ಪಂಜುಗೆ ಶುಭಹಾರೈಕೆಗಳು: ಗಿರಿಜಾ ಜ್ಞಾನಸುಂದರ್

ಅದೊಂದು ದಿನ ಒಂದು ಕಾರ್ಯಕ್ರಮದಲ್ಲಿ ಬಹಳಷ್ಟು ಗಣ್ಯರನ್ನು ಭೇಟಿಮಾಡುವ ಸದವಕಾಶ ಸಿಕ್ಕಿತ್ತು ನನಗೆ. ತಮ್ಮ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಮಾಡಿದ್ದವರು. ಅವರ ಒಡನಾಟವೇ ಒಂದು ಆನಂದ. ನನ್ನ ಗುರುಗಳಾದ ಉದಯ ಶಂಕರ್ ಪುರಾಣಿಕ್ ರವರು, ಅವರ ಸಹೃದಯೀ ಸ್ನೇಹಿತರು, ಪಂಜು ಪತ್ರಿಕೆಯ ಸಂಪಾದಕರಾದ ನಟರಾಜ್ ಸೀಗೇಕೋಟೆಯವರು ಎಲ್ಲರನ್ನು ಭೇಟಿಯಾದ ಸಮಯ. ನಟರಾಜುರವರು ಮಾತನಾಡುತ್ತ “ನೀವೇಕೆ ಬರೆಯಬಾರದು?” ಎಂದರು. ಅಲ್ಲಿಯವರೆಗೂ ಅದರ ಬಗ್ಗೆ ಯೋಚನೆಯನ್ನು ಮಾಡದ ನನಗೆ ಅದು ಒಂದು ತಮಾಷೆ ಎನ್ನಿಸಿತು. ಕೇವಲ ಸಾಹಿತ್ಯವನ್ನು ಓದಲು ತಿಳಿದಿದ್ದ ನನಗೆ ನೀವು ಬರೆಯಿರಿ ಅನ್ನೋ ಮಾತು ಅಷ್ಟಾಗಿ ಮನಸ್ಸಿಗೆ ಬರಲಿಲ್ಲ. ಎಂದು ಬರೆದೆ ಇರಲಿಲ್ಲ ನಾನು… ಹಾಗಾಗಿ ನನ್ನ ಬರವಣಿಗೆಯ ಬಗ್ಗೆ ಯೋಚಿಸಲಿಲ್ಲ. ನಟರಾಜುರವರು ಬಹಳಷ್ಟು ಬಾರಿ ಹೇಳಿದ ಮೇಲೆ ಧೈರ್ಯಮಾಡಿ ಬರೆಯಬೇಕೆಂಬ ಮನಸ್ಸು ಮಾಡಿದೆ. ಅವರ ಉತ್ತೇಜನದಿಂದ ಒಂದೆರಡು ಕಥೆಗಳನ್ನು ಬರೆದಿದ್ದೇನೆ.

ಪಂಜು ಒಂದು ಅಂತರ್ಜಾಲ ಪತ್ರಿಕೆ, ಎಲ್ಲರಿಗು ಓದಲು ಸಿಗುವಂತಹ ಒಂದು ವೇದಿಕೆಯಾಗಿ ಬೆಳೆಯುತ್ತಿದೆ. ತಂತ್ರಜ್ಞಾನವನ್ನು ಬಳಸಿ ಭಾಷೆಯನ್ನು ಬೆಳೆಸಿ, ಎಲ್ಲೆಡೆ ಹರಡುವ ಪಂಜುವಿನ ಪ್ರಯತ್ನ ಅದ್ಭುತವಾಗಿದೆ. ಪಂಜುವಿಗೆ ಬರೆಯಲು ಶುರುಮಾಡಿ, ತಮ್ಮ ಬರವಣಿಗೆಯಲ್ಲಿ ಅಪ್ರತಿಮರಾಗಿರುವ ಬಹಳಷ್ಟು ಲೇಖಕರಿದ್ದಾರೆ. ಪಂಜುವಿನ ಬಳಗ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಎಲ್ಲೆಡೆಯಿಂದ ಬರೆದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ತಮ್ಮ ಹೊಳಪನ್ನು ಪ್ರದರ್ಶಿಸುತ್ತಿರುವ ಪ್ರತಿಯೊಂದು ಲೇಖಕರಿಗೂ ನನ್ನ ನಮನಗಳು. ಇಂತಹ ಪ್ರತಿಭಾವಂತರ ಬಳಗವನ್ನು ತಮ್ಮೊಡನೆ ನಡೆಸುತ್ತ ಸತತವಾಗಿ ೭ ವರ್ಷ ತಮ್ಮ ಪ್ರಯಾಣವನ್ನು ಮುಂದುವರೆಸುತ್ತ ಬಂದಿರುವ ನಟರಾಜುರವರಿಗೆ ಹೃದಯಪೂರ್ವಕ ಅಭಿನಂದನೆಗಳು. ತಮ್ಮೆಲ್ಲ ಅನೇಕ ಕಾರ್ಯದ ಮಧ್ಯವು ಪಂಜುವಿಗಾಗಿ ತಮ್ಮ ಸಮಯ ಸೀಮಿತಗೊಳಿಸಿ ಅದಕ್ಕಾಗಿ ಶ್ರಮಪಡುತ್ತಾ ಅದನ್ನು ೭ನೆ ವರ್ಷಕ್ಕೆ ಕರೆತಂದಿರುವುದು ಸಾಮಾನ್ಯ ಕೆಲಸವಂತೂ ಖಂಡಿತಾ ಅಲ್ಲ. ಅವರಿಗೆ ಇನ್ನಷ್ಟು ಯಶಸ್ಸು ಸಿಗಲೆಂದು ಪ್ರಾರ್ಥಿಸುತ್ತೇನೆ. ಪಂಜುವಿನ ಬಳಗ ಇನ್ನಷ್ಟು ಹೆಚ್ಚಲಿ ಹಾಗು ಪಂಜು ಎಲ್ಲ ಗಡಿ ಮೀರಿ ಬೆಳೆಯಲಿ ಎಂದು ಹಾರೈಸುತ್ತೇನೆ. ಪಂಜುವನ್ನು ಇನ್ನು ಬೆಳೆಸಲು ಅವರಿಗೆ ಹೆಚ್ಚಿನ ಸಹಾಯ ದೊರೆಯಲಿ ಹಾಗು ಪಂಜು ಸಾವಿರಾರು ವರ್ಷ ಬೆಳೆಯಲಿ ಎಂದು ಹಾರೈಸುತ್ತೇನೆ.‌

ಗಿರಿಜಾ ಜ್ಞಾನಸುಂದರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x