ತಾಯಿಯ ಮನಸ್ಸು: ಲಿಂಗರಾಜು

           ಅಂದು ಸೋಮವಾರ, ನಾನು ಒಬ್ಬ ಮುಖ್ಯ ವ್ಯಕ್ತಿಯೊಬ್ಬರನ್ನು ಬೇಟಿ ಮಾಡಲು ಬೆಂಗಳೂರಿನ ಗಾಂದಿನಗರದ ಕಡೆ ಹೋಗಬೇಕಾಗಿತ್ತು..ಬೆಳಿಗ್ಗೆ 10 ಗಂಟೆಯ ಸಮಯ, ಕೆಂಪೇಗೌಡ ಬಸ್ ನಿಲ್ಧಾಣದಲ್ಲಿ ಬಸ್ಸಿನಿಂದ ಇಳಿದು ನಿಂತೆ.  ಸುತ್ತಲೂ ನೋಡಿ ಒಮ್ಮೆ ಬೆರಗಾದೆ ಎತ್ತ ನೋಡಿದರೂ ಜನರ ಗಜಿಬಿಜಿ. ಒಂದು ರಸ್ತೆಯಿಂದ ಮತ್ತೂಂದು ರಸ್ತೆಗೂ ದಾಟಲು ಅಸಾದ್ಯವಾದ ವಾಹನಗಳ ಸಾಲು. 

        ಮನಸ್ಸಿನಲ್ಲಿ ಏನೋ ಗೊಂದಲ, ಒಂದು ಕಡೆ ಸುಮ್ಮನೆ ನಿಂತುಬಿಟ್ಟೆ. ತಕ್ಷಣ ಒಂದು ಫೋನ್ ಕರೆ ಬಂತು. ಮಾತನಾಡಿದರೆ, ನಾನು ಬೇಟಿ ಮಾಡಲು ಹೊರಟ ವ್ಯಕ್ತಿಯದೇ ಆಗಿತ್ತು. ಅವರು ಮುಖ್ಯ ಕೆಲಸದ ಮೇಲೆ ಮುಂಬಯಿಗೆ ಹೋಗುತಿದ್ದೇನೆ ಬರುವುದು 3 – 4 ದಿನಗಳಾಗುತ್ತದೆ ಅಲ್ಲಿಂದ ಬಂದ ಮೇಲೆ ಸಿಗೋಣ ಎಂದರು. ಮನಸ್ಸಿನಲ್ಲೇ ಗೊಣಗುತ್ತಾ ಸರಿ ಎಂದು ಫೋನ್ ಕಟ್ ಮಾಡಿದೆ.

         ಬಂದ ದಾರಿಗೆ ಸುಂಖವಿಲ್ಲ  ಎಂಬಂತೆ ಅಲ್ಲಿಯೇ ಇದ್ದ ಕಲ್ಲಿನ ಮೇಲೆ ಕುಳಿತೆ. ಹಾಗೆ ಸುಮ್ಮನೆ ಸುತ್ತಲೂ ನೋಡುತ್ತಿರುವಾಗ ನನಗೊಂದು ಅಚ್ಚರಿ ಎದುರಾಯಿತು. ನಾನು ಕುಳಿತಿರುವ ಕಡೆಯಿಂದ ಸುಮಾರು 25 ವಯಸ್ಸಿನ ಮಹಿಳೆ  ತನ್ನ ಎಳೆ ಕಂದಮ್ಮನನ್ನು ಕಂಕುಳಲ್ಲಿ  ಎತ್ತಿಕೊಂಡು ರಸ್ತೆ ದಾಟಲು ಹೋಗುತ್ಥಿದ್ಧಾಳೆ. ಆದರೆ ಬಸ್ಸೊಂದು ಅವಳ ಕಡೆ ವೇಗವಾಗಿ ಬರುತ್ತಿರುವುದು ಅವಳ ಗಮನಕ್ಕೆ ಬಂದಿರಲಿಲ್ಲ. ಆ ಬಸ್ಸು ತುಂಬಾ ಸಮೀಪ ಬಂದಂತೆ ನಾನು ಗಾಬರಿಯಿಂದ ಆ ಮಹಿಳೆಯನ್ನು ಕೂಗಿದೆ. ಆದರೆ ಅಲ್ಲಿನ ಜನರ ಮತ್ತು ವಾಹನಗಳ ಶಬ್ದದಿಂದ ಆಕೆಗೆ ನನ್ನ ಕೂಗು ಕೇಳಿಸಲಿಲ್ಲ. ಬಸ್ಸು ನಿಂತುಕೊಂಡಿತಾದರೂ ಬಂದ ವೇಗಕ್ಕೆ ಮಹಿಳೆ ಆಯ ತಪ್ಪಿ ಕೆಳಗೆ ಬಿದ್ದಳು.

       ಸುತ್ತಲೂ ಜನ ಸಮೂಹ ಸೇರಿತು ಆದರೆ ಯಾರೂ ಕೂಡ ಅವಳ ಸಹಾಯಕ್ಕೆ ಬರಲಿಲ್ಲ. ಅವರವರ ಕೆಲಸವೇ ಹೆಚ್ಚು ಎಂಬಂತೆ ಎಲ್ಲರೂ ಹೊರಟು ಹೋದರು. ಒಮ್ಮೆ ಆ ಮಹಿಳೆಯನ್ನು ನೋಡಿದ ತಕ್ಷಣ ನನ್ನ ಕಣ್ಣು ತುಂಬಿದವು. ಏಕೆಂದರೆ ಆಕೆ ಕುರುಡಿಯಾಗಿದ್ದಳು ಮತ್ತು ಆ ಮಗು ಸುಮಾರು 10 ತಿಂಗಳಿನ ಕಂದಮ್ಮ ಅಳುತ್ತಿತ್ತು ಆಕೆಯ ಮೊಣಕೈಯಿಂದ ರಕ್ತ ಸೋರುತ್ತಿತ್ತು. ಕೂಡಲೆ ಅವಳನ್ನು ಕರೆತಂದು ಪಕ್ಕದಲ್ಲೇ ಇದ್ದ ಕಲ್ಲಿನ ಮೇಲೆ ಕೂರಿಸಿದೆ. ಅವಳ ಕೈಯಿಂದ ಸೋರುತ್ತಿದ್ದ ರಕ್ತ ನೋಡಿ ನನ್ನ ಕರವಸ್ತ್ರದಿಂದ ಕಟ್ಟಿದೆ. ಆಕೆ ಅಳುತ್ತಾ ತುಂಬಾ ದನ್ಯವಾದ ಅಣ್ಣ ಎಂದಳು.

          ಸ್ವಲ್ಪ ಸಮಯದ ನಂತರ  ಇಂತ ಪರಿಸ್ತಿತಿಯಲ್ಲಿ ಈ ರೀತಿ ಒಬ್ಬಳೇ ಎಲ್ಲಿಗೆ ಹೋಗ್ತಾಯಿದಿಯ? ಅಂತ ಆಕೆಯನ್ನು ಕೇಳಿದೆ.

             ಅಳುತ್ತಾ ಆ ಮಗುವಿನ ತಲೆಯಮೇಲೆ ಕೈ ಆಡಿಸಿಕೊಂಡು ಮತ್ತಷ್ಟು ಬಿಕ್ಕಿ ಬಿಕ್ಕಿ ಅಳಲಾರಂಬಿಸಿದಳು.  ಏನಾಯಿತು ಹೇಳಮ್ಮ  ಎಂದೆ.

        ಅಣ್ಣ…..  ನನ್ನ ಹೆಸರು ದಿವ್ಯ ಹಾಸನದವಳು. ನಾವು ಬಡವರು ನನಗೆ ಕಣ್ಣು ಕಾಣುವುದಿಲ್ಲ, ಅದರಿಂದ ಯಾರೂ ನನ್ನನ್ನ ಕೂಲಿ ಮಾಡೋಕೆ ಕರೆಯೊಲ್ಲ. ನನ್ನ ಗಂಡ ಕೂಲಿ ಮಾಡಿ ಬಂದ ಹಣದಿಂದ ಸಂಸಾರ ಸಾಗುತ್ತಿದ್ದೇವೆ. ನನಗೆ ಈ ಹೆಣ್ಣು ಮಗು ಹುಟ್ಟಿದ 6 ತಿಂಗಳಿಗೆ ಜ್ವರ ಜಾಸ್ತಿ ಆಯ್ತು. ಆಸ್ಪತ್ರೆಗೆ ಹೋದಾಗ ಡಾಕ್ಟರ್ ಮಗುವಿಗೆ ಬ್ಲಡ್ ಕ್ಯಾನ್ಸರ್ ಇದೆ ಆಪರೇಷನ್ ಮಾಡಿಸಿಲ್ಲಾ ಅಂದ್ರೆ ಮಗು ಬದುಕೋದಿಲ್ಲ ಅಂದ್ರು. ಆದರೆ ನನಗೆ ಮದುವೆ ಆದ 7 ವರುಷ ಆದ ಮೇಲೆ ಈ ಮಗು ಹುಟ್ಟಿದೆ. ಈ ಮಗುಗೆ ಆಪರೇಷನ್ ಮಾಡಿಸೋಣ ಆಂದ್ರೆ ನನ್ನ ಗಂಡ ಒಪ್ಪಲಿಲ್ಲ. ಮತ್ತೆ ಈಗ ಜ್ವರ ಬಂದಿದೆ. ಡಾಕ್ಟರ್ ಮತ್ತೆ ಅದನ್ನೇ ಹೇಳಿ ಮೊದಲು ಬೆಂಗಳೂರಿಗೆ ಹೋಗಿ ಆಪರೇಷನ್ ಮಾಡಿಸಿ ಅಂತ ಹೇಳಿ ಆಡ್ರಸ್ ಬರೆದು ಕೊಟ್ಟರು. 

         ಆದರೆ ನನ್ನ ಗಂಡನಿಗೆ ಈ ಮಗು ಇಷ್ಟಯಿಲ್ಲ. ಎಸ್ಟೇ ಬೇಡಿಕೊಂಡರೂ ಕೂಡ ನನ್ನ ಗಂಡ ಒಪ್ಪಲಿಲ್ಲ. ರಾತ್ರಿಯಿಂದ ತುಂಬ ಜ್ವರ ಬಂದು ಹಾಲನ್ನೂ ಕುಡಿಲಿಲ್ಲ. ಅದಕ್ಕೆ ಮುಂಜಾನೆ 5 ಗಂಟೆಗೆ ಎದ್ದು ಅಲ್ಪ ಸ್ವಲ್ಪ ಕೂಡಿಟ್ಟಿದ್ದ 25 ಸಾವಿರ ಕಾಸು ತಗೂಂಡು ಬಂದು ಬಿಟ್ಟೆ ಅಣ್ಣಾ ಎಂದು ಅಳುತ್ತಾ ಈಗ ಆಸ್ಪತ್ರೆಗೆ ಹೋಗಬೇಕು ಅಂತ ಹೇಳಿ ಆಡ್ರಸ್ ಬರೆದಿದ್ದ ಚೀಟಿ ಕೊಟ್ಟಳು. ಆಸ್ಪತ್ರೆಗೆ ಹೋಗೋಣ ಬಾ ಎಂದಾಗ ಆಕೆ ಪರವಾಗಿಲ್ಲ ಅಣ್ಣ, ನನಗೆ ಒಂದು ಸಹಾಯ ಮಾಡ್ತೀರ ಎಂದಳು, ಏನದು  ಅಂದ ಕೂಡಲೆ ಆಕೆ  “ಅಣ್ಣ ನನ್ನನ್ನ ಆಸ್ಪತ್ರೆ ಅತ್ರ ಕರ್ಕೊಂಡ್ ಹೋಗಿ ಅಣ್ಣ ಅಂದಳು”

         ಕುರುಡಿಯಾದರೂ ತನ್ನ ಮಗುವಿನ ಮೇಲಿನ ಪ್ರೀತಿ ನೋಡಿ, ಮನಸ್ಸಿನಲ್ಲೇ ದೇವರಿಗೆ ಬೈದುಕೊಂಡು ಸರಿ ನಿನ್ನ ಗಂಡನ ಪೋನ್ ನಂಬರ್ ಇದ್ದರೆ ಕೊಡು ಎಂದೆ. ಇಲ್ಲ ಅಣ್ಣ , ಅವರು ಕೆಲಸಕ್ಕೆ ಹೋಗೋ ಯಜಮಾನರ ನಂಬರ್ ಇದೆ ಎಂದು ಕೊಟ್ಟಳು. ಅವನ ಜೊತೆ ಮಾತನಾಡಿ ತಕ್ಷಣ ಬೆಂಗಳೂರಿಗೆ ಬರಲು ಹೇಳಿದೆ. 

       ಆಸ್ಪತ್ರೆಗೆ ಹೋಗೋಣ ಬಾ ಎಂದು ಅಲ್ಲಿಂದ ಹೊರಡಲು ಮೇಲೆದ್ದೆ, ಪಕ್ಕದಲ್ಲೇ ಒಂದು ಹೋಟೆಲ್ ಕಾಣಿಸಿತು. ಆಕೆಗೆ ಇಡ್ಲಿ ತಂದು ಕೊಟ್ಟು ತಿಂದ ನಂತರ ಆಟೋ ಅತ್ತಿ ಆಸ್ಪತ್ರೆ ತಲುಪಿದೆವು. 

       ಡಾಕ್ಟರ್ ನಾಳೆಯೇ ಆಪರೇಷನ್ ಮಾಡುವುದಾಗಿ ತಿಳಿಸಿ ಹಾಗೂ ಮಗುವಿನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಆಕೆಗೆ ಧೈರ್ಯ ಹೇಳಿದರು ಮತ್ತು ಮಗುವಿಗೆ ಟ್ರೀಟ್ಮೆಂಟ್ ಸುರು ಮಾಡಿದರು. ಖುದ್ದಾಗಿ ಡಾಕ್ಟರ್ರನ್ನ ಬೇಟಿ ಮಾಡಿ ಆಕೆಯ ಪರಿಸ್ತಿತಿಯನ್ನು ವಿವರಿಸಿ ಕಡಿಮೆ ಹಣ ತೆಗೆದುಕೊಳ್ಳುವಂತೆ ಕೇಳಿಕೊಂಡೆ, ಅವರು ಕೆಲವು ಕ್ಷಣ ಮೌನಿಯಾಗಿ, ಒಕೆ ಸರ್ ಇದರ ಬೆಲೆ ಸುಮಾರು 1 ಲಕ್ಷ ಆಗುತ್ತೆ, ಆದರೆ ಇವರಿಗೆ ಉಚಿತವಾಗಿ ಮಾಡುತ್ತೇನೆ ಎಂದರು. ದೇವರು ನಿಮ್ಮ ರೂಪದಲ್ಲಿ ಆಕೆ ಪಾಲಿಗೆ ಬಂದಿದಾನೆ ಅಂತ ಹೇಳಿ ಖಷಿ ಪಡುತ್ತಾ ಹೊರ ಬಂದೆ.

      ಆಕೆಯ ಗಂಡ ಅಷ್ಟರಲ್ಲಿ ಬಂದ. ನಾನು ಹೊರಡುತ್ತೇನೆ ಎನ್ನುತಿದ್ದಂತೆ ಆಕೆಯು ಅಳುತ್ತಾ ನಿಮ್ಮ  ರುಣನಾ ಈ ಜನ್ಮದಲ್ಲಿ ಮರೆಯೊಲ್ಲ ಎನ್ನುತ್ತಾ ನನಗೆ ಹಣ ಕೊಡಲು ಬಂದಳು. ಪರವಾಗಿಲ್ಲ ನೀನು ಅಣ್ಣ ಅಂತ ಕರೆದಲ್ಲ ಅಷ್ಟು ಸಾಕು ಎಂದೇಳಿ ಅಲ್ಲಿಂದ ಹೊರಟೆ.

 

 

 

 

 

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
10 years ago

ಲಿಂಗರಾಜು ಅಣ್ಣಾವ್ರೇ….ಮಾನವೀಯತೆ ದೊಡ್ಡದು ! ತಾಯಿ ಹೃದಯ ವಿಶಾಲ !! ಮನಮೀಡಿಯುವ ಅನುಭವ ಕಥನ !!! ದೇವರು ನಿಮಗೆ ಚೆನ್ನಾಗಿಟ್ಟಿರಲಿ

gaviswamy
10 years ago

ಲೇಖನ ತುಂಬಾ ಹಿಡಿಸಿತು .
ಮಾನವೀಯತೆಯ ಬೆಳಕು ಸಾಂಕ್ರಾಮಿಕವಾಗಲಿ.

chaithra.n
chaithra.n
10 years ago

ಮಾನವೀಯತೆ ದೊಡ್ಡದು ! ತಾಯಿ ಹೃದಯ ವಿಶಾಲ !! ಮನಮೀಡಿಯುವ ಅನುಭವ ಕಥನ !!! ದೇವರು ನಿಮಗೆ ಚೆನ್ನಾಗಿಟ್ಟಿರಲಿ

sharada moleyar
sharada moleyar
10 years ago

ಮಾನವೀಯತೆ ದೊಡ್ಡದು !
ಲೇಖನ ತುಂಬಾ ಹಿಡಿಸಿತು .

4
0
Would love your thoughts, please comment.x
()
x