ಮಗುವಿನ ಆರೈಕೆ: ಮಹಿಮಾ ಸಂಜೀವ್

ನಾನು ನಾಲ್ಕು ವರ್ಷದ ಮಗುವಿನ ತಾಯಿ..ಅಂದರೆ ನನಗು ನಾಲ್ಕೇ ವರ್ಷ!! ಹೌದು ಒಂದು ಮಗುವಿನೊಂದಿಗೆ ತಾಯಿಯೂ ಹುಟ್ಟುತ್ತಾಳೆ .. ನನ್ನ ತಾಯ್ತನದ ಜನನವು ಹಾಗೆ ಆದದ್ದು .. ಮಗು ಬೆಳೆಸುವದೇನು  ಸಹಜದ ಕಲೆಯಲ್ಲ…ಆದರೆ ಅದರ ತಯಾರಿಯನ್ನ ಬಹಳ ಮುಂಚಿನಿಂದ  ಮಾಡಬೇಕಾಗುತ್ತೆ ..ಒಂದು ಮಾನಸಿಕ ತಯಾರಿಯದ್ದು ಮತ್ತೊಂದು ದೈಹಿಕ ತಯಾರಿಯದ್ದು 

ಮಾನಸಿಕವಾಗಿ ಹೆಣ್ಣು ತಾಯ್ತನಕ್ಕೆ ಬಹಳ ಬೇಗ ಸಜ್ಜುಗೊಳ್ಳುತ್ತಾಳೆ  ಅನ್ನೋ ನಂಬಿಕೆ ಇದೆ..ನಾನು ಹೇಳುತ್ತೇನೆ ಅದು ಸುಳ್ಳು, ಆಕೆಗೂ ಸಮಯ ಬೇಕು..ಅಲ್ಪ ಸಲ್ಪದ ತರಬೇತಿಯು ಬೇಕು..ಮನೆಯಲ್ಲಿ ಹಿರಿಯರಿದ್ದಾರೆ ಸರಿ, ಇಲ್ಲವಾದರೆ ಕಷ್ಟವಿದೆ. ಹಾಗಾಗಿಯೇ ನಮ್ಮಲ್ಲಿ ಸೀಮಂತದ ನಂತರ ಜನನದ ತನಕದ ಗಡುವನ್ನ ತಾಯಿ ಮನೆಯಲ್ಲಿ ಕಳೆಯುವ ಆಚರಣೆ ಬೆಳೆದು ಬಂದದ್ದು. ಅಮ್ಮ ಅಜ್ಜಿ ಮನೆಗೆ ಬರೋ  ನೆಂಟರಿಷ್ಟರು  ಹೆರಿಗೆಗೆ ಮತ್ತು ಮಗುವಿನ ಲಾಲನೆ ಪಾಲನೆಯ ಬಗ್ಗೆ ಮಾತಾಡುತ್ತಾ ನಮಗೆ ಅರಿವಿಲ್ಲದಂತೆ ಸಜ್ಜುಗೊಳಿಸುತ್ತಾರೆ. ಆದರೆ ಇದು ತುಣುಕು ಕುಟುಂಬಗಳ ಯುಗ, ತಂದೆತಾಯಿಯರಿಲ್ಲದೆ, ಇದ್ದರು ಆಫೀಸಿನಲ್ಲಿ  ಕೆಲಸ ಮಾಡುತ್ತಲೇ,  ಹೆರಿಗೆಯ ದಿನಗಳನ್ನ ಹತ್ತಿರ ನೋಡುವ ದಿನಗಳು !! 

ಮಗುವಿನ ಆಗಮನವು ಅಷ್ಟೇ, ಮನೆಗೆ ಹೊಸದೊಂದು ಸದಸ್ಯನ ಆಗಮನ ನೀವು ಇಬ್ಬರಿದ್ದಿರಿ..ಈಗ ನಿಮ್ಮಿಬ್ಬರ ನಡುವೆ ಮತ್ತೊಂದು ಹೊಸಾ ವ್ಯಕ್ತಿ ಬರುತ್ತಾನೆ/ಳೆ,  ನಿಮ್ಮಿಬ್ಬರಿಗಿಂತಲೂ  ಭಿನ್ನವಿರಬಹುದು  ವ್ಯಕ್ತಿಯ ವ್ಯಕ್ತಿತ್ವ ..ಇದನ್ನ ಅರ್ಥೈಸಿಕೊಳ್ಳಬೇಕು ಮತ್ತು ಗೌರವಿಸಬೇಕು. 

ಕೆಳಗೆ ಕೆಲ ಸಣ್ಣ ( ಇನ್ ಫ್ಯಾಂಟ್ ) ಶಿಶುಗಳ ಆರೈಕೆ ಬಗ್ಗೆ ಸಲಹೆಗಳಿವೆ .. 

೧)ಕೆಲ ಮಕ್ಕಳು ಚೆನ್ನಾಗಿ ನಿದ್ರಿಸುತ್ತವೆ, ಹಸಿವಾದಾಗ ಮಾತ್ರ ಅವು ಅಳುತ್ತವೆ, ಆದರೆ ಕೆಲ ಮಕ್ಕಳಿಗೆ ನಿದ್ರೆ ಕಮ್ಮಿ ಅಳು ಜಾಸ್ತಿ, ಇಂತಹ ಸಮಯದಲ್ಲಿ ಸರಿಯಾಗಿ ೩ ಗಂಟೆಗೊಮ್ಮೆ ಹಾಲು ಕುಡಿಸಬೇಕು.

೨)ಮೊದಮೊದಲು ಮಗುವಿಗೆ ಅಮ್ಮನ ಹಾಲು ಕೂಡ ಕೋಲಿಕ್  (ಗ್ಯಾಸ್) ಆಗುವ ಸಂಭವ ಇರುತ್ತದೆ..ಆದ್ದರಿಂದ ಪ್ರತಿ ಬಾರಿ ಮಗು ಹಾಲು ಕುಡಿದ ನಂತರ ಮರೆಯದೆ ಹೆಗಲ ಮೇಲೆ ಹಾಕಿಕೊಂಡು ತೇಗಿಸಬೇಕು, ತೇಗಿನೊಡನೆ ಜಾಸ್ತಿಯಾದ ಹಾಲು ಹೊರಹೋಗಿ ಮಗು ಆರೋಗ್ಯವಾಗಿ  ಬೆಳೆಯುತ್ತದೆ.

೩)೩ ತಿಂಗಳವರೆಗೆ ಮಗು ಕಕ್ಕುವುದು ಮತ್ತು ನಿದ್ರಾಹೀನತೆ  ಇರುತ್ತದೆ..ಇದು ತುಂಬಾ ಸೂಕ್ಷ್ಮ ಕಾಲ..ಯಾವುದೇ ಔಷಧಿಯನ್ನು ವೈದ್ಯರ ಸಲಹೆ ಇಲ್ಲದೆ ಮಗುವಿಗೆ ಕೊಡಲೇ ಬಾರದು .. 

೪)ಮಲಗಿಕೊಂಡು ಹಾಲು ಕುಡಿಸಬಾರದು ಅಕಸ್ಮಾತ್ ತಾಯಿಗೆ  ಮಂಪರು ಹತ್ತಿದರೆ ಅಪಾಯ  ಆದಷ್ಟು ತೋಳಿನಲ್ಲಿ ಎತ್ತಿಕೊಂಡು ಕುಡಿಸಿ ನಂತರ ಮಲಗಿಸುವುದು ಒಳ್ಳೆಯದು (feeding positions pictures attached).

 

೫)ಸರಿಯಾಗಿ ತಪ್ಪದೆ ವ್ಯಾಕ್ಸಿನೇಷನ್ ಮಾಡಿಸಿ..ಮಗುವಿಗೆ ಬರಬಹುದಾದ ಕಾಯಿಲೆಗಳನ್ನ ತಡೆಗಟ್ಟಿ..  ಈಗ ಗರ್ಭಕೊರಳಿನ ಕ್ಯಾನ್ಸರಿನಿಂದ ಹಿಡಿದು ಸಾಮಾನ್ಯ ಜ್ವರದವರೆಗು ಚುಚ್ಚುಮದ್ದುಗಳು   ಲಭ್ಯವಿವೆ… ವೈದ್ಯರ ಸಲಹೆಯಂತೆ ಮಗುವಿನ ವಯಸ್ಸಿಗೆ ತಕ್ಕ ಹಾಗೆ ಕೊಡಿಸಬಹುದು. 

೬)ಹೆಚ್ಚೆಚ್ಚು ಸಮಯ ನಿಮ್ಮ ಮಗುವಿನೊಂದಿಗೆ ಕಳೆಯಿರಿ ..ಸ್ನಾನದ ನಂತರ ಬರಿ ಮೈಯಲ್ಲಿದ್ದಾಗ ದಿನಕ್ಕೊಮ್ಮೆ ಮಗುವನ್ನು ತೆಕ್ಕೆಯಲ್ಲಿ ಮೃದುವಾಗಿ ಮುದ್ದಿಸಿ.. ತಾಯಿಯ ದೇಹದ ಶಾಖ ಮತ್ತು ಬೆಚ್ಚನೆಯ ಸ್ಪರ್ಶ ಅವಕ್ಕೆ ಆನಂದವನ್ನು ನೀಡುತ್ತದೆ ಮತ್ತು ಬಧ್ರತೆಯ ಭಾವ ನೀಡುತ್ತದೆ..ಇತ್ತೀಚಿನ ಕೆಲ ಸಂಶೋಧನೆಗಳು ಇದನ್ನ ದೃಢ ಪಡಿಸಿವೆ. 

೭)ಚಿಕ್ಕ ಚಿಕ್ಕ ವಿಷಯಗಳಿಗೆಲ್ಲ ಗಾಭರಿ ಬೀಳುವ ಅವಶ್ಯಕತೆ ಇಲ್ಲ..ತಾಯಿಯು ಹಾಲು ಕುಡಿಸುವಾಗ ಆದಷ್ಟು ಶಾಂತವಾಗಿಯೂ ಬಹಳಷ್ಟು ಗಾಳಿ ಬೆಳಕು ಬರುವ  ಸದ್ದುಗದ್ದಳಗಲಿಲ್ಲದ ಜಾಗದಲ್ಲಿ  ಕುಳಿತು ಹಾಲುಡಿಸುವುದು  ಒಳ್ಳೆಯದು. 

೮)ತುಂಬಾ ಜೋರಾದ ಶಬ್ದ, ಮಿಂಚು(ಫ್ಲಾಶ್) ಬೆಳಕು  ಇವೆಲ್ಲಾ ನಿಷಿಧ್ಧ ..ಮಗು ಗಾಭರಿಯಾಗಬಹುದು. 

೯)ತಾಯಿಯು ಹಾಲು ತರಕಾರಿ ಮುಂತಾದ ಪುಷ್ಟಿಕ ಆಹಾರ ಸಮೃದ್ಧವಾಗಿ ತೆಗೆದುಕೊಳ್ಳಬೇಕು ಹಾಲು ವೃದ್ಧಿಯಾಗುವದರ ಜೊತೆಗೆ ಆಕೆಯ ಆರೋಗ್ಯಕ್ಕೂ ಒಳ್ಳೆಯದು. 

೧೦)ಮಗುವಿನ ಬೆಳವಣಿಗೆಯನ್ನ ಪ್ರತಿ ತಿಂಗಳಿಗೂ ದಾಖಲಿಸುತ್ತಾ ಹೋಗಿ..ಇದು ತುಂಬಾ ಖುಷಿ ಕೊಡುತ್ತದೆ..ಅದರ ತೂಕ ಅಂಗುಲದ ಅಳತೆ ವ್ಯತ್ಯಾಸ ಬೆಳವಣಿಗೆಯನ್ನ ದೃಢ ಪಡಿಸುತ್ತದೆ. 

೧೧)ಮಗು ಇರುವ ಮನೆಯಲ್ಲಿ  ಇರಲೇ ಬೇಕಾದದ್ದು, ವೈದ್ಯರ ದೂರವಾಣಿ ಸಂಖ್ಯೆ, ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ವೈದ್ಯರಿಂದ ಪ್ರಮಾನಿಸಲ್ಪಟ್ಟ ಔಷಧಿಗಳು … 

ಮಕ್ಕಳು ಅರಳುವ ಮೊಗ್ಗುಗಳು ಅವುಗಳ ಆರೈಕೆ ಮತ್ತು ನಡವಳಿಕೆಗಳು ನಮ್ಮ ಮೇಲೆ ಅವಲಂಬಿತ ಹಾಗಾಗಿ ನಮ್ಮ ಮನೆಯ ಅಂಗಳಕ್ಕೆ ಬಂದಿಳಿದ  ಬೆಳಕುಗಳನ್ನ ತಾಳ್ಮೆ ಮತ್ತು ಪ್ರೀತಿ ಇಂದ ನೋಡಿಕೊಳ್ಳೋಣ … 

-ಮಹಿಮಾ ಸಂಜೀವ್ 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x