ಪಂಜು ಕಾವ್ಯಧಾರೆ

ಬದುಕ ನೇಯ್ದ ಅವ್ವ…!! ಕಾವ್ಯ ಪುರಾಣ ವೇದ ಉಪನಿಷತ್ತು ಕಟ್ಟಿ ತಿಳಿಸಿ ಓದಿದವಳಲ್ಲ ಹೊಲ ಗದ್ದೆ ಪೈರು ಮನೆಯನ್ನ ಜೇಡರ ಬಲೆಯಂತೆ ನೇಯ್ದು ಬಂಡೆಯಲ್ಲಿ ಮೊಳಕೆಯೊಡೆದು ಸೂರಿಗೆ ಚಂದ್ರನಾಗಿ ತಂಪ ನೀಡಿದವಳು ಕೋಳಿ ಕೂಗೋ ಮುಂಚೆ ಎದ್ದು ದನ ಕರು ಕಟ್ಟಿ, ಕಸ ಸುರಿದು ಬಂದು ಮಬ್ಬ ನೆಲದಾಗಸವ ಶುಚಿಗೊಳಿಸಿ ನೀರ-ನಿಡಿ ಹಿಡಿದು ಕಾಯಿಸಿ ಹಜಾರದಲ್ಲಿ ಮಕ್ಕಳಿಗೆ ಮಜ್ಜನ ಮಾಡಿಸಿ ಕೊಳಕಿಲ್ಲದ ಶ್ವೇತವಸ್ತ್ರ ತೊಡಿಸಿ ಲೋಕದ ಮಾನ ಮುಚ್ಚಿ ಬಾಚಣಿಗೆಯಲ್ಲೆ ವಿಶ್ವಪರ್ಯಟಿಸಿ ಚಿಂದಿ ಮನಗೂಡಿಸಿ ಸಮತೆ ಸಾರಿ … Read more

ಮೈತ್ರಿ ಪ್ರಕಾಶನ ಕಥಾ ಸ್ಫರ್ಧೆ

ಹೊಸ ವರ್ಷದ ಹೊಸಿಲಲ್ಲಿ ಮೈತ್ರಿ ಪ್ರಕಾಶನ ಹೊಸ ಯೋಜನೆಯೊಂದಿಗೆ ನಿಮ್ಮ ಮುಂದೆ ಬಂದಿದೆ…. ಒಂದು ಕಥಾ ಸ್ಫರ್ಧೆಯನ್ನು ಆಯೋಜಿಸಲಾಗುತ್ತಿದೆ. ಮೈತ್ರಿ ಪುಸ್ತಕ ಪ್ರಶಸ್ತಿ ಆರಂಭಿಸುತ್ತಿದ್ದೇವೆ..! ಆಸಕ್ತ ಲೇಖಕರು ೮-೧೦ ಕತೆಗಳ ಡಿಟಿಪಿ ಮಾಡಿಸಿ ಕತೆಗಳನ್ನು ಕಳಿಸಬಹುದು…. ಈ ಕೆಳಗಿನ ನಿಯಮಾವಳಿಗಳನ್ನು ಗಮನಿಸಿ… ೧) ಕತೆಗಳು ಸ್ವಂತದ್ದಾಗಿರಬೇಕು. ಅನುವಾದ, ಆಧಾರ ಸ್ಫೂರ್ತಿ ಪಡೆದ ಕತೆಗಳಿಗೆ ಅವಕಾಶವಿಲ್ಲ. ೨) ಇದುವರೆಗೂ ಒಂದೂ ಕಥಾಸಂಕಲನ ತರದ ಹೊಸಬರಿಗೆ ಮಾತ್ರ ಈ ಸ್ಫರ್ಧೆಯಲ್ಲಿ ಅವಕಾಶವಿದೆ. ೩) ಸುಮಾರು ೮-೧೦ ಕತೆಗಳನ್ನು ಡಿಟಿಪಿ ಮಾಡಿಸಿ … Read more

ಹೊಸ ಬೆಳಕು: ವೈ. ಬಿ. ಕಡಕೋಳ

ವಂದನಾಳ ಬಾಳಿನಲ್ಲಿ ಏನೋ ದುಗುಡ. ಮುಖ ಸಪ್ಪೆಯಿಂದ ಮನೆಗೆಲಸದಲ್ಲಿ ಆಸಕ್ತಿ ಇಲ್ಲದಂತೆ ಮೋಬೈಲ್‍ದಲ್ಲಿ ಏನನ್ನೋ ಟೈಪಿಸುತ್ತ ಕುಳಿತಿದ್ದಳು. ಅದೇ ಸಂದರ್ಭ ಆ ಕಡೆಯಿಂದ ಅವಳ ಗೆಳತಿಯ ಕರೆ ಬಂತು ”ಹಲೋ ವಂದನಾ ಏನು ಮಾಡುತ್ತಿರುವೆ. ”? ಪ್ರಶ್ನೆ ಬರುವುದಷ್ಟೇ ತಡ ದುಃಖ ಉಮ್ಮಳಿಸಿ ಬಂದು ಅಳತೊಡಗಿದಳು. ಆ ಕಡೆಯಿಂದ ಮಾತೇ ಬರದಾದಾಗ ಇವಳ ಅಳುವ ಧ್ವನಿಯನ್ನು ಕೇಳಿ ಸುಮ ”ಯಾಕೆ ಏನಾಯಿತೇ ನಿನಗೆ, ಯಾಕೆ ಈ ಅಳು. ”? ಎಂದೆಲ್ಲ ಪ್ರಶ್ನೆಗಳ ಸುರಿಮಳೆಯೇ ಸುಮಳಿಂದ ಬಂದಾಗ ವಂದನಾ … Read more

ಬದಲಾಗುತ್ತಿದೆ ಅಡುಗೆ ಕಾನ್ಸೆಪ್ಟ್: ವೇದಾವತಿ ಹೆಚ್.ಎಸ್.

ಸ್ನೇಹಿತೆಯೊಬ್ಬಳು ನನ್ನಲ್ಲಿ “ನೀನೇಕೆ ಕ್ಯಾರಿಯರ‍್ ಮೀಲ್ಸ್ ಕಾನ್ಸೆಪ್ಟ್ ಅನ್ನು ಪ್ರಾರಂಭ ಮಾಡಬಾರದು?ಹೇಗಿದ್ದರೂ ರುಚಿ ರುಚಿಯಾಗಿ ಅಡುಗೆ ಮಾಡುತ್ತಿಯಾ.”ಎಂದಾಗ ಅದುವರೆಗೂ ನನ್ನ ತಲೆಯಲ್ಲಿ ಯೋಚಿಸದ ವಿಷಯವೊಂದು ತಲೆಯಲ್ಲಿ ಹೊಕ್ಕಿತು.ಅದನ್ನೇ ಯೋಚಿಸುತ್ತಾ ಅಡುಗೆ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೆ.ನನ್ನ ಗೆಳತಿಯಂತೆ ನಮ್ಮ ಮನೆಯ ನೆರೆಮನೆಯಾಕೆಯೂ ಒಮ್ಮೆ ನನ್ನಲ್ಲಿ “ನೀವೇನಾದರೂ ಮನೆಯಲ್ಲೇ ಅಡುಗೆ ಮಾಡಿ ಕ್ಯಾರಿಯರ್ ಮೀಲ್ಸ್ ತಯಾರಿಸಿ ಕೊಡುವುದಾದರೆ ನಾನು ಮೊದಲು ನಿಮ್ಮ ಗಿರಾಕಿಯಾಗುತ್ತೇನೆ”ಎಂದಿದ್ದರು.ಅವರ ಮಾತಿಗೂ ನಾನೇನು ಹೇಳಿರಲಿಲ್ಲ.ಪುನಃ ಇನ್ನೊಬ್ಬ ಗೆಳತಿ ನನ್ನಲ್ಲಿ “ಈಗ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಲ್ಲಿ … Read more

ಸೃಷ್ಟಿಯೆಂದರೆ ಸ್ತ್ರೀ ತಾನೆ….: ಸಿಂಧು ಭಾರ್ಗವ್. ಬೆಂಗಳೂರು

ಹೆಣ್ಣಿನ ವಿವಿಧ ರೂಪಗಳನ್ನು ನಾವು ಕಾಣಬಹುದು. ಅದರಲ್ಲಿ ತಾಯಿಗೆ ಮೊದಲ ಸ್ಥಾನ . ಕಾರಣ ಅವಳೇ ಜನನಿ. ಹಡೆದವ್ವ. ಅವಳು ಒಂದು ಮಗುವನ್ನು ಹೆತ್ತು ಈ ಜಗತ್ತಿಗೆ ಪರಿಚಯಿಸಿದರೆ ಮಾತ್ರವೇ ನಾವು ಲೋಕ ನೋಡಬಹುದು. ನಂತರ ಅಕ್ಕ, ತಂಗಿ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ಮಡದಿ, ಮಗಳು, ಗೆಳತಿ. ಆದರೆ ಹೆಣ್ಣನ್ನು ಪ್ರತಿಯೊಬ್ಬರೂ ತಾಯಿಯಾಗಿ ನೋಡುತ್ತಾರೆಯೇ? ತಮ್ಮ ಮನೆಯ ಅಕ್ಕನೋ ಇಲ್ಲವೇ ತಂಗಿಯಂತೆ ಸ್ವೀಕರಿಸುತ್ತಾರೆಯೇ? ಅವಳಿಗೆ ಗೌರವದ ಸ್ಥಾನ ನೀಡಲಾಗುತ್ತಿದೆಯೇ? ಮೋಹ, ಮೋಸ, ಕಾಮ, ಕಾಸಿನ ವ್ಯಾಮೋಹ, … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೩): ಎಂ. ಜವರಾಜ್

ಇಲ್ಲಿಯವರೆಗೆ -೩- “ಏಯ್, ನಾನ್ ಹೇಳ ಕತ ಕೇಳ್ತ ಇದ್ದಯ ಕೇಳ್ತ ಇಲ್ವ.. ನಿದ್ಗಿದ್ದ ಮಾಡ್ತ ಕಾಟಾಚಾರ್ಕ ಕುಂತ್ಕಂಡು ಆಟ ಆಡ್ತ ಇದ್ದಯ ಬಂಚೊತ್” ಏರಿಸಿದ ದನಿಯಲ್ಲಿ ಮೆಟ್ಟು ಬೆದರಿಸಿತಲ್ಲಾ.. ನಾನು ಬೆಚ್ಚಿ ಬೆರಗಾಗಿ ದಡಕ್ಕನೆ ಮೇಲೆದ್ನಲ್ಲಾ.. “ಹೇಳ್ತ ಹೇಳ್ತ ನಿಂಗ್ಯಾಕ್ ಅನುಮಾನ ಬಂತೋ.. ನಾ ಕೇಳ್ತ ಕೇಳ್ತ ವಸಿ ತೂಕುಡ್ಕ ಬಂತಲ್ಲಾ.. ನೀ ಹೇಳ ಕತಾ ಇಂಟ್ರೆಸ್ಟಾಗಿದೆಯಲ್ಲಾ.. ನನ್ ವಂಶದ ಕರಾಮತ್ತು ಅಂದೆಲ್ಲಾ.. ಅದಕ್ಕಾದ್ರು ನೀ ಹೇಳ ಕತಾ ನಾ ಕೇಳ್ಬೇಕಲ್ಲಾ…” “ಏಯ್ ತಿರಿಕ ಮಾತಾಡ್ಬೇಡ..” … Read more

ಮುಗಿಯಿತೇ ಜವಾಬ್ದಾರಿ??: ಸಹನಾ ಪ್ರಸಾದ್

ಅಯ್ಯೋ, ನಿಮಗೇನ್ರೀ, ಮಗಳ ಮದುವೆ ಆಯ್ತು, ಮಗ ಕೈಗೆ ಬಂದ. ಇನ್ನು ನಿಮ್ಗೆ ಯೋಚನೆ ಇಲ್ಲ. ಆರಾಮವಾಗಿ ಓಡಾಡಿಕೊಂಡಿರಬಹುದು. ಅಸೂಯೆ, ಮೆಚ್ಚುಗೆ ತುಂಬಿದ ಈ ತರಹದ ಮಾತುಗಳು ನನಗೆ, ಮಗಳ ಮದುವೆ ಮಾಡಿ ನಾ ಅತ್ತೆಯಾದ ಮೇಲೆ ಮಾಮೂಲಾಗಿಬಿಟ್ಟಿದೆ. ಹೌದಲ್ವಾ, ಜನ ಸಾಮಾನ್ಯರ ಕನಸಿನ ಪ್ರಕಾರ ಬದುಕು ಸಾಗಿದಾಗ ಜನ ಯೋಚಿಸೋದು ಸರೀನೆ. ಆದರೆ ಇಷ್ಟಕ್ಕೆ ಹೆಣ್ಣುಮಕ್ಕಳ ಜವಾಬ್ದಾರಿ ಮುಗಿಯುತ್ತವೆಯೇ? ಹೆಣ್ಣು ಮಕ್ಕಳಿರಲಿ, ಗಂಡು ಮಕ್ಕಳಿಗೂ ಜವಾಬ್ದಾರಿ ಅನ್ನುವುದು ಮುಗೀತು, ಇನ್ನು ಮುಂದೆ ನಿರಾಳ ಅನ್ನುವುದು ಬಹಳ … Read more

ರಾಯರ ಕುದುರೆ ಕತ್ತೆ ಆಯ್ತು..!!?: ವೆಂಕಟೇಶ ಚಾಗಿ

ಅನಂತಪುರ ಎಂಬ ಊರಿನಲ್ಲಿ ಹಬ್ಬಿದ ನಾಥ ಎಂಬ ಶ್ರೀಮಂತ ವ್ಯಕ್ತಿ ವಾಸವಾಗಿದ್ದನು ಅವನು ತನ್ನ ಸುಂದರವಾದ ಸಂಸಾರದೊಂದಿಗೆ ಉತ್ತಮ ಜೀವನ ನಡೆಸುತ್ತಾ ಸಂತೋಷದಿಂದ ಬದುಕುತ್ತಿದ್ದರೂ ತನ್ನ ಸ್ನೇಹಿತರಿಗೆ ಹಾಗೂ ನಂಬಿಕಸ್ಥ ರಿಗೆ ಕಾಳು-ಕಡಿ ಅಥವಾ ಹಣವನ್ನು ನೀಡಿ ಅವರ ದುಡಿಮೆಗೆ ನೆರವಾಗುತ್ತಿದ್ದರು ಸಾಲ ಪಡೆದವರು ಕಾಲಕ್ಕೆ ಸರಿಯಾಗಿ ತಾವು ಪಡೆದ ವಸ್ತುಗಳನ್ನು ಅಥವಾ ಹಣವನ್ನು ತಿರುಗಿಸುತ್ತಿದ್ದರು . ಅಲ್ಪ ಪ್ರಮಾಣದ ಬಡ್ಡಿಯನ್ನು ಪಡೆಯುತ್ತಿದ್ದಾನೆ ಯಾರಿಗೂ ನೋಯಿಸದೆ ವ್ಯವಹಾರವನ್ನು ನಡೆಸುತ್ತಿದ್ದನು. ಅದ್ಭುತ ನಾಥನಿಗೆ ಸಾಲವನ್ನು ಮರಳಿ ಕೇಳಲು ಊರಿಂದ … Read more

ಶಾಲಾ ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆ ಎಂಬ ಮಾನದಂಡದ ಪ್ರಸ್ತುತತೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಶಾಲಾ ಕಾಲೇಜುಗಳಲ್ಲಿ ವರ್ಷವೆಲ್ಲಾ ವಿದ್ಯಾರ್ಥಿಗಳು ಕಲಿತಿದ್ದನ್ನು, ಶಿಕ್ಷಕರು ಕಲಿಸಿದ್ದನ್ನು ಎಷ್ಟು ಕಲಿತ್ತಿದ್ದಾರೆ? ಹೇಗೆ ಕಲಿತ್ತಿದ್ದಾರೆ? ಹೇಗೆ ಉತ್ತರಿಸಿದ್ದಾರೆ? ಎಂಬುದನ್ನು ಅಳೆದು ತಿಳಿಯುವ ವಿಧಾನವೇ ಪರೀಕ್ಷೆ! ವರ್ಷವೆಲ್ಲಾ ಕಲಿತ್ತದ್ದನ್ನು, ಕಲಿಸಿದ್ದನ್ನು ಮೂರು ಗಂಟೆಯಲ್ಲಿ ಅಳೆಯುವ ವಿಧಾನ ನಮ್ಮಲ್ಲಿ ಪ್ರಸಿದ್ದವಾದ, ಬಹು ಮಾನ್ಯವಾದ, ಸಾಮೂಹಿಕವಾಗಿ, ಒಮ್ಮೆಗೆ ಬಹುಜನರ ಪರೀಕ್ಷಿಸುವ ವಿಧಾನವಾಗಿದೆ! ಸಾಮಾನ್ಯವಾಗಿ ಬರವಣಿಗೆ ಮೂಲಕ ಪರೀಕ್ಷಿಸಲಾಗುತ್ತದೆ. ಪ್ರಾಕ್ಟಿಕಲ್ ಕಾಮನ್ನಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಇರುವುದಿಲ್ಲ! ಕೆಲವರಿಗೆ ಪ್ರಾಕ್ಟಿಕಲ್ ಬಹು ಮುಖ್ಯವಾಗಿರುತ್ತದೆ. ಹಾಗೆ ಕೆಲವರಿಗೆ ಈ ಪರೀಕ್ಷೆಗಳ ಜತೆಗೆ ಮೌಕಿಖ ಪರೀಕ್ಷೆಯೂ ಇರುತ್ತದೆ! … Read more