ವಿಭಿನ್ನ ಕಲೆಯ ಪ್ರವೃತ್ತಿಯನ್ನು ವೃತ್ತಿ ಯನ್ನಾಗಿಸಿ ಯಶಸ್ಸು ಕಂಡ ಭರತ್ ಕುಲಾಲ್: ಹರ್ಷಿತಾ ಹರೀಶ ಕುಲಾಲ್

ಹುಟ್ಟಿದ ಪ್ರತಿಯೊಂದು ವ್ಯಕ್ತಿ ಯಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದಕ್ಕಾಗಿ ಸೂಕ್ತ ವೇದಿಕೆ ಸಿಕ್ಕಾಗ ಪ್ರದರ್ಶನ ಮಾಡುತ್ತಾರೆ. ಇನ್ನೂ ಕೆಲವರು ಎಲ್ಲ ಕಲೆ ಗೊತ್ತಿದ್ದು ವೇದಿಕೆ ಸಿಗದೆ ವಂಚಿತರಾಗಿರುತ್ತಾರೆ. ಹಾಗೆಯೇ ಹಲವು ಕನಸುಗಳನ್ನು ಹೊತ್ತ ಯುವಕ ತಾನು ವೇದಿಕೆಯಲ್ಲಿ ಪ್ರದರ್ಶನ ನೀಡಿ ಅದರ ಅನುಭವದ ರುಚಿಯಿಂದ ಮುಂದುವರಿದ ಪ್ರತಿಭೆ ಬಾತು ಕುಲಾಲ್.. ಇವರು ಶ್ರೀ ನಾರಾಯಣ ಹಾಗೂ ಶ್ರೀಮತಿ ಸುಂದರಿ ಯವರ ತೃತೀಯ ಪುತ್ರನಾಗಿ. ನಿರಂಜನ್ ಕುಲಾಲ್ ಹಾಗೂ ಯಶವಂತ್ ಕುಲಾಲ್ ಅವರ ಪ್ರೀತಿಯ ತಮ್ಮನಾಗಿ ಪದೊಳಿಕಟ್ಟೆ ಮಂಜನಾಡಿಯಲ್ಲಿ ಜನಿಸುತ್ತಾರೆ. ತನ್ನ ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಶಿಕ್ಷಣ ವನ್ನು ದೇರಳಕಟ್ಟೆ ಶಾಲೆಯಲ್ಲಿ ಮುಂದುವರಿಸಿದರು. ಹಾಗೆಯೇ ಪದವಿ ಪೂರ್ವ ಶಿಕ್ಷಣ ವನ್ನು ಭಾರತ್ ಉಳ್ಳಾಲ ಕಾಲೇಜು ನಲ್ಲಿ ಪೂರೈಸಿ. ನಂತರ ತನ್ನ ಐಟಿಐ ಕೋರ್ಸ ನ್ನು ಕದ್ರಿಯಲ್ಲಿ ಒಂದು ವರ್ಷದಲ್ಲಿ ಮುಗಿಸಿರುತ್ತಾರೆ. ನಂತರ ಇವರ ಕನಸದಂತಹ ಎಡಿಟಿಂಗ್ ಕೋರ್ಸ್ ನ್ನು ಹೋಮ್ ಎಂಟರ್ಟೈನ್ಮೆಂಟ್ ಮಂಗಳೂರು ನಲ್ಲಿ ಮುಗಿಸಿರುತ್ತಾರೆ.

 

ಇನ್ನೂ ಬಾತು ಕುಲಾಲ್ ರವರ ಪ್ರತಿಭೆ ಯ ಬಗ್ಗೆ ಹೇಳಬೇಕಾದರೆ ತನ್ನ 6ನೇ ತರಗತಿಯಲ್ಲಿ ಯಕ್ಷಗಾನ ಕಲಿತ ಇವರು ನಂತರ ವಿಷ್ಣು ಮೂರ್ತಿ ಅಧ್ಯಯನ ಕೇಂದ್ರದ ಲ್ಲಿ 5 ವರ್ಷಗಳ ಯಕ್ಷಗಾನ ಪ್ರದರ್ಶನ ನೀಡಿದರು. ಕಟೀಲು 1ನೇ ಮೇಳದಲ್ಲಿ 6 ತಿಂಗಳ ತಿರುಗಾಟದಲ್ಲಿ ಭಾಗವಹಿಸಿದ್ದರು. ನಂತರ ವೈಷ್ಣವಿ ಕಲಾವಿದರು ಮಂಜೇಶ್ವರ ನಾಟಕ ತಂಡಕ್ಕೆ ಸೇರ್ಪಡೆಯಾಗಿ ಸುಮಾರು 5 ವರ್ಷಗಳ ಕಾಲ ತನ್ನ ಸೇವೆಯನ್ನು ಸಲ್ಲಿಸಿದರು. ಹಾಗೆಯೇ ತುಳುವರ ಜೋಡುಕಲ್ಲ್ ತಂಡಕ್ಕೆ ಸೇರ್ಪಡೆಯಾಗಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ಇವರ ಕನಸಿನಂತೆ 2016 ರಲ್ಲಿ ಬಿ.ಕೆ ಕ್ರೀಯೆಷನ್ ಎಡಿಟಿಂಗ್ ಆಫೀಸ್ ನ್ನು ಆರಂಭಿಸಿದರು. ಇಂದಿಗೆ 3 ವರ್ಷಗಳನ್ನು ಪೂರೈಸುತ್ತಾ ಬಂದಿರುತ್ತದೆ. ಹಾಗೆಯೇ ಇವರ ಕೈ ಚಲಕದಿಂದ ಪೆಟ್ಟ್ ಕಮ್ಮಿ ನವೀನ, ಚಕ್ಕುಲಿ, ಅರ್ಕಂಜಿ ಮುಂತಾದ ಆಲ್ಬಂ ಸಾಂಗ್ ಮೂಡಿ ಬಂದಿವೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿರುವ ಮಾಯೆ ಕಾರ್ಣಿಕ ನಾರಿ ಕಿರು ಚಿತ್ರಗಳ ಕೈ ಚಲಕವು ಇವರದೇ ಆಗಿದೆ.

ಮನಸ್ಸಿನಲ್ಲಿ ಅದೆಷ್ಟೋ ನೋವು ಇದ್ದರೂ ತನ್ನಿಂದ ಬೇರೆಯವರನ್ನು ಖುಷಿ ಯಲ್ಲಿ ಇಡಬೇಕೆಂದು ಯೋಚಿಸಿದ ಬಾತು ತನ್ನ ಅಣ್ಣನಾದ ನಿರಂಜನ್ ಕುಲಾಲ್ ಅವರ ಜೊತೆ ತಮಾಷೆ ಹಾಗೂ ಅದರ ಜೊತೆಗೆ ಒಳ್ಳೆಯ ಸಂದೇಶವನ್ನು ನೀಡುವ ವೀಡಿಯೋ ವನ್ನು ಮಾಡಿ ಇನ್ನಷ್ಟು ಜನಪ್ರಿಯ ರಾದರು. ಹೆಣ್ಣು ಮನಸ್ಸು ಮಾಡಿದರೆ ಏನೇ ಸಾಧನೆ ಮಾಡಬಹುದು ಅನ್ನುವ ಮಾತಿದ್ದು ಆದರೆ ಗಂಡು ಮನಸ್ಸು ಮಾಡಿದರೆ ಸಹ ಯಾವುದೇ ಸಾಧನೆ ಮಾಡಬಹುದು ಎಂದು ಬಾತು ರವರು ತನ್ನ ಪ್ರತಿಭೆ ಯ ಮೂಲಕ ತೋರಿಸಿ ಕೊಟ್ಟಿದ್ದಾರೆ. ಹಾಗೆಯೇ ಇವರ ಭವಿಷ್ಯ ಉಜ್ವಲವಾಗಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವಂತಾಗಲಿ.. ನನಗೆ ಇದೇ ರೀತಿ ಪ್ರೋತ್ಸಾಹ ಸಿಕ್ಕರೆ ನಾನು ನನ್ನ ಜೀವನದ ಬಹುಮುಖ್ಯ ಕನಸನ್ನು ನನಸಾಗಿಸಬಲ್ಲೆ ಎನ್ನುವ ಬಾತು ಅವರ ಮಾತು ನಿಜವಾಗಲಿ…..

-ಹರ್ಷಿತಾ ಹರೀಶ ಕುಲಾಲ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x