Facebook

ತಾಯಿಯ ಮನಸ್ಸು: ಹೆಚ್ ಎಸ್ ಅರುಣ್ ಕುಮಾರ್

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾರು "ಚೈತನ್ಯ ಧಾಮ" ದ ಮುಂದೆ ನಿಂತಿತು. ಅವಳು ಕಾರಿನಿಂದ ಆತುರವಾಗಿ ಇಳಿದಳು. "ಇಂದಿರಾ ನಿಧಾನ" ತಂದೆಯ ಮಾತು ಮುಗಿಯುವ ಮುನ್ನವೇ ಅನಾಥಾಶ್ರಮದಲ್ಲಿ ನುಗ್ಗಿದಳು. ನಾಲ್ಕು ವರ್ಷಗಳಲ್ಲಿ ಅವಳು ತಿರುಗಿದ ಅನಾಥಾಶ್ರಮಗಳು ಏಷ್ಟೊ. ಅಂದು ಒಂದು ಸ್ವಷ್ಟ ಸುಳಿವಿನ ಆಧಾರದ ಮೇಲೆ ತುಂಬು ನಂಬಿಕೆ ಯಿಂದ ಶಿವಮೊಗ್ಗದಿಂದ ಬೆಂಗಳೊರಿಗೆ ಬಂದಿದ್ದಳು. ಶಾರದಮ್ಮ ಅವಳನ್ನು ಕುಳಿತುಕೊಳ್ಳಲು ಹೇಳಿ ಮಕ್ಕಳನ್ನು ಕರೆದು ತರಲು ಆಯಗೆ ಹೇಳಿದಳು. ಅವಳ ಕಣ್ಣು ಬಾಗಿಲ ಕಡೆಗೆ ಇತ್ತು. ಮನಸ್ಸು "ಅಕ್ಷಯ" "ಅಕ್ಷಯ" ಎಂದು ಚೀರುತ್ತಿತ್ತು.

ಇಂದಿರಾ ಓದಿ ಬೆಳೆದಿದ್ದು ಶಿವಮೊಗ್ಗದಲ್ಲಿ. ಮೈಸೂರಲ್ಲಿ ಗೆಳತಿಯ ಮುದುವೆಗೆ ಹೋದಾಗ ಹರೀಶ್ ಪರಿಚಯವಾಯಿತು. ಹರೀಶ್ ನ ಸ್ನೇಹ ಮಾತುಗಳಿಗೆ ಮಾರು ಹೋಗಿ ಪ್ರೀತಿಯ ಸೆಳತದಲ್ಲಿ ಬಿದ್ದಳು. ಮನೆಯಲ್ಲಿ ಒಪ್ಪದ ಕಾರಣ ಮನೆಬಿಟ್ಟು ಗೆಳತಿಯ ಸಹಾಯದಿಂದ ಹರೀಶ್ ನ ಮದುವೆಯಾದಳು. ಹರೀಶ್ ರಸಿಕ ಮಾತುಗಾರ. ತಂದೆ ತಾಯಿಯ ಪ್ರೀತಿ ಅವನ ಒಡನಾಟದಲ್ಲಿ ಮರೆತಳು ಬದುಕು ಸ್ವರ್ಗಮಯವಾಗಿತ್ತು. "ಅಕ್ಷಯ" ಅವರ ಬಾಳಿನಲ್ಲಿ ಬೆಳಕು ತಂದ.

ಅಂದು ಇಂದಿರಾ ಬಾಳಿನಲ್ಲಿ ಕರಾಳ ದಿನ. ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಹರೀಶ್ ನ ವೇಗದ ಕಾರು ಹತೋಟಿ ತಪ್ಪಿ ಹಳ್ಳದೊಳಗೆ ಉರುಳಿಬಿತ್ತು. ಇಂದಿರಾ ಗಾಬರಿಯಿಂದ ಕೂಗಿ ಅವಳ ಪ್ರಜ್ಞೆ ತಪ್ಪಿತ್ತು. ಎಚ್ಚರವಾದಾಗ ಅವಳು ಬಿ ಜಿ ಎಸ್ ಆಸ್ಪತ್ರೆಯಲ್ಲಿ ಇದ್ದಳು. ತಂದೆ ಅವಳ ಮುಂದೆ ನಿಂತಿದ್ದರು." ಹರೀಶ್ ಇನ್ನಿಲ್ಲ" ವಾಸ್ತವ ಅರಿವಾಗಲು ಬಹಳ ಸಮಯ ಹಿಡಿದು ಮಂಕಾದಳು. ದಿಗ್ಗನೆ ಎದ್ದು "ಅಕ್ಷಯಾ" ಎಂದು ಕೂಗಿದಳು. ಅವಳ ಎರಡು ವರ್ಷದ ಮಗು ಅಪಘಾತದಿಂದ ಕಾಣೆಯಾಗಿತ್ತು

ಆಶ್ರಮದಲ್ಲಿ ಆಯ ಎರಡು ಮಕ್ಕಳನ್ನು ತಂದು ಅವಳ ಮುಂದೆ ನಿಲ್ಲಿಸಿದಳು. ಇಬ್ಬರದೂ ಹೆಚ್ಚು ಕಡಿಮೆ ಒಂದೇ ವಯಸ್ಸು.ಶಾರದಮ್ಮ ಹೇಳಿದರು. ಇವರಿಬ್ಬರೂ "ವತ್ಸಲಾ " ಆಶ್ರಮದಿಂದ ಬಂದವರು.ಒಬ್ಬನ ಕೊರಳಲ್ಲಿ ಲಾಕೆಟ್ ನಲ್ಲಿ "ಅಕ್ಷಯ" ಹೆಸರಿತ್ತು. ಯಾರೋ ಆಯ ಅದನ್ನು ಕದ್ದುಕೊಂಡು ಹೋದಳು. ಇನ್ನೊಬ್ಬನ ಹೆಸರು ಅದೇ. ನಿಮ್ಮ ಮಗು ನೀವೇ ಗುರುತಿಸಬೇಕು. ಇಂದಿರಾ ನಿಜಕ್ಕೆ ಪೇಚಾಟ ಕ್ಕೆ ಬಿದ್ದಳು. ಒಬ್ಬ ತುಂಬು ನಗುಮುಗದ ಅತಿ ಮಾತಿಗಾರ. ಇನ್ನೊಬ್ಬನ ಕಣ್ಣಲ್ಲಿ ಅನಾಥಭಾವ. ನೂರು ಜನ ಮಕ್ಕಳ ಮುಂದೆ ತನ್ನ ಮಗುವನ್ನು ಗುರುತಿಸುತ್ತೇನೆ ಎಂಬ ಆತ್ಮ ವಿಶ್ವಾಸ ಕರಗಿ ಗೊಂದಲದಲ್ಲಿ ಬಿದ್ದಳು

ರಾತ್ರಿಯಲ್ಲ ನಿದ್ದೆಯಿಲ್ಲದೆ ಹೊರಳಾಡಿದಳು. ಯೋಚಿಸಿ ಯೋಚಿಸಿ ಒಂದು ನಿರ್ದಾರಕ್ಕೆ ಬಂದಳು. "ಅವನೇ ಆ ಮಾತುಗಾರ ಹುಡುಗ " ಹರೀಶ್ ನಂತೆ ಕಣ್ಣ ಹೊಳಪು ಅವನೇ ತನ್ನ ಮಗ. ಮನಸ್ಸು ನಿರಾಳವಾಯಿತು.

ಮರುದಿನ ಬೆಳಗ್ಗೆ ಚೈತನ್ಯ ಧಾಮ ಗೆ ಬಂದಾಗ ಮನಸ್ಸು ಶಾಂತವಾಗಿತ್ತು. ಆಶ್ರಮದ ಪದ್ದತಿಯಂದೆ ಕಾಗದ ಪತ್ರಗಳಿಗೆ ಸಹಿ ಹಾಕಿ ಅವನೊಂದಿಗೆ ಸಂತೋಷದಿಂದ ಕಾರಿನತ್ತ ಸಾಗಿದಳು.

ಆ ಹುಡುಗ ಮರದ ಕೆಳಗೆ ಸುಮ್ಮನೆ ಕುಳಿತಿದ್ದ. ಅವನ ಕಣ್ಣುಗಳ ಅನಾಥ ಭಾವ ನೋಡಿ ಅವಳು ಒಂದು ಕ್ಷಣ ಬೆಚ್ಚಿದಳು. ಏನನ್ನೋ ಯೋಚಿಸುತ್ತಾ ಮತ್ತೆ ಆಶ್ರಮದ ಒಳಗೆ ಹೋದಳು.

.

ಹೊರಗೆ ಬರುವಾಗ ಇಬ್ಬರು ಮಕ್ಕಳ ಹೆಗಲ ಮೇಲೆ ಕೈ ಹಾಕಿಕೊಂಡು ನಗುತ್ತ ಬಂದಳು. ಅವಳ ನೆಮ್ಮದಿ ನೋಡಿ ಅವಳ ತಂದೆಗೆ ನಿರಾಳವಾಯಿತು. ಇಬ್ಬರು ಮಕ್ಕಳು ಅವಳ ತೊಡೆಯ ಮೇಲೆ ನೆಮ್ಮದಿ ಯಾಗಿ ಮಲಗಿದ್ದರು. ಕಾರು ನಿದಾನವಾಗಿ ಶಿವಮೊಗ್ಗದತ್ತ ಸಾಗಿತು.


 


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

One Response to “ತಾಯಿಯ ಮನಸ್ಸು: ಹೆಚ್ ಎಸ್ ಅರುಣ್ ಕುಮಾರ್”

  1. ಸಾವಿತ್ರಿ.ವೆಂ.ಹಟ್ಟಿ says:

    ಕಥೆ ಇಷ್ಟವಾಯಿತು ಸರ್. ತಾಯಿ ಮನಸ್ಸೇ ಹಾಗೆ…

Leave a Reply