Facebook

ಒಂದು ಕದ್ದಾಲಿಕೆ: ಹರಿಪ್ರಸಾದ್

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನಗೆ ನಾಲಿಗೆ ಬಗ್ಗೆ ಒಲವು ಇಲ್ಲದಿದ್ದರೂ ಕಿವಿಯ ಬಗ್ಗೆ ಅಪಾರ ಪ್ರೀತಿ. ಈ ಕಿವಿಗಳಾದರೋ ಎಲ್ಲೇ ಹೋದರೂ ಸುಮ್ಮನಿರುವುದಿಲ್ಲ. ಏನಾದರೂ ಕೇಳಿಸಿಕೊಳ್ಳುತ್ತಲೇ ಇರುತ್ತವೆ. ಕೇಳಿಸಿಕೊಂಡು ಅವು ಸುಮ್ಮನಿರುವುದಿಲ್ಲ. ನನ್ನನ್ನು ವಿನಾಕಾರಣ ಪೀಡಿಸುತ್ತಿರುತ್ತವೆ. ಒಂದಿನ ಟೀ ಅಂಗಡೀಲಿ ಯಾರೋ ಮಾತಾಡಿದ್ದು ಕೇಳಿಸಿಕೊಂಡು ಬಂದಿದ್ದವು. ರಾತ್ರಿ ನಿದ್ದೆ ಮಾಡಲು ಬಿಡದೆ ಪೀಡಿಸಿದವು. ಆ ಪೀಡನೆಯೇ ಸಾರಾಂಶವೇ ಈ ಬರಹ.

ಅವನು ಏನೋ ಮದುವೆ ಆಕ್ಕುಲ್ವ?

ಇವನು ಆಯ್ತಿನಿ

ಅವನು ಅಂಗಾರೆ ಉಡ್ಗಿ ನೋಡ್ಕಂಡಿದೀಯ, ಯಾವ ಕ್ಯಾಷ್ಟು

ಇವನು ನಿಂಗೆ ನನ್ ಮದುವೆ ಮುಖ್ಯಾನೋ, ಉಡ್ಗಿ ಯಾವ ಕ್ಯಾಷ್ಟು ಅನ್ನೋದು ಮುಖ್ಯಾನೋ

ಅವನು ಅಂಗಲಾ ಕಣ್ಳಾ, ಸ್ನೇಯಿತ ಅಂತಾವ ಅಷ್ಟೂ ಕೇಳಬಾರದೇನ್ಲಾ

ಇವನು ಕೇಳು. ಆದರೆ ಕ್ಯಾಷ್ಟು ಗೀಷ್ಟು ಯಾಕೆ

ಅವನು ನಿನ್ನಂಥ ಅಡ್‍ಕಸುಬಿ ಮದುವೆ ಆಯ್ತನೆ ಅಂದ್ರೆ ಕ್ಯಾಷ್ಟು ಇಂಪಾರÀಟೆಂಟೆಯ. ಯಾರೇಳ್ಳ, ಎಂಗವ್ಳೆ

ಇವನು ನನ್ ಕಣ್ಣಿಗೇನೋ ಚೆÉನ್ನಾಗವಳಪ್ಪಾ, ಬ್ಯಾರೇರಿಗೆ ಎಂಗೋ ಗೊತ್ತಿಲ್ಲ

ಅವನು ಅದು ಆಡ ಮಾತೇನ್ಲ. ಒಂದು ಎಣ್ಣಿನ ಲಕ್ಷಣ ಎಂಗೆ ಅಂತ ಹೇಳಕಾಕುಲುವೆ

ಇವನು ಹೇಳಿದ್ನಲ್ಲೋ. ಚೆನ್ನಾಗಿ ಕಾಣ್ತಾಳೆ ಅಂತ

ಅವನು ಯಾವೂರಲ ಅವುಳು

ಇವನು ಗುಂಡ್ಲುಪೇಟೆ

ಅವನು ಅಂಗಾರೆ ಲಿಂಗಾತ್ರು ಅನ್ನು

ಇವನು ಅದೆಂಗಪ್ಪಾ

ಅವನು ಅಲ್ಲಿರೋರೆಲ್ಲ ಲಿಂಗಾತ್ರು ಅಲುವೇನ್ಲ

ಇವನು ಅಲ್ಲ ಕಣಲೇ ಗುಗ್ಗು

ಅವನು ಮತ್ತೆ ಯಾವ ಜಾತೀಲಾ ಅವ್ಳು

ಇವನು ….

ಅವನು ನೀನು ಸುಮ್ಕಿರದು ನೋಡಿದ್ರೆ ನಂಗ್ಯಾಕೋ ಡವ್‍ಟು, ಅಟ್ಟಿಯೋರೇನ್ಲ

ಇವನು ಊ. ಅಟ್ಟಿಜನವೇ ಅಂದ್ಕೋ

ಅವನು ಸುಳ್ಳು ಹೇಳಬ್ಯಾಡ. ನಿಜವಾಗ್ಲು. ಸರ್ಯಾಗೆ ಏಳ್ಲಾ?

ಇವನು ಅಂಗೇ ಅಂದ್ಕೋ

ಅವನು ಯವ್ವೆ. ಏನ್ ಮಾಡಿಕ್ಯಂಡವಳೆ ಉಡ್ಗಿ

ಇವನು ಎಂಎ ಮಾಡವಳೆ

ಅವನು ಅಪಾಯಿಂಟ್ ಆಗೈತಾ

ಇವನು ಇಲ್ಲ. ಅದಿಕ್ಕೇಯ ಹುಡಿಕಂಡು ಹೋಗವಳೆ

ಅವನು ಅಪಾಯಿಂಟಲ್ಲಿ ಇಲ್ದೋಳನ್ನ ಮದ್ವಿಯಾಗಿ ಏನ್ ಮಾಡ್ತೀಲ

ಇವನು ಎಲ್ಲಾ ಏನ್ ಮಾಡ್ತಾರೋ ಅದೇಯ

ಅವನು ಥೂ. ಅಲ್ಕ ನನಮಗ ನೀನು. ಓಗ್ಲಿ ಜೀವ್ನ ಎಂಗೆ ಮಾಡ್ತೀಲಾ. ಈಗಲ್ಯವುಳೆ

ಇವನು ಮಂಗಳೂರಿಗೆ ಹೋಗ್ಯವಳೆ

ಅವನು ಅವರಪ್ಪಾರದೂ ಏನ್ ಕೆಲಸ

ಇವನು ತಾಲ್ಲೂಕ್ ಆಫೀಸಿನಲ್ಲಿದ್ರು. ಈಗ ರಿಟೈರ್ ಆಗಿ ಊರಲ್ಲಿ ಜಮೀನ್ ಮಾಡಿಕೊಂಡವರೆ

ಅವನು ಜಮೀನ್ ಎಷ್ಟೈತಿ. ಸೈಟೂ ಇಟ್ಟವರ ಎಂಗೆ. ಅವುರ್ ಮನೇಲಿ ಗೊತ್ತಾ

ಇವನು ಅವರಣ್ಣಂಗೆ ಮಾತ್ರ ಗೊತ್ತು

ಅವನು ಸತ್ಯ ಹೇಳ್ತೀದೀಯೇನ್ಲ. ಆಣೆ ಮಡಗಿ ಮಾತಾಡ್ಲಾ

ಇವನು ಬರೇ ನಿನ್ನಾಣೆ ಯಾಕೆ. ಊರೋರ ಮೇಲೆ ಆಣೆ ಹಾಕನ

ಅವನು ನಾನು ನಿಮ್ಮಣ್ಣಾರಿಗೆ ಹೇಳನ

ಇವನು ನಿನ್ನ ಕೈಲಿ ಆಗಲ್ಲ ಸುಮ್ಕಿರು. ಬೇಕಾದ್ರೆ ನಮ್ಮಂಪ್ಪಗೆ ಹೇಳೋಕೆ ಸಾಧ್ಯ ಆಗಬಹುದು. ಟ್ರೈ ಮಾಡು….

ಅವನು ಯಪ್ಪಾ. ಎಂಗಂತೀಲ. ನಿಮ್ಮಪ್ಪ ದೇವ್ರಿದ್ದಂಗೆ. ಅವ್ರಿಗೆ ನಾನು ಅದೆಂಗೆ ಬಾಯಿಬಿಟ್ಟು ಹೇಳದು

ಇವನು ಮತ್ತೆ ಸುಮ್ಕಿರು. ನನ್ ವಿಶ್ಯ ನಾನು ಮಾತಾಡ್ಕತೀನಿ

ಅವನು ನಾನು ಸ್ನೇಹಿತ ಅಲುವುಲ

ಇವನು ಅದ್ಕೆ ಸುಮ್ನಿರು ಅಂದಿದ್ದು

ಅವನು ಅಂಗಾರೆ ನಾನ್ ಸ್ನೇಹಿತ ಅಲುವುಲ

ಇವನು ಅದಿಕ್ಕೇನೀಗ

ಅವನು ನಿಂಗೆ ಓದಿದೀನಿ ಅಂತ ದುರಂಕಾರ ಕಣ್ಳ, ಅಣ್ಣ ತಂಬ್ರು ಏಳಿಕಳಕ್ಕೆ ಆಗುದ್ದ ಪ್ರೆಂಡ್ಸ್ ಹೇಳಬೈದು ಗೊತ್ತಾ

ಇವನು ……………

ಅವನು ಓಗ್ಲಿ ನಿಮ್ ಅವ್ವಂಗೆ ಎಂಗೆ ಯೇಳ್ತೀಯ. ಅವ್ರಿಗೆ ನೋವಾಕ್ಕುಲವೆ

ಇವನು ಆಯ್ತದೆ

ಅವನು ಅದೆಲ್ಲ ಗೊತ್ತಿದ್ದೂ ಅದೆಂಗ್ಲ ನೀನು ಲವ್ ಮಾಡ್ದೆ

ಇವನು ನೀನು ದುಂಪ್ಟೆ ಪಾಪಣ್ಣನ ಹುಡ್ಗಿ ಜೊತೆ ಚುಂಚನಗಿರಿ ಬೆಟ್ಟಕ್ಕೆ ಹೋಗಿ ಬಂದ್ಯಲ್ಲ. ಆಗ ನಿಮ್ಮವ್ವ ನೆನಪಾಗಲಿಲ್ವೆ

ನಾನು ನಾನೇನು ಮಾಡಿದ್ನೋ ಲೋಪರ್. ಆ ವಯಸಲ್ಲಿ ನಂಗೆ ಸರಿ ಕಂಡಿದ್ದು ಮಾಡಿದ್ನಪ್ಪಾ. ಈಗ ಅದ್ನೇನು ಎತ್ತಾಡದು ನೀನು.ಓಗ್ಲಿ. ಅವ್ಳು ಹೆಸರೇನ್ಲ

ಇವನು ಲಕ್ಷ್ಮಿ

ಅವನು ಅಲೆಲೆ ಲಕ್ಷ್ಮಿ, ಎಸ್ರೇನೋ ಚೆನ್ನಾಗೈತೆ. ಆದ್ರೆ ಅಟ್ಟಿಯೋರಲ್ಲ ಅನಸುತ್ತೆ

ಇವನು ನಿನ್ ನಂಬಿಸೋಕೆ ನಾನೇನು ಮಾಡನ

ಅವನು ಓಗ್ಲಿ ಎಂಗ್ ಲವ್ ಮಾಡ್ದೆ

ಇವನು ಇಲ್ಲೆ ನಮ್ ಆಫೀಸಿಗೆ ಬತ್ತಿದ್ಲು. ಅಂಗೆ ಶುರುವಾಯ್ತು

ಅವನು ಎಸ್ಟೊರ್ಷದಿಂದ

ಇವನು ಲವ್ ಮಾಡಿದ್ದು ಎರಡು ವರ್ಷದಿಂದ. ನೋಡಿದ್ದು ಐದು ವರ್ಷ

ಅವನು ಅದೆಂಗೆ ಶುರುವಾಯ್ತು

ಇವನು ಅದೆಲ್ಲ ಹೆಂಗೆ ಹೇಳಕ್ಕಾಗುತ್ತಲೇ

ಅವನು ಯಾರೇಳಿರು ಪಸ್ಟ್

ಇವನು ಅವಳೇಯ

ಅವನು ಏಳಿದೇಟ್ಗಿಯ ಆತ್ಕಂಬುಟ್ಟೆ ಅನ್ನು

ಇವನು ಊ ಮತ್ತೆ

ಅವನು ಕಿಸ್ ಗಿಸ್ ಕೊಟ್ಟಿದೀಯಾ. ಕೊಟ್ಟಿರ್ತೀಯ ಕಣೇಳು. ನೀನಂಥ ಅಲ್ಕಾ ನನ್ಮಗನೇಯ

ಇವನು ಲೇ ಏನಂದ್ಕೊಂಡಿದೀಲ ನನ್ನ

ಅವನು ಸುಮ್ಕರಲೇ ಕಂಡಿದೀನಿ. ಆಗ್ಲೆ ತಲೇಲಿ ನೆರೆ ಒಡಿತೈತೆ. ಅದೆಂಗೆ ತಡ್ಕಂಡಿರ್ತೀಯ

ಇವನು ಏನ್ ಹುಡ್ಗಿ ಪಕ್ಕದಲಿ ಇದ್ರೆ ಕಚ್ಕೊಳೋದೆ ಕೆಲ್ಸವೇನಲೆ. ಈಗ ನೀನು ಮದುವ್ಯಾಗಿ ಇಷ್ಟು ವರ್ಷ ಆಯ್ತಲ್ಲ. ನೀನೇನ್ ಮಾಡ್ತೀಲಾ

ಅವನು ಏನ್ಮಾಡ್ತಿನ. ದಿನಾ ರುಬ್ಬಾಕುಲ್ವೆ

ಇವನು ನೀನ್ ಮನುಷ್ನೇ ಅಲ್ಲ ಬಿಡು

ಅವನು ನಿನ್ ಕೈಲಿ ಆಗಾಕುಲ್ಲ ಅನ್ನು. ಎಲ್ಲೋ ಆಟ ಆಕ್ಯಂಡಿರಬೇಕು..

ಇವನು ನೋಡಲೆ ನಮಗೂ ಎಲ್ಲಾ ಆಸೇನೂ ಇದೆ. ಆದ್ರೆ…

ಅವನು ಓಗ್ಲಿ. ತಂಬ್ಕಂಡಿಲ್ವ

ಇವನು ಅದ್ಯಾಕಿಲ್ಲ

ಅವನು ನಂಗೊತ್ತಿಲ್ವ ನಿನ್ ಬುದ್ದಿ. ಅದು ಬಿಡು. ನಿಂಗೆ ಈ ಸಮಾಜ ಎದುರಿಸಕ್ಕಾದ್ದೆ

ಇವನು ಗೊತ್ತಿಲ್ಲ. ಟ್ರೈ ಮಾಡಬೇಕು

ಅವನು ದಿನಾ ಬೇಟೆ ಆಯ್ತಿರಾ

ಇವನು ಇಲ್ಲ. ವಾರಕ್ಕೊಂದು ದಿನ, ಎರಡು ದಿನ

ಅವನು ಎಲ್ಲಾಯ್ತಿರಿ

ಇವನು ನಮ್ ಆಫೀಸಲ್ಲಿ. ಅಲ್ಲಿ-ಇಲ್ಲಿ

ಅವನು ಯಾರೂ ಏನನ್ನುಕುಲ್ವೆ

ಇವನು ಯಾರು ಏನಂತಾರೆ.

ಅವನು ಇವೆಲ್ಲ ಟವನ್‍ನಲ್ಲಿ ಸರಿ. ನಮ್ ಹಳ್ಳೀಲಿ ಎಲ್ಲಾಯ್ತದೆ. ಓಗ್ಲಿ, ಯಾಕ್ ಲವ್ ಮಾಡ್ದೆ

ಇವನು ………..

ಅವನು ಏಳಲೇ ಲೋಪರ್ರು

ಇವನು ಯಾವನಿಗೆ ಗೊತ್ತು

ಅವನು ಇವೆಲ್ಲಾ ಆಡಬ್ಯಾಡ. ನಾನ್ ನಿನ್ ಸ್ನೇಹಿತ ಅಲುವುಲ

ಇವನು ಒಂದಿನ ನಮ್ ಆಫೀಸಲ್ಲಿ ಬಂದು ಕೂತಿದ್ಲು. ಸುಮ್ನೆ ಕೈ ಹಿಡ್ಕಂಡೆ. ಮಾರನೇ ದಿನ ಬಂದು ನಿನ್ನ ಲವ್ ಮಾಡ್ತೀನಿ ಅಂದ್ಲು.

ಅವನು ಆಗ ನೀನೇನಂದೆ

ಇವನು ಇನ್ನೊಂದ್ಲಿಲಿ ಕೈಹಿಡ್ಕಂಡೆ

ಅವನು ಈಗೆಲ್ಲವುಳೆ ಅವಳು

ಇವನು ಹೇಳಿದ್ನಲ್ಲೋ. ಮಂಗಳೂರಿಗೆ ಹೋಗವಳೆ ಅಂತಾ

ಅವನು ಬಂದೇಟ್ಗೆಯ ಮೊಬೈಲ್‍ಗೆ ಫೋನ್ ಮಾಡ್ಸು. ನಾನು ಲಕ್ಷ್ಮಿ ದನಿ ಕೇಳಬೇಕು

ಇವನು ಯಾಕೆ

ಅವನು ಅವ್ಳು ನಮಗೆ ಅತ್ಗೆ ಇದ್ದಂಗೆ ಅಲುವುಲ

ಇವನು ಅದೆಂಗೆ

ಅವನು ನಾನು, ನಿನ್ ಸ್ನೇಹಿತ ಅಲುವುಲ

ಇವನು ಮತ್ತೆ ಅವಳೆಂಗೆ ನಿನಗೆ ಅತ್ಗೆ ಆದಾಳು

ಅವನು ಮತ್ತಿನ್ನೇನ್ಲಾ

ಇವನು ಸ್ನೇಹಿತನ ಎಂಡತಿ ಸಾಧ್ಯವಾದ್ರೆ ಸ್ನೇಹಿತೆ ಆಗಬಹುದು. ಇಲ್ಲದಿದ್ರೆ ಪರಿಚಿತರು ಅಂತಯ್ತಾರೆ ಕಣಲೇ

ಅವನು ಓದಿ ಸಿಟಿ ಸೇರ್ಕಂಡ್ರೆ ಇಂಗೇಯ ಆಗದು. ನಾವೇನೋ ಅಳ್ಳಿಜನ ಒಳ್ಳೆ ಭಾವನೆ ಇಟ್ಕಂಡು ಅತ್ಗೆ ಅಂದ್ರೆ, ಸ್ನೇಹಿತನ ಎಂಡ್ತಿ ಸ್ನೇಹಿತೆ ಆಯ್ತಳಂತೆ. ಏನ್ ಮಾತೂಂತ ಆಡ್ತೀಲಾ. ನಿಮೌನ್ ಜಾತಿನಾ…

 

ಇಲಿಮನೆ

7-9-2007


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

11 Responses to “ಒಂದು ಕದ್ದಾಲಿಕೆ: ಹರಿಪ್ರಸಾದ್”

 1. ಹಿಪ್ಪರಗಿ ಸಿದ್ದರಾಮ್ says:

  ಚೆಂದಾಗೈತೆ….ಭಾಷಾ ಸೊಗಡು ಸಿರಿಗಂಧ ತೀಡಿದಂತಿದೆ…..

 2. Jayakeerthi says:

   
  ಹರಿ ಸರ್  ಚೆ೦ದಾಗೈತೆ….
  ಇನ್ನ ಏನೇನ್ ಕೇಳ್ಸ್ಕೊತದೊ..
  ನಿಮ್ ಕಿವಿ.

 3. Mahantesh.Y says:

  Bhashe mattu barah Channagide……………………

 4. ಕಿರಣ says:

  ಬೋ ಪಸಂದಾದೆ ಸಾರ್! 🙂

 5. mohan handrangi says:

  sir channagidhe…….

 6. chaithra.n says:

  chennagide:) nammalli mareyaaguttiro sambandagala kalpaneya prathirupavagide nimma lekhana:)

 7. Venkatesh says:

  Pasandaagade !

 8. hariprasad says:

  thank u all

 9. gaviswamy says:

  ಫಿನಿಶಿಂಗ್ ಪಂಚ್ ಮಸ್ತಾಗಿದೆ!

 10. chaluvaraj says:

  channagide channagide….:)

 11. Upendra says:

  ತುಂಬಾ ಚೆನ್ನಾಗಿದೆ. ಅವನು ಇವನು ಓದಿಸಿಕೊಂಡು, ಓಡಿಸಿಕೊಂಡು ಹೋದ್ರು 🙂

Leave a Reply