ಸ್ವತಂತ್ರ ಭಾರತದ ಹೋರಾಟಗಾರ: ಪ್ರಭು ಎಸ್. ಪಾಟೀಲ


    
ರಾಜೀವ ದೀಕ್ಷಿತ ಎಂಬ ಅಕ್ಷರಗಳ ಹೆಸರನ್ನು ಕೇಳಿದೊಡನೆಯೇ ಮೈತುಂಬ ರಾಷ್ಟ್ರೀಯತೆ ಓಡಾಡಲಾರಂಭಿಸುತ್ತದೆ.  ಈ ಹೆಸರೇ ಒಂದು ಮಂತ್ರದಂತೆ.
ಪಾಶ್ಚಾತ್ಯ ಹಾಗೂ ಜಾಗತಿಕರಣವೆಂಬ ಮಾಯಾಜಾಲದಲ್ಲಿ ಕುರುಡರಂತೆ ಅನುಕರಿಸುತ್ತಾ ಭಾರತೀಯರಾದ ನಾವು ನಮ್ಮತನವನ್ನೇ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಬಹುತೇಕ ಮರೆತೆ ಹೋಗಿದ್ದ ಸ್ವದೇಶಿ ಮೌಲ್ಯಗಳನ್ನು ಈ ದೇಶದ ಘನತೆ, ಹಿರಿಮೆ ಹಾಗೂ ವಾಸ್ತವತೆಯನ್ನು ಹಾಗೂ ಸಮಸ್ಯೆಗಳಿಗೆ ಸಿಲುಕಿ ಅದರ ಮೂಲ ತಿಳಿಯದೆ ಪರಿಹಾರ ಕಾಣದೆ ನಿಷ್ಕ್ರೀಯರಾಗಿದ್ದ ಭಾರತೀಯರನ್ನು ತಮ್ಮ ಉಪನ್ಯಾಸಗಳಿಂದ ಸೂಕ್ತ ಅಂಕಿ ಅಂಶಗಳಿಂದ ಬಡಿದೆಬ್ಬಿಸಿದ ಧೀರ ಸಾಧಕನೆ ಅಮರ ಪುರುಷ ಶಹಿದ್ ’ರಾಜೀವ್ ದೀಕ್ಷಿತ್’.

ಉತ್ತರ ಪ್ರದೇಶದ ಅಲೀಘಡ ಜಿಲ್ಲೆಯ ನಾಹ್ ಎಂಬ ಗ್ರಾಮದಲ್ಲಿ ಶ್ರೀಮತಿ. ಮಿಥಿಲೇಶ್ ಹಾಗೂ ರಾಧೇಶ್ಯಾಮ್ ದೀಕ್ಷಿತ್‌ರಿಗೆ ೧೯೬೬ ನವೆಂಬರ್ ೩೦ ರಂದು ಜನಿಸಿದ ಭಾರತಾಂಬೆಯ ಭಕ್ತನೇ ಈ ರಾಜೀವ್. ಕಾನ್ಪೂರದ ಐಐಟಿಯಲ್ಲಿ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಬಿ.ಟೆಕ್ ಪದವಿ ಪಡೆದ ಇವರು ಮುಂದೆ ಫ್ರಾನ್ಸ್ ದೇಶದಲ್ಲಿ ತಮ್ಮ ಪಿ.ಎಚ್.ಡಿ. ಪಡೆದು ಒಬ್ಬ ಮೇಧಾಶಾಲಿ ವಿಜ್ಞಾನಿಯಾಗಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು.  ಭಾರತದ ಶ್ರೇಷ್ಟ್ರ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂರೊಂದಿಗೂ ಕೂಡ ತಮ್ಮ ಸೇವೆಯನ್ನು ಸಲ್ಲಿಸಿದರು. 

೧೯೮೪ ರ ಡಿಸೆಂಬರ್ ೩ ರಂದು ಭೂಪಾಲನಲ್ಲಿ ನಡೆದ ಅನಿಲ ದುರಂತದ ಕಾರಣ ಅಮೇರಿಕಾದ ’ಯೂನಿಯನ್ ಕಾರ್ಬೈಡ್’ ಎಂಬ ಕಂಪನಿಯು ನಡೆಸಿದ ಪ್ರಯೋಗವೆ ಕಾರಣ ಹಾಗೂ ಅದರಿಂದ ಹಾನಿಗೊಳಗಾದದು ಸಾವಿರಾರು ಬಡ ಹಾಗೂ ಮುಗ್ದ ಭಾರತಿಯರು (ಒಟ್ಟು ೧೨,೦೦೦ ಸಾವುಗಳು) ಹಾಗೂ ಇಂದಿಗೂ ಕೂಡ ಲಕ್ಷಾಂತರ ಜನರು ಹಲವಾರು ರೋಗಗಳಿಂದ ನರಳುತ್ತಿದ್ದಾರೆ.  ಈ ಒಂದು ದೊಡ್ಡ ಷಡ್ಯಂತ್ರದ ಕಂಪನಿ ಹಾಗೂ ಎಲ್ಲಾ ವಿದೇಶಿ ಕಂಪನಿಗಳ ಅಂತರಾಳದ ಅಧ್ಯಯನಕ್ಕೆ ಮೊದಲು ಅವರು ಮುಂದಾದರು.  ಹಾಗೂ ಎಲ್ಲಾ ಮಾಹಿತಿಯನ್ನು ಕಲೆ ಹಾಕಿದರು. ಹಾಗೂ ಒಂದು ಸಂಘಟನೆಯನ್ನು ಸೇರಿ ಬೆಳೆಸಿದರು.  ಅದೇ ಆಜಾದಿ ಬಚಾವೋ ಅಥವಾ ’ಸ್ವಾತಂತ್ರ್ಯ ಉಳಿಸಿ’ ಎಂಬ ಹೋರಾಟ.

ರಾಜೀವ ದೀಕ್ಷಿತ

ಈ ಸಂಘಟನೆಯ ಮೊದಲ ಯಶಸ್ಸು ’ಯೂನಿಯನ್ ಕಾರ್ಬೈಡ್’ ಎಂಬ ಕಂಪನಿಯನ್ನು ದೇಶದಿಂದ ಹೊರಗೆ ಅಟ್ಟಿದ್ದು, ಭಾರತದ ಸಂಪೂರ್ಣ ಇತಿಹಾಸ ಹಾಗೂ ಆರ್ಥಿಕತೆಯನ್ನು ತಿಳಿಯಲು ಪ್ರೋ. ಧರ್ಮಪಾಲ್‌ರವರ ಸಂಪರ್ಕಕ್ಕೆ ಬಂದರು.  ಇವರು ಲಂಡನ್ನಿನ ಹೌಸ್ ಆಫ್ ಕಾಮರ್ಸ ಇಂಡಿಯಾ ಹೌಸ್ ಲೈಬ್ರರಿಗಳಿಂದ ಭಾರತಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿದ ಸುಮಾರು ೫೦,೦೦೦ ಕ್ಕೂ ಹೆಚ್ಚು ದಾಖಲೆಗಳು ಅಧ್ಯಯನ ಮಾಡಿದರು. ಅಲ್ಲಿ ರಾಜೀವ್ ಭಯ್ಯಾ ಭಾರತದ ಸಮಸ್ಯೆಗಳ ಮೂಲ ಕಾರಣಗಳನ್ನು ಅರಿತುಕೊಳ್ಳುವಲ್ಲಿ ಯಶಸ್ವಿಯಾದರು.

ಭಾರತದ ಆರ್ಥಿಕತೆಯನ್ನೆ ನುಂಗಿಹಾಕುತ್ತಿರುವ ಸಾವಿರಾರು ಬಹುರಾಷ್ಟ್ರಿಯ ಕಂಪನಿಗಳ ವಿರುದ್ದ ಟೊಂಕಕಟ್ಟಿ ನಿಂತರು.  ಮುಂದೆ ಸ್ವದೇಶಿ ಆಂದೋಲನದ ನೇಕಾರರಾದರು.  ದೇಶದ ಜನರಲ್ಲಿ ಸ್ವದೇಶಿಯ ಆಂದೋಲನವನ್ನು ಮೂಡಿಸಿ ಭಾರತಕ್ಕೆ ಮಾರಕವಾಗಿದ್ದ ಹಲವಾರು ವಿದೇಶಿ ಕಂಪನಿಗಳನ್ನು ದೇಶದಿಂದ ಹೋರಗಟ್ಟುವಲ್ಲಿ ಸಫಲರಾದರು.  ಭ್ರಷ್ಟಾಚಾರ, ಅಧಿಕಾರದ ದುರ್ಬಳಕೆ, ಇನ್ನೀತರ ಕುಕರ್ಮ ಮಾರ್ಗದಿಂದ ದೇಶದ ಸಂಪತ್ತನ್ನು ಲೂಟಿಮಾಡುತ್ತಿದ್ದ ರಾಜಕಾರಣಿಗಳ ಹಾಗೂ ವಿದೇಶಿ ಕಂಪನಿಗಳ ಪಾಲಿನ ಸಿಂಹಸ್ವಪ್ನರಾದರು.

ಭ್ರಷ್ಟಾಚಾರದ ಮುಖಾಂತರ ಹಾಗೂ ದೇಶಕ್ಕೆ ತೆರಿಗೆಯನ್ನು ಕಟ್ಟದೆ ವಿದೇಶಿ ಬ್ಯಾಂಕುಗಳಲ್ಲಿ ಜನಸಾಮಾನ್ಯರ ಲಕ್ಷಾಂತರ ಕೋಟಿ ರೂಪಾಯಿ ಹಣವನ್ನು ದೇಶದ ಪ್ರಜೆಗಳಿಗೆ ಮೊದಲು ತಿಳಿಸಿದ್ದು ಇವರೆ.  ರಾಜೀವ್ ಭಯ್ಯಾ ತಮ್ಮ ಪ್ರತಿಯೊಂದ ಭಾಷಣ ಹಾಗೂ ಉಪನ್ಯಾಸದಲ್ಲಿ ಈ ಹಣವನ್ನು ಭಾರತಕ್ಕೆ ತರುವುದರ ಕುರಿತು ಚರ್ಚಿಸುತ್ತಿದ್ದರು.  ಹಾಗೂ ಇದರ ಜೊತೆಗೆ ಲಕ್ಷಾಂತರ ಭಾರತೀಯರ ಸಹಿ ಸಂಗ್ರಹಣೆಯ ಮೂಲಕ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಸಕಲ ಸಿದ್ದತೆಯನ್ನು ಕೂಡ ಮಾಡಿದ್ದರು.    ಭಾರತ ದೇಶದಲ್ಲಿನ ಬಡತನ ಹಾಗೂ ನಿರುದ್ಯೋಗ ಸಮಸ್ಯೆಯ ಪರಿಹಾರವನ್ನು ವೈಜ್ಞಾನಿಕವಾಗಿ ಜನರ ಮುಂದಿಟ್ಟರು.  ಉದಾ: ದೇಶದಲ್ಲಿನ ಪ್ರತಿಯೊಬ್ಬರು ಒಂದು ಜೊತೆ ಖಾದಿ ಬಟ್ಟೆಯನ್ನು ತೆಗೆದುಕೊಂಡರೆ ದೇಶದಲ್ಲಿ ಒಂದು ಕೋಟಿ ಉದ್ಯೋಗವನ್ನು ಸೃಷ್ಟಿಮಾಡಬಹುದು ಎಂಬ ಅದ್ಭುತ ಚಿಂತನೆ. 

ಭಯ್ಯಾ ಅವರು ದೇಶದಲ್ಲಿ ಇರುವ ವ್ಯವಸ್ಥೆ ಹಾಗೂ ಶಿಕ್ಷಣ ಪದ್ದತಿಯ ಬದಲಾವಣೆಗೂ ಶ್ರಮಿಸಿದ.  ಇಂದು ನಾವು ಅನುಸರಿಸುತ್ತಿರುವ ಅವೈಜ್ಞಾನಿಕ ತೆರಿಗೆ ಪದ್ಧತಿ ಹಾಗೂ ಇದರಿಂದಾಗುತ್ತಿರುವ ಭ್ರಷ್ಟಾಚಾರದ ನಿವಾರಣೆಗೆ ವಿಕೇಂದ್ರಿಕರಣ ಹಾಗೂ ಚಾಣಕ್ಯನ ’ಅರ್ಥಶಾಸ್ತ್ರ’ ದಂತಹ ನೀತಿಯನ್ನು ಅಳವಡಿಸಿ ದೇಶವನ್ನು ಬಲಿಷ್ಠಗೊಳಿಸಬಹುದು ಎಂಬ ವಿಚಾರವನ್ನು ಸರಕಾರದ ಗಮನಕ್ಕೆ ತರುವ ಕೆಲಸ ಮಾಡಿದರು.

ಸಾವಯವ ಕೃಷಿಯ ಲಾಭಗಳು, ದೇಶಿತಳಿಯ ಹಸುವಿನ ಹಲವಾರು ಪ್ರಯೋಜನಗಳು, ದೇಶಿ ಉತ್ಪನ್ನಗಳ ಬಳಕೆಯ ಮುಖಾಂತರ ಆರ್ಥಿಕ ಸುಧಾರಣೆ, ಶಿಕ್ಷಣ ಪದ್ಧತಿಯ ಗುರುಕುಲ ಮಾದರಿಯ ಅನುಕರಣೆ, ಸ್ವದೇಶಿ ಚಿಕಿತ್ಸಾಪದ್ದತಿ, ದೇಶದನಾಯಕರ ಅಸಲಿಯತ್ತು, ದೇಶದ ಆರ್ಥಿಕತೆಗೆ ವಿದೇಶಿ ಹಣದ ಬಳಕೆಯಿಂದಾಗು ನಷ್ಟ, ಎಫ್.ಡಿ.ಐ. ಗ್ಯಾಟ್, ವಾಲ್‌ಮಾರ್ಟಗಳ ವಿಷಯುಕ್ತ ಹಾವಳಿ ಹಾಗೂ ಇನ್ನೂ ಹಲವಾರು ವಿಷಯಗಳ ಕುರಿತು ರಾಜೀವ್ ಭಯ್ಯಾ ತಮ್ಮ ವಿಚಾರವನ್ನು ಇಡಿಯ ಭಾರತದ ತುಂಬೆಲ್ಲಾ ಪಸರಿಸಿ ಯುವಕರಲ್ಲಿ ಕಿಚ್ಚನ್ನು ಹಚ್ಚುತ್ತಿದ್ದರು. ಹಾಗು ಇವರು ಒಟ್ಟಾರೆ ೧೫೦೦೦ ಕ್ಕೂ ಹೆಚ್ಚು ಉಪನ್ಯಾಸಗಳನ್ನು ಭಾರತದ ತುಂಬೆಲ್ಲಾ ನೀಡಿದರು.

ತಮ್ಮ ಇಡಿಯ ಸಾಧನೆಯ ಜೀವನಕೆ ರಾಜೀವರು ೩೦ ನವೆಂಬರ್ ೨೦೧೦ ರಂದು ಛತ್ತಿಸಗಡದ ಭಿಲಾಯ್‌ನ್ ಕಾರ್ಯಕ್ರಮಕ್ಕೆ ಹೋಗುವ ಮುನ್ನ ತೀರ್ವ ಹೃದಯಾಘಾತಕ್ಕೀಡಾಗಿ ತಮ್ಮ ೪೪ನೇ ವಯಸ್ಸಿನಲ್ಲಿ ಭಾರದ ಪುನನಿರ್ಮಾಣದ ಯಜ್ಞಕ್ಕೆ ಆಹುತಿಯಾದರು. 

ದೇಶಕ್ಕೆ ಪ್ರಾಣವನ್ನು ಅರ್ಪಿಸಿದ ಸ್ವಾತಂತ್ರ್ಯದ ಹೋರಾಟಗಾರರ ಸಾಲಿನಲ್ಲಿಯೇ ನಿಲ್ಲುವ ರಾಜೀವ್ ದೀಕ್ಷಿತರು ಮನಸ್ಸು ಮಾಡಿದ್ದರೆ ತಮ್ಮ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಕೋಟಿ ಕೋಟಿ ಹಣ ಸಂಪಾದಿಸಿಬಲ್ಲ ಶಕ್ತಿ ಹೊಂದಿದ್ದರು.  ದೇಶದ ರಕ್ಷಣೆಗಾಗಿ ಮನೆಯನ್ನು ತೊರೆದು ಮೋಹ ಹಾಗೂ ಸಕಲ ಸಿರಿ, ಸಂಪತ್ತಿನ ದಾಹವನ್ನು ಇಂಗಿಸಿಕೊಂಡರು.  ತಮ್ಮ ಬದುಕನ್ನು ರಾಷ್ಟ್ರ ಸೇವೆಗಾಗಿಯೇ ಮುಡಿಪಾಗಿಟ್ಟುಕೊಂಡರು.  ನಾವು ಮರೆತ ಭಾರತದ ಘನಪರಂಪರೆ ಹಾಗೂ ವೈಭೋಗದ ನೆನಪು ಮಾಡುವ ಅವರ ಧ್ಯೇಯ ಹಾಗೂ ಸಂಕಲ್ಪ ಅವಿರತ.  ಇಂದು ರಾಜೀವರು ನಮ್ಮೊಂದಿಗಿಲ್ಲದಿರಬಹುದು.  ಆದರೆ ಅವರ ಚಿಂತನೆಗಳು ಮಾತ್ರ ನಮ್ಮಲ್ಲಿಯೇ ಇವೆ. ನಾವು ಮಾಡಬಹುದಾದ ರಾಷ್ಟ್ರ ಸೇವೆಯೇ ರಾಜೀವರಿಗೆ ಸಲ್ಲಿಸಬಹುದಾದ ಗೌರವ ಹಾಗೂ ಕಾಣಿಕೆಯಾಗಿದೆ.

ರಾಜೀವ ದೀಕ್ಷಿತರಂತಹ ಕ್ರಾಂತಿಕಾರಿಗಳು ನಾವಾಗೋಣ ಹಾಗೂ ಮುಂದೆ ಅವರಂತಹ ಯುಗಪುರುಷರು ಮತ್ತೇ ಮತ್ತೇ ಈ ರಾಷ್ಟ್ರದ ಮಣ್ಣಿನಲ್ಲಿ ಜನಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. 

*****   

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x