ಸಾಮಾನ್ಯ ಜ್ಞಾನ (ವಾರ 10): ಮಹಾಂತೇಶ್ ಯರಗಟ್ಟಿ

೧.    ಇಸ್ರೋದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು?
೨.    ಸಿಖ್ಖರ ಪವಿತ್ರ ಗ್ರಂಥ ಯಾವುದು?
೩.    ಮತದಾನದ ವಯಸ್ಸನ್ನು ೨೧ ವರ್ಷದಿಂದ ೧೮ ವರ್ಷಕ್ಕೆ ಯಾವ ವರ್ಷದಲ್ಲಿ ಇಳಿಸಲಾಯಿತು?
೪.    ಮರಾಠಾ ಒಕ್ಕೂಟಕದ ಸ್ಥಾಪಕ ಯಾರು?
೫.    ವಿಶ್ವವನ್ನು ಸುತ್ತಿ ಬಂದ ಭಾರತೀಯ ನೌಕೆಯ ಹೆಸರೇನು?
೬.    ಗ್ರಾಮ್ ಸ್ವರಾಜ್ ಎಂಬ ವಿಚಾರವನ್ನು ಪ್ರತಿಪಾದಿಸಿದವರು ಯಾರು?
೭.    ಮದರ್ ತೆರೆಸ್ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
೮.    ’ಪೆನಾಲ್ಟಿ ಕಾರ್ನರ್’ ಯಾವ ಕ್ರೀಡೆಗೆ ಸಂಬಂಧಿಸಿದ್ದು?
೯.    ಪೋಲಿಯೋ ಕಾಯಿಲೆಯನ್ನು ಯಾವುದರಿಂದ ತಡೆಗಟ್ಟಬಹುದು?
೧೦.    ಡಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಸ್ಥಾಪಿಸಿದವರು ಯಾರು?
೧೧.    ಕೃಷ್ಣನು ಕಿರುಬೆರಳಿನಿಂದ ಮೇಲೆತ್ತಿದ ಪರ್ವತದ ಹೆಸರೇನು?
೧೨.    ಭಾರತದಲ್ಲಿ ಈ ಕೆಳಗಿನ ಯಾವ ಪ್ರದೇಶ ಹೆಚ್ಚಾಗಿ ಭೂಕಂಪಕ್ಕೆ ಒಳಗಾಗುತ್ತದೆ?
೧೩.    ಭಾರತದಲ್ಲಿ ಹೆಚ್ಚಾಗಿ ಜವುಗು ಪ್ರದೇಶ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
೧೪.    ಸೀತೆಯನ್ನು ರಕ್ಷಿಸಲು ರಾವಣನೊಂದಿಗೆ ಹೋರಾಡಿದ ಪಕ್ಷಿ ಯಾವುದು?
೧೫.    ಕೇಸರಿ ಮತ್ತು ’ದಿ ಮರಾಠಾ’ ಪತ್ರಿಕೆಗಳನ್ನು ಪ್ರಕಟಿಸಿದವರು ಯಾರು?
೧೬.    ಭಾರತದ ನೌಕಾದಳದ ಹಡಗುಗಳು ಎಲ್ಲಿ ತಯಾರಾಗುತ್ತವೆ?
೧೭.    ’ಇಂದಿರಾ ಪಾಯಿಂಟ್’ ಎಲ್ಲಿದೆ?
೧೮.    ದೇಶದಲ್ಲಿ ಅತ್ಯಂತ ಚಿಕ್ಕ ಮತಗಟ್ಟೆ ಯಾವ ರಾಜ್ಯದಲ್ಲಿದೆ?
೧೯.    ಭಾರತದಲ್ಲಿ ಅತಿಹೆಚ್ಚು ಬೆಳೆಯುವ ಎಣ್ಣೆಕಾಳು ಬೆಳೆ ಯಾವುದು?
೨೦.    ಭಾರತದಲ್ಲಿ ಪತ್ರಿಕೋದ್ಯಮಿಗಳಿಗೆ ಸಲ್ಲುತ್ತಿರುವ ದೊಡ್ಡ ಪ್ರಶಸ್ತಿ ಯಾವುದು?
೨೧.    ಮಹಾರಾಷ್ಟ್ರದಲ್ಲಿ ಭಕ್ತಿ ಚಳುವಳಿಯನ್ನು ಪ್ರಚಾರ ಮಾಡಿದವರು ಯಾರು?
೨೨.    ಜವಹರ್‌ಲಾಲ್ ನೆಹರೂರವರ ಸಮಾಧಿ ಇರುವ ಸ್ಥಳ ಯಾವುದು?
೨೩.    ಭಾರತೀಯರು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆ ಏನು?
೨೪.    ಶ್ರೀರಾಮನ ಧನುಸ್ಸಿನ ಹೆಸರೇನು?
೨೫.    ಸರಸ್ವತಿಯ ವೀಣೆಯ ಹೆಸರೇನು?
೨೬.    ನಮ್ಮ ರಾಷ್ಟ್ರೀಯ ಚಿಹ್ನೆ ಮೇಲೆ ಕೊರೆದಿರುವ ಧ್ಯೇಯ ವಾಕ್ಯ ಯಾವುದು?
೨೭.    ಭಾರತದ ಹಾಲಿವುಡ್ ಎಂದು ಯಾವ ನಗರ ಪ್ರಸಿದ್ಧವಾಗಿದೆ?
೨೮.    ಮೊಟ್ಟಮೊದಲು ರೂಪಾಯಿ ನಾಣ್ಯವನ್ನ ಯಾರು ಹುಟ್ಟಿಸಿದರು?
೨೯.    ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ಗಿನ್ನಿಸ್ ದಾಖಲೆ ಸ್ಥಾಪಿಸಿರುವ ಭಾರತದ ಹಿನ್ನೆಲೆ ಗಾಯಕಿ ಯಾರು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.


ಈ ವಾರದ ಪ್ರಸಿದ್ಧ ದಿನಾಚರಣೆ
ಜನವರಿ – ೧೫ ಭೂಸೇನಾ ದಿನ

ಉತ್ತರಗಳು:
೧.    ಪ್ರೊ.ಯು.ಆರ್.ರಾವ್
೨.    ಗುರು ಗ್ರಂಥ ಸಾಹೇಬ್
೩.    ೧೯೮೬
೪.    ಮೊದಲನೆ ಬಾಜಿರಾವ್
೫.    ಐ.ಎನ್.ಎಸ್.ತರಂಗಿಣಿ
೬.    ಮಹಾತ್ಮ ಗಾಂಧಿ
೭.    ಕೊಲ್ಕೊತ್ತ
೮.    ಹಾಕಿ
೯.    ವ್ಯಾಕ್ಸಿನೇಷನ್ (ಲಸಿಕೆ ಹಾಕಿಸುವುದರಿಂದ)
೧೦.    ರಾಸ ಬಿಹಾರಿ ಬೋಸ್
೧೧.    ಗೋವರ್ಧನ ಪರ್ವತ
೧೨.    ಹಿಮಾಲಯ ಪರ್ವತ ಶ್ರೇಣಿ
೧೩.    ಒರಿಸ್ಸಾ
೧೪.    ಜಟಾಯು
೧೫.    ಬಾಲ ಗಂಗಾಧರ ತಿಲಕ್
೧೬.    ಕೊಚ್ಚಿನ್
೧೭.    ನಿಕೋಬಾರ್
೧೮.    ಅರುಣಾಚಲ ಪ್ರದೇಶ
೧೯.    ಶೇಂಗಾ
೨೦.    ಬಿ.ಡಿ.ಗೋಯಂಕಾ ಪ್ರಶಸ್ತಿ
೨೧.    ನಾಮದೇವ್
೨೨.    ಶಾಂತಿವನ
೨೩.    ಸೊನ್ನೆಯ ಆವಿಷ್ಕಾರ್
೨೪.    ಕೋದಂಡ
೨೫.    ಕಚ್ಛಫೀ
೨೬.    ಸತ್ಯಮೇವ ಜಯತೇ
೨೭.    ಮುಂಬೈ
೨೮.    ಶೇರಶಹಾ(೧೫೪೨)
೨೯.    ಲತಾ ಮಂಗೇಶ್ವರ
೩೦.    ವೀರ ಸಾವರ್ಕರ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
gaviswamy
10 years ago

ಉಪಯುಕ್ತ ಪ್ರಶ್ನೆಗಳು .. ಚೆನ್ನಾಗಿದೆ .. ಅತಿ ಚಿಕ್ಕ ಮತಗಟ್ಟೆಯ ಮತದಾರರ ಸಂಖ್ಯೆ ತಿಳಿಸಿ.

1
0
Would love your thoughts, please comment.x
()
x