ಮುರಿದ ಪ್ರೀತಿಯ ಕೊಂಡಿ : ನಾಗರಾಜ ವಿ. ಟಿ.

nagaraj-telkar

ದಿನಚರಿಯಂತೆ facebook ನಲ್ಲಿ ಅವಳ profile ಚೆಕ್ ಮಾಡುತಿದ್ದ ನಾನು ಸಿಡಿಲು ಬಡೆದವನಂತೆ ಇದು ನಿಜವೋ..ಅಥವಾ ದೃಷ್ಟಿ ಭ್ರಮೆಯೋ ಎಂದು ದಿಜ್ಞೂಢನಾಗಿ ಮತ್ತೊಮ್ಮೆ ಮೋಬೈಲ್ ನ  ಸ್ಕ್ರೀನ್ ದಿಟ್ಟಿಸಿ ನೋಡಿದೆ.  ಹೌದು ಇದು ಕೆಟ್ಟ ಕನಸು ಅಲ್ಲ..ಕನಸ್ಸಾಗಿದ್ದರೆ ಪಕ್ಕದ ಸೀಟಲ್ಲಿ ಕುಳಿತವನ ಬೇವರಿನ ವಾಸನೆ ನನ್ನ ಮೂಗಿಗೆ ಬಡಿಯುತಿರಲಿಲ್ಲ. ಛೇ..!! ಅವಳು ನನ್ನನು unfriend ಮಾಡುವಷ್ಟು ನಾ ಅವಳಿಗೆ ಬೇಡ ವಾಗಿ ಹೋದನೆ? ಅವಳು ಮೊದ ಮೊದಲು ಪರಿಚಯವಾದಾಗ ಆವಳು online ಬರುವುದನ್ನು ಬಕ ಪಕ್ಷಿಯಂತೆ ಒಂಟಿ ಕಾಲಲ್ಲಿ ನಿಂತು ಕಾಯುತ್ತಿದ್ದ ನೆನಪು ಮರುಕಳಿಸಿತು. ಅವಳು ಮನೆಯಲ್ಲಿ ಮಂಚದ ಮೇಲೆ ಹೊರಳಾಡುತ್ತಾ chat ಮಾಡುತ್ತಿದ್ದರೆ..ನಾನು ಕಾಲಿಡಲು ಸಹ ಜಾಗ ಇಲ್ಲದೆ ಕಿಕ್ಕಿರಿದು ತುಂಬಿದ BMTC ಬಸ್ ನ ಫುಟ್ ಬೋರ್ಡ್ ನಲ್ಲಿ ನೇತಾಡುತ್ತಾ..ಇಲ್ಲವೇ ಮಿಟಿಂಗ್ ನ ಮಧ್ಯೆ ಫುಂಕಾನು ಫುಂಕವಾಗಿ ಒಂದೆ ಸಮನೆ ಬೈಗಳ ಸುರಿಮಳೆ ಗೈಯುತ್ತಿದ್ದ ಬಾಸ್ ನ ಪ್ರಕೋಪ ದಿಂದ ತಪ್ಪಿಸಿಕೊಳುತ್ತಾ..ಕೆಲವೊಮ್ಮೆ ಹೊಟ್ಟೆ ಕೆಟ್ಟಿದೆ ಅಂತ ಅಮ್ಮನಿಗೆ ಸುಳ್ಳು ಹೇಳಿ ರೂಮ್ ನಲ್ಲಿ ಮಲಗಿ ಹೊಟ್ಟೆ ಹಸಿದು ನರಳಾಡುತ್ತಾ chat ಮಾಡುತ್ತಿದ್ದೆ.

ಈ ರೀತಿ ಅವಳು ಹೊಟ್ಟೆ ತುಂಬಿ ವಾಕ್ ಮಾಡುತ್ತಾ chat ಮಾಡಿದಾಗ ನಾ ಹೊಟ್ಟೆ ಹಸಿದು ಕೊಂಡು chat ಮಾಡಿದ ದಿನಗಳೂ, ಅವಳು ನಿದ್ದೆ ಬರುತಿಲ್ಲ ಎಂದಾಗ ಆಫೀಸಿನಿಂದ ಸುಸ್ತಾಗಿ ಬಂದರು ಕಣ್ಣಿಗೆ ಎಣ್ಣೆ ಬಿಟ್ಟು ಕೊಂಡು ತಡ ರಾತ್ರಿಯ ವರೆಗೂ ಅವಳ ಜೊತೆ ಜಾಗರಣೆ ಮಾಡಿ..ನಂತರ ಅದೆಷ್ಟೋ ದೂರದ ಸಂಬಂಧಿಗಳಿಗೆ ವೈಂಕುಠ ದರ್ಶನ ಮಾಡಿಸಿ ರಜೆಪಡೆದು ನಿದ್ದೆ ಮಾಡಿದ ನನ್ನ ಹುಚ್ಚತನದ ಕ್ಷಣಗಳು ನೆನಪಾಗಿ ಕಣ್ಣಲ್ಲಿ ತೇವ ಮೂಡಿ ಕಣ್ಣು ಮಂಜಾಯಿತು…

ಅವಳು ನನ್ನ ಅಗಲಿ ಹೋದರೂ ನಮ್ಮಿಬ್ಬರ ನಡುವಿನ ಕೊನೆಯ ಕೊಂಡಿಯಂತಿದ್ದ ಈ ಸ್ಹೇಹದ ಕಿಂಡಿಯನ್ನು ನಿರ್ದಯದಿಂದ ಮುಚ್ಚಿದ ಅವಳ ನಿರ್ದಾಕ್ಷಿಣ್ಯದ ಸೀಮೆಗೆ,ಇಷ್ಟಾದರೂ ಅವಳಿಗಾಗಿಯೆ ಹಾತೊರೆಯುವ ಈ ಮನಸ್ಸಿನ ಹುಚ್ಚಿನ ಪರಮಾವಧಿಗೆ ಕೊನೆಯಲ್ಲಿ ಎಂಬ ಯಕ್ಷ ಪ್ರಶ್ನೆಯೊಂದಿಗೆ ಮೊಬೈಲ್ ಅನ್ನು switch off ಮಾಡಿ ಜೇಬಲ್ಲಿಯಿರಿಸಿ ಕೊಂಡೆ….!!

2. ಪ್ರೀತಿಯ ಸವಿ ನೆನಪು 

ಚಿಕ್ಕ ಮಗು ಕೊಳಚೆಯಲ್ಲಿ ಆಡಿದ ನಂತರ ಸ್ನಾನಮಾಡಿ ಶುಭ್ರವಾದ ಹಾಗೆ, ನಿನ್ನೆ ಬಿದ್ದ ಮಳೆಯ ರಭಸಕ್ಕೆ ಕೊಳೆ ಯೆಲ್ಲ ಕಿತ್ತೊಗಿ ಲಕಲಕ ಅನ್ನುತ್ತಿರುವ ರಸ್ತೆಗಳು..ವರುಣನಿಗಿಂತ ತಾನೇ ಮೇಲು ಎಂದು ಸಾಧಿಸುವ ಹಠಕ್ಕಿಳಿದು ಎಂದಿಗಿಂತ ಪ್ರಖರವಾಗಿ ಶಾಖ ಉಗುಳುತ್ತಿರುವ ರವಿರಾಜ..ಇವುಗಳೆಲ್ಲದರ ಪರಿವೆಯಿಲ್ಲದೆ ಭಾವಶೂನ್ಯವಾಗಿ ಗೊತ್ತುಗುರಿಯಿಲ್ಲದೆ ನುಗ್ಗುತ್ತಿರುವ ವಾಹನದಟ್ಟಣೆ..ಲಾಲ್ ಬಾಗ್ ಬಳಿಯಿರುವ ಹೋಟೆಲ್ ನಲ್ಲಿ ಕುಳಿತು ಕಾಫಿ ಹೀರುತ್ತಾ ಇವುಗಳೆಲ್ಲವನು ಪದಗಳಲಿ ಸೆರೆಹಿಡಿಯುತ್ತೀರುವ ನನಗೆ..ಇದೇ ರಸ್ತೆಯಲ್ಲಿ ಒಂದು ಕಾಲದಲ್ಲಿ ಮಗುವಿನಂತೆ ನಿನ್ನ ಕೈ ಹಿಡಿದು ನಡೆದ ಸ್ಥಬ್ದಚಿತ್ರಗಳು ಮನದ ಪರದೆಯಲ್ಲಿ ಮೂಡಿ, ಅಳುವುದೊ ನಗುವುದೊ ಎಂಬ ಮನಸ್ಸಿನ ಗೊಂದಲದ ನಡುವೆ…."ಇವ್ ಯಾರೊ ವೇಸ್ಟ ಗಿರಾಕಿ..ಒಂದು ಕಾಫಿ ಕುಡಿದು ಇಲ್ಲೇ ಠಿಕಾಣಿ ಹಾಕಾನ್ವೆ…" ಅಂಥ ಹೋಟೆಲ್ ಮಾಲೀಕನ ಕಣ್ಣೋಟ ಹಿಯಾಳಿಸದಂತಾಗಿ..ನಾಚಿಕೆಯಿಂದ ಬಿಲ್ ಪಾವತಿಸಿ ಹೊರ ಬಂದೆ..!!

ನಾಗರಾಜ ವಿ. ಟಿ. @ ಶ್ರೀಕೇಫೆ, ಲಾಲ್ ಬಾಗ್
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x