ಗೆಳೆಯನಲ್ಲ (ಭಾಗ 4): ವರದೇಂದ್ರ ಕೆ.

ಇಲ್ಲಿಯವರೆಗೆ…

(7)

ಇತ್ತ ಕಮಲಮ್ಮ ಸಂಪತ್ಗೆ ಫೋನ್ ಮಾಡಿ ಪ್ರೀತಿ ತವರು ಮನೆಗೆ ಹೋದ ವಿಷಯ ತಿಳಿಸಿ, ಮನೆಗೆ ಬೇಗ ಬರಲು ಹೇಳುತ್ತಾಳೆ. ಸಂಜೆ ಆಯಿತು ಮಗ ಮನೆಗೆ ಬರುವ ಸಮಯ ಬದಲಾಗಿದೆ, ಫೋನ್ ಮಾಡಿದರೆ ಸ್ವೀಕರಿಸುವುದಿಲ್ಲ. ಸ್ವೀಕರಿಸಿದರೂ ಸರಿಯಾಗಿ ಮಾತನಾಡುವುದಿಲ್ಲ. ಯಾವಾಗಲೂ ಏನೋ ಚಿಂತೆಯಲ್ಲಿರುವಂತೆ ಕಾಣಿಸುತ್ತಾನೆ. ಮದುವೆಯಾಗಿ ಹೊಸತರಲ್ಲಿ ಹೇಗಿರಬೇಕು? ಸಂಪತ್ನ ವಿಚಾರಿಸಬೇಕು ಮನೆಗೆ ಬಂದ ಕೂಡಲೆ ಎಂದು ಕಮಲಮ್ಮ ಕಾದು ಕೂಡುತ್ತಾರೆ.

ತಡರಾತ್ರಿ ಮನೆಗೆ ಬಂದ ಸಂಪತ್ ಅನ್ನು ತಾಯಿ ವಿಚಾರಿಸುತ್ತಾಳೆ, “ಸಂಪತ್, ಪ್ರೀತಿ ಫೋನ್ ಮಾಡಿದ್ಲಾ? ತವರಿಗೆ ನಿನ್ನ ಜೊತೆ ಕರ್ಕೊಂಡು ಹೋಗು ಅಂದ್ರೆ, ನಾನು ಒಬ್ಬಳೇ ಹೋಗ್ತೀನಿ ಅಂತ ಹೋದ್ಲು. ಏನೋ, ನಿಮ್ ಮಧ್ಯ ಏನ್ ನಡೀತಿದೆ? ನಿಮ್ ಸಂಸಾರ ಸರಿ ಇದೆನಾ ಇಲ್ವಾ? ಮನೇಲಿ ಎಲ್ಲ ನಗ್ತಾ ನಗ್ತಾ ಇರ್ತಿದ್ಲು. ಕೆಲವು ದಿನಗಳಿಂದ ಒಂದು ಥರಾ ವರ್ತಿಸುತ್ತಿದ್ದಾಳೆ. ನಾಲ್ಕು ದಿನ ಎಲ್ಲಾದ್ರು ಹೋಗ್ಬನ್ನಿ ಇಬ್ರು ಅಂದೆ, ಅದಕ್ಕೆ ನಾನು ತವರುಮನೆಗೆ ಹೋಗಿ ಬರ್ತೀನಿ, ಅವರ್ಯಾಕೆ ಸುಮ್ನೆ ಎಂದು ಹೊರಟಳು, ನಾನೇನು ತಡಿಲಿಲ್ಲ ಹೋಗಮ್ಮ ಒಂದು ಕಾಲ್ ಮಾಡು ಸಂಪತ್ ಗೆ ಎಂದು ಹೇಳಿದೆ, ಹೇಳು ಕಾಲ್ ಮಾಡಿದ್ಲಾ ? ಏನಂದ್ಲು? ಏನಂದ್ಲೋ?”

ಸಂಪತ್ ಮಾತಾಡ್ತಿಲ್ಲ, ಮನಸಲ್ಲೇ ಬೇಯುತ್ತಿದ್ದಾನೆ.

“ಈಗ ಏನು ಕೇಳ್ಬೇಡಮ್ಮ ಪ್ಲೀಸ್, ನಾಳೆ ಬೆಳಿಗ್ಗೆ ಮಾತಾಡೋಣ” ಎಂದು ಹೇಳಿ ಕೋಣೆ ಸೇರಿದ. ಕಮಲಮ್ಮನವರಿಗೆ ನಿದ್ದೆ ಬರದೆ ಚಿಂತೆಯಲ್ಲಿ ಮುಳುಗಿದರು. ಬೇಗ ಬೆಳಗಾಗಲಿ ಮನಸು ಹಗುರವಾಗುವಂತೆ ಎಲ್ಲವನ್ನು ಹೇಳಿಕೊಳ್ಳಲಿ ಮಗ, ಅವನ ಸಂಸಾರಕ್ಕೆ ಯಾವುದೇ ತೊಂದರೆ ಆಗದಿರಲಿ ದೇವರೆ… ಎಂದುಕೊಂಡು ಮಲಗಿದರು.

ಮರುದಿನ ಸೂರ್ಯೋದಯಕ್ಕೆ ಸರಿಯಾಗಿ ಯಾರೋ ಬಾಗಿಲು ತಟ್ಟಿದರು. ಕಮಲಮ್ಮ ಅದೇ ತಾನೆ ಕಸ ಗುಡಿಸಿ, ರಂಗೋಲಿ ಹಾಕಿ ಬಾಗಿಲು ಮುಂದೆ ಮಾಡಿ, ಒಳಗೆ ಹೋಗಿರುತ್ತಾರೆ.


ಬೆಳ್ಳಂಬೆಳಿಗ್ಗೆ ಸಂತೋಷ್ ಪ್ರೀತಿಯ ಮನೆಯನ್ನು ಪತ್ತೆ ಹಚ್ಚಿಕೊಂಡು ಬಂದಿದ್ದ.

ಸಂತೋಷ್ಗೆ ನಿನ್ನೆ ಪ್ರೀತಿ ಇಲ್ಲಿಗೆ ಬಂದಿದಾಳೋ, ತವರಿಗೆ ಹೋಗಿದಾಳೋ ಅನುಮಾನ, ಇಲ್ಲೇ ಇದ್ದರೆ ಅವಳು ಹೇಗೆ ವರ್ತಿಸುತ್ತಾಳೋ ಏನೋ..? ಒಮ್ಮೆಗೆ ಜೋರಾಗಿ ನನ್ನ ಕುರಿತಾದ ಅಸಹನೆ ಹೊರಹಾಕಿದರೆ ಗತಿ ಏನು..! ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ? ಎಂದು ಯೋಚಿಸುತ್ತಿರುವಾಗ….
“ಯಾರೂ….?” ಎಂದು ಕಮಲಮ್ಮ ಬಾಗಿಲು ತೆಗೆಯುತ್ತಾರೆ.

ಸಂತೋಷ್ ನ ನೋಡಿದೊಡನೆಯೇ ಕಮಲಮ್ಮನವರು ಚಿಟಾರನೆ ಚೀರಿ ತಲೆ ಸುತ್ತು ಬಂದು ಬೀಳುತ್ತಾರೆ, ಕಮಲಮ್ಮ ಚೀರಿದ ಸದ್ದಿಗೆ ಗಾಬರಿಯಿಂದ ಸಂಪತ್ ಓಡಿ ಬರುತ್ತಾನೆ. ಸಂತೋಷ್ ಕಮಲಮ್ಮ ಬಿದ್ದದ್ದನ್ನು ಕಂಡು, ಗಾಬರಿಯಾಗುತ್ತಾನೆ. ಬೆವೆತು ಮುಖವನ್ನು ಸಪ್ಪೆ ಮಾಡಿಕೊಂಡು ನಿಲ್ಲುತ್ತಾನೆ. ಅವನು ಊಹೆನೂ ಮಾಡಿರುವುದಿಲ್ಲ. ತಾನು ಬಂದದ್ದು ಸರಿಯಾದ ವಿಳಾಸಕ್ಕೆ ಹೌದೋ? ಅಲ್ಲೋ? ಎಂಬ ಗೊಂದಲಕ್ಕೀಡಾಗಿ, ಈ ತಾಯಿ ಏಕೆ ನನ್ನ ನೋಡಿ ಗಾಬರಿಗೊಂಡಳು ಎಂದು ತಿಳಿಯದೆ, ಎರಡು ಹೆಜ್ಜೆ ಹಿಂದೆ ಸರಿದು ಮರಳಿ ಹೋಗಲು ಯತ್ನಿಸುತ್ತಾನೆ ಸಂತೋಷ್. ಅಷ್ಟರಲ್ಲಿ ಸಂಪತ್ ಭಯದಿಂದ ತಾಯಿಯ ಬಳಿ ಓಡಿ ಬರುತ್ತಾನೆ.

“ಅಮ್ಮಾ… ಅಮ್ಮಾ…. ಏನಾಯಿತು!? ಏನಾಯಿತು!? ಎಂದು ಬಾಗಿಲಿಂದಾಚೆ ಯಾರೋ
ಹೋಗುತ್ತಿರುವುದನ್ನು ಗಮನಿಸಿ, ನಿಲ್ಲಿ ಯಾರು
ನೀವು? ನಿಮ್ಮನ್ನು ನೋಡಿ ಏಕೆ ನಮ್ಮ ತಾಯಿ ಚೀರಿಕೊಂಡರು? ಯಾರು ನೀವು? ಯಾರು? ಎಂದು ಒಂದೇ ಸ್ವರದಲ್ಲಿ ಭಯದಿಂದ ಕೂಗಿ, ತಾಯಿಯನ್ನು ಕೂಡಿಸಿ; ನೀರು ಮುಖಕ್ಕೆ ಚಿಮುಕಿಸಿ ಎಚ್ಚರಗೊಳಿಸಲೆತ್ನಿಸುತ್ತಾನೆ.

ಅಮ್ಮಾ, ಏನಾಯಿತು? ಏಕೆ ಚೀರಿಕೊಂಡೆ?
ಎಂದು ಕೇಳಿ ಸಂತೈಸಬೇಕೆಂದರೆ, ಕಮಲಮ್ಮಗೆ ಎಚ್ಚರವಾಗುವಾಗುವುದೇ ಇಲ್ಲ. ತನ್ನ ಮನದ ನೋವನ್ನು ಮರೆತು, ತಾಯಿಯ ಬಗೆಗೆ ಅತೀವ ದುಃಖ ತಪ್ತನಾಗಿ ನಿಲ್ಲುತ್ತಾನೆ.

ಸಂತೋಷ್ ತಕ್ಷಣವೇ ಬಳಿ ಬಂದು, ಮೊದಲು ಆಸ್ಪತ್ರೆಗೆ ಹೋಗೋಣ ಎಂದು ತನ್ನ ಕಾರಲ್ಲಿಯೇ
ಕರೆದುಕೊಂಡುಹೋಗುತ್ತಾನೆ. ಆಸ್ಪತ್ರೆಗೆ ಸೇರಿಸಿ ನೀವು ಫ್ರೆಶ್ ಆಗಿ ಬನ್ನಿ ನಾನುಇಲ್ಲಿರುತ್ತೇನೆ, ಭಯ ಬೇಡ ಎಂದು ಸಂಪತ್ನನ್ನು ಕಳಿಸುತ್ತಾನೆ. ಸಂಪತ್ ಒಲ್ಲದ
ಮನಸಿಂದ, ಇವರಾರು ಎಂದು ವಿಚಾರಿಸದೆ ಫ್ರೆಶ್ ಆಗಲು ಹೋಗುತ್ತಾನೆ.

“ನಿಮ್ಮ ತಾಯಿಗೆ ಹೃದಯಾಘಾತವಾಗಿದೆ, ತಕ್ಷಣವೇ ಆಪರೇಶನ್ ಮಾಡಬೇಕು” ಎಂದು ವೈದ್ಯರು
ಸಂತೋಷ್ಗೆ ಹೇಳುತ್ತಾರೆ.

ಸಂತೋಷ್ “ಆಗಲಿ ಡಾಕ್ಟರ್ ಕೂಡಲೆ
ಆಪರೇಶನ್ಗೆ ತಯಾರಿ ಮಾಡ್ಕೋಳಿ” ಎಂದು
ಹೇಳುತ್ತಾನೆ.

“ದೆಟ್ಸ್ ಗುಡ್ ನಾವ್ ರೆಡಿ ಮಾಡ್ಕೋತೀವಿ”, ಎಂದು ಡಾಕ್ಟರ್ಹೇಳಿ ಒಳ ಸೇರುತ್ತಾರೆ. ಸಂತೋಷ್ ಮತ್ತೆ ಚಿಂತೆಯಲ್ಲಿಮುಳುಗುತ್ತಾನೆ. ಇವರ್ಯಾಕೆ ನನ್ನ
ನೋಡಿ ಗಾಬರಿಯಾಗಿಬಿದ್ದರು. ಹೃದಯಾಘಾತವಾಗುವ ಮಟ್ಟಕ್ಕೆ
ಗಾಬರಿಯಾಗುವುದೆಂದರೆ ಏನರ್ಥ!! ಎಂದು
ರೋಧಿಸುತ್ತಾನೆ…. ಇವರನ್ನು ನಾನು ನೋಡುತ್ತಿರುವುದು ಇದೇ ಮೊದಲಲ್ಲವೇ? ಎಂದು ಚಿಂತಿಗೀಡಾಗುತ್ತಾನೆ…..

(8)

ಇವರ್ಯಾಕೆ ನನ್ನ ನೋಡಿ ಗಾಬರಿಯಾಗಿಬಿದ್ದರು. ಹೃದಯಾಘಾತವಾಗುವ ಮಟ್ಟಕ್ಕೆ ಗಾಬರಿಯಾಗುವುದೆಂದರೆ ಏನರ್ಥ!! ಎಂದು ರೋಧಿಸುತ್ತಾನೆ.

ಸಂಪತ್ ಬಂದು “ಹೇಗಿದ್ದಾರೆ ನನ್ನ ತಾಯಿ? ಡಾಕ್ಟರ್ ಏನಾದ್ರು ಹೇಳಿದ್ರಾ?” ಎಂದು ಗಾಬರಿಯಿಂದ ಕೇಳುತ್ತಾನೆ.

ಡಾಕ್ಟರ್ ಹೇಳಿದ ವಿಷಯವನ್ನು ಸಂತೋಷ್ ಸಂಪತ್ಗೆ ತಿಳಿಸಿ, “ನಿಮ್ಮ ಅನುಮತಿ ಇಲ್ದೆ ಆಪರೇಶನ್ಗೆ ನಾನೇ ಒಪ್ಪಿಗೆಸೂಚಿಸಿದೆ. ಏನು ತೊಂದ್ರೆ ಇಲ್ಲ ತಾನೆ? ನಿಮಗೆ ಹಣದತೊಂದ್ರೆ ಇದ್ರೆ ನಾನೇ ಕೊಡ್ತೀನಿ”, ಎಂದು ಹೇಳಿದಾಗ, ಸಂಪತ್ ದುಃಖಭರಿತನಾಗಿ, “ಬಹಳ ಒಳ್ಳೆ ಕೆಲಸ ಮಾಡಿದ್ರಿ, ಸರ್ ನೀವುಯಾರು? ನಮ್ಮ ಮನೆಗೇಕೆ ಬಂದಿದ್ರಿ? ನಿಮ್ಮನ್ನ ನೋಡಿ ನನ್ನತಾಯಿ ಏಕೆ ಬಿದ್ದರು? ನಿಮ್ಮನ್ನು ಬೈಯಬೇಕೋ? ಅಥವಾ ನಮಗೆ ಸಹಾಯ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಬೇಕೋ!? ತಿಳಿಯದಾಗಿದೆ ಎನ್ನುತ್ತಾನೆ.

“ನಿಮ್ಮ ತಾಯಿ ನನ್ನ ನೋಡಿ ಏಕೆ ಬಿದ್ದರು ಎಂದು ನನಗೂತಿಳಿಯದು, ಅವರನ್ನೇ ಕೇಳಬೇಕು. ನಾನು ಬಂದ ವಿಷಯ ಏನಂದ್ರೇ…” ಎಂದು ತಡವರಿಸುತ್ತಾನೆ.

ಅಷ್ಟರಲ್ಲಿ ಸಂಪತ್ಗೆಕಾಲ್ ಬರುತ್ತದೆ. “ಒಂದು ನಿಮಿಷ ಮಾತಾಡಿ ಬರುತ್ತೇನೆ” ಎಂದು ಹೊರಹೋಗುತ್ತಾನೆ. ಸಂತೋಷ್ ಮುಖದಲ್ಲಿ ದುಗುಡತೆ ಹುಟ್ಟಿ, ಮನದಲ್ಲಿ ಎರೆಡೆರಡು ಭಯ ಅವನನ್ನು ಹಿಂಸಿಸುತ್ತವೆ.

ಸಂಪತ್ ಕಾಲ್ ರಿಸೀವ್ ಮಾಡ್ತಾನೆ, ಪ್ರೀತಿಯ ತಂದೆ “ಅಳಿಯಂದ್ರೆ ಕಂಗ್ರ್ಯಾಚುಲೇಶನ್ಸ್, ಅಂತೂ ನನ್ನನ್ನ ತಾತಮಾಡಿಬಿಟ್ರಿ ನೀವು. ನಮಗೆ ತುಂಬ ಸಂತೋಷವಾಗ್ತಿದೆ. ನೀವು ಬರಬೇಕಲ್ವ ಪ್ರೀತಿ ಜೊತೆಗೆ” ಎಂದು ಹೇಳಿದ ಕೂಡಲೇ ಸಂಪತ್ ಗೆ ಏನು
ಹೇಳಬೇಕೆಂದು ತೋಚದೆ, ಸ್ವಲ್ಪ ಪ್ರೀತಿಗೆ ಫೋನ್ ಕೊಡ್ತೀರಾ, ಎಂದಾಗ “ಆಯ್ತು ಆಯ್ತು ಕೊಡ್ತೀನಿ ಎಂದು ಪ್ರೀತಿ ತಗೋಮ, ಸಂಪತ್ ಮಾತಾಡ್ತಿದಾರೆ”, ಎಂದು ಅವಳ ಕೈಗೆ ಫೋನ್ ಕೊಡುತ್ತಾರೆ.

ಪ್ರೀತಿಯ ಕೈಗಳು ನಡುಗುತ್ತಿವೆ, ಮನಸು ಮಂಕಾಗಿದೆ, ಕಣ್ಣುಗಳು ತೇವವಾಗಿ ಹನಿಗಳು ಜಾರಬೇಕು, ತಡೆದುಕೊಂಡು ಹಲೋ ಎನ್ನುತ್ತಾಳೆ. ಸಂಪತ್ “ಪ್ರೀತಿ.. ಪ್ರೀತಿ.. ಎಂದು, ಅದು ಅಮ್ಮ…. ಅಮ್ಮ…. ಎಂದು ಅಳಲು ಪ್ರಾರಂಭಿಸುತ್ತಾನೆ. ರೀ ಏನಾಯ್ತು ಅತ್ತೆಯವರಿಗೆ? ಯಾಕೆ ಅಳ್ತಿದೀರಾ? ಈಗ ಎಲ್ಲಿದೀರಿ? ಎಂದು ತುಸು ನಡುಕದಿಂದ ಕೇಳುತ್ತಾಳೆ. ನಡೆದ ವಿಷಯವನ್ನೆಲ್ಲ ಹೇಳಿದಾಗ ಪ್ರೀತಿ ಗಾಬರಿಯಿಂದ ರೀ ಸಮಾಧಾನ ಮಾಡ್ಕೋಳಿ, ನಾವು ತಕ್ಷಣ ಬರುತ್ತೇವೆ” ಎಂದು ಫೋನಿಡುತ್ತಾಳೆ.

ಸಂಪತ್ ನೋವಿನಿಂದ ಪ್ರೀತಿ ಗರ್ಭಿಣಿಯೇ!!!??? ಅದುಹೇಗೆ ಸಾಧ್ಯ? ನಾನು… ಅವಳು…. !!! ಎಂದುಚಿಂತಾಕ್ರಾಂತನಾಗಿ ಮೈಮರೆತು ಕೂಡುತ್ತಾನೆ. ಅನುಮಾನ ಸತ್ಯವಾಗಿದ್ದಕ್ಕೆ ಮತ್ತಷ್ಟು ಖಿನ್ನನಾಗುತ್ತಾನೆ.

“ಹಲೋ ಆಪರೇಶನ್ ಸಕ್ಸಸ್ ಆಗಿದೆಯಂತೆ, ಸ್ವಲ್ಪಹೊತ್ತಿಗೆ ವಾರ್ಡ್ಗೆ ಶಿಫ್ಟ್ ಮಾಡ್ತಾರಂತೆ”
ಎನ್ನುವ ಸಂತೋಷ್ ನಧ್ವನಿಗೆ ಎಚ್ಚರವಾಗಿ,

“ತುಂಬಾ ಧನ್ಯವಾದ ನಿಮಗೆ ಸರಿಯಾದ ಸಮಯಕ್ಕೆ ನಮಗೆ ಸಹಾಯ ಮಾಡಿದ್ರಿ, ತುಂಬಾ ಉಪಕಾರವಾಯಿತು. ನಮ್ಮಿಂದ ನಿಮಗೆ ತೊಂದ್ರೆ ಆಯ್ತು. ಈಗ ನನ್ನ ಹೆಂಡತಿ, ಅತ್ತೆ, ಮಾವ ಅವರು ಬರ್ತಿದಾರೆ.. ನಿಮಗೆ ಕೆಲಸ ಇದ್ವೇನೋ? ಬೆಳಿಗ್ಗೆಯಿಂದ ಇಲ್ಲೇ ಇದ್ದೀರಿ, ನಾಷ್ಟ ಕೂಡಮಾಡಿಲ್ಲ ಬನ್ನಿ ಮೊದಲು ಏನಾದ್ರು ತಿನ್ನುವಿರಂತೆ, ಹಲೋಸರ್ ಏನು ಯೋಚನೆ ಮಾಡ್ತಿದೀರಿ? ಏಕೆ ಬೆವಿಯುತ್ತಿದ್ದೀರಿ ಇಷ್ಟು?” ಎಂದು ಮುಟ್ಟಿದೊಡನೆ….

ಮುಖ ಒರೆಸಿಕೊಂಡು ಸಂತೋಷ್ “ನಾನಿನ್ನು ಹೊರಡುತ್ತೇನೆ, ಮತ್ತೆ ಬರುತ್ತೇನೆ” ಎಂದು ಹೊರಡಲುಸಿದ್ಧವಾಗುತ್ತಾನೆ. ನಿಲ್ಲಿ ಸರ್ ನಾಷ್ಟ ಮಾಡ್ರಿ, ನೀವು ಯಾರೆಂದು ಹೇಳಲೇ ಇಲ್ವಲ್ರಿ!!

“ಅದು… ಅದು…. ನಾನೂ…” ಎನ್ನುವಷ್ಟರಲ್ಲಿ ಪ್ರೀತಿ, ಅವರಪ್ಪ ಅಮ್ಮ ಬರುತ್ತಾರೆ, ಕಂಡು ಸಂತೋಷ್ ಗದ್ಗದಿತನಾಗಿ ಬೆವರಿ ಹೋಗುತ್ತಾನೆ. ಸಂಪತ್ ಪ್ರೀತಿ ಮುಖ ನೋಡುತ್ತ, ಅವಳು ಗರ್ಭಿಣಿ ಹೇಗೆ ಸಾಧ್ಯ? ಹೇಗೆ ಎಂದು ಮನದಲ್ಲೇ ಅಳುತ್ತ, ಬನ್ನಿ ಎಂದು ಎಲ್ಲರನ್ನು ಕರೆಯುತ್ತಾನೆ. ಎಲ್ಲರೂಬಂದು ಹೇಗಾಯಿತು? ಹೇಗಾಯಿತು? ಎಂದು, ಈಗ ಹೇಗಿದಾರೆ? ಎಂದಾಗ

“ಆಪರೇಶನ್ ಆಗಿದೆ ಏನು ತೊಂದ್ರೆಇಲ್ಲ ಎಂದು ಡಾಕ್ಟರ್ ಹೇಳಿದಾರೆ”. ಬೆಳಿಗ್ಗೆ ಇವರು ನಮ್ಮಮನೆಗೆ ಬಂದಿದ್ರು, ಇವರನ್ನು ನೋಡಿ ಅಮ್ಮ ಗಾಬರಿಯಿಂದ ಚೀರಿ ಬಿದ್ದುಬಿಟ್ಟರು, ಆಗಲೇ ಹಾರ್ಟ್ ಅಟ್ಯಾಕ್ ಆಗಿದ್ದು. ಇವರನ್ನು ನೋಡಿ ಯಾಕೆ ಹೀಗಾಯಿತು ಎಂದು ಅಮ್ಮನೇ ಹೇಳಬೇಕಿದೆ. ಎಂದು ಸಂಪತ್ ಕಣ್ಣೀರಾಗುತ್ತಾನೆ.

“ಯಾರನ್ನುನೋಡಿರಿ? ಇಲ್ಲಿ ಯಾರೂ ಇಲ್ವಲ್ಲ ರಿ!” ಎಂದು ಪ್ರೀತಿ ಅಂದಾಗ,

“ಇವರೇ, ಇಲ್ಲೇ ಇದ್ರಲಾ ಎಲ್ಲಿ ಹೋದರು? ಎಂದು ಅತ್ತಿತ್ತಕಣ್ಣಾಡಿಸಿದರೂ ಎಲ್ಲೂ ಸಂತೋಷ್ ಕಾಣುವುದೇ ಇಲ್ಲ. ಅವರ ಹೆಸರು ವಿಳಾಸ ಏನೂ ಹೇಳಲೇ ಇಲ್ಲ. ಮತ್ತೆ ಬರ್ಬೋದು, ಅವರು ಬಹಳ ಸಹಾಯ ಮಾಡಿದ್ರು ನಂಗೆ, ಎಲ್ಲಿಹೋದರೋ?!! ಹೇಳಲೂ ಇಲ್ಲ. ಎಂದು ಆಶ್ಚರ್ಯದಿಂದ ನಿಲ್ಲುತ್ತಾನೆ.

“ರೀ, ನೀವು ಏನ್ ತಿಂದ್ರಿ ಮನೆಯಿಂದ ಉಪ್ಪಿಟ್ಟು ತಂದೀನಿ, ಮೊದಲು ತಿನ್ರಿ ಎಂದು ಪ್ರೀತಿ ಪ್ರೀತಿಯಿಂದ, ಅತ್ತೆಗೆ ಏನು ಆಗೊಲ್ಲ ಎಂದು ಸಂತೈಸಿ; ಧೈರ್ಯವಾಗಿರಿ” ಎಂದು ತಾನೇ ತಿನ್ನಿಸುತ್ತಾಳೆ. ತಕ್ಷಣ ಹೆಂಡತಿಯಲ್ಲಿ ತಾಯಿಯನ್ನು ಕಂಡ ಸಂಪತ್ ಪ್ರೀತಿಯ ಬಗೆಗೆ ಅಭಿಮಾನ ತಾಳುತ್ತಾನೆ.

ಬೆನ್ನಲ್ಲೆ ಮತ್ತೆ ಮನಸು ಹಿಂಡಿದಂತಾಗಿ, ಪ್ರೀತಿ ನೀನು ಗರ್ಭಿಣಿ…! ಎನ್ನುವುದರಲ್ಲಿ ಪ್ರೀತಿಯ ಮುಖಬಾಡಿದಂತಾಗುತ್ತದೆ. ಸಂಪತ್ ಪ್ರೀತಿಯ ಮುಖವನ್ನು ನೋಡಲಾಗದೆ ಸುಮ್ಮನಿರುತ್ತಾನೆ.

ರೀ, ಎಂದು ಕೂಗಿದಾಗಕ ರುಳು ಹಿಂಡಿದಂತಾಗಿ ಕಂಬನಿ ಸುರಿಸುತ್ತಾನೆ.

ಎಷ್ಟು ಸಹನಾಮೂರ್ತಿ ನನ್ನ ಗಂಡ. ಇಂತಹ ಪರಿಸ್ಥಿತಿಯಲ್ಲೂ ತಾಳ್ಮೆಗೆಡದೆ, ಮೌನವಾಗಿ ದುಃಖಿಸುತ್ತಿದ್ದಾರೆ, ಎಂದು ಪ್ರೀತಿ ಮನಸಲ್ಲಿ ಸಂಪತ್ ಬಗೆಗೆ, ಅವನಿಗೆ ತನ್ನಿಂದ ಆಗುತ್ತಿರುವ ಮೋಸದ ಬಗೆಗೆ ನೆನೆದು ದುಃಖಿಸುತ್ತಾಳೆ.

ಸಂಪತ್ ಕೂಡ ಪ್ರೀತಿಯ ಆಂತರ್ಯವನ್ನು ಬಲ್ಲಿದವನಾಗಿ, “ಪ್ರೀತಿ… ನನ್ನಿಂದ ಮುಚ್ಚಿಟ್ಟ ಸತ್ಯ, ನಾನು ಮಾಡಿದ ಊಹೆ ಎರೆಡೂ ಒಂದೇ ಆಗಿವೆ. ಮದುವೆ ಆದಂದಿನಿಂದ ನೀನು ನನ್ನ ಒಡನೆ ಪ್ರೀತಿಯಿಂದ ಇದ್ದರೂ ನಮ್ಮಿಬ್ಬರ ಸಾಂಗತ್ಯವನ್ನು ದೂರ ತಳ್ಳಿರುವ ಉದ್ದೇಶ ಈಗ ತಿಳಿದಿದೆ. ಈ ಕಾರಣದಿಂದ ನೀನು ಪಟ್ಟ ವ್ಯಥೆ ನಂಗೆತಿಳಿದಿಲ್ಲ ಅಂದುಕೊಂಡೆಯಾ, ಪ್ರತಿ ದಿನ ನೀನು ಸತ್ತು ಸತ್ತು ಬದುಕಿರುವೆ ಎಂಬುದು ನನ್ನರಿವಿಗೆ ಬಂದಿದೆ ಬಂಗಾರಿ. ಪ್ಲೀಸ್ ಈಗಲಾದರೂ ಸತ್ಯ ಹೇಳು, ನಿನ್ನ ನಿಷ್ಕಲ್ಮಷ ಪ್ರೀತಿಗಿಂತ ಯಾವುದೂ ದೊಡ್ಡದಲ್ಲ ಕಣೆ. ಅದೆಂತಹ ಘಟನೆಯೇ ಆಗಿರಲಿ ನಾನೆಂದಿಗೂ ನಿನ್ನ ಕೈ ಬಿಡುವುದಿಲ್ಲ ಕಣೆ”, ಎಂಬಮಾತುಗಳು ಬರುತ್ತಿದ್ದಂತೆಯೇ ಪ್ರೀತಿ ಗೊಳೋ ಎಂದು ನಲ್ಲನ ಹೆಗಲ ಮೇಲೆ ಬಿದ್ದು ಅಳಲು ಪ್ರಾರಂಭಿಸುತ್ತಾಳೆ.

ಪ್ರೀತಿಯ ತಾಯಿ ಬಂದು “ಪ್ರೀತಿ ನೀನು ಹೀಗೆ ಮಾಡಿದರೆ ಹೇಗೆ ನಿಮ್ಮ ಅತ್ತೆಯವರನ್ನು ವಾರ್ಡ್ಗೆ ಶಿಫ್ಟ್ ಮಾಡಿದಾರೆ; ಇನ್ನೇನು ಎಚ್ಚರವಾಗುತ್ತದೆ, ಇಬ್ಬರೂ ಬರ್ರಿ ಒಳಗೆ ಎಂದು, ನೀನು ಈ ಸ್ಥಿತಿಯಲ್ಲಿ ಅಳಬಾರದು ಯಾವಾಗಲೂ ಮನಸ್ಸನ್ನು ಸಂತಸವಾಗಿಟ್ಟುಕೊಳ್ಳಬೇಕು. ಈಗೇನಾಯಿತು, ನಿನ್ನ ಅತ್ತೆ ಹುಷಾರಾಗ್ತಾರೆ ಸುಮ್ಮನಿರು ಎಂದು ಮಗಳನ್ನು ಸಂತೈಸಿ,ಆಯ್ತು ಬೇಗ ಬನ್ನಿ ವಾರ್ಡ್ಗೆ” ಎಂದು ಹೇಳಿ ಹೋಗುತ್ತಾರೆ.

ವರದೇಂದ್ರ ಕೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] ಇಲ್ಲಿಯವರೆಗೆ… […]

1
0
Would love your thoughts, please comment.x
()
x