ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 10): ಎಂ. ಜವರಾಜ್

೧೦-

ಅವ್ವಾ..ಅವ್ವಾ..ನೀ ಏಳವ್ವಾ..
ಶಂಕ್ರಪ್ಪೋರು ಅಳಳ್ತ ಅಳಳ್ತ
ನೀಲವ್ವೋರು ವಾಲಾಡ್ತ ಗೋಳಾಡ್ತ
ಅಯ್ನೋರ ಕಣ್ಣು ಕೆಂಪಗಾಗ್ತ 
ಉರಿ ಉರಿ ಉರಿತಾ ಮೊರಿತಾ
ಓಡೋಡಿ ಕಾಲೆತ್ತಿ ಜಾಡಿಸಿ ಒದ್ದನಲ್ಲೊ
ಆ ಶಂಕ್ರಪ್ಪೋರು ಮಾರ್ದೂರ ಬಿದ್ದು
ಅಯ್ಯಪ್ಪೋ ಅಂತ ಸೊಂಟ ಹಿಡ್ದು 
ಆ ನೀಲವ್ವ ಬಿದ್ದ ಮೋರಿಗೇ ಬಿದ್ದು 
ಕೊಸರಾಡ್ತ ಇದ್ದನಲ್ಲೊ….

ನನ್ನೆಡ್ತಿ ಮುಟ್ಟಕೆ 
ನೀಯಾವನಲೇ ಬಂಚೊತ್
ಲೌಡೆ ಬಂಚೊತ್…

ಆ ನೀಲವ್ವ ತವಿತಾ ಕೈ ಚಾಚ್ತ
ಶಂಕ್ರಾ.. ಶಂಕ್ರಾ ಅಂತ ಕೂಗ್ತ
ಹತ್ರತ್ರ ಬಂದ್ಲಲ್ಲೊ..

ಅಯ್ನೋರು ನನ್ ಮೆಟ್ಟೇ
ಇನ್ನೊಂದಪಾ ಒದ್ರಲ್ಲೊ…

ಜನ ಜಗನ್ ಜಾತ್ರ್ಯಾಗಿ ನೋಡ್ತಾ 
ಆ ಜಗನ್ ಜಾತ್ರ್ಯಾ ಸೀಳ್ತ 
ಲೊಚಗುಟ್ತ ಬಂದನೋ ಕುಲೊಸ್ತನು 
ಅಯ್ನೋರ ಹಿಡ್ದು 
ಜಗುಲಿಲಿ ಕೂತು
ಇಂಚಿಂಚು ಕೇಳ್ತಾ
ಆ ನೀಲವ್ವ ನೋಡ್ತಾ
ಆ ಶಂಕ್ರನೂ ನೋಡ್ತಾ
ಆ ಜಗನ್ ಜಾತ್ರಾನೂ ನೋಡ್ತಾ
ಅಯ್ನೋರ್ ಮುಖ ಕೆಂಪಾಗ್ತಾ
ಸರ್ರಂತ ಮೇಲೆದ್ದು ನನ್ನ ಮೂಲೆಗೆಸ್ದು
ಒಳ ಹೋಗಿ ದಡಕ್ಕನೆ ಬಾಗಿಲಾಡ್ರಲ್ಲೊ..

ಆ ನೀಲವ್ವನೂ 
ಆ ಶಂಕ್ರನೂ
ಆ ಕುಲೊಸ್ತನು 
ಒಬ್ಬರಿಗೊಬ್ಬರು ನೋಡ್ಕತಾ
ನೂರೊಂತರ ಮಾತಾಡ್ತ
ಆ ಜಗನ್ ಜಾತ್ರಾನು ಕಮ್ಮಿಯಾಗ್ತ
ಬಿಸಿಲ ಕಾವು ಹೆಚ್ಚಾಗ್ತ ಇತ್ತಲ್ಲೊ..

ಅಯ್ಯಯ್ಯೊ 
ನೀ ಅಳಬ್ಯಾಡವ್ವೊ
ಏನಾರು ಮಾಡುವ ಇರು
ಅಂವ ಹಂಗೆ ಮೊಂಡು
ನೀ ತಡ್ಕ 
ನೀ ತಡ್ಕ
ನೀ ತಡ್ಕ
ಈ ಶಂಕ್ರ ಇವುನೊವ್ವ ಹೆಂಗಿದ್ರು ಗೊತ್ತಾ..
ಕುಲೊಸ್ತನ ಮಾತು ಬಿಸಿಲಲ್ಲಿ ಕಾಯ್ತ
ಅಯ್ನೋರ್ ಬಾಗ್ಲು ತೆಗಿತಾ ಮೀಸೆ ತಿರಿತಾ
ಪಿಲ್ಲ ಪಂಚ ಎತ್ಕಟ್ತಾ
ಮೂಲೆಲಿದ್ದ ನನ್ನ ಮೆಟ್ಟಿ
ಕುಲೊಸ್ತನ ತಳ್ಳಿ
ಮೋರಿ ದಾಟಿ 
ಗಿರ್ಕ ಗಿರ್ಕನೆ ದಾಪುಗಾಲಾಕಿ
ಬೀದಿಗುಂಟ ನಡೆದನಲ್ಲೊ…

-ಎಂ ಜವರಾಜ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x