Facebook

‘ಅಂತರ್ವಾಣಿ’ 6ನೆಯ ಆವೃತ್ತಿಗೆ ಸಂಶೋಧನ ಲೇಖನಗಳ ಆಹ್ವಾನ

Spread the love


ಕನ್ನಡ ಸಾಹಿತ್ಯ ಮತ್ತು ಸಮಾಜ ವಿಜ್ಞಾನ (ಇತಿಹಾಸ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ) ವಿಷಯಗಳ ಸಂಶೋಧನ ಲೇಖನಗಳನ್ನು ಪ್ರಕಟಿಸುವ ಸಲುವಾಗಿ ‘ಅಂತರ್ವಾಣಿ’ ಪುಸ್ತಿಕೆಯ 6ನೆಯ ಆವೃತ್ತಿಗೆ ಸಂಶೋಧಕರ ಲೇಖನಗಳಿಗೆ ಆಹ್ವಾನ ನೀಡಲಾಗಿದೆ. ಲೇಖನಗಳನ್ನು ISಃಓ ಸಂಖ್ಯೆಯ ಪುಸ್ತಿಕೆಯಲ್ಲಿ ಪ್ರಕಟಿಸಲಾಗುವುದು. ಈಗಾಗಲೇ ಯಶಸ್ವಿಯಾಗಿ ಅಂತರ್ವಾಣಿ ಪುಸ್ತಿಕೆಯ ಆರು ಆವೃತ್ತಿಗಳು ಪ್ರಕಟವಾಗಿವೆ. ಈ ನಮ್ಮ ಯಶಸ್ಸಿಗೆ ನಾಡಿನ ಸಮಸ್ತ ಯುವ, ಹಿರಿಯ ಸಂಶೋಧಕರು ಸಾಕಷ್ಟು ಪ್ರೋತ್ಸಾಹ ಹಾಗೂ ಬೆಂಬಲಗಳನ್ನು ನೀಡಿದ್ದಾರೆ. ಅವರ ಉತ್ತಮ ಪ್ರತಿಕ್ರಿಯೆಯನ್ನು ಸ್ಮರಿಸುತ್ತ, ಕೃತಜ್ಞರಾಗಿ 6ನೆಯ ಆವೃತ್ತಿಗೆ ಈ ಮೂಲಕ ಸಂಶೋಧನ ಲೇಖನಗಳನ್ನು ಆಹ್ವಾನಿಸಲಾಗಿದೆ. ಲೇಖಕರಿಗೆ 2 ಪ್ರಕಟಿತ ಪುಸ್ತಿಕೆಗಳನ್ನು ನೀಡಲಾಗುವುದು.
ಪ್ರತಿ ಲೇಖನದ ಪ್ರಕಟಣೆಗೆ ರೂ.850/- ನಿಗದಿಪಡಿಸಲಾಗಿದೆ.
ಲೇಖನ ಕಳುಹಿಸಲು ಕೊನೆಯ ದಿನಾಂಕ: ಮಾರ್ಚ್ 10, 2019.
ಲೇಖನ ಕಳುಹಿಸಬೇಕಾದ ಈ-ಮೇಲ್ ವಿಳಾಸ: jnbresearch99@gmail.com

1. ಲೇಖನವು ಕನ್ನಡ ಭಾಷೆಯಲ್ಲಿಯೇ ಇರಲಿ.
2. ಲೇಖನಗಳು ನುಡಿ ತಂತ್ರಾಂಶವನ್ನು ಬಳಸಿ, ಒiಛಿಡಿosoಜಿಣ Woಡಿಜ ಅಥವಾ Pಚಿgemಚಿಞeಡಿ ನಲ್ಲಿರಬೇಕು.
3. ಕನ್ನಡ ಸಾಹಿತ್ಯದ ಲೇಖನಗಳು 800 ಪದಗಳು ಹಾಗೂ ಸಮಾಜ ವಿಜ್ಞಾನ ವಿಷಯದ ಲೇಖನಗಳು 1000 ಪದಗಳನ್ನು ಮೀರದಂತಿರಬೇಕು.
4. ಲೇಖನಗಳು ಕಡ್ಡಾಯವಾಗಿ ಅಡಿಟಿಪ್ಪಣಿ, ಕೊನೆಟಿಪ್ಪಣಿ, ಇಲ್ಲವೇ ಪರಾಮರ್ಶನ ಗ್ರಂಥಗಳನ್ನು ಒಳಗೊಂಡಿರಬೇಕು.
5. ಬರಹಗಳು ಸ್ಪಷ್ಟತೆ, ನಿಖರತೆಯಿಂದ ಕೂಡಿದ್ದು, ದೋಷರಹಿತವಾಗಿರಲಿ.
6. ಅಪ್ರಕಟಿತ ಲೇಖನಗಳಾಗಿರಬೇಕು.
7. ಲೇಖಕರು ಸ್ವ-ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಈ-ಮೇಲ್ ವಿಳಾಸಗಳನ್ನು ಕಡ್ಡಾಯವಾಗಿ, ಸ್ಪಷ್ಟವಾಗಿ ಲೇಖನದ ಕೊನೆಯ ಪುಟದಲ್ಲಿ ನಮೂದಿಸರಬೇಕು.

ಸಂಸ್ಥಾಪನೆಯ ಹಿನ್ನೆಲೆ
ವಿಶ್ವಪರಂಪರೆಯ ಸಾಲಿನಲ್ಲಿ ವಿರಾಜಮಾನವಾಗಿರುವ ಭಾರತೀಯ ಪರಂಪರೆಯು ತನ್ನದೇಯಾದ ಛಾಪನ್ನು ಮೂಡಿಸಿದೆ. ಈ ನಿಟ್ಟಿನಲ್ಲಿ ಅನೇಕ ಸಾಂಸ್ಕøತಿಕ ಪ್ರಭಾಮಂಡಲಗಳನ್ನು ನಿರ್ಮಿಸಿಕೊಂಡಿದೆ. ಇಂತಹ ಮನ್ನಣೆಯನ್ನು ಗಳಿಸಿಕೊಂಡಿರುವ ದೇಶದಲ್ಲಿ ಕನ್ನಡ ನಾಡು-ನುಡಿ, ಚಿಂತನೆಗಳೂ ಅಷ್ಟೇ ಪ್ರಧಾನವಾಗಿ ಕಾಣಬರುತ್ತದೆ. ಆ ಹಾದಿಯಲ್ಲಿ ಸಾಹಿತ್ಯ ಸೇವೆಯನ್ನು ಮಾಡಬೇಕೆಂಬ ಸದುದ್ದೇಶದಿಂದ ‘ಇಂದಣೀಲಮಣಿಂ ಪ್ರಕಾಶನ’ ಜನ್ಮತಳೆಯಿತು. ‘ಇಂದಣೀಲಂ’ ಈ ಪದವು ಪ್ರಾಕೃತ ಮೂಲದ್ದಾಗಿದೆ. ಇದನ್ನು ಶ್ರೀಮದ್ ಭಗವದ್ ಕುಂದಕುಂದಾಚಾರ್ಯ ವಿರಚಿತ ‘ಪ್ರವಚನಸಾರ’ ಕೃತಿಯ ಮೊದಲ ಭಾಗವಾದ ಜ್ಞಾನತತ್ತ್ವ-ಪ್ರಜ್ಞಾಪನದಲ್ಲಿನ ಮೂವತ್ತನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ. ‘ಇಂದಣೀಲ’ ಇದರ ಸಂಸ್ಕøತ ರೂಪ ‘ಇಂದ್ರನೀಲ’ ಎಂದಾಗುತ್ತದೆ. ವಜ್ರ, ವೈಡೂರ್ಯ, ಗೋಮೇದಕ, ಪುಷ್ಯರಾಗ, ನೀಲ, ಮರಕತ, ಮಾಣಿಕ್ಯ, ಹವಳ, ಮುತ್ತು ಈ ನವರತ್ನಗಳಲ್ಲಿ ನೀಲಮಣಿಯು ಒಂದು ಪ್ರಮುಖವಾದುದು. ಸಾಮಾನ್ಯವಾಗಿ ಇದನ್ನು ‘ಇಂದ್ರನೀಲ’, ‘ಇಂದ್ರನೀಲಮಣಿ’ ಎಂತಲೂ ಕರೆಯಲಾಗುತ್ತದೆ.

ಆದಿಕವಿ ಪಂಪನು ತನ್ನ ಆದಿಪುರಾಣ ಗ್ರಂಥದಲ್ಲಿ “ಮೂರು ಬಣ್ಣಂ ಪೆಣೆದೊದವೆ ಗವಾಕ್ಷಸ್ಥ ಇಂದುಕಾಂತ ಇಂದ್ರನೀಲ ಅರುಣಮಣಿಕಿರಣಂಗಳ್ ಪೊಣ್ಮುವಂತಾದುವಾಗಳ್” ಎಂದು ವರ್ಣಿಸುತ್ತಾನೆ. ಹಾಗೆಯೇ ಷಡಕ್ಷರದೇವನು “ಇಂದ್ರಮಣೀ ಆಳ್ವರೀ ಬಜ್ಜರ ಗೊತ್ತಳಂಗಳ ಅಗ್ಗಳಿಸಿರೆ” ಎಂದು ತನ್ನ ‘ಶಬರಶಂಕರ ವಿಳಾಸ’ ಕೃತಿಯಲ್ಲಿ ಹೇಳುತ್ತಾನೆ. ಹೀಗಾಗಿ ಹೊಳಪುಳದ್ದು, ಪ್ರಕಾಶಮಾನವಾದುದು, ಶೋಭಿಸುವಂತಹದ್ದು ಎಂಬ ಅರ್ಥಗಳೊಂದಿಗೆ ನಮ್ಮ ಪ್ರಕಾಶನವು ಪ್ರಕಾಶಿಸಲಿ ಎಂಬ ಉದ್ದೇಶದೊಂದಿಗೆ ‘ಇಂದಣೀಲಮಣಿಂ’ ಎಂಬ ನಾಮಾಂಕಿತವನ್ನು ಇರಿಸಲಾಗಿದೆ. ಸಾಹಿತ್ಯ ಸೇವೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ‘ಅಂತರ್ವಾಣಿ’ ಪುಸ್ತಿಕೆಯ ‘6ನೆಯ ಸಂಪುಟ’ವನ್ನು ಹೊರತರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಮೂಲಕ ಕನ್ನಡಮ್ಮನ ಸೇವೆಗೆ ‘ಇಂದಣೀಲಮಣಿಂ ಪ್ರಕಾಶನ’ವು ಸದಾಸಿದ್ಧವಾಗಿದೆ ಎಂದು ಹೇಳಲು ಸಂತೋಷವೆನಿಸುತ್ತದೆ.

ನೇಮಿನಾಥ ತಪಕೀರೆ,
ಪ್ರಕಾಶಕರು,
ಇಂದಣೀಲಮಣಿಂ ಪ್ರಕಾಶನ, ಚಿಕ್ಕೋಡಿ.


 

You can leave a response, or trackback from your own site.

Leave a Reply