ಸಾಮಾನ್ಯ ಜ್ಞಾನ (ವಾರ 82): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:-
1.    ವಿಶ್ವಸಂಸ್ಥೆಯು ಯಾವ ವರ್ಷವನ್ನು ಅಂತರಾಷ್ಟ್ರೀಯ ಭತ್ತದ ವರ್ಷವೆಂದು ಘೋಷಿಸಿತು?
2.    ಐಎಮ್‍ಸಿ (IMC) ಯ ವಿಸ್ತೃತ ರೂಪವೇನು?
3.    ಸೌರಾಷ್ಟ್ರ ಸೋಮೇಶ್ವರ ಇದು ಯಾರ ಅಂಕಿತನಾಮವಾಗಿದೆ?
4.    ಗುಲ್ಮಾರ್ಗ ಗಿರಿಧಾಮ ಯಾವ ರಾಜ್ಯದಲ್ಲಿದೆ?
5.    ಕರ್ನಾಟಕದ ಶಿವಕಾಶಿ ಎಂದೇ ಪ್ರಸಿದ್ಧ ಪಡೆದ ಊರು ಯಾವುದು?
6.    ದಕ್ಷಿಣ ಪಿನಾಕಿನಿ ನದಿಯ ಉಗಮ ಸ್ಥಳ ಯಾವುದು?
7.    ನೇಪಾಳದ ಪ್ರಪ್ರಥಮ ಅಧ್ಯಕ್ಷರು ಯಾರಾಗಿದ್ದರು?
8.    ಬುದ್ಧಿ ಲಬ್ಧವನ್ನು ಕಂಡುಹಿಡಿಯುವ ಸೂತ್ರದ ಬಗ್ಗೆ ತಿಳಿಸಿದ ಪ್ರೆಂಚ್ ಮನೋವಿಜಾÐನಿ ಯಾರು?
9.    ಎ.ಸಿ ಯನ್ನು ಡಿ.ಸಿ ಯಾಗಿ ಮಾರ್ಪಡಿಸಲು ಬಳಸುವ ಸಾಧನ ಯಾವುದು?
10.    ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಏನೆಂದು ಹೆಸರಿಡಲಾಗಿದೆ?
11.    ಕನ್ನಡದ ಮೊದಲ ಶತಕ ಕೃತಿಯನ್ನು ಬರೆದವರು ಯಾರು?
12.    ಕಾಯ್ದೆಭಂಗ ಚಳುವಳಿಯ ನಾಯಕರು ಯಾರಾಗಿದ್ದರು?
13.    ಕೊಲೆಸ್ಟ್ರಾಲ್ ರಕ್ತದಲ್ಲಿ ಹೆಚ್ಚಾದಾಗ ಉಂಟಾಗುವ ತೊಂದರೆ ಯಾವುದು?
14.    ಭಾರತದ ಎರಡನೇಯ ಅತಿ ಮುಖ್ಯ ಕಲ್ಲಿದ್ದಲು ಉತ್ಪಾದನೆಯ ಗಣಿ ರಾಣಿಗಂಜ್ ಯಾವ ರಾಜ್ಯದಲ್ಲಿದೆ?
15.    ಭಾರತದಲ್ಲಿ ಕಡ್ಡಾಯ ಜನಗಣತಿ ಪ್ರಾರಂಭವಾದ ವರ್ಷ ಯಾವುದು?
16.    ವಿ ಗ್ರಾಮರ್ ಆಫ್ ದಿ ಕರ್ನಾಟಕ ಲಾಂಗ್ವೇಜ್ ಕೃತಿಯ ಕರ್ತೃ ಯಾರು?
17.    ಕರ್ನಾಟಕದ ಯಾವ ಸ್ಥಳದಲ್ಲಿ ಮೊಟ್ಟ ಮೊದಲ ಬಾರಿಗೆ ಕಬ್ಬಿಣದ ಅದಿರಿನ ಗಣಿಗಾರಿಕೆಯನ್ನು ಪ್ರಾರಂಭಿಸಲಾಯಿತು?
18.    ಕೆಲಸಕ್ಕಾಗಿ ರಾಷ್ಟ್ರೀಯ ಆಹಾರ ಕಾರ್ಯಕ್ರಮ ಜಾರಿಗೆ ಬಂದ ವರ್ಷ ಯಾವುದು?
19.    ವಿಶ್ವದಲ್ಲೇ ಮೊದಲ ಬಾರಿಗೆ ಕಾಗದದ ಹಣ ಜಾರಿಗೆ ತಂದ ದೇಶ ಯಾವುದು?
20.    ಶರೀರದಲ್ಲೇ ತಯಾರಾಗುವ ಜೀವಸತ್ವ ಯಾವುದು?
21.    ನೀರಾವರಿ ಉದ್ದೇಶದಿಂದ ಕಾರಂಜಾ ನದಿಗೆ ಎಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ?
22.    ಗಜ್-ಇ-ಸಿಕಂದರಿ ಎನ್ನುವ ಹೊಸ ಮಾಪನ ದಂಡವನ್ನು ಜಾರಿಗೆ ತಂದ ಸುಲ್ತಾನರ ದೊರೆ ಯಾರು?
23.    ಋಗ್ವೇದದಲ್ಲಿರುವ ಸ್ತೋತ್ರಗಳ ಸಂಖ್ಯೆ ಎಷ್ಟು?
24.    ಮಲೇಷಿಯಾದ ರಾಷ್ಟ್ರೀಯ ಕ್ರೀಡೆ ಯಾವುದು?
25.    ಶಂಕರ ಲಕ್ಷ್ಮಣ ಇವರು ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
26.    ಬೊಲಾನ್ ಕಣಿವೆ ಮಾರ್ಗ ಇರುವ ರಾಷ್ಟ್ರ ಯಾವುದು?
27.    ಉಪಾಸನೆ ಚಲನಚಿತ್ರದ ನಿರ್ದೇಶಕರು ಯಾರು?
28.    ಒಲಂಪಿಕ್ ಕ್ರೀಡಾ ಇತಿಹಾಸದಲ್ಲೇ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತೀಯ ಯಾರು?
29.    2007 ನೇ ಸಾಲಿನ ಅರ್ಜುನ್ ಹಾಗೂ ಖೇಲ್ ರತ್ನ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
30.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.


ಈ ವಾರದ ಪ್ರಸಿದ್ಧ ದಿನಾಚರಣೆಗಳು
ಡಿಸೆಂಬರ್ 01     –     ವಿಶ್ವ ಏಡ್ಸ್ ದಿನ
ಡಿಸೆಂಬರ್ 02     –    ರಾಷ್ಟ್ರೀಯ ಮಾಲಿನ್ಯ ನಿಯಂತ್ರಣಾ ದಿನ
ಡಿಸೆಂಬರ್ 04     –    ನೌಕಾಪಡೆ ದಿನ (ಭಾರತ)

ಉತ್ತರಗಳು:-
1.    2004
2.    ಇಂಡಿಯನ್ ಮೆಡಿಕಲ್ ಕೌನ್ಸಿಲ್
3.    ಆದಯ್ಯ
4.    ಜಮ್ಮು-ಕಾಶ್ಮೀರ
5.    ಗದಗ
6.    ಕೋಲಾರ ಜಿಲ್ಲೆಯ ನಂದಿದುರ್ಗದ ಬೆಟ್ಟಗಳಲ್ಲಿ
7.    ರಾಮ್‍ಚರಣ ಯಾದವ
8.    ಆಲ್ಫ್ರೆಡ್ ಬೀನೆಟ್
9.    ರೆಕ್ಟಿಪೆಯರ್
10.    ವಿಶ್ವೇಶ್ವರಯ್ಯ ಐರನ್ ಆಂಡ್ ಸ್ಟೀಲ್ ಲಿಮಿಟೆಡ್
11.    ನಾಗವರ್ಮಚಾರ್ಯ
12.    ಎಮ್.ಕೆ.ಗಾಂಧಿ
13.    ಆಫ್‍ರೊಸ್ಕ್ ರೋಸಿಸ್
14.    ಪಶ್ಚಿಮ ಬಂಗಾಳ
15.    1881
16.    ವಿಲಿಯಂ ಕೇರಿ
17.    ಕೆಮ್ಮಣ್ಣು ಗುಂಡಿ
18.    2004
19.    ಚೀನಾ
20.    ಜೀವಸತ್ವ ‘ಕೆ’
21.    ಬೀದರ ಜಿಲ್ಲೆಯ ಭಾಲ್ಕಿ ಬಳಿ
22.    ಸಿಕಂಧರ ಲೂಧಿ
23.    1028
24.    ಬ್ಯಾಡ್ಮಿಂಟನ್
25.    ಹಾಕಿ
26.    ಪಾಕಿಸ್ತಾನ್
27.    ಪುಟ್ಟಣ್ಣ ಕಣಗಾಲ
28.    ಅಭಿನವ ಬಿಂದ್ರ
29.    ಮಿಲ್ಕಾ ಸಿಂಗ್
30.    ಭಾಗವತ್ ಚಂದ್ರಶೇಖರ್ (ಕ್ರಿಕೆಟ್ ಆಟಗಾರ)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x