ಮಾದಕ ವ್ಯಸನಿಗಳನ್ನು ನಿರ್ವಹಿಸುವಲ್ಲಿ ಪಾಲಕರ ಪಾತ್ರ: ಪ.ನಾ.ಹಳ್ಳಿ.ಹರೀಶ್ ಕುಮಾರ್


ಜೀವಿಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮವನ್ನುಂಟು ಮಾಡುವ ಯಾವುದೇ ಸಂಯುಕ್ತ ಅಥವಾ ರಾಸಾಯನಿಕ ಪದಾರ್ಥವೇ ಮಾದಕವಸ್ತು. ಮಾದಕ ವಸ್ತುವು ನೇರವಾಗಿ ಮೆದುಳಿನ ಮೇಲೆ ಅಥವಾ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದ ಮೇಲೆ, ಗ್ರಹಿಕೆಯ ಮೇಲೆ, ಪ್ರಜ್ಞಾವಸ್ಥೆಯ ಮೇಲೆ, ಭಾವನಾಸ್ಥಿತಿಯ ಮೇಲೆ ಪರಿಣಾಮವನ್ನು ಬೀರುವಂತಹುದು.ಅದನ್ನು ದುರ್ಬಳಕೆ ಮಾಡುವ ಸಾಧ್ಯತೆಗಳಿದ್ದು ಅದು ವ್ಯಸನಿಗೆ ಮತ್ತು ಸಮಾಜಕ್ಕೆ ಕೆಟ್ಟದ್ದನ್ನು ಉಂಟುಮಾಡುವ ಸಾಮಥ್ರ್ಯ ಪಡೆದಿದೆ.

ಮಧ್ಯಸಾರ, ಕೆಫಿನ್, ಬಾರ್ಬಿಚುರೇಟ್ಸ್, ಟ್ರಾಂಕ್ವಿಲೈಸರ್ಸ, ಕೊಕೇನ್, ಮಾರ್ಫಿನ್, ಹೆರಾಯಿನ್, ಕೋಡೇನ್, ಅಫೀಮು, ಪಿತೆಡೈನ್, ಗಾಂಜಾ, ಚರಸ್, ಭಾಂಗ್, ಕೆನಾಬೀಸ್ ಅಂಥಹ ಕೆಲವು ಮಾದಕವಸ್ತುಗಳಾಗಿವೆ.

ಆರೋಗ್ಯದ ಕಾರಣವಿಲ್ಲದೇ, ಸೂಕ್ತ ವೈಧ್ಯಕೀಯ ಸೂಚನೆಯಿಲ್ಲದೇ, ಸ್ವತಃ ತಮಗೆ ಇಷ್ಟ ಬಂದಾಗ, ಇಷ್ಟ ಬಂದಷ್ಟು ಪ್ರಮಾಣದಲ್ಲಿ ಮಾದಕವಸ್ತುವನ್ನು ಸೇವಿಸುವವರನ್ನು ಮಾದಕವ್ಯಸನಿಗಳೆನ್ನುವರು. ಭಾರತದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಿದ್ದು ಯುವಕರು ಮತ್ತು ಮಕ್ಕಳೇ ಅಧಿಕ ಸಂಖ್ಯೆಯಲ್ಲಿರುವುದನ್ನು ಕಾಣಬಹುದಾಗಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಹಿರಾಯಿನ್ ವ್ಯಸನಿಗಳ ಸಂಖ್ಯೆ 7ಲಕ್ಷ ದಾಟಿದೆ. ದೇಶದಲ್ಲಿ ತಿಂಗಳೊಂದಕ್ಕೆ ಮಾರಾಟವಾಗುವ ಮಾದಕ ವಸ್ತುಗಳ ಒಟ್ಟು ಅಂದಾಜು ಮೌಲ್ಯವು 90 ರಿಂದ 100 ಕೋಟಿಗಳನ್ನು ದಾಟಿದೆ ಎಂಬುದಾಗಿ ಅಂದಾಜಿಸಲಾಗಿದೆ.

ಮಾದಕ ವ್ಯಸನಿಗಳಲ್ಲಿ ಬಹಳಷ್ಟು ಜನರು ಅಪಕ್ವರು, ಯುವಕರು ಆಗಿದ್ದು.ತಮ್ಮ ಸಮಸ್ಯೆಗಳನ್ನು ಆಶಾಭಂಗಗಳನ್ನು, ಆತಂಕಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಪರಿಹರಿಸಿಕೊಳ್ಳುವ ಜಾಣ್ಮೆಯನ್ನು ಹೊಂದಿಲ್ಲದ ಕಾರಣ ಮಾದಕ ವ್ಯಸನಿಗಳಾಗಿದ್ದಾರೆ. ಆದ್ದರಿಂದ ಯುವಕರು ಮಾದಕ ವಸ್ತುಗಳೆಡೆಗೆ ಆಕರ್ಷಿತರಾಗಿ ವ್ಯಸನಿಗಳಾಗದಂತೆ ತಡೆಯುವಲ್ಲಿ ಕಾನೂನು, ಸರ್ಕಾರಗಳಿಗಿಂತ ಮನೆಯಲ್ಲಿ ಅವರ ಪಾತ್ರ ಗಮನಾರ್ಹವಾದುದಾಗಿದೆ.

ಪಾಲಕರ ಪಾತ್ರ
•    ಮಾದಕ ವ್ಯಸನದಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಪಾಲಕರು ಮಕ್ಕಳಿಗೆ ಜಾಗೃತಿ ಮೂಡಿಸುವುದು.
•    ವ್ಯಸನಿಗಳ ಪಾಲಕರು ತಮ್ಮ ಮಕ್ಕಳನ್ನು ಉಪಚರಿಸಬೇಕಾದ ವಿಧಾನಗಳ ಕುರಿತು ತರಭೇತಿ ಪಡೆಯುವುದು.
•    ಪ್ರತಿನಿತ್ಯ  ಬಿಡುವಿನ ಸಮಯವನ್ನು ಉಪಯೋಗಿಸಿಕೊಂಡು ಮಾದಕವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವುದು.
•    ಮಹತ್ವದ ಮಾಹಿತಿಗಳನ್ನು ಮುಕ್ತವಾಗಿ ವಿನಿಮಯ ಮಾಡಿಕೊಳ್ಳುವ ಕಾರ್ಯ ಕ್ರಮಗಳನ್ನು ಆಯೋಜಿಸಿ, ಅಂತರ್ಗಾಮಿಗಳನ್ನು ಅದರಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು.
•    ತಮ್ಮ ಮಕ್ಕಳನ್ನು ಉದಾಸೀನಭಾವನೆ ಮತ್ತು ತಿರಸ್ಕಾರ ಭಾವನೆಯಿಂದ ಕಡೆಗಣಿಸದಿರುವುದು.ಅವರೊಂದಿಗೆ ಪ್ರೀತಿ, ಹೊಂದಾಣಿಕೆಯಿಂದ ವರ್ತಿಸುವುದು.
•    ಮಕ್ಕಳಿಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಪ್ರೇರೇಪಿಸುವುದು.
•    ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು.
•    ಮಕ್ಕಳ ಎಲ್ಲಾ ಚಟುವಟಿಕೆಗಳನ್ನು ಅವಲೋಕಿಸುತ್ತಿರುವುದು ಮತ್ತು ಅನುಚಿತ ವರ್ತನೆಗಳು ಕಂಡುಬಂದಾಗ ಅವುಗಳನ್ನು ತಿದ್ದುವುದು.
•    ತಮ್ಮ ಮಕ್ಕಳ ಸ್ನೇಹಿತರು ಮತ್ತು ಅವರ ವ್ಯಕ್ತಿತ್ವದ ಕುರಿತು ತಿಳಿದು, ದುಷ್ಟರಿಂದ ದೂರವಿರುವಂತೆ ಸಲಹೆ ನೀಡುವುದು.
•    ತಾವು ಯಾವುದೇ ಮಾದಕ ವಸ್ತುಗಳನ್ನು ಸೇವಿಸದೇ ಮಕ್ಕಳಿಗೂ ಮಾದರಿಯಾಗಿರುವುದು.
•    ನಿರಂತರ ಅಭ್ಯಾಸಗಳಿಂದ ಮಾದಕ ವಸ್ತುಗಳ ಬಗ್ಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿರುವುದು.
•    ಮುಕ್ತ ಮತ್ತು ಅನೌಪಚಾರಿಕ ಮಾತುಕತೆಗಳ ಮೂಲಕ ಮಕ್ಕಳ ಸಮಸ್ಯೆಗಳನ್ನು ಅರಿತು, ಅವುಗಳನ್ನು ಪರಿಹರಿಸಲು ಪ್ರಯತ್ನಿಸುವುದರಿಂದ ಮುಂದೆ ಅವರು ಮಾದಕ ವ್ಯಸನಿಗಳಾಗುವುದನ್ನು ತಡೆಯಬಹುದು.
•    ಕಿಶೋರಾವಸ್ತೆಯ ಸಮಸ್ಯೆಗಳನ್ನು ಗುರ್ತಿಸಿ, ಮಾರ್ಗ ದರ್ಶನ ನೀಡುವುದು.
•    ಸದಾಕಾಲ ಮಕ್ಕಳಿಗೆ ಅವರ ಮುಂದಿನ ವಿಧ್ಯಾಭ್ಯಾಸ, ಉದ್ಯೋಗ, ಗುರಿಸಾಧನೆಗಳ ಬಗ್ಗೆ ಪ್ರೇರೇಪಿಸುತ್ತಿರುವುದು.
•    ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಪಾಲಕ ವಿಧ್ಯಾರ್ಥಿಗಳ ಸಭೆ ಕರೆಯುವುದು.
•    ಕಾನೂನುಬದ್ಧ ಕ್ರಮಗಳ ಬಗ್ಗೆ ತಿಳುವಳಿಕೆ ನೀಡುವುದು.

1985 ರಿಂದಲೇ ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರಾಫಿಕ್ ಸಬ್ ಸ್ಟ್ಯಾನ್ಸ್ ಆಕ್ಟ್ ಜಾರಿಯಲ್ಲಿದ್ದರೂ ಸಹ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಮಾದಕ ವಸ್ತುಗಳ ಪಿಡುಗು ದೇಶದ ಎಲ್ಲಾ ಭಾಗಗಳಿಗೂ ವೇಗವಾಗಿ ಹಬ್ಬುತ್ತಿದ್ದು, ಭಾರತವೂ ಇಂದು ಮಾದಕವಸ್ತುಗಳ ಅತಿಯಾದ ಹಸಿವೆಯ ಬಳಕೆದಾರ ದೇಶವಾಗಿ ಪರಿವರ್ತನೆಗೊಳ್ಳುತ್ತಿದ್ದು, ಗ್ರಾಮಾಂತರ ಪ್ರದೇಶಗಳಿಗೂ ಹರಡುತ್ತಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಚಿಕಿತ್ಸೆ, ಜಾಗೃತಿ ಮತ್ತು ಪುನರ್ವಸತೀಕರಣವೂ ಮುಖ್ಯವಾಗಿದ್ದು ಪಾಲಕರೊಂದಿಗೆ ಸರ್ಕಾರ, ಖಾಸಗೀ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಯುವ ಸಂಘಟನೆಗಳು, ಸ್ತ್ರೀಶಕ್ತೀ ಸಂಘಟನೆಗಳು ಒಗ್ಗೂಡಿ ಕೆಲಸ ನಿರ್ವಸಬೇಕಿದೆ.

-ಪ.ನಾ.ಹಳ್ಳಿ.ಹರೀಶ್ ಕುಮಾರ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x