ಸಾಧನೆಯ ಹಾದಿ: ವೆಂಕಟೇಶ್‌ ಚಾಗಿ

ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದನು. ರಾಮಯ್ಯ ತನಗೆ ತನ್ನ ಪೂರ್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಖವಾಗಿ ಜೀವನ ಸಾಗಿಸುತ್ತಿದ್ದನು. ಯಾವುದೇ ಆಮೀಷಕ್ಕೆ ಅತೀ ಆಶೆಗೆ ಒಳಗಾಗದೇ ಕಷ್ಟ ಪಟ್ಟು ದುಡಿಯುವುದೇ ಅವನ ನಿತ್ಯ ಕಾಯಕವಾಗಿತ್ತು. ತನ್ನ ದಿನದ ಬಹುತೇಕ ಭಾಗವನ್ನು ಹೊಲ ಗದ್ದೆಗಳಲ್ಲಿ ಕಳೆಯುತ್ತಿದ್ದನು. ಕೆಲವು ಜನರು ಅವನನ್ನು ಆಸೆಬುರುಕ ಎಂತಲೂ ಲೋಭಿ ಎಂತಲೂ ಮತಿ ಹೀನ ಎಂತಲೂ ಕರೆಯುತ್ತಿದ್ದರು. ಆದರೂ ಯಾರ ಮಾತಿಗು ಗಮನ ಕೊಡದೆ ತನ್ನ ಕಾಯಕವನ್ನು ತಪ್ಪದೆ ಮಾಡುತ್ತಿದ್ದನು.

ರಾಮಯ್ಯನಿಗೆ ಒಬ್ಬ ಮಗನಿದ್ದನು. ಅವನ ಹೆಸರು ಕಮಲಾಕರ ಎಂದು. ಕಮಲಾಕರ ಅಪ್ಪನ ವಿರುದ್ದ ಗುಣಗಳನ್ನು ಹೊಂದಿದ್ದ. ಹೊಲದಲ್ಲಿ ದುಡಿಯುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ತಾನೊಬ್ಬ ದೊಡ್ಡ ವಿದ್ವಾಂಸನಾಗಿ ಮಾಹಾರಾಜರಿಂದ ಸನ್ಮಾನಿತನಾಗಬೇಕು ಎಂಬ ಬಯಕೆ ಅವನಲ್ಲಿ ಮೂಡಿತ್ತು . ಇದಕ್ಕಾಗಿ ರಾಮಯ್ಯನೊಂದಿಗೆ ವಾಗ್ವಾದ ಮಾಡಿ ಶಾಸ್ತ್ರಾಭ್ಯಾಸಗಳಲ್ಲಿ ತೊಡಗುತ್ತಿದ್ದನು. ಕಾಯಕದ ಅರಿವಿಲ್ಲದ ಕಮಲಾಕರ ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದನು. ದೊಡ್ಡ ದೊಡ್ಡ ವಿದ್ವಾಂಸರೆದುರು ಸೋತು ಮನೆಗೆ ಬರುತ್ತಿದ್ದನು. ಆದರೂ ತನ್ನ ತಂದೆ ರಾಮಯ್ಯ ನಿಗೆ ” ನೋಡುತ್ತಿರು ನಾನು ಒಂದಲ್ಲಾ ಒಂದು ದಿನ ಮಹಾರಾಜರಿಂದ ಸನ್ಮಾನಿತನಾಗುತ್ತೇನೆ. ಅದು ನಿನ್ನಿಂದ ಸಾಧ್ಯವಿಲ್ಲ. ನೀನೋ ಅನಕ್ಷರಸ್ಥ ರೈತ.” ಎಂದು ಹೀಯಾಳಿಸುತ್ತಿದ್ದನು. ರಾಮಯ್ಯ, ಮಗನ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ತನ್ನ ಕಾಯಕದಲ್ಲಿ ಮಗ್ನನಾಗಿರುತ್ತಿದ್ದನು.

ಒಂದು ದಿನ ಮಹಾರಾಜರು ಮಾರುವೇಷದಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡುವಾಗ ರಾಮಯ್ಯನ ಹೊಲಗದ್ದೆಯ ಬಳಿ ಬಂದರು. ಸಮೃದ್ಧ ಫಸಲನ್ನು ಕಂಡು ಮಹಾರಾಜರು ಸಂತುಷ್ಠರಾದರು. ದೂರದಲ್ಲಿ ಕೆಲಸ ಮಾಡುತ್ತಿದ್ದ ರಾಮಯ್ಯನನ್ನು ಕರೆದು ರಾಮಯ್ಯನ ಕಾಯಕದ ಬಗ್ಗೆ ವಿಚಾರಿಸಿದರು. ರಾಮಯ್ಯನ ಪರಿಶ್ರಮ ಮಹಾರಾಜರನ್ನು ತುಂಬಾ ಸೆಳೆಯಿತು. ಮಾರುವೇಷದಲ್ಲಿದ್ದ ಮಹಾರಾಜರು ರಾಮಯ್ಯನಿಗೆ, ” ರಾಮಯ್ಯ , ನಿನ್ನ ಕರ್ತವ್ಯ , ಶ್ರಮ ಕಂಡು ನನಗೆ ತುಂಬಾ ಸಂತಸವಾಗಿದೆ. ನಾಳೆ ಅರಮನೆಗೆ ಬಾ. ನನ್ನ ಮಕ್ಕಳಿಗೂ ನಿನ್ನ ಶ್ರಮದ ಪರಿಚಯ ಮಾಡಿಕೊಡುವಂತೆ” ಎಂದಾಗ ,ರಾಮಯ್ಯ ” ಬುದ್ದಿ ನೀವು ಯಾರು ಅಂತ ಅರಮನೆಯಲ್ಲಿ ಕೇಳಲಿ? ” ಎಂದಾಗ , ಮಹಾರಾಜ ” ಅರಮನೆಯ ಸೇವಕರಿಗೆ ನಾನೊಬ್ಬ ರೈತ . ರೈತರ ಮಹಾಸೇವಕನ್ನು ನೋಡಬೇಕಿದೆ ಎಂದು ಹೇಳಿದರೆ ಸಾಕು ನನ್ನ ಬಳಿ ಕರೆದು ತರುತ್ತಾರೆ” ಎಂದಾಗ ರಾಮಯ್ಯ ಆಗಲಿ ಎಂದು ಒಪ್ಪಿಕೊಂಡ.

ಮರುದಿನ ರಾಮಯ್ಯ ತಾನು ಮಹಾರಾಜರ ಅರಮನೆಗೆ ಹೋಗಬೇಕು ಎಂದು ಬಗನ ಬಳಿ ಹೇಳಿದಾಗ , ಮಗ ಕಮಲಾಕರ ” ಯಾರೋ ನಿನಗೆ ಸುಳ್ಳು ಹೇಳಿರಬೇಕು. ನೀನೊಬ್ಬ ಬಡ ರೈತ ‌. ಅಲ್ಲಿ ನಿನ್ನಿಂದಾಗುವ ಕೆಲಸವಾದರೂ ಏನಿದೆ?” ಎಂದಾಗ ರಾಮಯ್ಯ ಮಗನ ಮಾತನ್ನು ಲೆಕ್ಕಿಸದೇ ನೇರವಾಗಿ ಅರಮನೆಗೆ ಬಂದಾಗ ಭಟರು ರಾಮಯ್ಯನನ್ನು ವಿಚಾರಿಸಿ ರೈತರ ಮಹಾಸೇವಕನಾದ ಮಹಾರಾಜರ ಬಳಿ ಕರೆದುಕೊಂಡು ಬರುತ್ತಾರೆ. ರಾಮಯ್ಯನಿಗೆ ದಿಗ್‌ ಭ್ರಮೆಯಾಗುತ್ತದೆ. ಮಹಾರಾಜರು , ರಾಮಯ್ಯ ನ ಕೃಷಿ ಸಾಧನೆಯನ್ನು ಸಭಿಕರಿಗೆಲ್ಲಾ ತಿಳಿಸುತ್ತಾರೆ. ರಾಮಯ್ಯ ನನ್ನು ಮಹಾರಾಜರು ಸನ್ಮಾನಿಸುತ್ತಾರೆ. ಇದನ್ನು ಕಂಡ ಕಮಲಾಕರನ ಅಹಂಕಾರವೆಲ್ಲಾ ಕರಗಿಹೋಗಿ ನಾಚಿಕೆಯಿಂದ ತಲೆತಗ್ಗಿಸುತ್ತಾನೆ.ಸಾಧನೆಗೆ ವಿದ್ವಾಂಸನೇ ಆಗಬೇಕೆಂದಿಲ್ಲ. ಒಬ್ಬ ಸಾಮಾನ್ಯ ರೈತನಲ್ಲೂ ಸಾಧನೆಯ ಗುಣವಿದೆ. ” ಎಂದಾಗ ಅಂದಿನಿಂದ ಕಮಲಾಕರನೂ ತಂದೆಯ ಸಾಧನೆಯ ಹಾದಿಯನ್ನು ಹಿಡಿಯುತ್ತಾನೆ.

-ವೆಂಕಟೇಶ್‌ ಚಾಗಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಎಂ.ಜವರಾಜ್

ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ “ದುಡಿಮೆಯೇ ದುಡ್ಡಿನ ಫಲ” ಅಂತ ಒಂದು ಪಾಠವಿತ್ತು. ಕ್ಷಮಿಸಿ, ಶೀರ್ಷಿಕೆಯಲ್ಲಿ ಸ್ವಲ್ಪ ಗೊಂದಲವಿದೆ. ಹೀಗೆ ಇತ್ತು ಅನ್ಸುತ್ತೆ. ಅದರಲ್ಲಿ ಒಬ್ಬ ರೈತ. ಅವನಿಗೆ ಮೂವರು ಸೋಮಾರಿ ಮಕ್ಕಳು. ಅಪ್ಪ‌ನ ದುಡ್ಡಿನಲಿ ತಿಂದು ತೇಗಿ ಮಜಾ ಮಾಡುತ್ತಿದ್ದವರು. ಒಂದಿನ ಅವರಪ್ಪ ಸಾಯೋವಾಗ ಮಕ್ಕಳನ್ನು ಕರೆದು “ನಾನು ಇಂದೋ ನಾಳೆ ಸಾಯಬಹುದು. ಇಲ್ಲಿ ತಂಕ ನಿಮ್ಮನ್ನು ಸಾಕಿದೆ. ನಿಮ್ಮನ್ನು ಮುಂದೆ ನೋಡಿಕೊಳ್ಳುವವರಾರೆಂದು ಯೋಚನೆಯಾಗಿ ಕಳ್ಳ ಕಾಕರ ಭಯದಿಂದ ನನ್ನ ಸಂಪತ್ತನ್ನೆಲ್ಲ ಅಡಿಕೆ,‌ಬಾಳೆ, ತೆಂಗು ಕಂಗು ಮಾವು ಹಲಸಿನ ತೋಟದಲಿ, ಆ ಫಲಗಳ ಬುಡದಲಿ ಬಚ್ಚಿಟ್ಟಿದ್ದೇನೆ. ಇನ್ನು ಮುಂದೆ ನಿಮ್ಮ ಬುದ್ದಿ ಶ್ರಮ ಉಪಯೋಗಿಸಿ ಅದನ್ನು ಪಡೆದು ಅನುಭೀಗಿಸಿ ಅಂತ ಸತ್ತ. ಮಕ್ಕಳಿಗೆ ಖುಷಿ. ತೋಟಕ್ಕೆ ಹೋಗಿ ಅಗೆದದದೆ ಅಗೆದದ್ದು. ಯಾವ ದುಡ್ಡು ಇಲ್ಲ ಸಂಪತ್ತು ಇಲ್ಲ. ಅಪ್ಪನನ್ನು ಮೋಸಗಾರರೆಂದು ಜರಿದರು. ಇವರು ಅಗೆದು ಅಗೆದು ಭೂಮಿ ಬಿಯಾಗಿತ್ತು. ಕಳೆ ಕಳೆದಿತ್ತು. ಮಳೆ ಸುರಿದಿತ್ತು. ವರ್ಷ ಆರು ತಿಂಗಳು ನಂತರ ತೋಟ ಫಸಲಲ್ಲಿ ನಗುತ್ತಿತ್ತು. ದೊಡ್ಡ ವ್ಯಾಪಾರಸ್ಥರು ಹಾಗೆ ರಸ್ತೆಯಲಿ ಹೋಗುವಾಗ ವಿಚಾರಿಸಿದರು. ಆ ವ್ಯಾಪಾರಿ ಮೂವರಿಗೂ ಫಸಲಿಗೆ ವ್ಯಾಪಾರ ಹೇಳುವಂತೆ ಕೇಳಿದರು. ವ್ಯಾಪಾರಿಯ ಮಾತಿಗೆ ದಡ್ಡರಂತೆ ನಿಂತರು. ಒಳ್ಳೆಯವನಾದ ವ್ಯಾಪಾರಿ. ಅವನೇ ಒಂದು ಕಟ್ಟಿ ಫಸಲು ಕಟಾವು ಮಾಡಿ ಇವರ ಕೈಗೆ ಕಂತೆ ಕಂತೆ ದುಡ್ಡು ಕೊಟ್ಟ. ಇವರಿಗೆ ಖುಷಿಯೋ ಖುಷಿ. ಆಗ ಅವರು ಅಪ್ಪ ನಮಗೆ ಮೋಸ ಮಾಡಿಲ್ಲ. ಅವನು ಅಂದ ಮಾತು ಈಗ ಅರ್ಥ ಆಯ್ತು ಅಂತ ಅಂದುಕೊಂಡು ದುಡಿಯಲು ಶುರು ಮಾಡಿದರು.
ಹೀಗೆ ವೆಂಕಟೇಶ್ ಚಾಗಿ ಅವರ ರೈತ ಕತೆ ಮಕ್ಕಳಿಗೆ ಸರಳವಾಗಿ ಅರ್ಥವಾಗುವ ಕತೆ. ಇದನ್ನು ಪಠ್ಯದಲ್ಲಿ ಅಳವಡಿಬಹುದಾದ ಅಪರೂಪದ ಕತೆ ಅನ್ನಬಹುದು.

-ಎಂ.ಜವರಾಜ್

1
0
Would love your thoughts, please comment.x
()
x