ಸಾಮಾನ್ಯ ಜ್ಞಾನ (ವಾರ 25): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:

೧.    ಭಾರತದ ಮೂರು ಪ್ರಾದೇಶಿಕ ಕ್ಷೀರೋದ್ಯಮ ಸಂಶೋಧನೆ ಕೇಂದ್ರಗಳಲ್ಲಿ ಒಂದು ಕರ್ನಾಟಕದಲ್ಲಿದೆ. ಅದು ಎಲ್ಲಿದೆ?
೨.    ೧೯೨೪ ರ ಬೆಳಗಾವಿ ಕಾಗ್ರೇಸ್ ಅಧಿವೇಶನದಲ್ಲಿ ಸ್ವಾಗತ ಗೀತೆಯನ್ನು ಹಾಡಿದವರು ಒಬ್ಬ ಖ್ಯಾತ ಹಿಂದೂಸ್ಥಾನಿ ಗಾಯಕಿ. ಈಕೆ ಯಾರು?
೩.    ಶಿವಪುರಿ ರಾಷ್ಟ್ರೀಯ ಉದ್ಯಾನ ಎಲ್ಲಿದೆ?
೪.    ಮಧ್ಯಪ್ರದೇಶ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
೫.    ಅಗ್ನಿಶಾಮಕದವರು ಬಳಸುವ ರಾಸಾಯಾನಿಕ ಮಿಶ್ರಣ ಯಾವುದು?
೬.    ಜೈ ಜವಾನ್ ಜೈ ಕಿಸಾನ್ ಘೋಷಣೆ ಜೊತೆಗೆ ಜೈ ವಿಜ್ಞಾನ್ ಎಂಬುವುದನ್ನು ಸೇರಿಸಿದವರು ಯಾರು?
೭.    ಕ್ಷುದ್ರ ಗ್ರಹಗಳಲ್ಲಿ ಅತೀ ದೊಡ್ಡದು ಯಾವುದು?
೮.    ೧೮೮೪ ರಲ್ಲಿ ಜಿನೀವಾದಲ್ಲಿ ಅಂತರಾಷ್ಟ್ರೀಯ ರೆಡ್ ಕ್ರಾಸ್ ಸ್ಥಾಪಿಸಿದವರು ಯಾರು?
೯.    ಕಬ್ಬಿಣ ತಯಾರಿಸುವ ಊದು ಕೊಳವೆಗಳನ್ನು ಕ್ರಿಸ್ತ ಪೂರ್ವದಲ್ಲಿ ತಯಾರಿಸಿದ ದೇಶ ಯಾವುದು?
೧೦.    ೧೯೫೨ ರಲ್ಲಿ ಕೃತಕ ಹಾರ್ಮೋನ್ ತಯಾರಿಸಿ ನೊಬೆಲ್ ಪ್ರಶಸ್ತಿ ಪಡೆದವರು ಯಾರು?
೧೧.    ಅಲೆಗ್ಸಾಂಡರ್ ಎಂಬ ಗ್ರೀಕ್ ವೀರನೊಂದಿಗೆ ಹೋರಾಡಿದ ಪುರೂರವನಿಗಿದ್ದ ಇನ್ನೋಂದು ಹೆಸರು ?
೧೨.    ಪ್ಲೇಗ್ ರೋಗಕ್ಕೆ ಕಾರಣವಾಗುವ ವೈರಸ್ ಯಾವುದು?
೧೩.    ಯುವ ಜನ ಸೇವಾ ಮತ್ತು ಕ್ರೀಡೆಗಳ ಸಚಿವ ಇಲಾಖೆ ನವದೆಹಲಿ ನೀಡುವ ಕ್ರೀಡಾ   ಕ್ಷೇತ್ರದ ಪ್ರಶಸ್ತಿ ಯಾವುದು?
೧೪.    ಮಾನವನ ರಕ್ತ ಕಣಗಳನ್ನು ಗುರುತಿಸಿದ ವಿಜ್ಞಾನಿ ಯಾರು?
೧೫.    ಭಾರತೀಯ ಜ್ಞಾನ ಪೀಠ ಪ್ರಶಸ್ತಿ ಪಡೆದ ಎರಡನೇಯ ಉರ್ದು ಲೇಖಕ ಯಾರು?
೧೬.    ಶಿಶುನಾಳ ಶರೀಫರ ಗುರುವಿನ ಹೆಸರೇನು?
೧೭.    ತಮಿಳನಾಡಿನ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು?
೧೮.    ಅರ್ಥಶಾಸ್ತ್ರ ಬರೆದವರು ಯಾರು?
೧೯.    ಡಾಟರ್ ಆಫ್ ದಿ ಈಸ್ಟ್ ಕೃತಿ ಬರೆದವರು ಯಾರು?
೨೦.    ಮೊದಲ ಬಾರಿಗೆ ಅಂಕಣ ಬರಹಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಭಾರತೀಯ ಲೇಖಕ ಯಾರು?
೨೧.    ನಿರುಪಮಾ ವೈದ್ಯನಾಥನ್ ಯಾವ ಕ್ರೀಡೆಗೆ ಸಂಬಂಧಿಸಿದವರು ?
೨೨.    ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಈ ಮೂರು ಪ್ರಶಸ್ತಿಗಳನ್ನು ಗಳಿಸಿದ ಕನ್ನಡದ ಕಾವ್ಯ ಯಾವುದು?
೨೩.    ಸತಿಸಹಗಮನ ಪದ್ದತಿ ನಿಷೇದದಲ್ಲಿ ಪ್ರಮುಖ ಪಾತ್ರವಹಿಸಿದವರು ಯಾರು?
೨೪.    ಅರುಣ್ ಶೌರಿ ಬರೆದ ನಿಷೇದಿತ ಕೃತಿ ಯಾವುದು?
೨೫.    ಮನುಷ್ಯನಿಗೆ ಬುದ್ಧಿ ಶಕ್ತಿಯಲ್ಲಿ ತುಂಬ ಹತ್ತಿರ ವಿರುವ ಪ್ರಾಣಿ ಯಾವುದು?
೨೬.    ರಾಸಾಯಾನಿಕ ಧಾತು ಮೊದಲ ವೈಜ್ಞಾನಿಕ ಸೂತ್ರ ಯಾವ ಪುಸ್ತಕದಲ್ಲಿದೆ?
೨೭.    ಹಿಮ್ಮುಖ ಚಲನೆ ಹೊಂದಿರುವ ಗ್ರಹ ಯಾವುದು?
೨೮.    ಸುದೀಪ್ ನಟಿಸಿರುವ ತೆಲುಗು ’ಈಗ’ ಚಿತ್ರದ ನಿರ್ದೇಶಕರು ಯಾರು?
೨೯.    ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸ್ಥಾಪನ ದಿವಸ ಯಾವುದು?
೩೦.    ಈ ಚಿತ್ರದಲ್ಲಿರುವವರನ್ನು ಗುರುತಿಸಿ?
  
       
 

 ಈ ವಾರದ ಪ್ರಸಿದ್ಧ ದಿನಾಚರಣೆಗಳು
    ಮೇ-೧ ಕಾರ್ಮಿಕರ ದಿನ 
    ಮೇ-೩ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ

ಉತ್ತರಗಳು:
೧.    ಬೆಂಗಳೂರಿನ ಆಡುಗೋಡಿ
೨.    ಗಂಗೂಬಾಯಿ ಹಾನಗಲ್ಲ
೩.    ಮಧ್ಯಪ್ರದೇಶ
೪.    ೧ ನವೆಂಬರ್ ೧೯೫೬
೫.    ಸೋಡಿಯಂ ಬೈ ಕಾರ್ಬೋನೈಟ್ ಮತ್ತು ಅಮೊನಿಯಂ ಸಲ್ಫೇಟ್
೬.    ವಾಜಪೇಯಿ
೭.    ಸಿರಿಸ್
೮.    ಹೆನ್ರಿ ಡುನಾಂಟ್
೯.    ಚೀನಾ
೧೦.    ವಿನ್ಸೆಂಟ್ ಡು ವೈಗ್ನಿಯಾಡ್
೧೧.    ಪುರುಷೋತ್ತಮ
೧೨.    ಪಾಶ್ಚುರಲ್ಲಾ ಪೆಸ್ಟಿಸ್
೧೩.    ದ್ರೋಣಾಚಾರ್ಯ ಪ್ರಶಸ್ತಿ
೧೪.    ಕಾರ್ಲ್ ಲ್ಯಾಂಡ್ ಸ್ಟೈನರ್ 
೧೫.    ಸರ್ದಾರ್ ಆಲಿ ಜಾಫ್ರಿ
೧೬.    ಗೋವಿಂದ ಭಟ್ಟ
೧೭.    ಜಾನಕಿ
೧೮.    ಕೌಟಿಲ್ಯ
೧೯.    ಬೆನ್‌ಜೀರ್ ಭುಟ್ಟೋ
೨೦.    ಹಾ ಮಾ ನಾಯಕ
೨೧.    ಟೆನಿಸ್
೨೨.    ಶ್ರೀ ರಾಮಾಯಾಣ ದರ್ಶನಂ
೨೩.    ರಾಜ ರಾಮ್ ಮೋಹನ್ ರಾಯ್
೨೪.    ವರ್ಷಿಫಿಂಗ್ ಫಾಲ್ಸ್ ಗಾಡ್ಸ್
೨೫.    ಚಿಂಪಾಂಜಿ
೨೬.    ದಿ ಸೆಪ್ಟಿಕಲ್ ಕೆಮಿಸ್ಟ್
೨೭.    ಶುಕ್ರ
೨೮.    ರಾಜಮೌಳಿ
೨೯.    ಅಕ್ಟೋಬರ್ ೨  ೧೯೧೩
೩೦.    ಹುಕ್ಕೇರಿ ಬಾಳಪ್ಪ

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x