ಪಂಜು ಕಾವ್ಯಧಾರೆ

ಮೌನದ ಮನ ಮೌನವಾಗದಿರು ಮನವೇ ಮೊದಲಿಸುವ ಮುಖಗಳ ಕಂಡು ಇದು ನಿನ್ನ ಜೀವನವೇ.. ಕಾಯಕದಲಿ ಹಗಲಿರುಳು ಶ್ರಮಿಸು ಕಿವಿಗೊಡದಿರು ಎಡರು ತೊಡರಿಗೆ ನಿನ್ನೊಳಗಿನ ಮುಕ್ತಿ ಪ್ರಹರಿಸು ಸೋತನೆಂದು ಅಳದಿರು ಗೆದ್ದನೆಂದು ಬೀಗದಿರು ಸಾಧನೆಗೆ ದಾರಿಗಳು ನೂರಾರು ನಡೆವ ದಾರಿಲಿ ಕಲ್ಲು ಮುಳ್ಳುಗಳು ಬರಿ ನೋವ ಅಣಕು ತುಣುಕುಗಳು ಚಿಮ್ಮುತ ಬರಲಿ ನಿನ್ನೊಳಗಿನ ಆವಿಷ್ಕಾರಗಳು –ಹರಾಸು ಮನುಷ್ಯರಿಲ್ಲದ ಬೀದಿಯಲ್ಲಿ… ಮನುಷ್ಯರಿಲ್ಲದ ಬೀದಿಯಲ್ಲಿ ಮನಸು ಅಲೆಯುತ್ತಿತ್ತು ಮನುಷ್ಯನ ಕುಕೃತ್ಯ ಅಲ್ಲಿಲ್ಲಿ ಅವುಗಳ ಕಲೆ ಎಷ್ಟು ಮಳೆ ಸುರಿದರೂ,ಗಂಧ ಲೇಪಿಸಿದರೂ ಶತಮಾನ … Read more

NRIs ಅಂದ್ರೆ ನಾನ್ ರಿಟರ್ನಿಂಗ್ ಇಂಡಿಯನ್ಸ್? (ಭಾಗ 3): ಗುರುಪ್ರಸಾದ ಕುರ್ತಕೋಟಿ

ಇಲ್ಲಿಯವರೆಗೆ ಮಿಸ್ಟರ್. ಬೆಂಕಿಯ ಜೊತೆ ಜೊತೆಗೆ ನನಗೆ ಇನ್ನೊಬ್ಬ ಗೆಳೆಯನ ಪರಿಚಯವಾಗಿದ್ದು ಅಲ್ಲಿನ ಹೊಸ ವರ್ಷದ ಸಂಭ್ರಮದ ಸಮಯದಲ್ಲಿ. ಅವನ ಹೆಸರು ಕೋಮಾ (ದಯವಿಟ್ಟು ಗಮನಿಸಿ: ಇಲ್ಲಿನ ಪಾತ್ರಗಳೆಲ್ಲವೂ ನೈಜ, ಆದರೆ ಹೆಸರುಗಳು ಅಡ್ಡ ಅಥವಾ ಕಾಲ್ಪನಿಕ!). ಅವನಿಗೆ ಕೊಮಾ ಎಂಬಾ ಹೆಸರು ಯಾಕೆ ಅಂದರೆ ಅವನು ತುಂಬಾ ವಿಷಯಗಳಲ್ಲಿ ಬಹು ಬೇಗನೆ ಬೇಜಾರಾಗುತ್ತಿದ್ದ. ಆ ಹೆಸರನ್ನು ಅವನಿಗೆ ಕೊಟ್ಟವನು ಅಪ್ಪು ಗೌಡಾ (ಇದು ಕೂಡ ನೈಜ ಹೆಸರಲ್ಲ. ಈ ಸಂಗತಿಯನ್ನು ನಿಮಗೆ ಪದೆ ಪದೆ ಹೇಳಿದ್ದಕ್ಕೆ … Read more

ಅನುಭೂತಿಗೊಲ್ಲದ ಬಂಧ: ರೇವತಿ ಶೆಟ್ಟಿ

ಆರ್ದ ಮಳೆಯ ಆರ್ಭಟಕ್ಕೆ, ಅಂಗಳದ ತುಂಬೆಲ್ಲಾ ಹರಡಿ ಹಿಪ್ಪೆಯಾದ ಪಾರಿಜಾತ,ಹೆಂಚಿನ ಛಾವಣಿಯಿಂದ ಬೆಳ್ಳಿ ತಂತಿಯಂತೆ ಧೋ ಬೀಳೋ ಮಳೆಸಾಲು, ಪಡಸಾಲೆಯ ಮಧ್ಯದಲ್ಲಿ ನೀಲಾಂಜನ,ಅಲ್ಲೇ ಪಕ್ಕದಲ್ಲಿ ಉಸಿರು ಮರೆತು ಮಲಗಿದ ದೇಹ, ಗುಸುಗುಸು ಮಾತಿನೊಂದಿಗೆ ಅತ್ತಿಂದಿತ್ತ ಸುಳಿದಾಡುತ್ತಾ ಶವ ಸಂಸ್ಕಾರಕ್ಕೆ ತಯಾರಿಯಲ್ಲಿರುವ ಮನೆಯವರು. ಅಷ್ಟರಲ್ಲಿ ಮನೆಯ ಹಿರಿಯರೊಬ್ಬರು ನಿರ್ಧಾರದ ದನಿಯಲ್ಲಿ, ಏನೇ ಆಗಲಿ, ಶಂಕರಪ್ಪ ಕೊನೆಗಾಲದಲ್ಲಿ ಅಂತ ಖರೀದಿ ಮಾಡಿದ್ದ ಜಮೀನಲ್ಲೆ ಶವ ಸಂಸ್ಕಾರ ಮಾಡೋಣ, ಅವನ ಆತ್ಮಕ್ಕೂ ಶಾಂತಿ ಸಿಗತ್ತೆ ಅಂತ ಅನ್ನಿಸತ್ತೆ, ಏನಂತೀರಿ? ಅಂತ ಶಂಕರಪ್ಪನ … Read more

ನನ್ನ ಮುದ್ದು ಅಪ್ಪ: ಸುನಿತಾ. ಎಸ್. ಪಾಟೀಲ

ಅಪ್ಪ ಎಂಬ ಎರಡಕ್ಷರದ ಈ ಪದ ಸ್ವಲ್ಪ ಭಾರ,  ಮಕ್ಕಳಿಗೆ ಮುಜುಗರ ಉಂಟುಮಾಡುವಂತದ್ದು. ಅಪ್ಪ ಎಂಬ ಸಂಬಂಧಕ್ಕೆ ಬಹುಶಃ ಯಾರು ಅಷ್ಟೊಂದು ಪ್ರಾಶಸ್ತ್ಯ  ಕೊಡೋದಿಲ್ಲ. ಹಾಗಂತ ಪ್ರೀತಿ ಇಲ್ಲ ಅಂತಲ್ಲ. ಅಪ್ಪನಿಗೆ ಕಂಡರೆ ಅದೇನೋ ಮುಜುಗರ, ಗೌರವ, ಭಯ. ಏಕೆಂದರೆ ಅಮ್ಮನ ಜೊತೆ ಇರುವ ನಮ್ಮ ಸೆಂಟಿಮೆಂಟ್,  ಅಟ್ಯಾಚ್ಮೆಂಟ್, ಅಪ್ಪನ ಜೊತೆ ಸ್ವಲ್ಪ ಕಡಿಮೆನೇ ಅಲ್ವಾ? ಆದರೆ ಎಲ್ಲರಿಗೂ ಗೊತ್ತು ಅಪ್ಪ ಅಂದ್ರೆ ಸ್ಫೂರ್ತಿ,  ಅಪ್ಪ ಅಂದ್ರೆ ತ್ಯಾಗ,  ಅಪ್ಪ ಅಂದ್ರೆ ಆಕಾಶ,  ಅವರ ಪರಿಶ್ರಮಕ್ಕೆ ಬೆಲೆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 29 & 30): ಎಂ. ಜವರಾಜ್

-೨೯- ಅವತ್ತೊಂದಿನ ಈ ಅಯ್ನೋರು ಹೊಳಕರಲಿ ಕೈಯಿ ಕಾಲು ತೊಳಕಂಡು ನನ್ನೂ- ಮರುಳ್ಗಾಕಂಡು ಉಜ್ಜಿ ತೊಳ್ದು ನೀರಂಜಿ ಮರದ ಬುಡದಲ್ಲಿ ನೀರ ಸೋರಕ ಬುಟ್ಟು ಗರಕ ಮ್ಯಾಲ ತಿಕ ಊರಿ ಕುಂತ್ಮೇಲ ಅಕ್ಕ ಪಕ್ಕ ಊರೋರು ಅನ್ತ ಕಾಣುತ್ತ ನೆಪ್ಪಿರ ಮುಂದಾಳು ಬಂದ್ರು. ನಾನು ನೋಡ್ತನೆ ಇದ್ದಿ ಗಗ್ಗೇಶ್ವರಿ ಆಣ್ಗುಂಟ ಹೊಳ ದಾಟ್ಗಂಡು ಚೆಂಗುಲಿ ಬತ್ತಿರದು ಕಾಣ್ತು ಅವನ ಕಂಕುಳಲ್ಲಿ ಏನಾ ಇತ್ತು. ಬಂದವ ಸುತ್ತ ಕುಂತಿದವ್ರ ಮುಂದ ಟವಲ್ಲ ಹಾಸಿ ಪುರಿ ಸುರುದು ಕಾರಸ್ಯಾವ್ಗ ಕಳ್ಳ … Read more

ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ

ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ … Read more

ಸ್ನೇಹದ ಕಡಲಲ್ಲಿ: ಸುಧಾ ಹುಚ್ಚಣ್ಣವರ

ಮನುಷ್ಯ ಇತರ ಎಲ್ಲ ಜೀವಿಗಳಿಗಿಂತ ಬುದ್ಧಿಜೀವಿ ಎನಿಸಿಕೊಂಡಿದ್ದಾನೆ, ಹಾಗೆಯೇ ಸಂಘಜೀವಿ. ಸಮಾಜವನ್ನು ಬಿಟ್ಟು ಬದುಕಲಾರ ತನ್ನ ಎಲ್ಲ ಬೇಕು ಬೇಡಿಕೆಗಳನ್ನು ಸಮಾಜದ ಸಂಘ ಜೀವನದಲ್ಲಿ ಈಡೇರಿಸಿಕೊಳ್ಳುತ್ತಾನೆ. ತನ್ನ ಕುಟುಂಬದ ಸದಸ್ಯರ ಜೊತೆ ನೆರೆಹೊರೆಯವರ ಜೊತೆ ಪ್ರೀತಿ ಸ್ನೇಹ ಸಹಕಾರ ಕೊಟ್ಟು ತೆಗೆದುಕೊಳ್ಳುವ ಭಾವನೆಯಿಂದ ಬೆಳೆಯುತ್ತಾ ಸಾಗುತ್ತಾನೆ. ಹೀಗೆ ಒಂದು ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ “ಜೀವನದ ಮೌಲ್ಯಗಳು” ಎಂಬ ವಿಷಯದ ಕುರಿತು ಪಾಠ ಮಾಡುತ್ತಿರುವಾಗ ವಿದ್ಯಾರ್ಥಿಗಳಿಗೆ ಹೇಳುತ್ತಾರೆ, ಮಕ್ಕಳೇ ಜೀವನದಲ್ಲಿ “ಪ್ರೀತಿ ಸ್ನೇಹ “ಎಲ್ಲವೂ ಬಹಳಷ್ಟು ಮುಖ್ಯ. ಮನುಷ್ಯ … Read more

ಹೇ ಮಾನವ ನಮ್ಮನ್ನೂ ಬದುಕಲು ಬಿಡಿ: ಮಂಜುಳಾ ಶೆಟ್ಟಿಗಾರ್

ಮುಂಜಾನೆ ಬೇಗನೆ ಎದ್ದೆ  ಕಾರಣ ಬಯಕೆಯ ಹಸಿವು. ಗರ್ಬಿಣಿಯಾಗಿದ್ದರಿಂದ ತುಂಬಾ ಆಯಾಸ ಹಾಗಾಗಿ ಹಿಂದಿನ ದಿನ ರಾತ್ರಿಯಾಗುವುದರೊಳಗೆ ಸಿಕ್ಕಿದ್ದನ್ನು ತಿಂದು ಬೇಗನೆ ಮಲಗಿದ್ದೆ. ಅದೇ ಕಾರಣ ಇಂದು ಸೂರ್ಯನ ರಶ್ಮಿ ಸೊಕುವುದಕ್ಕಿಂತ ಮೊದಲೇ ಹಸಿವು ನನ್ನ ಬಡಿದೆಬ್ಬಿಸಿತು.  ಸರಿ ಏನಾದರೂ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕು, ನನಗಲ್ಲದಿದ್ದರು ನನ್ನ  ಉದರದಲಿ ಬೆಳೆಯುತ್ತಿರುವ ನನ್ನ ಕನಸಿನ ಕೂಸಿಗೆ ಎಂದು ದೌಡಾಯಿಸಿ ಎದ್ದೆ. ಗರ್ಭಿಣಿಯ ಆಯಾಸ ಕಾಡುತಿತ್ತು. ಆಯಾಸ ಎಂದು ಕೂತವಳಿಗೆ ಮತ್ತೇ ಹಸಿವು ಹೊಟ್ಟೆಯಲ್ಲಿ ಚುರ್ ಎಂದು ಎಚ್ಚರಿಸಿತು.  ತಡಮಾಡದೆ ಎದ್ದು … Read more

ವಿದಾಯ- ಸಾಧ್ಯವೇ?: ಸಹನಾ ಪ್ರಸಾದ್

ಕಳೆದ ವಾರದಲ್ಲಿ ಚಿಕ್ಕ ವಯಸ್ಸಿನ ವ್ಯಕ್ತಿಗಳ ಸಾವು ನಮ್ಮನ್ನು ನೋಯಿಸಿದೆ. ವಯಸ್ಸಾದವರು ಹೋದರೆ ಮನಸ್ಸಿಗೆ ದುಃಖವಾದರೂ ಸಮಾಧಾನ ಮಾಡಿಕೊಳ್ಳಬಹುದು ” ಹೋಗಲಿ ಬಿಡು, ಬದುಕು ಕಂಡಿದ್ದರು, ಅದರ ಸಿಹಿ, ಕಹಿ ಉಂಡಿದ್ದರು. ಅವರ ಆಯುಸ್ಸು ಮುಗಿದಿತ್ತು. ಭಗವಂತ ಕರೆದುಕೊಂಡ” ಎಂದು. ಚಿಕ್ಕವರಾದರೆ ಮುಮ್ಮಲ ಮರುಗುವುದನ್ನು ಬಿಟ್ಟು ಬೇರೆನೂ ಮಾಡಲಾಗುವುದಿಲ್ಲ. ವಿದಾಯ ಹೇಳುವುದು ಕಷ್ಟ ಎಂಬುದರಲ್ಲಿ ದೂಸರಾ ಮಾತಿಲ್ಲ. ಅತ್ಯಂತ ಕಷ್ಟಕರವಾದ ಪದಗಳಲ್ಲಿ ಮೊದಲ ಬಾರಿಗೆ “ಹಲ್ಲೊ” ಎನ್ನುವುದು, ಕೊನೆಯ ಬಾರಿಗೆ ” ಬೈ” ಎನ್ನುವುದು ಎನಲಾಗಿದೆ. ಹಲ್ಲೊ … Read more