ಪ್ರೀತಿ ಎಂದರೇನು …! ಕಾಮವೋ…? ಸ್ವಾರ್ಥವೋ…? ಪ್ರೇಮವೋ…..?

ನಾನು ಪದವಿ ಕಾಲೇಜಿಗೆ ಸೇರಿ ಬೆಂಗಳೂರಿಗೆ ಹೊಸದು. ಮೊದಲ ಬಾರಿ ಮಹಾನಗರದ ದರ್ಶನವಾದ್ದರಿಂದ ಸ್ವಲ್ಪ ಖುಷಿಯ ಜೊತೆಗೆ ಭಯವೂ ಆಗುತ್ತಿತ್ತು. ನಮ್ಮ ಕಾಲೇಜು ಕಬ್ಬನ್ ಪಾರ್ಕ್ ಸಮೀಪದಲ್ಲೇ ಇದ್ದುದರಿಂದ ಆಗಾಗ ವಿರಾಮದ ವೇಳೆಯಲ್ಲಿ ಸುತ್ತಾಡಲು ಕಬ್ಬನ್ ಪಾರ್ಕಿಗೆ ಸ್ನೇಹಿತರೆಲ್ಲ ಹೊರಡುತ್ತಿದ್ದೆವು. ಹೋದಾಗಲೆಲ್ಲ ನಮಗೆ ಯುವಕ ಯುವತಿ ಜೋಡಿಗಳೇ ಹೆಚ್ಚಾಗಿ ಕಾಣಸಿಗುತ್ತಿದ್ದರು. ತೀರಾ ಹಳ್ಳಿಯವರೇ  ಆಗಿದ್ದ ನಮ್ಮ ಗುಂಪಿನವರು ಇವರು ಪ್ರೇಮಿಗಳೊ….? ಕಾಮಿಗಳೊ…? ಇವರ ತೆವಲಿಗೆ ಈ ಸಾರ್ವಜನಿಕ ತಾಣವೆ ಬೇಕೆ ಎಂದು ಅಣುಕಿಸುತ್ತೆದ್ದೆವು.

ಹಾಗಾದರೆ ಪ್ರೀತಿ ಎಂದರೇನು? ಕಾಮಾಲಿಂಗನವೋ..? ಸ್ವಾರ್ಥಾಲಿಂಗನವೋ..? ಪ್ರೇಮಾಲಿಂಗನವೋ..?  ಎಂಬ ಎಷ್ಟೋ ಪ್ರಶ್ನೆಗಳನ್ನು ನನ್ನಲ್ಲೇ ಹಾಕಿಕೊಂಡದ್ದು ಉಂಟು.

ಈಗ ಲವ್ ಅಟ್ ಫಸ್ಟ್ ಸೈಟ್ ಅನ್ನೋದನ್ನೇ ತೆಗೆದುಕೊಂಡರೆ, ಕೇವಲ ದೈಹಿಕ ಆಕರ್ಷಣೆಯಿಂದ ಪ್ರೀತಿ ಎಂದುಕೊಂಡು ಪಾರ್ಕು, ಸಿನೆಮಾ, ಹೊಟೇಲ್, ಕ್ಲಬ್ಬುಗಳನ್ನು ಸುತ್ತಿ ತಮ್ಮ ಇಂದ್ರಿಯಗಳನ್ನು ಸಂತೋಷ ಪಡಿಸಿಕೊಂಡರೆ ಅದನ್ನು ಪ್ರೇಮವೆನ್ನುವುದಕ್ಕಿಂತ ಕಾಮವೆಂದೇ ಹೇಳಬಹುದಲ್ಲವೇ?

ಯಾವುದೇ ಹುಡುಗ/ಹುಡುಗಿ ತಾವು ಪ್ರೀತಿಸಿದವರನ್ನು ತನ್ನ ಹತೋಟಿಯಲ್ಲಿಟ್ಟು ತನಗೋಸ್ಕರವೇ ಬದುಕಲಿ, ತನ್ನ ಆಸೆಗಳನ್ನೆಲ್ಲಾ ಪೂರೈಸಲಿ, ತನ್ನ ಮಾತು ದಾಟದಿರಲಿ, ಇಷ್ಟಾರ್ಥಗಳನ್ನೆಲ್ಲ ಈಡೇರಿಸಿ ಸಂತೋಷ ಪಡಿಸಲಿ ಎಂದುಕೊಂಡರೆ ಅದನ್ನು ಸ್ವಾರ್ಥವೆಂದು ಕರೆಯಬಹುದಲ್ಲವೇ?

ಇಂದಿನ ಪ್ರೌಢರ ಮತ್ತು ಯುವಕ ಯುವತಿಯರ ಪ್ರೀತಿ ಪ್ರೇಮಗಳು ಹೆಚ್ಚು ಶುರುವಾಗುವುದೇ ಮೇಲೆ ಹೇಳಿದ ಆಕರ್ಷಣೆಗಳಿಂದ. ಕಾಲೇಜು ಮೆಟ್ಟಿಲೇರುವುದೇ ತಡ ತಮ್ಮ ಎಲ್ಲ  ಚಟುವಟಿಕೆಗಳನ್ನು ಬದಿಗೊತ್ತಿ ಸಖ/ಸಖಿ ಇಲ್ಲದವರು ಕಾಲೇಜು ಸೇರುವುದೇ ಅಪ್ರಯೋಜಕ ಎನ್ನುವ ರೀತಿಯಲ್ಲಿ ಅವರ  ಹುಡುಕಾಟ ಮತ್ತು ಓಲೈಕೆಗಳಲ್ಲೇ  ಮಗ್ನರಾಗಿಬಿಡುತ್ತಾರೆ. ಆದರೆ ವಿಪರ್ಯಾಸವೆಂದರೆ ನೀನೆ ನನ್ನ ಜೀವ, ನೀನಿಲ್ಲದೆ ಬದುಕಿಲ್ಲ ಎಂಬ ಪ್ರತಿಜ್ಞೆಗಳನ್ನು ಮೆಟ್ಟಿ ಚಿಕ್ಕ ಪುಟ್ಟ ವಿಷಯಗಳಿಗೆ ಸಿಡಿಮಿಡಿಗೊಂಡು   ಪ್ರೀತಿ ಆರಂಭವಾದ ಕೆಲವೇ ದಿನಗಳ ನಂತರ ಸಂಭಂದ ಕಡೆದು ಕೊಳ್ಳುವ ನಿದರ್ಶನಗಳೇ ಹೆಚ್ಚು ಇದರಿಂದಲೇ ತುಂಬಾ ಪ್ರೇಮಿಗಳು ತಮ್ಮ ಪ್ರೀತಿಯಲ್ಲಿ ಸಫಲತೆಯನ್ನು ಕಾಣುತ್ತಿಲ್ಲ. ಬಹುಶಃ ಅದಕ್ಕೆಂದೆ ಪ್ರೀತಿಯೆಂಬ ಪದಕ್ಕೆ ದಕ್ಕೆ ಬಾರದಿರಲೆಂದು loving ಎನ್ನುವುದನ್ನು dating ಎಂದು ಬದಲಾಗಿರಬೇಕು.

ಪ್ರೀತಿಯೆಂದರೇನು..? ಅದು ಹೇಗಿರಬೇಕು…….?

ಪ್ರೀತಿಯೆಂಬುದು ಸಕಲ ಜೀವರಾಶಿಗಳಲ್ಲೂ ವಿಭಿನ್ನತೆಯಿಂದ ಇರುವ ಹೇಳಲಾಗದ, ಬಣ್ಣಿಸಲಾಗದ, ಬಿಡಿಸಲಾಗದ ಮತ್ತು ಬದುಕಿಗೆ ಅವಶ್ಯಕವಾದ ಜೀವಿಗಳ ಪರಸ್ಪರ ಅನುಬಂಧ. ಅದು ಪ್ರೇಮ, ಮಮತೆ, ವಾತ್ಸಲ್ಯ, ನಂಬಿಕೆ, ಕರುಣೆ, ಇತ್ಯಾದಿಗಳಿಂದ ಬೆಸೆದಿರುವಂತದ್ದು. ಜಾತಿ-ಮತ, ವಯಸ್ಸು, ಪ್ರಭೇದಗಳನ್ನು ಮೀರಿದ್ದು, ಅದಕ್ಕೆ ಎರಡು ವಿರುದ್ದ ಲಿಂಗದ ಜೋಡನೆಯ ಕಟ್ಟುಪಾಡುಗಳಿಲ್ಲ. ಪ್ರೀತಿಯಲ್ಲಿ ಕಾಮಭಿಲಾಷೆ ಸ್ವಾರ್ಥಭಿಲಾಷೆಗಳಿಗಿಂತ ಪ್ರೇಮಾಭಿಲಾಷೆ, ಭಾವಾಭಿಲಾಷೆ ಮತ್ತು ವ್ಯಕ್ತಿತ್ವಗಳ ಅನಿಭಾವುಕ ಸಂಗಮಗಳ ಸಮ್ಮಿಶ್ರಣ. ಪ್ರೀತಿ ಎಂಬುದು ಕೇವಲ ಎರಡು ವಿರುದ್ದ ಲಿಂಗಗಳ ಮಿಲನದಲ್ಲಿ ಮೂಡುವಂತದ್ದಲ್ಲ. ಪೋಷಕರ-ಮಕ್ಕಳ, ಸಹೋದರ-ಸಹೋದರಿಯರ, ಸ್ನೇಹಿತರ, ಗುರು-ಶಿಷ್ಯರ, ದಣಿ-ಜವಾನರ ಇತ್ಯಾದಿಗಳ ನಡುವೆಯೂ ವಿವಿಧತೆಯಿಂದ ಎರ್ಪಡುವಂತದ್ದು.

ಆದ್ದರಿಂದ ಇಂದು ನಮ್ಮ ಯುವ ದೈಹಿಕ ಆಕರ್ಷಣೆಯ ಜೊತೆಗೆ ಮೊದಲೇ ಇಬ್ಬರ ಭಾವನೆಗಳ, ಮನಸ್ಸುಗಳ, ಮನೆಯ ವಸ್ತು-ಸ್ಥಿತಿಗಳ, ಸಹಬಾಳ್ವೆ, ಸಮನ್ವತೆಯಲ್ಲೂ ಪ್ರೇಮವಿಟ್ಟು ಒಳ್ಳೆಯ ಪರಸ್ಪರ ವ್ಯಕ್ತಿತ್ವ ವಿಕಸಿಸಿಕೊಂಡಾಗ ಪ್ರೀತಿ ಅಮರ, ಮಧುರ, ಪ್ರೇಮಾಮಯವಾಗಿ, ಆನಂದದಾಯಕವಾಗಿರುತ್ತದೆ.

ಕೊನೆಯಲ್ಲಿ ಇಂದಿನ ಯುವಕರಿಗೊಂದು ಕಿವಿಮಾತು,

ಪ್ರೀತಿಸಲು ಜೀವ ಬೇಕು

ಜೀವಿಸಲು ಅನ್ನ ಬೇಕು

ಅನ್ನಕ್ಕೆ ದುಡಿಮೆ/ಹಣ ಬೇಕು

ದುಡಿಮೆ/ಹಣಕ್ಕಾಗಿ ಕಾಯಕ ಬೇಕು

ಕಾಯಕಕ್ಕೆ ಕೌಶಲ್ಯತೆ ಬೇಕು…….

ಆದ್ದರಿಂದ ಮೇಲಿನ ಎಲ್ಲವುಗಳನ್ನು ಗಮನದಲ್ಲಿರಿಸಿ ಅದಕ್ಕೆ ತಕ್ಕಂತೆ ತಯಾರಾಗಿ, ನಿಮಗೆ ಸರಿಹೊಂದುವ ಸಂಗಾತಿಯನ್ನು ಆಯ್ಕೆ ಮಾಡಿ ಪ್ರೀತಿಸಿ ಆಗ ನಿಮ್ಮ ಪ್ರೀತಿ ಸಫಲತೆಯನ್ನು ಕಾಣುತ್ತದೆ.

ಎಲ್ಲರಿಗೂ ಶುಭವನ್ನು ಹಾರೈಸುತ್ತಾ

-ಸರ್ವೇಶ್ ಕುಮಾರ ಎಂ. ವಿ

ಸ್ಥಾನ; ಚೈಬಾಸ, ಜಾರ್ಖಂಡ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Utham Danihalli
11 years ago

Chenagidhe nimma lekana enastu bareyabahuditheno shubhvagali

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

 "ಪ್ರೀತಿಯು ಕಾಮಭಿಲಾಷೆ ಸ್ವಾರ್ಥಭಿಲಾಷೆಗಳಿಗಿಂತ ಪ್ರೇಮಾಭಿಲಾಷೆ, ಭಾವಾಭಿಲಾಷೆ ಮತ್ತು ವ್ಯಕ್ತಿತ್ವಗಳ ಅನಿಭಾವುಕ ಸಂಗಮಗಳ ಸಮ್ಮಿಶ್ರಣ" ಎಂಬ ಸಾಲು ಇಷ್ಟವಾಯಿತು. ಧನ್ಯವಾದಗಳು ಸರ್.

hemalatha
hemalatha
10 years ago

”ಪ್ರೀತಿ” ಎಂಬುದು 
ಸಕಲ ಜೀವರಾಶಿಗಳಲ್ಲೂ
ವಿಭಿನ್ನತೆಯಿಂದ ಇರುವ
ಹೇಳಲಾಗದ
ಬಣ್ಣಿಸಲಾಗದ
ಬಿಡಿಸಲಾಗದ
ಬದುಕಿಗೆ ಅವಶ್ಯಕವಾದ
ಪರಸ್ಪರ
ಅನುಬಂಧ
 
ಈ ಸಾಲುಗಳು 
ಅರ್ಥಪೂರ್ಣವಾಗಿದ್ದು
ಎಲ್ಲರ ಬದುಕಿನ 
ಕೊಂಡಿಗಳಾಗಿವೆ

roja
roja
7 years ago

super

4
0
Would love your thoughts, please comment.x
()
x