ಮೂವರ ಕವಿತೆಗಳು: ಮಂಜು ಹಿಚ್ಕಡ್, ಸುನೀತಾ ಮಂಜುನಾಥ್, ದಿಲೀಪ್ ರಾಥೋಡ್

ಮತ್ತೆ ಕಟ್ಟಲಾದಿತೇ ರಾಮರಾಜ್ಯ! ಹುಚ್ಚೆದ್ದು ಕುಣಿಯುತಿದೆ ನಾಡಿನ ಜನತೆ. ಮರೆಯಾಗಿ ಹೋಗುತಿದೆ ಒಲವಿನ ಒರತೆ.   ಇತ್ತ ರೋಡಲಿ ಕಾರು ಅತ್ತ ಬಾರಲಿ ಬೀರು ಎಲ್ಲಿ ನೋಡಿದರಲ್ಲಿ ಹಣದ ಕಾರುಬಾರು.   ಮಾನಕ್ಕೆ ಬೆಲೆಯಿಲ್ಲ ಮಾನವಂತರು ಇಲ್ಲ. ಆಗಿಹುದು ನಾಡು, ಸುಡುಗಾಡು ಎರಡು ಮಾತಿಲ್ಲ.   ಹಣಕಾಗಿ ಜನ ಮರಳು ಹಣಕಾಗಿ ಜಾತ್ರೆ ಮರಳು. ಮರೆತು ಹೋಗಿದೆ ಇಂದು ಮಾನವತೆಯ ತಿರುಳು.   ದ್ವೇಷದ ದಳ್ಳುರಿಯಲ್ಲಿ ಪ್ರೀತಿ ಹೋಗಿದೆ ಸೋತು. ಪ್ರೀತಿ-ಪ್ರೇಮ ಎನ್ನುವುದು ಮರೀಚಿಕೆಯ ಮಾತು.   … Read more