Facebook

ಸಾಮಾನ್ಯ ಜ್ಞಾನ (ವಾರ 57): ಮಹಾಂತೇಶ್ ಯರಗಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಶ್ನೆಗಳು:
೧.    ಇತ್ತೀಚಿಗೆ ಕರ್ನಾಟಕ ರಾಜ್ಯ ಲೇಖಕಿಯರ ಸಂಘಕ್ಕೆ ಅಧ್ಯಕ್ಷೆಯಾಗಿ ಆಯ್ಕೆಯಾದವರು ಯಾರು?
೨.    ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶರಣಾದ ನಕ್ಸಲ್ ನಾಯಕರು ಯಾರು?
೩.    ವಿಧಿವಿಧಾನ ವೇದವೆಂದು ಯಾವ ವೇದವನ್ನು ಕರೆಯಲಾಗಿದೆ?
೪.    ಜಗತ್ತಿನ ಅತಿದೊಡ್ಡ ವಿಷ್ಣುದೇವಾಲಯ ಯಾವ ದೇಶದಲ್ಲಿದೆ?
೫.    ಜಲಾಂತರ್ಗಾಮಿ ಯೊಳಗಿನಿಂದ ಸಮುದ್ರ ಮೇಲ್ಮೈಯಲ್ಲಿರುವ ವಸ್ತುಗಳನ್ನು ನೋಡಲು ಬಳಸುವ ಉಪಕರಣ ಯಾವುದು?
೬.    ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯ  ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೭.    ಗೇಟ್ (gate) ನ ವಿಸ್ತೃತ ರೂಪವೇನು?
೮.    ಯಾವ ವಿಕಿರಣಗಳನ್ನು ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ?
೯.    ಹಿಡನ್ ಬರ್ಗ್‌ಯಾವ ಎರಡು ದೇಶಗಳ ನಡುವಿನ ರೇಖೆಯಾಗಿದೆ?
೧೦.    ಜೀವಸತ್ವಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು?
೧೧.    ಕಲೆಯೇ ಕಾಯಕ ಇದು ಯಾರ ಆತ್ಮಕಥೆಯಾಗಿದೆ?
೧೨.    ಭಾರತದ ತಂತ್ರಜ್ಞಾನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
೧೩.    ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿದವರು ಯಾರು?
೧೪.    ರಹಸ್ಯ ಬರವಣಿಗೆಯ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
೧೫.    ಸರ್ವದರ್ಶನ ಸಂಗ್ರಹ ಈ ಕೃತಿಯ ಕರ್ತೃ ಯಾರು?
೧೬.    ನಂದಾದೇವಿ ರಾಷ್ಟ್ರೀಯ ಉದ್ಯಾನ ಯಾವ ರಾಜ್ಯದಲ್ಲಿದೆ?
೧೭.    ರಾಮಾಯಣದಲ್ಲಿ ಕ್ಷತ್ರೀಯ ವಂಶವನ್ನು ನಾಶಪಡಿಸಲು ಪಣತೊಟ್ಟವರು ಯಾರು?
೧೮.    ಭಾರತದಲ್ಲಿ ಪ್ರಪ್ರಥಮ ಬಾರಿಗೆ ಆಟ್ಸೆಲಾ  ಪದವಿ ಪಡೆದ ಮಹಿಳೆ ಯಾರು?
೧೯.    ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ರಚಿಸಲಾದ ವರ್ಷ ಯಾವುದು?
೨೦.    ಪೆಕಾ ಇದು ಯಾವ ರಾಜ್ಯದ ಸಮರಕಲೆಯಾಗಿದೆ?
೨೧.    ರೆಡಿಯೋ ಅಲೆಗಳನ್ನು ಮೊದಲಿಗೆ ಪತ್ತೆ ಹಚ್ಚಿದವರು ಯಾರು?
೨೨.    ಕಾಮಭೀಮ ಇದು ಯಾರ ಅಂಕಿತನಾಮವಾಗಿದೆ?
೨೩.    ಭೀಮಾ ನದಿಯ ಉಗಮಸ್ಥಳ ಯಾವುದು?
೨೪.    ೧೮ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆದ ಸ್ಥಳ ಯಾವುದು?
೨೫.    ಸರೋಜ ಇದು ಯಾರ ಕಾವ್ಯನಾಮವಾಗಿದೆ?
೨೬.    ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ?
೨೭.    ಗೋದಾವಿ ಗೌರವ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
೨೮.    ವಿಶ್ವದಲ್ಲೇ ಅತ್ಯಂತ ಹಗುರವಾದ ಲೋಹ ಯಾವುದು?
೨೯.    ಚೆಕ್ ಇದು ಯಾವ ಕ್ರೀಡೆಗೆ ಸಂಬಂಧಿಸಿದ ಪದವಾಗಿದೆ?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆ
ಡಿಸೆಂಬರ್ – ೧೮ ಅಲ್ಪ ಸಂಖ್ಯಾತರ ಹಕ್ಕುಗಳ ದಿನ

ಉತ್ತರಗಳು:
೧.    ಡಾ||ವಸುಂಧರಾ ಭೂಪತಿ
೨.    ಸಿರಿಮನೆ ನಾಗರಾಜು ಮತ್ತು ನೂರ್ ಶ್ರೀಧರ್
೩.    ಯಜುರ್ವೇದ
೪.    ಕಾಂಬೋಡಿಯಾ
೫.    ಪೆಲಿಸ್ಕೋಪ್
೬.    ಬಾಲಗಕೋಟೆ
೭.    ಗ್ರಾಜುಯೇಟ್ ಆಫ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್
೮.    ಗಾಮಾ ವಿಕಿರಣಗಳನ್ನು 
೯.    ಜರ್ಮನಿ ಮತ್ತು ಪೋಲೆಂಡ್
೧೦.    ಎಫ್.ಜಿ.ಹಾಪ್‌ಕಿನ್ಸ್ (ಇಂಗ್ಲೆಂಡ್)
೧೧.    ಗುಬ್ಬಿವೀರಣ್ಣ
೧೨.    ವಿಕ್ರಮ್ ಸಾರಾಭಾಯ್
೧೩.    ಸ್ಟಾಲಿನ್
೧೪.    ಕ್ರಿಪ್ಟೋಲಾಜಿ
೧೫.    ವಿಧ್ಯಾರಣ್ಯ
೧೬.    ಉತ್ತರಾಖಂಡ
೧೭.    ಪರಶುರಾಮ
೧೮.    ಶ್ರೀಮತಿ ಕೊನಾಲಿಯಾ ಸೊರಾಬ್ಬಿ
೧೯.    ೧೯೯೩
೨೦.    ಒರಿಸ್ಸಾ
೨೧.    ಹೆನ್ರಿಚ್ ಹರ್ಚ್ಸ್
೨೨.    ಒಕ್ಕಲು ಮುದ್ದಯ್ಯ
೨೩.    ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಭೀಮೇಶ್ವರ ಎಂಬಲ್ಲಿ
೨೪.    ತಿರುವನಂತಪುರ
೨೫.    ಜಯಲಕ್ಷ್ಮಿ ಶ್ರೀನಿವಾಸನ್
೨೬.    ಕಾನ್ಪುರ (ಉತ್ತರ ಪ್ರದೇಶ)
೨೭.    ಭೀಮಸೇನ ಜೋಶಿ
೨೮.    ಲಿಥಿಯಂ
೨೯.    ಚೆಸ್
೩೦.    ಅಮೃತ ಪ್ರೀತಂ (ಪಂಜಾಬಿ ಲೇಖಕಿ)

*****


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

Leave a Reply