ಈ ಬಂಧಗಳು..ಸಂಬಂಧಗಳು..: ಪದ್ಮಾ ಭಟ್, ಇಡಗುಂದಿ.

                 

ನೀನಿಲ್ಲದೆಯೇ ನಾ ಹೇಗಿರಲಿ.. ನಿನ್ನೊಂದಿಗೇ ಎಂದಿಗೂ ಇರಬೇಕು ಅಂಥ ಅನಿಸುತ್ತೆ ಕಣೇ.. ನೀನಿಲ್ಲದ ಕ್ಷಣವನ್ನು ಊಹಿಸಿಕೊಳ್ಳಲೂ ಆಗುವುದಿಲ್ಲ.. ನಿನ್ನಂತಹ ಗೆಳತಿ ಈ ಜನ್ಮದಲ್ಲಿ ಮತ್ತೆ ಸಿಗಲಾರದೇನೋ ಎಂದು ಗೆಳತಿಯೊಬ್ಬಳು ಬೀಳ್ಕೊಡುವಾಗ ಹೇಳಿದ ನೆನಪು. ಆ ಸಮಯಕ್ಕೆ ಆ ದಿನ ಹಾಗೆ ಅನ್ನಿಸಿದ್ದೂ ಸುಳ್ಳಲ್ಲ.. ಒಂದಷ್ಟು ದಿವಸಗಳ ಕಾಲ, ಆತ್ಮೀಯತೆಯಿಚಿದ ಇದ್ದವರಿಗೆ ವಿದಾಯ ಹೇಳುವಾಗ ನೀನಿಲ್ಲದೇ ನಾನಿರಲು ಸಾಧ್ಯವೇ ಇಲ್ಲವೇನೋ ಎಂಬಷ್ಟು ಬೆಸೆದುಕೊಂಡಿರುತ್ತೇವೆ..ಆದರೆ ಈ ಕಾಲ ಅನ್ನೋದು ಇದೆಯಲ್ಲ. ಅದು ಎಲ್ಲವನ್ನು ಹೊಂದಾಣಿಕೆ ಮಾಡಿಕೊಂಡು ಸರಿಯಾಗಿ ನಡೆಸಿಕೊಂಡು ಹೋಗಿಬಿಡುತ್ತದೆ. . ಆವತ್ತೊಂದಿನ ಅಪರಿಚಿತರಾಗಿ ಬಂದವರು, ಆತ್ಮೀಯವಾಗಿ ಪ್ರೀತಿ. ವಿಶ್ವಾಸಗಳಿಂದ ಮನ ಸೆಳೆದು ನಂತರ ಹಿಂತಿರುಗಿ ಹೋಗುವಾಗ ಒಂದಷ್ಟು ನೆನಪುಗಳಷ್ಟೇ.. ಈ ಜೀವನದಲ್ಲಿ ಒಂದು ಸಮಯಕ್ಕೆ ಎಲ್ಲವೂ ಅನಿಯಾರ್ಯವೇನೋ ಎಂದು ಅನಿಸಿದರೂ, ವಾಸ್ತವದಲಿ ್ಲಯಾರೂ ಯಾರಿಗೂ ಅನಿವಾರ್ಯವಲ್ಲ. . ಮರೆವು ಎಂಬ ಸಹಜತೆಗೆ ಎಲ್ಲರೂ ಒಗ್ಗಿಕೊಂಡು ಬಿಡುತ್ತಾರೆ..

ಹೊಸ ಸ್ನೇಹಿತರು ಪ್ರವೇಶ ಪಡೆಯುತ್ತಾರೆ. ದಿನದಿಂದ ದಿನಕ್ಕೆ ಮತ್ತೆ ಈ ಬಂಧಗಳು ಬೆಸೆದುಕೊಳ್ಳಲಾರಂಭಿಸುತ್ತದೆ.. ನಿನ್ನ ಬಿಟ್ಟು ಹೇಗಿರಲಿ ಎಂದು ಹೇಳುತ್ತಿದ್ದ ಗೆಳತಿ, ಅಪರೂಪಕ್ಕಾದರೂ ಫೋನ್ ಮಾಡ್ತಾಳಲ್ವ ಎಚಿದು ತೃಪ್ತಿಯನ್ನು ಪಡೆದುಕೊಳ್ಳಲೇಬೇಕು.. ಒಂದುಕಾಲದಲ್ಲಿ ನಿನ್ನ ಜೊತೆಯನ್ನು ಬಿಟ್ಟು ಬದುಕಲು ಊಹಿಸಲೂ ಆಗದ ಮನಸ್ಸು, ಇಂದುಎಲ್ಲವನ್ನೂ ಮರೆತುಬಿಟ್ಟಿದೆ..ಆ ಮನಸ್ಸಿಗೂ ಗೊತ್ತು ನಮಗೆ ನಾವು ಮಾತ್ರ ಎಂಬುದು. ಆದರೆ ಒಂದಷ್ಟು ದಿನಗಳು ನಮ್ಮಲ್ಲಿಗೆ ಬಂದು ಅವರ ನೆನಪಿನ ಛಾಯೆಯನ್ನು ಬಿಟ್ಟು ಹೋಗುತ್ತಾರಲ್ವಾ…ಅಂದು ಮಧುರವಾಗಿರುತ್ತದೆ.. ತುಂಬಾನೇ ಹಚ್ಕೊಂಡಿರೋ ವ್ಯಕ್ತಿಗಳು ಗೊತ್ತಿಲ್ಲದಂತೆಯೇ ದೂರವಾಗುತ್ತಾ ಹೋಗುತ್ತಾರೆ.. ಬದುಕು ಅಚಿದ್ರೆ ಒಚಿಥರಾ ಕೊಲಾಜ್..ಎಲ್ಲವೂ ಇದೆ. ಏನೂ ಇಲ್ಲ ಎಂಬಂತಹ ಬಿಳಿಯ ಮತ್ತು ಕಪ್ಪು ಬಣ್ಣಗಳ ಮಿಶ್ರಣ.

ಆಟೋಗ್ರಾಫ್ ಗಳೆಲ್ಲಾ ತೆಗದು ನೋಡಿದಾಗ ನೆನಪಿನ ಆವೃತ್ತಿಯೊಳಗೆ ಹೋಗುತ್ತೇವೆ. .ನಿನ್ನ ನಾ ಮರೆಯಲಾg ಎಂದು ಬರೆದಿದ್ದ ಅಕ್ಷರಗಳೆಲ್ಲಾ ನೋಡಿ ಆ ದಿನಗಳು ಎಷ್ಟು ಚಂದವಾಗಿತ್ತಲ್ವ ಎಚಿದು ಅನ್ನಿಸದೇ ಇರಲಾಗದು. ಮೂರು ದಿನಗಳ ಬದುಕಿನಲ್ಲಿ ಅಡವಿಟ್ಟ ನೆನಪುಗಳನ್ನು ಸಾಲವಾಗಿಯಾದರೂ ಪಡೆಯಲೇಬೇಕೆಂಬ ಮನಸ್ಸು.. ದಿನಗಳು ಕಳೆಯುತ್ತವೆ..ಅಚಿದು ಜೊತೆಗಿದ್ದ ಸ್ನೇಹಿತೆ ಇನ್ನೆಂದೋ ಸಿಕ್ಕಾಗ, ಕೆಲವರು ಬದಲಾಗಿರುತ್ತಾರೆ.. ಇನ್ನು ಕೆಲವರು ಅದು ಜೊತೆಗಿದ್ದಾಗಿ ಆತ್ಮೀಯತೆಯಲ್ಲಿಯೇ ಸಲುಗೆಯಲ್ಲಿಯೇ ಮಾತನಾಡಿಸುತ್ತಾರೆ. ಭಾವಗಳ ನಡುವಿನ ಅಲಿಖಿತ ಬಾಂಡ್‍ಗಳಿಗೆ ಸಂಬಂಧಗಳ ಜೇನುತುಪ್ಪವು ಸಿಹಿಯಾಗಿ ತೋರುತ್ತದೆ..ಅಂದು ಇದ್ದ ಹಾಗೇ ಸಣ್ಣಗೆಯೇಇದ್ದೀಯಾ, ದಪ್ಪಗೆ ಆಗಲ್ಲ ಬಿಡು ನೀನು ಎಂಬಂತಹ ರೇಗಿಸುವ ಮಾತುಗಳಿಗೂ ಕಡಿಮೆಯಿರುವುದಿಲ್ಲ.

ಎಂದೋ ಪರಿಚಯವಾಗಿ, ಇನ್ನೆಂದೋ ಸ್ನೇಹಿತರಾಗಿ ಬೀಳ್ಕೊಡುವಾಗ, ಧ್ವನಿಯ ಜೊತೆ ಕಣ್ಣೂ, ಮನಸ್ಸೂ ಕೂಡಾ ಸಣ್ಣಗೆ ಕಂಪಿಸುವುದು ಸುಳ್ಳಲ್ಲ..ಆದರೆ ಕಳೆದ ದಿನಗಳನ್ನೆಲ್ಲಾ ತಾಳೆ ಹಾಕಿ ಕೂಡಿಸಿದಾಗ, ಸಿಗುವುದು ನೆನಪುಗಳಷ್ಟೇ.. ಈ ಬದುಕಿಗೆ ಯಾರೂ ಅನಿವಾರ್ಯವಲ್ಲ ಎಂಬುದನ್ನು ಕೆಲವೇ ದಿನದಲ್ಲಿ ಮನಸ್ಸು ಒಗ್ಗಿಕೊಂಡುಬಿಡುತ್ತೆ.. ಮರೆವು ಹೇಗೆ ಶಾಪವೋ, ಹಾಗೆಯೇ ಇಂತಹ ಸಮಯದಲ್ಲಿ ವರವೂ ಹೌದು.. ಆ ದಿನ ಹೇಗಿದ್ವಿ ಅಲ್ವಾ? ಇಂದು ಅದೆಷ್ಟು ಬದಲಾಗಿಬಿಟ್ಟಿದ್ದೇವೆ ಎಂದು ನಮಗೇ ಅನಿಸಲು ಆರಂಭಿಸಿಬಿಡುತ್ತೆ… ಒಂದಿನ ಸ್ನೇಹಿತೆ ಕ್ಲಾಸಿಗೆ ಬಂದಿಲ್ಲಾ ಅಂದ್ರೂ ಮೂಡ್ ಆಫ್ ಮಾಡಿಕೊಂಡು ಕೂತಿರ್ತಿದ್ದು ನಾವೇನಾ? ಎಂದು ನಮ್ಮ ಬಗ್ಗೆಯೇ ನಮಗೆ ಆಶ್ಚರ್ಯವಾಗುತ್ತವೆ..

ಒಂದು ಬಂಧ ಕಳಚಿ ಹೋಗುತ್ತಿದ್ದಂತೇ ಇನ್ನೊಂದು ಬಂಧವನ್ನು ನೇಯ್ದುಕೊಳ್ಳುತ್ತೇವೆ. .ಆ ನೆನಪಿನ ಕೊಂಡಿಯೊಂದಿಗೆ ಹೊಸತೊಂದು ಕೊಂಡಿಯು ಸೇರಿ  ಬದುಕೊಂದುರೀತಿಯ ಮಸಾಲಾಪುರಿಯಂತೆ… ಒಂದು ಕಡೆಯಿಂದ ಬೀಳ್ಕೊಟ್ಟರೆ ಇನ್ರ್ನೆಂದು ಕಡೆಗೆ ಸ್ವಾಗತಿಸುವ ಒಲವು ಎಲ್ಲೋಜಗದ ಮೂಲೆಯಲ್ಲಿ ನಮಗಾಗಿ ಕಾಯುವುದು ಎಂತಹ ವಿಚಿತ್ರ ಅಲ್ವಾ? ಮನಸೆಂಬ ಪವರ್‍ಫುಲ್ ವ್ಯಕ್ತಿ ಹೊಸತನಕ್ಕೆತಕ್ಷಣ ಒಗ್ಗಿಕೊಳ್ಳುತ್ತಾನೆ..ಮೂರು ದಿನಗಳ ಬದುಕು ಘಮಘಮಿಸುತಾ , ಪರಿಮಳವನ್ನು ಬೇರೆಡೆಗೂ ಪಸರಿಸುತ್ತಿದ್ದರೇ ಚಂದ. ನಾನೂ ನನ್ನದು ನನ್ನವರು ಎಂಬ ಈ ಗಂಟುಗಳು, ನಾವು ಸಾಯುವಕೊನೆಯ ಉಸಿರಿನವರೆಗೂ ಇರುತ್ತದೆ. .ಎಷ್ಟೋ ಜನರು ಪರಿಚಯವಾಗುತ್ತಾರೆ..ಆದರೆ ಅದರಲ್ಲಿ ಕೆಲವರು ಮಾತ್ರ ಆತ್ಮೀಯರಾಗುತ್ತಾರೆ..ಒಂದಷ್ಟು ಜನರು ಹೋಗುವಾಗ ತಮ್ಮ ಛಾಪನ್ನು ಬಿಟ್ಟು ಹೋಗಿರುತ್ತಾರೆ..ಇನ್ನೊಂದಿಷ್ಟು ಜನ ನಮ್ಮಲಿ ಸ್ಥಾನವನ್ನು ಪಡೆದು ಮನಸಿನ ಸದಸ್ಯರಾಗುವುದೂ ಹೌದು… ಬಂಧಗಳೇ ಹಾಗೆ.. ಒಂದರ ನಂತರ ಇನ್ನೊಂದು ಬೆಸೆಯಲು ಆರಂಭಿಸುತ್ತೆ..


ಬರಹ: ಪದ್ಮಾ ಭಟ್, ಇಡಗುಂದಿ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x