ಭವಿಷ್ಯದ ಭರವಸೆಯ ಕಥೆಗಾರ ತಿರುಪತಿ ಭಂಗಿ: ಮಹಾದೇವ ಎಸ್, ಪಾಟೀಲ

1 
ಬಾಗಲಕೋಟೆ ನಗರದಗೌರಿ ಪ್ರಕಾಶನದಿಂದ ಲೋಕಾರ್ಪಣೆಗೊಂಡ"ಕೈರೊಟ್ಟಿ"ಕಥಾಸಂಕಲನ,  ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆ ಪ್ರಕಾರಸಫಲ ಸಮೃದ್ಧತೆಯಿಂದ, ಉಳಿದೆಲ್ಲ ಪ್ರಕಾರಗಳನ್ನು ಮೀರಿ ನಿಂತು ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕುತ್ತಿದೆ ಎನ್ನುವ: ಶ್ರೀಇಂದ್ರಕುಮಾರ ಎಚ್,ಬಿ ದಾವಣಗೆರೆ ರವರು "ಕೈರೊಟ್ಟಿ" ಕಥಾಸಂಕಲನಕ್ಕೆ ಮುನ್ನುಡಿ  ಬರೆಯುತ್ತಾ ಹೇಳಿರುವಮಾತು' ತಿರುಪತಿ ಭಂಗಿಯಂತ ಇನ್ನು ಅನೇಕ ಹೋಸ ಕಥೆಗಾರರಿಗೆ ಬೆನ್ತಟ್ಟಿದಂತಾಗಿದೆ'. ಬಾಗಲಕೋಟೆ ಜಿಲ್ಲೆಯ ದೇವನಾಳದ ತಿರುಪತಿ ಭಂಗಿಯವರು ರ್ಬಾಲ್ಯದಲ್ಲಿಯೇಹೆತ್ತವರ ಕಳೆದುಕೊಂಡುಅಜ್ಜ- ಅಜ್ಜಿಯರ ಆಶ್ರಯದಲ್ಲಿ ಬೆಳೆಯುವ ಅನಿವಾರ್ಯದೊಂದಿಗೆ, ಕೂಲಿ- ನಾಲಿ ಮಾಡುತ್ತಲೇ ಓದುವ ಮೂಲಕ; ಅಜ್ಜ- ಅಜ್ಜಿಯರನ್ನು ಕಳೆದುಕೊಂಡು, ತಂಗಿಯನ್ನು ಓದಿಸಿ- ಮದುವೆ ಮಾಡುವ ಜವಬ್ದಾರಿಯೊಂದಿಗೆ ಬೆಳೆದವರು ತಿರುಪತಿ ಭಂಗಿ.

"ಹಸಿದ ಹೊಟ್ಟೆ, ಖಾಲಿಜೇಬು, ಕೆಲಸವಿಲ್ಲದ ಕೈ ಮನುಷ್ಯನಿಗೆ ಹೊಸ ಪಾಠ ಕಲಿಸುತ್ತದೆ ಎನ್ನುವುದಕ್ಕೆ ತಿರುಪತಿ ಭಂಗಿಯವರೇ ಸಾಕ್ಷೀ. ಬಡತನ ಬೇಗೆಯ ನಡುವೆಯೂತಮ್ಮೊಳಗಿನ ನೋವು, ನಲಿವು,ವೇದನೆ, ತಳ- ಮಳವನ್ನು ವ್ಯಕ್ತಪಡಿಸುವ ಮೂಲಕ, ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವುದು ಸಂತಸದ ಸಂಗತಿ. ಸಾಹಿತ್ಯ, ಕಲೆ,ಸಂಸ್ಕೃತಿ ಹುಟ್ಟುವುದೆ ಸೃಜನಶೀಲ ಮನದೊಳಗೆ. ಅದರಂತೆ ' ಹೃದಯರಾಗ','ಮನಸ್ಸು ಕೊಟ್ಟವಳು,''ಅವ್ವ',' ಕವಳೆಗಣ್ಣಿನ ಹುಡಗಿ' ಕವನ ಸಂಕನಲಗಳು, ' ಜಾತಿ ಕುಲಿಮ್ಯಾಗ' ಕಥಾಸಂಕಲನದ ನಂತರ ಹುಟ್ಟಿರುವುದೆ " ಕೈರೊಟ್ಟಿ".

Thirupathi Bhangi

ಯಾವುದೇ ಕೆಲಸ ಮಾಡುತ್ತ ಕಲಿಯುವುದಾದರೆ, ಸರಳವಾಗಿ ನೋಡಿ- ಮಾಡಿ ಕಲಿಯಬಹುದು. ಆದರೆ ಕಲೆ,ಸಾಹಿತ್ಯ, ಸಂಗೀತ ನೋಡಿದೊಡೆ- ಮಾಡಿದೋಡೆ ಬರೆಯುವುದು, ಚಿತ್ರಿಸುವುದು, ನುಡಿಸುವುದು ಅಷ್ಟು ಸುಲಭವಲ್ಲ. ಒಬ್ಬ ಸಾಹಿತಿ ಗಟ್ಟಿಯಾಗಿ ನೆಲೆಗೊಳ್ಳಬೇಕಾದರೆ ಶ್ರದ್ಧೆ, ಶ್ರಮ, ಸೃಜನಶೀಲತೆ ಅತಿ ಅವಶ್ಯವಾಗಿರತ್ತದೆ. ಆ ನಿಟ್ಟಿನಲ್ಲಿ " ಕೈರೊಟ್ಟಿ" ಕಥಾಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳನ್ನು ಬಾಗಲಕೋಟೆ ನೆಲದ ಭಾಷೆಯಲ್ಲಿ ಕಥೆ ಕಟ್ಟಿಕೊಡುವ ಮೂಲಕ ರೊಟ್ಟಿಯ ಬುತ್ತಿಯನ್ನು ಓದುಗರ ಮುಂದೆ ಬಿಚ್ಚಿಟ್ಟಿದ್ದಾರೆ.
      
ಕಥೆಗಾರ ಭಂಗಿಯವರು ' ಕೈರೊಟ್ಟಿ' ಕತೆಯೋಳಗೆ ಕೆರಿಯ ಅಜ್ಜಿಯ ಕೈರೊಟ್ಟಿ ತಿಂದಿದ್ದಕ್ಕೆ, ಅಜ್ಜಿಯ ಮೊಮ್ಮಗನನ್ನು ಕಂಬಕ್ಕೆ ಕಟ್ಟಿ ಬಾರ್ಕೊಲ ಏಟ ಹಾಕಿದ್ದನ್ನು ಕೇಳಿದ ಅಜ್ಜಿ ಓಡೋಡಿ ಬರುವದರಲ್ಲಿ ಗುಡಿ ಮುಂದ್ಲ ಬೊರಗಲ್ಲಿಗೆ ಏಡವಿ ಬಿದ್ದು ಕೊನೆ ಉಸಿರೆಳದ ಅಜ್ಜಿಯನ್ನು ನೆನೆಯತ್ತ ನಿಂತ ಮೊಮ್ಮಗ , ಇಲ್ಲಿ ಮೇಲು- ಕೀಳು ಧೋರಣೆಯನ್ನು ವ್ಯಕ್ತಪಡಿಸಿದ್ದಾರೆ.

'ಚಾಕ್ರಿ' ಕಥೆಯೊಳಗೆ ದ್ಯಾಮವ್ವ ದೇವಿ ಪೂಜಾರಿಯಾಗಿ ಬದುಕು ಸವೇಸಿದ ಅಪ್ಪನ ಸಾವು, ಒಮ್ಮಲೇ ಪರಮೂನ ಬದುಕು ಭಿನ್ನ ದಿಕ್ಕಿಗೆ ತಿರುಗಿಸಿದೆ. ಅತಿವೃಷ್ಟಿ- ಅನಾವೃಷ್ಟಿಯಂತಹ  ಪ್ರಕೃತಿವಿಕೋಪ ಹಿನ್ನಲೆಯಲ್ಲಿ ' ಕೃಷ್ಣೆಹರಿದಳು' ಕಥೆಯಲ್ಲಿ ಮೂಡಿಬಂದಿದೆ. ಗೌಡರ ಮನಿ ಆಳು ಕಿವುಡ ರಂಗ, ದುಂಡವ್ವನ ಮಗಳು ನೀಲಿ ಇಬ್ಬರೊಳಗೆ ಮಡುಗಟ್ಟಿನಿಂತ ಪ್ರೀತಿ ಕೊನೆಗೆ ಮೇಲವರ್ಗದ ದಬ್ಬಾಳಿಕೆಯಿಂದ ಜೀವ ಕೊಟ್ಟ ರಂಗ, ನೆನಪುಗಳೇ ದೇಹದ ಹಸಿವು ತಿರಿಸುವಂತಾದ ನೀಲಿಯ ನನಸಾಗದ ಕನಸು.

"ಮುತ್ತು ಕೊಟ್ಟವಳು ಬಂದಾಗ, ತತ್ತು ಕೊಟ್ಟವಳು ಮರಿಬ್ಯಾಡ" ಎನ್ನುವಂತೆ ಪ್ರೀತಿಸಿ ಮದುವೆಯಾಗಿ ನಗರ ಸೇರಿದ ಡಾ.ಗುರುಮೂರ್ತಿಯವರು 'ಭಜನಾಪದ' ಗಳ ಮೂಲಕ ಮೌಲ್ಯಗಳ ಅಧ:ಪತನವನ್ನು ತೋರಿಸಿದ್ದಾರೆ. ' ಸಾವಿಗೂ ನಾಕಾಣೆ ಕಿಮ್ಮತ್ತು', ವ್ಯವಸ್ಥೆಯ ಅನಿಷ್ಟ ಪದ್ದತಿಯ ಚಕ್ರವೂವ್ಯದಲ್ಲಿ ಸಿಕ್ಕ ಹನುಮ ತನ್ನಜ್ಜನನ್ನು ಕಳೆದುಕೊಂಡ ನೋವು, ನೋವಾಗಿಯೇ ಉಳಿಯಿತು. ಶಿಕ್ಷಕನಲ್ಲಿರುವ ಅನುಕಂಪ, ವಿದ್ಯಾರ್ಥಿಗಳಲ್ಲಿರುವ ಅಸಡ್ಡೆಯ ನಡುವೆ, ಹೆಣದುಕೊಂಡ 'ಪಾಪಿ ಹೆಣದ ಸುತ್ತ'ಕಥೆಯು ಮಾರ್ಮಿಕವಾಗಿ ಮೂಡಿಬಂದಿದೆ.

'ನಾನು ಕಲಿಯದಿದ್ದರೂ, ನನ್ನ ಮಗನಾದರೂ ನಾಕಕ್ಷರ ಕಲಿಯಲೆಂದು ಹಸರಿ- ಮುಸರಿ ತಿಕ್ಕಿ ಮಗನನ್ನು ಶ್ರೀಮಂತ ಶಾಲೆಯಲ್ಲಿ ಓದುವ ಕನಸನ್ನು ಶಾಲೆಯ ಪ್ಯೂವನ್ ತನ್ನ ಸ್ವಾರ್ಥಕ್ಕೆ ಬಲಿಯಾದ ಮಗು ' ವಡೆದ ಚೂರು ಮುರಿದ ಕನಸು' ತುಂಬಾ ವೇದನೆಯ ಸಂಗತಿ. ಅಮಾಯಕ ದಂಪತಿಗಳ ಮೇಲೆ ದೌರ್ಜನ್ಯ ಮಾಡಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ; ಕೋಲೆ ಮಾಡಿದ ಜನರ ಸೇಡಿಗಾಗಿ ಹುಚ್ಚನಾಗಿ  ಅತ್ಯಾಚಾರಿಗಳನ್ನು ಕೊಲೆಮಾಡುವ ಮೂಲಕ ದೇವ್ವ ನುಂಗಿದಂತೆ ತೋರಿಸಿದ " ಅಯ್ಯಯೋ…ದೇವ್ವ!!" ಕಥೆಯು ತುಂಬಾ ಚಿಂತಾಜನಕವಾಗಿದೆ. 

ಅಣ್ಣ ತಮ್ಮಂದಿರು ಭೂಮಿಯ ಪಾಲಿಗಾಗಿ ಜಗಳವಾಡಿ ಪದ್ದಪ್ಪನ ಜೀವ ತೆಗೆದ ಕಥೆ " ಪಾಲು" ಸಮಾಜದ ಮುಂದೆ ಮಾದರಿಯಾಗಿ ನಿಲ್ಲುವಂತಿದೆ. ಊರಾಗಿನ ಎಲ್ಲಾ ಮನೆಗಳ ಸುಣ್ಣ ಬಡಿದು ಜೀವನ ಸಾಗಿಸೂ ಹುಚ್ಚ ಯಮನ್ಯಾ, ಹೆಂಡತಿಯ ಮಾತಿಗೆ ಬೇಲೆ ಕೋಡದೆ; ಗೌಡರ ಮಾತಿಗೆ ತುಟಿ ಎರಡು ಮಾಡದೆ, ಗೌಡರ ದೌರ್ಜನಕ್ಕೆ ಅಂಜಿ, ಗೌಡರ ಮನೆ ಸುಣ್ಣ ಬಡಿಯುವಾಗ ಬಿದ್ದುಸತ್ತ ಅಮಾಯಕ " ಸುಣ್ಣದ ಯಮುನ್ಯಾ" ಕಥೆ ಕಳ್ಳು ಕರಗಿಸುವಂತಿದೆ. ಕೊನೆಯದಾಗಿ, ' ಮಾತಿನಕಟ್ಟೆ' ಕಥೆಯೋಳಗೆ ಅಡಗಿರುವ ಮೂಕ ಫಕೀರಪ್ಪ, ಅವನ ಹೆಂಡತಿ, ದುಂಡಿ ಮತ್ತು ಊರಿನ ಪ್ರಭಾವಿ ವ್ಯಕ್ತಿ ಚಂದ್ರೇಗೌಡರ ನಡುವಿನ ವಿವಿಧ ರೀತಿಯ ತಳ- ಮಳಗಳನ್ನು ಚಿತ್ರಿಸುವ ಮಾತಿನ ಕಟ್ಟೆ ಕಥೆಯು, ಊರಿನ ಕಥೆಯನ್ನು ನಮ್ಮ ಮುಂದೆ ನಿಲ್ಲುತ್ತದೆ. 
  
ಒಟ್ಟಾರೆಯಾಗಿ ಇಲ್ಲಿ ಕಥೆಗಾರ ತಿರುಪತಿ ಭಂಗಿಯವರು ತಮ್ಮ ಸುತ್ತ- ಮುತ್ತಲ್ಲಿನ ಪ್ರಪಂಚವನ್ನು ವಿಭಿನ್ನವಾಗಿ ಕಾಣುವ ಮೂಲಕ, ತಮ್ಮ ಒಡಲೋಳಗಿನ ಹತ್ತು- ಹಲವು ಸಂಕಟಗಳನ್ನು ಬರೆಹದ ಮೂಲಕ ಬಿಚ್ಚಿಟ್ಟು, ಮನಸ್ಸು ಹಗುರ ಮಾಡಿಕೊಂಡಿರವುದು ಇಲ್ಲಿ ಕಂಡು ಬರುತ್ತದೆ. ಬೆನ್ನುಡಿ ಬರೆಯುವ ಮೂಲಕ ಅನಸಿಕೆ ವ್ಯಕ್ತಪಡಿಸಿದ: ನಾಡಿನ ಖ್ಯಾತ ಕಥೆಗಾರರು,ಕಾದಂಬರಿಕಾರರಾದ ಶ್ರೀಕುಂವೀರವರು, ಕೈರೊಟ್ಟಿ ತುತ್ತು ಮಾಡುವ ಮೂಲಕ, ನೋಡಿದೊಡನೆ ಮುಖಚಹರೆ, ಓದಿದೊಡನೆ ಹೃದಯವನ್ನಾವರಿಸುವ ಕಥೆಗಾರ! ಈ ಸಲ್ಲಕ್ಷಣಗಳು ಇರವುದು ಬಾಗಲಕೋಟೆಯ ಯುವ ಬರಹಗಾರಕಥೆಗಳನ್ನು ಓದಿದೊಡನೆ, ತಿರುಪತಿ ಭಂಗಿ ಸಮಾಜಮುಖಿ ಹಾಗೂಭರವಸೆಯ ಕಥೆಗಾರ ಅನಿಸಿತು ಎನ್ನುವ ಹೇಳಿಕೆ ಭಂಗಿ ಹೊಸ ಭರವಸೆ ಮೂಡಿಸಿದ್ದಾರೆ.  ಇನ್ನೂ ಹೆಚ್ವು- ಹೆಚ್ಚು ಕಥೆ ಕಟ್ಟುವ ಮೂಲಕ ಕೃತಿ ಹೊರತರಲಿ, ಭರವಸೆಯ ಕಥೆಗಾರರಾಗಲೆಂದು ಹಾರೈಸೋಣ.
-ಮಹಾದೇವ ಎಸ್, ಪಾಟೀಲ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ತಿರುಪತಿ ಭಂಗಿ
ತಿರುಪತಿ ಭಂಗಿ
7 years ago

ಧನ್ಯವಾದಗಳು  ಮಾಹಾದೇವ ಸರ್ 

1
0
Would love your thoughts, please comment.x
()
x