ಪಂಜು ಕಾವ್ಯಧಾರೆ

ನಂಕ್ಯಾಕೋ…. ಬೆತ್ತಿಂಗ್ಳುನ ಕಂಡ್ರೇ ಭಯಾ ಆತೈತೆ ಬಾಗ್ಲಾಕ್ಕಂಡು ಬುಡ್ಡೀದೀಪಾನ ಆರಿಸಿ ಸುಮ್ಜೆ ಕೂಕಂತೀನಿ ಗವ್ವನ್ನೋ ಕತ್ಲು ಮೈಮ್ಯಾಗೇ ನಿಧಾನುಕ್ಕೆ ರೇಷ್ಮೇ ಹುಳ ತಲೆಯಾಡ್ಸಂಗೆ ನಿನ್ನ ಗ್ಯಾಪ್ನದ ನೆನಪುಗಳು ಎದ್ದು ನಿಂತ್ಕಂತವೆ ಗ್ವಾಡೇ ಮ್ಯಾಗೆ ನೀನೇ ಬಂದಂಗಾತು ದಾಳಿಂಬೆ ಬೀಜದ ಸಾಲಿಟ್ಟಂಗೆ ನಗ್ತಿದ್ದೆ ನನ್ನ ಮನುಸ್ನಾಗೆ ಒಲವಿನ ದೀಪ ಬೆಳುಗ್ತು ನಂಕಾಗ ಗೊತ್ತಾತು ನಾನೂನು ಒಬ್ಮನ್ಸಾ ಅಂತಾ ಗ್ವಾಡೇ ಮ್ಯಾಗೇ ಕೂಕಂಡು ನಗ್ತಾ ಇರೋಳ್ಗೇ ನಡುಮನೆತಾಕ ಬಂದು ಆಸರಿಕೆ- ಬ್ಯಾಸರಿಕೆ ಕಳಿಯಾಕೆ ಮನುಸಾಗ್ತಿಲ್ವಾ… ನಂಕ್ಯಾಕೋ ಬೆಳಕೇ ಬ್ಯಾಡಾ ಅನ್ನುಸ್ಬುಟೈತೆ … Read more

ಮನೆ ಬಾಡಿಗೆಗಿದೆ!: ಎಸ್.ಜಿ.ಶಿವಶಂಕರ್

ಹೌದು, ನನ್ನ ಮನೆಯ ಮೊದಲ ಮಹಡಿ ಮನೆ ಬಾಡಿಗೆಗಿದೆ! ಫ್ಯಾಕ್ಟ್ರಿ ಕೆಲಸ ಮಾಡಿದವರಿಗೆ ನನ್ನ ಕಾಲದಲ್ಲಿ ಪೆನ್ಷನ್ ಇರಲಿಲ್ಲ. ಅದಕ್ಕೇ ಪಿಎಫ್ ಸಾಲ ತೆಗೆದು ಬಾಡಿಗೇಗೇಂತ ಇಪ್ಪತ್ತು ವರ್ಷದ ಹಿಂದೆ ಮಹಡಿ ಮೇಲೊಂದು ಮನೆ ಕಟ್ಟಿಸಿದ್ದೆ. ಕೆಳಗೆ ನಾನು ವಾಸ, ಮೇಲಿನದು ಬಾಡಿಗೆಗೇಂತ ಯೋಜನೆ ಮಾಡಿ ಕಾರ್ಯ ಅರೂಪಕ್ಕಿಳಿಸಿದ್ದೆ. ಕಳೆದ ಇಪ್ಪತ್ತು ವರ್ಷದಲ್ಲಿ ಐದಾರು ಜನ ಬಾಡಿಗೆದಾರರು ನೆಮ್ಮದಿಯಿಂದ ಇದ್ದು ಹೋದರು. ಆದರೆ ಈಗ ಮಾತ್ರ ವಿಚಿತ್ರ ಪರಿಸ್ಥಿತಿ ಎದುರಾಗಿತ್ತು. ಪ್ರತೀ ರೂಮಿಗೂ ಅಟ್ಯಾಚ್ಡ್ ಬಾತ್ರೂಮು ಕೇಳುತ್ತಿದ್ದರು! … Read more

ಭಾವೈಕ್ಯತೆಯೆಂಬ ಬಳ್ಳಿಯ ಹೂವುಗಳು: ಹೆಚ್. ಷೌಕತ್ ಆಲಿ

ಯುವ ಕವಿ ಮೆಹಬೂಬ ಪಾಷ ಎ.ಮಕಾನದಾರ ಕೊಪ್ಪಳದವರು.ಸಮಾಜಶಾಸ್ತ್ರದಲ್ಲಿ ಎಂ.ಎ ಮತ್ತು ಬಿ.ಎಡ್ ಶಿಕ್ಷಣದ ಬಳಿಕ ಅತಿಥಿ ಉಪನ್ಯಸಕರಾಗಿ ಸೇವಾ ಕಾರ್ಯ ಆರಂಭ. ಕವಿಯ ಬಗ್ಗೆ ನಾನು ಒಂದಷ್ಟು ವಿಚಾರ ಹೇಳಬೇಕನ್ನಿಸುತ್ತೆ, ಬದುಕಿಗೆ ತುಂಬ ಹತ್ತಿರದನೆಂಟು ಮೆಹಬೂಬ ಪಾಷರವರ ಚಿಂತನೆಗಳು ಆಳಕ್ಕೆ ಹೋದರೂ ಅಲ್ಲಿಯು ಒಂದು ಚಿಗುರು ಕಾಣುವಂಥದ್ದು. ಜಾತಿ, ನೀತಿ, ರೀತಿ, ರೀವಾಜುಗಳಿಂದ ಆಚೆಗೆ ಇವರ ಹೃದಯ ಚಿಂತಿಸುತ್ತದೆ. ಬದುಕು ಅನೇಕ ಘಟ್ಟಗಳಲ್ಲಿ ಅನೇಕ ಅನುಭವ ನೀಡಿ ಅದರಿಂದ ಕಲಿತ ಪಾಠವೇ ಜೀವನದ ಸಾರ್ಥಕದ ಮುನ್ನೋಟವಾಗಿರುತ್ತೆ ಇಂತಹ … Read more

ಅಹಮಿಲ್ಲದ ಮಹಮದರ ಬದುಕೇ ಕವಿತಾಸಾರ: ಡಾ. ಹೆಚ್ಚೆನ್ ಮಂಜುರಾಜ್

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ ರಾಡಿಗೊಳಿಸುವೆ ಏಕೆ, ಮಧುರ ನೆನಪೇ? ಬಹಳ ಒಳ್ಳೆಯ ಕವಿ ಹಾಗೂ ಅದಕಿಂತಲೂ ಒಳ್ಳೆಯ ಮನುಷ್ಯರಾದ ನಿಸಾರ್ ಅಹಮದ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ‘ಕನ್ನಡವೆಂದರೆ ಬರಿ ನುಡಿಯಲ್ಲ. ………’ ಎಂದು ತಿಳಿಸಿ ಕೊಟ್ಟವರಿವರು. ಮನಸು ಗಾಂಧಿಬಜಾರು ಎಂದವರು. ಕನ್ನಡ ನಾಡು ನುಡಿಗಳ ನಿತ್ಯೋತ್ಸವವನ್ನು ಸತ್ಯವಾಗಿಸಿದವರು. ಕುರಿಗಳು ಸಾರ್ ಕುರಿಗಳು ಎಂದು ವಿಡಂಬಿಸಿದವರು. ಮೂಲತಃ ಭೂಗರ್ಭ ವಿಜ್ಞಾನಿಯಾದರೂ ನವೋಲ್ಲಾಸದ ಕವಿಗಳಾಗಿಯೇ … Read more

ಕುರಿಯ ಹಾಲಿನ ಐಸಕ್ರೀಮು (ಭಾಗ ೧): ಗುರುಪ್ರಸಾದ ಕುರ್ತಕೋಟಿ

ಅಮೇರಿಕೆಗೆ ಹೋಗುವುದು ಖಚಿತವಾಗಿ, ವೀಸಾ ಸಂಭ್ರಮಗಳೆಲ್ಲ ಮುಗಿದಾಗ ನಮ್ಮ ಕಂಪನಿಯಲ್ಲಿ ನನಗೆ ಕರೆಗಳು ಬರಲು ಶುರುವಾಗಿದ್ದವು. ಅಮೆರಿಕೆಯ ವೀಸಾ ಸೀಲು ಬಿದ್ದವರು ಅಂದರೆ ಮದುವೆಗೆ ತಯಾರಾದ ಕನ್ಯೆಯರು ಇದ್ದಂತೆ. ಹುಡುಗಿಗೆ ವಯಸ್ಸಾದಂತೆ ತಂದೆತಾಯಿಯರಿಗೆ ಎಷ್ಟು ಆತಂಕ ಇರುತ್ತದೋ (ನಮ್ಮ ಕಾಲದಲ್ಲಿ ಹಾಗಿತ್ತು, ಈಗ ಹುಡುಗನ ತಂದೆತಾಯಿಗೆ ಅಂತ ಓದಿಕೊಳ್ಳಿ!) ಅದಕ್ಕಿಂತ ಹೆಚ್ಚು ಆತಂಕ ಆಯಾ ವಿಸಾಧಾರಿಗಳ ಮ್ಯಾನೇಜರ್ ಗಳಿಗೆ. ನಾವು ಒಂಥರಹದ ಬಿಸಿ ತುಪ್ಪ ಅವರಿಗೆ. ಅದಕ್ಕೆ ಕಾರಣವೂ ಇದೆ. ವೀಸಾಕ್ಕೆ ಅಂತ ಸಿಕ್ಕಾಪಟ್ಟೆ ಖರ್ಚು ಮಾಡಿರುತ್ತಾರೆ. … Read more

ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ

ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ … Read more

ಸುಖಾಂತ: ಅಶ್ಫಾಕ್ ಪೀರಜಾದೆ

-೧- ಮೊದಮೊದಲು ಕ್ಷೇಮವಾಗಿಯೇ ಇತ್ತು ಜೀವನ, ಹೂವಿನಹಾಸಿಗೆಯಾಗಿತ್ತು. ಯಾರಿಗೆ ಗೊತ್ತಿತ್ತು? ಹೀಗೆ ಮುಳ್ಳಿನದಾರಿಯಾಗುವುದೆಂದು?, ಬದುಕು ಕಣ್ಣೀರ ಕಡಲಾಗುವದೆಂದು. ಮನೆಗೆನಾನೊಬ್ಬಳೆ ಮಗಳು, ಅರಮನೆಯಂಥ ಮನೆಗೆ ನಾನೇ ಒಡತಿ. ಅವ್ವನನ್ನನ್ನು ಅಪ್ಪನ ಕೈಗಿಟ್ಟು ಶಿವನ ಪಾದಾ ಸೇರಿದ್ದಳು. ಅವ್ವ ಹೋದಮ್ಯಾಗ ಊರ ಜನ ಅಪ್ಪನಿಗೆ ಇನ್ನೊಂದು ಮದುವೆ ಆಗುವ ಸಲಹೆನೀಡಿದ್ದರೂ, ಹೊಸದಾಗಿ ಬರುವ ಹೆಂಗಸು ಹೆಂಗಿರತಾಳೋ?. ತಾಯಿ ಇಲ್ಲದ ತಬ್ಬಲಿಗೆ ಮಲತಾಯಿ ಹಿಂಸೆ ಬೇರೆ ಬೇಡ ಅಂತಾ ಕಣ್ಣಲ್ಲಿ ಕಣ್ಣಿಟ್ಟು, ಅಂಗೈಯಲಿ ಅರಗಿಣಿ ಸಾಕಿದಾಂಗ ನನ್ನ ಸಾಕಿದ್ದ. ನಾ ಬೆಳದ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 19 & 20): ಎಂ. ಜವರಾಜ್

-೧೯- ಸೂರ್ಯ ಕಣ್ಬುಟ್ಟು ನಾನು ಕಪಿಲ ಬಾವಿ ಮೆಟ್ಲತ್ರ ಇದ್ದಿ ಅಯ್ನೋರು ಬಾವಿ ನೀರೊಳ್ಗ ಈಜ್ತಾ.. ಚೆಂಗುಲಿ ಬಾವಿ ಕಟ್ಟ ಮ್ಯಾಲ ನಗ್ತಾ.. ಅರೆ, ಮ್ಯಾಲಿಂದ ತಿಗುನ್ ತಳ್ಳು ಬೀಳ್ತಲ್ಲಾ.. ಚೆಂಗುಲಿ, ‘ಅಯ್ನೋರಾ ತಳ್ಳು ಉದುರ್ತಾ ಅವ ಆದು ಗುಡ್ಯಾಕಕಿಲ್ವ. ಶಂಕ್ರಪ್ಪೋರು ಈಚೀಚ್ಗ ಬರದೇ ಇಲ್ಲ’ ‘ಅಂವ ನಿಗುರ್ತ ಅವ್ನ ನೀನೆ ಮಾಡ್ಲಾ ಸಂತಗೋಗಿ ಹರಾಜಾಕ್ಲಾ ನಿಂಗೇನ್ ಕೇಮಿ ಇದ್ದದು..’ ‘ಆಯ್ತು ಅಯ್ನೋರಾ ಆಗ ನನ್ನೇನಾರ ಶಂಕ್ರಪ್ಪೋರ್ ಕೇಳುದ್ರಾ..’ ‘ಏಯ್, ಲೌಡೆ ಬಂಚೊತ್ ಅಂವ ಹಂಗೇನಾರ ಬಂದ್ರ … Read more

ಪ್ರೀತಿಯ ದೇವತೆಗಾಗಿ……: ಜಹಾನ್ ಆರಾ

ನನ್ನ ಮುದ್ದು ಮಮ್ಮಿ ಜಾನ್‍ಗೆ ನನ್ನ ಮನದಾಳದಿಂದ ಪ್ರೀತಿ ತುಂಬಿದ ಒಂದು ಸಲಾಮ್. ಅಮ್ಮೀಜಾನ್ ತುಂಬಾ ನೆನಪಾಗ್ತಿದ್ದೀರಾ ನಿಮ್ಮ ಮಡಿಲಿಗೆ ಹಾಗೆ ಓಡಿ ಬಂದು ಮಗುವಾಗಿ ನೆಮ್ಮದಿಯ ತುಸು ಗಳಿಗೆ ಕಳಿಬೇಕು ಅಂತಾ ಅನಿಸ್ತಿದೆ ಆದರೆ ಏನ್ಮಾಡಲಿ ನಿಮ್ಮಿಂದ ನನ್ನನ್ನು ಬಹಳ ದೂರಕ್ಕೆ ಕಳಿಸಿದ್ದೀರಾ. ಮಮ್ಮೀಜಾನ್ ನೆನ್ನೆ ಒಂದು ಪದ್ಯ ಓದ್ದೆ ಸುಭದ್ರಕುಮಾರಿ ಚೌಹಾನ್ ‘ಮೈ ಬಚ್‍ಪನ್ ಕೊ ಭೂಲ್ ರಹಿತಿ ಬೋಲ್ ಉಲಿ ಬಿಟಿಯಾ ಮೇರಿ’ ‘ನಂದನ ವನಸಿ ಖಿಲ್ ಉಟ್ಟಿ ಯಹ ಛೋಟಿಸಿ ಕುಟಿಯಾ … Read more

“ಮಾನಸ ಗುರುವಿಗೆ ನನ್ನ ನಮನ”: ಶ್ರೀ ಕೊಯಾ

” ಮನೋರಮಾ ಮನೋರಮಾ ಮಲಗೋಬದ ಘಮ ಘಮ ” ನಾನು ಅದುವರೆವಿಗೂ ಹೈಸ್ಕೂಲು ದಿನಗಳಲ್ಲಿ ಕೇಳಿ, ಕಲಿತ ಪದ್ಯಗಳಿಗಿಂತಲೂ ಭಿನ್ನವಾಗಿದ್ದ ಪದ್ಯ ಇದಾಗಿತ್ತು. ಕಾಲೇಜಿನ ಮೆಟ್ಟಿಲು ಏರಿದ್ದ ದಿನಗಳವು : ಇಸವಿ ೧೯೭೬ , ದ್ವಿತೀಯ ಪಿಯುಸಿ. ನನಗೆ ನಿಸಾರ್ ಅಹಮದ್ ರವರಂತಹ ಕವಿಯ ಪರಿಚಯ ಮಾಡಿಸಿದ್ದು ಅಂದಿನ ಕನ್ನಡ ಪ್ರಾಧ್ಯಾಪಕರಾಗಿದ್ದ ಶ್ರೀಯುತ ಬಸವರಾದ್ಯರು. ಅಂದಿನ ದಿನಗಳಲ್ಲಿ ತಾಲೂಕ್ ಆಗಿದ್ದ ಚಾಮರಾಜನಗರದ ಕಾಲೇಜಿನಲ್ಲಿ ಕೇವಲ ಮೂವತ್ತು ವಿದ್ಯಾರ್ಥಿಗಳ ವೃಂದಕ್ಕೆ ; ಪಂಪ , ರನ್ನ , ಕುವೆಂಪು … Read more

ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ???: ನಾಗೇಶ್‌ ಪ್ರಸನ್ನ

ನಲ್ಮೆಯ ಗೆಳತಿಯೇ, ನೆನಪಿರಲಿ, ಇದು ನಾನು ಬರೆಯುತ್ತಿರವ ಮೊಟ್ಟಮೊದಲ ಪ್ರೇಮಪತ್ರ. ಈ ಹಿಂದೆ ಯಾರಿಗೂ ಬರೆದಿಲ್ಲ, ಮಂದೆಯೂ ಬರೆಯುವುದಿಲ್ಲ – ನಿಮಗೆ ಹೊರತಾಗಿ. ನಂಬುವುದು, ಬಿಡುವುದು ನಿಮ್ಮ ಕ್ಷಮೆಗೆ ಬಿಟ್ಟಿದ್ದು. ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ??? ಸುಮಾರು 5-6 ವರ್ಷಗಳಾಯಿತು ನಾನು ನಿಮ್ಮನ್ನು ಮೊದಲ ಬಾರಿ ನೋಡಿ. ಆ ದಿನದ ನೆನಪು ನನ್ನೆದೆಯಲ್ಲಿ ಇನ್ನೂ ಉಸಿರಾಡುತ್ತಲೇ ಇದೆ. ಅಂದು, ನಿಮ್ಮ ಮನೆಯಲ್ಲಿ ಯಾವುದೋ ಪೂಜಾ ಕಾರ್ಯಕ್ರಮವಿತ್ತು, ಎಷ್ಟೋ ಜನ ನೆರೆದಿದ್ದರು. ಆದರೆ, ಅಷ್ಟೂ ಜನಗಳಲ್ಲಿ ನನ್ನ … Read more

ನಿತ್ಯೋತ್ಸವ ಮತ್ತು ನಾನು : ಉಷಾ ನರಸಿಂಹನ್

ಬದುಕಿನಲ್ಲಿ ಎಲ್ಲದಕ್ಕು ಮೊದಲೆಂಬುದಿರುತ್ತದೆ. ಭಾವಗೀತೆ ಕೇಳುವುದಕ್ಕು… ಸಾವಿರದೊಂಬೈನೂರ ಎಂಬತ್ತನೆ ಇಸವಿ. ನಮ್ಮ ಮನೆಗೆ ನಿತ್ಯೋತ್ಸವ ಕ್ಯಾಸೆಟ್ ತಂದರು. ಎಲ್ಲರ ಸಮಕ್ಷಮ ಟೇಪ್ ರೆಕಾರ್ಡರ್ ನಲ್ಲಿ ಹಾಕಿದರು. ನಾನು ಭಾವಗೀತೆಗಳನ್ನು ಕೇಳಿದ ಮೊದಲ ಬಾರಿಯದು. ಕವಿಯೇ ಕಾವ್ಯಸಾರಾಂಶ ಹೇಳಿದ ಪರಿ ಅನನ್ಯ. ಮನೋಜ್ಞ ಸಾಹಿತ್ಯ, ಸಂತುಲಿತ ರಾಗಸಂಯೋಜನೆ, ರತ್ನಮಾಲಾಪ್ರಕಾಶ್ ಅವರ ಮಧುಸಿಂಚಿತ ನುಣ್ದನಿ, ಮೈಸೂರು ಅನಂತಸ್ವಾಮಿ ಅವರ ಭಾವಪೂರ್ಣಗಾಯನ… ನಾನು ಹಾಡಿಗೆ ಪರವಶವಾದ ಮೊದಲ ಸಲವದು. ಬದುಕಿನಲ್ಲಿ ವಸಂತ ಅಡಿಯಿಡುತ್ತಿದ್ದ ರಮ್ಯಕಾಲದಲ್ಲಿದ್ದೆ! ನವಿರು, ಪುಳಕ, ತವಕಗಳಿಗೆ ಹಾತೊರೆಯುತ್ತಿದ್ದ ಮೈ … Read more

ವರ್ತಮಾನದಲ್ಲಿ ಬುದ್ಧ-ಬಸವ-ಬಾಬಾಸಾಹೇಬರು ಕುರಿತು ಸ್ವರಚಿತ ಬರಹಗಳ ಆಹ್ವಾನ

ಸಾಮಾಜಿಕ ಪರಿವರ್ತನ ಚಳುವಳಿಗಾರರ ಸ್ಮರಣೆಯಲ್ಲಿ ಗಣಕರಂಗ, ಧಾರವಾಡ ಆಯೋಜಿಸುವ ಸಾಮಾಜಿಕ ಶಾಂತಿ-ಮೈತ್ರಿಗಾಗಿ, ಬುದ್ಧ-ಬಸವ-ಬಾಬಾಸಾಹೇಬ(ತ್ರಿಬಿ) ನೆನಪಿನ ಕವಿಗೋಷ್ಠಿ-22ರಲ್ಲಿ, 2564ನೇ ಬುದ್ಧ ಪೂರ್ಣಿಮೆಯ ಪ್ರಯುಕ್ತ, “ವರ್ತಮಾನದಲ್ಲಿ ಬುದ್ಧ-ಬಸವ-ಬಾಬಾಸಾಹೇಬರು” ಕುರಿತು ಸ್ವರಚಿತ ಕವನ/ಪ್ರಬಂಧಗಳನ್ನು ಆಹ್ವಾನಿಸಲಾಗಿದೆ. ಕವನ/ಪ್ರಬಂಧ ಕಳಿಸಲು ಕೊನೆಯ ದಿನಾಂಕ: 24-05-2020 ಕಳಿಸಬೇಕಾದ ಇ-ಮೇಲ್ : ganakaranga@gmail.com ಆಸಕ್ತರ ಗಮನಕ್ಕೆ : 1.ಹೊಸತನದ ಪರಿಕಲ್ಪನೆಯ ಎಲ್ಲಿಯೂ ಪ್ರಕಟವಾಗಿರದ ಕನಿಷ್ಟ 30-35 ಸಾಲುಗಳ ಮಿತಿಯುಳ್ಳ ಸ್ವರಚಿತ ಕವನ ಅಥವಾ ಕನಿಷ್ಟ ಐದು ಪುಟಗಳಿಗೆ ಮೀರದಂತಿರುವ 1500 ಪದಗಳ ಮಿತಿಯಲ್ಲಿರುವ ಟೈಪಿಸಿದ ಪ್ರಬಂಧವನ್ನು ಕಳಿಸಬೇಕು. … Read more

ಕಾರ್ಮಿಕರ ಅಳಲು: ಸುನಿತಾ. ಎಸ್. ಪಾಟೀಲ

ಎಲ್ಲರೂ ಮಾಡುವುದು ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಪದವನ್ನು ನಾವೆಲ್ಲರೂ ಕೇಳಿದ್ದೇವೆ. ಕೇಳಿ ತಲೆದೂಗಿದ್ದೇವೆ. ನಾವೆಲ್ಲಾ ಒಂದಲ್ಲಾ ಒಂದು ಉದ್ಯೋಗ ಮಾಡುತ್ತೇವೆ ಹಣಗಳಿಸುತ್ತೇವೆ. ಹೊಟ್ಟೆ ಮತ್ತು ಬಟ್ಟೆಗಾಗಿ ಸಂಪಾದನೆ ಮಾಡುತ್ತೇವೆ ಹಾಗಾದರೆ ನಮ್ಮ ಉದ್ಯೋಗದ ಉದ್ದೇಶ ಇಷ್ಟೇನಾ? ಹೊಟ್ಟೆ ತುಂಬಲು ದುಡಿಯುವುದು ಕಣ್ತುಂಬಾ ನಿದ್ದೆ ಮಾಡುವುದು, ಕೆಲಸಗಳು ಪ್ರಾರಂಭಿಸುವಾಗ ಬಹು ಕಷ್ಟವೆನಿಸುತ್ತದೆ ನಿಜ, ಆದರೆ ಒಂದು ಕಡೆ ಸಿದ್ದಯ್ಯ ಪುರಾಣಿಕರು ಹೇಳುವಂತೆ ‘ಸುಲಭವಾದದ್ದೆಲ್ಲಾ ಶುಭಕರವಲ್ಲ; ಕಷ್ಟವಾದದೆಲ್ಲ ಕಷ್ಟಪರವಲ್ಲ, ಎಂದು ಭಾವಿಸಿ, ಪ್ರಾರಂಭದಲ್ಲಿ ಕಷ್ಟವೆನಿಸಿದರೂ ಪರಿಣಾಮದಲ್ಲಿ ಫಲಪ್ರದವಾಗಿರುತ್ತದೆ ಎಂಬ … Read more

ಅಂತರ್ಜಾಲ ಬಳಸಿ ಪಾಠಬೋಧನೆ: ವೈ. ಬಿ. ಕಡಕೋಳ

ಕೊರೋನಾ ಬಂದಿದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಪರಿವರ್ತನೆಗೆ ನಾಂದಿಯಾಗಿದೆ. ಅದು ಅಂತರ್ಜಾಲ ಬಳಸಿ ಮನೆಯಿಂದಲೇ ಪಾಠವನ್ನು ಬೋಧನೆ ಮಾಡುವ ಮೂಲಕ ಎಲ್ಲರೂ ಈಗ ಅಂತರ್ಜಾಲ ಬಳಸುವ ಅನಿವಾರ್ಯತೆ ಎದುರಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಟೆಲಿ ಎಜುಕೇಶನ್ ಈಗಾಗಲೇ ಸೀಮಿತ ಶಾಲೆಗಳಿಗೆ ಬಂದಿತ್ತು. ಅಲ್ಲಿ ಕಂಪ್ಯೂಟರ ಮತ್ತು ಅಂತರ್ಜಾಲ ಸೌಕರ್ಯ ಬ್ಯಾಟರಿ ಇತ್ಯಾದಿ ಪರಿಕರಗಳನ್ನು ನೀಡಲಾಗಿತ್ತು. ಆ ರೀತಿ ವೇಳಾಪಟ್ಟಿಯ ಮೂಲಕ ಪಾಠಬೋಧನೆ ಕೂಡ ಸಾಗಿತ್ತು. ಹಾಗೆಯೇ ಹಲವಾರು ಸಭೆಗಳು ತರಭೇತಿಗಳು ಕೂಡ ಅಂತರ್ಜಾಲ ಬಳಸಿ ಸೆಟ್ ಲೈಟ್ … Read more

ಲಾಕ್ಡೌನ್, ಬೇರೆಬೇರೆ ದೃಷ್ಟಿಕೋನಗಳಿಂದ: ಸಹನಾ ಪ್ರಸಾದ್

ಸೀನ್ ೧: ಸೀತೆ: ಏನ್ರೀ ಇದು, ಎಷ್ಟು ಸಲ ಹೇಳಬೇಕು ನಿಮಗೆ. ಒದ್ದೆ ಟವೆಲು ಮಂಚದ ಮೇಲೆ ಹಾಕಬೇಡಿ ಅಂತ. ಒಗೆಯೊ ಬಟ್ಟೆ ವಾಶಿಂಗ್ ಮಶೀನಿಗೆ ಹಾಕಿ, ನೆಲದ ಮೇಲೆ ಬಿಸಾಡಬೇಡಿ. ಅಬ್ಬಾ, ಹೇಳಿ ಹೇಳಿ ಸುಸ್ತಾಯ್ತು! ರವಿ: ಅಯ್ಯೊ, ಹೋಗೆ. ಮದುವೆ ಆಗಿ ೧೫ ವರುಷ ಆದ್ರೂ ಅದೇ ರಾಗ ಹಾಡ್ತೀಯಲ್ಲ. ಹೊಸದೇನೂ ಸಿಗಲಿಲ್ಲವಾ? ಸೀ: ಅಲ್ಲ ರೀ, ಇಷ್ಟು ವರುಷ ಆದ್ರೂ ನೀವು ಬದಲಾಗಿಲ್ಲವಲ್ಲ. ಅದೇ ತಪ್ಪುಗಳು ಮಾಡ್ತಾ ಇದ್ರೆ ನಾ ಅದನ್ನೇ ಹೇಳಬೇಕಾಗುತ್ತೆ … Read more