ಬೀಗರನ ಕಳಸೊ ಸಂಭ್ರಮ: ಸುಮನ್ ದೇಸಾಯಿ ಬರೆವ ನಗೆ ಅಂಕಣ

ನನ್ನ ಜೊಡಿ ಕೆಲಸ ಮಾಡೊ ಗೆಳತಿ ಸುಧಾ ಅವರ ಊರಿಗೆ ಜಾತ್ರಿಗೆ ಅಂತ ಅವರ ಹಳ್ಳಿಗೆ ಹೋಗಿದ್ದೆ. ಸಣ್ಣದಿದ್ರು ಸಮೄಧ್ಧಿಯಿಂದ ಕೂಡಿದ ಊರು. ನನ್ನ ಗೆಳತಿಯವರದು ಅವಿಭಕ್ತ ಕುಟುಂಬ. ದೊಡ್ಡ ಮನಿ, ಮನಿ ತುಂಬ ಮಂದಿ. ಹೇಳಿಕೇಳಿ ಹಳ್ಳಿ ಮಂದಿ. ಎಲ್ಲಾರು ಹೆಜ್ಜಿ ಹೆಜ್ಜಿಗು ಉಪಚಾರ ಮಾಡೊವರನ.

ಅವತ್ತ ಎಲ್ಲಾರು ಮಾತಾಡಕೊತ ಕೂತಾಗ ಹಿಂಗಾ ಆತು. ಸಂಜಿಮುಂದ ಐದ ಗಂಟೆ ಆಗಿತ್ತು. ಚಹಾದ ಟೈಮ್ ಆಗಿತ್ತು. ಅಷ್ಟರಾಗ ಒಳಗಿಂದ ಒಂದ ಐದು ವರ್ಷದ ಸುಧಾನ ತಮ್ಮನ ಮಗಳು ಓಡಕೊತ ಬಂದು ” ಎಲ್ಲಾರು ಚಹಾ ಅಟಿಲಿಕ್ಕೆ (ಕುಡಿಲಿಕ್ಕೆ) ಬರಬೇಕಂತ ಒದರಿ ಹೋದ್ಲು. ಯಪ್ಪಾ ಒಮ್ಮಿಕಲೆ ಆಕಿ ಹಂಗ ಒದರಿದ್ದ ಕೇಳಿ ನನಗ ಘಾಬರಿನ ಆತು ಹಿಂಗ್ಯಾಕ ಅಂತ ನನ್ನ ಗೇಳತಿ ಮಾರಿ ನೋಡಿದೆ. ಆಕಿ ನಕ್ಕೊತ ” ಏನ ತಿಳ್ಕೊಬ್ಯಾಡಾ, ನಮ್ಮ ದೊಡ್ಡಮ್ಮ ಮುಂಝಾನಿಂದ ಬರೊಹೊಗೊವರಿಗೆಲ್ಲಾ ಚಹಾ ಮಾಡಿ ಮಾಡಿ ಬ್ಯಾಸತ್ತಿರತಾಳ, ಅದಕ್ಕ ಆಕಿ ಹೇಳಿ ಕಳಿಸಿದ್ದನ್ನ ಯಚ್ಛಾವತ್ತ ನಮಗ ಹೇಳಿಹೋಗ್ಯಾಳ ಇಕಿ ಕಾರಬಾರಿ ” ಅಂದ್ಲು.  ಎಲ್ಲಾರು ಅಡಗಿ ಮನಿಗೆ ಹೋಗಿ ಕುತ್ವಿ. ಸುಧಾನ ದೊಡ್ಡಮ್ಮ ಎಷ್ಟ ಖುಶಿಲೆ ಉಪಚಾರ ಮಾಡಿ ಬಿಸಿ ಬಿಸಿ ರುಚಿ ರುಚಿ ಚಹಾ ಮತ್ತ ಜೋಡಿ ತಿನಲಿಕ್ಕೆ ಕುರು ಕುರು ಅವಲಕ್ಕಿ ಹಾಕಿ ಕೊಟ್ರು. ಎಲ್ಲಾರು ಹರಟಿ ಹೊಡಕೊತ ಚಹಾ ಮುಗಿಸಿದ ಮ್ಯಾಲೆ ಸುಧಾನ ದೊಡ್ಡಪ್ಪ ಮುದ್ದಾಮ ” ಯಾಕೊ ಚಹಾ ಸಪ್ಪಗಾಗಿತ್ತ. ಕುಡಧಂಗ ಆಗಲಿಲ್ಲಾ ಅಂದ್ರು, ಅದಕ್ಕ ಸುಧಾನ ದೊಡ್ಡಮ್ಮ   ” ಹಮ್ ಮತ್ತ ಕುತ ಮೆಟ್ಟಿನಮ್ಯಾಲೆ  ತಪ್ಪೆಲಿ ಚಹಾ ಹಿಗ್ಗಿದ್ರೇನೊ ಮತ್ತ ಸಪ್ಪಗ ಅನಸಲಾರದ ಏನ ಮಾಡತದ,ಇನ್ನೊಮ್ಮೆ ಚಹಾ ಅನ್ರಿ  ಆವಾಗ ಹೇಳ್ತೆನಿ. ಸರಳ ಎಲ್ಲಾರು ಎದ್ದ ಹೊರಗ ನಡಿರಿ ” ಅಂದ್ರು.

ಅವರು ಹಂಗಂದಿದ್ರಾಗ ಸಿಟ್ಟಿನಕಿಂತಾ ಅಂತಃಕರಣನ ಎದ್ದ ಕಾಣಸ್ತಿತ್ತು. ಈ ಹಳ್ಳಿ ಮಂದಿ ಮಾತು ಸ್ವಲ್ಪ ಒರಟ ಆದ್ರು ಅದರ ಹಿಂದ ಅಂತಃಕರಣ ತುಂಬಿರತದ. ಇವರ ಮನ್ಯಾಗ ಒಂದ ಮಜಾ ಅಂದ್ರ ಎಲ್ಲಾರು shortcut ನ್ಯಾಗ ಮಾತಾಡತಿದ್ರು. ಸುಧಾನ ಮನಿ  ಕೆಲಸದಾಕಿ ಮಗಳು ಅಂಗಳ ಕಸಾ ತ್ಯಾರಿ ಬ್ಯಾರಿ ಉಡಗಿದ್ಲು. ಅದಕ್ಕ ಸುಧಾನ ದೊಡ್ಡಮ್ಮ ಆಕಿನ್ನ ಬೈಲಿಕತ್ತಿದ್ಲು. ” ಒಂದ ಕೆಲಸಾ ಛಂದಂಗೆ ಮಾಡಂಗಿಲ್ಲಾ, ತಲಿಮ್ಯಾಲೆ ಮೂರಕತ್ತಿ ವಯಸ್ಸಾದ್ವು. ಡಿ.ಡಿನ್ನ ತಂದು ಅಂತ ಅಂದದ್ದನ್ನ ಕೇಳಿ ನಾ ಸುಧಾನ್ನ “ಡಿ.ಡಿ” ಅಂದ್ರೇನು ಅಂತ ಕೇಳಿದೆ ಅದಕ್ಕ ಆಕಿ ” ದಿಬರದಿಂಡಿ” ಅಂತ ಅರ್ಥ ಅಂದ್ಲು. ಪಾಪ ಬೈಸ್ಕೊಂಡ ಆ ಹುಡುಗಿ ಅಲ್ಲೆ ಸಣ್ಣ ಮಾರಿ ಮಾಡಕೊಂಡ ನಿಂತಿತ್ತು. ಪಾಪ ಅನಿಸಿ,  ಆಕಿನ್ನ ಮಾತಾಡಸಬೇಕಂತ “ನಿನ್ನ ಹೆಸರೇನು? ಎನ ಕಲತಿ” ಅಂತ ಕೇಳಿದೆ. ಅದಕ್ಕ ಅಲ್ಲೆ ನಿಂತಿದ್ದ ಸುಧಾನ ತಮ್ಮಾ “ ಅಕ್ಕಾ ಒಂಬತ್ತನೇತ್ತಾ ತನಕಾ ಝಾಂಗಟಿ ಬಾರಿಸ್ಕೊತ ಬಂದ್ಲು. ಹತ್ತನೇತ್ತಾದಿಂದ O.A-O.A ಶುರು ಆತು ಅಂದಾ. ಅದು ಅರ್ಥ ಆಗಲಾರದ ಸುಧಾನ್ನ ಮಾರಿ ನೋಡಿದೆ. ಅದಕ್ಕ ಆಕಿ “ ಝಾಂಗಟಿ ಬಾರಸೊದು ಅಂದ್ರ ಪಾಸಾಗೊದು ಅಂತ ಮತ್ತ O.A ಅಂದ್ರ ಫೇಲ್ ಆಗಿ October chance-April chance ಕೂಡೊದು ಅಂತ ಅರ್ಥ” ಅಂದ್ಲು. ಅಡ್ಡಿಯಿಲ್ಲಾ ಬಿಡವಾ “ನಿಮ್ಮನ್ಯಾಗ ಎಲ್ಲಾರು shortcut ನ್ಯಾಗ ಮಾತಾಡಿ Energy , time save ಮಾಡ್ಕೊತಿರಿ” ಅಂದೆ

ಮಧ್ಯಾಹ್ನ ಹಂಗ ಅಡ್ಡ್ಯಾಡಕೊತ ಸುಧಾನ ದೊಡ್ಡಪ್ಪನ ಜೊಡಿ ಅವರ ಹೊಲಾ, ತ್ವಾಟಾ ಎಲ್ಲಾ ನೋಡಲಿಕ್ಕೆ ಹೋಗಿದ್ವಿ. ಅಲ್ಲೆ ಕೆಲಸಾ ಮಾಡೊವರಲ್ಲೆ  ಎನೊ ಗದ್ದಲಾ ನಡದಿತ್ತು. ಅತ್ಲಾ ಕಡಿಂದನ ಸುಧಾನ ಅಣ್ಣ ಬರಲಿಕತ್ತಿದ್ದಾ. ಎನಾಗೆದ ಅಂತ ಅಂವನ್ನ ಕೇಳಿದ್ರ “ ಎನಿಲ್ಲಾ ಕೆಲಸಾ ಮಾಡೊವರಲ್ಲೆ ಒಬ್ಬಾಂವಗ ಸಣ್ಣದೊಂದ ಚೇಳ ಕಡದದ ಅದಕ್ಕ ‘HK-BK’ ಶುರುವಾಗೇದ ಅಂದಾ. ನಾ ಮತ್ತ ಸುಧಾನ ಮಾರಿ ನೋಡಿದೆ. ಆಕಿ ಮತ್ತ ನಕ್ಕೊತ ಶಾರ್ಟಕಟ್ ಗೆ ಅರ್ಥ ಹೇಳಿದ್ಲು ‘HK-BK’ ಅಂದ್ರ ‘ಹೊಯ್ಕೊ-ಬಡ್ಕೊ’ ಅಂತ.

ಮರದಿನಾ ಮುಂಝಾನೆ ಎದ್ದು ಚಹಾ ಕುಡಕೊತ ಕುತಾಗ ಸುಧಾನ ದೊಡ್ಡಮ್ಮಗ, ದೊಡ್ಡಪ್ಪ ಎಲ್ಲೆ ಹೊಗ್ಯಾರ ಕಾಣಸವಲ್ಲರಲ್ಲಾ ಅಂದೆ ಅದಕ್ಕ ಅವರು” ಬೀಗರನ ಕಳಿಸಿ ಬರಲಿಕ್ಕೆ ಹೋಗ್ಯಾರ” ಅಂದ್ರು. ಜಾತ್ರಿಗೆ ಯಾರ್ಯಾರೊ ಊರಿಂದ ಬಂದಿದ್ರು ಅದಕ್ಕ ಇರಬಹುದು ಬಿಡು ಅನ್ಕೊಂಡೆ. ಅಷ್ಟರಾಗ ಸುಧಾನ ತಮ್ಮ ಬಂದು “ ದೊಡ್ಡಮ್ಮ ನಾ ಬೀಗರನ ಕಳಿಸಿ ಹಂಗ ಹೇರ ಕಟ್ ಮಾಡಿಸ್ಕೊಂಡ ಬರತೇನಿ, ನಂಗ ಲಗೂ ಚಹಾ ಕೊಡು, ಬಿಸಿ ಚಹಾ ಕುಡಿಲಿಲ್ಲಾಂದ್ರ ಬೀಗರ ಬರೂದೆಯಿಲ್ಲಾ ” ಅಂದಾ. ಇದನ್ನ ನೋಡಿ ನಂಗ ವಿಚಿತ್ರ ಆತು. ಯಾಕಂದ್ರ ನಿನ್ನೆಯಿಂದ ನಾ ಇಲ್ಲೆ ಇದ್ದೇನಿ. ಯಾರು ಇದ್ದಿಲ್ಲಾ. ರಾತ್ರೊನರಾತ್ರಿ ಇಷ್ಟೊಕೊಂಡ ಮಂದಿ ಬೀಗರ ಎಲ್ಲಿಂದ ಬಂದ್ರು , ಮತ್ತ ಈ ಚಹಾ ಕುಡಿಯುದಕ್ಕ, ಬೀಗರ ಬರೊದಕ್ಕ ಎನ ಸಂಬಂಧ ಅಂತ ತಿಳಿವಲ್ತಾಗಿತ್ತು. ಅಂಗಳದಾಗ ಸುಧಾನ ಅಣ್ಣ, ಮನಿ ಆಳ ಮನಶ್ಯಾಗ “ ನಾಯಿನ್ನ ಬಿಚ್ಚಿ ಬಿಡ್ರಿ, ಬೀಗರನ ಕಳಿಸಿ ಬರಲಿ ” ಅಂದಾ. ಇದನ್ನ ಕೇಳಿ ಅಂತು “ ಈ ನಾಯಿಗೆ ಎಲ್ಲಿಂದ ಬೀಗರ ಹುಟಗೊಂಡ್ರಪ್ಪಾ ನನ್ನ ತಲ್ಯಾಗ ಸಣ್ಣಾಗಿ ಗುಂಗಿ ಹುಳಾ ಗೂಂಯ್ ಅನ್ನಲಿಕತ್ವು”.

ಅವರೆಲ್ಲಾ ಮಾತಾಡೊದ ಅರ್ಥ ಆಗಲಾರದ ವಿಚಾರ ಮಾಡಕೊತ ಕೂತಾಕಿಗೆ ಸುಧಾನ ದೊಡ್ಡಮ್ಮ ತಮ್ಮ ಎರಡ ವರ್ಷದ ಮಮ್ಮೊಗಗ “ ಅಲೆಲೆ ಸೊನ್ಯಾ, ಎದ್ದಿ ? ಬೀಗರನ ಕಳಿಸಿ ಬಂದಿ? ದುದ್ದು(ಹಾಲು) ಕೊಡತೇನಿ ಬಾ ಗುಂಡ್ಯಾ”. ಅಂತ ಆಡಸಲಿಕತ್ತಿದ್ದನ್ನ ಕೇಳಿ ಹೊಗ್ಗೊ ಇವರ ಈ ಸಣ್ಣ ಕೂಸ ಯಾವ ಬೀಗರನ ಕಳಿಸಿ ಬಂತಪ್ಪಾ. ಎಲ್ಲಾರು ಹೋಲ್ ಸೇಲ್ ನ್ಯಾಗ ಬೀಗರನ ಕಳಿಸಿ ಬರಲಿಕತ್ತಾರ ಈ ಹಕಿಕತ್ತ ಏನರೆ ಅದ ಅಂತ ವಿಚಾರ  ಮಾಡೊದ್ರಾಗ ಸುಧಾನ ದೊಡ್ಡಪ್ಪ ಬಂದು ಉಶ್ಯಪ್ಪಾ ಅಂತ ಕೂತು ಅಲ್ಲೆ ಇದ್ದ ತಮ್ಮ ಹೆಂಡ್ತಿಗೆ “ ಯಾಕೊ ಎರಡದಿನದಿಂದ ಸಮಾತ್ನ್ಯಾಗಿ ಬೀಗರ ಬರವಲ್ಲಾಗ್ಯಾರ ಎನ ಮಾಡೊದು “ ಅಂತ ಅಂದ್ರು. ಅದಕ್ಕ ಅಲ್ಲೆ ಇದ್ದ ಅವರ ದೊಡ್ಡ ಮಮ್ಮೊಗ “ ಅಜ್ಜಾ ಅದಕ್ಯಾಕ ಚಿಂತಿ ಮಾಡ್ತಿರಿ “ ಜುದಾ ಹೋಕೆ ಭಿ ತು ಮುಝಮೇ ಕಹಿಂ ಬಾಕಿ ಹೈ” ಅಂತರ ಇಲ್ಲಾಂದ್ರ “ ಬಾ ಬಾರೊ ಬಾರೊ ರಣಧಿರಾ..ಬಾ ಎಂದರೆ ಬಂದಿಳಿಯುವ ಶೂರಾ,.. ನೀ ಬಂದರೆ ದಿಗ್ವೀಜಯದ ಹಾರಾ..” ಅಂತ ಹಾಡ್ರಿ ಅಂದ್ರ ಬರತಾರ ” ಅಂದು ಜೋರ ನಗಲಿಕತ್ತಾ. ಆಂವಾ ಅಂದ ಮಾತಿಗೆ ದೊಡ್ಡಪ್ಪ ಮದ್ಲ ಮಾಡಿ ಎಲ್ಲಾರು ಬಿದ್ದ ಬಿದ್ದ ನಗಲಿಕತ್ರು.

ನನಗಂತು ಈ ಬೀಗರ ಸುದ್ದಿ ಕೇಳಿ ಕೇಳಿ ತಲಿ ಕೆಡಲಿಕತ್ತಿತ್ತು. ಅಷ್ಟರಾಗ ಬಂದ ನನ್ನ ಗೆಳತಿನ್ನ ಬಾಜುಕ್ಕ ಕರಕೊಂಡ ಹೋಗಿ “ ಲೇ ಸುಧಿ, ನಿಮ್ಮನ್ಯಾಗ ಎಲ್ಲಾರು ಹೊಲ್ ಸೇಲ್ ನ್ಯಾಗ ಬೀಗರನ ಕಳಿಸಿ ಬರಲಿಕತ್ತಾರಲ್ಲಾ ಎನ ಹಕಿಕತ್ತದ. ರಾತ್ರೊನರಾತ್ರಿ  ಈ ಬೀಗರೆಲ್ಲಾರು ಎಲ್ಲಿಂದ ಹುಟಗೊಂಡ್ರು “ಅಂತ ಕೇಳಿದೆ. ಅದಕ್ಕ ಆಕಿ ಜೋರಾಗಿ ಬಿದ್ದ ಬಿದ್ದ ನಕ್ಕೊತ “ ಲೇ ನಮ್ಮ ಮನ್ಯಾಗೆಲ್ಲಾರು ‘Toilet’ ಕ್ಕ ಹೋಗೊದಕ್ಕ ‘ ಬೀಗರನ ಕಳಿಸಿ ಬರೊದು’ ಅಂತಾರ ಅಂತ ಹೇಳಿದ್ಲು. ಇವರೆಲ್ಲಾರದು ಬೀಗರನ ಕಳಿಸಿ ಬರೊ ಸಂಭ್ರಮ ಕೇಳಿ ನಗೊ ಪಾಳಿ ನಂದಾಗಿತ್ತು.

ನೀರೊಲಿಗೆ ಹಾಕಲಿಕ್ಕೆ ಹೋದ ಸುಧಾನ ವೈನಿ “ ಸುಟ್ಟಬರಲಿ ಚಂಪಿ ಒಲ್ಯಾಗ ಬೀಗರನ ಕಳಿಸಿ ಹೊಗ್ಯಾಳ “ ಅಂತ ಸಾಕಿದ್ದ ಬೆಕ್ಕಿಗೆ ಬಯ್ಕೋತ ಬಂದ್ರು. ಅದಕ್ಕ ನಾ “ ಲೇ ಸುಧಿ ನಿಮ್ಮನ್ಯಾಗ ಸಣ್ಣ ಕೂಸಗೊಳಿಂದ ಹಿಡದು ಬೆಕ್ಕು ನಾಯಿಗೊಳೊಗೆಲ್ಲಾ ಬೀಗರ ಇದ್ದಾರ ಬಿಡ ಅನ್ನೊದ್ರಾಗ, ಸುಧಾನ ಅಣ್ಣನ ಮಗಳು ಬಂದು “ ಎಲ್ಲಾರು ಬೀಗರನ ಕಳಿಸಿ ಬಂದಿದ್ರ ಮತ್ತೊಂದ ರೌಂಡ ಚಹಾ ಶೆಡ್ಡಲಿಕ್ಕೆ ಬರಬೇಕಂತ ” ಅಂತ ಒದರಿಹೋದ್ಲು.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
Rukmini Nagannavar
10 years ago

bahala chendaagi baradiddeeri sumanakka.. 😀
naavu namma kadi toilet ge hogalikke beegarana kalisi barudu antevi…
nanna halline nenapagutte nimma lekha oduvagella
tumba hidisutte akka nimma lekhanagalu…

Suman Desai
Suman Desai
10 years ago

Thank u appi……

ಭೀಮಪ್ಪ ಬಂದಿಕೇರಿ

ನೋಡ್ರಿ ಸುಮನಾ ಅವ್ರೇ, ನಾವು ನಮ್ಮ  ಚೆಡ್ಡ್ಶಿ ದೋಸ್ತರು ಸೇರಿ, ಟಾಯ್ಲೆಟ್ ಗೆ ಹೊಗೊದಕ್ಕ ಅರ್ಜೆಂಟೈನಾಗೆ ಹೊಗೋದು ಮತ್ತ ಒಂದಾಕ್ಕ ಹೋಗೊದಕ್ಕ ಚಿಲಿಗೆ ಹೊಗೋದು ಅಂತಾ ಕರಿತಿದ್ವಿ. ಆದ್ರೂನು ನೀವು ಬರೆಯೋ ಲೇಖನ   BC ಆಗಿರುತ್ತೆ ನೋಡ್ರಿ.

prashasti
10 years ago

🙂 🙂 🙂

Utham Danihalli
10 years ago

Chenagidhe akka estavaythu lekana

ಸುಮನ್
ಸುಮನ್
10 years ago

Thank uuuuu……..

shreevallabha
shreevallabha
10 years ago

so nice suman !! LOL ,,,, nagu bantu !!!! hahahaha

7
0
Would love your thoughts, please comment.x
()
x