ನಮ್ಮಲ್ಲಿರುವ ಮೌಢ್ಯತೆ: ಷೌಕತ್‌ ಅಲಿ, ಮದ್ದೂರು

ವಿಜ್ಞಾನಯುಗ, ಕಂಪ್ಯೂಟರ್‍ಯುಗ, ಹೊಸ ಹೊಸ ಆವಿಷ್ಕಾರಗಳ ಹೊಸ ಮಾಧ್ಯಮಗಳ ಪರಿಚಯ, ದಿನ ನಿತ್ಯ ಅನೇಕ ಸುದ್ದಿಗಳು ನಮ್ಮನ್ನು ನಮ್ಮ ಬುದ್ಧಿಶಕ್ತಿಯನ್ನು ಸೇರಿ, ಮಾನವ, ಯಂತ್ರ ಮಾನವನ್ನಾಗಿಸಿದ್ದೇವೆ. ನಾವು 21ನೇ ಶತಮಾನಕ್ಕೆ ಸಮೀಪಿಸುತ್ತಿದ್ದು ಈ ಯುಗ ಯುಗಾಂತರದಲ್ಲಿ ನಾವು ನಮ್ಮೊಡನೆ ಒಂದು ಗಂಟು ಉಳಿಸಿಕೊಂಡೇ ಬಂದಿದ್ದೇವೆ. ಆ ಗಂಟು ಬೇರೇನಲ್ಲ ನಮ್ಮಲ್ಲಿರುವ ಮೌಢ್ಯತೆ, ಮೂಢನಂಬಿಕೆಗಳಿಂದ ನಮ್ಮ ಬದುಕಿನ ಆಚಾರ ವಿಚಾರ ಅಳತೆ ಮಾಡುವುದು, ಭಯದ ವಾತಾವರಣ ಸೃಷ್ಟಿಕೊಳ್ಳುವುದು. ಬದುಕಿನ ವಿನಾಶಗೊಳಿಸುವುದು ಈ ಎಲ್ಲಾ ಅಂಶಗಳು ನಮ್ಮ ಕಲ್ಪನೆಯಿಂದ ಬಂದದ್ದು ಅದನ್ನು ನಮ್ಮ ಭಾವನೆಗಳು ಸ್ಪಂದಿಸಿದ್ದು ನಮ್ಮ ಮನಸ್ಸು ಈ ಮೂಢನಂಬಿಕೆಗಳ ಆಗರವಾಗಿರುವುದು ಈ ಬಗ್ಗೆ ಸ್ವಲ್ಪ ಮಟ್ಟಿಗೆ ಚರ್ಚಿಸೋಣ.

ನಾವು ವಿದ್ಯಾವಂತರಾದರೂ ಸ್ವಲ್ಪ ಮಟ್ಟಿಗೆ ನಾವೂ ಸಹ ದಡ್ಡರೇ ಹೇಗೆ?

ಇಲ್ಲಿ ಒಂದಷ್ಟು ಉದಾಹರಣೆಗಳು ನಿಮ್ಮ ಮುಂದೆ ಇದೆ.

ಒಂದು ದಿನ ನಾನು ಶಾಲೆಗೆ ಹೊರಟಿರುವ ದಾರಿಯಲ್ಲಿ ಅಡ್ಡವಾಗಿ ಬೂದಿಯ ದಪ್ಪನೆಯ ಗೇರೆ ಹಾಕಿರುವುದನ್ನು ನಾನು ಗಮನಿಸಿದೆ. ಅಲ್ಲಿ ಪಾದಚಾರಿಗಳು ಪಕ್ಕದಲ್ಲಿ ಕಷ್ಟಪಟ್ಟು ಆ ರಸ್ತೆಯಲ್ಲಿ ಹೋಗುತ್ತಿರುವ ದೃಶ್ಯ ನನಗೆ ದೂರದಲ್ಲೇ ತಿಳಿದು, ನಾನು ಬೂದಿಯ ಗೇರೆ ನೇರವಾಗಿ ದಾಟಿದೆ ಅಲ್ಲಿದ್ದವರು ಯಾರೋ ಏನೋ, ಮಾಡಿಸಿ ಹಾಕವ್ರೇ ಎಂದು ತಿಳಿದು ನೀನು ದಾಟ್ ಬುಟ್ಟಲ್ಲ, ಹೋಗಿ ಸ್ಥಾನ ಮಾಡಿ ದೇವರಿಗೆ ಕಟ್ಟಿ ಪೂಜೆ ಮಾಡ್ಹೋಗು ಎಂದರು. ನಾನಂದೆ ಈಗಾಗ್ಲೇ ಸ್ನಾನ ಪೂಜೆ ಎಲ್ಲಾ ಆಗಿದೆ ಅದರ ಅಗತ್ಯ ಇಲ್ಲ.

ಒಂದುದಿನ ಬಸ್ಸಿನಲ್ಲಿ ಕಿಟಕಿಯ ಪಕ್ಕದ ಸೀಟಿನಲ್ಲಿ ಒಂದು ಹೆಂಗಸು ನಾಲ್ಕೈದು ವರ್ಷದ ಮಗ ಅವರೊಂದಿಗೆ ಆ ಮಗು ತಂದೆ, ಪಕ್ಕದ ಸೀಟಿನಲ್ಲಿ ಒಬ್ಬ ವಿದ್ಯಾವಂತ ನಾಗರೀಕ. ಬಸ್ಸು ವೇಗವಾಗಿ ಹೋಗುತ್ತಿದೆ. ಮಗು ಎಲ್ಲರಿಗೂ ಟಾಟಾ ಮಾಡ್ತಾ ಇದೆ ಕಿಟಕಿ ಆಚೆ ಕೈ ಆಡಿಸುತ್ತಿರುವ ಆ ಮಗುವಿನ ತಾಯಿಯ ಕುರಿತು, ಆ ನಾಗರೀಕ ಮಗು ಕೈ ಒಳಗೆ ತಗೊಳ್ಳಿ ಎಂದು ಎಚ್ಚರಿಸಿದ. ಆ ತಾಯಿಗೆ ಮಗುವಿನ ಆನಂದ, ತಂದೆಗೆ ತಮಾಷೆ, ಆ ನಾಗರೀಕನಿಗೆ ಮತ್ತೆ ಪೇಚು, ಮತ್ತೆ ಮತ್ತೆ ಹೇಳಿದ ಅವರ್ಯಾರಿಗೂ ಅದರ ಅರಿವು ಇಲ್ಲ ಅಗತ್ಯವೂ ಇರಲಿಲ್ಲ. ಹಿಂದಿನ ಸೀಟಿನಿಂದ ಮತ್ತೊಬ್ಬನು ಎಚ್ಚರಿಸಿದ. ಆಗ ಆ ಮಗು ತಂದೆ ನುಡಿದ. ಆವಯ್ಯ ಗಂಟಲು ಹರಕೊತ್ತಾನೆ. ನಿನಗೆ ಜ್ಞಾನ ಇಲ್ಲವಾ ಸುಮ್ನೆ ಕುತ್ಕೋ ಎಂದ. ಮತ್ತೆ ಅದೇ ಹಾಡು ಈಗ ಆ ತಂದೆಗೆ ಕೋಪ ಹೆಂಡ್ತಿಗೆ ಎದ್ದು ಬೈದ, ಬೈದ್ರೆ, ಅಪ್ರಿಯರು ರೇಗ್ತಾರೆ ಅಂತ ನಿನ್ಯಕೆ ನನಗ ರೇಗ್ತಿ ಸುಮ್ಮನಿರು ನಾವೇನು ದಿನಾ ಬರ್ತೀವ ಎಂದಾಗ ಎಲ್ಲರೂ ದಂಗು.

ಹೀಗೆ ಇನ್ನೊಂದು ದಿನ ಒಂದು ಯುವತಿ ತನ್ನ ಜಡೆಗೆ ಹಾಕಿದ ರಬ್ಬರ್ ಬ್ಯಾಂಡ್ ಕುರಿತು ಒಂದು ಅಜ್ಜಿ ಹೀಗಂತು. ಮಗ ಎಷ್ಟು ಚೆನ್ನಾಗಿದ್ದೀಯೆ ಸೀರೆ ರೌಕೆ ಲಕ್ಷಣವಾಗಿದ್ದೀಯ ತಾಯಿ, ಅನ್ನುತ್ತಾ ಎಲ್ಲಾ ಸರಿ ನಿನ್ ಜಡೆಗೆ ಯಾಕವ್ವ ಹಳೇ ಬಟ್ಟೆ ಕಟ್ಟಿದ್ದೀಯ ಒಂದು ರೂಪಾಯಿ ಕೊಟ್ರೆ ಟೇಪು ಸಿಗೊಲ್ವೆ ಚೆನ್ನಾಗಿ ಕಾಣಕ್ಕಿಲ್ಲ ತಗಿದು ಬಿಸಾಕವ್ವಾ ಎಂದಾಗ ಆ ಯುವತಿಯ ಮುಖ ರಂಗೇರಿತು. ಸಿಕ್ಕಾಪ್ಟೆ ಕೋಪ ಬಂದಿದ್ದರೂ ವಿಧಿಯಿಲ್ಲದೇ ನುಂಗಬೇಕಾಯಿತು, ಈ ದೃಶ್ಯ ನೋಡಿದ ನಾವೆಲ್ಲರೂ ಮಾಯವಾಗಿದ್ದೊ.

ಮೊನ್ನೆ ಮೊನ್ನೆ ನಾನು ಬೆಂಗಳೂರಿಗೆ ಹೋಗುತ್ತಿದ್ದಾಗ ಸರ್ಕಾರಿ ಬಸ್ಸಿನಲ್ಲಿ ನಾನು ನನ್ನ ಹೆಂಡತಿ 3 ಸೀಟಿನಲ್ಲಿ ಕುಳಿತಿದ್ದೆವು. ಮದ್ದೂರು ಬಿಟ್ಟು ಶಿವಪುರ ಬಂದಾಗ ನನ್ನ ಹೆಂಡತಿ ಕಿಟಕಿ ಪಕ್ಕ ಕುಳಿತುಕೊಂಡಳು ನಾನು ಅವಳ ಪಕ್ಕ. ಶಿವಪುರಸ್ಟಾಪ್‍ನಲ್ಲಿ ಸುಮಾರು 50 ವರ್ಷದ ತ-ರು-ಣಿ ಬಸ್ ಹತ್ತಿದಳು ಬಂದವಳು, ನನಗ್ಹೇಳಿದಳು ನೀವ್ ಆ ಕಡೆ ಹೋಗಿ ಅವ್ರನ್ನ ಈ ಕಡೆ ಕೂಡಿಸಿ ಎಂದು ವೈ-ಯಾರದಿಂದ ಆರ್ಡರ್ ಮಾಡಿದಳು. ಈ ಅಧಿಕಾರಿಣಿ ಯಾರು ಎಂದು ಮನಸ್ಸಿನಲ್ಲೇ ಲೆಕ್ಕ ಹಾಕಿದೆ.ಹೇಳಿದೆ, ಆಗೂದಿಲ್ಲ ನೀವ್ ಕುತ್ಕೋಳ್ಳೋದಾದರೆ ಇಲ್ಲೇ ಕುತ್ಕೊಳ್ಳಿ ಇಲ್ಲ ಇನ್ನೆಲ್ಲಾದರೂ ಸೀಟ್ ಸಿಗುತ್ತೆ ಹುಡ್ಕೊಳ್ಳಿ ಎಂದೆ. ಅವಳಿಗೆ ಎಲ್ಲಿಲ್ಲದ ಸಿಟ್ಟು ಹೂಂ! ಎಂದದ್ದೆ ಹಿಂದಿನ ಸೀಟಿನ ವ್ಯಕ್ತಿಯ ಬಳಿ ಹೋಗಿ ಹಾಗೆ ಅಂದಳು, ಅವನು ಸಹ ಅವರೇನು ಹೇಳಿದ್ರೊ ಅದನ್ನೇ ನಾನು ಹೇಳೋದು. ಕುತ್ಕೊಳ್ಳದಾದರೆ ಕುತ್ಕೊಳ್ಳಿ ಇಲ್ಲ ನಿಂತು ಕೊಂಡೆ ಬನ್ನಿ ಎಂದ ಆ ತ-ರು-ಣಿ ಸ್ಟುಪಿಡ್ ಯು ಸೇಮ್ ಎಂದು ವಿಧಾನಸೌಧದ ಕಂಬದ ಹಾಗೆ ನಿಂತುಕೊಂಡೇ ಪ್ರಯಾಣ ಮುಂದುವರೆಸಿದಳು. ನನ್ನ ಹೆಂಡ್ತಿ ಸುಮ್ನೆ ಇದ್ದಳು. ಇನ್ನು ಬಸ್ಸಿನಲ್ಲಿದ್ದ ಜನ ಒಬ್ಬಬ್ಬರಾಗಿ ಮಾತು ಪ್ರಾರಂಭಿಸಿದರು. ಏನು ಒಂದು ಗಂಟೆ ಕುತ್ಕೊಂಡು ಹೋಗೋಕೆ ಇಲ್ಲದ ರಂಪಾಟ, ಮತ್ತೊಬ್ಬ, ಇರಬೇಕು ಆದ್ರೇ ಇದು ಅತೀಯಾಯ್ತು ಎಂದು ಹೇಳಿದ. ಮತ್ತೊಬ್ಬ ಆ ವಯ್ಸ ಈವಮ್ಮನ ಮಗ ಇದ್ದಂಗಿದ್ದಾನೆ. ಈ ಎಮ್ಮನ ಇದ್ದಂಗಿದಾನೆ. ಈ ಎಮ್ಮನ ಧಿಮಾಕು ಎಂದ. ಕಂಡಕ್ಟರ್ ಇದು ನನಗೆ ಪ್ರತಿನಿತ್ಯ ಇದ್ದದ್ದೆ. ಹೊಸತೇನಲ್ಲ ನಿಮಗೆ ಹೊಸದು ಎಂದ. ನನ್ನ ಭಾವನೆಯಲ್ಲಿ ಪರಸ್ತ್ರೀ ತಾಯಿಯ ಹಾಗಿದ್ದರು ಆ ತಾಯಿಯ ಭಾವನೆಯಲ್ಲಿ ನಾನು ಪರಕೀಯವಾದನೇ?

ಇನ್ನೊಂದು ಘಟನೆ: ಒಂದು ಮುಸ್ಲಿಂ ಪರಿವಾರ ಪ್ರಯಾಣ ಮಾಡ್ತಾ ಇರುವ ಮಸ್ಸಿನಲ್ಲೇ ನಾನು ಇದ್ದೆ. ಅವರಲ್ಲಿ ಒಬ್ಬನಿಗೆ ವಿಪರೀತ ಜ್ವರ ಬಂದಿದ್ದು ಮಾನಸಿಕ ಶಕ್ತಿ ಕುಂದ್ಹೋಗಿದೆ. ಆ ವ್ಯಕ್ತಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದನನು ಗಮನಿಸಿ ಕೇಳಿದೆ. ಏನು ಕಾಯಿಲೆ ಎಂದಾಗ, ಯಾರೋ ಮಾಡ್ಸಿ ಬಿಟ್ಟಿದ್ದಾರೆ. ದರ್ಗಕ್ಕೆ ತಗೊಂಡು ಹೋಗ್ತದ್ದೇವೆ ಅಲ್ಲಿ ನೀರು ಮಂತ್ರಿಸಿ, ಒಂದು ಕೋಳಿ ಬಲಿ ಕೊಟ್ರೆ ಎಲ್ಲಾ ಬಿಟ್ಟು ಹೋಯ್ತದೆ ಎಣದರು ಟ್ರೀಟ್‍ಮೆಂಟ್ ಏನು ಬೇಕಿಲ್ಲವಂತೆ ಟೈಫಾಯಿಡ್‍ಗಿಂತಲೂ ಜ್ವರ ಅಧಿಕವಿತ್ತು ಬೆವರು ಹೆಚ್ಚಾಗಿತ್ತು. ಅವರಿಗೆ ನಾನು ಹೇಳಿದೆ ಮೊದಲು ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ವಾಸಿಯಾದ ಮೇಲೆ ದರ್ಗಕ್ಕೆ ಹೋದ್ರೆ ಎಂಥಾ ಕಾಯಿಲೆ ಇದ್ರು ವಾಸಿಯಾಗುತ್ತೆ ನಿನಗೇನು ಗೊತ್ತು ಸುಮ್ಮನೆ ಕೂತ್ಕೋ ಎಂದಾಗ ನಾನು ಹಾಗೆ ಮಾಡಿದೆ.

ಹೀಗೆ ಈ ಮೌಢ್ಯತೆ ಬಗ್ಗೆ ಹೇಳ್ತಾ ಹೋದರೆ ಇದು ಮುಗಿಯದ ಪಯಣ ಹೋಗುವಾಗ ಬೆಕ್ಕು ಅಡ್ಡ ಬಂದ್ರೆ ಪ್ರಯಾಣ ನಿಲ್ಸಿ ರಜೆ ಹಾಕಿ ಮನೇಲಿರುವುದು.ರಾಹುಕಾಲ ಗುಳಿಕಾಲದ ನಿಯಮ ಪಾಲಿಸುವುದು. ಒಳ್ಳೆ ಶಕುನ ಕಾಣಿಸಿಕೊಳ್ಳುವವರೆ ಕಾದು ನಿಂತು ನಂತರ ಮನೆಯಿಂದ ಹೊರಗೆ ಬರುವುದು, ವೆಹಿಕಲ್‍ಗೆ ನಮಸ್ಕಾರ ಮಾಡಿ ಸ್ಟಾರ್ಟ್ ಮಾಡೋದು ನನಗನ್ನಿಸುತ್ತೆ ಇವರ ಸಂಪೂರ್ಣ ಭಕ್ತಿ ಈ ಮೌಢ್ಯತೆಯಲ್ಲಿ ಆಗಿ ಹೋಗಿರುತ್ತೆ.

ಈ ರೀತಿ ಮೌಢ್ಯತೆಗೆ ಮಾನವಬಲಿ ಆಗ್ತಾ ಹೋದರೆ ಅವನ ಮಾನಸಿಕ ಚಿಂತನೆಗಳು ನಶಿಸಿ ಹೋಗುತ್ತವೆ. ಶಕ್ತಿ ದುರ್ಬಲವಾಗಿ ಹೋಗುತ್ತೆ, ಧೈರ್ಯ ಕುಗ್ಗಿ ಹೋಗುತ್ತದೆ. ಬದುಕ ಆಚರಣೆ ಆದರ್ಶಗಳು ಕೊನೆಯಾಗುತ್ತವೆ. ಆದ್ದರಿಂದ ಈ ಮೌಢ್ಯತೆಯೆಂಬ ಅಂಧಕಾರವನ್ನು ನಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು. ಮಾನವವೃದ್ದಿ ಹೊಂದುತ್ತ ವೈಜ್ಞಾನಿಕವಾಗಿ, ತನ್ನ ಬದುಕು ಹಸನಾಗಿಸುತ್ತ ಉತ್ತಮ ಆಲೋಚನೆಗಳನ್ನು ಒಳ್ಳೆಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಗತಿಯ ಪಥದಲ್ಲಿ ಸಾಗಬೇಕು.

ಷೌಕತ್‌ ಅಲಿ, ಮದ್ದೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x