ಸೋಲೇ ಗೆಲುವಿನ ಮೆಟ್ಟಿಲು: ವೆಂಕಟೇಶ ಚಾಗಿ

ಜೀವನದಲ್ಲಿ ನಾವು ಒಂದಲ್ಲಾ ಒಂದು ಸ್ಪರ್ಧೆಯನ್ನು ಎದುರಿಸುತ್ತಲೇ ಇರುತ್ತೇವೆ. ಕೆಲವೊಂದು ತುಂಬಾ ಮಹತ್ವದ್ದಾಗಿರುವ ಸ್ಪರ್ಧೆಗಳು ನಮ್ಮ ಗಮನಕ್ಕೆ ಬರುತ್ತವೆ. ಕೆಲವೊಂದು ಸ್ಪರ್ಧೆಗಳಲ್ಲಿ ನಾವು ಸ್ಪರ್ಧಿಸಿದ್ದರೂ ನಮ್ಮ ಗಮನಕ್ಕೆ ಬರುವುದಿಲ್ಲ.ಮಹತ್ವ ಪಡೆದಂತಹ ಸ್ಪರ್ಧೆ ಗಳಲ್ಲಿ ನಾವು ಗೆದ್ದರೆ ತುಂಬಾ ಸಂತೋಷಪಡುತ್ತೇವೆ. ಜಗತ್ತನ್ನೇ ಗೆದ್ದೆವು ಎನ್ನುವ ಖುಷಿಯಲ್ಲಿ ಮುಳುಗಿಬಿಡುತ್ತೇವೆ. ನಮ್ಮ ಎಲ್ಲಾ ಸ್ನೇಹಿತರು ಬಂಧು ಬಾಂಧವರೊಂದಿಗೆ ಆ ಖುಷಿ ಯನ್ನು ಹಂಚಿಕೊಂಡು ನಾವೂ ಸಂತೋಷ ಪಡುತ್ತೇವೆ. ಅದೇ ಸೋಲಾದರೆ ?! ನಮ್ಮವರ ಎದುರು ಅವಮಾನವಾಯಿತಲ್ಲಾ ಎಂದು ಕೊರಗುತ್ತೇವೆ. ದುಃಖದಲ್ಲಿ ಮುಳುಗಿಬಿಡುತ್ತೇವೆ. ಜೀವನದಲ್ಲಿ ಏನೂ ಇಲ್ಲ ಎಂಬ ಭಾವನೆ ತಳೆಯುತ್ತೇವೆ. ಕೆಲವರು ಬದುಕನ್ನೇ ಕೊನೆಗಾಣಿಸುತ್ತಾರೆ.

ಇದು ಸ್ಪರ್ಧಾ ಜಗತ್ತು ಪ್ರತಿ ವಿಷಯದಲ್ಲೂ ನಾವು ಸ್ಪರ್ಧೆ ಎದುರಿಸುತ್ತೇವೆ. ಗಮನಕ್ಕೆ ಬರದ ಸ್ಪರ್ಧೆ ಗಳಲ್ಲಿ ನಾವು ಸೋತರೂ ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ. ಅಂದಹಾಗೇ ಸ್ಪರ್ಧೆ ಯಲ್ಲಿ ಸೋತಾಗ ಜಿಗುಪ್ಸೆ ಹೊಂದುವುದು ಸರಿಯೆ ? ಅದೇ ಕೊನೆಯೆ? ಇಲ್ಲ ..ಆದರೂ ನಾವು ಮಾನಸಿಕ ವಾಗಿ ಕೊರಗುತ್ತೇವೆ.

ಸೋಲಿನ ಅರ್ಥ ಏನು ಎಂಬುದನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕಾಗಿದೆ. ಸೋಲು ಎಂಬುದು ಸಾಮರ್ಥ್ಯ ಗಳ ಕೊರತೆ ಅಲ್ಲವೇ. ಒಂದು ನಿಗದಿತ ಸ್ಪರ್ಧೆ ಯಲ್ಲಿ ನಾವು ಸೋತಿದ್ದೇವೆ ಅಂದರೆ ಅದರಲ್ಲಿ ನಮಗೆ ಸಾಮರ್ಥ್ಯ ಗಳ ಕೊರತೆ ಇದೆ ಎಂದು ಅರ್ಥವಲ್ಲವೆ. ಆ ಸಾಮರ್ಥ್ಯ ಗಳನ್ನು ಗಳಿಸಿದಾಗ ನಾವೂ ಗೆಲ್ಲಬಹುದು ಅಲ್ಲವೇ.?! ಸೋಲು ಎಂಬುದನ್ನು ನಾವೇಕೆ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಬಾರದು.? ನಾನಿಂದು ಸೋತಿರುವೆ ಎಂದರೆ ಆ ಸ್ಪರ್ಧೆ ಯಲ್ಲಿನ ಸಾಮರ್ಥ್ಯ ಗಳು ನನಗೆ ಇನ್ನೂ ಕರಗತವಾಗಬೇಕಿದೆ ಎಂದು ತಿಳಿದರಾಯಿತು.

ಆಗ ನಮಗೆ ಸೋಲು ಎಂಬ ಭಾವನೆ ಬರುವುದಿಲ್ಲ. ಸೋಲು ಅನುಭವಿಸಿದಷ್ಟು ನಾವು ಮಾಡಿಕೊಳ್ಳಬೇಕಾದ ಸಾಮರ್ಥ್ಯಗಳ ಅರಿವು ನಮಗಾಗುತ್ತದೆ. ಆಗ ನಮಗರಿವು ಇಲ್ಲದ ಹಾಗೇ ನಾವು ಗೆಲ್ಲುತ್ತಾ ಹೋಗುತ್ತೇವೆ. ಅದೇ ನಾವು ಗೆದ್ದಿದ್ದೇವೆ ಅಂದರೆ ನಮಗೆಲ್ಲಾ ಸಾಮರ್ಥ್ಯ ಗಳು ಕರಗತವಾಗಿವೆ ಎಂದು ಅರ್ಥವಲ್ಲ. ಆ ಹಂತದಲ್ಲಿ , ಆ ಸನ್ನಿವೇಶದಲ್ಲಿ ಅಷ್ಟೇ ನಮಗೆ ಗೆಲುವಾಗಿರುತ್ತದೆ. ಆದರೆ ನಮಗಿಂತಲೂ ಹೆಚ್ಚಿನ ಸಾಮರ್ಥ್ಯ ದವರು ಬಂದಾಗ ನಾವು ಖಂಡಿತ ಸೋಲುತ್ತೇವೆ. ಹಾಗಾಗಿ ಸೋಲನ್ನು ನಾವು ಕೊನೆ ಎಂದು ಪರಿಗಣಿಸದೇ ಅದೊಂದು ಕಲಿಕೆಯ ಮೆಟ್ಟಿಲು ಎಂದು ನಾವೇಕೆ ಅಂದುಕೊಳ್ಳಬಾರದು ? ಸೋಲನ್ನು ಮೆಟ್ಟಿ ನಿಲ್ಲಲು ಸಾಮರ್ಥ್ಯ ಗಳನ್ನು ಏಕೆ ಬೆಳೆಸಿಕೊಳ್ಳಬಾರದು ? ಅಲ್ಲವೆ.
ಸೋಲೆ ಗೆಲುವಿನ ಮೆಟ್ಟಿಲಾಗುವುದು ಖಂಡಿತ.

-ವೆಂಕಟೇಶ ಚಾಗಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಜುಜಾರೆ ಲಕ್ಷ್ಮಣ್ ರಾವ್
ಜುಜಾರೆ ಲಕ್ಷ್ಮಣ್ ರಾವ್
5 years ago

ಸೋಲು ನಮಗೆ ಶಾಶ್ವತವಲ್ಲ ಸೋಲು ಎಂಬುವುದು ನಮ್ಮ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ ನಾನೇಕೆ ಸೋತಿದ್ದೇನೆ ನಾನು ಸೋಲೊದಿಲ್ಲ ಎಂಬುವುದು ನಿಜಕ್ಕೂ ನಿಜವಾಗಿಯೂ ಈ ಉತ್ತರ ಮಾತ್ರ ನೀಡಲು ಯಾರಿಂದಲೂ ಸಾಧ್ಯವಿಲ್ಲ ಸಮಯ ಎಲ್ಲವನ್ನು ಎಲ್ಲರನ್ನು ಸೋಲಿಸುತ್ತದೆ ಆದರೆ ಎಲ್ಲಿ ನಾವು ಸೋತಿದ್ದೇವೆ ಎನ್ನುವುದು ಅರ್ಥಿಸಿದಾಗ ಮಾತ್ರ ಆ ಸೋತ ಸನ್ನಿವೇಶ ಮತ್ತೆ ಸೋಲಿಗೆ ದಾರಿ ಮಾಡಿಕೊಡದು ಹಾಗಾಗಿ ಸೋಲೇ ಗೆಲುವಿನ ಮೆಟ್ಟಲು ಎನ್ನುತ್ತಾರೆ ನಮ್ಮ ಹಿರಿಯರು . ಸೋತಾಗ ಹತಾಶಯರಾಗದೆ ಗೆದ್ದಾಗ ತುಂಬಾ ಸಂತೋಷ ಪಡದೆ ಎರಡನ್ನು ಜೀವನದಲ್ಲಿ ಸಮವಾಗಿ ಸ್ವೀಕರಿಸೋಣ . ಸೋಲು ಜೀವನದಲ್ಲಿ ಸಹಜ ಆದರೆ ಸೋಲಿನಿಂದ ಕಲಿತ ಜೀವನದ ಪಾಠ ಮಾತ್ರ ಅದೊಂದು ದಿವ್ಯ ಅನುಭವವೇ ಸರಿ . ಸೋಲಿನ ಮೂಲಕ ಜೀವನದ ಗೆಲುವಿಗೆ ಒಟ್ಟು ಕೊಟ್ಟು ಸೋಲಿನ ಸೂಕ್ಷ್ಮತೆಯನ್ನು ಕಲಿತು ನಮ್ಮ ಜೀವನದ ಗೆಲುವಿನ ಮೆಟ್ಟಿಲೊಂದಿಗೆ ಮುನ್ನಡೆಸೋಣ . ಸೋತಾಗ ದೈರ್ಯವಾಗಿ ಆ ಸೋಲನ್ನು ಸಮರ್ಥತೆಯ ಮೂಲಕ ಗೆಲುವಿಗಾಗಿ ಪ್ರಯತ್ನಿಸೋಣ ಗೆದ್ದಾಗ ಸೋಲು ಎಟುಕದಂತೆ ಸೂಕ್ಷ್ಮತೆಯಿಂದ ಎದುರಿಸೋಣ . ಒಟ್ಟಲ್ಲಿ ಜೀವನದಲ್ಲಿ ಸಮ ಬೆಸದಂತೆ ಎರಡನ್ನು ಸ್ವೀಕರಿಸೋಣ
” ಸೋಲು ಗೆಲುವಿನ ಮೆಟ್ಟಿಲು ” ನಿಮ್ಮ ಲೇಖನ ಸ್ಪೋರ್ತಿದಾಯಕವಾಗಿದೆ .

ಜುಜಾರೆ ಲಕ್ಷ್ಮಣ್ ರಾವ್ ( ಬಳ್ಳಾರಿ )

1
0
Would love your thoughts, please comment.x
()
x