ಮೆಟ್ಟು ಹೇಳಿದ ಕಥಾ ಪ್ರಸಂಗ (ಭಾಗ ೨): ಎಂ. ಜವರಾಜ್

ಇಲ್ಲಿಯವರೆಗೆ ಒಂದು ನೀಳ್ಗಥನ ಕಾವ್ಯ -೨- “ಏ ಕಾಲ ಬಲ ಇಲ್ಲಿ..” ಸೋಮಾರ ಸಂತಲಿ ಅಯ್ನೋರ್ ಕೂಗಿಗೆ ಒಡಿಯ ನನ್ ಕಾಲಯ್ಯ ಎದ್ದೊ ಬಿದ್ದೊ ಓಡ್ತಾ.. ಅರರೆ ಇದೇನ ಈ ಸಂತ ಸಾಮ್ರಾಜ್ಯಲಿ ನನ್ ಒಡೀನೆ ಕಂಡ್ನಾ ಅಯ್ನೋರ್ಗೆ? ನಾನು ನನ್ಜೊತೆಗಾರರು ಮಿಣ ಮಿಣ ಕಣ್ಬುಟ್ಟು ನೋಡ್ತಾ ನೋಡ್ತಾ ಅಯ್ನೋರ್ ಸುದ್ದಿನ ತುಂಬ್ಕೊಂಡು ಕುಂತ್ಕಂಡು. “ಏನ್ ಕಾಲೊ ನಿನ್ ನಸೀಪು..” ಟೀ ಕ್ಯಾಂಟೀನ್ ಸುಬ್ಬಕ್ಕನ ಗೇಲಿಗೆ ನನ್ ಒಡಿಯ ತಲೆ ಕೆರಿತಾ ಬೀಡಿ ಕಚ್ತಾ ಮುಖದ ತುಂಬ … Read more

ಮಹಿಳೆಯರ ಅಭ್ಯುದಯಕ್ಕಾಗಿ ದುಡಿದ ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆ: ಆದಿತ್ಯಾ ಮೈಸೂರು

ಭಾರತವು ಅಂದು ಸಾಮಾಜಿಕ ಅನಿಷ್ಟ ಪದ್ಧತಿಗಳಾದ ಅಸಮಾನತೆ, ಲಿಂಗ ತಾರತಮ್ಯ, ಸತಿ ಸಹಗಮನ, ಬಾಲ್ಯ ವಿವಾಹ ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಇನ್ನೂ ಮುಂತಾದ ಮೌಢ್ಯತೆ, ಕಂದಾಚಾರಗಳ ಬಿತ್ತುವ ಆಗರವಾಗಿತ್ತು. ಅಂದಿನ ಸಮಾಜ ಶೂದ್ರ ಅತಿಶೂದ್ರ ಮತ್ತು ಮಹಿಳೆಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಕಾಲವದು. ವರ್ಣಾಶ್ರಮದ ನೆಲೆಗಟ್ಟಿನಲ್ಲೆ ನಿಂತಿದ್ದವು. ಮೇಲ್ವರ್ಗದವರೆ ಸರ್ವಶ್ರೇಷ್ಠರೆನಿಸಿಕೊಂಡಿದ್ದರು. ಶಿಕ್ಷಣವೆಂಬುದು ಅವರಿಗೆ ಮಾತ್ರ ಸೀಮಿತವಾಗಿತ್ತು. ಶೂದ್ರರು ಅದರಿಂದ ದೂರವೇ ಉಳಿಯಬೇಕಾಗಿತ್ತು ಇದಕ್ಕೆ ಅರ್ಹರಾಗಿರಲಿಲ್ಲ. ಇನ್ನೂ ಮಹಿಳೆಯರ ಶಿಕ್ಷಣವೆಲ್ಲಿ ? ಧರ್ಮದ ಹೆಸರಿನಲ್ಲಿ ಇವರ ಶಿಕ್ಷಣವನ್ನು ಮೊಟಕುಗೊಳಿಸಲಾಗಿತ್ತು. ಮನುಸ್ಮೃತಿಯಲ್ಲಿ … Read more

ಝಕೀರ್ ನದಾಫ್ ಗೆ ರಂಗ ಪ್ರಶಸ್ತಿ: ವೈ. ಬಿ. ಕಡಕೋಳ

ಇತ್ತೀಚಿಗಷ್ಟೇ ರಂಗ ಸಾಹಿತ್ಯಕ್ಕಾಗಿ ಸವದತ್ತಿ ತಾಲೂಕಿನ ಹೂಲಿ ಶೇಖರ್ ಅವರಿಗೆ ಪ್ರಶಸ್ತಿ ಗೌರವವನ್ನು ರಾಜ್ಯೋತ್ಸವ ಸಂಭ್ರಮದಲ್ಲಿ ನೀಡಿರುವ ಬೆನ್ನಲ್ಲೇ ಹೊಸ ವರ್ಷದ ಮೊದಲ ವಾರ ಮತ್ತೊಂದು ಪ್ರತಿಭೆ ಝಕೀರ್ ನದಾಫ್ ರಿಗೆ ರಂಗ ಪ್ರಶಸ್ತಿ ಪ್ರಕಟವಾಗಿರುವುದು ಸವದತ್ತಿ ತಾಲೂಕಿನ ಹೆಮ್ಮೆ. ಏಣಗಿ ಬಾಳಪ್ಪನವರ ಮೂಲಕ ತಾಲೂಕು ತನ್ನದೇ ವಿಶೇಷತೆಯನ್ನು ರಂಗಪರಂಪರೆಯಲ್ಲಿ ಬೆಳಗಿದೆ. ಇಂತಹ ತಾಲೂಕಿನ ಹೂಲಿ ಶೇಖರ್ ಹುಟ್ಟೂರು ಹೂಲಿಯಾದರೆ ರಂಗ ಚಟುವಟಿಕೆಗಳಿಗೆ ಕರ್ಮ ಭೂಮಿಯಾಗಿದ್ದು ಉತ್ತರ ಕನ್ನಡ. ಬೆಂಗಳೂರು. ಆದರೆ ಏಣಗಿ ಬಾಳಪ್ಪನವರು ಸವದತ್ತಿ ತಾಲೂಕಿನಿಂದಲೇ … Read more

ಸಾವು ಮತ್ತು ನಾವು: ಸಹನಾ ಪ್ರಸಾದ್

“ಅಯ್ಯೋ, ಪದ್ದಮ್ಮ ಹೋಗಿಬಿಟ್ರು ಕಣ್ರೀ, ರಾತ್ರಿ ಮಲಗಿದವರು ಬೆಳಗ್ಗೆ ಏಳಲೇ ಇಲ್ಲವಂತೆ. ಪಾಪ “ ಒಬ್ಬಾಕೆಯ ಉವಾಚ. ಮತ್ತೊಬ್ಬರದು ಜೋಡಣೆ. “ಸುಖವಾದ ಸಾವು, ಬಿಡ್ರೀ. ಎಷ್ಟು ಜನಕ್ಕೆ ಲಭ್ಯ, ಹೇಳಿ? ಒಂದು ದಿನ ನರಳಲಿಲ್ಲ, ಹಾಸಿಗೆ ಹಿಡಿಯಲಿಲ್ಲ. ಒಬ್ಬರ ಕೈಲಿ ಸೇವೆ ಮಾಡಿಸಿಕೊಳ್ಳಲಿಲ್ಲ. ಹೀಗೆ ಅಚಾನಕವಾಗಿ ಹೋಗೋದು ಪುಣ್ಯ ಅಲ್ಲದಿದ್ರೆ ಮತ್ತೇನು?” ಮಾತು ಒಬ್ಬರಿಂದ ಒಬ್ಬರಿಗೆ ದಾಟಿ ಅನೇಕ ಭಾವಗಳನ್ನು ತೋರಿ ಎಲ್ಲೋ ಒಂದು ಕಡೆ “ ಹೋಗಲಿ ಬಿಡಿ, ಅವರು ಪಡೆದುಕೊಂಡು ಬಂದಿದ್ದಷ್ಟೇ, ಭೂಮಿಯ ಋಣ ಮುಗೀತು, ಹೋದ್ರು!” ಎನ್ನುವಲ್ಲಿಗೆ ಮುಕ್ತಾಯಗೊಂಡಿತು.

ಸಾವಿನ ಸುದ್ದಿಯನ್ನು ಮಾತಾಡುವುದು, ಚರ್ಚೆ ಮಾಡುವುದು ಕಷ್ಟ. ನಮ್ಮ ಮನೆಯಲ್ಲೇ ಆಗಲಿ, ನೆರೆಮನೆಯದ್ದೇ ಇರಲಿ, ಆಸುಪಾಸಿನಲ್ಲಿ, ದೂರದಲ್ಲಿ, ಎಲ್ಲೇ ಆಗಲಿ ಅದೊಂದು ಹಿಂಸೆಯ ವಿಷಯ. ಹೋದವರು ವಯಸ್ಸಾದವರಾಗಿದ್ದರೆ ಅಂದೊಂದು ಸ್ವಲ್ಪ ಸಹನೀಯ. “ಪಾಪ, ವಯಸ್ಸಾಗಿತ್ತು. ಇನ್ನೆಷ್ಟು ದಿನ ಆಯುಸ್ಸಿದ್ದೀತು?” ಎಲ್ಲೋ ಸಮಾಧಾನದ ಉಸಿರು. ಚಿಕ್ಕವರಾಗಿದ್ದರೆ ಹಲಬುವುದು ಜಾಸ್ತಿ “ಛೇ, ಇನ್ನು ಸಣ್ಣ ವಯಸ್ಸು. ಪಾಪ, ಬಾಳಿ ಬದುಕಬೇಕಾದ ಜೀವ. ದೇವರು ನಿಷ್ಕರುಣಿ. ಇವನಿಗೆ ಈ ಸಣ್ಣ ವಯಸ್ಸಿನವರ ಮೇಲೇಕೆ ಕಣ್ಣು. ಅವರು ನೋಡಿ, ವಯಸ್ಸಾಗಿದೆ, ನರಳುತ್ತಾ ಇದ್ದಾರೆ. ಅವರನ್ನು ಕರೆದೊಯ್ಯುವ ಬದಲು ಈ ಜೀವಕ್ಕೆ ಹೊಂಚು ಹಾಕಿತಲ್ಲ, ಸಾವು!”

ಇನ್ನು ಹೊಸದಾಗಿ ಮಾಡುವೆಯಾಗಿದ್ದರೆ, ಸಣ್ಣ ಸಣ್ಣ ಮಕ್ಕಳಿದ್ದಾರೆ, ಮನಸ್ಸು ಬಲು ಭಾರ. ಕೆಲವು ವರುಷದ ಮುನ್ನ ವಿಧವೆಯನ್ನು ಕಾಣುವ ದೃಷ್ಟಿಯೇ ಬೇರೆ. “ಇಷ್ಟು ಚಿಕ್ಕ ವಯಸ್ಸಿನಲ್ಲಿ ಗಂಡ ಹೋಗಿಬಿಟ್ಟನಲ್ಲ. ಇನ್ನು ಇವಳ ಗತಿಯೇನು. ಮಕ್ಕಳನ್ನು ನೋಡಿಕೊಂಡು,ಅವಳಾಸೆಯನ್ನೆಲ್ಲಾ ಅದುಮಿ ಬಾಳಬೇಕು” ಎಂದಾದರೆ, ಮಕ್ಕಳಿಲ್ಲದವರಿಗೆ “ ಒಂದು ಮಗುವಾದರೂ ಇದ್ದಿದ್ರೆ ಚೆನ್ನಾಗಿತ್ತು. ಅದರ ಮುಖ ನೋಡಿ ಬದುಕು ಸಾಗಿಸುತ್ತಿದ್ದಳು” ಎಂಬ ಉದ್ಗಾರ. ಇನ್ನು ವಿಧುರನಾದರೆ, “ ಅಯ್ಯೋ, ಈ ಚಿಕ್ಕ ಮಕ್ಕಳನ್ನು ಹೇಗೆ ಸುಧಾರಿಸುತ್ತಾನೋ, ಆದಷ್ಟು ಬೇಗ ಈ ಮಕ್ಕಳಿಗೆ ಇನ್ನೊಂದು ತಾಯಿ ಬಂದರೆ ವಾಸಿ. ಆಫೀಸು, ಮನೆ, ಮಕ್ಕಳು ಎಲ್ಲ ಈ ಗಂಡಸಿನ ಕೈಲಿ ಸುಧಾರಿಸಕ್ಕೆಆಗೋಲ್ಲ. ಆದರೆ ಬರುವಾಕೆ ಒಳ್ಳೆಯವಳಿರಬೇಕು, ಅಷ್ಟೇ. ಮಲತಾಯಿಯ ತರಹ ವರ್ತಿಸದೆ, ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಗಮನಿಸುವವಳು ಬೇಕು” ಇನ್ನು ಮಕ್ಕಲಿಲ್ಲದಿದ್ದರೆ, “ಅಯ್ಯೋ, ಚಿಕ್ಕ ವಯಸ್ಸು. ಒಂದು ಮಗುವಾಗಿದ್ದಿದ್ದರೆ ಅವಳ ನೆನಪಾದರೂ ಉಳಿಯುತ್ತಿತ್ತು. ಹೋಗಲಿ, ಒಂದು ತರಹ ಒಳ್ಳೆಯದೇ ಆಯಿತು. ಬರುವವಳು ಹೇಗಿರುತ್ತಾಳೋ ಏನೋ!”

ಈಗಿನ ಕಾಲದಲ್ಕಿ, ಹೆಣ್ಣಿಗೂ, ಗಂಡಿಗೂ ಜಾಸ್ತಿ ವ್ಯತ್ಯಾಸವೆನಿಲ್ಲ. ಅದರಲ್ಲೂ ಪೇಟೆಗಳಲ್ಲಿ. ಓದಿ, ಬದುಕನ್ನು ಅರ್ಥ ಮಾಡಿಕೊಂಡಿರುವವರಲ್ಲಿ. ಮದುವೆಯಾದ ಹೆಣ್ಣು ಹೋದರೆ ಒಂದು ರೀತಿ ವಿಧಾನಗಳು, ಮದುವೆಗಾಗದಿದ್ದರೆ ಬೇರೇನೋ.

ಇನ್ನು ಸಾವಾಗಿದ್ದ ರೀತಿ ಕೂಡ ವಿವಿಧ ಮಾತುಗಳಿಗೆ ಅನುವು ಮಾಡಿಕೊಡುತ್ತದೆ. ಪದ್ದಮ್ಮನ ರೀತಿ ಹೋದವರದೊಂದು ಕತೆಯಾದರೆ, ದೀರ್ಘಕಾಲ ನರಳಿದವರದೊಂದು ಕತೆ.” ಅಯ್ಯೋ, ಎಷ್ಟು ನರಳುತ್ತಿದ್ದರು. ಅವರಿಗೂ ಕಷ್ಟ, ಮನೆಯವರಿಗೂ ಸಹ. ಮಾಡಿಸಿಕೊಳ್ಳುವವರಿಗೆ ಒಂದು ರೀತಿಯಾದರೆ, ಮಾಡುವರಿಗೆ ಇನ್ನೊಂದು ರೀತಿ. ಇಬ್ಬರಿಗೂ ಮುಕ್ತಿ ಸಿಕ್ಕಿತು, ಬಿಡಿ” ಕೇಳಿಸಿಕೊಳ್ಳಲು ಹಿಂಸೆಯಾದರೂ, ಮನದ ಮೂಲೆಯಲ್ಲಿ ಹೌದಲ್ವಾ ಅನಿಸುವುದು ಸುಳ್ಳಲ್ಲ. ಕಷ್ಟ ಪಡುತ್ತಿದ್ದವರಿಗೆ ಏನೂ ಮಾಡಲಾಗದಂತಹ ಅಸಹಾಯಕ ಪರಿಸ್ಥಿತಿ ಮನೆಯವರದ್ದು. ನಾವು ಮಾಡುತ್ತಿದ್ದು ಸಾಕೋ, ಇನ್ನಷ್ಟು ಮಾಡಬೇಕಿತ್ತೋ ಏನೋ ಎನ್ನುವ ನೋವು ಬಾಧಿಸುತ್ತಲೇ ಇರುತ್ತದೆ. ಈ ರೀತಿಯ ಮಾತುಗಳು ಸ್ವಲ್ಪ ನೋವು, ಸ್ವಲ್ಪ ಸಾಂತ್ವಾನ ಸಿಗುವುದು ಸುಳ್ಳಲ್ಲ.
ಇನ್ನು ಅಪಘಾತಕ್ಕೆ ಈಡಾಗಿ ಮರಣ ಹೊಂದಿದವರು ಕೆಲವೂಮ್ಮೆ ಪುಣ್ಯವಂತರು (“ಹೋಗಲಿ ಬಿಡಿ, ಇಷ್ಟೊಂದು ಗಾಯವಾಗಿ ಬದುಕುಳಿದಿದ್ದರೆ ಎಷ್ಟು ತ್ರಾಸವಾಗುತ್ತಿತ್ತು. ಆ ರೀತಿ ಬಾಳುವುದಕ್ಕಿಂತ ಹೋಗಿದ್ದೇ ಒಳ್ಳೆಯದಾಯಿತು) ಕೆಲವೊಮ್ಮೆ ನತದೃಷ್ಟರು ( ಪಾಪ, ಸಾಯುವಂತಹುದ್ದೇನೂ ಆಗಿರಲಿಲ್ಲ, ಬಿಡಿ. ಇನ್ನು ಗಾಯಗೊಂಡಿರುವರು ಬದುಕುಳಿಯಲಿಲ್ಲವೇ).

ಒಟ್ಟಿನಲ್ಲಿ ಯಾವ ರೀತಿಯ ಸಾವಾಗಲಿ, ಮಾತು ಒಂದೊಂದು ರೀತಿ. ಇನ್ನು ಸಾಂತ್ವಾನ ಹೇಳುವವರಿಗೂ ಬಲು ಕಷ್ಟ. ಯಾವ ರೀತಿಯ ಸಾವಿರಲಿ, ಸತ್ತವರ ವಯಸ್ಸು, ಸ್ಥಿತಿ ಎಂತಹುದ್ದೇ ಇರಲಿ, ಅದು ಸಂಬಂಧಪಟ್ಟವರಿಗೆ ತುಂಬಲಾಗದ ನಷ್ಟ. “ದೇವರಿಚ್ಛೆ”, “ಅವರ ಭೂಮಿಯ ಋಣ ಇದ್ದಿದ್ದೇ ಇಷ್ಟು”, “ ದೇವರ ಪಾದದಲ್ಲಿ ನೆಮ್ಮದಿಯಾಗಿದ್ದಾರೆ ಬಿಡಿ”, “ಸದ್ಗತಿ ಸಿಗಲಿ”, “ಮುಕ್ತಿ ದೊರಕಲಿ” ಇತ್ಯಾದಿ ಪದಗಳು ಕೇವಲ ಬಾಯಿ ಮಾತಲ್ಲ. ಆ ನಿಮಿಷದಲ್ಲಿ ಮನಸ್ಸಿಗೆ ತೋಚಿದ್ದು, ಕೇಳುಗರಿಗೆ ನೆಮ್ಮದಿ ಕೊಡುವಂತಹುದ್ದು ಎಂಬುದು ಸುಳ್ಳಲ್ಲ.

ಕೊನೆಗೆ ಉಳಿಯುವುದು ಒಂದು ಸತ್ಯ- ಕಾಲನ ಕರೆಯ ಮುಂದೆ ಯಾರೂ ಇಲ್ಲ. ಈ ಪ್ರಪಂಚದಲ್ಲಿ ಅದನ್ನು ಮೀರಿದವರು, ಶಾಶ್ವತವಾಗಿ ಉಳಿದವರು ಒಬ್ಬರು ಸಹ ಇಲ್ಲ. ಉಳಿಯುವುದು ನಾವು ಮಾಡಿದ ಕೆಲಸಗಳು, ಆಡಿದ ಒಳ್ಳೆಯ ಮಾತುಗಳು, ಹಿತ ತಂದ ನಮ್ಮ ವರ್ತನೆಗಳು ಮಾತ್ರ!

ಸಹನಾ ಪ್ರಸಾದ್


Read more

ನ್ಯಾನೋ ಕಥೆಗಳು: ವೆಂಕಟೇಶ್‌ ಚಾಗಿ

೧) ಹೊಸ ವರ್ಷಹೊಸ ವರ್ಷ ಬಂದಿತೆಂದು ಅವನಿಗೆ ತುಂಬ ಖುಷಿ. ಹೊಸ ವರ್ಷದ ಸಡಗರ ಭರ್ಜರಿಯಾಗಬೇಕೆಂಬುದು ಅವನ ಅಭಿಲಾಷೆ. ಅದರಂತೆ ತನ್ನ ಸ್ನೇಹಿತರೊಂದಿಗೆ ಸೇರಿ ದೊಡ್ಡ ಔತಣಕೂಟವನ್ನೆ ಏರ್ಪಡಿಸಿದ.ಮೋಜು ಮಸ್ತಿಯೊಂದಿಗೆ ಪಾರ್ಟಿ ಜೋರಾಗಿಯೇ ಆಯ್ತು. ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್ ಖರೀದಿಸಿದ. ಹೊಸ ಡೈರಿಯೊಂದನ್ನು ಖರೀದಿ ಮಾಡಿದ. ಡೈರಿಯ ಮೊದಲ ಪುಟದಲ್ಲಿ ತಾನು ಈ ವರ್ಷದಲ್ಲಿ ಕೈಗೊಳ್ಳ ಲೇಬೇಕಾದ ಕಾರ್ಯಗಳನ್ನು ಪಟ್ಟಿ ಮಾಡಿದ. ಸನ್ನಡತೆ , ನೈತಿಕತೆ ,ಉತ್ತಮ ಹವ್ಯಾಸ , ಉಳಿತಾಯ ಮುಂತಾದ ಗುಣಗಳನ್ನು ರೂಢಿಸಿಕೊಳ್ಳಲೇಬೇಕೆಂದು … Read more

ಬಯಲು ಕಮ್ಮಾರರ ಬಯಲ ಬದುಕು!: ಕೆ ಟಿ ಸೋಮಶೇಖರ ಹೊಳಲ್ಕೆರೆ.

 ಬಡವರು ಬಡತನದಿಂದ ದೂರವಾಗಿ ಒಳ್ಳೆಯ ಬದುಕು ರೂಪಿಸಿಕೊಳ್ಳಲು ಭಾರತ ಸರಕಾರ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳ ಅನಷ್ಠಾನಕ್ಕೆ ತಂದಿರುವುದು ಮೀಸಲಾತಿ ಘೋಷಿಸಿರುವುದು ಸತ್ಯಸ್ಯಸತ್ಯ! ಬಡವರ ಉದ್ದಾರಕ್ಕೆಂದೇ ಅವು ಮೈದಳೆದದ್ದು. ರಾಜ್ಯ ಸರಕಾರಗಳೂ ತಾವೇನು ಕಡಿಮೆಯಿಲ್ಲದಂತೆ ಅವರಿಗಾಗಿ ಕಾರ್ಯಕ್ರಮಗಳ ರೂಪಿಸಿರುವುದು ಸಹ ಸತ್ಯ! ಆದರೂ ಅವು ಕಾರಣಾಂತರದಿಂದ ಕೆಲವರಿಗೆ ತಲುಪದೆ ಅವರು ಬದುಕು ಸಾಗಿಸಲು ತುತ್ತಿನ ಚೀಲ ತುಂಬಿಸಿಕೊಳ್ಳಲು ಹರಸಾಹಸಪಡುತ್ತಿರುವುದು ಸಹ ಸತ್ಯಸ್ಯಸತ್ಯ! ಈ ಗುಂಪಿಗೆ ಸೇರಿದವರಲ್ಲಿ ಬಯಲು ಕಮ್ಮಾರರು ಒಬ್ಬರು! ಬಡವರಿಗೆ ಕೊಡುವ ಪಡಿತರ, ನರೇಗದಂತಹ ಉದ್ಯೋಗ ಖಾತ್ರಿ ಕಾರ್ಯಕ್ರಮದಿಂದಲೂ … Read more