ಪ್ರಸಾದ್ ಕೆ ಅಂಕಣ

ಗಣಪನೆಂಬ ಅದ್ಭುತ: ಪ್ರಸಾದ್ ಕೆ.

ಕತೆ, ಕವಿತೆ, ಕ್ರೈಮು, ಕಾರ್ಟೂನು, ಸಿನಿಮಾ, ಟೀಕೆ-ಟಿಪ್ಪಣಿ, ಸತ್ವವಿಲ್ಲದ ಸರ್ಕಾರಿ ಪತ್ರಗಳು, ಆಫೀಸಿನ ನೀರಸ ಮಣಭಾರದ ರಿಪೋರ್ಟುಗಳು ಹೀಗೆ ಹಿರಿ, ಕಿರಿ, ಕಿರಿಕಿರಿಯೆನ್ನಿಸುವ ಏನೇನೋ ವಿಷಯಗಳ ಬಗ್ಗೆ ಬರೀತಾ ಬರೀತಾ ಚೌತಿಯ ಗಣೇಶನ ಬಗ್ಗೆ ವಾರದ ವಿಶೇಷ ಪುರವಣಿಗೆ ಬರೆಯುವುದೇ ಒಂದು ಖುಷಿ. ಗಣಪತಿ ಎಂದರೆ ನನಗೆ ಹೊಸ ಜಗತ್ತು ತೆರೆದುಕೊಳ್ಳುತ್ತದೆ. ನನಗೆ ಗಣಪ ಎಂದರೆ ಏನೆಲ್ಲಾ, ಎಷ್ಟೆಲ್ಲಾ… ಅತಿಮಧುರ ಸಂಸ್ಕøತ ಶ್ಲೋಕಗಳನ್ನು ಬದಿಗಿಟ್ಟುಕೊಂಡರೂ ಗಣಪತಿಯೆಂದರೆ ನನ್ನದೇ ಹಲವು ವರ್ಷನ್ನುಗಳು ನನಗೆ. 'ಗಣೇಶ' ಎಂದರೆ ಗಣೇಶನ ಮದುವೆಯ […]

ಝೆನ್-ಸೂಫಿ ಕತೆಗಳು

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಹೊಸತಾಗಿ ಮತಾಂತರಗೊಂಡವನು ಒಂದು ಊರಿನಲ್ಲಿ ಒಬ್ಬ ಮುಸಲ್ಮಾನ ಹಾಗು ಒಬ್ಬ ಕ್ರೈಸ್ತಮತೀಯ ಸ್ನೇಹಿತರು ನೆರೆಹೊರೆವಾಸಿಗಳಾಗಿದ್ದರು. ಇವರೀರ್ವರಲ್ಲಿ ಪ್ರತಿಯೊಬ್ಬನಿಗೂ ಇನ್ನೊಬ್ಬನ ಯೋಗಕ್ಷೆಮದ ಕಾಳಜಿ ಇದ್ದದ್ದರಿಂದ ಆರೋಗ್ಯದ ಹಾಗು ಇನ್ನಿತರ ಖಾಸಗಿ ವಿಷಯಗಳ ಕುರಿತು ಆಗಾಗ್ಗೆ ವಿಚಾರವಿನಿಮಯ ಮಾಡಿಕೊಳ್ಳುತ್ತಿದ್ದರು. ಬಲು ಶ್ರದ್ಧೆಯಿಂದ ಇಸ್ಲಾಂ ಮತಾಚರಣೆಗಳನ್ನು ಮಾಡುತ್ತಿದ್ದ ಮುಸಲ್ಮಾನನು ತನ್ನ ಮತದ ಹಿರಿಮೆಯನ್ನು ಬಹುವಾಗಿ ಹೇಳುತ್ತಿದ್ದದ್ದರ ಪರಿಣಾಮವಾಗಿ ಕ್ರೈಸ್ತಮತೀಯನು ಇಸ್ಲಾಂ ಮತಕ್ಕೆ ಮಾತಾಂತರಗೊಂಡನು.  ಮತಾಂತರಗೊಂಡ ಮಾರನೆಯ ದಿನ ಬೆಳಗಿನ ಜಾವದಲ್ಲಿ ಅವನ ಮನೆಯ ಬಾಗಿಲನ್ನು ಯಾರೋ ಜೋರಾಗಿ ಬಡಿಯುತ್ತಿದ್ದದರಿಂದ ಅರೆನಿದ್ದೆಯಲ್ಲಿದ್ದ […]

ಪಂಚ್ ಕಜ್ಜಾಯ

ಒತ್ತಡ ರ(ಸ!)ಹಿತ ಶಿಕ್ಷಣ: ಗುರುಪ್ರಸಾದ್ ಕುರ್ತಕೋಟಿ

"ರೀ ನಿಮ್ಮ ಮಗಳು ಹೋಂ ವರ್ಕ್ ಮಾಡಿಲ್ಲ" ಮಗಳ ಅಮ್ಮ ಕೂಗುತ್ತಿದ್ದಳು! ಆ ದನಿ ನನಗೆ ಅಂತರಿಕ್ಷ ವಾಣಿ ಥರ ಕೇಳುತ್ತಿತ್ತು. ಯಾಕಂದ್ರೆ, ನಮ್ಮ ಕಂಪನಿಯವರು ಇವನು ಸಮಧಾನದಿಂದಿರಲೇ ಕೂಡದು ಅಂತ ನಿರ್ಧರಿಸಿ, ದಯಪಾಲಿಸಿದ್ದ ಬ್ಲ್ಯಾಕ್ ಬೆರ್ರಿ (ವರ್ರಿ ಅಂತಿದ್ರೆ ಇನ್ನೂ ಚೆನ್ನಾಗಿರುತ್ತಿತ್ತೇನೋ) ಎಂಬ ಮೊಬೈಲ್ ನಲ್ಲಿ ಇಮೇಲ್ ಗಳ ಮಧ್ಯೆ ನಾನು ಹುದುಗಿ ಹೋಗಿದ್ದೆ.  ಮೊದಲೆಲ್ಲಾ ನಮ್ಮ ಹಿರಿಯರು ಬೆಳಿಗ್ಗೆ ಎದ್ದ ಕೂಡಲೇ ಅಂಗೈ ನೋಡಿಕೊಂಡು "ಕರಾಗ್ರೆ ವಸತೇ ಲಕ್ಷ್ಮಿ…" ಹೇಳುತ್ತಿದ್ದರೆ ಕಲಿಯುಗದಲ್ಲಿ ನಾವು ಅಂಗೈಯಲ್ಲಿ […]

ಕಲೆ-ಸಂಸ್ಕೃತಿ

ಕೃಷ್ಣ ಪ್ರೇಮದಲ್ಲಿ ನಾವೆಲ್ಲರೂ….: ಅಭಿ ಸಾರಿಕೆ

ಅಚ್ಯುತಮ್, ಕೇಶವಂ ಕೃಷ್ಣ ದಾಮೋದರಂ ಜಾನಕಿವಲ್ಲಭಂ ವಾಸುದೇವಂ ಭಜೇ… ಕೃಷ್ಣ ಎಂಬ ಹೆಸರೇ ಮನಕ್ಕೆ ಒಂದು ರೀತಿಯ ಆನಂದ ತರುತ್ತದೆ, ಕೃಷ್ಣ ಸರ್ವಾಂತರ್ಯಾಮಿ ಅಂದರೆ ಸರ್ವರ ಅಂತರಂಗಗಳಲ್ಲೂ ಅಲೆವವನು, ಅವನಿಲ್ಲದ ಉಸಿರಿಲ್ಲ. 'ಕೃಷ್ಣಂ ವಂದೇ ಜಗದ್ಗುರು' ಕೃಷ್ಣನೇ ಜಗದ ಗುರು, ಜಗದ ಗುರುವಾದ ಕೃಷ್ಣನೇ ನಿನಗೆ ವಂದಿಸುವೆ.  ನಾವೆಷ್ಟೆ ದೇವರನ್ನು ಪೂಜಿಸಿದರು ಆ ಪೂಜೆಯಲ್ಲೊಂದು ಭಯವಿರುತ್ತದೆ. ಆದರೆ ಕೃಷ್ಣನ ವಿಷಯ ಹಾಗಲ್ಲ ಆತನ ಪೂಜಿಸಲು ಭಯ ಪಡಬೇಕಿಲ್ಲ ಪ್ರೇಮ ಮಿಳಿತವಾದ ಭಕ್ತಿಯೊಂದಿದ್ದರೆ ಸಾಕು, ಕೃಷ್ಣನನ್ನು  ನಮಗೆ ಬೇಕಾದ […]

ಪ್ರಶಸ್ತಿ ಅಂಕಣ

ಕುಕ್ಕೆಯಲ್ಲೊಂದು ಪಂಕ್ಚರ್ ಕತೆ: ಪ್ರಶಸ್ತಿ

ಹಿಂದಿನ ಭಾಗದಲ್ಲಿ ಓದಿದಂತೆ ಟ್ರಿಪ್ಪಿನುದ್ದಕ್ಕೂ ಯೋಗಾಯೋಗಗಳೆಂಬ ನಾಣ್ಯದ ಮುಖಗಳು ಕ್ಷಣಕ್ಷಣಕ್ಕೂ ನಮಗೆ ಮುಖಾಮುಖಿಯಾಗುತ್ತಲೇ ಇದ್ದವು. ಬಿಸಿಲೆಯಲ್ಲಿ ಹಾಸನ ಸಂರಕ್ಷಿತ ಅರಣ್ಯ ಪ್ರದೇಶ ಅನ್ನೋ ಬೋರ್ಡು ಕಂಡಿದ್ದರೂ ಅದರ ಕೆಳಗೆ ಸಣ್ಣಕ್ಕಿದ್ದ ಬಿಸಿಲೆ ವೀವ್ ಪಾಯಿಂಟಿಗೆ ದಾರಿಯೆಂಬ ಬೋರ್ಡು ಕಾಣದೇ ಬಿಸಿಲೆಯ ಮೊದಲ ವೀವ್ ಪಾಯಿಂಟ್ ಮಿಸ್ಸಾಗಿತ್ತು. ಕುಕ್ಕೆಗೆ ಬಂದ ಬಹುತೇಕ ಮಂದಿ ಬಂದೇ ಹೋಗುವ ಗಡಿಮಾರಮ್ಮನ ದೇವಸ್ಥಾನ ಮಿಸ್ಸಾಗೇ ಹೋಗ್ತಿತ್ತೇನೋ ಅಲ್ಲಿನ ಗೇಟು ಹಾಕಿ, ಅದನ್ನ ತೆಗಿಯೋಕೆ ಅಂತ ನಾನು ಕೆಳಗಿಳಿಯದೇ ಹೋಗಿದ್ದರೆ. ಮೊದಲೆರಡು ಪಂಕ್ಚರ್ರುಗಳಾಗದೇ ಹೋಗಿದ್ದರೆ […]

ವಿಜ್ಞಾನ-ಪರಿಸರ

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ– 7: ಅಖಿಲೇಶ್ ಚಿಪ್ಪಳಿ

ಕೊನೆಯ ಕಂತು: ವಸ್ತುಗಳು ಇವತ್ತು ಜನರನ್ನು ಆಳುತ್ತಿವೆ. ಟಿ.ವಿ.ಯಲ್ಲಿ ಬರುವ ಪ್ರತಿಯೊಂದು ವಸ್ತುವೂ ಮನುಷ್ಯನಿಗೆ ಅತಿ ಅಗತ್ಯ ಎಂದು ಬಿಂಬಿಸಲಾಗುತ್ತಿದೆ. ಪ್ರತಿಯೊಂದಕ್ಕೂ ಯಂತ್ರಗಳ ಬಳಕೆ ಶುರುವಾಗಿದೆ. ನಿಮ್ಮಲ್ಲಿ ವಾಶಿಂಗ್ ಮಷಿನ್ ಇಲ್ಲ ಅಂದರೆ ನಿಮ್ಮ ಸಾಮಾಜಿಕ ಸ್ತರದಲ್ಲಿ ಒಂದು ಮೆಟ್ಟಿಲು ಕಡಿಮೆಯಾಗುತ್ತದೆ. ಯಂತ್ರಗಳ ಸಂಖ್ಯೆ ನಿಮ್ಮ ಮನೆಯಲ್ಲಿ ಹೆಚ್ಚು-ಹೆಚ್ಚು ಇದ್ದ ಹಾಗೆ ನಿಮ್ಮ ಸಾಮಾಜಿಕ ಸ್ತರ ಸದಾ ಮೇಲ್ಮುಖಿಯಾಗಿಯೇ ಇರುತ್ತದೆ. ಹವಾಮಾನ ಬದಲಾವಣೆಗೂ ಹಾಗೂ ವೈಯಕ್ತಿಕ ಬದುಕಿಗೂ ನೇರ ಸಂಬಂಧವಿದೆ. ನಿಮ್ಮ ಜೀವನಶೈಲಿಯ ಬದಲಾವಣೆಯಿಂದಾಗಿ ನೀವೊಬ್ಬ ಪರಿಸರಸ್ನೇಹಿ […]

ಕಾವ್ಯಧಾರೆ

ಮೂವರ ಕವನಗಳು: ಬಿದಲೋಟಿ ರಂಗನಾಥ್, ರಾಘವ ಹರಿವಾಣಂ, ಕು.ಸ.ಮಧುಸೂದನ್ ನಾಯರ್

ಏಕ ಶೀಲಾ ಬೆಟ್ಟ ನೋಡುತ್ತಲೇ ಇದ್ದೇನೆ ಬೆಳೆಯದೇ ಕೊರಗದೆ ಕರಗದೆ ಜುಮ್ಮನ್ನದೇ ಕೂತಿದೆ ಎದೆಯ ಭಾಗಕ್ಕೆ ಅಂಗಾಲೂರಿ ಸಾಗಿದರೆಷ್ಟೋ ಜನ ನಾನೂ ಕೂಡಿ. ಸಾಯದೆ ಹಿಗ್ಗುತ್ತಿದೆ ಸೊಗಸು ಬಿನ್ನಾಣ. ನನ್ನಿಂದೆ ಬಂದೋದವರ ಬಿಸಿಯುಸಿರ ಪಿಸುನುಡಿ ಏದುಸಿರ ಬಿಚ್ಚು ಮೆದೆ ಜೀವಂತ ಸದಾ… ನರ ಹೊತ್ತ ಬೆಳ್ಳಕ್ಕಿಗಳ ಕೋಮಲ ಪಾದಗಳ ಸ್ಪರ್ಶ ಸೋಕಿ ನಿರಂತರ ಎಚ್ಚರ ರಸಿಕತೆಯಲಿ ಒಳಗೊಳಗೆ ಖುಷಿಯ ಮೈದವಡುತ ಕೂತಿದೆ ಸುಮ್ಮನೆ ಬಿಮ್ಮನೆ ಯಾರು ಹತ್ತಿದರು ಅಪ್ಪಿದರು ಒದ್ದರು  ಬೇಸರವಿಲ್ಲ ಜಗಜಟ್ಟಿ ಮಲ್ಲನಿಗೆ ಬೆತ್ತಲ ಮನಸ […]

ಸರಣಿ ಬರಹ

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ-4

ಬೆಳಕಿನ ಮರಗಳ ರಹಸ್ಯ     “ಲಗೋರಿಬಾಬಾ ಫ್ರೀ ಇದೀರಾ ಈ ವಾರ? ಸಾಧ್ಯವಾದ್ರೆ ನನ್ನ ಜೊತೆ ಶ್ರೀಲಂಕಾಗೆ ಬನ್ನಿ. ಒಂದು ರಹಸ್ಯದ ಬಗ್ಗೆ ಅಧ್ಯಯನ ಮಾಡಲು ಡಾ.ಕೋವೂರ್ ಜೊತೆ ಹೋಗೋಣ.” ಫ್ಲಾಪಿಬಾಯ್ ಕೇಳಿದ ಲಗೋರಿಬಾಬಾನಿಗೆ.     “ಏನು ರಹಸ್ಯ? ಡಾ. ಕೋವೂರ್ ಅಂದ್ರೆ ಯಾರು? ಸಿಲೋನ್‍ಗೆ ಅವಶ್ಯವಾಗಿ ಹೋಗೋಣ. ನಾನು ಎಲ್ಲಿಗಾದರೂ ಸೈ” ಲಗೋರಿಬಾಬಾ ಪ್ರತ್ಯುತ್ತರಿಸಿದ.     “ಶ್ರೀಲಂಕಾದ ಉತ್ತರ ಭಾಗದಲ್ಲಿ ಮನ್‍ಕುಳಮ್ ಅಂತ ಊರಿದೆ. ಆ ಊರಿನ ಕಾಡಿನ ಬೇಟೆಗೆ ಬೇರೆ ಬೇರೆ ಕಡೆಯಿಂದ […]

ಪಂಜು-ವಿಶೇಷ

ಭಾರತದಲ್ಲಿ ಜಾತಿವ್ಯವಸ್ಥೆ: ದ್ಯಾವನೂರ್ ಮಂಜುನಾಥ್

“ಮಳೆಯ ಭರದಿ ತಿಳಿಯ ಮಣ್ಣು ಒಳಗು ಹೊರಗೂ ಏಕವಾಗಿ ಸೋರುತಿಹುದು ಮನೆಯ ಮಾಳಗಿ ಅಜ್ಞಾನದಿಂದ…..” ಇದನ್ನು ಬಗೆಹರಿಸಲು ಬುದ್ಧ ಬಸವಣ್ಣನಂತಹ ಮಹಾತ್ಮರು ಎಲ್ಲಿ ಸೋತರು ಎನ್ನುವ ಪ್ರಶ್ನೆ ನನ್ನಲಿ ಸದಾ ಪ್ರಶ್ನಿಸುತ್ತಿರುವೆ. ಈ ಒಂದು ಪ್ರಶ್ನೆಗೆ ನಮ್ಮ ಬಳಿ ಸ್ಪಷ್ಟವಾದಂತಹ ಉತ್ತರವಿಲ್ಲ ಯಾಕೆಂದರೆ ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೆ? ಎನ್ನು ಗೊಂದಲದ ಪ್ರಶ್ನೆ ಹುಟ್ಟುತ್ತದೆ. ಇಂದಿನ ನಮ್ಮ ಸಮಾಜ ವಿಜ್ಞಾನಗಳಲ್ಲಿ ನಡೆಯುವ ಪ್ರಭಕಾರಿಯಾದ ಸಂಶೋಧನೆಯಲ್ಲಿ ನೋಡುವಂತಹದ್ದು ಐಡಿಯಾಲಾಜಿಕಲ್ ಸ್ವರೂಪದ್ದೆ ವಿನಃ ಯಾವುದೇ ರೀತಿಯಲ್ಲಿ ವೈಜ್ಞಾನಿಕ ಸ್ವರೂಪದಲ್ಲ.     ಇತ್ತೀಚಿಗೆ […]

ಲೇಖನ

ಬಾಲ್ಕನಿ ವರ್ಸಸ್ ಗಾಂಧಿಕ್ಲಾಸ್: ಎಚ್.ಕೆ.ಶರತ್

ಬಾಲ್ಕನಿ 1 ಅಲ್ಲೊಂದಿಷ್ಟು ಮಂದಿ ಕುಂತಿದ್ದಾರೆ. ತಮ್ಮನ್ನು ತಾವು ಸುಸಂಸ್ಕøತರೆಂದು ಭಾವಿಸಿದವರು. ಹಾಗವರು ಅಂದುಕೊಳ್ಳಲು ಕಾರಣವೂ ಇದೆ. ಅವರ ಬಳಿ ಕಾಸಿದೆ. ಓದಿ ತಿಳಿದುಕೊಂಡವರು ಎಂಬ ಅಹಂ ಅವರನ್ನು ಅಮರಿಕೊಂಡಿದೆ. 2 ಅವರ ಮೈವಾಸನೆ, ಪೂಸಿಕೊಂಡ ಸೆಂಟಿನ ಸರಳಿನೊಳಗೆ ಬಂಧಿಯಾಗಿದೆ. ಸದ್ಯಕ್ಕೆ ಸೆಂಟು ಸ್ರವಿಸುವ ಸುವಾಸನೆಯೇ ಅವರ ಮೈವಾಸನೆ. 3 ರಂಗು ರಂಗಾದ ದಿರಿಸುಗಳು ಅವರೆಲ್ಲರ ಮೈಯನ್ನು ಆವರಿಸಿವೆ. ಫ್ಯಾನ್ಸಿ ಸೀರೆ ಉಟ್ಟ ಮಹಿಳೆಯರು, ಟೈಟ್ ಜೀನ್ಸ್, ಚೂಡಿದಾರ್ ಇತ್ಯಾದಿ ಇತ್ಯಾದಿ ತೊಟ್ಟುಕೊಂಡ ಹುಡುಗಿಯರು, ಅವರೊಂದಿಗೆ ಡೀಸೆಂಟಾಗಿ […]