೋರ ಕಷ್ಟಗಳ ಅಂತ್ಯ ಸುಖದ ಸೂಚಕ ಎಂದು ಸಾರಿವೆ! ಭಗವಂತ ಕಷ್ಟಗಳ ಮಳೆಗರೆದು ಭಕ್ತರನ್ನು ಪರೀಕ್ಷಿಸಿ ಕೊನೆಗೆ ಅಪರಿಮಿತ ಸುಖ ನೀಡುತ್ತಾನೆ ಎಂದು ಪುರಾಣಗಳಲ್ಲಿ ಕಥೆಗಳಿವೆ. ಇದಕ್ಕೆ ಸತ್ಯಹರಿಶ್ಚಂದ್ರನ ಕಥೆ ಉತ್ತಮ ಉದಾಹರಣೆಯಾಗಿದೆ. ಹೀಗೆ ಜೀವನದಲ್ಲಿ ಏಳು ಬೀಳಿಗೆ, […]

ಮೊದಲು ಓದುಗನಾಗು

‘ಗೀರು’ ನನ್ನ ಮನಸ್ಸಲ್ಲಿ ಗೀಚಿದ್ದು – ಗೀರು ಕಥಾಸಂಕಲನ ವಿಮರ್ಶೆ: ಕೊಟ್ರೇಶ್ ಕೊಟ್ಟೂರು

ಕನ್ನಡ ಕಥಾ ಪರಂಪರೆಯಲ್ಲಿ ಮಹಿಳಾಪರ ಕಥೆಗಳು ಬರುವುದು ತುಂಬಾ ಮುಖ್ಯವಾಗಿದೆ. ಕನ್ನಡ ಕಥೆಗಳಲ್ಲಿ ಮಹಿಳಾ ಅಸ್ಮಿತೆಯನ್ನು ಉಳಿಸಿಕೊಂಡು ಹೋಗುವ ಕಥೆಗಳು ಇತ್ತೀಚಿಗೆ ಅಪರೂಪವಾಗಿದೆ. ಮತ್ತು ನನಗದು ಸ್ವಲ್ಪ ಸಮಾಧಾನವಿದೆ ಅಂತಹ ಸಮಾಧಾನ ತರುವಲ್ಲಿ ದೀಪ್ತಿ ಭದ್ರಾವತಿ ಅವರ ಗೀರು ಕಥಾಸಂಕಲನ ಯಶಸ್ವಿಯಾಗಿದೆ. ಬಹುಶಃ ಇದರಲ್ಲಿನ ಎಲ್ಲಾ ಕಥೆಗಳಲ್ಲೂ ಮಹಿಳೆ ಮುಖ್ಯಪಾತ್ರವಹಿಸಿ, ಬದುಕಿನ ಕಾಲಘಟ್ಟದಲ್ಲಿ ಅವಳ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ಸಾರಿ ಸಾರಿ ಹೇಳುತ್ತದೆ. ಈ ಕಥೆಗಳಲ್ಲಿನ ಮಹಿಳೆ ತಾನು ಅನುಭವಿಸುವ ಕಷ್ಟಗಳನ್ನು ನೋಡಿದರೆ ಕರುಳು ಕಿತ್ತು […]

ಪಂಜು-ವಿಶೇಷ ಲೇಖನ

ತಾಯಿಯ ಗರ್ಭವೆಂಬ ಪುಟ್ಟ ಪ್ರಪಂಚದಲ್ಲಿ: ಸಿಂಧು ಭಾರ್ಗವ್

ಒಂದು ಮಗುವಿನ ಜನನ ಯಾವ ತಾಯಿಯ ಗರ್ಭದಲ್ಲಿ ಆಗುತ್ತದೆ ಎಂಬುದು ಹೇಳಬರದು. ಹುಟ್ಟು ನಮ್ಮ ಕೈಯಲ್ಲಿ ಇರುವುದಿಲ್ಲ. ಜನಿಸಿದ ಮೇಲೆ ಹಡೆದ ಜನನಿಯ ಮುಖ ದರುಷನವಾಗುವುದು. ಅವಳು ನಮಗಾಗಿ ಎಷ್ಟೆಲ್ಲ ಕಷ್ಟ ಪಡುತ್ತಾಳೆ. ಅವಳ ತ್ಯಾಗ ಸಹನೆಗೆ ನಾವು ಎಂದಿಗೂ ಋಣಿಗಳಾಗಿರಬೇಕು. ಒಬ್ಬ ತಾಯಿ ತಾನು ಗರ್ಭವತಿ ಎಂದು ತಿಳಿದ ತತ್ಕ್ಷಣದಿಂದ ಮುಂದೆ ಜನಿಸುವ ಮಗುವಿನ ಬಗೆಗೆ ನೂರಾರು ಕನಸುಗಳನ್ನು ಕಟ್ಟಿಕೊಳ್ಳಲು ಶುರುಮಾಡುತ್ತಾಳೆ. ಜೊತೆಗೆ ತಂದೆಯಾಗುವವನೂ ಕೂಡ ಆ ಮಗುವಿನ ಬಗೆಗೆ ಸಾಕಷ್ಟು ಕನಸುಗಳನ್ನು ಹೆಣೆಯುತ್ತಾನೆ. ತಮ್ಮ […]

ಲೇಖನ

ಪುಟ್ಟಿಯ ಬೆಂಗಳೂರು: ನಾಗರಾಜನಾಯಕ ಡಿ.ಡೊಳ್ಳಿನ

ಬೆಂಗಳೂರು ಅಂದರೆ ಚಿಕ್ಕಂದಿನಿಂದಲೂ ನಮಗೆ ಆಕರ್ಷಣೆ. ಅಲ್ಲಿನ ಮೆಜೆಸ್ಟಿಕ್, ಗಾಂಧಿನಗರ, ವಿಧಾನಸೌಧ, ಉದ್ಯೋಗಸೌಧ, ಹೈಕೋರ್ಟು, ಕಬ್ಬನ ಉದ್ಯಾನವನದಲ್ಲಿನ ಗ್ರಂಥಾಲಯ, ಲಾಲಬಾಗ್, ಬನ್ನೇರುಘಟ್ಟ, ನೆಹರು ತಾರಾಲಯ, ರವೀಂದ್ರ ಕಲಾಕ್ಷೇತ್ರ ಹೀಗೆ ಒಂದೇ ಎರಡೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಚಿಕ್ಕವನಿದ್ದಾಗ ಬೆಂಗಳೂರು ಕಾಡಿದ್ದು ಸುಳ್ಳಲ್ಲ. ಅಪ್ಪ ಬೆಂಗಳೂರಿಗೆ ಹೋದಾಗಲೆಲ್ಲ ನಮಗಾಗಿ ಚೆಂದನೆಯ ಆಟಿಕೆ, ಶಾಲಾ ಬ್ಯಾಗಗಳನ್ನು ತರುತ್ತಿದ್ದರಿಂದಲೋ ಏನೋ ನಮಗೆ ಬೆಂಗಳೂರಿನ ಬಣ್ಣ ಬಣ್ಣದ ಕಲ್ಪನೆಗಳು ಮೂಡುವಂತೆ ಮಾಡಿದ್ದು. ಆದರೆ ಆ ಕಲ್ಪನೆಗಳು ನಾವು ಪ್ರೌಢಾವಸ್ಥೆಗೆ ತಲುಪಿ […]