ಪ್ರೇಮ ಕಾವ್ಯಧಾರೆ

ರಾಗ-ರತಿ ಸೋನೆಸೋನೆಯಾಗಿ ಸುರಿವ ಸಂಜೆಮಳೆಗೆ ಕಣ್ಮಿಂಚಿನಲೆ ರಂಗೇರಿದ ರಾಗ-ರತಿ. ಬಾಗಿತಬ್ಬಿ ಬೆಸೆವ ಬಂಧದ ತವಕ ನಸು ಬಾಗಿದ ಬಾನು ತುಸು ಸರಿದ ಭುವಿ ಪ್ರತಿಕ್ಷಣಗಳ ಲೆಕ್ಕವಿಟ್ಟ ವಿರಹದುರಿಯಲ್ಲಿ ಹುಸಿಮುನಿಸು ನಸುಗೋಪ ಕಾದುಕುದ್ದ ಕ್ಷಣಗಳನೆಲ್ಲ ಕಾರಿ ಬಿಡುವ ತವಕ ರಾಜಿಸೂತ್ರದ ಸಂಭ್ರಮ ಕಣ್ಣ ತುದಿಗೇ ಕುಳಿತ ಸಾಂತ್ವ ಕಾಲಜಾರುವ ಮೊದಲೇ ಲೆಕ್ಕ ಕೂಡಿಸುವಾಟ ಸೋಲಬಾರದ ಹಠಕೆ ಸೋತುಗೆಲ್ಲುವ ಪ್ರೀತಿ ತುಟಿಯೊಡೆಯದೆಲೆ ಎದೆಮುಟ್ಟಿದ ಮಾತು ಕಣ್ಣನೋಟದ ಕೂಡುಬೇಟವ ದಾಟಿಬರುವ ಮೈಮರೆತ ಮುಟ್ಟಲಾರದ ಬೇಗುದಿಗೆ ಬಾಗಿ ಸೇರುವ ಬಯಕೆ ಶೃತಿಹಿಡಿದು ಒರತೆಯೊಡೆದು … Read more

ಥ್ಯಾಂಕ್ ಯೂ ಪೋಸ್ಟ್ ಮನ್: ಅಮರದೀಪ್. ಪಿ.ಎಸ್.

ಬರೆಯದ‌ ಪ್ರೇಮದ‌ ಕವಿತೆ ಹಾಡಾಯಿತು… ಎದೆಯಲಿ ನೆನಪಿನ ನೋವು ಸುಖ‌ ತಂದಿತು….. ಪಂಕಜ್‌ ಉಧಾಸ್‌ ಮತ್ತು ಕವಿತಾ ಕೃಷ್ಣಮೂರ್ತಿ ಹಾಡುತ್ತಿದ್ದರು. ನಾನು ಖಾಲಿ‌ ಕೂತ ಸಮಯದಲ್ಲಿ ಹಾಡು ಕೇಳುವುದು ಬಿಟ್ಟರೆ ಯಾವುದಾದರೂ ಪುಸ್ತಕ ನೆನಪಾಗಿ ಹುಡುಕುತ್ತೇನೆ. ಇವತ್ತು ಪುಸ್ತಕ ತಡಕಾಡಲು ಮನಸಾಗಲಿಲ್ಲ… ಹಾಡಿನ ಗುನುಗು ನಾಲಗೆಗೆ ನೆನಪಾಗಿದ್ದೇ ತಡ ಕೇಳುತ್ತಾ ಕುಳಿತೆ. ನಾನು ಡಿಪ್ಲೋಮಾ ಓದುವ ಕಾಲದಲ್ಲೂ ಏನೋ ಗೊತ್ತಿಲ್ಲ. ನನ್ನ ರೂಮೇಟ್ ನಾಗರಾಜ್ (ಡಿಂಗ್ರಿ) ಒಂದು ವಾಕ್ಮನ್ ತಂದಿದ್ದ. ಒಂದಿಷ್ಟು ಕೆಸೆಟ್ ಗಳಿದ್ದವು. ಅದೆಂಥ ಅಡಿಕ್ಷನ್‌ … Read more

ಪ್ರೇಮಿಗಳಿಗೆ ದಿನವಿಲ್ಲ ! ದಿನವೆಲ್ಲಾ !!!!!: ಸತೀಶ್ ಶೆಟ್ಟಿ ವಕ್ವಾಡಿ

” ನಿನ್ನ ಬಿಟ್ಟು ಬದುಕುವ ಶಕ್ತಿ ನನಗಿಲ್ಲ ” ಆಕೆಯ ಬೆರಳಿಗೆ ತನ್ನ ಬೆರಳು ತೂರಿಸಿಕೊಂಡು, ಸಣ್ಣಗೆ ಕಂಪಿಸುತ್ತಿರುವ ಅದರದಿಂದ ಹೊರಬಿದ್ದ ಆತನ ಮಾತು, ಆಕೆಯ ಮೈಮನವನ್ನೆಲ್ಲ ರೋಮಾಂಚನಗೊಳಿಸಿತ್ತು.  “ಹೌದು ಕಾಣೋ ನೀನಿಲ್ಲದ ಬದುಕನ್ನು ನನಗೆ ಊಹಿಸಿಕೊಳ್ಳಲು ಆಗುತ್ತಿಲ್ಲ ” ಜೋರಾಗಿ ಬೀಸುತ್ತಿದ್ದ ಏರಿಕಂಡಿಷನಿನ ಗಾಳಿಯಲ್ಲಿ ಸಣ್ಣನೆ ಬೆವತ್ತಿದ್ದ ಆಕೆ ನುಡಿಯುತ್ತಾಳೆ. ಐಸ್ ಕ್ರೀಮ್ ಪಾರ್ಲರಿನ ಮೂಲೆಯ ಟೇಬಲಿನಲ್ಲಿ ಕುಳಿತ್ತಿದ್ದ ಅವರಿಬ್ಬರ  ಮುಂದಿದ್ದ ಅದೇ ಐಸ್ ಕ್ರೀಮ್ ಪಾರ್ಲರಿನ ಹೆಸರು ಹೊಂದಿರುವ ಸ್ಪೆಷಲ್ ಐಸ್ ಕ್ರೀಮನ್ನು ತನ್ನೊಡಲೊಗೆ … Read more

ಪ್ರೀತಿ…ಹಾಗೆಂದರೇನು!!: ಸಹನಾ ಪ್ರಸಾದ್

ಮಾನಸಳನ್ನು ವರಿಸಲು ಪ್ರಜ್ವಲನಿಗೆ ಸುತರಾಂ ಇಷ್ಟ ಇರಲಿಲ್ಲ. ಮೊದಲನೆಯದಾಗಿ, ಅವಳನ್ನು ನೋಡಿದ ತಕ್ಷಣ ಯಾವ ಭಾವನೆಯೂ ಉದಯಿಸಿರಲಿಲ್ಲ. ಅವನ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಹೆಣ್ಣುಗಳ ಹಾಗೆ ಕಂಡಿದ್ದಳು. ಹೇಳಿಕೊಳ್ಳುವಂತಹ ವಿಶೇಷವೇನೂ ಅವಳಲ್ಲಿರಲಿಲ್ಲ. ವಯಸ್ಸು 28 ಆದರೂ ಮುಖದಲ್ಲಿ ಪ್ರೌಢ ಕಳೆ, ವಯಸ್ಸಿಗೆ ಮೀರಿದ ಗಾಂಭೀರ್ಯ..ಎರಡನೆಯದಾಗಿ ಅವನು ಪ್ರೀತಿಸಿದ್ದ ರಮ್ಯಳ ಚಿತ್ರ ಮನಸ್ಸಲ್ಲಿ ಇನ್ನು ಹಸಿಯಾಗಿತ್ತು. ಬೇರೊಬ್ಬನನ್ನು ವರಿಸಿ ಆಸ್ಟ್ರೇಲಿಯಾಗೆ ಹಾರಿದ ಅವಳ ನೆನಪಿನಿಂದ ಇನ್ನೂ ಹೊರಬರಲಾಗಿರಲಿಲ್ಲ. 34 ಹತ್ತಿರ ಬಂದ ವಯಸ್ಸು, ಆಗಲೇ ಬಿಳಿ ಆಗುತ್ತಿರುವ … Read more

ಪ್ರೇಮ: ಕೊಟ್ರೇಶ್ ಕೊಟ್ಟೂರು

ಈ ಪ್ರೀತಿ ಅನ್ನೋದು ಒಂಥರಾ ಹಾವು ಏಣಿಯ ಆಟ. ಮೊದಮೊದಲು ಪ್ರೀತಿ ನಮಗೆ ಗೊತ್ತಿಲ್ಲದೇ, ಪರಿಚಯ ಇಲ್ಲದೇ ಇರೋರ ಮೇಲೆ ಸಡನ್ ಆಗಿ ಹುಟ್ಕೊಳುತ್ತೆ. ನೋಡಿದ ಕೂಡಲೇ ಹುಟ್ಟುವ ಪ್ರೀತಿ ನಿಜವಾ ಅಥವಾ ಇನ್‍ಫ್ಯಾಚುಯೇಷನ್ನಾ ? ತೀವ್ರ ಗೊಂದಲದಲ್ಲೇ ಇರುತ್ತೇವೆ ಅದು ಮಾನಸಿಕವಾ ? ಅಥವಾ ದೇಹದಲ್ಲಾಗುವ ದೈಹಿಕ ಬದಲಾವಣೆಗಳಾ ? ಹಾಗಂತ ಕಂಡ ಕಂಡವರ ಮೇಲೆ ಪ್ರೀತಿ ಹುಟ್ಟುವುದು ನಿಜವಾದ ಪ್ರೀತಿ ಅಲ್ಲವೇ ಅಲ್ಲ. ಈ ಪ್ರೀತಿಯ ಬಗೆಗೆ ಒಂದಷ್ಟು ಗೊಂದಲ ನನ್ನನ್ನು ಈಗಲೂ ಕಾಡಿದೆ. … Read more

“ಪ್ರೀತಿಗೂ ಒಂದು ದಿನ…”: ಪೂಜಾ ಗುಜರನ್, ಮಂಗಳೂರು

ಪ್ರೇಮಿಗಳ ದಿನ ಅಂದ್ರೆ ಯಾರಿಗೆ ತಾನೇ ನೆನಪಿರಲ್ಲ. ಫೆಬ್ರವರಿ 14 ರಂದು ವಿಶ್ವದದ್ಯಾಂತ “ವ್ಯಾಲೆಂಟೈನ್ಸ್ ಡೇ” ಆಚರಿಸಲಾಗುತ್ತದೆ. ಪ್ರೀತಿ ಪ್ರೇಮ ಅಂದಾಗ ಪ್ರತಿಯೊಬ್ಬರೂ ಕೂಡ ಪ್ರೇಮಿಗಳಾಗುತ್ತಾರೆ. ಈ ದಿನದ ಬಗ್ಗೆ ಕೇಳಿದರೆ ಕೆಲವರು ಸಣ್ಣಗೆ ನಗುತ್ತಾರೆ ಕೆಲವರು ನಾಚುತ್ತಾರೆ ಇನ್ನೂ ಕೆಲವರು ವಿರೋಧಿಸುತ್ತಾರೆ. ವ್ಯಾಲೆಂಟೈನ್ಸ್ ಡೇ ಅಂದ್ರೆ ಇದು ಬರಿ ಪ್ರೇಮಿಗಳಿಗೆ ಮಾತ್ರ ಇರುವ ದಿನವಲ್ಲ. ಇಲ್ಲಿ ವಯಸ್ಸು ಲಿಂಗ ಭೇದ ಮರೆತು ತಮ್ಮ ಪ್ರೀತಿಯ ನಿವೇದನೆಯನ್ನು ಯಾರು ಬೇಕಾದರೂ ಮಾಡಬಹುದು.. ಅದು ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು. … Read more

”ತನ್ನದೇ ಎಳಸು ಹೃದಯಕ್ಕೊಂದು ಪತ್ರ”: ಪ್ರಸಾದ್ ಕೆ.

ಪ್ರಿಯ ಹರೆಯದ ಎಳಸು ಹೃದಯ… ಹೇಗಿದ್ದೀಯಾ? ಇಂದು ವ್ಯಾಲೆಂಟೈನ್ಸ್ ದಿನವು ಬಂದಿರುವ ನೆಪದಲ್ಲಿ ನಿನ್ನ ಈವರೆಗಿನ ವ್ಯಾಲೆಂಟೈನ್ ಪಯಣಕ್ಕೊಂದು ಸುಮ್ಮನೆ ಮೆಲುಕು ಹಾಕಿ ನೋಡಿದೆ. ಅಬ್ಬಬ್ಬಾ, ಅದೆಷ್ಟು ಬಣ್ಣಗಳು, ಅದೆಷ್ಟು ಏರಿಳಿತಗಳು, ಅದೆಷ್ಟು ರೂಪಾಂತರ? ಅದೇನೇ ಇರಲಿ. ನೀನು ನಡೆದು ಬಂದ ಹಾದಿಯ ಬಗ್ಗೆ ನಿನಗೆ ಹೆಮ್ಮೆಯಿರಲಿ ಎಂಬ ಕಳಕಳಿಯ ವಿನಂತಿ ನನ್ನದು. ನಿನ್ನ ಈ ಹಾದಿಯು ಕಲ್ಲುಮುಳ್ಳುಗಳದ್ದು ಎಂಬುದು ಸತ್ಯ. ಮೊದಲ ಬಾರಿಗೆ ಎಲ್ಲವೂ ಹೊಸತಾಗಿದ್ದರಿಂದ ಸುಮ್ಮನೆ ಬೇಸ್ತು ಬಿದ್ದೆ, ವೃಥಾ ಮೋಸ ಹೋದೆ. ಎರಡನೇ … Read more

ಪ್ರೀತಿಯ ದಿನದಂದು: ನಾಗರೇಖಾ ಗಾಂವಕರ

ಯಾವುದರಲ್ಲೂ ಆಸಕ್ತಿಯಿಲ್ಲ. ಗುರಿಯಿರದ ಶೂನ್ಯದೆಡೆ ದೃಷ್ಟಿ, ಚಂಚಲತೆ, ಮರೆವು, ನಾನು ಎನ್ನುವುದೇ ಮರೆತು ಹೋದ ಸ್ಥಿತಿ. ಹೌದು.. ಇದು ಪ್ರೀತಿಯ ಮೊದಲ ಕನವರಿಕೆಯ ದಿನಗಳ ಮಾನಸಿಕ ಸ್ಥಿತಿ. ಪ್ರೀತಿ ಎನ್ನುವದು ಅದೂ ಹೇಗೋ ಬೇಡ ಬೇಡವೆಂದರೂ ಬಂದು ಹೇಗಲೇರಿಕೊಂಡು ಆಡಬಾರದ ಆಟ, ನೋಟ, ಕಾಟಗಳ ಜೊತೆಗೆ ಬದುಕಿಗೆ ನೋವನ್ನು, ನಲಿವನ್ನು, ತೃಪ್ತಿಯನ್ನು, ಉನ್ಮತ್ತತೆಯನ್ನು ಕೆಲವು ಬಾರಿ ಅಧ್ವಾನವನ್ನೂ ಮಾಡಿಬಿಡುವ, ಆದರೂ ಜೀವ ಸಂಕುಲ ಜೀವ ಬಿಡುವ ಆಪ್ತ ಭಾವ. ಪ್ರೇಮ ಅನಿರ್ವಚನೀಯವಾದದ್ದು, ಪ್ರೀತಿ ಬಣ್ಣವಿಲ್ಲದ್ದು ಆದರೂ ಹಲವು … Read more

ಪ್ರೀತಿಯ ಪರಿಧಿ: ಪ್ರವೀಣ ನಾಯಕ, ದಾಂಡೇಲಿ

ಪ್ರೀತಿ ಇದ್ದಲ್ಲಿ ಭೀತಿ ಇರದು. ಅದು ಭೀತಿಯನ್ನು ದೂರಕ್ಕೆಸೆಯುತ್ತದೆ. ಇದು ಏಸುಕ್ರೀಸ್ತನ ವಾಣಿ. ಮಾನವಕುಲವನ್ನು ಮೇಲಕ್ಕೆತ್ತುವ ಸ್ಪೂರ್ತಿಯನ್ನು ನೀಡುವುದೇ ಪ್ರೀತಿ. ಆಯುರಾಗೋಗ್ಯ, ಶಾಂತಿಯನ್ನು ನೀಡಬಲ್ಲದ್ದು ಪ್ರೀತಿ. ಕಷ್ಟದ ಆಳದಿಂದಲೂ ವ್ಯಕ್ತಿಯ ನೋವನ್ನು ನಿವಾರಿಸಬಲ್ಲದ್ದು ಪ್ರೀತಿ. ಆದರೆ ಇಂದಿನ ಕಾಲದಲ್ಲಿ ಈ ಪ್ರೀತಿಯ ಅಭಾವ ಕಂಡುಬರುತ್ತಿದೆ. ಬಾಲ್ಯವಸ್ಥೆಯಲ್ಲಿ ತಂದೆತಾಯಿಯರ ಪ್ರೀತಿ ಕಂಡರಿಯದ ಮಕ್ಕಳು ದುಷ್ಟರು ಭ್ರಷ್ಟರು ಕ್ರೂರಿಗಳು ಆಗುತ್ತಾರೆಂದು ಪ್ರಾಜ್ಞರು ಹೇಳಿರುವುದನ್ನು ನಾವು ಕೇಳಿದ್ದೇವೆ. ಮಕ್ಕಳನ್ನು ತಂದೆ ತಾಯಿಯರು ಯಾವಾಗಲೂ ಭಯದಲ್ಲಿರಿಸಬಾರದು. ಅಲ್ಲಿ ಸೇಡಿನ ಮನೋಭಾವ ಹಿಂಸಾಪ್ರವೃತ್ತಿ, ಹೃದಯಹೀನತೆಯು … Read more

ಗೆಳೆಯಾ..: ನಂದಾದೀಪ, ಮಂಡ್ಯ

ಹಗಲು ರಾತ್ರಿಗಳನ್ನು ಒಂದುಗೂಡಿಸುವ ಒಂದು ಎಳೆಯೆಂದರೆ ಮುಸ್ಸಂಜೆ..! ಅಂತಹ ಮುಸ್ಸಂಜೆಯ ತಂಪಿನಲಿ ಕಡಲ ಮರಳಿನ ಮಡಿಲಿನಲಿ ಕುಳಿತು ಬೆರಳು ನಿನ್ನ ಹೆಸರನು ಗೀಚುವಾಗ ಆ ಅಲೆಗಳಿಗೂ ಅದೇನು ಸಂಕಟವೋ ಓಡೋಡಿ ಬಂದು ಅಳಿಸಲೆತ್ನಿಸುತ್ತವೆ..ಅಲೆಗಳು ಅಳಿಸಿದಷ್ಟು ನಿನ್ಪ ಹೆಸರನ್ನು ಮತ್ತಷ್ಟು ನನ್ನೆದೆಯಲ್ಲಿ ಗಟ್ಟಿಯಾಗಿ ಅಚ್ಚೊತ್ತುಕೊಳ್ಳಬೇಕೆಂಬ ಭಾವಗಳು ಮೂಡಿ, ಅಮೂಲ್ಯವಾದ ಕನಸುಗಳನ್ನು ಹುಟ್ಟು ಹಾಕಿಬಿಡುತ್ತದೆ.. ಇಂತಹ ಭಾವನೆಗಳು ಮನಸನ್ನು ಅರಳಿಸುವುದಕ್ಕಿಂತ ಎಲ್ಲಿ ನೀ ಸಿಗದೆ ನರಳಿಸಿಬಿಡುತ್ತದೊ ಎಂಬ ಭಯವೊಂದು ಕಾಡದೆ ಇರಲಾರದು.. ಆದರೆ ಒಲವೆನ್ನುವುದೆ ಹಾಗೆ ಅಲ್ಲವೆ ಒಂಟಿ ಹೆಜ್ಜೆಗಳ … Read more

ಒಲವ ಹೊರೆ ಹೊರಿಸಿದವಳೇ..: ವಿಭಾ ವಿಶ್ವನಾಥ್

ನೀನ್ಯಾಕಿಷ್ಟು ಚೆಂದವೇ ಹುಡುಗಿ? ನನ್ನ ಮನಸೂರೆಗೊಂಡು ಕನಸಲ್ಲೂ ಲಗ್ಗೆ ಇಡುವಷ್ಟು..? ಸುಂದರತೆ ಎಂದರೆ ಬರೀ ಬಾಹ್ಯ ಸೌಂದರ್ಯ ಮಾತ್ರ ಎಂದುಕೊಂಡವನ ಮನ ಬದಲಿಸಿದ್ದು ನೀನಲ್ಲದೆ ಮತ್ಯಾರು ಎಂದುಕೊಂಡೆ..?  ನೀನ್ಯಾಕಿಷ್ಟು ಒಳ್ಳೆಯವಳು ಹೇಳು..? ಒಳ್ಳೆಯತನ ಬೂಟಾಟಿಕೆ ಎಂದುಕೊಂಡಿದ್ದವನ ಮನವನ್ನು ಬದಲಿಸುವಷ್ಟು ಒಳ್ಳೆತನ ನಿನ್ನಲ್ಲಿಲ್ಲದೇ ಹೋಗಿದ್ದರೆ ಅದೆಷ್ಟು ಕೆಟ್ಟವನಾಗಿರುತ್ತಿದ್ದೆ ನಾನು.. ಆದರೂ ಸುಂದರವಾದದ್ದು, ಒಳ್ಳೆಯದ್ದು ದೂರದಲ್ಲೇ ಇರಬೇಕು ಅಲ್ಲವೇ..? ಅದಕ್ಕೆ ಇರಬೇಕು ನಿನ್ನಂತಹವರು ಗಗನ ಕುಸುಮಗಳಂತೆ ಭಾಸವಾಗುವುದು. ಪಾರಿಜಾತದಂತಹವಳು ನೀನು.. ಅದರ ಬಿಳುಪು, ಬಣ್ಣದ ಬಗ್ಗೆ ಹೇಳುತ್ತಿಲ್ಲ ನಾನು. ಅದು … Read more

ಪ್ರೇಮವೆ ಬಾಳಿನ ಬೆಳಕು: ವರದೇಂದ್ರ ಕೆ

“ಪ್ರೇಮಿಸಬೇಕು ಪ್ರೇಮಿಗಳುಮನಸನ್ನು, ಅರಿಯಬೇಕುಕನಸಿನಂತಿಲ್ಲ ಬದುಕೆಂಬುದನು.ಎದುರಿಸಬೇಕುಮದುವೆಗೆ ಮುನ್ನ ಬರುವ ಕಷ್ಟಗಳನ್ನು,ಸಹಿಸಬೇಕು ಮದುವೆನಂತರಬರುವ ಕ್ಲಿಷ್ಟಗಳನ್ನು” ಪ್ರೇಮಿಗಳು, ಮದುವೆಗೆ ಮುನ್ನ ಹೃದಯದೊಳಗೆ ಹುಟ್ಟಿದ ಪ್ರೇಮದ ಚಿಗುರಿಗೆ ತಮ್ಮನ್ನು ತಾವು ಅರ್ಪಿಸಿಕೊಂಡವರು. ಮದುವೆ ಬಳಿಕ ಸಂಸಾರದ ಜಂಜಾಟವನ್ನು ಗೆದ್ದು ಪ್ರೇಮವನ್ನು ಉಳಿಸಿ, ಬೆಳೆಸಿ, ಹೆಚ್ಚಿಸಿಕೊಂಡವರು ನಿಜವಾದ ಪ್ರೇಮಿಗಳು. ಪ್ರೇಮ, ಒಂದು ಮಧುರವಾದ ಯಾತನೆ. ಈ ಮಧುರವಾದ ಮಾನಸಿಕ ಯಾತನೆಗೆ ಸೋಲದವರಿಲ್ಲ. ಈ ಯಾತನೆಯನ್ನು ಬೇಡವೆಂದವರೂ, ಬೇಡ ಎನ್ನುವವರೂ ಇಲ್ಲ. ಪ್ರೇಮವಿಲ್ಲದೆ  ಬದುಕಲು ಸಾಧ್ಯವಿಲ್ಲ ಧರೆಯಲ್ಲಿ. ಧರೆಯ ಪ್ರೇಮದ ಫಲವೇ ನಮ್ಮ ಆಹಾರ. ಎಲ್ಲಕ್ಕೂ ಮೂಲವಾದ ಈ … Read more

ನೀ ಕೊಂಡುಕೊಂಡ ಮುಖವಾಡದ ಅಂಗಡಿಯಲ್ಲಿ ನನಗೊಂದನ್ನು ಕೊಡಿಸು: ಮಹಾಂತೇಶ್. ಯರಗಟ್ಟಿ

ನಿನ್ನ ಬಗ್ಗೆ ಬರೆಯಲು ಈಗ ಏನೂ ಉಳಿದಿಲ್ಲ ಆದರೂ ಬರೇಯುತ್ತೇನೆ. ನಿನ್ನ ಹೆಸರಿನಲ್ಲಿ ಬರೆದಿಟ್ಟ ಒಂದಿಷ್ಟು ಪತ್ರಗಳ ಬಗ್ಗೆ ಕೆಣುಕಿ ಕಾಡಿ ನನ್ನನ್ನ ಈ ಪ್ರೀತಿಗಾಳಕ್ಕೆ ಸಿಲುಕಿಸಿ ನೀನು ಮಾತ್ರ ಗೆದ್ದವರ ಸಾಲಿನಲ್ಲಿ ನಿಂತು ನಗುತ್ತಿ, ಆದರೂ ಬೇಜಾರಿಲ್ಲ. ನಾನು ಯಾವಾಗಲೊ ನಿನಗೆ ಸೋತಿದ್ದೇನೆ. ಗೆದ್ದ ನಿನ್ನ ಹಸಿವು ತೀರಿತು ಆದರೆ ಸೋತವನ ಹಂಬಲ ಮಾತ್ರ ನೀ ಬಿಟ್ಟು ಹೋದ ಗಳಿಗೆಯಿಂದ ವಿಲ ವಿಲ. ನಾನಾಗಿ ನಿನಗೆ ಬರೆದ ಅದೆಷ್ಟೋ ಪತ್ರಗಳಲ್ಲಿ ನಿನ್ನನ್ನ ಒಂದು ಮಾತು ತೆಗಳಲಿಲ್ಲ … Read more

ಪ್ರೇಮಿಗಳ ದಿನಾಚರಣೆ: ಭಾರ್ಗವಿ ಜೋಶಿ

ಮೊಟ್ಟ ಮೊದಲು ಎಲ್ಲರಿಗು ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು. ಭೂಮಿಮೇಲೆ ಜೀವಿಸುವ ಪ್ರತಿ ಜೀವಿಗಳು ಪ್ರೇಮಿಗಳೇ. ಈ ಜಗದಲ್ಲಿ ಗಾಳಿ, ನೀರು, ಬೆಳಕಿನ ಅಸ್ತಿತ್ವ ಎಷ್ಟು ಸತ್ಯವೋ ಹಾಗೆ ಈ ಪ್ರೀತಿ, ಪ್ರೇಮವೆಂಬ ಭಾವನೆಗಳ ಅಸ್ತಿತ್ವವು ಅಷ್ಟೇ ಸತ್ಯ ಮತ್ತು ಅವಶ್ಯಕ. ಪ್ರೀತಿ ಎಂದರೆ ತಂಗಾಳಿ, ಪ್ರೀತಿ ಎಂದರೆ ಹರಿವ ನೀರು, ಪ್ರೀತಿ ಎಂದರೆ ಬಿಸಿ ಉಸಿರು, ಪ್ರೀತಿ ಎಂದರೆ ಸಿಹಿ ಸ್ಪರ್ಶ, ಪ್ರೀತಿ ಎಂದರೆ ಹುಸಿ ಮುನಿಸು, ಪ್ರೀತಿ ಎಂಬುದು ಸದಾ ಹಸಿರು. ಪ್ರೀತಿ ಎಂಬುದು ಕಣ್ಣಿಗೆ … Read more

ಪ್ರೇಮಿಗಳ ದಿನಾಚರಣೆಯ ಸಂಭ್ರಮ ಸಲಹೆ : ಸಿಂಧು ಭಾರ್ಗವ್. ಬೆಂಗಳೂರು

ಈ ಪ್ರೀತಿಗೆ ಪರಿಧಿ ಎಂಬುದಿಲ್ಲ. ಭ್ರೂಣದಿಂದ ಮರಣದವರೆಗೂ ಪ್ರೀತಿ ವಿಸ್ತಾರವಾಗಿ ಮನಸ್ಸನ್ನು ಹರಡಿಕೊಳ್ಳುತ್ತದೆ. ಅಲ್ಲದೇ ಪ್ರೇಮಿಗಳ ದಿನವನ್ನು ಕೂಡ ಯುವಕ ಯುವತಿಯರು ಮಾತ್ರ ಆಚರಿಸಬೇಕೆಂದಿಲ್ಲ‌. ಪ್ರೀತಿಯನ್ನು ಆರಾಧಿಸುವ ಪ್ರತಿಯೊಬ್ಬನಲ್ಲೂ ಆ ಸಂಭ್ರಮ ಮನೆ‌ ಮಾಡುತ್ತದೆ‌. ತೋರಿಸಿಕೊಳ್ಳದೆ ಇರಬಹುದು. ಇಲ್ಲ ಮುಂಜಾನೆದ್ದು ಮಡದಿ ಕೆನ್ನೆಗೆ ಸಿಹಿ ಮುತ್ತನಿಟ್ಟು ಶುಭಾಶಯ ಕೋರಬಹುದು. ಮಗುವಿನ ಹಣೆಗೆ ಮುತ್ತನಿಟ್ಟು ಅಪ್ಪಿಕೊಂಡು ಮುದ್ದಾಡಬಹುದು. ವಯೋವೃದ್ದ ದಂಪತಿಗಳು ಕೂಡ ಒಂದು ಕೆಂಪು ಗುಲಾಬಿ ನೀಡಿ ಪರಸ್ಪರ ಖುಷಿಪಡಬಹುದು. ಆದರೂ ಪ್ರೇಮಿಗಳ ದಿನಾಚರಣೆ ಎಂದಾಗ ಎಲ್ಲರ ಕಣ್ಣು … Read more

ಪ್ರೀತಿ-ಮರ ಮತ್ತು ಬಳ್ಳಿ: ಕು.ಸ.ಮಧುಸೂದನ ರಂಗೇನಹಳ್ಳಿ

ಅದೊಂದು ಹಳೆಯ ಮರ! ಹಸಿರಿನ ಯಾವ ಕುರಹೂ ಇರದ ಬೋಳು ಮರ. ಅದರ ರೆಂಬೆ-ಕೊಂಬೆಗಳೆಲ್ಲ ಒಣಗಿವೆ. ಮರದ ಬೇರುಗಳಿನ್ನೂ ಸತ್ತಿಲ್ಲವಾದರೂ ನೆಲದ ಕಸುವ ಹೀರಿ ಕಾಂಡ ರೆಂಬೆ ಕೊಂಬೆಗಳಿಗೆ ಜೀವರಸ ತುಂಬಿ ಮತ್ತೆ ಹಸಿರೊಡೆಸುವ ಶಕ್ತಿ ಕ್ಷೀಣವಾಗಿದೆ. ಅದು ಮುಂಚೆ ಹೀಗಿರಲಿಲ್ಲ. ಎಂತಾ ಬಿರು ಬೇಸಿಗೆಯಲ್ಲೂ ಮೈಯೆಲ್ಲಾ ಹಸಿರಾಗಿ ಕೈ ಇಟ್ಟಲ್ಲೆಲ್ಲಾ ಸಮೃದ್ದ ಹಣ್ಣುಗಳ ಖಜಾನೆ. ಅದರ ನೆರಳಲ್ಲಿ ದಣಿವಾರಿಸಿ ಕೊಂಡವರ, ಹಸಿವು ನೀಗಿಸಿಕೊಂಡವರ ಲೆಕ್ಕ ಸ್ವತ: ಅದಕ್ಕೂ ಸಿಕ್ಕಿಲ್ಲ. ಸದಾ ಹಕ್ಕಿಗಳ ಚಿಲಿಪಿಲಿಯಿಂದ ತುಂಬಿರುತ್ತಿದ್ದ ಮರವಿಂದು … Read more

ಪ್ರೀತಿ ಎಂದರೆ

ಪ್ರೀತಿ ಎಂದರೇನು?? ಪ್ರೀತಿ ಎಂಬ ಪದವೇ ಅಮೋಘ. ಆ ಶಬ್ದ ಕಿವಿಗೆ ಬೀಳುತ್ತಲೆ ನಮಗರಿವಿಲ್ಲದೆ ಅದೇಷ್ಟೋ ಭಾವಗಳು ಎದೆಯೊಳಗೆ ಒಮ್ಮೆ ಸುಳಿದಾಡಿಬಿಡುತ್ತವೆ. ಪ್ರೀತಿಯ ಮಧುರತೆಯೆ ಹಾಗೇ. ಅದರಲ್ಲಿ ಯಾವುದೇ ಸ್ವಾರ್ಥವಿಲ್ಲ ಪ್ರೀತಿಸುವ ಹೃದಯ ಸದಾ ಜೊತೆಯಿರಬೇಕು ಎಂಬುದೇ ಅದರ ಬಯಕೆ. ಇಲ್ಲಿ ಸಿರಿವಂತ-ಬಡವ, ಮೇಲು-ಕೀಳು ಎಂಬ ಮಾತೆ ಬರಲ್ಲ. ಯಾಕೆಂದರೆ ಪ್ರೀತಿಗೆ ಯಾವುದೇ ಅಡೆತಡೆಗಳಿಲ್ಲ. ಜಾತಿ, ಧರ್ಮ, ಅಂದ-ಚಂದ, ಮೇಲು-ಕೀಳು ದೊಡ್ಡಸ್ತಿಕೆ ಅದೆಲ್ಲವನ್ನು ಮೆಟ್ಟಿ ಏರಿರುವುದು ಪ್ರೀತಿ. ಪ್ರೇಮದಲ್ಲಿರುವುದು ಹೃದಯಗಳ ಪಿಸುಮಾತುಗಳು, ಭಾವನೆಗಳ ಸಮಾಗಮ, ಮೌನಕವಿತೆ. ಪ್ರೀತಿಯಲ್ಲಿ … Read more

ಪುಲ್ವಾಮದಲ್ಲಿ ಬೆಂದ ಪ್ರೇಮದ ಹೂವು…. : ಲೋಕೇಶ್ ಪೂಜಾರಿ

ಅಂದು ಡಿಸೆಂಬರ್ 18 , ನಾನು 4-5 ತಿಂಗಳ ನಂತರ ಊರಿಗೆ ಹೊರಟಿದ್ದೆ. ಅವತ್ತು ಅವಳ ಜೊತೆ ಕಳೆದ ಕ್ಷಣಗಳು ನಮ್ಮ ಕೊನೆಯ ಕ್ಷಣಗಳು ಆಗಬಹುದು ಅನ್ನುವುದು ನನಗೆ ತಿಳಿದಿರಲಿಲ್ಲ. ಕಲ್ಪನೆಗಳಿಗೆ ಸಿಗದ ಆ ಸಂದರ್ಭ ಗಳನ್ನು ನೆನೆಯುತ ಮನಸ್ಸುಗಳು ಅಳದೇ ಇರಬಹುದೇ…… ನನ್ನ ಅವಳ ಪರಿಚಯ ಕಾಲೇಜು ದಿನಗಳಿಂದಲೇ ಹಸಿರು ಹುಲ್ಲಿನ ಮೇಲೆ ಪ್ರೀತಿಯ ಹೆಜ್ಜೆಗುರುತನ್ನು ಸಹಿ ಮಾಡಿತ್ತು. ಆ ಸಹಿ, ನಮ್ಮಿಬ್ಬರನ್ನು ಪ್ರೇಮದ ಬಂಧನದಲ್ಲಿ ಸಿಲುಕಿಸಿ ನಿತ್ಯವೂ ಖುಷಿ ಖುಷಿಯ ನೂತನ ಊಟವನ್ನು ಮನಸಿಗೆ … Read more