Facebook

ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಮಾಲಿನಿ ಭಟ್ ರವರ ಚುಟುಕಗಳು

ಕನ್ನಡದ ಬರಹಗಳನ್ನು ಹಂಚಿ ಹರಡಿ

 

೧.)   ಹುಚ್ಚುಮನಸು

ಕಂಡೂ ಕಾಣದ ಮನದ ಚಿತ್ತದಲ್ಲಿ

ಸುಪ್ತವಾಗಿ ಕದಡಿ ನಿಂತಿದೆ,

ಯಾರು ಕೇಳದಂತಹ ಕಲ್ಪನೆ

ರೂಪ ನೀಡಲಾಗದೆ ಅವಿತಿದೆ.

 

೨.)ಸ್ವಾರ್ಥ

ಜೀವನದ ಪ್ರತಿಕ್ಶಣನು ಬಯಸುತ್ತೇವೆ

ನಮಗಾಗಿ ಒಂದು ಜೀವ ಇರಬೇಕು

ಆದರೆ ಯಾವ ಸಮಯವು ಯೋಚಿಸುವುದಿಲ್ಲ

ಬೇರೆಯವರಿಗಾಗಿ ನಾವು ಇರಬೇಕು

 

೩) ಬದುಕಲ್ಲಿ ದುಃಖವೋ ಸುಖವೋ

ಏನುಂಟು ಏನಿಲ್ಲ

ಹೇಳಲಾಗದ ಚಿತ್ರಿಸಲಾಗದ

ಒಗಟನ್ನು ಬಿಡಿಸುವ ಪರಿ ಏನು?

 

೪) ಕಣ್ಣು ಕಾಣದಾದಾಗ ಎಷ್ಟು ವೈಭವ ಇದ್ದರೇನು

ಮನಸು ಸೋತಾಗ ಯಾರು ನಮಗೆ

ಹೃದಯ ಬರಿದಾದಾಗ ಎಲ್ಲಿಯ ಸಂಬಂಧ

ಎಲ್ಲ ಮರೆತು ಬಿಡುವುದು ಅಷ್ಟು ಸುಲಭವೇ?

 

೫)ಭಾವನೆಗಳ ಕರಿನೆರಳಲ್ಲಿ ತೇಲಿಬಂದ

ಅಸ್ಪಷ್ಟ ಚಿತ್ರಣ ನನ್ನ ನೆರಳು

ವಿಚಿತ್ರವೋ ನಿಗೂಢವೋ

ಅರಿಯೇ ಸತ್ಯದರ್ಶನ

 

೬)ಮನಸಲ್ಲಿ ನೋವಿಲ್ಲದಿರಲು ಅಸಾಧ್ಯ

ನೋವೆ ಬದುಕಾದರೆ ಬರೀ ಗೋಳು

ನೋವು ಸಮರಸದಿ ಇರಲು

ಬಾಳು ಮರೆಯದ ಮಾಣಿಕ್ಯವಾಗುವುದು.

 

೭)ಮಣ್ಣಿನ ಮಕ್ಕಳ ವೇದನೆ

ಕಾಣದು ಆಳುವ ರಾಜಗೆ

ಬೆವರಿನ ನೋವು ತನಗೆ

ನೀಡುವ ಬೆಳಕ ಲೋಕಕೆ

 

೮)ಮನೆಯ ಮೂಲೆ ಎಲ್ಲಿದೆ

ಕನಸ ಕನ್ನಡಿ ತುದಿಯಲಿ

ಬದುಕ ಕನಸು ಬಳಿಯಲಿ

ನಿಲುಕದ ಸಂಭ್ರಮ ದೂರದಲಿ.

 

೯)

ಮಣ್ಣಿನ ಹಣತೆ ಹೆಣ್ಣಿನ ಬಾಳು

ದೀಪವಾಗ ಬಂದಳು ಇವಳು

ತನ್ನ ಹೃದಯ ನೀಡಿ ಎಣ್ಣೆ ಹಾಕಿ ಎಂದಳು

ತುಚ್ಛವಾಗಿ ಕುಲುಕಿ ಬಿಡಲು ಹಣತೆ ಒಡೆಯಿತು.

 

೧೦)ಮನಸ ಇಚ್ಛೆ ದಾಟಿ ಬಂದು

ದೀನನಾಗಿ ಕುಳಿತು ಇಂದು

ಲೋಕದೆಡೆಗೆ ನೋಡೋ ನಯನ

ತಪ್ಪಿನರಿಕೆ ಕಂಡಿತೆ ನಿನ್ನಾತ್ಮಕೆ

 

೧೧)ಕಣ್ಣಿನ ಪರದೆಯಲಿ ಒಮ್ಮೆ ನೋಡು

ಅಡಗಿದೆ ನಿನ್ನದೇ ಪ್ರತಿಬಿಂಬವು

ಸಾವಿಲ್ಲದ ನಯನದಲಿ

ನೀನುಳಿಯಬೇಕು ಶಾಶ್ವತವಾಗಿ

 

೧೨)ಕಣ್ಣೀರು ತುಂಬಿ ತುಂಬಿ

ಹಾಸಿಗೆ ತಬ್ಬಿದಾಗಲೂ ಏನೋ ಸಂತಸ

ನನ್ನ ಜೊತೆ ನೀನಾದರೂ ಇದೆಯೆಂದು

ಈಗ ನಿನಗೂ ಬೇಸರ ಬಂದು ಮರೆತೇಯಾ?

 

೧೩)ಆಗಸದ ತುಂಬಾ ಹರಡಿರೋ ನಕ್ಶತ್ರ

ನೀ ಬಿಡಿಸಿದ ಚಿತ್ರಗಳು

ಇರುಳಿನ ಸೊಬಗನ್ನೇ ಹೆಚ್ಚಿಸಿದ

ನಿನ್ನ ಮಮಸಿನ ವಿಶಾಲತೆಗೆ ಧನ್ಯವಾದಗಳು.

 

೧೪)ಜಾರಿತು ಕಣ್ಣಹನಿ ನನಗರಿಯದಂತೆ

ನಾ ತಿಳಿಯೇ ನಿನಗೆ ಎಂದೆಯೆಲ್ಲಾ

ಇದು ಸತ್ಯವೇ ? ಇಷ್ಟೊಂದು ಮೋಸ

ನಿನಗೆ ನೀ ಮಾಡಿಕೊಳ್ಳದಿರು.

 

೧೫)ಮೈ ಕೊಳೆಯ ತೊಳೆಯೊ ನಾವುಗಳು

ಮನಸು ಕೊಳೆಗೆ ಸಿಲುಕಿ ರಾಡಿಯಾಗಿದೆ

ತಪ್ಪೆಂದು ಮಾಡೋ ತಪ್ಪುಗಳು

ಮೌಲ್ಯವಿಲ್ಲದ ಉಪದೇಶದಂತೆ

 

೧೬) ಗರ್ಭದಿ ನೆಲೆಸಿದ ಕಾಣದ ದೇವರು

ತೃಪ್ತಿಯ ನಗೆಯ ಮೋಹದ ಲಹರಿ

ಸಾತ್ವಿಕಭಾವ ಸಂಸ್ಕೃತಿ ಉಳಿವಿಗೆ

ಚಿತ್ರಣಗೊಂಡಿದೆ ವಿಧವಿಧದಲ್ಲಿ

 

೧೭)ನಿನ್ನಲ್ಲಿ ಇರುವುದು ಒಂದು ತಪ್ಪು

ನನ್ನಲ್ಲೇ ಇರುವುದು ಹಲವು ತಪ್ಪು

ತಿದ್ದಿಕೊಳ್ಳುವ ಗುಣ ಎಲ್ಲರಲೂ ಇರಲು

ವಿಶ್ವವೇ ನಲಿಯುವುದು ಹಕ್ಕಿಯಾಗಿ

 

೧೮) ಸುತ್ತಲೂ ಹೂಗಳಿಂದ ತುಂಬಿದ ಗಿಡವೇ

ನಿನ್ನ ನೋಡಿ ಜಗವೇ ಬೆರಗಾಗಿದೆ

ಕಾಯಿ ಹಣ್ಣಿಗೆಲ್ಲ ನೀ ಮೂಲ

ನಿನ್ನ ನೋಡಿ ಕಲಿಯೋದು ತುಂಬಾ ಉಳಿದಿದೆ

 

೧೯)ಬೀಸೋ ಗಾಳಿಗೇಕೋ ಬೇಸರ

ನಿನ್ನ ಮನಸು ಕದಡುವುದೆಂಬ ಚಿಂತೆಯು

ಎಲ್ಲವನ್ನು ಮನಸಿನಲ್ಲೇ ಹುದುಗಿಸಿ

ಕೊನೆಯಲ್ಲಿ ನೋವು ಉಳಿವುದೆಂಬ ದುಗುಡವು.

 

೨೦)ಮನಸಿನ ಕನಸಲ್ಲಿ ಪ್ರೀತಿಯ ಬೆಳೆಸಿ

ಕೊನೆಯುಸಿರು ಇರುವ ತನಕ ಉಳಿಸಿ

ಎಂದೆಂದೂ ಚಿರವಾಗಿ ಬೆಳಕನ್ನ ನೀಡು

ಅದುವೇ ಆಶಯ ನಮ್ಮದು.

 

೨೧)ವಿಶ್ವಾಸವಿಲ್ಲದವರು ಅಂಜುವರು

ಆತ್ಮವಿಶ್ವಾಸವಿದ್ದವರು ಗೆಲ್ಲುವರು

ಎಲ್ಲರಲೂ ಅವಿತಿರುವ ಬೆಳಕಿಗೆ

ಜ್ನಾನದ ಸಾಕ್ಶಾತ್ಕಾರ ನೀಡು.

 

೨೨)ನಗುವ  ಹೂವು ಸೆಳೆದಿದೆ

ಸಾವಿರ ಮನಸ ಕ್ಶಣದಲಿ

ತ್ಯಾಗದಿಂದ ಪಡೆದಿದೆ

ಆತ್ಮಸಂತೃಪ್ತಿಯ

 

೨೩)ಹಸಿರು ಹಾಸಿಗೆಯ ಆ ವನ್ಯರಾಶಿಯ

ಮೌನದಿ ಕಾದಿದೆ

ಮಂದ ಬೆಳಕಾಗಿಯಾದರೂ ಬಾ

ನೀರಡಿಕೆಯ ದಾಹ ನೀಗಲು

ಓ ಮೇಘರಾಜನೇ

 

೨೪)ಹೂವು ಅರಳಿದೆ

ಗಂಧ ಬೀರಿದೆ

ಕಾದು ಕುಳಿತಿದೆ

ಹೊಸವರುಷಕೆ

 

೨೫)

ಬಿಸಿಲು ಸುಡುತಿದೆ

ಸುತ್ತು ನೆರೆದ ಮೋಡ ಮಾಯವಾಗಿದೆ

ನಿರೀಕ್ಶೆ ಒಂದೇ ಆಸರೆ

ಹನಿ ನೀರ ಆಗಮನಕೆ

 

೨೬) ದಾರಿ ಕಾದಿದೆ

ಕನಸ ಬೆಳಕಿಗೆ

ಜೀವರಸವು ಸಾಗಿದೆ

ಆತ್ಮಹೊಳಪಿಗೆ ನಿರಂತರ

 

೨೭)ಮಾತು ಮೌನವಾಗೋ ಮೊದಲು

ಕನಸು ತೆರೆಯೋ ಒಳಗೆ

ತನುವು ಶವವು ಆಗೋ ಮೊದಲು

ಜೀವ ನಿನ್ನ ಮರೆಯೋ ಒಳ್ಗೆ

ನಿತ್ಯ ನಿರಂತರ ಈ ಸ್ನೇಹ

 

೨೮)ಸಾಗರದಾಚೆ ಕಿನಾರೆ ಮಗ್ಗುಲಲ್ಲಿ

ನನ್ನದೊಂದು ಪುಟ್ಟಗೂಡಿದೆ

ಗದ್ದಲದ ಬದುಕದೂಡಿ

ಶಾಂತವಾಗಿ ಬಂದು ನೋಡಿರಿ

ಇಲ್ಲಿಯೇ ಹೊಸದು ವಿಶ್ವ ಕಟ್ಟಿಕೊಳ್ಳೋಣ.

 

-ಮಾಲಿನಿ ವಿ.ಭಟ್ಟ


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

One Response to “ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಮಾಲಿನಿ ಭಟ್ ರವರ ಚುಟುಕಗಳು”

  1. Hipparagi Siddaram says:

    ಅನುಭವಗಳು ಅನಾವರಣಗೊಳ್ಳುವ ಅವಕಾಶ ಪಡೆದಿರುವ ವಿಚಾರಗಳ ಸುಂದರ ನಿರೂಪಣೆ ; ಧನ್ಯವಾದಗಳು…

Leave a Reply